ಜನವರಿ 2023 ರಲ್ಲಿ ಡಿಸೇಲ್ ಪವರ್‌ಟ್ರೇನ್‌ಗೆ ಹೆಚ್ಚು ಆದ್ಯತೆ ನೀಡಿದ ಮಹೀಂದ್ರಾ ಖರೀದಿದಾರರು
ಮಹೀಂದ್ರ ಥಾರ ್ ಗಾಗಿ ansh ಮೂಲಕ ಫೆಬ್ರವಾರಿ 17, 2023 12:34 pm ರಂದು ಪ್ರಕಟಿಸಲಾಗಿದೆ
- 42 Views
- ಕಾಮೆಂಟ್ ಅನ್ನು ಬರೆಯಿರಿ
XUV300ಯ ಡಿಸೇಲ್ ಪವರ್‌ಟ್ರೇನ್ ಮಾರಾಟ ಪ್ರಮಾಣದಲ್ಲಿ ಸಣ್ಣ ಅಂತರದಿಂದ ಪೆಟ್ರೋಲ್ ಮಾದರಿಯನ್ನು ಹಿಂದಿಕ್ಕಿದೆ
ಮಹೀಂದ್ರಾ ತನ್ನ ಎಸ್‌ಯುವಿಗಳಿಗೆ ಹೆಸರುವಾಸಿಯಾಗಿದ್ದು, ಅವುಗಳ ಗಟ್ಟಿತನ, ಆನ್ ರೋಡ್ ಮತ್ತು ಆಫ್ ರೋಡ್ ಅವುಗಳು ನಿರ್ವಹಿಸಬಹುದಾದ ಕಾರ್ಯವೈಖರಿಯ ಜನಪ್ರಿಯತೆಯು ಯಾವಾಗಲೂ ಈ ಕಾರು ತಯಾರಕರಿಗೆ ಮಾರಾಟವನ್ನು ಉಳಿಸಿಕೊಳ್ಳಲು ಸಹಾಯ ಮಾಡಿದೆ. ಮಹೀಂದ್ರಾ ತನ್ನ ಎಸ್‌ಯುವಿಗಳಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಪವರ್‌ಟ್ರೇನ್ ಎರಡೂ ಆಯ್ಕೆಗಳನ್ನು ಒದಗಿಸುತ್ತಿದ್ದು, ಜನವರಿ 2023 ರ ಕೆಲವು ಜನಪ್ರಿಯ ಮಹೀಂದ್ರಾ ಎಸ್‌ಯುವಿಗಳ ಪೆಟ್ರೋಲ್ -ಡಿಸೇಲ್ ವಿಭಾಗದ ಮಾರಾಟದ ವಿವರವನ್ನು ನಾವು ನೋಡೋಣ:
ಥಾರ್
ಪವರ್‌ಟ್ರೇನ್ |
ಜನವರಿ 2022 |
ಜನವರಿ 2023 |
ಪೆಟ್ರೋಲ್ |
1,177 |
334 |
ಡಿಸೇಲ್ |
3,471 |
4,076 |
ಥಾರ್‌ನ ಪೆಟ್ರೋಲ್ ವೆರಿಯೆಂಟ್‌ನ ಮಾರಾಟವು ಸ್ವಲ್ಪ ಸಮಯದಿಂದ ಕುಸಿಯುತ್ತಿದೆ ಮತ್ತು ಖರೀದಿದಾರರು ಡಿಸೇಲ್-ಚಾಲಿತ ಥಾರ್ ಖರೀದಿಯತ್ತ ಹೆಚ್ಚು ಒಲವನ್ನು ಹೊಂದಿದ್ದಾರೆ. ಜನವರಿ 2023 ರಲ್ಲಿ, ಲೈಫ್‌ಸ್ಟೈಲ್ ಎಸ್‌ಯುವಿಗಳ ಡಿಸೇಲ್ ವೇರಿಯೆಂಟ್‌ಗಳು 4,000 ಯೂನಿಟ್-ಮಾರಾಟದ ಹಂತ ತಲುಪಿದ್ದರೆ, ಇದರ ಪೆಟ್ರೋಲ್ ವೇರಿಯೆಂಟ್‌ಗಳು 300ಕ್ಕಿಂತಲೂ ಕಡಿಮೆ ಮಾರಾಟವನ್ನು ಕಂಡಿವೆ.
ಪವರ್‌ಟ್ರೇನ್ |
ಜನವರಿ 2022 |
ಜನವರಿ 2023 |
ಪೆಟ್ರೋಲ್ |
24.4% |
7.6% |
ಡಿಸೇಲ್ |
74.6% |
92.4% |
ಇದನ್ನೂ ಓದಿ: ಹೊಸ ಡಿಸೈನ್ ಬದಲಾವಣೆಗಳೊಂದಿಗೆ ಕಂಡುಬಂದ 5 ಡೋರ್ ಮಹೀಂದ್ರಾ ಥಾರ್
ಒಂದು ವರ್ಷದ ಅವಧಿಯಲ್ಲಿ, ಪೆಟ್ರೋಲ್ ವೆರಿಯೆಂಟ್‌ಗಳ ಮಾರಾಟವು ಶೇಕಡಾ 24 ಪ್ರತಿಶತದಿಂದ ಎಂಟು ಪ್ರತಿಶತಕ್ಕೆ ಇಳಿದಿದೆ, ಮತ್ತು ಡಿಸೇಲ್ ವೆರಿಯೆಂಟ್‌ನ ಮಾರಾಟವು 92 ಪ್ರತಿಶತಕ್ಕಿಂತ ಅಧಿಕವಾಗಿದೆ.
XUV700
ಪವರ್‌ಟ್ರೇನ್ |
ಜನವರಿ 2022 |
ಜನವರಿ 2023 |
ಪೆಟ್ರೋಲ್ |
1,956 |
1,375 |
ಡಿಸೇಲ್ |
2,163 |
4,412 |
XUV700 ನೊಂದಿಗೆ ಡಿಸೇಲ್ ಜನಪ್ರಿಯವಾಗಿದೆ ಸ್ವಲ್ಪ ಸಮಯದಿಂದ ಇದೇ ಸ್ಥಿತಿಯನ್ನು ಕಾಯ್ದುಕೊಂಡಿದೆ. ಅದರ ಪೆಟ್ರೋಲ್ ವೇರಿಯೆಂಟ್‌ಗಳ ಮಾರಾಟವು ಸರಿಸುಮಾರು 600 ಯೂನಿಟ್‌ಗಳಿಗೆ ಕುಸಿದಿದ್ದರೆ, ಡಿಸೇಲ್ ವೇರಿಯೆಂಟ್‌ಗಳ ಮಾರಾಟವು ದ್ವಿಗುಣಗೊಂಡಿದ್ದು 4,000 ಯೂನಿಟ್ ಮಾರಾಟದ ಗಡಿಯನ್ನು ದಾಟಿದೆ.
ಪವರ್‌ಟ್ರೇನ್ |
ಜನವರಿ 2022 |
ಜನವರಿ 2023 |
ಪೆಟ್ರೋಲ್ |
47.5% |
23.8% |
ಡಿಸೇಲ್ |
52.5% |
76.2% |
ಇದನ್ನೂ ಓದಿ: ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ಮತ್ತು XUV700 ಗಾಗಿ ರೂ. 65,000 ಗಳವರೆಗೆ ವೆಚ್ಚ ಮಾಡಲು ಸಿದ್ಧರಾಗಿ
ಜನವರಿ 2022 ರಲ್ಲಿ, XUV700 ಯ ಪೆಟ್ರೋಲ್ ಮತ್ತು ಡಿಸೇಲ್ ವೆರಿಯೆಂಟ್‌ಗಳ ಒಂದೇ ರೀತಿಯ ಮಾರಾಟವನ್ನು ಕಂಡಿದ್ದವು. ಆದರೆ ಜನವರಿ 2023 ರಲ್ಲಿ, ಡಿಸೇಲ್ ವೇರಿಯೆಂಟ್‌ಗಳ ಮಾರಾಟವು ಪೆಟ್ರೋಲ್‌ಗಿಂತ ಮೂರು ಪಟ್ಟು ಹೆಚ್ಚಾಗಿದ್ದು ಶೇಕಡಾ 76 ರಷ್ಟು ಪಾಲನ್ನು ಹೊಂದಿದೆ.
XUV300
ಪವರ್‌ಟ್ರೇನ್ |
ಜನವರಿ 2022 |
ಜನವರಿ 2023 |
ಪೆಟ್ರೋಲ್ |
2,415 |
2,533 |
ಡಿಸೇಲ್ |
2,135 |
2,549 |
XUV300 ನ ಮಾರಾಟವು ಪೆಟ್ರೋಲ್- ಡಿಸೇಲ್ ಎರಡೂ ವಿಭಾಗದಲ್ಲಿ ಸಮತೋಲನ ಕಂಡಿದೆ. ಜನವರಿ 2022 ರಲ್ಲಿ, ಈ ಎಸ್‌ಯುವಿಯ ಪೆಟ್ರೋಲ್ ವೇರಿಯೆಂಟ್‌ಗಳು ಹೆಚ್ಚು ಮಾರಾಟವನ್ನು ಕಂಡಿದ್ದು, ಜನವರಿ 2023 ರಲ್ಲಿ, ಒಂದು ಸಣ್ಣ ಅಂತರದಿಂದ ಡಿಸೇಲ್ ವೇರಿಯೆಂಟ್‌ಗಳು ಮುನ್ನಡೆ ಸಾಧಿಸಿದವು.
ಪವರ್‌ಟ್ರೇನ್ |
ಜನವರಿ 2022 |
ಜನವರಿ 2023 |
ಪೆಟ್ರೋಲ್ |
53% |
49.9% |
ಡಿಸೇಲ್ |
47% |
50.1% |
ಇದನ್ನೂ ನೋಡಿ: ಫಾರ್ಮುಲಾ ಇ ಪ್ರಿಯರಿಗಾಗಿ ಇಲ್ಲಿದೆ ಮಹೀಂದ್ರಾ XUV400 ಇವಿ
ಮೇಲೆ ನೀಡಲಾದ ಕೋಷ್ಟಕದಲ್ಲಿ ಕಾಣುವಂತೆ, ಜನವರಿ 2022 ರಲ್ಲಿ XUV300 ಯ ಪೆಟ್ರೋಲ್ ಮತ್ತು ಡಿಸೇಲ್ ವೇರಿಯೆಂಟ್‌ನ ಮಾರಾಟವು ಸರಿಸುಮಾರು ಒಂದೇ ರೀತಿಯಾಗಿತ್ತು ಮಾತ್ರವಲ್ಲದೇ ಈಗ ಅವು ಇನ್ನಷ್ಟು ಸಮಾನವಾಗಿವೆ. ಎರಡೂ ಪವರ್‌ಟ್ರೇನ್‌ಗಳು ಜನವರಿ 2023 ರಲ್ಲಿ ಬಹುತೇಕ ಸಮಾನ ಮಾರಾಟವನ್ನು ಕಂಡವು.
ಸ್ಕಾರ್ಪಿಯೊ ಎನ್ ಮತ್ತು ಸ್ಕಾರ್ಪಿಯೊ ಕ್ಲಾಸಿಕ್
ಪವರ್‌ಟ್ರೇನ್ |
ಜನವರಿ 2022 |
ಜನವರಿ 2023 |
ಪೆಟ್ರೋಲ್ |
0 |
654 |
ಡಿಸೇಲ್ |
3,026 |
8,061 |
ಇಲ್ಲಿ ಯಾವುದೇ ಹೋಲಿಕೆಗೆ ಆಸ್ಪದವಿಲ್ಲ, ಸ್ಕಾರ್ಪಿಯೊ ರೇಂಜ್‌ನ ಡಿಸೇಲ್ ವೇರಿಯೆಂಟ್‌ಗಳು (ಸ್ಕಾರ್ಪಿಯೊ ಎನ್ ಮತ್ತು ಸ್ಕಾರ್ಪಿಯೊ ಕ್ಲಾಸಿಕ್ ಒಳಗೊಂಡಂತೆ) ಪೆಟ್ರೋಲ್‌ಗಿಂತ ಮುಂದಿವೆ. ಜನವರಿ 2022 ರಲ್ಲಿ, ನಾವು ಡಿಸೇಲ್ ಮಾತ್ರ ಆಯ್ಕೆಯನ್ನು ಒಳಗೊಂಡಿರುವ ಸ್ಕಾರ್ಪಿಯೊ ಕ್ಲಾಸಿಕ್ ಮಾತ್ರ ಹೊಂದಿದ್ದೆವು ಹಾಗೂ ಅದರ ಮಾರಾಟವು 3,000 ಯೂನಿಟ್‌ಗಳಿಗಿಂತ ಸ್ವಲ್ಪ ಅಧಿಕವಾಗಿತ್ತು, ಮತ್ತು ಜನವರಿ 2023 ರಲ್ಲಿ ಸ್ಕಾರ್ಪಿಯೊ N ಆಗಮನದ ನಂತರವೂ, ಪೆಟ್ರೋಲ್ ವೇರಿಯೆಂಟ್ ಕೇವಲ 650 ಯೂನಿಟ್ ಮಾರಾಟ ಕಂಡರೆ ಡಿಸೇಲ್ ವೇರಿಯೆಂಟ್‌ಗಳು 8,000 ಯೂನಿಟ್ ಮಾರಾಟದ ಗಡಿಯನ್ನು ದಾಟಿತು.
ಪವರ್‌ಟ್ರೇನ್ |
ಜನವರಿ 2022 |
ಜನವರಿ 2023 |
ಪೆಟ್ರೋಲ್ |
0 |
7.5% |
ಡಿಸೇಲ್ |
100% |
92.5% |
ಇದನ್ನೂ ಓದಿ: ಡಿಸೇಲ್-ಆಟೋಮ್ಯಾಟಿಕ್ ಸಂಯೋಜನೆಯೊಂದಿಗೆ ದಕ್ಷಿಣ ಆಫ್ರಿಕಾದಲ್ಲಿ ನೆಲೆಕಂಡ ಮಹೀಂದ್ರಾ ಸ್ಕಾರ್ಪಿಯೊ ಎನ್
ಜನವರಿ 2023 ರಲ್ಲಿ, ಸ್ಕಾರ್ಪಿಯೊ ರೇಂಜ್‌ನ ಡಿಸೇಲ್ ವೇರಿಯೆಂಟ್‌ಗಳು ಎರಡೂ ಮಾಡೆಲ್‌ನ ಒಟ್ಟು ಮಾರಾಟದ 92 ಪ್ರತಿಶತವನ್ನು ಹೊಂದಿದ್ದವು.
ಇದನ್ನೂ ಓದಿ: ಇಲ್ಲಿದೆ ಥಾರ್‌ಗೆ ಗಂಭೀರ ಆಫ್-ರೋಡ್ ಸ್ಪರ್ಧೆಯನ್ನು ನೀಡಬಲ್ಲ ಎಲೆಕ್ಟ್ರಿಕ್ ಮಹೀಂದ್ರಾ ಎಸ್‌ಯುವಿ
ಇದು ಜನಪ್ರಿಯ ಮಹೀಂದ್ರಾ ಮಾಡೆಲ್‌ಗಳ ಮಾರಾಟದ ಅಂಕಿಅಂಶಗಳಾಗಿವೆ. ಮಹೀಂದ್ರಾ ಖರೀದಿದಾರರು ಈ ಕಾರುತಯಾರಕರ ಪೆಟ್ರೋಲ್ ವೇರಿಯೆಂಟ್‌ಗಿಂತ ಡಿಸೇಲ್ ಪವರ್‌ಟ್ರೇನ್‌ಗಳಿಗೆ ಆದ್ಯತೆ ನೀಡುತ್ತಿದ್ದಾರೆ ಎಂಬುದು ಈ ಅಂಕಿಅಂಶಗಳಿಂದ ಸ್ಪಷ್ಟವಾಗಿದೆ. ಕೆಳಗಿನ ಕಮೆಂಟ್‌ನಲ್ಲಿ ನಿಮ್ಮ ಆದ್ಯತೆ ಯಾವುದೆಂದು ನಮಗೆ ತಿಳಿಸಿ.
ಇನ್ನೂ ಹೆಚ್ಚಿನದನ್ನು ಇಲ್ಲಿ ಓದಿ : ಮಹೀಂದ್ರಾ ಥಾರ್ ಡಿಸೇಲ್