• English
  • Login / Register

ಟಾಟಾ ಗ್ರಾವಿಟಾಸ್: ನೀವು ತಿಳಿಯಬೇಕಾದ 5 ವಿಷಯಗಳು

ಟಾಟಾ ಸಫಾರಿ 2021-2023 ಗಾಗಿ sonny ಮೂಲಕ ನವೆಂಬರ್ 30, 2019 03:22 pm ರಂದು ಪ್ರಕಟಿಸಲಾಗಿದೆ

  • 19 Views
  • ಕಾಮೆಂಟ್‌ ಅನ್ನು ಬರೆಯಿರಿ

ಟಾಟಾ ನಮಗೆ ಅದರ ಹೊಸ SUV ನ  ಹೆಸರು ಹಾಗು ಅದರ ಜಾಹಿರಾತಿನ ತುಣುಕು ಕೊಟ್ಟಿದೆ. ಇಲ್ಲಿಯವರೆಗೆ ನಮಗೆ ತಿಳಿದ ವಿಷಯಗಳು ಹೀಗಿವೆ. 

Tata Gravitas: 5 Things You Should Know

ಟಾಟಾ ಮುಂಬರುವ  ಹ್ಯಾರಿಯೆರ್ ಆಧಾರಿತ 7-ಸೀಟೆರ್  SUV ಯ ತುಣುಕುಗಳನ್ನು ತೋರಿಸಿದೆ ಮತ್ತು ಅದನ್ನು ಗ್ರಾವಿಟಾಸ್ ಎಂದು ಕರೆಯಲಾಗುವುದು ಎಂದು ಸಹ ಹೇಳಿದೆ. ಆದರೆ, ಗ್ರಾವಿಟಿಸ್ ಅದರ ತುಣುಕುಗಳು ಕಾಣುವಹಾಗೆ ಹೆಚ್ಚು ಆಶ್ಚರ್ಯಕರವಾಗಿಲ್ಲ. ಟಾಟಾ ಗ್ರಾವಿಟಾಸ್ ಬಗ್ಗೆಗಿನ ನೀವು ತಿಳಿಯಬೇಕಾದ ಐದು ವಿಷಯಗಳು ಹೀಗಿವೆ. 

1) ಇದು ಒಂದು 7-ಸೀಟೆರ್ ಹ್ಯಾರಿಯೆರ್ ಆಗಿದೆ ಮತ್ತು  ನಾವು ಈಗಾಗಲೇ ನೋಡಿದ್ದೇವೆ 

 ಗ್ರಾವಿಟಾಸ್ ಒಂದು 7- ಸೀಟೆರ್  ಆವೃತ್ತಿಯ  5-ಸೀಟೆರ್  ಮದ್ಯ ಅಳತೆಯ SUV ಆಗಿದೆ, ಹಾಗಾಗಿ ಅದನ್ನು OMEGA ARC ವೇದಿಕೆಯಲ್ಲೇ ತಯಾರಿಸಲಾಗುತ್ತದೆ. ಟಾಟಾ ಈಗಾಗಲೇ ಈ SUV ಯ ಇಣುಕು ನೋಟವನ್ನು ಬುಝ್ಅರ್ಡ್ ರೂಪದಲ್ಲಿ ಕೊಟ್ಟಿದೆ, ಅದು  2019 ಜಿನೀವಾ ಮೋಟಾರ್ ಶೋ ದಲ್ಲಿ ಮಾರ್ಚ್ ನಲ್ಲಿ ಈ ವರ್ಷ ಮೊದಲಬಾರಿಗೆ ಕಾಣಿಸಿಕೊಂಡಿತು. ಗ್ರಾವಿಟಾಸ್ ಒಮ್ಮೆ ಬಿಡುಗಡೆಯಾದಾಗ, ಅದು ಟಾಟಾ ದ ಪ್ರಮುಖ ಮಾಡೆಲ್ ಆಗಲಿದೆ ಭಾರತದಲ್ಲಿ.  

Tata Gravitas: 5 Things You Should Know

ಚಿತ್ರದಲ್ಲಿ : ಬುಝ್ಅರ್ಡ್

2) ಅದು ನೋಡಲು ಹ್ಯಾರಿಯೆರ್ ತರಹ ಕಾಣುವುದಿಲ್ಲ 

ಗ್ರಾವಿಟಾಸ್ ಹ್ಯಾರಿಯೆರ್ ಗಿಂತಲೂ ದೊಡ್ಡದಾಗಿರುತ್ತದೆ ಹೆಚ್ಚಿನ ಸೀಟ್ ಗಾಗಿ ಅನುಕೂಲ ಆಗುವಂತೆ. ಸ್ಟೈಲಿಂಗ್ ಹಾಗು ಡಿಸೈನ್ ಭಾಷೆ  ಮುಂಭಾಗದಲ್ಲಿ ಹ್ಯಾರಿಯೆರ್ ನಂತೆ ಇದ್ದರೂ , ಎತ್ತರವಾದ ಹಿಂಬದಿ 5- ಸೀಟೆರ್ SUV ಗಿಂತಲೂ ಭಿನ್ನವಾಗಿರುತ್ತದೆ.

Tata Gravitas Is The 7-Seater Harrier, Launching In Feb 2020

ಚಿತ್ರದಲ್ಲಿ : ಬುಝ್ಅರ್ಡ್

ಗ್ರಾವಿಟಾಸ್ ಸರಿಸುಮಾರು ಬುಝ್ಅರ್ಡ್ ಹಾಗೆ ಇರಬಹುದು ಎಂದು ನಿರೀಕ್ಷಿಸಲಾಗಿದೆ, ನೀಲಿ SUV ಯನ್ನು ನೀವು ಚಿತ್ರದಲ್ಲಿ ಕಾಣಬಹುದು

 

ಟಾಟಾ  ಬುಝ್ಅರ್ಡ್ (ಜಿನೀವಾ ಆವೃತ್ತಿ)/ ಗ್ರಾವಿಟಾಸ್

ಟಾಟಾ  ಹ್ಯಾರಿಯೆರ್

ಉದ್ದ

4661mm

4598mm (-63mm)

ಅಗಲ

1894mm

1894mm

ಎತ್ತರ

1786mm

1706mm (-80mm)

ವೀಲ್ ಬೇಸ್

2741mm

2741mm

3) ಅದು ಹ್ಯಾರಿಯೆರ್ ನಂತೆಯ ಎಂಜಿನ್ ಪಡೆಯುತ್ತದೆ, ಮತ್ತು ಅದು ಕೇವಲ ಡೀಸೆಲ್ SUV  ಆಗಿರುತ್ತದೆ ಬಿಡುಗಡೆ ಸಮಯದಲ್ಲಿ 

 ಗ್ರಾವಿಟಾಸ್ ನಲ್ಲಿ ಫಿಯಟ್ ನಿಂದ ಪಡೆಯಲಾದ 2.0-ಲೀಟರ್ ಡೀಸೆಲ್ ಎಂಜಿನ್ ಇರಲಿದೆ ಹ್ಯಾರಿಯೆರ್ ನಲಿರುವಂತೆ. ಆದರೆ, ಅದನ್ನು   ಹ್ಯಾರಿಯೆರ್ ಗಿಂತಲೂ  ಹೆಚ್ಚಿನ ಪವರ್ ಹೊಂದಿರುವಂತೆ ಮಾಡಲಾಗಿರುತ್ತದೆ. ನಮ್ಮ ನಿರೀಕ್ಷೆಯಂತೆ ಅದನ್ನು  BS6 ಜೀಪ್ ಕಂಪಾಸ್ ಶೈಲಿಯಲ್ಲಿ ತರಬಹುದು - 170PS ಮತ್ತು  350Nm.ಪವರ್ ಯೂನಿಟ್ ಅನ್ನು 6- ಸ್ಪೀಡ್ ಮಾನ್ಯುಯಲ್ ಒಂದಿಗೆ ಸ್ಟ್ಯಾಂಡರ್ಡ್ ಆಗಿ ಕೊಡಬಹುದು ಹಾಗು  6-ಸ್ಪೀಡ್ ಆಟೋಮ್ಯಾಟಿಕ್ ಅನ್ನು ಹುಂಡೈ ನಿಂದ ಪಡೆಯಲಾಗಬಹುದು ಆಯ್ಕೆಯಾಗಿ. 

