Nissan Magnite AMT ಆವೃತ್ತಿ ಬಿಡುಗಡೆ; 6.50 ಲಕ್ಷ ರೂ.ನಿಂದ ಬೆಲೆಗಳು ಪ್ರಾರಂಭ
ನಿಸ್ಸಾನ್ ಮ್ಯಾಗ್ನೈಟ್ 2020-2024 ಗಾಗಿ rohit ಮೂಲಕ ಅಕ್ಟೋಬರ್ 10, 2023 06:13 pm ರಂದು ಪ್ರಕಟಿಸಲಾಗಿದೆ
- 61 Views
- ಕಾಮೆಂಟ್ ಅನ್ನು ಬರೆಯಿರಿ
ಹೊಸ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಮ್ಯಾಗ್ನೈಟ್, ಭಾರತದಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿರುವ ಅತ್ಯಂತ ಕೈಗೆಟುಕುವ ಎಸ್‌ಯುವಿ ಆಗಲಿದೆ.
- ನಿಸ್ಸಾನ್ ಆಟೋಮ್ಯಾಟಿಕ್ ವೇರಿಯೆಂಟ್‌ನ್ನು ಅದರ ಮ್ಯಾನುಯಲ್ ಆವೃತ್ತಿಗಿಂತ 50,000 ರೂ. ವರೆಗಿನ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತದೆ. ಈ ಪರಿಚಯಾತ್ಮಕ ಬೆಲೆಗಳು ನವೆಂಬರ್ 10 ರವರೆಗೆ ಇರಲಿದೆ.
- ಹೊಸ ಕುರೋ ಆವೃತ್ತಿ ಸೇರಿದಂತೆ ಎಸ್‌ಯುವಿ ಶ್ರೇಣಿಯಾದ್ಯಂತ ಹೊಸ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಆಯ್ಕೆಯು ಲಭ್ಯವಿದೆ.
- ಮ್ಯಾಗ್ನೈಟ್‌ನ 1-ಲೀಟರ್ ಎನ್.ಎ ಪೆಟ್ರೋಲ್ ಎಂಜಿನ್‌ನಲ್ಲಿ ಮಾತ್ರ ಈ ಗೇರ್‌ಬಾಕ್ಸ್ ನೀಡಲಾಗುತ್ತದೆ. ಇದು ಪ್ರತಿ ಲೀ.ಗೆ 19.70 ಕಿ.ಮೀ.ನಷ್ಟು ಮೈಲೇಜ್ ನೀಡುತ್ತದೆ.
- ಮ್ಯಾಗ್ನೈಟ್ AMT ಹೊಸ ನೀಲಿ ಮತ್ತು ಕಪ್ಪು ಡ್ಯುಯಲ್-ಟೋನ್ ಪೇಂಟ್ ಆಯ್ಕೆಯಲ್ಲಿ ಬರುತ್ತದೆ.
ನಿಸ್ಸಾನ್ ಮ್ಯಾಗ್ನೈಟ್ AMT (ಆಟೋಮೇಟೆಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್) ಆಯ್ಕೆಯನ್ನು ಹೊಂದಿರುವ ಕಾರುಗಳ ವರ್ಗಕ್ಕೆ ಸೇರುತ್ತಿರುವ ಇತ್ತೀಚಿನ ಮಾದರಿಯಾಗಿದೆ. ನಿಸ್ಸಾನ್ ಇಂದಿನಿಂದ ಮ್ಯಾಗ್ನೈಟ್ AMT ಗಾಗಿ ಆನ್‌ಲೈನ್ ಮತ್ತು ಅದರ ಭಾರತಾದ್ಯಂತ ಇರುವ ಅಧಿಕೃತ ಡೀಲರ್‌ಶಿಪ್‌ಗಳಲ್ಲಿ 11,000 ರೂ.ಗೆ ಬುಕಿಂಗ್ ಅನ್ನು ತೆರೆದಿದೆ. ಇದು ಈ ಎಸ್‌ಯುವಿ ವೇರಿಯೆಂಟ್‌ಗಳಲ್ಲಿ ಮತ್ತು ಇತ್ತೀಚೆಗೆ ಬಿಡುಗಡೆಯಾದ ಕುರೊ ಆವೃತ್ತಿಯಲ್ಲಿಯೂ ಲಭ್ಯವಿದೆ. ಮ್ಯಾಗ್ನೈಟ್ AMT ಗೆ ಪರಿಚಯಾತ್ಮಕ ಬೆಲೆಯನ್ನು ನಿಗದಿಪಡಿಸಿದ್ದು, ಇದು ನವೆಂಬರ್ 10, 2023 ರವರೆಗೆ ಮಾತ್ರ ಲಭ್ಯವಿರುತ್ತದೆ.
ಬೆಲೆಗಳ ಪಟ್ಟಿ
ವೇರಿಯೆಂಟ್ |
1-ಲೀಟರ್ N.A. ಪೆಟ್ರೋಲ್ ಮ್ಯಾನುಯಲ್ ಟ್ರಾನ್ಸ್‌ಮಿಷನ್ |
1-ಲೀಟರ್ N.A. ಪೆಟ್ರೋಲ್ AMT |
ವ್ಯತ್ಯಾಸ |
XE |
6 ಲಕ್ಷ ರೂ |
6.50 ಲಕ್ಷ ರೂ |
+50,000 ರೂ |
XL |
7.04 ಲಕ್ಷ ರೂ |
7.44 ಲಕ್ಷ ರೂ |
+40,000 ರೂ |
XV |
7.81 ಲಕ್ಷ ರೂ |
8.21 ಲಕ್ಷ ರೂ |
+40,000 ರೂ |
ಕುರೋ ಆವೃತ್ತಿ |
8.27 ಲಕ್ಷ ರೂ |
8.67 ಲಕ್ಷ ರೂ |
+40,000 ರೂ |
XV ಪ್ರೀಮಿಯಂ |
8.59 ಲಕ್ಷ ರೂ |
8.90 ಲಕ್ಷ ರೂ |
+31,000 ರೂ |
ಈ ಬೆಲೆಗಳು ಎಕ್ಸ್ ಶೋರೂಂನ ಪರಿಚಯಾತ್ಮಕವಾಗಿದೆ.
ನಿಸ್ಸಾನ್ AMT ಆವೃತ್ತಿಯ ಬೆಲೆಯನ್ನು ಇದರ ಮ್ಯಾನುವಲ್ ವೇರಿಯೆಂಟ್‌ಗಿಂತ 50,000 ರೂ.ವರೆಗೆ ಪ್ರೀಮಿಯಂನಲ್ಲಿ ನಿಗದಿಪಡಿಸಿದೆ. ಇದು ಭಾರತದಲ್ಲಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಮ್ಯಾಗ್ನೈಟ್ ಅನ್ನು ಅತ್ಯಂತ ಕೈಗೆಟುಕುವ ಎಸ್‌ಯುವಿಯನ್ನಾಗಿ ಮಾಡಿದೆ. ಇದರೊಂದಿಗೆ ತನ್ನ ಸಹೋದರ ಸಂಸ್ಥೆಯ ಕಾರಾಗಿರುವ ರೆನಾಲ್ಟ್ ಕಿಗರ್ ಅನ್ನು (AMT ಗೇರ್‌ಬಾಕ್ಸ್‌ನಲ್ಲಿ) ಹಿಂದಿಕ್ಕಿದೆ.
ಇದು ಯಾವ ಎಂಜಿನ್‌ನೊಂದಿಗೆ ನೀಡಲಾಗುತ್ತದೆ?
ಮ್ಯಾಗ್ನೈಟ್‌ನ ಪರಿಷ್ಕೃತ ಎಂಜಿನ್-ಗೇರ್‌ಬಾಕ್ಸ್ ಸಂಯೋಜನೆಯು ಈ ಕೆಳಗಿನಂತಿದೆ:
ಎಂಜಿನ್‌ನ ಪ್ರಕಾರಗಳು |
1-ಲೀಟರ್ N.A. ಪೆಟ್ರೋಲ್ |
1-ಲೀಟರ್ ಟರ್ಬೊ-ಪೆಟ್ರೋಲ್ |
ಪವರ್ |
72 ಪಿಎಸ್ |
100ಪಿಎಸ್ |
ಟಾರ್ಕ್ |
96ಎನ್‌ಎಮ್ |
160ಎನ್‌ಎಮ್ ವರೆಗೆ |
ಟ್ರಾನ್ಸ್‌ಮಿಷನ್ |
5-ಸ್ಪೀಡ್ ಮ್ಯಾನುಯಲ್, 5-ಸ್ಪೀಡ್ ಆಟೋಮ್ಯಾಟಿಕ್ (ಹೊಸ) |
5-ಸ್ಪೀಡ್ ಮ್ಯಾನುಯಲ್, CVT |
ಘೋಷಿಸಿರುವ ಇಂಧನ ದಕ್ಷತೆ |
ಪ್ರತಿ ಲೀ.ಗೆ 19.35 ಕಿ.ಮೀ/ ಪ್ರತಿ ಲೀ.ಗೆ 19.70 ಕಿ.ಮೀ. |
ಪ್ರತಿ ಲೀ.ಗೆ 20 ಕಿ.ಮೀ/ ಪ್ರತಿ ಲೀ.ಗೆ 17.4 ಕಿ.ಮೀ |
ಹೊಸದಾಗಿ ಪರಿಚಯಿಸಲಾದ ಆಟೋಮೇಟಿಕ್ ಗೇರ್‌ಬಾಕ್ಸ್ ಆಯ್ಕೆಯು ನೈಸರ್ಗಿಕವಾಗಿ ಆಕಾಂಕ್ಷೆಯ (N.A ನ್ಯಾಚುರಲಿ ಅಸ್ಪಿರೇಟೆಡ್) ಪೆಟ್ರೋಲ್ ಎಂಜಿನ್‌ನ 5-ವೇಗದ ಮ್ಯಾನುಯಲ್ ಗೇರ್‌ಬಾಕ್ಸ್‌ಗಿಂತ ಸ್ವಲ್ಪ ಹೆಚ್ಚಿನ ಇಂಧನ ದಕ್ಷತೆಯನ್ನು ಹೊಂದಿದೆ. ಇದು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಬಹುತೇಕ ಪ್ರಧಾನವಾಗಿರುವ 'ಕ್ರೀಪ್' ಮೋಡ್‌ನೊಂದಿಗೆ ಸಹ ಒದಗಿಸಲಾಗಿದೆ.
ಇದನ್ನೂ ಓದಿ: Nissan Magnite Kuro ವಿಶೇಷ ಆವೃತ್ತಿ ಅನಾವರಣ, ಮ್ಯಾಗ್ನೈಟ್ ಆಟೋಮ್ಯಾಟಿಕ್ ಕೂಡ ಪ್ರದರ್ಶನ
ಇದು ಪ್ರಮುಖ ಆಪ್‌ಡೇಟ್
ಹೊಸ ಟ್ರಾನ್ಸ್ಮಿಷನ್ ಆಯ್ಕೆಯೊಂದಿಗೆ, ಮ್ಯಾಗ್ನೈಟ್ ಹೊಸ ಕಪ್ಪು ರೂಫ್‌ನೊಂದಿಗೆ ನೀಲಿ ಬಣ್ಣದ ಡ್ಯುಯಲ್-ಟೋನ್ ಬಾಡಿ ಪೇಂಟ್ ಆಯ್ಕೆಯನ್ನು ಪಡೆಯುತ್ತಿದೆ. ನಿಸ್ಸಾನ್ ಈ ಹೊಸ ಪೇಂಟ್ ಆಯ್ಕೆಯನ್ನು ಮ್ಯಾಗ್ನೈಟ್ AMT ಯ ಟಾಪ್-ಎಂಡ್ ಮಾಡೆಲ್‌ಗಳಲ್ಲಿ ಮಾತ್ರ ನೀಡುತ್ತಿದೆ. ಹಿಂಭಾಗದ ಡೋರ್‌ನಲ್ಲಿ 'EZ-Shift' ಎಂಬ ಬ್ಯಾಡ್ಜ್ ಅನ್ನು ಸೇರಿಸುವುದು ಮಾತ್ರ ಇತರ ಸಣ್ಣ ಬದಲಾವಣೆಯಾಗಿದೆ.
ಪ್ರತಿಸ್ಪರ್ಧಿಗಳ ಪರಿಶೀಲನೆ
ಮ್ಯಾಗ್ನೈಟ್ ಎಎಮ್‌ಟಿಯು ಮಾರುಕಟ್ಟೆಯಲ್ಲಿ ಮಹೀಂದ್ರಾ ಎಕ್ಸ್‌ಯುವಿ300 AMT, ಟಾಟಾ ನೆಕ್ಸಾನ್ AMT, ರೆನಾಲ್ಟ್ ಕಿಗರ್ AMT ಮತ್ತು ಮಾರುತಿ ಫ್ರಾಂಕ್ಸ್ AMT ಮುಂತಾದವುಗಳನ್ನು ಎದುರಿಸಲಿದೆ.
ಇದನ್ನೂ ಪರಿಶೀಲಿಸಿ: ಹ್ಯುಂಡೈ ಎಕ್ಸ್‌ಟರ್‌ನ ಪರಿಚಯಾತ್ಮಕ ಬೆಲೆಗಳು ಅಂತ್ಯ, ಇನ್ನು ಮುಂದೆ 16,000 ರೂ. ವರೆಗೆ ದುಬಾರಿ
ಹೆಚ್ಚು ಓದಿ : ನಿಸ್ಸಾನ್ ಮ್ಯಾಗ್ನೈಟ್ ಆನ್‌ರೋಡ್ ಬೆಲೆ