• English
  • Login / Register

Mahindra Thar Roxxನ ಹೊಸ ಅಪ್ಡೇಟ್: ಈ 5 ಡೋರ್ ಪಡೆಯಲಿದೆ XUV400 EV ನಿಂದ ಈ 5 ಫೀಚರ್ ಗಳು

ಮಹೀಂದ್ರ ಥಾರ್‌ ರಾಕ್ಸ್‌ ಗಾಗಿ dipan ಮೂಲಕ ಆಗಸ್ಟ್‌ 02, 2024 07:02 pm ರಂದು ಪ್ರಕಟಿಸಲಾಗಿದೆ

  • 54 Views
  • ಕಾಮೆಂಟ್‌ ಅನ್ನು ಬರೆಯಿರಿ

ಇತ್ತೀಚೆಗೆ ಅಪ್ಡೇಟ್ ಆಗಿರುವ XUV400 ಎಲೆಕ್ಟ್ರಿಕ್ ವಾಹನದಲ್ಲಿರುವ ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಡ್ಯುಯಲ್ ಡಿಜಿಟಲ್ ಸ್ಕ್ರೀನ್‌ಗಳಂತಹ ಅನೇಕ ಟಾಪ್-ಲೆವೆಲ್ ಫೀಚರ್ ಗಳನ್ನು ಮಹೀಂದ್ರಾ ಥಾರ್ ರಾಕ್ಸ್ ಪಡೆಯುವ ಸಾಧ್ಯತೆಯಿದೆ

5 things the Mahindra Thar Roxx can get from the Mahindra XUV400 EV

ಮಹೀಂದ್ರಾ ಥಾರ್ ರಾಕ್ಸ್ ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ ಮತ್ತು ಕಂಪನಿಯು SUVಯ ಟೀಸರ್‌ಗಳನ್ನು ಶೇರ್ ಮಾಡಲು ಪ್ರಾರಂಭಿಸಿದೆ. ನಾವು ಥಾರ್ ರಾಕ್ಸ್ ಸ್ಪೆಸಿಫಿಕೇಷನ್ ಮತ್ತು ಫೀಚರ್ ಗಳ ಕುರಿತು ಅಧಿಕೃತ ವಿವರಗಳನ್ನು ಇನ್ನೂ ಪಡೆದಿಲ್ಲ, ಆದರೆ ಇತ್ತೀಚೆಗೆ ಅಪ್ಡೇಟ್ ಆಗಿರುವ ಮಹೀಂದ್ರಾ XUV400 EV ಯಲ್ಲಿರುವ ಕೆಲವು ಫೀಚರ್ ಗಳು ಥಾರ್ ರಾಕ್ಸ್ ನಲ್ಲಿಯೂ ಲಭ್ಯವಿರಬಹುದು. ಅವುಗಳ ವಿವರ ಇಲ್ಲಿದೆ.

 10.25-ಇಂಚಿನ ಟಚ್‌ಸ್ಕ್ರೀನ್

Mahindra XUV400 EV 10.25-inch touchscreen

 ಮಿಡ್ ರೇಂಜ್ ಮಹೀಂದ್ರಾ ಥಾರ್ ರಾಕ್ಸ್ ನ ಒಳಭಾಗವನ್ನು ಇತ್ತೀಚೆಗೆ ಗುಟ್ಟಾಗಿ ನೋಡಲಾಗಿದೆ, ಮತ್ತು ಇದು ಈಗಿರುವ 3-ಡೋರ್ ಥಾರ್‌ಗಿಂತ ದೊಡ್ಡ ಟಚ್‌ಸ್ಕ್ರೀನ್ ಅನ್ನು ಹೊಂದಿದೆ ಎಂದು ತೋರಿಸುತ್ತದೆ. ಆದ್ದರಿಂದ, ಹೊಸ XUV400 EV ಯಲ್ಲಿರುವ 10.25-ಇಂಚಿನ ಟಚ್‌ಸ್ಕ್ರೀನ್ ಅನ್ನು ಥಾರ್ ರಾಕ್ಸ್ ಪಡೆಯುವ ನಿರೀಕ್ಷೆಯಿದೆ. XUV400 ನ ಟಚ್‌ಸ್ಕ್ರೀನ್ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಅನ್ನು ಸಪೋರ್ಟ್ ಮಾಡುವುದಿಲ್ಲ, ಆದರೆ ಥಾರ್ ರಾಕ್ಸ್ ಈ ಫೀಚರ್ ಅನ್ನು ಪಡೆಯಬಹುದು.

 ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್ಪ್ಲೇ

Mahindra XUV400 driver's display

 ಥಾರ್ ರಾಕ್ಸ್ ಟೆಸ್ಟ್ ವಾಹನದ ಹಿಂದಿನ ಫೋಟೋ ಇದರಲ್ಲಿ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಹೊಂದಿರುವುದನ್ನು ತೋರಿಸಿದೆ. XUV400 ನಲ್ಲಿರುವ 10.25-ಇಂಚಿನ ಸ್ಕ್ರೀನ್ ಅನ್ನು ಥಾರ್ ರಾಕ್ಸ್ ನಲ್ಲಿ ಕೂಡ ಮಹೀಂದ್ರಾ ನೀಡುವ ನಿರೀಕ್ಷೆಯಿದೆ. ಈ ಸ್ಕ್ರೀನ್ ನ್ಯಾವಿಗೇಷನ್ ಮತ್ತು ಟೈರ್ ಪ್ರೆಶರ್ ನಂತಹ ಮಾಹಿತಿಯನ್ನು ತೋರಿಸುತ್ತದೆ.

 ಇದನ್ನು ಕೂಡ ಓದಿ: ಫಸ್ಟ್ ಲುಕ್: 5 ಡೋರ್ ಮಹೀಂದ್ರಾ ಥಾರ್ ರಾಕ್ಸ್ ಮಿಡ್-ಸ್ಪೆಕ್ ವೇರಿಯಂಟ್ ಇಂಟೀರಿಯರ್ ಸ್ಪೈ ಶಾಟ್ ಗಳು

 ಡ್ಯುಯಲ್-ಝೋನ್ AC

Mahindra XUV400 EV dual-zone AC

 ಡ್ಯುಯಲ್-ಝೋನ್ AC ಮುಂಭಾಗದಲ್ಲಿ ಕೂರುವ ಪ್ರಯಾಣಿಕರಿಗೆ ಕಾರಿನ ಪ್ರತಿಯೊಂದು ಬದಿಗೆ ತಮಗೆ ಬೇಕಾದ ತಾಪಮಾನವನ್ನು ಸೆಟ್ ಮಾಡಲು ಅನುಕೂಲ ಮಾಡಿಕೊಡುತ್ತದೆ. ಈ ಫೀಚರ್ ಮಹೀಂದ್ರಾ XUV400 ನಲ್ಲಿ ಲಾಂಚ್ ಆದಾಗಿನಿಂದ ಲಭ್ಯವಿದೆ ಮತ್ತು ಥಾರ್ ರಾಕ್ಸ್ ನಲ್ಲಿಯೂ ಇದನ್ನು ಸೇರಿಸುವ ಸಾಧ್ಯತೆಯಿದೆ. ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳುವವರಿಗೆ ಹೆಚ್ಚು ಆರಾಮದಾಯಕ ಅನುಭವ ನೀಡಲು ಥಾರ್ ರೋಕ್ಸ್ ಹಿಂಭಾಗದ AC ವೆಂಟ್‌ಗಳನ್ನು ನೀಡುವ ಸಾಧ್ಯತೆಯಿದೆ.

 ಎಲ್ಲಾ ನಾಲ್ಕು ಡಿಸ್ಕ್ ಬ್ರೇಕ್ ಗಳು

5 door Mahindra Thar Roxx rear disc brakes

 ನಾವು ಈ ಹಿಂದೆ ರಿಯರ್ ಡಿಸ್ಕ್ ಬ್ರೇಕ್‌ಗಳೊಂದಿಗೆ ಥಾರ್ ರಾಕ್ಸ್ ಟೆಸ್ಟ್ ವಾಹನವನ್ನು ನೋಡಿದ್ದೇವೆ, ಆದ್ದರಿಂದ ಪ್ರೊಡಕ್ಷನ್ ಮಾಡೆಲ್ ಕೂಡ ಅವುಗಳನ್ನು ಪಡೆಯಬಹುದು. ಮಹೀಂದ್ರಾ XUV400 EV ನಾಲ್ಕು ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ ಮತ್ತು ಥಾರ್ ರಾಕ್ಸ್ ಕೂಡ ಅದೇ ಸೆಟ್ಅಪ್ ಅನ್ನು ಬಳಸಬಹುದು.

 ಇದನ್ನು ಕೂಡ ಓದಿ:  ಮಹೀಂದ್ರಾ ಥಾರ್ ರಾಕ್ಸ್ ಪಡೆಯಲಿದೆ ಪನೋರಮಿಕ್ ಸನ್‌ರೂಫ್,  ಇಲ್ಲಿದೆ ಇತ್ತೀಚಿನ ಟೀಸರ್ ಚಿತ್ರ

ವೈರ್‌ಲೆಸ್ ಫೋನ್ ಚಾರ್ಜರ್

Mahindra XUV400 EV wireless phone charger

 ವೈರ್‌ಲೆಸ್ ಫೋನ್ ಚಾರ್ಜರ್ ಮೂಲಕ ನೀವು ಕೇಬಲ್‌ಗಳ ಸಹಾಯವಿಲ್ಲದೆಯೇ ನಿಮ್ಮ ಫೋನ್ ಅನ್ನು ಚಾರ್ಜ್ ಮಾಡಬಹುದು. ಅನೇಕ ಮಾಸ್ ಮಾರ್ಕೆಟ್ ಕಾರುಗಳು ಈಗಾಗಲೇ ಈ ಫೀಚರ್ ಅನ್ನು ಹೊಂದಿವೆ ಮತ್ತು ಥಾರ್ ರಾಕ್ಸ್ ನಲ್ಲಿ ಕೂಡ ಇದು ಬರಬಹುದು.

 ಮಹೀಂದ್ರಾ XUV400 EV ಯಿಂದ 5-ಡೋರ್ ಮಹೀಂದ್ರಾ ಥಾರ್ ರಾಕ್ಸ್ ಪಡೆಯಬಹುದಾದ ಕೆಲವು ಪ್ರಮುಖ ಫೀಚರ್ ಗಳ ಬಗ್ಗೆ ನಿಮಗೆ ಇಲ್ಲಿ ತಿಳಿಸಿದ್ದೇವೆ. ಮುಂಬರುವ ಮಹೀಂದ್ರಾ SUV ನಲ್ಲಿ XUV400 ನಲ್ಲಿರುವ ಯಾವ ಇತರ ಫೀಚರ್ ಅನ್ನು ನೀವು ನೋಡಲು ಬಯಸುತ್ತೀರಿ? ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ

 ಆಟೋಮೋಟಿವ್ ಪ್ರಪಂಚದ ನಿರಂತರ ಅಪ್ಡೇಟ್ ಗಳನ್ನು ಪಡೆಯಲು ಕಾರ್ದೇಖೋ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.

 ಇನ್ನಷ್ಟು ಓದಿ:  ಮಹೀಂದ್ರಾ ಥಾರ್ ಆಟೋಮ್ಯಾಟಿಕ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Mahindra ಥಾರ್‌ ROXX

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience