Login or Register ಅತ್ಯುತ್ತಮ CarDekho experience ಗೆ
Login

Tata Nexon Facelift ಗಾಗಿ ಬುಕಿಂಗ್ ಗಳು ಆರಂಭ: ಭರ್ಜರಿ ಫೀಚರ್ ಗಳಿಂದ ಕೂಡಿರಲಿದೆ ಈ ಕಾರು

published on ಸೆಪ್ಟೆಂಬರ್ 05, 2023 04:02 pm by rohit for ಟಾಟಾ ನೆಕ್ಸ್ಂನ್‌

ನವೀಕೃತ ಟಾಟಾ ನೆಕ್ಸಾನ್: ಸ್ಮಾರ್ಟ್, ಪ್ಯೂರ್, ಕ್ರಿಯೇಟಿವ್ ಮತ್ತು ಫಿಯರ್‌ಲೆಸ್ ಎಂಬ ನಾಲ್ಕು ವಿಶಾಲ ಟ್ರಿಮ್‌ಗಳಲ್ಲಿ ಲಭ್ಯವಿದೆ

  • ಟಾಟಾ ಹೊಸ ನೆಕ್ಸಾನ್ ಅನ್ನು ಸೆಪ್ಟೆಂಬರ್ 14 ರಂದು ಬಿಡುಗಡೆ ಮಾಡಲಿದೆ.
  • ಬುಕ್ಕಿಂಗ್ ಅನ್ನು ಆನ್‌ಲೈನ್‌ನಲ್ಲಿ ಮತ್ತು ಟಾಟಾ ಪ್ಯಾನ್-ಇಂಡಿಯಾ ಡೀಲರ್‌ಶಿಪ್‌ಗಳಲ್ಲಿ ಮಾಡಬಹುದು.
  • ಕಾರು ತಯಾರಕರು ಪ್ರಮಾಣಿತ ಮಾದರಿಯ ಜೊತೆಗೆ ನವೀಕೃತ ನೆಕ್ಸಾನ್ ಇವಿ ಅನ್ನು ಸಹ ಪರಿಚಯಿಸುತ್ತಿದ್ದಾರೆ.
  • ವಿನ್ಯಾಸ ಬದಲಾವಣೆಗಳಲ್ಲಿ ಸ್ಲೀಕರ್ ಗ್ರಿಲ್, ಸಂಪೂರ್ಣ-ಎಲ್‌ಇಡಿ ಲೈಟಿಂಗ್ ಮತ್ತು ಸಂಪರ್ಕಿತ ಟೈಲ್‌ಲೈಟ್‌ಗಳು ಸೇರಿವೆ.
  • ಕ್ಯಾಬಿನ್ ಈಗ ಡ್ಯುಯಲ್ 10.25-ಇಂಚಿನ ಡಿಸ್‌ಪ್ಲೇಗಳು ಮತ್ತು ಎಸಿ ಕಂಟ್ರೋಲ್‌ಗಾಗಿ ಟಚ್-ಆಧಾರಿತ ಪ್ಯಾನಲ್ ಅನ್ನು ಪಡೆದಿದೆ.
  • ಇದರಲ್ಲಿನ ಹೊಸ ಉಪಕರಣಗಳೆಂದರೆ 360-ಡಿಗ್ರಿ ಕ್ಯಾಮರಾ, ಆರು ಏರ್‌ಬ್ಯಾಗ್‌ಗಳು ಮತ್ತು ಮುಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳಾಗಿವೆ.
  • ಮೊದಲಿನಂತೆ ಪೆಟ್ರೋಲ್ ಮತ್ತು ಡಿಸೇಲ್ ಎಂಜಿನ್‌ಗಳೊಂದಿಗೆ, 7-ಸ್ಪೀಡ್ ಡಿಸಿಟಿ ಅನ್ನು ಪಡೆಯುತ್ತದೆ.
  • ರೂ. 8 ಲಕ್ಷದ (ಎಕ್ಸ್-ಶೋರೂಮ್) ಆರಂಭಿಕ ಬೆಲೆಯನ್ನು ಹೊಂದಿರುವ ಸಾಧ್ಯತೆಯಿದೆ.

