• English
    • Login / Register

    ಭಾರತದಲ್ಲಿ MY 2025ರ BMW 3 ಸೀರಿಸ್‌ LWB (ಲಾಂಗ್-ವೀಲ್‌ಬೇಸ್) 62.60 ಲಕ್ಷ ರೂ.ಗೆ ಬಿಡುಗಡೆ

    ಬಿಎಂಡವೋ 3 ಸರಣಿ long ವೀಲ್ ಬೇಸ್ ಗಾಗಿ shreyash ಮೂಲಕ ಫೆಬ್ರವಾರಿ 28, 2025 07:58 pm ರಂದು ಪ್ರಕಟಿಸಲಾಗಿದೆ

    • 22 Views
    • ಕಾಮೆಂಟ್‌ ಅನ್ನು ಬರೆಯಿರಿ

    MY 2025 3 ಸೀರಿಸ್‌ LWB (ಲಾಂಗ್-ವೀಲ್‌ಬೇಸ್) ಅನ್ನು ಪ್ರಸ್ತುತ ಸಂಪೂರ್ಣವಾಗಿ ಲೋಡ್ ಮಾಡಲಾದ ಒಂದೇ 330 Li M ಸ್ಪೋರ್ಟ್ ವೇರಿಯೆಂಟ್‌ನಲ್ಲಿ ನೀಡಲಾಗುತ್ತಿದೆ

    2025 BMW 3 Series LWB

    • ಎಕ್ಸ್‌ಟೀರಿಯರ್‌ ಹೈಲೈಟ್‌ಗಳಲ್ಲಿ ಅಡಾಪ್ಟಿವ್ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, ಕ್ರೋಮ್-ಫಿನಿಶ್ಡ್ BMW ಕಿಡ್ನಿ ಗ್ರಿಲ್ ಮತ್ತು ಗ್ಲೋಸ್-ಕಪ್ಪು ಫಿನಿಶ್ಡ್ ಹಿಂಭಾಗದ ಡಿಫ್ಯೂಸರ್ ಸೇರಿವೆ.

    • ಒಳಗೆ, ಇದು ಮರುವಿನ್ಯಾಸಗೊಳಿಸಲಾದ AC ವೆಂಟ್‌ಗಳನ್ನು ಪಡೆಯುತ್ತದೆ, ಆದರೆ ಒಟ್ಟಾರೆ ಡ್ಯಾಶ್‌ಬೋರ್ಡ್ ವಿನ್ಯಾಸವು ಬದಲಾಗದೆ ಉಳಿದಿದೆ.

    • ಇಂಟಿಗ್ರೇಟೆಡ್ ಡ್ಯುಯಲ್ ಕರ್ವ್ಡ್ ಡಿಸ್‌ಪ್ಲೇಗಳು, 3-ಝೋನ್ ಎಸಿ ಮತ್ತು ಆಂಬಿಯೆಂಟ್ ಲೈಟಿಂಗ್ ಅನ್ನು ಒಳಗೊಂಡಿದೆ.

    • ಸುರಕ್ಷತಾ ಫೀಚರ್‌ಗಳಲ್ಲಿ 6 ಏರ್‌ಬ್ಯಾಗ್‌ಗಳು, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ (DSC), ಪಾರ್ಕ್ ಅಸಿಸ್ಟ್ ಮತ್ತು ಲೆವೆಲ್ 2 ADAS ಸೇರಿವೆ.

    • 258 ಪಿಎಸ್‌ 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ, ಕೇವಲ 6.2 ಸೆಕೆಂಡುಗಳಲ್ಲಿ 0 ರಿಂದ100 ಕಿಮೀ ವೇಗವನ್ನು ತಲುಪುತ್ತದೆ.

    • ಈ ವರ್ಷದ ಕೊನೆಯಲ್ಲಿ ಡೀಸೆಲ್ ಆವೃತ್ತಿಯನ್ನು ಸಹ ಪಡೆಯಬಹುದು.

    ಜರ್ಮನ್ ಮೂಲದ ವಾಹನ ತಯಾರಕ ಕಂಪನಿಯಾದ ಬಿಎಂಡಬ್ಲ್ಯು 3 ಸಿರೀಸ್‌ ಭಾರತದಲ್ಲಿ ಅತ್ಯಂತ ಜನಪ್ರಿಯ ಸೆಡಾನ್‌ಗಳಲ್ಲಿ ಒಂದಾಗಿದೆ. ಈ ಸೆಡಾನ್, ತನ್ನ ಲಾಂಗ್-ವೀಲ್‌ಬೇಸ್ ಆವೃತ್ತಿಯಲ್ಲಿ, MY25 (ಮೊಡೆಲ್‌ ಇಯರ್‌) ಆಪ್‌ಡೇಟ್‌ಅನ್ನು ಪಡೆದುಕೊಂಡಿದೆ ಮತ್ತು ಪೆಟ್ರೋಲ್ 330 Li ಮೊಡೆಲ್‌ 62.60 ಲಕ್ಷ ರೂ.ಗಳಿಗೆ (ಎಕ್ಸ್-ಶೋರೂಂ ಪ್ಯಾನ್-ಇಂಡಿಯಾ) ನಮ್ಮ ದೇಶದಲ್ಲಿ ಬಿಡುಗಡೆಯಾಗಿದೆ, ಇದು ಅದರ MY24 ಆವೃತ್ತಿಗೆ ಹೋಲಿಸಿದರೆ 2 ಲಕ್ಷ ರೂ.ಗಳಷ್ಟು ಹೆಚ್ಚಿನ ಬೆಲೆಯನ್ನು ಹೊಂದಿದೆ. ಇದನ್ನು ಸಂಪೂರ್ಣವಾಗಿ ಲೋಡ್ ಮಾಡಲಾದ ಒಂದೇ M ಸ್ಪೋರ್ಟ್ ವೇರಿಯೆಂಟ್‌ನಲ್ಲಿ ನೀಡಲಾಗುತ್ತಿದೆ ಮತ್ತು ಕೆಲವು ಸ್ಪೋರ್ಟಿಯರ್ ಎಮ್‌ ಸ್ಪೋರ್ಟ್ ವಿನ್ಯಾಸ ಅಂಶಗಳನ್ನು ಸಹ ಹೊಂದಿದೆ. ಆಪ್‌ಡೇಟ್‌ ಮಾಡಲಾದ 3 ಸೀರಿಸ್‌ನ LWB ಹೇಗೆ ಕಾಣುತ್ತದೆ ಮತ್ತು ಅದು ಏನನ್ನು ಒಳಗೊಂಡಿದೆ ಎಂಬುದು ಇಲ್ಲಿದೆ.

    ವಿನ್ಯಾಸದಲ್ಲಿ ಬದಲಾವಣೆಗಳಿಲ್ಲ

    2025 BMW 3 Series LWB

    2025ರ 3 ಸೀರಿಸ್‌ನ LWB ಹೊರಭಾಗದಲ್ಲಿ ಯಾವುದೇ ಗಮನಾರ್ಹ ವಿನ್ಯಾಸ ಬದಲಾವಣೆಗಳನ್ನು ಪಡೆಯುವುದಿಲ್ಲ. ಹೆಡ್‌ಲೈಟ್‌ಗಳನ್ನು ಅಡಾಪ್ಟಿವ್ ಎಲ್‌ಇಡಿ ಪ್ರೊಜೆಕ್ಟರ್ ಯೂನಿಟ್‌ಗಳಿಗೆ ಅಪ್‌ಗ್ರೇಡ್ ಮಾಡಲಾಗಿದೆ, ಆದರೆ ಇದು ಕ್ರೋಮ್‌ನಲ್ಲಿ ಫಿನಿಶ್‌ ಮಾಡಿದ ಸಿಗ್ನೇಚರ್ BMW ಕಿಡ್ನಿ ಗ್ರಿಲ್ ಮತ್ತು ಗ್ಲೊಸ್‌-ಕಪ್ಪು ಫಿನಿಶ್ಡ್ ಹಿಂಭಾಗದ ಡಿಫ್ಯೂಸರ್‌ನಂತಹ ಅಂಶಗಳೊಂದಿಗೆ ಮುಂದುವರಿಯುತ್ತದೆ. ಬಿಎಮ್‌ಡಬ್ಲ್ಯೂ ತನ್ನ 2025 ರ 3 ಸಿರೀಸ್‌ LWB ಅನ್ನು ಮಿನರಲ್ ವೈಟ್, ಸ್ಕೈಸ್ಕ್ರೇಪರ್ ಗ್ರೇ, M ಕಾರ್ಬನ್ ಬ್ಲ್ಯಾಕ್ ಮತ್ತು ಆರ್ಕ್ಟಿಕ್ ರೇಸ್ ಬ್ಲೂ ಎಂಬ ನಾಲ್ಕು ಎಕ್ಸ್‌ಟೀರಿಯರ್‌ ಬಣ್ಣಗಳ ಆಯ್ಕೆಗಳಲ್ಲಿ ನೀಡುತ್ತದೆ.

