ಚಾರ್ಜ್ ಮಾಡುವಾಗ ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಬಿದ್ದ ಟಾಟಾ ಪಂಚ್ EV
ಟಾಟಾ ಪಂಚ್ ಇವಿ ಗಾಗಿ shreyash ಮೂಲಕ ಆಗಸ್ಟ್ 23, 2023 05:16 pm ರಂದು ಪ್ರಕಟಿಸಲಾಗಿ ದೆ
- 20 Views
- ಕಾಮೆಂಟ್ ಅನ್ನು ಬರೆಯಿರಿ
ಪಂಚ್ EV ವಾಹನವು ಟಾಟಾ ಸಂಸ್ಥೆಯ ALFA (ಅಜೈಲ್ ಲೈಟ್ ಫ್ಲೆಕ್ಸಿಬಲ್ ಅಡ್ವಾನ್ಸ್ಡ್) ವಿನ್ಯಾಸವನ್ನು ಆಧರಿಸಿದ ಮೊದಲ ಎಲೆಕ್ಟ್ರಿಕ್ ಮಾದರಿಯಾಗಿದೆ
-
ಪಂಚ್ EV ವಾಹನವು ಮತ್ತೊಮ್ಮೆ ಕಾಣಿಸಿಕೊಂಡಿದ್ದು, ಈ ಬಾರಿ ಚಾರ್ಜ್ ಮಾಡುವಾಗ ಗೋಚರಿಸಿದೆ.
-
ನೆಕ್ಸಾನ್ EV ವಾಹನಕ್ಕೆ ಪ್ರತಿಯಾಗಿ ಪಂಚ್ EV ವಾಹನವು ಮುಂದುಗಡೆಯಲ್ಲಿ ಚಾರ್ಜ್ ಪೋರ್ಟ್ ಅನ್ನು ಹೊಂದಿದೆ.
-
ಹಿಂದಿನ ಸ್ಪೈ ಶಾಟ್ ಗಳನ್ನು ಆಧರಿಸಿ, ಇದು ಹೊಚ್ಚಹೊಸ ಕ್ಯಾಬಿನ್ ವಿನ್ಯಾಸ ಮತ್ತು ಹೊಸ 2 - ಸ್ಪೋಕ್ ಸ್ಟಿಯರಿಂಗ್ ವೀಲ್ ಅನ್ನು ಹೊಂದಿರುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ.
-
ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರಲಿದ್ದು, ಸುಮಾರು 350km ವರೆಗಿನ ಶ್ರೇಣಿಯನ್ನು ಒದಗಿಸಲಿದೆ.
-
ಟಾಟಾ ಸಂಸ್ಥೆಯು ಇದನ್ನು ರೂ. 12 ಲಕ್ಷದ (ಎಕ್ಸ್ - ಶೋರೂಂ) ಆರಂಭಿಕ ಬೆಲೆಯಲ್ಲಿ ಈ ವರ್ಷದ ಕೊನೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.
ಟಾಟಾ ಪಂಚ್ EV ಭಾರತೀಯ ಕಾರು ತಯಾರಕ ಸಂಸ್ಥೆಯ ಅತ್ಯಂತ ಹೊಸ ಎಲೆಕ್ಟ್ರಿಕ್ ವಾಹನವಾಗಿದ್ದು, ಟಿಯಾಗೊ EV ಮತ್ತು ನೆಕ್ಸಾನ್ EV ನಡುವಿನ ಅಂತರವನ್ನು ಸರಿದೂಗಿಸಲಿದೆ. ಪಂಚ್ EV ವಾಹನವು ಈ ಹಿಂದೆ ಸಹ ಕಾಣಿಸಿಕೊಂಡಿದ್ದರೂ ಸಹ, ಚಾರ್ಜ್ ಮಾಡುವಾಗ ತೆಗೆಯಲಾದ ಹೊಸ ಚಿತ್ರಗಳು ಈ ಮೈಕ್ರೋ SUV ಯ ಮುಂದಿನ ಭಾಗದ ನೋಟವನ್ನು ಕಟ್ಟಿ ಕೊಡುತ್ತವೆ.
ಹೊರಬಂದಿರುವ ಹೊಸ ವಿವರಗಳು
ಮೊತ್ತಮೊದಲ ಬಾರಿಗೆ ಪಂಚ್ EV ವಾಹನದ ಪರೀಕ್ಷಾರ್ಥ ಮಾದರಿಯು ಚಾರ್ಜರ್ ಗೆ ಪ್ಲಗ್ ಆಗಿರುವುದು ಕಂಡು ಬಂದಿದೆ. ಇದು ನೆಕ್ಸಾನ್ EV ಮತ್ತು ಟಿಯಾಗೊ EV ಗಿಂತ ಭಿನ್ನವಾಗಿದ್ದು, ಮುಂದುಗಡೆಯಲ್ಲಿ ಚಾರ್ಜ್ ಪೋರ್ಟ್ ಅನ್ನು ಹೊಂದಿದೆ. ಸಾಮಾನ್ಯವಾಗಿ ಇಲ್ಲಿ ಇಂಧನದ ಇನ್ಲೆಟ್ ಇರುವುದಿಲ್ಲ.
ಪಂಚ್ EV ಯ ಮುಂಭಾಗವು ಬಹುಪಾಲು ಇದರ ಇಂಟರ್ನಲ್ ಕಂಬುಷನ್ ಎಂಜಿನ್ (ICE) ಎದುರಾಳಿಯಂತೆ ಕಂಡರೂ, ಗ್ರಿಲ್ ಮತ್ತು ಬಂಪರ್ ನಲ್ಲಿ EV ಗೆ ಸೀಮಿತವಾದ ಕೆಲವೊಂದು ವಿಶೇಷತೆಗಳನ್ನು ಇದು ಹೊಂದಿರಲಿದೆ. ಈಗ ಮಾರುಕಟ್ಟೆಯಲ್ಲಿರುವ ಟಾಟಾ EV ಗಳಲ್ಲಿ ನಾವಿದನ್ನು ಕಾಣಬಹುದು.
ಮುಂಭಾಗದಿಂದ ನೋಡಿದಾಗ, ಇದರ ಪ್ರೊಫೈಲ್, ಪ್ರಸ್ತುತ ಪಂಚ್ ಮಾದರಿಯಂತೆಯೇ ಕಾಣಿಸುತ್ತದೆ. ಆದರೆ ಪರೀಕ್ಷಾರ್ಥ ಮಾದರಿಯು ಭಿನ್ನ ಅಲೋಯ್ ವಾಹನಗಳನ್ನು ಹೊಂದಿದ್ದು,ಟಾಟಾ ಟಿಯಾಗೊ ಮತ್ತು ಟಿಗೋರ್ ನ ಟಾಪ್ ಸ್ಪೆಕ್ ಆವೃತ್ತಿಗಳನ್ನು ಇದನ್ನು ನೋಡಬಹುದಾಗಿದೆ.
ಏನೆಲ್ಲ ವೈಶಿಷ್ಟ್ಯಗಳನ್ನು ನಿರೀಕ್ಷಿಸಬಹುದು
ಹಿಂದಿನ ಸ್ಪೈ ಶಾಟ್ ಗಳನ್ನು ಆಧರಿಸಿ ಹೇಳುವುದಾದರೆ, ಪಂಚ್ EV ವಾಹನವು ಹೊಚ್ಚ ಹೊಸ ಡ್ಯಾಶ್ ಬೋರ್ಡ್ ವಿನ್ಯಾಸ ಮತ್ತು ಹೊಸ 2 - ಸ್ಪೋಕ್ ಸ್ಟಿಯರಿಂಗ್ ವೀಲ್ ಜೊತೆಗೆ ಬರಲಿದೆ. ಇದು ಉತ್ಪಾದನಾ ಹಂತಕ್ಕೆ ತಲುಪಿರುವ ಟಾಟಾ ನೆಕ್ಸಾನ್ ಫೇಸ್ ಲಿಫ್ಟ್ ವಾಹನಕ್ಕೆ ಹೋಲುತ್ತದೆ.
ಗುಣಲಕ್ಷಣಗಳ ವಿಚಾರದಲ್ಲಿ ಹೇಳುವುದಾದರೆ ಇದು ICE ಮಾದರಿಯನ್ನೇ ಹೋಲುತ್ತದೆ. ಇದು ಟಚ್ ಸ್ಕ್ರೀನ್ ವ್ಯವಸ್ಥೆ, ಚಾಲಕನ ಸೆಮಿ ಡಿಜಿಟಲ್ ಡಿಸ್ಪ್ಲೇ, ಮತ್ತು ಟಚ್ ಆಧರಿತ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ಅನ್ನು ಒಳಗೊಂಡಿದೆ. ಅಲ್ಲದೆ ಇದು ಸ್ವಯಂಚಾಲಿತ ಹೆಡ್ ಲೈಟುಗಳು, ಮಳೆ ಸಂವೇದಿ ವೈಪರ್ ಗಳು ಮತ್ತು ಕ್ರೂಸ್ ಕಂಟ್ರೋಲ್ ಜೊತೆಗೆ ಬರಲಿದೆ. ಪಂಚ್ EV ವಾಹನದಲ್ಲಿರುವ ಸೇಫ್ಟಿ ಕಿಟ್, ಆರು ಏರ್ ಬ್ಯಾಗುಗಳು, ISOFIX ಚೈಲ್ಡ್ ಸೀಟ್ ಆಂಕರೇಜ್ ಮತ್ತು ರಿವರ್ಸಿಂಗ್ ಕ್ಯಾಮರಾವನ್ನು ಹೊಂದಿರಲಿದೆ.
ಇದನ್ನು ಸಹ ಓದಿರಿ: ಟಾಟಾ ನೆಕ್ಸಾನ್ ಫೇಸ್ ಲಿಫ್ಟ್ ವಾಹನದ ಮುಂಭಾಗ ಕಣ್ಣಿಗೆ ಬಿದ್ದಾಗ
ಪವರ್ ಟ್ರೇನ್ ಹೇಗಿದೆ?
ಈಗಾಗಲೇ ರಸ್ತೆಗೆ ಇಳಿದಿರುವ ಟಾಟಾದ EV ವಾಹನಗಳಲ್ಲಿ ನೋಡಿದಂತೆ, ಪಂಚ್ EV ಕಾರು ಎರಡು ಬ್ಯಾಟರಿ ಆಯ್ಕೆಗಳೊಂದಿಗೆ ಬರಲಿದ್ದು, 300km ನಿಂದ 350km ತನಕದ ಚಾಲನಾ ಶ್ರೇಣಿಯನ್ನು ನೀಡುವ ನಿರೀಕ್ಷೆ ಇದೆ. ಇತರ ಟಾಟಾ EV ಗಳಲ್ಲಿ ಇರುವಂತೆಯೇ, ವಿವಿಧ ಬ್ರೇಕಿಂಗ್ ರೀಜನರೇಶನ್ ಮೋಡ್ ಗಳೊಂದಿಗೆ ಹೊರಬರುವ ನಿರೀಕ್ಷೆ ಇದೆ. ನೆಕ್ಸಾನ್ EV ನಂತರದ ಶ್ರೇಣಿಯಲ್ಲಿ ಪಂಚ್ EV ವಾಹನವು ಬರಲಿದ್ದು, ಸುಮಾರು 100PS ನೊಂದಿಗೆ ಕಾರ್ಯಕ್ಷಮತೆಯ ಅಂತರವನ್ನು ಸರಿದೂಗಿಸಲಿದೆ.
ಅಲ್ಲದೆ, ಪಂಚ್ EV ವಾಹನವು, ಮಾರುಕಟ್ಟೆಯಲ್ಲಿ ಈಗಾಗಲೇ ನೆಲೆ ಕಂಡಿರುವ ಇತರ EV ಕಾರುಗಳಿಗೆ ಭಿನ್ನವಾಗಿ, ALFA ಪ್ಲಾಟ್ ಫಾರ್ಮ್ ಆಧಾರದೊಂದಿಗೆ ಹೊರಬರಲಿರುವ ಮೊದಲ ಎಲೆಕ್ಟ್ರಿಕ್ ಮಾದರಿ ಎನಿಸಲಿದೆ.
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಪಂಚ್ EV ಕಾರು ರೂ. 12 ಲಕ್ಷದ (ಎಕ್ಸ್ - ಶೋರೂಂ) ಆರಂಭಿಕ ಬೆಲೆಯಲ್ಲಿ ಈ ವರ್ಷದ ಕೊನೆಗೆ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ. ಇದು ಸಿಟ್ರಾನ್ eC3ಕಾರಿಗೆ ನೇರ ಸ್ಪರ್ಧೆ ನೀಡಿದರೆ, ಟಾಟಾ ಟಿಯಾಗೊ EV ಮತ್ತು MG ಕೋಮೆಟ್ EV ವಾಹನಗಳಿಗೆ ಪ್ರೀಮಿಯಂ ಮಟ್ಟದ ಬದಲಿ ವಾಹನ ಎನಿಸಲಿದೆ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಪಂಚ್ ಆಟೋಮ್ಯಾಟಿಕ್