• English
    • Login / Register

    ಇನ್ನುಮುಂದೆ Tata.ev ಹೆಸರಿನಲ್ಲಿ ಹೊರಬರಲಿರುವ ಟಾಟಾ ಸಂಸ್ಥೆಯ ಎಲೆಕ್ಟ್ರಿಕ್‌ ಕಾರು

    ಆಗಸ್ಟ್‌ 30, 2023 05:06 pm ರಂದು rohit ಮೂಲಕ ಪ್ರಕಟಿಸಲಾಗಿದೆ

    • 57 Views
    • ಕಾಮೆಂಟ್‌ ಅನ್ನು ಬರೆಯಿರಿ

    ಈ ಹೊಸ ಘೋಷಣೆಯು ಟಾಟಾ ಮೋಟಾರ್ಸ್‌ ಸಂಸ್ಥೆಯ EV ವಿಭಾಗದ ಈ ಕೆಳಗಿನ ಹೊಸ ಘೋಷಣೆಗೆ ವೇದಿಕೆ ಒದಗಿಸಲಿದೆ: ಅರ್ಥಪೂರ್ಣವಾಗಿ ಮುಂದೆ ಸಾಗಿರಿ

    Tata EV new brand identity and logo

    •  ಟಾಟಾ ಸಂಸ್ಥೆಯು ತನ್ನ ಎಲೆಕ್ಟ್ರಿಕ್‌ ಕಾರ್‌ ವಿಭಾಗಕ್ಕೆ ಹೊಸ ಲೋಗೋವನ್ನು ಬಿಡುಗಡೆ ಮಾಡಿದೆ.
    •  ಹೊಸ ಬ್ರಾಂಡ್‌ ಚಿಹ್ನೆಯು ಹೊಸ ಧ್ವನಿ ಗುರುತನ್ನು ಸಹ ಪಡೆಯಲಿದೆ.
    •  ಈ ಕಾರು ತಯಾರಕ ಸಂಸ್ಥೆಯು ಹೊಸ ಟಾಟಾ.ev ಬ್ರಾಂಡಿಗೆ ಇವೊ ಟೀಲ್‌ ಕಲರ್‌ ಸ್ಕೀಂ ಅನ್ನು ಬಳಸಿದೆ.
    •  ಟಾಟಾ ಮೋಟರ್ಸ್‌ ವತಿಯಿಂದ ಹಂತ ಹಂತವಾಗಿ ಹೊಸ ಬ್ರಾಂಡ್‌ ಗುರುತು ಮತ್ತು ಲೋಗೋವನ್ನು ಬಿಡುಗಡೆ ಮಾಡಲಿದೆ.

     ಎಲೆಕ್ಟ್ರಿಕ್‌ ವಾಹನ (EV) ವಿಭಾಗದಲ್ಲಿ ಸದ್ಯಕ್ಕೆ ಮುಂಚೂಣಿಯಲ್ಲಿರುವ ಟಾಟಾ ಮೋಟರ್ಸ್ ಸಂಸ್ಯೇಯು ತನ್ನ EV ವಿಭಾಗವನ್ನುಟಾಟಾ.ev ಎಂಬುದಾಗಿ ಹೆಸರು ಬದಲಾಯಿಸಿಕೊಂಡಿದೆ. ಈ ಹಿಂದೆ ಇದನ್ನು ಟಾಟಾ ಪ್ಯಾಸೆಂಜರ್‌ ಎಲೆಕ್ಟ್ರಿಕ್‌ ಮೊಬಿಲಿಟಿ ಲಿಮಿಟೆಡ್‌ (TPEM) ಎಂದು ಕರೆಯಲಾಗುತ್ತಿತ್ತು. ಈ ನಡೆಯು ಇತ್ತೀಚೆಗೆ ಮಹೀಂದ್ರಾ ಸಂಸ್ಥೆಯು ತನ್ನ ಮುಂಬರುವ ಬಾರ್ನ್‌ ಎಲೆಕ್ಟ್ರಿಕ್‌ (BE) ಶ್ರೇಣಿಯ ವಾಹನಗಳಿಗೆ ಮಾಡಿರುವ ಬದಲಾವಣೆಯನ್ನೇ ಹೋಲುತ್ತದೆ.

     

    ಈ ಬದಲಾವಣೆಯನ್ನು ಯಾಕೆ ಮಾಡಲಾಗಿದೆ?

    ಈ ಕಾರು ತಯಾರಕ ಸಂಸ್ಥೆಯ ಪ್ರಕಾರ ಸುಸ್ಥಿರತೆ, ಸಮುದಾಯ ಮತ್ತು ತಂತ್ರಜ್ಞಾನವನ್ನು ಸಮ ಪ್ರಮಾಣದಲ್ಲಿ ಸಂಯೋಜಿಸುವುದಕ್ಕಾಗಿ ಈ ಬದಲಾವಣೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಹೊಸ ಬ್ರಾಂಡ್‌ ಗುರುತು, ʻಅರ್ಥಪೂರ್ಣವಾಗಿ ಮುಂದೆ ಸಾಗಿರಿʼ ಎಂಬ ಘೋಷಣೆಯೊಂದಿಗೆ ಬರಲಿದೆ.

    ಇದನ್ನು ಸಹ ಓದಿರಿ: BS6 ಹಂತ 2 ಅನುಸರಣೆಯ ಫ್ಲೆಕ್ಸಿ - ಫ್ಯೂಯೆಲ್‌ ಟೊಯೊಟಾ ಇನೊವಾ ಹೈಕ್ರಾಸ್‌ ಸ್ಟ್ರಾಂಗ್‌ - ಹೈಬ್ರೀಡ್‌ ಪ್ರಾಯೋಗಿಕ ಮಾದರಿ ಬಿಡುಗಡೆ ಮಾಡಿದ ನಿತಿನ್‌ ಗಡ್ಕರಿ

     

    ಇತರ ಪರಿಷ್ಕರಣೆಗಳು

    ಟಾಟಾ ಸಂಸ್ಥೆಯು ತನ್ನ EV ವಿಭಾಗಕ್ಕೆ ಹೊಸ ಗುರುತು ಮಾತ್ರವಲ್ಲದೆ ನವೀನತೆಯಿಂದ ಕೂಡಿದ ಲೋಗೋವನ್ನು ಸಹ ನೀಡಿದೆ.  ಇದು ವರ್ತುಲಾಕಾರದಲ್ಲಿ ‘.ev’ ಎಂಬ ಉತ್ತರ ಪ್ರತ್ಯಯವನ್ನು ಹೊಂದಿದ್ದು, ಟಾಟಾ ಸಂಸ್ಥೆಯ ಪ್ರಕಾರ ಇದು ಮಾನವ ಮತ್ತು ಪರಿಸರದ ನಡುವಿನ ಒಡನಾಟವನ್ನು ಪ್ರತಿನಿಧಿಸುವ ವೃತ್ತಾಕಾರದ ಪರಿಸರ ವ್ಯವಸ್ಥೆಯನ್ನು ಚಿತ್ರಿಸುತ್ತದೆ. 

    ಈ ಸಂಸ್ಥೆಯು ತನ್ನ ಟಾಟಾ.ev ಕಾರುಗಳಿಗಾಗಿ ತನ್ನ ವಿಶಿಷ್ಟ ಇವೊ ಟೀಲ್‌ ಕಲರ್‌ ಸ್ಕೀಂ ಅನ್ನು ಬಳಸಿಕೊಂಡಿದ್ದು, ಸುಸ್ಥಿರತೆಗೆ ಸಂಬಂಧಿಸಿದ ಬದ್ಧತೆಯನ್ನು ಇದು ಎತ್ತಿ ತೋರಿಸುತ್ತದೆ. ಟಾಟಾ ಸಂಸ್ಥೆಯು ತನ್ನ ಹೊಸ ಬ್ರಾಂಡ್‌ ಗುರುತಿಗೆ ವಿಶೇಷವಾದ ಧ್ವನಿಯನ್ನು ಸಹ ನೀಡಿದ್ದು, ಎಲೆಕ್ಟ್ರಾನಿಕ್‌ ಸರ್ಕಿಟ್‌ ಗಳು ಮತ್ತು ಶಕ್ತಿಶಾಲಿ ಅಲೆಗಳ ಸಂಯೋಜನೆಯ ಮೂಲಕ ಇದು ರಚನೆಯಾಗಿದೆ.

     

    ಇದು ಯಾವಾಗ ಮಾರುಕಟ್ಟೆಗೆ ಇಳಿಯಲಿದೆ?

     ಮಾರುಕಟ್ಟೆಯಲ್ಲಿ 70 ಶೇಕಡಾಕ್ಕಿಂತಲೂ ಹೆಚ್ಚಿನ ಪಾಲನ್ನು ಗಳಿಸುವ ಮೂಲಕ ಎಲೆಕ್ಟ್ರಿಕ್‌ ಕಾರುಗಳ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಸಂಸ್ಥೆಯು, ತನ್ನ ಬ್ರಾಂಡ್‌ ಗುರುತನ್ನು ಹಂತ ಹಂತವಾಗಿ ಮಾರುಕಟ್ಟೆಗೆ ಪರಿಚಯಿಸುವುದಾಗಿ ಹೇಳಿದೆ. ಸೆಪ್ಟೆಂಬರ್‌ 14ರಂದು ಟಾಟಾ ನೆಕ್ಸನ್‌ EV ವಾಹನದ ಹೊಸ ಅವತಾರವು ಮಾರುಕಟ್ಟೆಗೆ ಕಾಲಿಡುವ ವೇಳೆಗೆ ಈ ಹೊಸ ಲೋಗೊ ಮತ್ತು ಗುರುತನ್ನು ನಾವು ನೋಡುವ ಸಾಧ್ಯತೆ ಇದೆ.

    Tata Harrier EV concept

     ಟಾಟಾ ನೆಕ್ಸನ್‌ EV ಪ್ರೈಂ ಮತ್ತು ಮ್ಯಾಕ್ಸ್‌ ಅಲ್ಲದೆ ಈ ಕಾರು ತಯಾರಕ ಸಂಸ್ಥೆಯ ಬಳಿ ಇನ್ನೂ ಎರಡು ಕಾರುಗಳಿವೆ. ಅವೆಂದರ: ಟಿಯಾಗೊ EV ಮತ್ತು ಟಿಗೊರ್ EV. ಇದರ ಮುಂಬರುವ EV ಶ್ರೇಣಿಯು ಪಂಚ್ EV, ಹ್ಯಾರಿಯರ್ EV ಕರ್ವ್‌ EV ಅನ್ನು ಒಳಗೊಂಡಿದೆ.

    ಇದನ್ನು ಸಹ ಓದಿರಿ: ಚಾರ್ಜ್‌ ಮಾಡುವಾಗ ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಬಿದ್ದ ಟಾಟಾ ಪಂಚ್‌ EV

    was this article helpful ?

    Write your ಕಾಮೆಂಟ್

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಲೆಕ್ಟ್ರಿಕ್ ಕಾರುಗಳು

    • ಪಾಪ್ಯುಲರ್
    • ಉಪಕಮಿಂಗ್
    ×
    We need your ನಗರ to customize your experience