ಇತ್ತೀಚೆಗೆ ಸಂಪೂರ್ಣ ಬಹಿರಂಗಗೊಳಿಸುವಿಕೆಯ ನಂತರ, ನವೀಕೃತ ಟಾಟಾ ನೆಕ್ಸಾನ್ ಸೆಪ್ಟೆಂಬರ್ 14 ರ ಅದರ ಬಿಡುಗಡೆಗೆ ಮುಂಚಿತವಾಗಿ ಪೂರ್ವ-ಆರ್ಡರ್‌ಗಳಿಗೆ ಲಭ್ಯವಿದೆ. ಕಾರು ತಯಾರಕರು ಆನ್‌ಲೈನ್‌ನಲ್ಲಿ ಮತ್ತು ಅದರ ಪ್ಯಾನ್-ಇಂಡಿಯಾ ಡೀಲರ್ ನೆಟ್‌ವರ್ಕ್‌ನಲ್ಲಿ ಬುಕಿಂಗ್‌ಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ಅಪ್‌ಡೇಟೆಡ್ ಎಸ್‌ಯುವಿಯನ್ನು: ಸ್ಮಾರ್ಟ್, ಪ್ಯೂರ್, ಕ್ರಿಯೇಟಿವ್ ಮತ್ತು ಫಿಯರ್‌ಲೆಸ್ ಎಂಬ ನಾಲ್ಕು ವಿಶಾಲ ಟ್ರಿಮ್‌ಗಳಲ್ಲಿ ಮಾರಾಟ ಮಾಡಲಾಗುತ್ತದೆ. ಅದೇ ದಿನ ನವೀಕೃತ ನೆಕ್ಸಾನ್ ಇವಿಯ ಬೆಲೆಗಳನ್ನು ಸಹ ಟಾಟಾ ಬಹಿರಂಗಪಡಿಸಲಿದೆ. ಇಲ್ಲಿಯವರೆಗೆ ನೆಕ್ಸಾನ್ ಕುರಿತು ತಿಳಿದಿರುವ ಸಂಕ್ಷಿಪ್ತ ಮಾಹಿತಿ ಇಲ್ಲಿದೆ:

ಮನಮೋಹಕವಾದ ನೋಟ

ನವೀಕೃತ ನೆಕ್ಸಾನ್‌ನಲ್ಲಿ ಅದರ ಮುಂಭಾಗ ಮತ್ತು ಹಿಂಭಾಗದ ತುದಿಗಳಲ್ಲಿ ಹೊಸ ಮತ್ತು ಸ್ಲೀಕರ್ ಗ್ರಿಲ್, ಲಂಬವಾಗಿ ಜೋಡಿಸಲಾದ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, ಪರಿಷ್ಕೃತ ಎಲ್ಇಡಿ ಡಿಆರ್‌ಎಲ್‌ಗಳು ಮತ್ತು ಪುನಃ ಮಾಡಲ್ಪಟ್ಟ ಬಂಪರ್‌ಗಳನ್ನು ನೋಡಬಹುದು. ಟಾಟಾ ಇದಕ್ಕೆ ಸಂಪರ್ಕಿತ ಮತ್ತು ದಟ್ಟ ಎಲ್‌ಇಡಿ ಟೈಲ್‌ಲೈಟ್‌ಗಳು ಮತ್ತು ಮರುಮಾಡಲ್ಪಟ್ಟ ಟೈಲ್‌ಗೇಟ್ ಅನ್ನು ನೀಡಿದ್ದು ಇದು ಹಿಂಭಾಗದ ಬದಲಾವಣೆಗಳನ್ನು ಪೂರ್ಣಗೊಳಿಸುತ್ತದೆ.

ಇತ್ತೀಚಿಗೆ ಬಿಡುಗಡೆಯಾದ ಹೊಸ ನೆಕ್ಸಾನ್ ಇವಿ ಟೀಸರ್‌ಗಳು (ಅಥವಾ ನೆಕ್ಸಾನ್.ಇವಿ ಎಂದು ಕರೆಯಲಾಗುತ್ತದೆ) ಹೊಸ ಪ್ರಮಾಣಿತ ನೆಕ್ಸಾನ್‌ನಂತೆಯೇ ವಿನ್ಯಾಸ ಬದಲಾವಣೆಗಳನ್ನು ಪಡೆದಿದೆ ಎಂಬುದನ್ನು ತೋರಿಸುತ್ತವೆ. ಆದಾಗ್ಯೂ, ಇದರ ದೊಡ್ಡ ಬದಲಾವಣೆಯೆಂದರೆ ಮುಂಭಾಗದ ಉದ್ದನೆಯ ಮತ್ತು ತೆಳ್ಳನೆಯ ಎಲ್‌ಇಡಿ ಡಿಆರ್‌ಎಲ್‌ಗಳಾಗಿವೆ.

ಅಧಿಕ ಪ್ರೀಮಿಯಂ ಕ್ಯಾಬಿನ್ ಅನುಭವ

ಹೊಸ ನೆಕ್ಸಾನ್‌ನ ಮರುವಿನ್ಯಾಸಗೊಳಿಸಲಾದ ಡ್ಯಾಶ್‌ಬೋರ್ಡ್ ಮತ್ತು ಹೊಸ 2-ಸ್ಪೋಕ್ ಫ್ಲ್ಯಾಟ್-ಬಾಟಮ್ ಸ್ಟೀರಿಂಗ್ ವ್ಹೀಲ್ ಅನ್ನು ಹಾಗೂ ಕರ್ವ್‌ನಲ್ಲಿ ನೀಡಿರುವಂತೆ ಪ್ರಕಾಶಿತ ಟಾಟಾ ಲೋಗೋವನ್ನು ಹೊಂದಿದೆ. ಇದು ಪರಿಷ್ಕೃತ ಮೇಲ್ಗವಸನ್ನು ಸಹ ಹೊಂದಿದ್ದು ಇದು ನೀವು ಆಯ್ದ ಬಣ್ಣ ಹಾಗೂ ವೇರಿಯೆಂಟ್ ಅನ್ನು ಅವಲಂಬಿಸಿ ಇದರ ಬಣ್ಣವು ವ್ಯತ್ಯಾಸವಾಗುತ್ತದೆ. ಈ ನವೀಕೃತ ಟಾಟಾ ನೆಕ್ಸಾನ್ ಕ್ಲೈಮೆಟ್ ಕಂಟ್ರೋಲ್‌ಗಾಗಿ ಬ್ಯಾಕ್‌ಲಿಟ್ ಸೆಟಪ್ ಅನ್ನು ಹೊಂದಿದ ಟಚ್-ಆಧಾರಿತ ಪ್ಯಾನೆಲ್ ಅನ್ನು ಸಹ ಹೊಂದಿದೆ.

ಫೀಚರ್‌ಗಳ ಕೊರತೆಯಿಲ್ಲ

ಮಧ್ಯಂತರ ನವೀಕರಣದೊಂದಿಗೆ, ಈ ನೆಕ್ಸಾನ್‌ನ ಸುರಕ್ಷತೆ ಮತ್ತು ಫೀಚರ್ ಲಿಸ್ಟ್ ಡ್ಯುಯಲ್ 10.25-ಇಂಚಿನ ಡಿಸ್‌ಪ್ಲೇಗಳು (ಒಂದು ಇನ್‌ಸ್ಟ್ರೂಮೆಂಟ್‌ಗಾಗಿ ಮತ್ತು ಇನ್ನೊಂದು ಇನ್‌ಫೋಟೈನ್‌ಮೆಂಟ್‌ಗಾಗಿ), 360-ಡಿಗ್ರಿ ಕ್ಯಾಮರಾ, ಆರು ಏರ್‌ಬ್ಯಾಗ್‌ಗಳು (ಪ್ರಮಾಣಿತವಾಗಿ), ಮತ್ತು ಮುಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಹೊಂದಿದೆ. ನಾವು ನೆಕ್ಸಾನ್‌ನ ಎಲ್ಲಾ ಹೊಸ ಫೀಚರ್‌ಗಳು ಮತ್ತು ವೇರಿಯೆಂಟ್-ವಾರು ಸಲಕರಣಾ ಪಟ್ಟಿಯನ್ನು ನೀಡಿದ್ದೇವೆ.

ಬಹು ಆಯ್ಕೆಗಳು

ನಿರ್ಗಮಿತ ಮಾದರಿಗೆ ಹೋಲಿಸಿದರೆ ವೇರಿಯೆಂಟ್ ಅನ್ನು ಸರಳಗೊಳಿಸಲಾಗಿದ್ದರೂ, ಟಾಟಾ ಖರೀದಿದಾರರಿಗೆ ತಮ್ಮ ಹೆಚ್ಚು ಆದ್ಯತೆಯ ವಾಹನವನ್ನು ಆಯ್ಕೆ ಮಾಡಲು ಎಂಜಿನ್-ಗೇರ್‌ಬಾಕ್ಸ್ ಸಂಯೋಜನೆಗಳ ಶ್ರೇಣಿ ನೀಡುವುದನ್ನು ಮುಂದುವರಿಸಿದೆ. ಅವು ಈ ಕೆಳಗಿಂತಿವೆ:

ನಿರ್ದಿಷ್ಟತೆ

1.2-ಲೀಟರ್ ಟರ್ಬೋ-ಪೆಟ್ರೋಲ್

1.5-ಲೀಟರ್ ಡಿಸೇಲ್

ಪವರ್

120PS

115PS

ಟಾರ್ಕ್

170Nm

260Nm

ಟ್ರಾನ್ಸ್‌ಮಿಷನ್

5-ಸ್ಪೀಡ್ MT, 6- ಸ್ಪೀಡ್ MT, 6- ಸ್ಪೀಡ್ AMT, 7- ಸ್ಪೀಡ್ ಡಿಸಿಟಿ

6- ಸ್ಪೀಡ್ MT, 6- ಸ್ಪೀಡ್ ಎಎಂಟಿ

ನೆಕ್ಸಾನ್ ಇನ್ನೂ ಮೂರು ಡ್ರೈವ್ ಮೋಡ್‌ಗಳನ್ನು ಹೊಂದಿದೆ (ಇಕೋ, ಸಿಟಿ ಮತ್ತು ಸ್ಪೋರ್ಟ್ಸ್) ಆದರೆ ಈಗ ಎಎಂಟಿ ಮತ್ತು ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳಿಗೆ ಪ್ಯಾಡಲ್ ಶಿಫ್ಟರ್‌ಗಳೊಂದಿಗೆ ಬರುತ್ತದೆ. ಮತ್ತೊಂದೆಡೆ ನವೀಕೃತ ನೆಕ್ಸಾನ್ ಇವಿಯ ಪವರ್‌ಟ್ರೇನ್ ಬದಲಾಗುವ ಸಾಧ್ಯತೆಯಿಲ್ಲ.

ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧೆ

ನವೀಕೃತ ಟಾಟಾ ನೆಕ್ಸಾನ್ ರೂ. 8 ಲಕ್ಷ (ಎಕ್ಸ್-ಶೋರೂಮ್) ಕ್ಕಿಂತ ಸ್ವಲ್ಪ ಹೆಚ್ಚು ಆರಂಭಿಕ ಬೆಲೆಯನ್ನು ಹೊಂದಿರಬಹುದು ಎಂದು ನಿರೀಕ್ಷಿಸಲಾಗಿದೆ. ಈ ಎಸ್‌ಯುವಿ ಕಿಯಾ ಸೊನೆಟ್, ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯು, ಮಹೀಂದ್ರಾ XUV300, ಮತ್ತು ಮಾರುತಿ ಫ್ರಾಂಕ್ಸ್ ಕ್ರಾಸ್‌ಓವರ್‌ಗೂ ಸಹ ಪ್ರತಿಸ್ಪರ್ಧೆಯನ್ನೊಡ್ಡುತ್ತದೆ.

ಇನ್ನಷ್ಟು ಇಲ್ಲಿ ಓದಿ : ನೆಕ್ಸಾನ್ ಆಟೋಮ್ಯಾಟಿಕ್

r
ಅವರಿಂದ ಪ್ರಕಟಿಸಲಾಗಿದೆ

rohit

  • 60 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಟಾಟಾ ನೆಕ್ಸ್ಂನ್‌

ಪೋಸ್ಟ್ ಕಾಮೆಂಟ್
2 ಕಾಮೆಂಟ್ಗಳು
S
shyam sunder y
Sep 5, 2023, 5:49:56 PM

Best interiors and exteriors good looking I like it

E
endrakanti yadagiri
Sep 5, 2023, 12:36:17 AM

I want New facelift Nexon how many days waiting period

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