• English
  • Login / Register

ಭಾರತದಲ್ಲಿ ಈವರೆಗೆ 50,000 ಕ್ಕೂ ಹೆಚ್ಚು Honda Elevate ಕಾರುಗಳ ಡೆಲಿವೆರಿ, ADAS ವೇರಿಯೆಂಟ್‌ಗಳಿಗೆ ಹೆಚ್ಚಿನ ಡಿಮ್ಯಾಂಡ್‌

ಹೊಂಡಾ ಇಲೆವಟ್ ಗಾಗಿ yashika ಮೂಲಕ ಫೆಬ್ರವಾರಿ 26, 2025 07:02 pm ರಂದು ಪ್ರಕಟಿಸಲಾಗಿದೆ

  • 3 Views
  • ಕಾಮೆಂಟ್‌ ಅನ್ನು ಬರೆಯಿರಿ

ಜಾಗತಿಕವಾಗಿ 1 ಲಕ್ಷಕ್ಕೂ ಹೆಚ್ಚು ಎಲಿವೇಟ್ ಎಸ್‌ಯುವಿಗಳನ್ನು ಮಾರಾಟ ಮಾಡಲಾಗಿದ್ದು, ಅದರಲ್ಲಿ 53,326 ಯುನಿಟ್‌ಗಳು ಭಾರತದಲ್ಲಿ ಮಾರಾಟವಾಗಿದ್ದರೆ, ಉಳಿದ 47,653 ಯುನಿಟ್‌ಗಳನ್ನು ಜಪಾನ್ ಮತ್ತು ದಕ್ಷಿಣ ಆಫ್ರಿಕಾದಂತಹ ದೇಶಗಳಿಗೆ ರಫ್ತು ಮಾಡಲಾಗಿದೆ

More Than 50,000 Honda Elevate SUVs Delivered In India, More Than 50 Percent Customers Opted For ADAS Variants

ಹೋಂಡಾ ಎಲಿವೇಟ್ ಬ್ರ್ಯಾಂಡ್‌ 2023ರ ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ ಪಾದಾರ್ಪಣೆ ಮಾಡಿತು ಮತ್ತು ಸ್ಪರ್ಧಾತ್ಮಕ ಕಾಂಪ್ಯಾಕ್ಟ್ ಎಸ್‌ಯುವಿ ಮಾರುಕಟ್ಟೆಯಲ್ಲಿ ತನ್ನನ್ನು ತಾನು ಸ್ಥಾಪಿಸಿಕೊಂಡಿತು. ಎಲಿವೇಟ್ ಈಗ ಜಾಗತಿಕವಾಗಿ ಒಟ್ಟು 1 ಲಕ್ಷಕ್ಕೂ ಹೆಚ್ಚು ಕಾರುಗಳ ಮಾರಾಟವನ್ನು ಸಾಧಿಸಿದೆ, ಇದರಲ್ಲಿ ಭಾರತದಿಂದಾದ ರಫ್ತು ಕೂಡ ಸೇರಿದೆ. ಜಪಾನಿನ ಈ ವಾಹನ ತಯಾರಕ ಕಂಪನಿಯು ಭಾರತದಲ್ಲಿ 50,000 ಕ್ಕೂ ಹೆಚ್ಚು ಯುನಿಟ್‌ಗಳ ಎಲಿವೇಟ್ ಅನ್ನು ಮಾರಾಟ ಮಾಡಿದೆ, ಉಳಿದ ಯುನಿಟ್‌ಗಳನ್ನು ಜಪಾನ್, ದಕ್ಷಿಣ ಆಫ್ರಿಕಾ, ನೇಪಾಳ ಮತ್ತು ಭೂತಾನ್‌ನಂತಹ ದೇಶಗಳಿಗೆ ರಫ್ತು ಮಾಡಲಾಯಿತು.

ಎಲಿವೇಟ್‌ನಲ್ಲಿ ಖರೀದಿದಾರರ ಆದ್ಯತೆಗಳು

Honda Elevate

ಒಟ್ಟು 53,326 ಯುನಿಟ್‌ಗಳಲ್ಲಿ, ಅದರ ಮಾರಾಟದ ಶೇಕಡಾ 53 ರಷ್ಟು ಟಾಪ್‌-ಸ್ಪೆಕ್ ZX ವೇರಿಯೆಂಟ್‌ನಿಂದ ಬಂದಿದ್ದು, ಇದು ಸುಧಾರಿತ ಚಾಲಕ ಸಹಾಯ ವ್ಯವಸ್ಥೆ (ADAS) ಅನ್ನು ಒಳಗೊಂಡಿದೆ. ಅಲ್ಲದೆ, ಶೇ. 79 ರಷ್ಟು ಗ್ರಾಹಕರು V, VX ಮತ್ತು ZX ಟ್ರಿಮ್‌ಗಳೊಂದಿಗೆ ಲಭ್ಯವಿರುವ CVT ಆಟೋಮ್ಯಾಟಿಕ್‌ ವೇರಿಯೆಂಟ್‌ಅನ್ನು ಬಯಸುತ್ತಾರೆ. ಎಲಿವೇಟ್ ಖರೀದಿದಾರರಲ್ಲಿ ಶೇಕಡಾ 22 ರಷ್ಟು ಜನರು ಮೊದಲ ಬಾರಿಗೆ ಕಾರು ಮಾಲೀಕರು ಮತ್ತು ಶೇಕಡಾ 43 ಕ್ಕಿಂತ ಹೆಚ್ಚು ಖರೀದಿದಾರರು ತಮ್ಮ ಮನೆಯಲ್ಲಿ ಹೆಚ್ಚುವರಿ ಕಾರಾಗಿ ಎಲಿವೇಟ್ ಅನ್ನು ಖರೀದಿಸಿದ್ದಾರೆ ಎಂಬ ಮಾಹಿತಿಯನ್ನು ವಾಹನ ತಯಾರಕರು ಹಂಚಿಕೊಂಡಿದ್ದಾರೆ. 

ಬಣ್ಣಗಳ ಆದ್ಯತೆಯ ವಿಷಯದಲ್ಲಿ, ಪ್ಲಾಟಿನಂ ವೈಟ್ ಪರ್ಲ್ ಅತ್ಯಂತ ಜನಪ್ರಿಯ ಆಯ್ಕೆಯಾಗಿದೆ (ಶೇಕಡಾ 35.1), ನಂತರ ಗೋಲ್ಡನ್ ಬ್ರೌನ್ ಮೆಟಾಲಿಕ್ (ಶೇಕಡಾ 19.9) ಆಗಿತ್ತು. 

ಇದನ್ನೂ ಓದಿ: Mahindra Scorpio N Carbon ಬಿಡುಗಡೆ, ಬೆಲೆ 19.19 ಲಕ್ಷ ರೂ. ನಿಗದಿ

ಎಲಿವೇಟ್ ಏನನ್ನು ನೀಡುತ್ತದೆ?

Honda Elevate Infotainment screen
Honda Elevate Interior

 

ಹೋಂಡಾ ಎಲಿವೇಟ್ ಸಿಂಗಲ್-ಸನ್‌ರೂಫ್, 10.25-ಇಂಚಿನ ಟಚ್‌ಸ್ಕ್ರೀನ್, ವೈರ್‌ಲೆಸ್ ಫೋನ್ ಚಾರ್ಜರ್, ಕ್ರೂಸ್ ಕಂಟ್ರೋಲ್ ಮತ್ತು 7-ಇಂಚಿನ ಸೆಮಿ-ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ  ಮುಂತಾದ ಸೌಲಭ್ಯಗಳೊಂದಿಗೆ ಸಜ್ಜುಗೊಂಡಿದೆ. ಕೆಲವು ಪ್ರತಿಸ್ಪರ್ಧಿಗಳಲ್ಲಿ ಕಂಡುಬರುವ ಕೆಲವು ಪ್ರೀಮಿಯಂ ಫೀಚರ್‌ಗಳಾದ ಪನೋರಮಿಕ್ ಸನ್‌ರೂಫ್ ಮತ್ತು ವೆಂಟಿಲೇಟೆಡ್‌ ಸೀಟ್‌ಗಳನ್ನು ಇದು ಹೊಂದಿಲ್ಲವಾದರೂ, ಅದರ ಫೀಚರ್‌ಗಳ ಸೆಟ್ ಅಗತ್ಯಗಳನ್ನು ಪೂರೈಸಲು ಉತ್ತಮವಾಗಿ ಹೊಂದಿಕೊಳ್ಳುತ್ತದೆ..

ಸುರಕ್ಷತಾ ದೃಷ್ಟಿಯಿಂದ, ಕಾಂಪ್ಯಾಕ್ಟ್ ಎಸ್‌ಯುವಿ 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), ಲೇನ್‌ವಾಚ್ ಕ್ಯಾಮೆರಾ (ಎಡ ORVM ಅಡಿಯಲ್ಲಿ ಇರಿಸಲಾಗಿದೆ), ISOFIX ಚೈಲ್ಡ್ ಸೀಟ್ ಆಂಕಾರೇಜ್‌ಗಳು ಮತ್ತು (ADAS) ಅನ್ನು ನೀಡುತ್ತದೆ.

ಪವರ್‌ಟ್ರೇನ್ ಆಯ್ಕೆಗಳ ವಿವರಗಳು

ಹೋಂಡಾ ಎಲಿವೇಟ್, ಹೋಂಡಾ ಸಿಟಿಯ 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್‌ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ, ಇದು 121 ಪಿಎಸ್‌ ಮತ್ತು 145 ಎನ್‌ಎಮ್‌ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 6-ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಟ್ರಾನ್ಸ್ಮಿಷನ್ ಆಯ್ಕೆಗಳೊಂದಿಗೆ ಬರುತ್ತದೆ. ಹೈಬ್ರಿಡ್ ಪವರ್‌ಟ್ರೇನ್ ಲಭ್ಯವಿಲ್ಲದಿದ್ದರೂ, ಹೋಂಡಾ 2026 ರ ವೇಳೆಗೆ ಎಲಿವೇಟ್‌ನ ಇವಿ ಆವೃತ್ತಿಯನ್ನು ಪರಿಚಯಿಸಲು ಯೋಜಿಸಿದೆ.

ಬೆಲೆ ರೇಂಜ್‌ ಮತ್ತು ಪ್ರತಿಸ್ಪರ್ಧಿಗಳು

Honda Elevate

ಹೋಂಡಾ ಎಲಿವೇಟ್‌ನ ಬೆಲೆ 11.69 ಲಕ್ಷ ರೂ.ಗಳಿಂದ 16.73 ಲಕ್ಷ ರೂ.ಗಳವರೆಗೆ (ಎಕ್ಸ್ ಶೋರೂಂ, ಪ್ಯಾನ್-ಇಂಡಿಯಾ) ಇದೆ. ಇದು ಮಾರುತಿ ಗ್ರ್ಯಾಂಡ್ ವಿಟಾರಾ, ಕಿಯಾ ಸೆಲ್ಟೋಸ್, ಹ್ಯುಂಡೈ ಕ್ರೆಟಾ, ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್, ಸ್ಕೋಡಾ ಕುಶಾಕ್, ಎಂಜಿ ಆಸ್ಟರ್, ವೋಕ್ಸ್‌ವ್ಯಾಗನ್ ಟೈಗುನ್ ಮತ್ತು ಸಿಟ್ರೊಯೆನ್ ಸಿ3 ಏರ್‌ಕ್ರಾಸ್‌ಗಳೊಂದಿಗೆ ಸ್ಪರ್ಧಿಸುತ್ತದೆ.

ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ

was this article helpful ?

Write your Comment on Honda ಇಲೆವಟ್

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience