• English
  • Login / Register

ಹೊಸ Mahindra XUV400 ವಾಹನದ ಒಳಾಂಗಣಗಳು ಮತ್ತೆ ಬಹಿರಂಗ, ಸದ್ಯವೇ ಬಿಡುಗಡೆಯಾಗುವ ಸಾಧ್ಯತೆ

ಮಹೀಂದ್ರ XUV400 EV ಗಾಗಿ rohit ಮೂಲಕ ಜನವರಿ 05, 2024 04:14 pm ರಂದು ಪ್ರಕಟಿಸಲಾಗಿದೆ

  • 39 Views
  • ಕಾಮೆಂಟ್‌ ಅನ್ನು ಬರೆಯಿರಿ

ದೊಡ್ಡದಾದ ಟಚ್‌ ಸ್ಕ್ರೀನ್‌ ಮತ್ತು ಮತ್ತು ಮರುವಿನ್ಯಾಸಕ್ಕೆ ಒಳಪಟ್ಟ ಕ್ಲೈಮೇಟ್‌ ಕಂಟ್ರೋಲ್‌ ಪ್ಯಾನೆಲ್‌ ಇದರ ಪ್ರಮುಖ ವೈಶಿಷ್ಟ್ಯಗಳೆನಿಸಿವೆ

2024 Mahindra XUV400

  • ಮಹೀಂದ್ರಾ ಸಂಸ್ಥೆಯು XUV400 ಎಲೆಕ್ಟ್ರಿಕ್‌ SUV ಯನ್ನು 2023ರ ಜನವರಿಯಲ್ಲಿ ಪರಿಚಯಿಸಿತ್ತು.
  • ʻಪ್ರೊʼ ಸೇರ್ಪಡೆಯೊಂದಿಗೆ ಈಗಿನ ಟಾಪ್‌ ಸ್ಪೆಕ್‌ ಟ್ರಿಮ್‌ ಗಿಂತಲೂ ಮೇಲಿನ ಹಂತದಲ್ಲಿ ಹೊಸ ವೇರಿಯಂಟ್‌ ಗಳನ್ನು ಪಡೆಯಬಹುದು.
  • ಹಿಂಭಾಗದ ಎಸಿ ವೆಂಟ್‌ ಗಳು ಮತ್ತು ಸಂಪೂರ್ಣ ಡಿಜಿಟಲ್‌ ರೂಪದಲ್ಲಿರುವ ಚಾಲಕನ ಡಿಸ್ಪ್ಲೇ ಇತ್ಯಾದಿಗಳು ಒಳಾಂಗಣದ ಮಾರ್ಪಾಡಿನಲ್ಲಿ ಸೇರಿವೆ.
  • ಇದರ ಎಲೆಕ್ಟ್ರಿಕ್‌ ಪವರ್‌ ಟ್ರೇನ್‌ ಗೆ ಯಾವುದೇ ಬದಲಾವಣೆಗಳು ಉಂಟಾಗುವುದಿಲ್ಲ; ಇದು ಎರಡು ಬ್ಯಾಟರಿ ಪ್ಯಾಕ್‌ ಆಯ್ಕೆಗಳೊಂದಿಗೆ ಬರಲಿದೆ.
  • ಇದು ಬೇಗನೇ ಬಿಡುಗಡೆಯಾಗಲಿದ್ದು, ಪ್ರಸ್ತುತ ಮಾದರಿಗಿಂತ ಹೆಚ್ಚಿನ ಬೆಲೆಯನ್ನು (ರೂ. 15.99 ಲಕ್ಷದಿಂದ 19.39 ಲಕ್ಷದ ತನಕ, ಎಕ್ಸ್‌ - ಶೋರೂಂ, ದೆಹಲಿ) ನಿಗದಿಪಡಿಸುವ ಸಾಧ್ಯತೆ ಇದೆ.

 2023ರ ಕೊನೆಯಲ್ಲಿ  ಮಹೀಂದ್ರಾ XUV400 ಅನ್ನು ಸದ್ಯವೇ ಇನ್ನಷ್ಟು ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡುವ ಸಾಧ್ಯತೆ ಇದ್ದು, ಇದು  ʻಪ್ರೊʼ ಎನ್ನುವ ಹೊಸ ಉತ್ತರ ಪ್ರತ್ಯಯವನ್ನು ಹೊಂದಿರಲಿದೆ ಎಂದು ಆನ್ಲೈನ್‌ ನಲ್ಲಿ ಸುದ್ದಿಯೊಂದು ಸುಳಿದಾಡಿತ್ತು. ಈಗ ಇಂಟರ್ನೆಟ್ ನಲ್ಲಿ ವೀಡಿಯೋ ಒಂದು ಕಾಣಿಸಿಕೊಂಡಿದ್ದು,‌ ಪರಿಷ್ಕೃತ ಎಲೆಕ್ಟ್ರಿಕ್‌ SUV ಯು ಬೇಗನೇ ಬಿಡುಗಡೆಯಾಗಲಿರುವ ಸುಳಿವನ್ನು ನೀಡಿದೆ. 

ಒಳಾಂಗಣದ ಹೊಸ ವಿವರಗಳು ಬಹಿರಂಗ

2024 Mahindra XUV400 cabin
2024 Mahindra XUV400 fully digital driver's display

 ದೊಡ್ಡದಾದ 10.25 ಇಂಚಿನ ಟಚ್‌ ಸ್ಕ್ರೀನ್‌ ಸಿಸ್ಟಂ, ಗಮನಾರ್ಹ ಗಾತ್ರದ ಚಾಲಕನ ಸಂಪೂರ್ಣ ಡಿಜಿಟಲ್‌ ಡಿಸ್ಪ್ಲೇ, ಮರುವಿನ್ಯಾಸಕ್ಕೆ ಒಳಪಟ್ಟ ಕ್ಲೇಮೇಟ್‌ ಕಂಟ್ರೋಲ್‌ ಪ್ಯಾನೆಲ್‌ ಮತ್ತು ರಿಯರ್‌ ಎಸಿ ವೆಂಟ್‌ ಗಳನ್ನು ಈ ಪರಿಷ್ಕೃತ ಪಟ್ಟಿಯಲ್ಲಿ ನೋಡಬಹುದು. ವೈರ್‌ ಲೆಸ್‌ ಫೋನ್‌ ಚಾರ್ಜಿಂಗ್‌, ಸನ್‌ ರೂಫ್‌, ಪುಶ್‌ ಬಟನ್‌ ಸ್ಟಾರ್ಟ್/ಸ್ಟಾಪ್‌, ಮತ್ತು ಎತ್ತರದ ಹೊಂದಾಣಿಕೆ ಮಾಡಬಹುದಾದ ಚಾಲಕನ ಸೀಟು ಇತ್ಯಾದಿ ಇತರ ವೈಶಿಷ್ಟ್ಯಗಳನ್ನು XUV400 ವಾಹನದಲ್ಲಿ ಉಳಿಸಿಕೊಳ್ಳಲಾಗಿದೆ.

ಈ ಮಹೀಂದ್ರಾ ಎಲೆಕ್ಟ್ರಿಕ್‌ SUV ಯ ಸುರಕ್ಷತಾ ಸಾಧನದಲ್ಲಿ ಪಟ್ಟಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಇದು ಅರು ಏರ್‌ ಬ್ಯಾಗ್‌ ಗಳು, ರಿವರ್ಸಿಂಗ್‌ ಕ್ಯಾಮರಾ, ಟೈರ್‌ ಪ್ರೆಶರ್‌ ಮಾನಿಟರಿಂಗ್‌ ಸಿಸ್ಟಂ (TPMS), ಮತ್ತು ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಪ್ರೋಗ್ರಾಂ (ESP) ಅನ್ನು ಹೊಂದಿದೆ.

 

ಇದರ ಎಲೆಕ್ಟ್ರಿಕ್‌ ಪವರ್‌ ಟ್ರೇನ್‌ ನ ವಿವರಗಳು

2024 Mahindra XUV400 electric powertrain

 ಮಹೀಂದ್ರಾ ಸಂಸ್ಥೆಯು XUV400 ವಾಹನದ ಎಲೆಕ್ಟ್ರಿಕ್‌ ಪವರ್‌ ಟ್ರೇನ್‌ ನಲ್ಲಿ ಯಾವುದೇ ಬದಲಾವಣೆಯನ್ನು ಮಾಡುವುದಿಲ್ಲ. ಇದು 34.5 kWh ಮತ್ತು 39.4 kWh ನ ಎರಡು ಬ್ಯಾಟರಿ ಪ್ಯಾಕ್‌ ಆಯ್ಕೆಗಳೊಂದಿಗೆ ಬರಲಿದ್ದು, ಕ್ರಮವಾಗಿ 375 km ಮತ್ತು 456 km ಶ್ರೇಣಿಯನ್ನು ಒದಗಿಸಲಿದೆ. ಎರಡೂ ಬ್ಯಾಟರಿ ಪ್ಯಾಕ್‌ ಆಯ್ಕೆಗಳು 150 PS/310 Nm ಎಲೆಕ್ಟ್ರಿಕ್‌ ಮೋಟರ್‌ ಅನ್ನು ಹೊಂದಿವೆ.

ಚಾರ್ಜಿಂಗ್‌ ಸಮಯಗಳು ಈ ರೀತಿ ಇವೆ:

  • 50 kW DC ಫಾಸ್ಟ್‌ ಚಾರ್ಜರ್: 50 ನಿಮಿಷಗಳು (0-80 ಶೇಕಡಾ)

  • 7.2 kW AC ಚಾರ್ಜರ್ 6.5 ಗಂಟೆಗಳು

  • 3.3 kW ಡೊಮೆಸ್ಟಿಕ್ ಚಾರ್ಜರ್ 13 ಗಂಟೆಗಳು

ಇದನ್ನು ಸಹ ಓದಿರಿ: ತನ್ನ ಮೊದಲ EV ಯನ್ನು ಬಹಿರಂಗಪಡಿಸಿದ ಸ್ಮಾರ್ಟ್‌ ಫೋನ್‌ ದಿಗ್ಗಜ ಶಒಮಿ! ಶಒಮಿ SU7 ಇಲ್ಲಿದೆ ನೋಡಿ

ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

2024 Mahindra XUV400 rear

 ಪರಿಷ್ಕೃತ ಮಹೀಂದ್ರಾ XUV400 ವಾಹನವು ಸದ್ಯಕ್ಕೆ ರೂ. 15.99 ಲಕ್ಷದಿಂದ ರೂ. 19.39 ಲಕ್ಷದ ತನಕ (ಎಕ್ಸ್-ಶೋರೂಂ ದೆಹಲಿ) ಬೆಲೆಯನ್ನು ಹೊಂದಿರುವ ಪ್ರಸ್ತುತ ಮಾದರಿಗಿಂತ ಹೆಚ್ಚಿನ ಬೆಲೆಯನ್ನು ಹೊಂದಿರಲಿದೆ. ಇದು ಟಾಟಾ ನೆಕ್ಸನ್‌ EV ಜೊತೆಗೆ ಸ್ಪರ್ಧಿಸುವುದನ್ನು ಮುಂದುವರಿಸಲಿದ್ದು,  MG ZS EV ಮತ್ತು ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಇತ್ಯಾದಿಗಳ ಬದಲಿಗೆ ಅಗ್ಗದ ಆಯ್ಕೆ ಎನಿಸಲಿದೆ.

 ಚಿತ್ರದ ಮೂಲ

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: XUV400 EV ಅಟೋಮ್ಯಾಟಿಕ್

was this article helpful ?

Write your Comment on Mahindra XUV400 EV

explore ಇನ್ನಷ್ಟು on ಮಹೀಂದ್ರ XUV400 EV

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience