ಡಸ್ಟರ್ ಪ್ರೀಯರಿಗೆ ನಿರಾಶೆ.. ಭಾರತದಲ್ಲಿ Renault Dusterನ ಬಿಡುಗಡೆ ಮುಂದಿನ ವರ್ಷಕ್ಕೆ ಮುಂದೂಡಿಕೆ
ರೆನಾಲ್ಟ್ ಡಸ್ಟರ್ 2025 ಗಾಗಿ dipan ಮೂಲಕ ಜನವರಿ 08, 2025 03:44 pm ರಂದು ಪ್ರಕಟಿಸಲಾಗಿದೆ
- 45 Views
- ಕಾಮೆಂಟ್ ಅನ್ನು ಬರೆಯಿರಿ
ಇದರ ಬದಲಿಗೆ ರೆನಾಲ್ಟ್ ಕಿಗರ್ ಮತ್ತು ಟ್ರೈಬರ್‌ನ ಮುಂದಿನ ಜನರೇಶನ್‌ನ ಮೊಡೆಲ್‌ಗಳನ್ನು ಈ ವರ್ಷ ಪರಿಚಯಿಸಲಾಗುವುದು
-
ಸಂಪೂರ್ಣ ಹೊಸದಾದ ಎಸ್‌ಯುವಿಯನ್ನು 2026ರಲ್ಲಿ ಬಿಡುಗಡೆ ಮಾಡಲಾಗುವುದು ಎಂದು ರೆನಾಲ್ಟ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಾರೆ.
-
ಹಿಂದಿನ ಟೀಸರ್‌ಗಳು ಈ ಹಿಂದೆ 2025 ರಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿದ್ದ ಹೊಸ ರೆನಾಲ್ಟ್ ಡಸ್ಟರ್ ಆಗಿರಬಹುದು ಎಂದು ಸೂಚಿಸುತ್ತವೆ.
-
ಇದು ಸಂಪೂರ್ಣ ಎಲ್ಇಡಿ ಲೈಟಿಂಗ್ ಸೆಟಪ್, ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳು ಮತ್ತು ರಗಡ್ ಆಗಿರುವ ಕ್ಲಾಡಿಂಗ್ ಅನ್ನು ಪಡೆಯುತ್ತದೆ.
-
ಫ್ಲೋಟಿಂಗ್ ಟಚ್‌ಸ್ಕ್ರೀನ್ ಮತ್ತು ಸಾಕಷ್ಟು ಬಟನ್ ಕಂಟ್ರೋಲ್‌ಗಳೊಂದಿಗೆ ಆಧುನಿಕ ಇಂಟೀರಿಯರ್‌ನೊಂದಿಗೆ ಬರಲಿದೆ.
-
ಫೀಚರ್‌ಗಳು 10.1-ಇಂಚಿನ ಟಚ್‌ಸ್ಕ್ರೀನ್, 7-ಇಂಚಿನ ಡ್ರೈವರ್ ಡಿಸ್‌ಪ್ಲೇ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಅನ್ನು ಒಳಗೊಂಡಿರಬಹುದು.
-
ಇಂಡಿಯಾ-ಸ್ಪೆಕ್ ಮಾಡೆಲ್‌ನ ಪವರ್‌ಟ್ರೇನ್ ವಿವರಗಳನ್ನು ಇನ್ನೂ ದೃಢೀಕರಿಸಬೇಕಾಗಿದೆ.
-
ಬೆಲೆಗಳು 10 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ.
ಬಿಡುಗಡೆ ವಿಳಂಬವಾಗಿರುವುದರಿಂದ ರೆನಾಲ್ಟ್ ಡಸ್ಟರ್ ಅಭಿಮಾನಿಗಳು ಭಾರತದಲ್ಲಿ ಈ ಮೊಡೆಲ್ ಹಿಂತಿರುಗಲು ಇನ್ನೂ ಸ್ವಲ್ಪ ಸಮಯ ಕಾಯಬೇಕಾಗುತ್ತದೆ. ರೆನಾಲ್ಟ್ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ವೆಂಕಟರಾಮ್ ಮಾಮಿಲ್ಲಾಪಲ್ಲೆ ಅವರು ಭಾರತೀಯ ಮಾರುಕಟ್ಟೆಯಲ್ಲಿ ಭವಿಷ್ಯದ ಕಾರು ತಯಾರಕರ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ನಾವು ಹೆಚ್ಚಿನ ವಿವರಗಳನ್ನು ಪಡೆಯುವ ಮೊದಲು, ಉನ್ನತ ಅಧಿಕಾರಿ ಏನು ಹೇಳಿದ್ದಾರೆಂದು ನೋಡೋಣ.
ರೆನಾಲ್ಟ್ ಇಂಡಿಯಾದ ಎಮ್‌ಡಿ ಹೇಳುವಂತೆ, “...ವರ್ಷದ ಕೊನೆಯ ಭಾಗದಲ್ಲಿ ಮುಂದಿನ ಜನರೇಶನ್‌ನ ಟ್ರೈಬರ್ ಮತ್ತು ಕಿಗರ್‌ನ ಬಿಡುಗಡೆಯನ್ನು ಕಾಣಲಿದೆ, ಹಾಗೆಯೇ ಈ ಕಾರುಗಳನ್ನು ಪ್ರೇರೇಪಿಸಲು ಮತ್ತು ಆನಂದಿಸಲು ವಿನ್ಯಾಸಗೊಳಿಸಲಾಗಿದೆ. ಈ ಬಿಡುಗಡೆಗಳು 2026 ಕ್ಕೆ ನಿಗದಿಪಡಿಸಲಾದ ಸಂಪೂರ್ಣ-ಹೊಸದಾದ ಎಸ್‌ಯುವಿ ಸೇರಿದಂತೆ ಆಪ್‌ಗ್ರೇಡ್‌ಗಳ ಸರಣಿಯ ಆರಂಭವನ್ನು ಸೂಚಿಸುತ್ತವೆ."
ರೆನಾಲ್ಟ್ ಕಿಗರ್ ಮತ್ತು ರೆನಾಲ್ಟ್ ಟ್ರೈಬರ್‌ನ ಮುಂದಿನ ಜನರೇಶನ್‌ನ ಮೊಡೆಲ್‌ಗಳನ್ನು ಈ ವರ್ಷ ಪರಿಚಯಿಸಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ, ಹಾಗೆಯೇ, ಸಂಪೂರ್ಣ ಹೊಸದಾದ ಎಸ್‌ಯುವಿಯನ್ನು 2026 ರಲ್ಲಿ ಪರಿಚಯಿಸಲಾಗುವುದು ಎಂದು ರೆನಾಲ್ಟ್ ಇಂಡಿಯಾದ ಎಂಡಿ ತಿಳಿಸಿದ್ದಾರೆ.2024ಕ್ಕೆ ನಾವೊಮ್ಮೆ ಹಿಂತಿರುಗಿ ನೋಡುವಾಗ, ಫ್ರೆಂಚ್ ಕಾರು ತಯಾರಕರು ಈ ಮಾರ್ಚ್‌ನಲ್ಲಿ ಎಸ್‌ಯುವಿಯು ಭಾರತದಲ್ಲಿ ಪುನರಾಗಮನವನ್ನು ಮಾಡಲಿದೆ ಎಂದು ದೃಢಪಡಿಸಿದ್ದರು ಮತ್ತು ಅದರ ಟೀಸರ್ ಅನ್ನು ಸಹ ಹಂಚಿಕೊಂಡಿದ್ದರು. ಮುಂಬರುವ ʼಸಂಪೂರ್ಣ-ಹೊಸದಾದ ಎಸ್‌ಯುವಿ' 2024ರ ನವೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಪ್ರದರ್ಶಿಸಲಾದ ರೆನಾಲ್ಟ್ ಡಸ್ಟರ್‌ನ ಹೊಸ ಜನರೇಶನ್ ಆಗಿರುತ್ತದೆ ಎಂದು ಅಂದಾಜಿಸಲಾಗಿತ್ತು ಮತ್ತು 2024ರ ಮಾರ್ಚ್‌ನಲ್ಲಿ ಮತ್ತೆ ಟೀಸರ್ ಅನ್ನು ಸಹ ಬಿಡುಗಡೆ ಮಾಡಲಾಗಿತ್ತು.
ಮುಂಬರುವ ಡಸ್ಟರ್ ನೀಡಬಹುದಾದ ಎಲ್ಲಾ ಫೀಚರ್‌ಗಳನ್ನು ನಾವು ನೋಡೋಣ.
ಹೊಸ ರೆನಾಲ್ಟ್ ಡಸ್ಟರ್: ಎಕ್ಸ್‌ಟೀರಿಯರ್
ಹೊಸ ತಲೆಮಾರಿನ ಡಸ್ಟರ್ ಭಾರತದಲ್ಲಿ ಸ್ಥಗಿತಗೊಂಡ ಮೊಡೆಲ್‌ನಂತೆಯೇ ಬಾಕ್ಸ್ ವಿನ್ಯಾಸವನ್ನು ಹೊಂದಿರುತ್ತದೆ. ಆದರೆ, ಹೊಸ-ಜೆನ್ ಮೊಡೆಲ್ ಸಂಪೂರ್ಣವಾಗಿ ಹೆಚ್ಚು ಆಧುನಿಕವಾಗಿ ಕಾಣುತ್ತದೆ, ಏಕೆಂದರೆ ಇದು ಎಲ್ಇಡಿ ಹೆಡ್‌ಲೈಟ್‌ಗಳು, ವೈ-ಆಕಾರದ ಎಲ್ಇಡಿಆರ್ ಮತ್ತು Y-ಆಕಾರದ ಎಲ್ಇಡಿ ಟೈಲ್ ಲೈಟ್‌ಗಳೊಂದಿಗೆ ಬರುತ್ತದೆ. ಇದು ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳು ಮತ್ತು ರಗಡ್ ಆದ ನೋಟಕ್ಕಾಗಿ ಕಪ್ಪು ಹೊದಿಕೆಯೊಂದಿಗೆ ಚೌಕಾಕಾರದ ವೀಲ್ ಆರ್ಚ್‌ಗಳೊಂದಿಗೆ ಬರುತ್ತದೆ.
ಹೊಸ ರೆನಾಲ್ಟ್ ಡಸ್ಟರ್: ಇಂಟೀರಿಯರ್, ಫೀಚರ್‌ಗಳು ಮತ್ತು ಸುರಕ್ಷತೆ
Y-ಆಕಾರದ ವಿನ್ಯಾಸದ ಅಂಶಗಳನ್ನು ಒಳಭಾಗದಲ್ಲೂ ನೀಡಲಾಗಿದೆ ಮತ್ತು AC ವೆಂಟ್‌ಗಳು ಇದೇ ವಿನ್ಯಾಸವನ್ನು ಹೊಂದಿರುತ್ತವೆ. 3-ಸ್ಪೋಕ್ ಸ್ಟೀರಿಂಗ್ ವೀಲ್ ಕೂಡ ಹೊಸದು ಮತ್ತು ಆಡಿಯೋ ಮತ್ತು ಕ್ರೂಸ್ ಕಂಟ್ರೋಲ್‌ಗಾಗಿ ಬಟನ್‌ಗಳನ್ನು ಹೊಂದಿದೆ. ಫ್ಲೋಟಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು ಸಾಕಷ್ಟು ಬಟನ್ ಕಂಟ್ರೋಲ್‌ಗಳೊಂದಿಗೆ ಕ್ಯಾಬಿನ್ ಸಂಪೂರ್ಣವಾಗಿ ದುಬಾರಿಯಾಗಿ ಕಾಣುತ್ತದೆ.
ಅಂತರಾಷ್ಟ್ರೀಯವಾಗಿ ಲಭ್ಯವಿರುವ ಮೊಡೆಲ್ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 10.1-ಇಂಚಿನ ಟಚ್‌ಸ್ಕ್ರೀನ್ ಮತ್ತು 7-ಇಂಚಿನ ಡಿಜಿಟಲ್ ಡ್ರೈವರ್‌ಗಳ ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಇದು ವೈರ್‌ಲೆಸ್ ಫೋನ್ ಚಾರ್ಜರ್, 6-ಸ್ಪೀಕರ್ ಅರ್ಕಾಮಿಸ್ 3D ಸೌಂಡ್ ಸಿಸ್ಟಮ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಸಹ ಪಡೆಯುತ್ತದೆ. ಇಂಡಿಯಾ-ಸ್ಪೆಕ್ ಮಾಡೆಲ್ ಅನ್ನು ಇದೇ ರೀತಿಯ ಫೀಚರ್‌ಗಳ ಪಟ್ಟಿಯೊಂದಿಗೆ ನೀಡಲಾಗುವುದು ಎಂದು ನಾವು ನಿರೀಕ್ಷಿಸುತ್ತೇವೆ.
ಸುರಕ್ಷತೆಯ ಪ್ಯಾಕೇಜ್‌ನಲ್ಲಿ, ಇಂಡಿಯಾ-ಸ್ಪೆಕ್ ಡಸ್ಟರ್ ಆರು ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್ ಆಗಿ), ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್) ಮತ್ತು ಕೆಲವು ಸುಧಾರಿತ ಡ್ರೈವರ್ ಅಸಿಸ್ಟೆಂಟ್ ಸಿಸ್ಟಮ್‌ಗಳ (ಎಡಿಎಎಸ್) ಫೀಚರ್‌ಗಳನ್ನು ಪಡೆಯಬಹುದು.
ಇದನ್ನೂ ಓದಿ: ದೇಶವನ್ನೇ ಬೆಚ್ಚಿಬಿಳಿಸಿದ ಬೆಂಗಳೂರಿನ Volvo XC90 ಅಪಘಾತದಿಂದ ರಸ್ತೆ ಸುರಕ್ಷತೆಯ ಬಗ್ಗೆ ನಾವು ಕಲಿಯಬೇಕಾದ ಪಾಠ ಏನು ?
ಹೊಸ ರೆನಾಲ್ಟ್ ಡಸ್ಟರ್: ಪವರ್‌ಟ್ರೇನ್ ಆಯ್ಕೆಗಳು
ಅಂತರಾಷ್ಟ್ರೀಯವಾಗಿ, ಹೊಸ-ಜನರೇಶನ್‌ನ ಡಸ್ಟರ್ ಹೈಬ್ರಿಡ್ ಮತ್ತು ಎಲ್‌ಪಿಜಿ ಸೇರಿದಂತೆ ಬಹು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಬರುತ್ತದೆ. ಆಯ್ಕೆಗಳಲ್ಲಿ 130 ಪಿಎಸ್ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು 48 V ಮೈಲ್ಡ್ ಹೈಬ್ರಿಡ್ ಸಿಸ್ಟಮ್‌ಗೆ ಜೋಡಿಸಲಾಗಿದೆ ಮತ್ತು 1.2 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್‌ನಿಂದ ಚಾಲಿತ ಎರಡು ಎಲೆಕ್ಟ್ರಿಕ್ ಮೋಟಾರ್‌ಗಳಿಗೆ ಜೋಡಿಯಾಗಿರುವ ಸ್ಟ್ರಾಂಗ್ ಹೈಬ್ರಿಡ್ 140 ಪಿಎಸ್ 1.6-ಲೀಟರ್ ಪೆಟ್ರೋಲ್ ಎಂಜಿನ್ ಸೇರಿವೆ. ಮೂರನೆಯದು 100 ಪಿಎಸ್ 1.2-ಲೀಟರ್ ಪೆಟ್ರೋಲ್-ಎಲ್‌ಪಿಜಿ ಸಂಯೋಜನೆಯಾಗಿದ್ದು, ಇದನ್ನು 6-ಸ್ಪೀಡ್ ಟ್ರಾನ್ಸ್‌ಮಿಷನ್‌ನೊಂದಿಗೆ ನೀಡಲಾಗುತ್ತದೆ.
ಇಂಡಿಯಾ-ಸ್ಪೆಕ್ ಡಸ್ಟರ್‌ನ ಪವರ್‌ಟ್ರೇನ್ ಆಯ್ಕೆಗಳ ಕುರಿತು ಹೆಚ್ಚಿನ ವಿವರಗಳನ್ನು 2026 ರಲ್ಲಿ ಬಿಡುಗಡೆ ಮಾಡುವ ಮೊದಲು ಬಹಿರಂಗಪಡಿಸಲಾಗುವುದು ಎಂದು ನಾವು ನಿರೀಕ್ಷಿಸುತ್ತೇವೆ.
ಹೊಸ ರೆನಾಲ್ಟ್ ಡಸ್ಟರ್: ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ರೆನಾಲ್ಟ್ ಡಸ್ಟರ್‌ನ ಬೆಲೆಯನ್ನು 10 ಲಕ್ಷ ರೂ.ನಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ ಮತ್ತು ಹ್ಯುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ, ಹೋಂಡಾ ಎಲಿವೇಟ್, ಸ್ಕೋಡಾ ಕುಶಾಕ್ ಮತ್ತು ವೋಕ್ಸ್‌ವ್ಯಾಗನ್ ಟೈಗನ್‌ನಂತಹ ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಸಂಭಾವ್ಯ ಪ್ರತಿಸ್ಪರ್ಧಿಯಾಗಲಿದೆ.
ಹೊಸ ರೆನಾಲ್ಟ್ ಡಸ್ಟರ್ ಬಿಡುಗಡೆ ವಿಳಂಬವಾಗಿದ್ದರೂ, ಮುಂಬರುವ ಈ ಎಸ್‌ಯುವಿ ಬಗ್ಗೆ ನೀವು ಎಷ್ಟು ಉತ್ಸುಕರಾಗಿದ್ದೀರಿ? ಕೆಳಗಿನ ಕಾಮೆಂಟ್‌ಗಳಲ್ಲಿ ನಮಗೆ ತಿಳಿಸಿ.
ಕಾರುಗಳ ಲೋಕದ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