ಟಾಟಾ  ಹ್ಯಾರಿಯೆರ್ ಗಾಗಿ ಹೊಸ ಪೆಟ್ರೋಲ್ ಎಂಜಿನ್ ಮೇಲು ಕಾರ್ಯ ತತ್ಪರವಾಗಿದೆ ಮತ್ತು ಅದನ್ನು  2020 ಪ್ರಾರಂಭದಲ್ಲಿ ಪರಿಚಯಿಸಲಾಗಬಹುದು. ಅದನ್ನು ಗ್ರಾವಿಟಾಸ್ ನಲ್ಲೂ ಸಹ ಕೊಡಬಹುದು.

Tata Gravitas: 5 Things You Should Know

4) ಅದು ಹೆಚ್ಚು ಫೀಚರ್ ಗಳಿಂದ ಭರಿತವಾಗಿರುತ್ತದೆ 

 ಟಾಟಾ ಗ್ರಾವಿಟಾಸ್ ಕಾರ್ ಮೇಕರ್ ನ ಪ್ರಮುಖ ಮಾಡೆಲ್ ಅಗಲಿದ್ದು, ಅದರಲ್ಲಿ ಬಹಳಷ್ಟು ಸಲಕರಣೆಗಳನ್ನು ಕೊಡಲಾಗುವುದು. ಅದರಲ್ಲಿ ಹ್ಯಾರಿಯೆರ್ ನಲ್ಲಿರುವಂತಹ ಬಹಳಷ್ಟು ಫೀಚರ್ ಗಳನ್ನು ಮುಂದುವರಿಸಲಾಗುವುದು ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 8.8-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆರು ಏರ್ಬ್ಯಾಗ್ ಗಳು ಮತ್ತು ಟೆರ್ರಇನ್ ರೆಸ್ಪಾನ್ಸ್ ಮೋಡ್ ಸಹ ಇರುವುದು. ಹೆಚ್ಚುವರಿಯಾಗಿ, ಗ್ರಾವಿಟಾಸ್ , ನಲ್ಲಿ ದೊಡ್ಡದಾದ ಅಲಾಯ್ ಗಳು ಮತ್ತು ಪನಾ ರಾಮಿಕ್ ಸನ್ ರೂಫ್ ಸಹ ಕೊಡಲಾಗಬಹುದು.

Tata Gravitas: 5 Things You Should Know

ಚಿತ್ರದಲ್ಲಿ : ಬುಝ್ಅರ್ಡ್

5) ಇದನ್ನು ಫೆಬ್ರವರಿ 2020 ಯಲ್ಲಿ ಬಿಡುಗಡೆ ಮಾಡಲಾಗಬಹುದು 

ಟಾಟಾ ಗ್ರಾವಿಟಾಸ್ ಆಗಮನ 2020 ಆಟೋ ಎಕ್ಸ್ಪೋ ದಲ್ಲಿ ಆಗಬಹುದು ಮತ್ತು ತ್ವರಿತವಾಗಿ ಮಾರಾಟಕ್ಕೂ ಲಭ್ಯವಿರಬಹುದು. ಅದರ ಆರಂಭಿಕ ಬೆಲೆ ಸುಮಾರು ರೂ 15  ಇರುತ್ತದೆ ಮತ್ತು ಅದರ ಪ್ರತಿಸ್ಪರ್ಧೆ ಮಹಿಂದ್ರಾ XUV500 ಮತ್ತು ಮುಂಬರುವ 7- ಸೀಟೆರ್  ಆವೃತ್ತಿಯ  MG ಹೆಕ್ಟರ್ ಒಂದಿಗೆ ಇರುತ್ತದೆ. 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Tata Safar ಐ 2021-2023

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience