ಟಾಟಾ ಪಂಚ್ EV ಡ್ಯುಯಲ್ 10.25-ಇಂಚಿನ ಡಿಸ್ಪ್ಲೇಸ್ ಮತ್ತು ಅಪ್ಡೇಟ್ ಆಗಿರುವ ಸೆಂಟರ್ ಕನ್ಸೋಲ್ ಅನ್ನು ಪಡೆಯಲಿದೆ
ಟಾಟಾ ಪಂಚ್ ಇವಿ ಗಾಗಿ anonymous ಮೂಲಕ ಜನವರಿ 12, 2024 04:53 pm ರಂದು ಪ್ರಕಟಿಸಲಾಗಿದೆ
- 230 Views
- ಕಾಮೆಂಟ್ ಅನ್ನು ಬರೆಯಿರಿ
ಪಂಚ್ EV ನೆಕ್ಸಾನ್ EV ಯಿಂದ ಕೆಲವು ಫೀಚರ್ ಗಳನ್ನು ಪಡೆದುಕೊಂಡಿದೆ
ಟಾಟಾ ಪಂಚ್ EV ಅನಾವರಣಗೊಂಡ ಸ್ವಲ್ಪ ಸಮಯದ ನಂತರ, ಭಾರತೀಯ ಕಾರು ತಯಾರಕರಾದ ಟಾಟಾ ಈಗ ಈ ಎಲೆಕ್ಟ್ರಿಕ್ ಕಾರಿನ ಕೆಲವು ಟೀಸರ್ ಚಿತ್ರಗಳನ್ನು ಬಿಡುಗಡೆ ಮಾಡುವ ಮೂಲಕ ನಮಗೆ ಅದರ ಕ್ಯಾಬಿನ್ನ ಕಣ್ಣು ಹಾಯಿಸುವ ದೃಶ್ಯವನ್ನು ನೀಡಿದೆ.
ಮೊದಲ ಕೆಲವು ಚಿತ್ರಗಳಲ್ಲಿ, ನಾವು ರಿವೈಸ್ ಆಗಿರುವ ಡ್ಯಾಶ್ಬೋರ್ಡ್ ಮತ್ತು ದೊಡ್ಡದಾದ 10.25-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ನೋಡಬಹುದು. ಚಿತ್ರಗಳಲ್ಲಿ ನಾವು ಹೊಸ ನೆಕ್ಸಾನ್ನಿಂದ ಪಡೆದ ಹೊಸ ಟಚ್-ಸೆನ್ಸಿಟಿವ್ ಎಸಿ ಕಂಟ್ರೋಲ್ ಪ್ಯಾನೆಲ್ ನೊಂದಿಗೆ ಅಪ್ಡೇಟ್ ಆಗಿರುವ ಸೆಂಟರ್ ಕನ್ಸೋಲ್ ಅನ್ನು ಕೂಡ ನೋಡಬಹುದು. ಇದರ ಹೊಸ 2-ಸ್ಪೋಕ್ ಸ್ಟೀರಿಂಗ್ ವೀಲ್ ನಲ್ಲಿ ಟಾಟಾ ನೆಕ್ಸಾನ್ EV ಯಲ್ಲಿ ಇರುವ ಪ್ರಕಾಶಿಸುವ ಟಾಟಾ ಲೋಗೋವನ್ನು ಹೊಂದಿದೆ, ಅದರಲ್ಲಿ ಟಚ್-ಆಧಾರಿತ ಕಂಟ್ರೋಲ್ ಗಳನ್ನು ಕಾಣಬಹುದು.
The images also show the new dual-tone upholstery of the Punch EV. However, it is likely that Tata could offer different interior themes based on the variant chosen, just like on the Nexon.
ಚಿತ್ರಗಳಲ್ಲಿ ಪಂಚ್ EV ಯ ಹೊಸ ಡ್ಯುಯಲ್-ಟೋನ್ ಅಪ್ಹೋಲ್ಸ್ಟರಿಯನ್ನು ಕೂಡ ನೋಡಬಹುದು. ಹಾಗೆಯೇ, ನೆಕ್ಸಾನ್ನಲ್ಲಿರುವಂತೆ ಟಾಟಾ ಅದರ ಆಯ್ಕೆ ಮಾಡಿದ ವೇರಿಯಂಟ್ ನ ಆಧಾರದ ಮೇಲೆ ವಿಭಿನ್ನ ಇಂಟೀರಿಯರ್ ಥೀಮ್ಗಳನ್ನು ನೀಡುವ ಸಾಧ್ಯತೆಯಿದೆ.
ಅಧಿಕೃತ ಸ್ಪೆಸಿಫಿಕೇಷನ್ ಗಳು ಇನ್ನೂ ಹೊರಬರದಿದ್ದರೂ ಕೂಡ, ಪಂಚ್ EV ಹೊಸ Acti.EV ಪ್ಲಾಟ್ಫಾರ್ಮ್ ಅನ್ನು ಆಧರಿಸಿದೆ ಎಂದು ನಮಗೆ ತಿಳಿದಿದೆ. ಹೆಚ್ಚಿನ ವಿವರಗಳಿಗಾಗಿ, ನೀವು ನಮ್ಮ ಹಿಂದಿನ ಲೇಖನವನ್ನು ಓದಬಹುದು.
ಟಾಟಾ ಪಂಚ್ EV ಜನವರಿ 2024 ರ ಅಂತ್ಯದ ವೇಳೆಗೆ ಮಾರುಕಟ್ಟೆಗೆ ಬರಲಿದೆ ಎಂದು ನಮ್ಮ ನಿರೀಕ್ಷೆಯಾಗಿದೆ. ಬೆಲೆಗಳು ಸುಮಾರು ರೂ 12 ಲಕ್ಷದಿಂದ (ಎಕ್ಸ್-ಶೋರೂಮ್) ಪ್ರಾರಂಭವಾಗುವ ಸಾಧ್ಯತೆಯಿದೆ. ತನ್ನದೇ ಬ್ರಾಂಡ್ ನ ಕಾರುಗಳಾದ ಟಾಟಾ ಟಿಗೊರ್ / ಟಿಯಾಗೊ EV ಯ ಪರ್ಯಾಯ ಆಯ್ಕೆಯಾಗಲಿರುವ ಆಲ್-ಎಲೆಕ್ಟ್ರಿಕ್ ಪಂಚ್, ಸಿಟ್ರೋನ್ eC3 ಅಂತಹ ಕಾರುಗಳಿಗೆ ಸ್ಪರ್ಧೆಯನ್ನು ನೀಡಲಿದೆ.
ಇನ್ನಷ್ಟು ಓದಿ: ಟಾಟಾ ಪಂಚ್ AMT
0 out of 0 found this helpful