Tata Curvv EVಯು ಐದು ಬಣ್ಣಗಳಲ್ಲಿ ಲಭ್ಯ
ಲಭ್ಯವಿರುವ ಐದು ಬಣ್ಣಗಳಲ್ಲಿ, ಮೂರು ಬಣ್ಣದ ಆಯ್ಕೆಗಳು ಈಗಾಗಲೇ ನೆಕ್ಸಾನ್ ಇವಿಯಲ್ಲಿ ಲಭ್ಯವಿದೆ
-
ಟಾಟಾವು ತನ್ನ ಮುಂಬರುವ ಕರ್ವ್ ಇವಿಯನ್ನು ಐದು ಬಣ್ಣಗಳಲ್ಲಿ ಮಾತ್ರ ನೀಡುತ್ತದೆ, ಹಾಗೆಯೇ ಇದರಲ್ಲಿ ಯಾವುದೇ ಡ್ಯುಯಲ್-ಟೋನ್ ಆಯ್ಕ ಇಲ್ಲ.
-
ಕರ್ವ್ ಇವಿಯು 12.3-ಇಂಚಿನ ಟಚ್‌ಸ್ಕ್ರೀನ್, ಮುಂಭಾಗದಲ್ಲಿ ವೆಂಟಿಲೇಟೆಡ್ ಸೀಟ್‌ಗಳು ಮತ್ತು ಪನೋರಮಿಕ್ ಸನ್‌ರೂಫ್ ಅನ್ನು ಪಡೆಯುತ್ತದೆ.
-
ಸುರಕ್ಷತೆಯ ದೃಷ್ಟಿಯಿಂದ, ಇದು ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ADAS ಅನ್ನು ಪಡೆಯುವ ಸಾಧ್ಯತೆಯಿದೆ.
-
ಇದು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಪಡೆಯಬಹುದು, 500 ಕಿ.ಮೀ ಗಿಂತ ಹೆಚ್ಚಿನ ರೇಂಜ್ ಅನ್ನು ಹೊಂದಿದೆ.
-
ಟಾಟಾ ಕರ್ವ್ ಇವಿಯ ಆರಂಭಿಕ ಬೆಲೆ 20 ಲಕ್ಷ ರೂ. (ಎಕ್ಸ್ ಶೋರೂಂ) ಇರಬಹುದೆಂದು ಅಂದಾಜಿಸಲಾಗಿದೆ.
ಟಾಟಾ ಕರ್ವ್ ಇವಿಯು ಭಾರತದ ಖ್ಯಾತ ಆಟೋಮೊಟಿವ್ ಕಂಪೆನಿಯಾಗಿರುವ ಟಾಟಾದ ಹೊಸ ಇವಿ ಕಾರು ಆಗಿದೆ ಮತ್ತು ಈ ಎಸ್‌ಯುವಿ-ಕೂಪ್‌ನ ಎಲೆಕ್ಟ್ರಿಕ್ ಆವೃತ್ತಿಗೆ ಲಭ್ಯವಿರುವ ಬಣ್ಣ ಆಯ್ಕೆಗಳ ಕುರಿತು ನಾವು ಮಾಹಿತಿಯನ್ನು ಪಡೆದುಕೊಂಡಿದ್ದೇವೆ. ಟಾಟಾ ಐದು ಬಣ್ಣದ ಆಯ್ಕೆಗಳಲ್ಲಿ ಕರ್ವ್ ಇವಿ ಅನ್ನು ನೀಡುತ್ತದೆ. ಈ ಎಲ್ಲಾ ಐದು ಆಯ್ಕೆಗಳನ್ನು ಇಲ್ಲಿ ಪರಿಶೀಲಿಸೋಣ.
ಬಣ್ಣದ ಆಯ್ಕೆಗಳು
ಕರ್ವ್ ಇವಿಯು ಒಟ್ಟು ಐದು ಮೊನೊಟೋನ್ ಶೇಡ್‌ಗಳಲ್ಲಿ ಲಭ್ಯವಿರುತ್ತದೆ, ಅವುಗಳೆಂದರೆ, ಪ್ರಿಸ್ಟಿನ್ ವೈಟ್, ಫ್ಲೇಮ್ ರೆಡ್, ಎಂಪವರ್ಡ್ ಆಕ್ಸೈಡ್, ಪ್ಯೂರ್ ಗ್ರೇ ಮತ್ತು ವರ್ಚುವಲ್ ಸನ್‌ರೈಸ್. ನೀವು ನಿಮ್ಮ ಕಾರುಗಳಲ್ಲಿ ಡ್ಯುಯಲ್-ಟೋನ್ ಫಿನಿಶ್ ಅನ್ನು ಇಷ್ಟಪಡುವವರಾಗಿದ್ದರೆ, ಟಾಟಾ ಕರ್ವ್ ಇವಿಯು ಆ ಆಯ್ಕೆಯನ್ನು ಒದಗಿಸುವುದಿಲ್ಲ.
ಬಣ್ಣ ಆಯ್ಕೆಗಳು ನೀವು ಆಯ್ಕೆ ಮಾಡುವ ಆವೃತ್ತಿಗಳನ್ನು ಆಧರಿಸಿರುತ್ತದೆ, ಇದು ನೆಕ್ಸಾನ್ ಇವಿಯಂತೆಯೇ ಇರುತ್ತದೆ, ಇದು ಅದರ ಮೂರು ಆವೃತ್ತಿಗಳಿಗೆ ಎಂಪವರ್‌ಡ್, ಫೀಯರ್‌ಲೆಸ್ ಮತ್ತು ಕ್ರಿಯೆಟಿವ್ ಎಂಬ ವಿಭಿನ್ನ ಬಣ್ಣ ಆಯ್ಕೆಗಳನ್ನು ನೀಡುತ್ತದೆ. ಗಮನಾರ್ಹವಾಗಿ ಕರ್ವ್ ಇವಿಯಲ್ಲಿ ಲಭ್ಯವಿರುವ ಮೂರು ಬಣ್ಣಗಳಾದ ಫ್ಲೇಮ್ ರೆಡ್, ಎಂಪವರ್ಡ್ ಆಕ್ಸೈಡ್ ಮತ್ತು ಪ್ರಿಸ್ಟಿನ್ ವೈಟ್ ಅನ್ನು ನೆಕ್ಸಾನ್ ಇವಿಯ ಬಣ್ಣದ ಆಯ್ಕೆಗಳಿಂದ ಎರವಲು ಪಡೆಯಲಾಗಿದೆ.