ಯುರೋಪ್‌ನಲ್ಲಿ ಕಾಣಸಿಕ್ಕ ಹೊಸ ಪೀಳಿಗೆಯ ರೆನಾಲ್ಟ್ ಡಸ್ಟರ್ !
ರೆನಾಲ್ಟ್ ಡಸ್ಟರ್ 2025 ಗಾಗಿ shreyash ಮೂಲಕ ಏಪ್ರಿಲ್ 03, 2023 04:30 pm ರಂದು ಪ್ರಕಟಿಸಲಾಗಿದೆ
- 20 Views
- ಕಾಮೆಂಟ್ ಅನ್ನು ಬರೆಯಿರಿ
ಹಿಂದಿನದಕ್ಕೆ ಹೋಲಿಸಿದರೆ ಹೊಸ ಡಸ್ಟರ್ ಗಣನೀಯವಾಗಿ ದೊಡ್ಡ ಆಯಾಮಗಳನ್ನು ಹೊಂದಿರಲಿದೆ ಎಂದು ರಹಸ್ಯ ಫೊಟೋಗಳು ಹೇಳುತ್ತವೆ
- ರೆನಾಲ್ಟ್-ನಿಸ್ಸಾನ್‌ನ ಹೊಸ CMF-B ವಿನ್ಯಾಸದ ಆಧರಿತವಾಗಿರಲಿದೆ ಹೊಸ ಡಸ್ಟರ್.
- ಐಸಿಐ ಮತ್ತು ಹೈಬ್ರಿಡ್ ಪವರ್‌ಟ್ರೇನ್ ಆಯ್ಕೆಗಳೆರಡನ್ನೂ ಬೆಂಬಲಿಸುತ್ತದೆ ಹೊಸ ಪ್ಲಾಟ್‌ಫಾರಂ
- ಇದರ ವಿನ್ಯಾಸವು ಡೇಸಿಯಾ ಬಿಗ್‌ಸ್ಟರ್ ಪರಿಕಲ್ಪನೆಯಿಂದ ತುಂಬಾ ಪ್ರೇರೇಪಿತಗೊಂಡಿದೆ.
- 2025ರ ವೇಳೆಗೆ ಭಾರತದಲ್ಲಿ ಬಿಡುಗಡೆಗೊಳ್ಳುವ ನಿರೀಕ್ಷೆಯಿದ್ದು, ನಿಸ್ಸಾನ್‌ನ ಎಸ್‌ಯುವಿ ಕೂಡಾ ಬರಲಿದೆ
ಮುಂದಿನ ಪೀಳಿಗೆಯ ಡಸ್ಟರ್ ಅಭಿವೃದ್ಧಿಯ ಹಂತದಲ್ಲಿದೆ ಮತ್ತು ನಿರೀಕ್ಷಿತ 2024ರ ಜಾಗತಿಕ ಬಿಡುಗಡೆಗಿಂತ ಮುಂಚಿತವಾಗಿ ಇದು ಯುರೋಪ್‌ನಲ್ಲಿ ಪರೀಕ್ಷೆಗೆ ಒಳಗಾಗುತ್ತಿರುವುದು ಕಂಡುಬಂದಿದೆ. ಯುರೋಪ್‌ನಲ್ಲಿ ನೀಡಲಾಗುತ್ತಿರುವ ಎರಡನೇ ಪೀಳಿಗೆಯ ಮಾಡೆಲ್ ಭಾರತದಲ್ಲಿ ಬಂದಿಲ್ಲ, ಇದೇ ವೇಳೆ 2022ರ ಆರಂಭದಲ್ಲಿ ಮೊದಲ ಪೀಳಿಗೆ ಡಸ್ಟರ್ ಸ್ಥಗಿತಗೊಂಡಿತು. ಆದಾಗ್ಯೂ, ಡಸ್ಟರ್ ಮುಂದಿನ ಜಾಗತಿಕ ಮಾಡೆಲ್‌ನೊಂದಿಗೆ ಭಾರತಕ್ಕೆ ಮರಳುವ ನಿರೀಕ್ಷೆಯಿದೆ.
ಹೊಸ ವಿನ್ಯಾಸ, ದೊಡ್ಡ ಆಯಾಮಗಳು
ಸಂಪೂರ್ಣವವಾಗಿ ಮುಚ್ಚಿದ ಪ್ರಯೋಗದ ಕಾರಿನ ರಹಸ್ಯ ಫೊಟೋಗಳ ಆಧಾರದಲ್ಲಿ ಹೊಸ ಪೀಳಿಗೆಯ ರೆನಾಲ್ಟ್ ಎಸ್‌ಯುವಿಯ ವಿನ್ಯಾಸವು ಡೇಸಿಯಾ ಬಿಗ್‌ಸ್ಟರ್ ಪರಿಕಲ್ಪನೆಯಿಂದ ತುಂಬಾ ಪ್ರೇರೇಪಿತಗೊಂಡಂತಿದೆ. ಎಸ್‌ಯುವಿನಯ ಒಟ್ಟಾರೆ ನೋಟವು ಹೆಚ್ಚು ಸ್ಲೀಕ್ ಮತ್ತು ಸ್ಟೈಲಿಶ್ ಆಗಿದೆ. ಎಸ್‌ಯುವಿಯ ಮುಂಭಾಗವು ಡ್ಯುಯಲ್ ಸ್ಟ್ರಿಪ್ ಎಲ್‌ಇಡಿ ಡಿಆರ್‌ಲ್‌ಗಳನ್ನು ಹೊಂದಿದೆ ಮತ್ತು ದೊಡ್ಡ ಏರ್ ಡಾಮ್ ಅನ್ನು ಹೊಂದಿದ್ದು ಅದು ಕ್ಲಾಡೆಡ್ ಬಂಪರ್ ಅನ್ನು ಆವರಿಸಿದೆ.
ಇದನ್ನು ಓದಿ: ನಿಸ್ಸಾನ್ ಪರಿಚಯಿಸಲಿದೆ ರೆನಾಲ್ಟ್ ಟ್ರೈಬರ್‌ನ ಸ್ವಂತ ಆವೃತ್ತಿ
ಎಸ್‌ಯುವಿಯ ಆಕಾರವು ಪಾರ್ಶ್ವದಿಂದ ನೋಡಿದಾಗ ಸ್ಟ್ರೀಮ್‌ಲೈನ್ ಆಗಿರುವಂತೆ ಕಾಣುತ್ತದೆ, ಸ್ಕ್ವಿರಿಶ್ ವ್ಹೀಲ್ ಆರ್ಕ್‌ಗಳನ್ನು ಹೊಂದಿದೆ ಮತ್ತು ಉಬ್ಬಿದ ಫೆಂಡರ್‌ಗಳಿರುವುದಿಲ್ಲ. ರಹಸ್ಯವಾಗಿ ಕಂಡಬಂದ ಎಸ್‌ಯುವಿಯ ಹಿಂಭಾಗದ ವಿನ್ಯಾಸವು ಹಂಚ್‌ಬ್ಯಾಕ್ ಆಕಾರವನ್ನು ಹೊಂದಿದೆ. ಇದು ಎತ್ತರಿಸಿದ ರೂಫ್‌ಲೈನ್ ಮತ್ತು ಸಮಗ್ರ ರೂಫ್ ಸ್ಪಾಯ್ಲರ್ ಅನ್ನು ಹೊಂದಿದೆ. ಪ್ರಸ್ತುತ ಎರಡನೇ ಪೀಳಿಗೆಯ ಡಸ್ಟರ್ 4.34 ಮೀಟರ್‌ಗಳಷ್ಟು ಉದ್ದವಿದೆ ಮತ್ತು ಅದರ ಉತ್ತರಾಧಿಕಾರಿಯ ಪ್ರಯೋಗದ ಕಾರು ಅದಕ್ಕಿಂತಲೂ ದೊಡ್ಡದಾಗಿರುವಂತೆ ತೋರುತದೆ.
ಹೊಸ ಪ್ಲಾಟ್‌ಫಾರ್ಮ್
ಮೂರನೇ ಪೀಳಿಗೆಯ ಡಸ್ಟರ್, ರೆನಾಲ್ಟ್-ನಿಸ್ಸಾನ್‌ನ ಹೊಚ್ಚಹೊಸ ಸಿಎಂಎಫ್-ಬಿ ವಿನ್ಯಾಸವನ್ನು ಆಧರಿಸಿರಲಿದೆ. ಐಸಿಇ ಮತ್ತು ಹೈಬ್ರಿಡ್ ಪವರ್‌ಟ್ರೇನ್‌ಗಳೆರಡನ್ನೂ ಬೆಂಬಲಿಸುವ ಎರಡನೇ ಪೀಳಿಗೆಯ ಯೂರೋ-ಸ್ಪೆಕ್ ಕ್ಯಾಪ್ಚರ್‌ನಂತೆಯೇ ಇರಲಿದೆ. ಡೇಸಿಯಾ ಬ್ರ್ಯಾಂಡ್‌ನ ಅಡಿಯಲ್ಲಿ, ಹೊಸ ಡಸ್ಟರ್ ಖಚಿತವಾಗಿ ಬಲಿಷ್ಠ ಹೈಬ್ರಿಡ್ ಪವರ್‌ಟ್ರೇನ್‍ನ ಆಯ್ಕೆಯನ್ನು ಪಡೆಯಲಿದೆ ಮತ್ತು ರೆನಾಲ್ಟ್ ಬ್ಯಾಡ್ಜ್‌ನ ಆವೃತ್ತಿಯಲ್ಲೂ ಇದನ್ನು ನೀಡುವ ಸಾಧ್ಯತೆಯಿದೆ. ಈ ಪ್ಲಾಟ್‌ಫಾರ್ಮ್ ಸಿಎಂಎಎಫ್-ಬಿಇವಿ ವಿನ್ಯಾಸಕ್ಕೆ ತುಂಬಾ ನಿಕಟವಾಗಿ ಸಂಬಂಧಿಸಿದೆ ಮತ್ತು ಹಾಗಾಗಿ ಈ ಎಸ್‌ಯುವಿ ಭವಿಷ್ಯದಲ್ಲಿ ಸಂಪೂರ್ಣ ಎಲೆಕ್ಟ್ರಿಕ್ ಆವೃತ್ತಿಯನ್ನು ಪಡೆಯಬಹುದು.
ಇದನ್ನೂ ಓದಿ: ನಿಸ್ಸಾನ್ ಮತ್ತು ರೆನಾಲ್ಟ್ ಭಾರತಕ್ಕೆ ಪರಿಚಯಿಸಲಿವೆ ಆರು ಹೊಸ ಮಾಡೆಲ್‌ಗಳು - 4 ಎಸ್‌ಯುವಿಗಳು ಮತ್ತು 2 ಇವಿಗಳು
ಭಾರತದಲ್ಲಿ ನಿರೀಕ್ಷಿತ ಬಿಡುಗಡೆ
ರೆನಾಲ್ಟ್-ನಿಸ್ಸಾನ್ ಆಟೊಮೋಟಿವ್ ಗ್ರೂಪ್ ಭಾರತದಲ್ಲಿ ಹೊಸ ಉತ್ಪನ್ನಗಳನ್ನು ಪರಿಚಯಿಸುವ ತನ್ನ ಯೋಜನೆಯನ್ನು ಹಂಚಿಕೊಂಡಿದೆ, 2025ರ ಆರಂಭದಲ್ಲಿ 4 ಎಸ್‌ಯುವಿಗಳು ಬಿಡುಗಡೆಗೊಳ್ಳಲಿವೆ. ಇವುಗಳಲ್ಲಿ ಒಂದು ಹೊಸ ಪೀಳಿಗೆಯ ಡಸ್ಟರ್ ಕೂಡಾ ಸೇರಿದೆ, ಇದರೊಂದಿಗೆ ರೆನಾಲ್ಟ್ ಕೈಗರ್ ಮತ್ತು ನಿಸ್ಸಾನ್ ಮ್ಯಾಗ್ನೈಟ್ ಜೋಡಿಯಂತಹ ನಿಸ್ಸಾನ್ ಬ್ಯಾಡ್ಜ್‌ನ ಕಾರು ಕೂಡಾ ಬರಲಿದೆ. ಬಿಡುಗಡೆಗೊಳ್ಳುವ ವೇಳೆಗೆ, ಇದು ಮಾರುತಿ ಗ್ರಾಂಡ್ ವಿಟಾರಾ, ಟೊಯೊಟಾ ಹೈರೈಡರ್, ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಎಂಜಿ ಆಸ್ಟರ್, ಫೋಕ್ಸ್ ವ್ಯಾಗನ್ ಟೈಗನ್ ಮತ್ತು ಸ್ಕೋಡಾ ಕುಶಾಕ್ ನಂತಹ ಎಸ್‌ಯುವಿಗಳ ಪ್ರತಿಸ್ಪರ್ಧಿಯಾಗಲಿದೆ.