ಟಾಟಾ ನೆಕ್ಸಾನ್ ಪೆಟ್ರೋಲ್ Vs ಫೋರ್ಡ್ ಎಕೋಸ್ಪೋರ್ಟ್ ಪೆಟ್ರೋಲ್ : ನಿಜ ಉಪಯೋಗದ ಕಾರ್ಯದಕ್ಷತೆ ಹಾಗು ಮೈಲೇಜ್ ಹೋಲಿಕೆ
ಟಾಟಾ ನೆಕ್ಸಾನ್ 2017-2020 ಗಾಗಿ sonny ಮೂಲಕ ಮೇ 15, 2019 01:35 pm ರಂದು ಪ್ರಕಟಿಸಲಾಗಿದೆ
- 35 Views
- ಕಾಮೆಂಟ್ ಅನ್ನು ಬರೆಯಿರಿ
ಟಾಟಾ ನೆಕ್ಸಾನ್ ಪೆಟ್ರೋಲ್ ಎಂಜಿನ್ ಹೆಚ್ಚು ಮಿತವ್ಯಯದ, ಆದರೆ ಹೆಚ್ಚು ವೇಗವಾಗಿರುವುದೇ ?
ಫೋರ್ಡ್ ಎಕೋಸ್ಪೋರ್ಟ್ ಎರೆಡು ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಬರುತ್ತದೆ: ಒಂದು 1.5-ಲೀಟರ್ ಡ್ರ್ಯಾಗನ್ ಸರಣಿಯ ಎಂಜಿನ್ ಹಾಗು ಒಂದು 1.0-ಲೀಟರ್ ಏಕೋ ಬೂಸ್ಟ್. ಇದರ 1.5-ಲೀಟರ್, 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಗರಿಷ್ಠವಾದ 123PS ಪವರ್ ಹಾಗು 150Nm ಟಾರ್ಕ್ ಅನ್ನು ಕೊಡುತ್ತದೆ., ಇದನ್ನು 5-ಸ್ಪೀಡ್ ಗೇರ್ ಬಾಕ್ಸ್ ಜೊತೆಗೆ ಅಳವಡಿಸಲಾಗಿದೆ. ಟಾಟಾ ನೆಕ್ಸಾನ್, ಇನ್ನೋಂದುಬದಿಯಲ್ಲಿ ಕೊಡುತ್ತಿರುವ 1.2-ಲೀಟರ್, 3-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಗರಿಷ್ಟ 110PS ಪವರ್ ಹಾಗು 170Nm ಟಾರ್ಕ್ ಕೊಡುವ ಸಾಮರ್ಥ್ಯವನ್ನು ಹೊಂದಿದೆ, ಮತ್ತು ಇದನ್ನು 6-ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಗೆ ಅಳವಡಿಸಲಾಗಿದೆ.
ನಾವು ಎಕೋಸ್ಪೋರ್ಟ್ 1.5 ಹಾಗು ನೆಕ್ಸಾನ್ 1.2 ಅನ್ನು ಇವುಗಳ ಅಧಿಕೃತವಾಗಿ ಹೇಳಿರುವ ಮೈಲೇಜ್ , ಕಾರ್ಯದಕ್ಷತೆ ಗಳು ಸರಿಯಾಗಿವೆಯೇ ಎಂದು ತಿಳಿಯಲು ಹೋಲಿಕೆ ಮಾಡಿದ್ದೇವೆ.
ನಾವು ಈ ಎರಡೂ ಪೆಟ್ರೋಲ್ -ಮಾನ್ಯುಯಲ್ ಸಬ್-4m ಕಾಂಪ್ಯಾಕ್ಟ್ SUV ಗಳ ವೇಗಗತಿ ಅಂಕೆಗಳಿಂದ ಪ್ರಾರಂಭಿಸೋಣ:
0-100kmph |
30-80kmph (3rd gear) |
40-100kpmh (4th gear) |
Quarter Mile |
|
ಟಾಟಾ ನೆಕ್ಸಾನ್ 1.2 P MT |
11.64s |
10.91s |
19.09s |
17.81s@123.21kmph |
ಫೋರ್ಡ್ ಎಕೋಸ್ಪೋರ್ಟ್ 1.5 P MT |
12.12s |
10.2s |
17.59s |
18.26s@123.64kmph |
ನಮ್ಮ ಟೆಸ್ಟ್ ಗಳಲ್ಲಿ ನೆಕ್ಸಾನ್ ತ್ವರಿತವಾಗಿ ನಿಂತಲ್ಲಿನಿಂದ 100kmph ವೇಗ ಪಡೆಯುತ್ತದೆ. ಆದರೆ ಗೇರ್ ಬದಲಾವಣೆ ಒಳಗೊಂಡಿರುವ ಸಮಯಗಳಲ್ಲಿ ಎಕೋಸ್ಪೋರ್ಟ್ ಗೆಲ್ಲುತ್ತದೆ ಏಕೆಂದರೆ ಇದು 30kmph ನಿಂದ 80kmph ವರೆಗೆ ಮೂರನೇ ಗೇರ್ ನಲ್ಲಿ ಟಾಟಾ ಗಿಂತಲೂ 0.71 ಸೆಕೆಂಡ್ ಹೆಚ್ಚು ಬೇಗನೆ ತಲುಪುತ್ತದೆ. ಹಲವು ವೇಳೆ ವೇಗಗತಿ ನೆಗೆತ ಮಾಡುವಾಗಲೂ ಅಂದರೆ 40kmph ನಿಂದ 100kmph ಗೆ ನಾಲ್ಕನೇ ಗೇರ್ ನಲ್ಲಿ 1.5 ಸೆಕೆಂಡ್ ಮಟ್ಟಿಗೆ ಹೆಚ್ಚು ವೇಗಗತಿಯುಳ್ಳದ್ದಾಗಿದೆ, ಹಾಗು ನೆಕ್ಸಾನ್ 0.45 ಸೆಕೆಂಡ್ ಹೆಚ್ಚು ಬೇಗ ಓಡಿತು ನಮ್ಮ ಕ್ವಾರ್ಟರ್ ಮೈಲಿ ಡ್ರ್ಯಾಗ್ ನಲ್ಲಿ. ಎಕೋಸ್ಪೋರ್ಟ್ ನಿಜವಾಗಿಯೂ ಸ್ವಲ್ಪ ಹೆಚ್ಚು ವಾಗವಾಗಿ ಓಡಿತು ಕೊನೆ ಗಳಿಗೆಯಲ್ಲಿ. ಒಟ್ಟಾರೆ, ಟಾಟಾ ನೆಕ್ಸಾನ್ ಪ್ರಾರಂಭದಲ್ಲಿ ಹೆಚ್ಚು ತ್ವರಿತವಾಗಿದೆ, ಆದರೆ ಫೋರ್ಡ್ ಎಕೋಸ್ಪೋರ್ಟ್ ಒಟ್ಟಾರೆ ಹೆಚ್ಚು ವೇಗವುಳ್ಳದ್ದಾಗಿದೆ.
ತ್ವರಿತ ವೇಗಗತಿ ಪಡೆಯುವುದು ಕಾರ್ಯದಕ್ಷತೆಗೆ ಅಳತೆಗೋಲಾಗಿದ್ದರೂ ಸಹ, ಬ್ರೇಕಿಂಗ್ ಕೂಡ ಅಷ್ಟೇ ಮುಖ್ಯ. ಎರೆಡೂ ಕಾರ್ ಗಳಲ್ಲಿ ABS ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ ಆದರೆ ಬರದಲ್ಲಿ ವೆತ್ಯಾಸಗಳಿವೆ( ನೆಕ್ಸಾನ್ ನ ಕೆರ್ಬ್ ವೆಯಿಟ್ 1237kg ಮತ್ತು ಎಕೋಸ್ಪೋರ್ಟ್ 1274kg ಇದೆ )ಮತ್ತು ಭಿನ್ನವಾದ ಟೈರ್ಗಳಲ್ನ್ನು ಉಪಯೋಗಿಸಲಾಗಿದೆ( ನೆಕ್ಸಾನ್ ಟೈರ್ ಗಳು 215/60 R16 ಅಷ್ಟು ಅಗಲವಾಗಿದೆ ಮತ್ತು ಎಕೋಸ್ಪೋರ್ಟ್ 205/60 R16 ಇದೆ ). ಇದರಲ್ಲಿ ಎಷ್ಟು ಭಿನ್ನತೆಗಳು ಇವೆ ನೋಡೋಣ.
100-0kmph |
80-0kmph |
|
ಟಾಟಾ ನೆಕ್ಸಾನ್ 1.2 P MT |
40.63m |
25.58m |
ಫೋರ್ಡ್ ಎಕೋಸ್ಪೋರ್ಟ್ 1.5 P MT |
47.93m |
29.81m |
ನೆಕ್ಸಾನ್ ಎರೆಡೂ ಟೆಸ್ಟ್ ಗಳಲ್ಲಿ ಎಕೋಸ್ಪೋರ್ಟ್ ಗಿಂತ ಬೇಗನೆ ನಿಲ್ಲುತ್ತದೆ - 7.3 ಮೀಟರ್ ಕಡಿಮೆ ದೂರದಲ್ಲಿ 100kmph ನಿಂದ ಮತ್ತು 4.23 ಮೀಟರ್ ಕಡಿಮೆ ದೂರ 80kmph ನಿಂದ.
ಮೈಲೇಜ್ ಅಂಕೆಗಳು
Mileage claimed |
Tested FE - City |
Tested FE -Highway |
|
ಟಾಟಾ ನೆಕ್ಸಾನ್ 1.2 P MT |
17kmpl |
14.03kmpl |
17.89kmpl |
ಫೋರ್ಡ್ ಎಕೋಸ್ಪೋರ್ಟ್ 1.5 P MT |
16.3kmpl (Titanium+) |
12.74kmpl |
17.59kmpl |
ಡ್ರೈವಿಂಗ್ ಗೆ ಸಂಬಂಧಪಟ್ಟಂತೆ ನೆಕ್ಸಾನ್ ನಿಜವಾಗಿಯೂ ಹೆಚ್ಚು ಮೈಲೇಜ್ ಕೊಡುತ್ತದೆ ಫೋರ್ಡ್ ಎಕೋಸ್ಪೋರ್ಟ್ ಗೆ ಹೋಲಿಸಿದಾಗ. ಮತ್ತು ಈ ಎರೆಡೂ ಸಬ್-4m ಕಾಂಪ್ಯಾಕ್ಟ್ SUV ಗಳು ಒಂದೇ ರೀತಿಯ ಮೈಲೇಜ್ ಅಂಕೆ ಗಳನ್ನಿ ಹೈವೇ ವೇಗಗಳಲ್ಲಿ ಕೊಡುತ್ತವೆ. ನಿಮ್ಮ ದಿನಂದಿನ ಉಪಯೋಗ ಹೆಚ್ಚಾಗಿ ನಗರಗಳಲ್ಲಿದ್ದರೆ, ನೆಕ್ಸಾನ್ ಒಂದು ಉತ್ತಮ ಆಯ್ಕೆ, ಅದರಲ್ಲೂ ಹೆಚ್ಚುತ್ತಿರುವ ಇಂಧನದ ಬೆಲೆಗಳನ್ನು ಗಮನಿಸಿದಾಗ.
ಅಂತಿಮ ಅನಿಸಿಕೆ
ಇದು ಒಂದು ಮಿಶ್ರವಾದ ಆಯ್ಕೆ ನೆಕ್ಸಾನ್ ಹಾಗು ಎಕೋಸ್ಪೋರ್ಟ್ ನ ವೇಗಗತಿ ದಕ್ಷತೆಯನ್ನು ನಾವು ಪರಿಗಣಿಸಿದಾಗ. ನೆಕ್ಸಾನ್ ನಿಂತಲ್ಲಿನಿಂದ ತ್ವರಿತವಾಗಿ ವೇಗಗತಿ ಪಡೆಯುತ್ತದೆ, ಎಕೋಸ್ಪೋರ್ಟ್ ಹೋಗುತ್ತಿರುವಾಗ ಹೆಚ್ಚು ಬೇಗನೆ ವೇಗ ಗತಿ ಪಡೆಯುತ್ತದೆ. ಬ್ರೇಕಿಂಗ್ ವಿಚಾರದಲ್ಲಿ ನೆಕ್ಸಾನ್ ಹೆಚ್ಚು ಚೆನ್ನಾಗಿ ನಿಭಾಯಿಸುತ್ತದೆ. ಮೈಲೇಜ್ ವಿಚಾರದಲ್ಲಿ ನೆಕ್ಸಾನ್ ಹೆಚ್ಚು ಒಪ್ಪುತ್ತದೆ ನಗರಗಳಲ್ಲಿ ಉಪಯೋಗಿಸುವುದಕ್ಕೆ, ಎಕೋಸ್ಪೋರ್ಟ್ ಸಹ ಇದೆ ರೀತಿಯ ಮೈಲೇಜ್ ಕೊಡುತ್ತದೆ. ಒಟ್ಟಾರೆ ಇವೆರೆಡರಲ್ಲಿ ಟಾಟಾ ನೆಕ್ಸಾನ್ ಹೆಚ್ಚು ಕಾರ್ಯದಕ್ಷತೆ ಉಳ್ಳ ಪ್ಯಾಕೇಜ್ ಆಗಿದೆ.
Read More on : Nexon AMT