Range Rover ಮತ್ತು Range Rover Sport ಈಗ ಭಾರತದಲ್ಲಿ ನಿರ್ಮಾಣ, ಬೆಲೆಗಳು ಕ್ರಮವಾಗಿ 2.36 ಕೋಟಿ ರೂ.ಮತ್ತು 1.4 ಕೋಟಿ ರೂ.ಗಳಿಂದ ಪ್ರಾರಂಭ
land rover range rover ಗಾಗಿ samarth ಮೂಲಕ ಮೇ 27, 2024 07:08 pm ರಂದು ಪ್ರಕಟಿಸಲಾಗಿದೆ
- 21 Views
- ಕಾಮೆಂಟ್ ಅನ್ನು ಬರೆಯಿರಿ
ಪೆಟ್ರೋಲ್ ಎಂಜಿನ್‌ನೊಂದಿಗೆ ರೇಂಜ್ ರೋವರ್ ಆಟೋಬಯೋಗ್ರಫಿ ಎಲ್‌ಡಬ್ಲ್ಯೂಬಿಯಲ್ಲಿ 50 ಲಕ್ಷ ರೂ.ಗಿಂತ ಹೆಚ್ಚಿನ ಉಳಿತಾಯದೊಂದಿಗೆ ಆಯ್ದ ಆವೃತ್ತಿಗಳ ಬೆಲೆಗಳು ತೀವ್ರವಾಗಿ ಕಡಿಮೆಯಾಗಿದೆ.
- ರೇಂಜ್ ರೋವರ್ ಆಟೋಬಯೋಗ್ರಫಿ (ಪೆಟ್ರೋಲ್) ಮತ್ತು ಡೈನಾಮಿಕ್ ಹೆಚ್‌ಎಸ್‌ಇ (ಡೀಸೆಲ್), ಇವೆರಡೂ ಉದ್ದವಾದ ವೀಲ್‌ಬೇಸ್‌ನೊಂದಿಗೆ, ಭಾರತದಲ್ಲಿ ಜೋಡಣೆಗೊಳ್ಳಲಿವೆ.
- ರೇಂಜ್ ರೋವರ್ ಸ್ಪೋರ್ಟ್ ಡೈನಾಮಿಕ್ ಎಸ್ಇ (ಪೆಟ್ರೋಲ್ ಮತ್ತು ಡೀಸೆಲ್) ಸ್ಥಳೀಯವಾಗಿ ಜೋಡಣೆಯಾಗುವುದು ಪ್ರಾರಂಭವಾಗುತ್ತದೆ.
- ಈ ರೇಂಜ್ ರೋವರ್ ಕಾರುಗಳು 3-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳನ್ನು ಬಳಸುತ್ತವೆ.
- ಬೆಲೆಗಳು ಭಾರಿ ಇಳಿಕೆಯಾಗಿದ್ದು, ಆಟೋಬಯೋಗ್ರಫಿ ವೇರಿಯಂಟ್‌ನಲ್ಲಿ ಅತಿ ಹೆಚ್ಚು ಎಂಬಂತೆ 56 ಲಕ್ಷ ರೂ ವರೆಗೆ ಕಡಿತವಾಗಿದೆ.
- ರೇಂಜ್ ರೋವರ್‌ಗಾಗಿ ಇಂದಿನಿಂದ ಡೆಲಿವರಿಗಳು ಪ್ರಾರಂಭವಾಗಲಿದ್ದು, ರೇಂಜ್ ರೋವರ್ ಸ್ಪೋರ್ಟ್ ಆಗಸ್ಟ್ 16 ರಿಂದ ಪ್ರಾರಂಭವಾಗಲಿದೆ.
ಆಟೋಮೋಟಿವ್ ಐಷಾರಾಮಿ ಬ್ರಾಂಡ್ ರೇಂಜ್ ರೋವರ್‌ನ ಮೂಲ ಕಂಪನಿಯಾದ ಜಾಗ್ವಾರ್ ಲ್ಯಾಂಡ್ ರೋವರ್ (ಜೆಎಲ್‌ಆರ್) ಭಾರತೀಯ ಖರೀದಿದಾರರಿಂದ ಹೆಚ್ಚಿದ ಬೇಡಿಕೆಯನ್ನು ಪೂರೈಸಲು ಭಾರತದಲ್ಲಿ ರೇಂಜ್ ರೋವರ್ ಮತ್ತು ರೇಂಜ್ ರೋವರ್ ಸ್ಪೋರ್ಟ್ ಎಸ್‌ಯುವಿಗಳ ಸ್ಥಳೀಯ ಜೋಡಣೆಯನ್ನು ಘೋಷಿಸಿದೆ. JLR ಸಾಮಾನ್ಯವಾಗಿ ಯುನೈಟೆಡ್ ಕಿಂಗ್‌ಡಮ್‌ನ ಸೋಲಿಹುಲ್‌ನಲ್ಲಿ ತನ್ನ ಎಸ್‌ಯುವಿಗಳನ್ನು ತಯಾರಿಸುತ್ತದೆ, ಆದರೆ ಮೊದಲ ಬಾರಿಗೆ, ಅದರ ಪ್ರಮುಖ ಕಾರುಗಳ ಉತ್ಪಾದನೆಯು ಈಗ ಭಾರತದಲ್ಲಿ ನಡೆಯುತ್ತದೆ, ಈ ಮೂಲಕ ಎಸ್‌ಯುವಿಗಳ ವೈಟಿಂಗ್ ಪಿರೇಡ್ ಅನ್ನು ಗಣನೀಯವಾಗಿ ಕಡಿಮೆ ಮಾಡಲಿದೆ. 'ಮೇಡ್-ಇನ್-ಇಂಡಿಯಾ' ರೇಂಜ್ ರೋವರ್ ಎಸ್‌ಯುವಿಗಳು ದೇಶೀಯ ಬೇಡಿಕೆಯನ್ನು ಮಾತ್ರ ಪೂರೈಸುತ್ತವೆ, ಆದರೆ ಜಾಗತಿಕ ಬೇಡಿಕೆಯನ್ನು ಯುನೈಟೆಡ್ ಕಿಂಗ್‌ಡಮ್‌ನ ಉತ್ಪಾದನಾ ಘಟಕದಿಂದ ಪೂರೈಸುವುದನ್ನು ಮುಂದುವರಿಸುತ್ತದೆ.
ಬೆಲೆಯಲ್ಲಿ ಭಾರಿ ಕಡಿತ
ಸದ್ಯಕ್ಕೆ ಭಾರತದಲ್ಲಿ ರೇಂಜ್ ರೋವರ್ ಮತ್ತು ರೇಂಜ್ ರೋವರ್ ಸ್ಪೋರ್ಟ್‌ನ ಕೆಲವು ಆವೃತ್ತಿಗಳನ್ನು ಮಾತ್ರ ಸ್ಥಳೀಯವಾಗಿ ಜೋಡಿಸಲಾಗುತ್ತಿದೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು. ಸ್ಥಳೀಯವಾಗಿ ಉತ್ಪಾದನೆಯ ಕಡೆಗೆ ಈ ಹೆಜ್ಜೆಯೊಂದಿಗೆ, ಕೆಳಗೆ ವಿವರಿಸಿದಂತೆ ಭಾರತೀಯ ಖರೀದಿದಾರರು ಈ ಐಷಾರಾಮಿ ಎಸ್‌ಯುವಿಗಳಲ್ಲಿ ಗಮನಾರ್ಹ ಉಳಿತಾಯವನ್ನು ಆನಂದಿಸಬಹುದು:
ಮೊಡೆಲ್ |
ಹಿಂದಿನ ಬೆಲೆಗಳು |
ಹೊಸ ಬೆಲೆಗಳು |
ವ್ಯತ್ಯಾಸ |
ರೇಂಜ್ ರೋವರ್ ಸ್ಪೋರ್ಟ್ 3.0 ಲೀ ಪೆಟ್ರೋಲ್ ಡೈನಾಮಿಕ್ ಎಸ್‌ಇ |
1.69 ಕೋಟಿ ರೂ |
1.40 ಕೋಟಿ ರೂ |
29 ಲಕ್ಷ ರೂ |
ರೇಂಜ್ ರೋವರ್ ಸ್ಪೋರ್ಟ್ 3.0 ಲೀ ಡೀಸೆಲ್ ಡೈನಾಮಿಕ್ ಎಸ್‌ಇ |
1.69 ಕೋಟಿ ರೂ |
1.40 ಕೋಟಿ ರೂ |
29 ಲಕ್ಷ ರೂ |
ರೇಂಜ್ ರೋವರ್ 3.0 ಲೀ ಪೆಟ್ರೋಲ್ ಆಟೋಬಯೋಗ್ರಫಿ ಎಲ್‌ಡಬ್ಲ್ಯೂಬಿ* |
3.16 ಕೋಟಿ ರೂ |
2.60 ಕೋಟಿ ರೂ |
56 ಲಕ್ಷ ರೂ |
ರೇಂಜ್ ರೋವರ್ 3.0 ಲೀ ಡೀಸೆಲ್ ಹೆಚ್‌ಎಸ್‌ಇ ಎಲ್‌ಡಬ್ಲ್ಯೂಬಿ* |
2.81 ಕೋಟಿ ರೂ |
2.36 ಕೋಟಿ ರೂ |
45 ಲಕ್ಷ ರೂ |
*ಎಲ್‌ಡಬ್ಲ್ಯೂಬಿ- ಲಾಂಗ್ ವೀಲ್‌ಬೇಸ್
ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಬೆಲೆಗಳು
ಮಿಡ್-ಸ್ಪೆಕ್ ಪೆಟ್ರೋಲ್-ಚಾಲಿತ ರೇಂಜ್ ರೋವರ್ ಎಲ್‌ಡಬ್ಲ್ಯೂಬಿಯ ಖರೀದಿದಾರರಿಗೆ ದೊಡ್ಡ ಉಳಿತಾಯವಾಗಿದೆ, ಆದರೆ ಪ್ರವೇಶ ಮಟ್ಟದ ರೇಂಜ್ ರೋವರ್ ಸ್ಪೋರ್ಟ್ ಆವೃತ್ತಿಗಳು ಮಾತ್ರ ಸ್ಥಳೀಕರಣದ ಪ್ರಯೋಜನವನ್ನು ಪಡೆಯುತ್ತವೆ.
ಪವರ್‌ಟ್ರೇನ್‌ಗಳು
ರೇಂಜ್ ರೋವರ್ ಮತ್ತು ರೇಂಜ್ ರೋವರ್ ಸ್ಪೋರ್ಟ್‌ನ ಭಾರತ ನಿರ್ಮಿತ ಮೊಡೆಲ್‌ಗಳನ್ನು ಅದೇ 3-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳೊಂದಿಗೆ ನೀಡಲಾಗುವುದು, ಇವುಗಳ ವಿಶೇಷಣಗಳನ್ನು ಕೆಳಗೆ ವಿವರಿಸಲಾಗಿದೆ:
ಮೊಡೆಲ್ |
ರೇಂಜ್ ರೋವರ್ ಪೆಟ್ರೋಲ್ ಆಟೋಬಯೋಗ್ರಫಿ ಎಲ್‌ಡಬ್ಲ್ಯೂಬಿ/ರೇಂಜ್ ರೋವರ್ ಸ್ಪೋರ್ಟ್ ಪೆಟ್ರೋಲ್ ಡೈನಾಮಿಕ್ ಎಸ್‌ಇ |
ರೇಂಜ್ ರೋವರ್ ಸ್ಪೋರ್ಟ್ ಡೀಸೆಲ್ ಡೈನಾಮಿಕ್ ಎಸ್‌ಇ/ರೇಂಜ್ ರೋವರ್ ಡೀಸೆಲ್ ಹೆಚ್‌ಎಸ್‌ಇ ಎಲ್‌ಡಬ್ಲ್ಯೂಬಿ |
ಎಂಜಿನ್ |
3-ಲೀಟರ್ ಟರ್ಬೋ ಪೆಟ್ರೋಲ್ |
3-ಲೀಟರ್ |
ಪವರ್ |
400 ಪಿಎಸ್ |
350 ಪಿಎಸ್ |
ಟಾರ್ಕ್ |
550 ಎನ್‌ಎಮ್ |
700 ಎನ್‌ಎಮ್ |
ಈ ಇಂಜಿನ್‌ಗಳು 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಜೊತೆಗೆ ಆಲ್-ವೀಲ್-ಡ್ರೈವ್ ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ. ಈ ರೇಂಜ್ ರೋವರ್ ಎಸ್‌ಯುವಿಗಳ ಆಯ್ದ ಆವೃತ್ತಿಗಳ ಇತರ ಎಂಜಿನ್ ಆಯ್ಕೆಯು 4.4-ಲೀಟರ್ V8 ಟರ್ಬೊ-ಪೆಟ್ರೋಲ್ ಯುನಿಟ್ ಆಗಿದ್ದು, ಇದನ್ನು ಭಾರತದಲ್ಲಿ ನಿರ್ಮಿಸಲಾಗುವುದಿಲ್ಲ.
ಇದನ್ನು ಸಹ ಓದಿ: Land Rover Defender Sedona ಎಡಿಷನ್ ಅನಾವರಣ, ಅತ್ಯಂತ ಶಕ್ತಿಯುತ ಎಂಜಿನ್ ಜೊತೆಗೆ ಈಗ ಲಭ್ಯ
ಭಾರತದಲ್ಲಿ ಹೆಚ್ಚಿನ ಬೇಡಿಕೆ
ಪ್ರಸಕ್ತ ಹಣಕಾಸು ವರ್ಷದಲ್ಲಿ, ರೇಂಜ್ ರೋವರ್ ಎಸ್‌ಯುವಿಗಳ ಬೇಡಿಕೆಯು 160 ಪ್ರತಿಶತದಷ್ಟು ಏರಿಕೆಯಾಗಿದೆ, ಇದು ಈ ಕಾರ್ಯತಂತ್ರದ ಕ್ರಮದ ಹಿಂದಿನ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. 2011 ರಿಂದ ಜೆಎಲ್ಆರ್ (ಜಾಗ್ವಾರ್ ಲ್ಯಾಂಡ್ ರೋವರ್) ಭಾರತದಲ್ಲಿ ಟಾಟಾ ಮೋಟಾರ್ಸ್ ಸಹಯೋಗದೊಂದಿಗೆ ಕೆಲವು ವಾಹನಗಳನ್ನು ಉತ್ಪಾದಿಸುತ್ತಿದೆ. ಇಲ್ಲಿಯವರೆಗೆ, ಪುಣೆಯ ಚಕನ್ ಘಟಕದಲ್ಲಿ 10 ಜೆಎಲ್ಆರ್ ಕಾರುಗಳನ್ನು ಜೋಡಿಸಲಾಗಿದೆ, ಇದರಲ್ಲಿ ರೇಂಜ್ ರೋವರ್ ವೆಲಾರ್ ಮತ್ತು ರೇಂಜ್ ರೋವರ್ ಇವೊಕ್ ಕೂಡ ಸೇರಿದೆ. ಈ ಯೋಜನೆಯು ಎಸ್‌ಯುವಿಗಳನ್ನು ಹೆಚ್ಚು ಕೈಗೆಟುಕುವಂತೆ ಮಾಡುವುದು ಮಾತ್ರವಲ್ಲದೆ, ಆವುಗಳ ವೈಟಿಂಗ್ ಪಿರೇಡ್ ಅನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
ಸ್ಥಳೀಯವಾಗಿ ಜೋಡಿಸಲಾದ ರೇಂಜ್ ರೋವರ್‌ನ ಇಂದಿನಿಂದಲೇ ಪ್ರಾರಂಭವಾಗುತ್ತವೆ, ಆದರೆ ರೇಂಜ್ ರೋವರ್ ಸ್ಪೋರ್ಟ್‌ನ ಡೆಲಿವೆರಿಗಳು 2024ರ ಆಗಸ್ಟ್ 16ರಿಂದ ಪ್ರಾರಂಭವಾಗುತ್ತವೆ.
ಮುಂಬರುವ ಎಸ್‌ಯುವಿಗಳು
ಪ್ರಸ್ತುತ, ಭಾರತದಲ್ಲಿ ಲ್ಯಾಂಡ್ ರೋವರ್ ರೇಂಜ್ ರೋವರ್‌ನ ಪಟ್ಟಿಯಲ್ಲಿರುವ ಕಾರುಗಳಲ್ಲಿ ರೇಂಜ್ ರೋವರ್, ರೇಂಜ್ ರೋವರ್ ಸ್ಪೋರ್ಟ್, ರೇಂಜ್ ರೋವರ್ ವೆಲಾರ್ ಮತ್ತು ರೇಂಜ್ ರೋವರ್ ಇವೊಕ್ ಅನ್ನು ಒಳಗೊಂಡಿದೆ. ಇದಕ್ಕೆ ಪೂರಕ ಎಂಬಂತೆ, ರೇಂಜ್ ರೋವರ್ ಸಂಪೂರ್ಣ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಯಲ್ಲಿದೆ, 2024 ರ ಅಂತ್ಯದ ವೇಳೆಗೆ ಇದು ಅನಾವರಣಗೊಳ್ಳಲಿದೆ. ಆಲ್-ಎಲೆಕ್ಟ್ರಿಕ್ ರೇಂಜ್ ರೋವರ್ ಸ್ಪೋರ್ಟ್ ಅನ್ನು 2025 ರಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಮತ್ತು ಇದು ಯುನೈಟೆಡ್ ಕಿಂಗ್‌ಡಮ್‌ನ ಉತ್ಪಾದನಾ ಘಟಕದಲ್ಲಿ ಮಾತ್ರ ಸಿದ್ಧವಾಗಲಿದೆ.
ಇನ್ನಷ್ಟು ಓದಿ : ರೇಂಜ್ ರೋವರ್ ಆಟೋಮ್ಯಾಟಿಕ್