• English
  • Login / Register

ಈ ಮಾರ್ಚ್‌ನಲ್ಲಿ Honda ಕಾರುಗಳ ಖರೀದಿಯ ಮೇಲೆ ರೂ 1 ಲಕ್ಷಕ್ಕಿಂತ ಹೆಚ್ಚು ಹಣವನ್ನು ಉಳಿಸಿ

ಹೋಂಡಾ ಸಿಟಿ ಗಾಗಿ shreyash ಮೂಲಕ ಮಾರ್ಚ್‌ 07, 2024 06:12 pm ರಂದು ಪ್ರಕಟಿಸಲಾಗಿದೆ

  • 22 Views
  • ಕಾಮೆಂಟ್‌ ಅನ್ನು ಬರೆಯಿರಿ

ಹೋಂಡಾ ಎಲಿವೇಟ್ ಕೂಡ ಸೀಮಿತ ಅವಧಿಯ ಕ್ಯಾಶ್ ಡಿಸ್ಕೌಂಟ್ ಅನ್ನು ಪಡೆದಿದೆ

Honda City, Honda Amaze, Honda Elevate

  • ಹೋಂಡಾ ಸಿಟಿಯ ಖರೀದಿಯೊಂದಿಗೆ ಗರಿಷ್ಠ ರೂ 1 ಲಕ್ಷದವರೆಗಿನ ಕೊಡುಗೆಗಳನ್ನು ನೀಡಲಾಗುತ್ತಿದೆ.

  • ಅಮೇಜ್ ಅನ್ನು ರೂ. 94,000 ಗಿಂತ ಹೆಚ್ಚಿನ ರಿಯಾಯಿತಿಯೊಂದಿಗೆ ಪಡೆಯಬಹುದು.

  • ಹೋಂಡಾದ ಕಾಂಪ್ಯಾಕ್ಟ್ SUV ಆಗಿರುವ ಎಲಿವೇಟ್, ರೂ 50,000 ವರೆಗಿನ ಸೀಮಿತ ಸಮಯದ ಕೊಡುಗೆಯೊಂದಿಗೆ ಬರುತ್ತಿದೆ.

  • ಹೋಂಡಾ ತನ್ನ ಸಿಟಿ ಮತ್ತು ಎಲಿವೇಟ್ ವಿಶೇಷ ಎಡಿಷನ್ ಗಳಲ್ಲಿ ಗರಿಷ್ಠ ರಿಯಾಯಿತಿಗಳನ್ನು ನೀಡುತ್ತಿದೆ.

  • ಎಲ್ಲಾ ಕೊಡುಗೆಗಳು ಮಾರ್ಚ್ 2024 ರ ಅಂತ್ಯದವರೆಗೆ ಮಾನ್ಯವಾಗಿರುತ್ತವೆ.

 ನೀವು ಈ ಮಾರ್ಚ್‌ ತಿಂಗಳಿನಲ್ಲಿ ಹೋಂಡಾ ಕಾರನ್ನು ಖರೀದಿಸಲು ನೋಡುತ್ತಿದ್ದರೆ, ಹೋಂಡಾ ತನ್ನ ಸಿಟಿ ಹೈಬ್ರಿಡ್ ಅನ್ನು ಹೊರತುಪಡಿಸಿ - ಉಳಿದೆಲ್ಲ ಮಾಡೆಲ್ ಗಳಾದ ಹೋಂಡಾ ಸಿಟಿ, ಹೋಂಡಾ ಅಮೇಜ್ ಮತ್ತು ಹೋಂಡಾ ಎಲಿವೇಟ್ ಮೇಲೆ ಕೊಡುಗೆಗಳನ್ನು ನೀಡುತ್ತಿದೆ. ಕೊಡುಗೆಗಳಲ್ಲಿ ಕ್ಯಾಶ್ ಡಿಸ್ಕೌಂಟ್ ಗಳು ಮತ್ತು ವಿನಿಮಯ ಮತ್ತು ಲಾಯಲ್ಟಿ ಬೋನಸ್‌ಗಳು ಸೇರಿವೆ. ಮಾಡೆಲ್-ವಾರು ಆಫರ್ ವಿವರಗಳು ಇಲ್ಲಿವೆ.

 ಹೋಂಡಾ ಸಿಟಿ

2023 Honda City

 

 ಕೊಡುಗೆಗಳು

 ಮೊತ್ತ

 ಕ್ಯಾಶ್ ಡಿಸ್ಕೌಂಟ್

 ರೂ. 30,000 ವರೆಗೆ

 ಉಚಿತ ಆಕ್ಸೆಸರಿಗಳು (ಐಚ್ಛಿಕ)

 ರೂ. 32,916 ವರೆಗೆ

 ವಿನಿಮಯ ಬೋನಸ್

 ರೂ. 15,000 ವರೆಗೆ

 ಹೋಂಡಾ ಕಾರ್ ವಿನಿಮಯ ಬೋನಸ್

 ರೂ. 6,000 ವರೆಗೆ

 ಲಾಯಲ್ಟಿ ಬೋನಸ್

 ರೂ. 4,000 ವರೆಗೆ

 ಕಾರ್ಪೊರೇಟ್ ಡಿಸ್ಕೌಂಟ್

 ರೂ. 8,000 ವರೆಗೆ

 ಸ್ಪೆಷಲ್ ಕಾರ್ಪೊರೇಟ್ ಡಿಸ್ಕೌಂಟ್

 ರೂ. 20,000 ವರೆಗೆ

 ಎಲೆಗೆಂಟ್ ಎಡಿಷನ್ ಗೆ ವಿಶೇಷ ಪ್ರಯೋಜನ

 ರೂ. 36,500 ವರೆಗೆ

 ಗರಿಷ್ಠ ಪ್ರಯೋಜನಗಳು

 ರೂ.1.212 ಲಕ್ಷದವರೆಗೆ

  •  ಗ್ರಾಹಕರು ಹೋಂಡಾ ಸಿಟಿಯೊಂದಿಗೆ ಕ್ಯಾಶ್ ಡಿಸ್ಕೌಂಟ್ ಅಥವಾ ಉಚಿತ ಆಕ್ಸೆಸರಿಗಳ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಮೇಲೆ ಪಟ್ಟಿ ಮಾಡಲಾದ ಪ್ರಯೋಜನಗಳು ಹೋಂಡಾ ಸೆಡಾನ್‌ನ ಎಲ್ಲಾ ವೇರಿಯಂಟ್ ಗಳ ಮೇಲೆ ಲಭ್ಯವಿದೆ.

  •  ಅಸ್ತಿತ್ವದಲ್ಲಿರುವ ಹೋಂಡಾ ಗ್ರಾಹಕರು ರೂ. 4,000 ಲಾಯಲ್ಟಿ ಬೋನಸ್ ಜೊತೆಗೆ ರೂ. 6,000 ಹೆಚ್ಚುವರಿ ವಿನಿಮಯ ಬೋನಸ್ ಅನ್ನು ಕೂಡ ಪಡೆಯಬಹುದು.

  •  ಸಿಟಿಯೊಂದಿಗೆ ರೂ. 8,000 ಸ್ಟಾಂಡರ್ಡ್ ಕಾರ್ಪೊರೇಟ್ ರಿಯಾಯಿತಿಯ ಮೇಲೆ ಹೆಚ್ಚುವರಿ ಕಾರ್ಪೊರೇಟ್ ರಿಯಾಯಿತಿಯನ್ನು ಕೂಡ ನೀಡಲಾಗುತ್ತಿದೆ.

  •  ಹೋಂಡಾ ತನ್ನ ಸಿಟಿಯ ಎಲೆಗೆಂಟ್ ಎಡಿಷನ್ ಮೇಲೆ ರೂ. 36,500 ವಿಶೇಷ ರಿಯಾಯಿತಿಯನ್ನು ಕೂಡ ನೀಡುತ್ತಿದೆ.

  •  VX ಮತ್ತು ZX ವೇರಿಯಂಟ್ ಗಳನ್ನು ಖರೀದಿರುವ ಗ್ರಾಹಕರು ರೂ. 13651 ಬೆಲೆ ಮೌಲ್ಯದ ನಾಲ್ಕನೇ ಮತ್ತು ಐದನೇ ವರ್ಷಕ್ಕೆ ವಿಸ್ತೃತ ವಾರಂಟಿಯನ್ನು ಪಡೆಯುತ್ತಾರೆ.

  •  ಸಿಟಿ ಬೆಲೆಯು ರೂ.11.71 ಲಕ್ಷದಿಂದ ರೂ.16.19 ಲಕ್ಷದವರೆಗೆ ಇದೆ

 ಇದನ್ನು ಕೂಡ ಓದಿ: MG ಕಾಮೆಟ್ EV ಮತ್ತು ZS EV ಗಳಿಗೆ ವೇರಿಯಂಟ್ ಅಪ್ಡೇಟ್, ಹೊಸ ಫೀಚರ್ ಗಳು ಮತ್ತು ರಿವೈಸ್ ಆಗಿರುವ ಬೆಲೆಗಳನ್ನು ಪಡೆದಿವೆ.

 ಹೋಂಡಾ ಅಮೇಜ್

Honda Amaze

 ಕೊಡುಗೆಗಳು

 ಮೊತ್ತ

 ಕ್ಯಾಶ್ ಡಿಸ್ಕೌಂಟ್

 ರೂ. 35,000 ವರೆಗೆ

 ಉಚಿತ ಆಕ್ಸೆಸರಿಗಳು (ಐಚ್ಛಿಕ)

 ರೂ. 41,643 ವರೆಗೆ

 ವಿನಿಮಯ ಬೋನಸ್

 ರೂ. 10,000 ವರೆಗೆ

 ಲಾಯಲ್ಟಿ ಬೋನಸ್

 ರೂ. 4,000 ವರೆಗೆ

 ಕಾರ್ಪೊರೇಟ್ ಡಿಸ್ಕೌಂಟ್

 ರೂ. 6,000 ವರೆಗೆ

 ಸ್ಪೆಷಲ್ ಕಾರ್ಪೊರೇಟ್ ಡಿಸ್ಕೌಂಟ್

 ರೂ. 20,000 ವರೆಗೆ

 ಎಲೈಟ್ ಎಡಿಷನ್ ಗೆ ವಿಶೇಷ ಪ್ರಯೋಜನ

 ರೂ. 30,000 ವರೆಗೆ

 ಗರಿಷ್ಠ ಪ್ರಯೋಜನಗಳು

 ರೂ. 94,346 ವರೆಗೆ

  •  ಹೋಂಡಾ ಅಮೇಜ್‌ನಲ್ಲಿ, ಗ್ರಾಹಕರು ಕ್ಯಾಶ್ ಡಿಸ್ಕೌಂಟ್ ಅಥವಾ ಉಚಿತ ಆಕ್ಸೆಸರಿ ಗಳ ನಡುವೆ ಆಯ್ಕೆ ಮಾಡಿಕೊಳ್ಳಬಹುದು.

  •  ಮೇಲೆ ತಿಳಿಸಲಾದ ಕ್ಯಾಶ್ ಡಿಸ್ಕೌಂಟ್ ಮತ್ತು ಐಚ್ಛಿಕ ಉಚಿತ ಆಕ್ಸೆಸರಿಗಳ ಕೊಡುಗೆಯು ಅಮೇಜ್‌ನ ಮಿಡ್-ಸ್ಪೆಕ್ S ವೇರಿಯಂಟ್ ನಲ್ಲಿ ಮಾತ್ರ ಲಭ್ಯವಿದೆ.

  •  ಟಾಪ್-ಸ್ಪೆಕ್ VX ವೇರಿಯಂಟ್ ಮತ್ತು ಎಲೈಟ್ ಎಡಿಷನ್ ಗೆ, ಕ್ಯಾಶ್ ಡಿಸ್ಕೌಂಟ್ ರೂ 20,000 ಕ್ಕೆ ಬಂದಿಳಿಯುತ್ತದೆ, ಹಾಗೆಯೇ ಉಚಿತ ಆಕ್ಸೆಸರಿಗಳ ಕೊಡುಗೆ ರೂ. 24,346 ಕ್ಕೆ ಇಳಿಯುತ್ತದೆ.

  •  ಅಮೇಜ್‌ನ ಎಲೈಟ್ ಎಡಿಷನ್ ರೂ. 30,000 ವಿಶೇಷ ರಿಯಾಯಿತಿಯೊಂದಿಗೆ ಬರುತ್ತದೆ. ಹಾಗೆ ನೋಡಿದರೆ, ಇದು ಮಾರ್ಚ್ 2024 ರಲ್ಲಿ ಹೊಸ ಅಮೇಜ್‌ ಖರೀದಿಯ ಮೇಲೆ ನೀವು ಪಡೆಯಬಹುದಾದ ಅತ್ಯಧಿಕ ಉಳಿತಾಯವಾಗಿದೆ.

  •  ಅಮೇಜ್‌ನ ಬೇಸ್-ಸ್ಪೆಕ್ E ವೇರಿಯಂಟ್ ನೊಂದಿಗೆ, ಗ್ರಾಹಕರು ರೂ 10,000 ಕ್ಯಾಶ್ ಡಿಸ್ಕೌಂಟ್ ಅಥವಾ ರೂ. 12,349 ಮೌಲ್ಯದ ಆಕ್ಸೆಸರಿಗಳನ್ನು ಪಡೆಯಬಹುದು.

  •  ಹೋಂಡಾ ಅಮೇಜ್ ಬೆಲೆಯು ರೂ.7.16 ಲಕ್ಷ ಮತ್ತು ರೂ.9.92 ಲಕ್ಷದ ನಡುವೆ ಇದೆ.

 ಇದನ್ನು ಕೂಡ ಓದಿ: MG ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಬೆಲೆಯನ್ನು ರಿವೈಸ್ ಮಾಡಲಾಗಿದೆ, ಈಗ ರೂ. 13.99 ಲಕ್ಷದಿಂದ ಪ್ರಾರಂಭವಾಗುತ್ತದೆ

 ಹೋಂಡಾ ಎಲಿವೇಟ್

Honda Elevate

 ಕೊಡುಗೆಗಳು

 ಮೊತ್ತ

 ಸೀಮಿತ ಅವಧಿಯ ಸೆಲಿಬ್ರೇಶನ್ ಕೊಡುಗೆ

 ರೂ. 50,000

  •  ಎಲಿವೇಟ್ ಕಾಂಪ್ಯಾಕ್ಟ್ SUV ಮೇಲೆ ರೂ 50,000 ಸೀಮಿತ ಅವಧಿಯ ಸೆಲಿಬ್ರೇಶನ್ ರಿಯಾಯಿತಿಯನ್ನು ಮಾತ್ರ ನೀಡಲಾಗಿದೆ.

  •  SUV ಯ ಖರೀದಿಗೆ ಯಾವುದೇ ಹೆಚ್ಚುವರಿ ವಿನಿಮಯ ಬೋನಸ್, ಕಾರ್ಪೊರೇಟ್ ರಿಯಾಯಿತಿ ಮತ್ತು ಲಾಯಲ್ಟಿ ಬೋನಸ್ ಅನ್ನು ನೀಡಲಾಗುತ್ತಿಲ್ಲ.

  •  ಹೋಂಡಾ ಎಲಿವೇಟ್‌ನ ಬೆಲೆಗಳು ರೂ.11.58 ಲಕ್ಷದಿಂದ ರೂ.16.20 ಲಕ್ಷದವರೆಗೆ ಇದೆ

 ಟಿಪ್ಪಣಿಗಳು

  •  ಮೇಲೆ ತಿಳಿಸಲಾದ ರಿಯಾಯಿತಿಗಳು ರಾಜ್ಯ ಮತ್ತು ನಗರವನ್ನು ಅವಲಂಬಿಸಿ ಬದಲಾಗಬಹುದು. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ಡೀಲರ್‌ಶಿಪ್ ಅನ್ನು ಸಂಪರ್ಕಿಸಿ.

  • ಮೇಲೆ ನೀಡಲಾದ ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ಬೆಲೆಯಾಗಿದೆ.

 ಇನ್ನಷ್ಟು ಓದಿ: ಹೋಂಡಾ ಸಿಟಿ ಆನ್ ರೋಡ್ ಬೆಲೆ

was this article helpful ?

Write your Comment on Honda ನಗರ

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience