ಒಂದೇ ದಿನದಲ್ಲಿ ಚೆನ್ನೈಯಲ್ಲಿ 200ಕ್ಕೂ ಮಿಕ್ಕಿ ಹೋಂಡಾ ಎಲೆವೇಟ್ SUV ಗಳ ವಿತರಣೆ
ಎಲೆವೇಟ್ ಕಾರು ರೂ. 11 ರಿಂದ ರೂ. 16 ಲಕ್ಷದ ವರೆಗಿನ ಬೆಲೆಯಲ್ಲಿ ಲಭ್ಯ (ಪರಿಚಯಾತ್ಮಕ ಎಕ್ಸ್-ಶೋರೂಂ ದೆಹಲಿ).
- ಚೆನ್ನೈಯಲ್ಲಿ ನಡೆದ ಬೃಹತ್ ಕಾರ್ಯಕ್ರಮವೊಂದರಲ್ಲಿ 200 ಹೋಂಡಾ ಎಲೆವೇಟ್ SUV ಗಳನ್ನು ಒಂದೇ ದಿನದಲ್ಲಿ ವಿತರಣೆ ಮಾಡಲಾಗಿದೆ.
- ಈ SUV ಯು ನಾಲ್ಕು ವಿಭಿನ್ನ ವೇರಿಯಂಟ್ ಗಳಲ್ಲಿ ಲಭ್ಯ. ಅವೆಂದರೆ: SV, V, VX ಮತ್ತು ZX.
- ಈ ಸಿಟಿ ಸೆಡಾನ್, 6 ಸ್ಪೀಡ್ MT ಮತ್ತು CVT ಆಯ್ಕೆಗಳೊಂದಿಗೆ 1.5 ಲೀಟರ್ ಪೆಟ್ರೋಲ್ ಆಯ್ಕೆಯೊಂದಿಗೆ ಲಭ್ಯ.
- ಜತೆಗೆ 10.25 ಇಂಚಿನ ಟಚ್ ಸ್ಕ್ರೀನ್, ವೈರ್ ಲೆಸ್ ಫೋನ್ ಚಾರ್ಜಿಂಗ್ ಮತ್ತು ಸಿಂಗಲ್ ಪೇನ್ ಸನ್ ರೂಫ್ ಹೊಂದಿರಲಿದೆ.
- ಸುರಕ್ಷತೆಗಾಗಿ ಆರು ಏರ್ ಬ್ಯಾಗುಗಳು, ISOFIX ಚೈಲ್ಡ್ ಸೀಟ್ ಮೌಂಟ್ ಗಳು ಮತ್ತು ADAS ಅನ್ನು ಒಳಗೊಂಡಿದೆ.
2023ರ ಸೆಪ್ಟೆಂಬರ್ ತಿಂಗಳ ಮಧ್ಯದಿಂದ ಗ್ರಾಹಕರು ಹೋಂಡಾ ಎಲೆವೇಟ್ SUV ಯ ವಿತರಣೆಯನ್ನು ಪಡೆದಿದ್ದಾರೆ. ಕಾರುಗಳ ಸಾಲಿನಲ್ಲಿ SUV ಗಳ ಪ್ರಾಮುಖ್ಯತೆಯನ್ನು ಗಮನಿಸಿ, ಹೈದರಾಬಾದಿನಲ್ಲಿ ಒಂದೇ ದಿನದಲ್ಲಿ 100 ವಾಹನಗಳ ವಿತರಣೆಯನ್ನು ಮಾಡುವುದಕ್ಕಾಗಿ ಹೋಂಡಾ ಸಂಸ್ಥೆಯು ಅಲ್ಲಿ ಮೆಗಾ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಈಗ ಈ ಸಂಸ್ಥೆಯು ಇನ್ನೊಂದು ಮೈಲಿಗಲ್ಲನ್ನು ಸಾಧಿಸಿದ್ದು, ಚೆನ್ನೈಯಲ್ಲಿ ಒಂದೇ ದಿನದಲ್ಲಿ ಖರೀದಿದಾರರಿಗೆ 200 ಎಲೆವೇಟ್ SUV ಗಳನ್ನು ವಿತರಿಸಿದೆ. ಹೊಸ ಹೋಂಡಾ SUV ಕುರಿತು ನೀವು ತಿಳಿದುಕೊಳ್ಳಬೇಕಾದ ಎಲ್ಲಾ ಮಾಹಿತಿ ಇಲ್ಲಿದೆ:
ಸಿಟಿ ಸೆಡಾನ್ ಜೊತೆಗಿನ ಸಾಮ್ಯತೆಗಳು
ಎಲೆವೇಟ್ ಕಾರು, ಹೋಂಡಾ ಸಿಟಿ ಸೆಡಾನ್ ನ ಪ್ಲಾಟ್ಫಾರ್ಮ್ ಅನ್ನೇ ಹೊಂದಿದೆ. ಎರಡೂ ಮಾದರಿಗಳು ಒಂದೇ ರೀತಿಯ ಪವರ್ ಟ್ರೇನ್ ಮತ್ತು ಗುಣವೈಶಿಷ್ಟ್ಯಗಳ ಪಟ್ಟಿಯನ್ನು ಹೊಂದಿದೆ. ಎರಡೂ ಹೋಂಡಾ ಕಾರುಗಳು ರೂ. 10 ಲಕ್ಷದಿಂದ ರೂ. 20 ಲಕ್ಷದ ವರೆಗಿನ ಬೆಲೆ ಶ್ರೇಣಿಯನ್ನು ಹೊಂದಿವೆ.
ಒಂದೇ ರೀತಿಯ ಪವರ್ ಟ್ರೇನ್
ಮೇಲೆ ಉಲ್ಲೇಖಿಸಿದಂತೆ, ಸಿಟಿ ಕಾರಿನಲ್ಲಿ ಇರುವಂತೆಯೇ, ಹೋಂಡಾ ಎಲೆವೇಟ್ ಮಾದರಿಯು 1.5 ಲೀಟರ್ ಪೆಟ್ರೋಲ್ ಎಂಜಿನ್ (121PS/145Nm) ಅನ್ನು ಹೊಂದಿರಲಿದೆ. ಇದು 6-ಸ್ಪೀಡ್ MT ಮತ್ತು CVT ಆಯ್ಕೆಯೊಂದಿಗೆ ಬರಲಿದೆ. ಈ SUV ಜೊತೆಗೆ ಪ್ರಬಲ ಪವರ್ ಹೈಬ್ರೀಡ್ ಪವರ್ ಟ್ರೇನ್ ಆಯ್ಕೆಯು ದೊರೆಯದು. ಆದರೆ 2026ರ ಸುಮಾರಿಗೆ EV ಆವೃತ್ತಿಯನ್ನು ಹೊರತರುವುದಾಗಿ ಹೋಂಡಾ ಸಂಸ್ಥೆಯು ಘೋಷಿಸಿದೆ.
ಸಂಬಂಧಿತ: ಹೋಂಡಾ ಎಲೆವೇಟ್ SUV ವೇರಿಯಂಟ್ ಗಳ ವಿವರಣೆ: ನೀವು ಯಾವುದನ್ನು ಖರೀದಿಸಬೇಕು?
ಪ್ರಮುಖ ವೈಶಿಷ್ಟ್ಯಗಳು
ಹೋಂಡಾ ಸಂಸ್ಥೆಯು ಎಲೆವೇಟ್ ಮಾದರಿಯಲ್ಲಿ 10.25 ಇಂಚಿನ ಟಚ್ ಸ್ಕ್ರೀನ್ ವ್ಯವಸ್ಥೆ, ಸಿಂಗಲ್ ಪೇನ್ ಸನ್ ರೂಫ್, ವೈರ್ ಲೆಸ್ ಫೋನ್ ಚಾರ್ಜಿಂಗ್, ಅಟೋ ಕ್ಲೈಮೇಟ್ ಕಂಟ್ರೋಲ್, ಮತ್ತು 7 ಇಂಚಿನ ಚಾಲಕನ ಸೆಮಿ-ಡಿಜಿಟಲ್ ಡಿಸ್ಪ್ಲೇಯನ್ನು ನೀಡಿದೆ.
ಈ ಕಾಂಪ್ಯಾಕ್ಟ್ SUV ಯ ಸುರಕ್ಷತಾ ಪಟ್ಟಿಯು ಆರು ಏರ್ ಬ್ಯಾಗುಗಳು, ಲೇನ್ ವಾಚ್ ಕ್ಯಾಮರಾ (ಎಡ ORVM ನ ಕೆಳಗಡೆ ಅಳವಡಿಸಲಾಗಿದೆ), ISOFIX ಚೈಲ್ಡ್ ಸೀಟ್ ಆಂಕರೇಜ್ ಗಳು ಮತ್ತು ಕೆಲವು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ ಗಳನ್ನು (ADAS) ಹೊಂದಿದೆ.
ಇದನ್ನು ಸಹ ಓದಿರಿ: ಹೋಂಡಾ ಎಲೆವೇಟ್ ಜೊತೆಗೆ ನೀವು ಈ ಎಲ್ಲಾ ಆಕ್ಸೆಸರಿಗಳನ್ನು ಪಡೆಯಲಿದ್ದೀರಿ
ವೇರಿಯಂಟ್ ಗಳು ಮತ್ತು ಬೆಲೆಗಳು
ಇದು SV, V, VX ಮತ್ತು ZX ಎಂಬ ನಾಲ್ಕು ಬೇರೆ ಬೇರೆ ವೇರಿಯಂಟ್ ಗಳಲ್ಲಿ ದೊರೆಯಲಿದ್ದು, ರೂ. 11 ಲಕ್ಷದಿಂದ ರೂ. 16 ಲಕ್ಷದವರೆಗಿನ ಬೆಲೆಯಲ್ಲಿ ಲಭ್ಯ (ಪರಿಚಯಾತ್ಮಕ ಎಕ್ಸ್-ಶೋರೂಂ ದೆಹಲಿ). ಹೋಂಡಾ ಎಲೆವೇಟ್ ಮಾದರಿಯು ಕಿಯಾ ಸೆಲ್ಟೊಸ್, ಹ್ಯುಂಡೈ ಕ್ರೆಟಾ, ಟೊಯೊಟಾ ಹೈರೈಡರ್, ಮಾರುತಿ ಗ್ರಾಂಡ್ ವಿಟಾರ, ಫೋಕ್ಸ್ ವ್ಯಾಗನ್ ತೈಗುನ್, ಸ್ಕೋಡಾ ಕುಶಕ್, ಸಿಟ್ರನ್ C3 ಏರ್ ಕ್ರಾಸ್, ಮತ್ತು MG ಆಸ್ಟರ್ ಜೊತೆಗೆ ಸ್ಪರ್ಧಿಸಲಿದೆ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಹೋಂಡಾ ಎಲೆವೇಟ್ ಆನ್ ರೋಡ್ ಬೆಲೆ