    ಒಳಭಾಗದಲ್ಲಿ ಸೂಕ್ಷ್ಮವಾಗಿರುವ ಬದಲಾವಣೆಗಳು

    ಒಳಗೆ, 2025 3 ಸಿರೀಸ್‌ ಮರುವಿನ್ಯಾಸಗೊಳಿಸಲಾದ AC ವೆಂಟ್‌ಗಳನ್ನು ಪಡೆಯುತ್ತದೆ, ಆದರೆ ಡ್ಯಾಶ್‌ಬೋರ್ಡ್‌ನ ಒಟ್ಟಾರೆ ವಿನ್ಯಾಸವು ಹೆಚ್ಚು ಕಡಿಮೆ ಬದಲಾಗದೆ ಉಳಿದಿದೆ. ಇದು ವೆರ್ನಾಸ್ಕಾ ಕಾಗ್ನ್ಯಾಕ್ ಲೆಥೆರೆಟ್ ಸೀಟ್ ಕವರ್‌, ಎಂ ಸ್ಪೋರ್ಟ್ ಲೆಥೆರೆಟ್ ಸುತ್ತಿದ ಸ್ಟೀರಿಂಗ್ ವೀಲ್ ಅನ್ನು ಪಡೆಯುತ್ತದೆ.

    ಸೌಕರ್ಯ ಮತ್ತು ಅನುಕೂಲತೆಯ ಫೀಚರ್‌ಗಳ ಪಟ್ಟಿಯಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿಲ್ಲ. ಇದು ಇಂಟಿಗ್ರೇಟೆಡ್ ಕರ್ವ್ಡ್ ಡಿಸ್‌ಪ್ಲೇಗಳು (12.3-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು 14.9-ಇಂಚಿನ ಟಚ್‌ಸ್ಕ್ರೀನ್), 16-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್, 3-ಝೋನ್ ಎಸಿ, ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಪನೋರಮಿಕ್ ಸನ್‌ರೂಫ್ ರೂಫ್‌ನಂತಹ ಸೌಲಭ್ಯಗಳೊಂದಿಗೆ ಬರುತ್ತದೆ.

    ಆದರೆ, ಇದರ ಸುರಕ್ಷತಾ ಫೀಚರ್‌ಗಳು ಚಾಲಕ ಗಮನ ಎಚ್ಚರಿಕೆ ಮತ್ತು ಲೇನ್ ಬದಲಾವಣೆ ಸಹಾಯ ಸೇರಿದಂತೆ ಕೆಲವು ಲೆವೆಲ್‌ 2 ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ಫೀಚರ್‌ಗಳನ್ನು ಒಳಗೊಂಡಿವೆ.

    ಇದಲ್ಲದೆ, ಇದು 6 ಏರ್‌ಬ್ಯಾಗ್‌ಗಳು, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ (DSC), ಮತ್ತು ಪಾರ್ಕ್ ಅಸಿಸ್ಟ್ ಅನ್ನು ಪಡೆಯುತ್ತದೆ.

    ಮೊದಲಿನಂತೆಯೇ ಅದೇ ಟರ್ಬೊ-ಪೆಟ್ರೋಲ್ ಎಂಜಿನ್

    BMWಯು MY25 3 ಸೀರಿಸ್‌ LWB ನಲ್ಲಿ ಅದೇ 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಉಳಿಸಿಕೊಂಡಿದೆ. ವಿಶೇಷಣಗಳು ಈ ಕೆಳಗಿನಂತಿವೆ:

    ಎಂಜಿನ್‌

    2-ಲೀಟರ್ 4-ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್

    ಪವರ್‌

    258 ಪಿಎಸ್‌

    ಟಾರ್ಕ್‌

    400 ಎನ್‌ಎಮ್‌

    ಟ್ರಾನ್ಸ್‌ಮಿಷನ್‌

    8-ಸ್ಪೀಡ್‌ ಆಟೋಮ್ಯಾಟಿಕ್‌

    ಆಕ್ಸಿಲರೇಶನ್‌ 0-100 kmph

    6.2 ಸೆಕೆಂಡ್‌ಗಳು

    ಡೀಸೆಲ್ ಆವೃತ್ತಿಯನ್ನು ಬಯಸುವವರು ಚಿಂತಿಸಬೇಡಿ, ಏಕೆಂದರೆ BMWಯು ಈ ವರ್ಷದ ಕೊನೆಯಲ್ಲಿ ಅದನ್ನು ಪರಿಚಯಿಸಲಿದೆ.

    ಪ್ರತಿಸ್ಪರ್ಧಿಗಳು

    ಭಾರತದಲ್ಲಿ BMW 3 ಸಿರೀಸ್‌ LWB ಕಾರು ಮರ್ಸಿಡಿಸ್-ಬೆನ್ಜ್ ಸಿ ಕ್ಲಾಸ್ ಮತ್ತು ಆಡಿ ಎ4 ಕಾರುಗಳಿಗೆ ಪೈಪೋಟಿ ನೀಡುತ್ತದೆ.

    ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ

    was this article helpful ?

    Write your Comment on BMW 3 ಸರಣಿ Long Wheelbase

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಕೌಪ್ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience