• English
  • Login / Register

ಭಾರತದಲ್ಲಿನ 7 ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಕಾರುಗಳು ಇಲ್ಲಿವೆ

ಎಂಜಿ ಕಾಮೆಟ್ ಇವಿ ಗಾಗಿ anonymous ಮೂಲಕ ಜುಲೈ 16, 2024 05:11 pm ರಂದು ಮಾರ್ಪಡಿಸಲಾಗಿದೆ

  • 60 Views
  • ಕಾಮೆಂಟ್‌ ಅನ್ನು ಬರೆಯಿರಿ

ಹ್ಯಾಚ್‌ಬ್ಯಾಕ್‌ಗಳಿಂದ ಹಿಡಿದು ಎಸ್‌ಯುವಿಗಳವರೆಗೆ, ಇವುಗಳು ಭಾರತದಲ್ಲಿ ನೀವು ಖರೀದಿಸಬಹುದಾದ ಏಳು ಅತ್ಯಂತ ಕೈಗೆಟಕುವ ಬೆಲೆಯ ಇವಿಗಳಾಗಿವೆ

Top 7 Most Affordable EVs In India

ಏರುತ್ತಿರುವ ಇಂಧನ ಬೆಲೆಗಳು ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳ ಮಾರಾಟವನ್ನು ಹೆಚ್ಚಿಸಿವೆ, ಜೊತೆಗೆ ಅವುಗಳ ಸಂಖ್ಯೆಯು ನಮ್ಮ ಮಾರುಕಟ್ಟೆಯಲ್ಲಿಯೂ ಬೆಳೆಯುತ್ತಿದೆ. ಕಡಿಮೆ ನಿರ್ವಹಣೆ ವೆಚ್ಚಗಳು ಮತ್ತು ವಿಸ್ತರಿಸುತ್ತಿರುವ ಚಾರ್ಜಿಂಗ್ ಮೂಲಸೌಕರ್ಯದೊಂದಿಗೆ, ಹೆಚ್ಚು ಹೊಸ ಕಾರು ಖರೀದಿದಾರರು ಹೆಚ್ಚು ಕೈಗೆಟುಕುವ ಇಲೆಕ್ಟ್ರಿಕ್‌ ಆಫರ್‌ಗಳನ್ನು ಒಳಗೊಂಡಂತೆ ಇವಿಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಮತ್ತು ಈ ಬೇಡಿಕೆಯನ್ನು ಪೂರೈಸಲು, ಭಾರತದಲ್ಲಿನ ಅನೇಕ ಕಾರು ತಯಾರಕರು ವಿವಿಧ ಆಯ್ಕೆಗಳನ್ನು ನೀಡುತ್ತಿದ್ದಾರೆ. 

ನೀವು ಇವಿ ಕಾರುಗಳನ್ನು ಖರೀದಿಸಲು ಯೋಜಿಸುತ್ತಿದ್ದರೆ, ಈ ಸುದ್ದಿಯಲ್ಲಿ ನಾವು ಭಾರತದಲ್ಲಿ ಲಭ್ಯವಿರುವ ಅತ್ಯಂತ ಕಡಿಮೆ ಬೆಲೆಯ ಏಳು ಎಲೆಕ್ಟ್ರಿಕ್ ಕಾರುಗಳನ್ನು ಹೈಲೈಟ್ ಮಾಡಿದ್ದೇವೆ.

ಎಮ್‌ಜಿ ಕಾಮೆಟ್‌ ಇವಿ

MG Comet EV

ಬೆಲೆ ರೇಂಜ್‌

6.99 ಲಕ್ಷ ರೂ.ನಿಂದ 9.53 ಲಕ್ಷ ರೂ. (ಎಕ್ಸ್ ಶೋ ರೂಂ)

ನಗರದ ಟ್ರಾಫಿಕ್‌ನಲ್ಲಿ ಪ್ರಯತ್ನವಿಲ್ಲದ ಚಾಲನೆಯ ಅನುಭವವನ್ನು ಒದಗಿಸುವ ಕಾರನ್ನು ಹುಡುಕುತ್ತಿರುವಿರಾ? ಇದರ ಕಾಂಪ್ಯಾಕ್ಟ್ ಫಾರ್ಮ್ ಫ್ಯಾಕ್ಟರ್‌ನಿಂದಾಗಿ ಎಮ್‌ಜಿ ಕಾಮೆಟ್ ಇವಿಯು ನಿಮಗೆ ಸರಿಯಾದ ಆಯ್ಕೆಯಾಗಬಹುದು. 2023ರಲ್ಲಿ ಇದನ್ನು ಬಿಡುಗಡೆ ಮಾಡಲಾಗಿದ್ದು, MGಯ ಈ ಮೂರು-ಬಾಗಿಲಿನ ಮೈಕ್ರೋ-ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಅನ್ನು ಒಂದೇ 17.3 kWh ಬ್ಯಾಟರಿ ಪ್ಯಾಕ್‌ನೊಂದಿಗೆ ನೀಡಲಾಗುತ್ತದೆ. ಇದು 230 ಕಿಮೀ ವರೆಗೆ ಕ್ಲೈಮ್ ಮಾಡಲಾದ ರೇಂಜ್‌ಅನ್ನು ನೀಡುತ್ತದೆ.

ಪವರ್‌ಟ್ರೈನ್‌ ಕುರಿತಂತೆ

ಎಮ್‌ಜಿ ಕಾಮೆಟ್‌ ಇವಿ

ಬ್ಯಾಟರಿ ಪ್ಯಾಕ್‌

17.3 kWh

ಎಲೆಕ್ಟ್ರಿಕ್‌ ಮೋಟಾರ್‌ಗಳ ಸಂಖ್ಯೆ

1

ಪವರ್‌/ ಟಾರ್ಕ್‌

42 ಪಿಎಸ್‌/ 110 ಎನ್‌ಎಮ್‌

ಕ್ಲೈಮ್‌ ಮಾಡಲಾದ ರೇಂಜ್‌

230 ಕಿ.ಮೀ

ಚಾರ್ಜಿಂಗ್‌ ಸಮಯ

3.5 ಗಂಟೆಗಳು (7.4 ಕಿ.ವ್ಯಾ ಚಾರ್ಜರ್) / 7 ಗಂಟೆಗಳು (3.3 ಕಿ.ವ್ಯಾ ಚಾರ್ಜರ್)

ಇದರ ಪ್ರಮುಖ ವೈಶಿಷ್ಟ್ಯಗಳಲ್ಲಿ ಎಮ್‌ಜಿ ಕಾಮೆಟ್ ಇವಿ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು /ಆಪಲ್‌ ಕಾರ್‌ಪ್ಲೇ  ಜೊತೆಗೆ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಕನೆಕ್ಟೆಡ್‌ ಕಾರ್ ಟೆಕ್, 12V ಪವರ್ ಔಟ್‌ಲೆಟ್‌ಗಳು, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ಗಳು ಮತ್ತು ಕೀಲೆಸ್ ಎಂಟ್ರಿಯನ್ನು ಒಳಗೊಂಡಿದೆ. ಸುರಕ್ಷತೆಯ ಪ್ಯಾಕೇಜ್‌ನಲ್ಲಿ, ಇದು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್‌, ISOFIX ಚೈಲ್ಡ್ ಸೀಟ್ ಮೌಂಟ್‌ಗಳು, ಸೆನ್ಸಾರ್‌ಗಳೊಂದಿಗೆ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್-ಹೋಲ್ಡ್ ಅಸಿಸ್ಟ್ ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಪಡೆಯುತ್ತದೆ.

ಟಾಟಾ ಟಿಯಾಗೊ ಇವಿ

Tata Tiago EV long term review

ಬೆಲೆ ರೇಂಜ್‌

7.99 ಲಕ್ಷ ರೂ.ನಿಂದ 11.89 ಲಕ್ಷ ರೂ.(ಎಕ್ಸ್ ಶೋ ರೂಂ)

ಟಿಯಾಗೋ ಇವಿಯು ಟಾಟಾ ಮೋಟಾರ್ಸ್‌ನ ಎಂಟ್ರಿ ಲೆವೆಲ್‌ನ ಸಂಪೂರ್ಣ ಎಲೆಕ್ಟ್ರಿಕ್‌ ಹ್ಯಾಚ್‌ಬ್ಯಾಕ್‌ ಆಗಿದೆ.  ಕೊಡುಗೆಯಾಗಿದೆ. ಇದು ಎಮ್‌ಜಿ ಕಾಮೆಟ್ ಇವಿಗೆ ಪರ್ಯಾಯವಾಗಿದೆ ಮತ್ತು ನೀವು 10 ಲಕ್ಷ ರೂ.ದೊಳಗಿನ ಇವಿಯನ್ನು ಹುಡುಕುತ್ತಿದ್ದರೆ ನಿಮ್ಮ ಏಕೈಕ ಆಯ್ಕೆಯಾಗಿದೆ. ಎರಡು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಲಭ್ಯವಿದ್ದು, ಟಿಯಾಗೋ ಇವಿಯು 315 ಕಿಮೀ ವರೆಗೆ ಕ್ಲೈಮ್ ಮಾಡಲಾದ ರೇಂಜ್‌ ಅನ್ನು ನೀಡುತ್ತದೆ ಮತ್ತು ಡಿಸಿ ಫಾಸ್ಟ್ ಚಾರ್ಜರ್‌ಗೆ ಹೊಂದಿಕೆಯಾಗುತ್ತದೆ, ಇದು ನೀವು ಯಾವುದೇ ಪವರ್‌ಟ್ರೇನ್ ಅನ್ನು ಆಯ್ಕೆ ಮಾಡಿದರೂ, 58 ನಿಮಿಷಗಳಲ್ಲಿ ಎಲೆಕ್ಟ್ರಿಕ್ ಕಾರನ್ನು 10 ರಿಂದ 80 ಪ್ರತಿಶತದಷ್ಟು ಚಾರ್ಜ್ ಮಾಡುತ್ತದೆ.

ಪವರ್‌ಟ್ರೈನ್‌ ಕುರಿತಂತೆ

ಟಾಟಾ ಟಿಯಾಗೊ ಇವಿ

ಬ್ಯಾಟರಿ ಪ್ಯಾಕ್‌

19.2 ಕಿವ್ಯಾಟ್‌

24 ಕಿ.ವ್ಯಾಟ್‌

ಪವರ್‌/ ಟಾರ್ಕ್‌

61 ಪಿಎಸ್‌/ 110 ಎನ್‌ಎಮ್‌

75 ಪಿಎಸ್‌/ 114 ಎನ್‌ಎಮ್‌

ಕ್ಲೈಮ್‌ ಮಾಡಲಾದ ರೇಂಜ್‌

250 ಕಿ.ಮೀ

315 ಕಿ.ಮೀ

ಚಾರ್ಜಿಂಗ್‌ ಸಮಯ

22.6 ಗಂಟೆಗಳು (7.2 ಕಿ.ವ್ಯಾಟ್‌ ಚಾರ್ಜರ್) / 6.9 ಗಂಟೆಗಳು (3.3 ಕಿ.ವ್ಯಾಟ್‌ ಚಾರ್ಜರ್) / 58 ನಿಮಿಷಗಳು (ಡಿಸಿ ಫಾಸ್ಟ್ ಚಾರ್ಜರ್)

3.6 ಗಂಟೆಗಳು (7.2 ಕಿ.ವ್ಯಾಟ್‌ ಚಾರ್ಜರ್) / 8.7 ಗಂಟೆಗಳು (3.3 ಕಿ.ವ್ಯಾಟ್‌ ಚಾರ್ಜರ್) / 58 ನಿಮಿಷಗಳು (ಡಿಸಿ ಫಾಸ್ಟ್ ಚಾರ್ಜರ್)

ಟಿಯಾಗೋ ಇವಿಯು ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಜೊತೆಗೆ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 8-ಸ್ಪೀಕರ್ ಹರ್ಮನ್ ಸೌಂಡ್ ಸಿಸ್ಟಮ್, ಆಟೋಮ್ಯಾಟಿಕ್‌ ಕ್ಲೈಮೇಟ್ ಕಂಟ್ರೋಲ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ ಮತ್ತು ಕ್ರೂಸ್ ಕಂಟ್ರೋಲ್‌ನಂತಹ ಫೀಚರ್‌ಗಳನ್ನು ಹೊಂದಿದೆ. ಸುರಕ್ಷತಾ ಪ್ಯಾಕೇಜ್‌ನಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ರೈನ್ ಸೆನ್ಸಿಂಗ್ ವೈಪರ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟೈರ್-ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಪಾರ್ಕಿಂಗ್ ಸೆನ್ಸರ್‌ಗಳೊಂದಿಗೆ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಸೇರಿವೆ.

ಟಾಟಾ ಪಂಚ್‌ ಇವಿ

Tata Punch EV Front

ಬೆಲೆ ರೇಂಜ್‌

10.99 ಲಕ್ಷ ರೂ.ನಿಂದ 15.49 ಲಕ್ಷ ರೂ.(ಎಕ್ಸ್ ಶೋರೂಂ)

2024ರ ಜನವರಿಯಲ್ಲಿ ಟಾಟಾವು ತನ್ನ ಮೈಕ್ರೋ ಎಸ್‌ಯುವಿ ಪಂಚ್‌ನ ಸಂಪೂರ್ಣ-ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆ ಮಾಡಿತು. ಸಂಪೂರ್ಣವಾಗಿ ಹೊಸ Acti.ev ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾದ ಟಾಟಾದ ಇವಿಗಳ ಕಾರುಗಳ ಪಟ್ಟಿಯಲ್ಲಿ ಇದು ಮೊದಲ ಕಾರು ಆಗಿದೆ.  ಪಂಚ್ ಇವಿಯನ್ನು 25 ಕಿ.ವ್ಯಾಟ್‌ ಮತ್ತು 35 ಕಿ.ವ್ಯಾಟ್‌ ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಇದರ ದೊಡ್ಡದಾದ 35 ಕಿ.ವ್ಯಾಟ್‌ ಪ್ಯಾಕ್ 421 ಕಿಮೀ ದೂರವನ್ನು ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ.

ಪವರ್‌ಟ್ರೈನ್‌ ವಿಶೇಷತೆಗಳು

ಟಾಟಾ ಪಂಚ್‌ ಇವಿ

ಬ್ಯಾಟರಿ ಪ್ಯಾಕ್‌

25 ಕಿ.ವ್ಯಾಟ್‌

35 ಕಿ.ವ್ಯಾಟ್‌

ಪವರ್‌/ ಟಾರ್ಕ್‌

82 ಪಿಎಸ್‌/ 114 ಎನ್‌ಎಮ್‌

122 ಪಿಎಸ್‌/ 190 ಎನ್‌ಎಮ್‌

ಕ್ಲೈಮ್‌ ಮಾಡಲಾದ ರೇಂಜ್‌

315 ಕಿ.ಮೀ

421 ಕಿ.ಮೀ

ಚಾರ್ಜಿಂಗ್‌ ಸಮಯ

3.6 ಗಂಟೆಗಳು (7.2 ಕಿ.ವ್ಯಾಟ್‌ ಚಾರ್ಜರ್) / 9.4 ಗಂಟೆಗಳು (3.3 ಕಿ.ವ್ಯಾಟ್‌ ಚಾರ್ಜರ್) / 56 ನಿಮಿಷಗಳು (ಡಿಸಿ ಫಾಸ್ಟ್ ಚಾರ್ಜರ್)

5 ಗಂಟೆಗಳು (7.2 ಕಿ.ವ್ಯಾಟ್‌ ಚಾರ್ಜರ್) / 13.5 ಗಂಟೆಗಳು (3.3 ಕಿ.ವ್ಯಾಟ್‌ ಚಾರ್ಜರ್) / 56 ನಿಮಿಷಗಳು (ಡಿಸಿ ಫಾಸ್ಟ್ ಚಾರ್ಜರ್)

ಪಂಚ್ ಇವಿಯ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್‌ಸ್ ಡಿಸ್‌ಪ್ಲೇ , 6-ಸ್ಪೀಕರ್ ಸೌಂಡ್ ಸಿಸ್ಟಮ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ಸಿಂಗಲ್ ಪೇನ್ ಸನ್‌ರೂಫ್ ಅನ್ನು ಒಳಗೊಂಡಿದೆ. ಸುರಕ್ಷತೆಯ ಪ್ಯಾಕೇಜ್‌ನಲ್ಲಿ, ಇದು ಆರು ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್‌ ಆಗಿ, ಬ್ಲೈಂಡ್ ಸ್ಪಾಟ್ ವ್ಯೂ ಮಾನಿಟರ್‌ನೊಂದಿಗೆ 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಪಡೆಯುತ್ತದೆ.

ಸಿಟ್ರೋನ್‌ ಇಸಿ3 ಇವಿ

ಬೆಲೆ ರೇಂಜ್‌

12.76 ಲಕ್ಷ ರೂ.ನಿಂದ 13.56 ಲಕ್ಷ ರೂ.(ಎಕ್ಸ್ ಶೋರೂಂ)

ಇಸಿ3 ಭಾರತದಲ್ಲಿ ಸಿಟ್ರೊಯೆನ್‌ನ ಮೊದಲ ಸಂಪೂರ್ಣ ಎಲೆಕ್ಟ್ರಿಕ್ ಕಾರು ಆಗಿದೆ. ಇದು ಟಾಟಾ ಪಂಚ್ ಇವಿಯೊಂದಿಗೆ ನೇರವಾಗಿ ಸ್ಪರ್ಧಿಸುತ್ತದೆ ಮತ್ತು ಟಾಟಾ ಟಿಯಾಗೊ ಇವಿ ಮತ್ತು ಎಮ್‌ಜಿ ಕಾಮೆಟ್ ಇವಿಗೆ ಪ್ರೀಮಿಯಂ ಪರ್ಯಾಯವಾಗಿ ಸ್ಥಾನ ಪಡೆದಿದೆ. ವಿನ್ಯಾಸವನ್ನು ಗಮನಿಸುವಾಗ ಇದು C3 ಹ್ಯಾಚ್‌ಬ್ಯಾಕ್ ಅನ್ನು ಹೋಲುತ್ತದೆ ಆದರೆ ಇಂಧನ-ಚಾಲಿತ ಮೊಡೆಲ್‌ನಿಂದ ಪ್ರತ್ಯೇಕಿಸಲು 'ಇ' ಬ್ಯಾಡ್ಜಿಂಗ್ ಅನ್ನು ಹೊಂದಿದೆ. ಇಸಿ3ಯು 57 ಪಿಎಸ್‌ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಸಜ್ಜುಗೊಂಡಿದ್ದು, 29.2 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್‌ನೊಂದಿಗೆ ಲಭ್ಯವಿದೆ ಮತ್ತು 320 ಕಿಮೀ ರೇಂಜ್‌ಅನ್ನು ನೀಡುತ್ತದೆ.

ಪವರ್‌ಟ್ರೈನ್‌ ವಿಶೇಷತೆಗಳು

ಸಿಟ್ರೋನ್‌ ಇಸಿ3 ಇವಿ

ಬ್ಯಾಟರಿ ಪ್ಯಾಕ್‌

29.2 ಕಿವ್ಯಾಟ್‌

ಪವರ್‌/ ಟಾರ್ಕ್‌

57 ಪಿಎಸ್‌/ 143 ಎನ್‌ಎಮ್‌

ಕ್ಲೈಮ್‌ ಮಾಡಲಾದ ರೇಂಜ್‌

320 ಕಿ.ಮೀ

ಚಾರ್ಜಿಂಗ್‌ ಸಮಯ

10.5 ಗಂಟೆಗಳು (3.3 ಕಿವ್ಯಾಟ್‌ ಚಾರ್ಜರ್) / 57 ನಿಮಿಷಗಳು (ಡಿಸಿ ಫಾಸ್ಟ್‌ ಚಾರ್ಜರ್)

ಸಿಟ್ರೊಯೆನ್ ಇಸಿ3 ಆಂಡ್ರಾಯ್ಡ್ ಆಟೋ ಮತ್ತು ಆಪಲ್‌ ಕಾರ್‌ಪ್ಲೇ ಜೊತೆಗೆ 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಮ್ಯಾನುಯಲ್ ಎಸಿ, ಸೆಮಿ-ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಕೀಲೆಸ್ ಎಂಟ್ರಿ, ಎತ್ತರ-ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್ ಮತ್ತು ಕನೆಕ್ಟೆಡ್‌ ಕಾರ್ ಟೆಕ್‌ನಂತಹ ಫೀಚರ್‌ಗಳನ್ನು ಹೊಂದಿದೆ. ಸುರಕ್ಷತಾ ಫೀಚರ್‌ಗಳಲ್ಲಿ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು ಮತ್ತು ಪಾರ್ಕಿಂಗ್ ಸೆನ್ಸರ್‌ಗಳೊಂದಿಗೆ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಸೇರಿವೆ.

ಟಾಟಾ ಟಿಗೋರ್‌ ಇವಿ

Tata Tigor EV

ಬೆಲೆ ರೇಂಜ್‌

12.49 ಲಕ್ಷ ರೂ.ನಿಂದ 13.75 ಲಕ್ಷ ರೂ.(ಎಕ್ಸ್ ಶೋರೂಂ)

ಟಾಟಾ ಟಿಗೊರ್ ಇವಿಯು ಟಿಯಾಗೋ ಇವಿಗೆ ಸೆಡಾನ್ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲ. ಇದರ ಹೊರಭಾಗವು ಉದ್ದಕ್ಕೂ ನೀಲಿ ಇನ್ಸರ್ಟ್‌ಗಳನ್ನು ಮತ್ತು ಇವಿ ಬ್ಯಾಡ್ಜಿಂಗ್ ಅನ್ನು ಹೊಂದಿದೆ, ಇದು ಇಂಧನ-ಚಾಲಿತ ಟಾಟಾ ಟಿಯಾಗೊದಿಂದ ಪ್ರತ್ಯೇಕಿಸುತ್ತದೆ. ಟಿಯಾಗೋ ಇವಿ ಒಂದೇ 26 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಬರುತ್ತದೆ, ಇದು 75 ಪಿಎಸ್‌ ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಸೇರಿಕೊಂಡು 315 ಕಿಮೀ ರೇಂಜ್‌ಅನ್ನು ನೀಡುತ್ತದೆ.

ಪವರ್‌ಟ್ರೈನ್‌ ವಿಶೇಷತೆಗಳು

ಟಾಟಾ ಟಿಯಾಗೋ ಇವಿ

ಬ್ಯಾಟರಿ ಪ್ಯಾಕ್‌

26 ಕಿ.ವ್ಯಾಟ್‌

ಪವರ್‌/ ಟಾರ್ಕ್‌

75 ಪಿಎಸ್‌/ 170 ಎನ್‌ಎಮ್‌

ಕ್ಲೈಮ್‌ ಮಾಡಲಾದ ರೇಂಜ್‌

315 ಕಿ,ಮೀ

ಚಾರ್ಜಿಂಗ್‌ ಸಮಯ

9.4 ಗಂಟೆಗಳು (3.3 ಕಿ.ವ್ಯಾಟ್‌ ಚಾರ್ಜರ್) / 59 ನಿಮಿಷಗಳು (ಡಿಸಿ ಫಾಸ್ಟ್‌ ಚಾರ್ಜರ್)

ಫೀಚರ್‌ಗಳನ್ನು ಗಮನಿಸುವುದಾದರೆ, ಟಿಗೋರ್‌ ಇವಿಯು ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಜೊತೆಗೆ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 8-ಸ್ಪೀಕರ್ ಹರ್ಮನ್ ಸೌಂಡ್ ಸಿಸ್ಟಮ್, ಆಟೋಮ್ಯಾಟಿಕ್‌ ಕ್ಲೈಮೇಟ್ ಕಂಟ್ರೋಲ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಹೊಂದಿದೆ. ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ರೈನ್ ಸೆನ್ಸಿಂಗ್ ವೈಪರ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟೈರ್-ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಪಾರ್ಕಿಂಗ್ ಸೆನ್ಸರ್‌ಗಳೊಂದಿಗೆ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಸೇರಿವೆ.

ಟಾಟಾ ನೆಕ್ಸಾನ್‌ ಇವಿ

Tata Nexon EV

ಬೆಲೆ ರೇಂಜ್‌

14.49 ಲಕ್ಷ ರೂ.ನಿಂದ 19.49 ಲಕ್ಷ ರೂ.(ಎಕ್ಸ್ ಶೋ ರೂಂ)

ನೀವು ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಇವಿಗಾಗಿ ಹುಡುಕುತ್ತಿದ್ದರೆ, ನೀವು ಪರಿಗಣಿಸಬಹುದಾದ ಆಯ್ಕೆಗಳಲ್ಲಿ ಒಂದೆಂದರೆ ಟಾಟಾ ನೆಕ್ಸಾನ್‌ ಇವಿ.  2023ರ ದ್ವಿತೀಯಾರ್ಧದಲ್ಲಿ, ಟಾಟಾ ರಿಫ್ರೆಶ್ ಮಾಡಿದ ನೆಕ್ಸಾನ್ ಇವಿಯನ್ನು ಬಿಡುಗಡೆ ಮಾಡಿತು, ಇದು ಕನೆಕ್ಟೆಡ್‌ ಹೆಡ್‌ಲೈಟ್‌ಗಳು ಮತ್ತು ಟೈಲ್‌ಲೈಟ್ ಸೆಟಪ್ ಸೇರಿದಂತೆ ವಿನ್ಯಾಸ ಆಪ್‌ಡೇಟ್‌ಗಳೊಂದಿಗೆ ಬಂದಿದೆ, ಜೊತೆಗೆ ದೊಡ್ಡ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನಂತಹ ಹೊಸ ಫೀಚರ್‌ಗಳನ್ನು ಹೊಂದಿದೆ. ಟಾಟಾ ನೆಕ್ಸಾನ್ ಇವಿಯು ಎರಡು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಮತ್ತು 465 ಕಿಮೀ ವರೆಗೆ ಕ್ಲೈಮ್ ಮಾಡಲಾದ ರೇಂಜ್‌ನೊಂದಿಗೆ ನೀಡಲಾಗುತ್ತದೆ.

ಪವರ್‌ಟ್ರೈನ್‌ ವಿಶೇಷತೆಗಳು

ಟಾಟಾ ನೆಕ್ಸಾನ್‌ ಇವಿ

ಬ್ಯಾಟರಿ ಪ್ಯಾಕ್‌

30 ಕಿ.ವ್ಯಾಟ್‌

40.5 ಕಿ.ವ್ಯಾಟ್‌

ಪವರ್‌/ ಟಾರ್ಕ್‌

129 ಪಿಎಸ್‌/ 215 ಎನ್‌ಎಮ್‌

143 ಪಿಎಸ್‌/ 215 ಎನ್‌ಎಮ್‌

ಕ್ಲೈಮ್‌ ಮಾಡಲಾದ ರೇಂಜ್‌

325 ಕಿ.ಮೀ

465 ಕಿ,ಮೀ

ಚಾರ್ಜಿಂಗ್‌ ಸಮಯ

4.3 ಗಂಟೆಗಳ (7.2 ಕಿ.ವ್ಯಾಟ್‌ ಚಾರ್ಜರ್) / 10.5 ಗಂಟೆಗಳ (3.3 ಕಿ.ವ್ಯಾಟ್‌ ಚಾರ್ಜರ್) / 56 ನಿಮಿಷಗಳು (ಡಿಸಿ ಫಾಸ್ಟ್‌ ಚಾರ್ಜರ್)

6 ಗಂಟೆಗಳು (7.2 ಕಿ.ವ್ಯಾಟ್‌ ಚಾರ್ಜರ್) / 15 ಗಂಟೆಗಳು (3.3 ಕಿ.ವ್ಯಾಟ್‌ ಚಾರ್ಜರ್) / 56 ನಿಮಿಷಗಳು (ಡಿಸಿ ಫಾಸ್ಟ್‌ ಚಾರ್ಜರ್)

ನೆಕ್ಸಾನ್‌ ಇವಿಯ ಫೀಚರ್‌ಗಳ ಪಟ್ಟಿಯು ಮುಖ್ಯವಾಗಿ ವೈರ್‌ಲೆಸ್ ಆಪಲ್‌ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್‌ ಆಟೋ ಜೊತೆಗೆ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಸಿಂಗಲ್-ಪೇನ್ ಸನ್‌ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು 9-ಸ್ಪೀಕರ್ JBL ಸೌಂಡ್ ಸಿಸ್ಟಮ್ ಅನ್ನು ಒಳಗೊಂಡಿದೆ. ಸುರಕ್ಷತೆಯ ಪ್ಯಾಕೇಜ್‌ ಅನ್ನು ಗಮನಿಸುವಾಗ, ಇದು ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು, ISOFIX ಚೈಲ್ಡ್-ಸೀಟ್ ಮೌಂಟ್‌ಗಳು ಮತ್ತು ಆಟೋ ಹೋಲ್ಡ್‌ನೊಂದಿಗೆ ಪಾರ್ಕಿಂಗ್ ಬ್ರೇಕ್ ಅನ್ನು ಪಡೆಯುತ್ತದೆ.

ಮಹೀಂದ್ರಾ ಎಕ್ಸ್‌ಯುವಿ400

ಬೆಲೆ ರೇಂಜ್‌

15.49 ಲಕ್ಷ ರೂ.ನಿಂದ 19.39 ಲಕ್ಷ ರೂ.(ಎಕ್ಸ್ ಶೋರೂಂ)

ಈ ಪಟ್ಟಿಯಲ್ಲಿರುವ ಕೊನೆಯ ಮೊಡೆಲ್‌ ಮಹೀಂದ್ರಾ ಎಕ್ಸ್‌ಯುವಿ400 ಆಗಿದೆ. ಇದು ಇತ್ತೀಚೆಗೆ ಹೊಸ ಕ್ಯಾಬಿನ್ ಥೀಮ್, ದೊಡ್ಡ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಕನೆಕ್ಟೆಡ್‌ ಕಾರ್ ತಂತ್ರಜ್ಞಾನದಂತಹ ಆಧುನಿಕ ಫೀಚರ್‌ಗಳನ್ನು ಒಳಗೊಂಡಂತೆ ಕೆಲವು ಆವೃತ್ತಿ ಮತ್ತು ಫೀಚರ್‌ನ ಆಪ್‌ಡೇಟ್‌ಗಳನ್ನು ಸ್ವೀಕರಿಸಿದೆ. ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ (34.5 ಕಿ.ವ್ಯಾಟ್‌ ಮತ್ತು 39.5 ಕಿ.ವ್ಯಾಟ್‌) ಲಭ್ಯವಿದೆ, ಎಕ್ಸ್‌ಯುವಿ400 150 ಪಿಎಸ್‌ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಸಜ್ಜುಗೊಂಡಿದೆ, ಇದು 456 km ವರೆಗೆ ಕ್ಲೈಮ್‌ ಮಾಡಲಾದ ರೇಂಜ್‌ ಅನ್ನು ಒದಗಿಸುತ್ತದೆ.

ಪವರ್‌ಟ್ರೈನ್‌ ವಿಶೇಷತೆಗಳು

ಮಹೀಂದ್ರಾ ಎಕ್ಸ್‌ಯುವಿ400 

ಬ್ಯಾಟರಿ ಪ್ಯಾಕ್‌

34.5 ಕಿ.ವ್ಯಾಟ್‌

39.5 ಕಿ.ವ್ಯಾಟ್‌

ಪವರ್‌/ ಟಾರ್ಕ್‌

150 ಪಿಎಸ್‌/ 310 ಎನ್‌ಎಮ್‌

150 ಪಿಎಸ್‌/ 310 ಎನ್‌ಎಮ್‌

ಕ್ಲೈಮ್‌ ಮಾಡಲಾದ ರೇಂಜ್‌

375 ಕಿ.ಮೀ

456 ಕಿ.ಮೀ

ಚಾರ್ಜಿಂಗ್‌ ಸಮಯ

6.5 ಗಂಟೆಗಳು (7.4 ಕಿ.ವ್ಯಾಟ್‌ ಚಾರ್ಜರ್) / 13.5 ಗಂಟೆಗಳ (3.3 ಕಿ.ವ್ಯಾಟ್‌ ಚಾರ್ಜರ್) / 50 ನಿಮಿಷಗಳು (ಡಿಸಿ ಫಾಸ್ಟ್‌ ಚಾರ್ಜರ್)

6.5 ಗಂಟೆಗಳು (7.4 ಕಿ.ವ್ಯಾಟ್‌ ಚಾರ್ಜರ್) / 13.5 ಗಂಟೆಗಳ (3.3 ಕಿ.ವ್ಯಾಟ್‌ ಚಾರ್ಜರ್) / 50 ನಿಮಿಷಗಳು (ಡಿಸಿ ಫಾಸ್ಟ್‌ ಚಾರ್ಜರ್)

ಮಹೀಂದ್ರಾ ಎಕ್ಸ್‌ಯುವಿ400 ವೈರ್‌ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಜೊತೆಗೆ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್‌ಸ್ ಡಿಸ್‌ಪ್ಲೇ, ಡ್ಯುಯಲ್-ಝೋನ್ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಸಿಂಗಲ್-ಪೇನ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಪುಶ್-ಬಟನ್ ಸ್ಟಾರ್ಟ್‌-ಸ್ಟಾಪ್‌ ಅನ್ನು ಹೊಂದಿದೆ. ಸುರಕ್ಷತಾ ಫೀಚರ್‌ಗಳಲ್ಲಿ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಪಾರ್ಕಿಂಗ್ ಸೆನ್ಸರ್‌ಗಳೊಂದಿಗೆ ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಸೇರಿವೆ.

ಇವುಗಳು ಭಾರತದಲ್ಲಿ ಅತ್ಯಂತ ಕೈಗೆಟುಕುವ ಏಳು ಇವಿಗಳಾಗಿವೆ. ನೀವು ಯಾವ ಇವಿಯನ್ನು ಆರಿಸುತ್ತೀರಿ ಎಂಬುದನ್ನು ಕೆಳಗಿನ ಕಾಮೆಂಟ್‌ಗಳಲ್ಲಿ ನಮಗೆ ತಿಳಿಸಿ.

ಎಲ್ಲಾ ಬೆಲೆಗಳು, ಎಕ್ಸ್-ಶೋರೂಮ್ ಪ್ಯಾನ್-ಇಂಡಿಯಾ

ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ನೀವು ಕಾರ್‌ದೇಖೋದ ವಾಟ್ಸಾಪ್‌ ಚಾನೆಲ್‌ಅನ್ನು ಫಾಲೋ ಮಾಡಿ

ಇನ್ನಷ್ಟು ಓದಿ: ಎಮ್‌ಜಿ ಕಾಮೆಟ್ ಇವಿ ಆಟೋಮ್ಯಾಟಿಕ್‌   

ಅವರಿಂದ ಪ್ರಕಟಿಸಲಾಗಿದೆ
Anonymous
was this article helpful ?

0 out of 0 found this helpful

Write your Comment on M ಜಿ ಕಾಮೆಟ್ ಇವಿ

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience