WPLನಲ್ಲಿ ಸಿಕ್ಸ್ ಬಾರಿಸಿ Tata Punch EV ಗಾಜನ್ನು ಛಿಧ್ರಗೊಳಿಸಿದ್ದ ಮಹಿಳಾ ಕ್ರಿಕೆಟರ್ ಎಲ್ಲಿಸ್ ಪೆರ್ರಿಗೆ ಸಿಕ್ತು ವಿಶೇಷ ಗಿಫ್ಟ್!
ಪಂಚ್ ಇವಿಯು ಟಾಟಾ ಡಬ್ಲ್ಯುಪಿಎಲ್ (ಮಹಿಳಾ ಪ್ರೀಮಿಯರ್ ಲೀಗ್) 2024 ರ ಅಧಿಕೃತ ಕಾರಾಗಿತ್ತು ಮತ್ತು ಪಂದ್ಯಗಳ ಸಮಯದಲ್ಲಿ ಮೈದಾನದ ಬಳಿ ಪ್ರದರ್ಶನಕ್ಕೆ ಇಡಲಾಗಿತ್ತು.
ಬ್ರೋಕನ್ ಗ್ಲಾಸ್‌ನ ಕಥೆ ಏನು ?
ಮಹಿಳೆಯರ ಪ್ರೀಮಿಯರ್ ಲೀಗ್ ನ ಈ ಸೀಸನ್‌ನ ಅಧಿಕೃತ ಕಾರ್ ಆಗಿ, ಪಂಚ್ ಇವಿಯನ್ನು ಪ್ರತಿ ಪಂದ್ಯದಲ್ಲೂ ಪ್ರದರ್ಶಿಸಲಾಗಿತ್ತು. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಯುಪಿ ವಾರಿಯರ್ಸ್ ನಡುವೆ ನಡೆದ ಈ ಲೀಗ್‌ನ ಕೊನೆಯ ಪಂದ್ಯದ ವೇಳೆಯಲ್ಲಿ ಆರ್‌ಸಿಬಿ ಪರ ಆಲ್‌ರೌಂಡರ್ ಪ್ರದರ್ಶನ ನೀಡುತ್ತಿರುವ ಎಲ್ಲಿಸಾ ಪೆರ್ರಿ ಹೊಡೆದ ಸಿಕ್ಸರ್‌ನಿಂದ ಪಂಚ್ ಇವಿಯ ಹಿಂಭಾಗದ ಕಿಟಕಿ ಗಾಜು ಪುಡಿಪುಡಿಯಾಗಿದೆ.
ಎಲ್ಲಿಸ್ ಚೆಂಡನ್ನು ಎತ್ತರಕ್ಕೆ ಮತ್ತು ಸ್ಟ್ಯಾಂಡ್‌ಗಳ ಕಡೆಗೆ ಹೊಡೆದ ಬಾಲ್ ಪಂಚ್ ಇವಿಯ ಹಿಂದಿನ ಬಾಗಿಲಿನ ಕಿಟಕಿಗೆ ಬಡಿದಿದೆ, ಇದರ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. WPL 2024 ಫೈನಲ್‌ಗೆ ಕೆಲ ದಿನಗಳ ಹಿಂದೆ ನಡೆದ ಈ ಪಂದ್ಯದಲ್ಲಿ ಇವರ ಅಮೋಘ ಪ್ರದರ್ಶನಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತು. ಅಲ್ಲದೆ ಟಾಟಾದಿಂದ ಇನ್ನೊಂದು ವಿಶೇಷ ಉಡುಗೊರೆ ಸಿಕ್ಕಿದೆ. ಹೌದು, ತನ್ನ ಸಿಕ್ಸರ್‌ನಿಂದ ಛಿಧ್ರಗೊಳಿಸಿದ ಪಂಚ್ ಇವಿಯ ಗಾಜನ್ನು ಫ್ರೇಮ್ ಹಾಕಿ ನೀಡಲಾಗಿದೆ. ಟಾಟಾ ಅವರು ಪಂದ್ಯದಲ್ಲಿ "ಗ್ಲಾಸ್ ಬ್ರೇಕಿಂಗ್" ಪ್ರದರ್ಶನಕ್ಕಾಗಿ ಎಲ್ಲಿಸ್ ಅವರನ್ನು ಶ್ಲಾಘಿಸಿದರು ಮತ್ತು ಮುರಿದ ಗಾಜಿನ ಬಿಟ್‌ಗಳನ್ನು ಎಲ್ಲಿಸ್ ಪೆರಿಗೆ ಉಡುಗೊರೆಯಾಗಿ ನೀಡುವ ಕ್ಷಣದ ಫೋಟೊವನ್ನು ಪಂಚ್ EV ಯ ಅಧಿಕೃತ ಖಾತೆಯಲ್ಲಿ ಪೊಸ್ಟ್ ಮಾಡಲಾಗಿದೆ.
ಪ್ರತಿ ಬಾರಿ ಆಟಗಾರನು ಪ್ರದರ್ಶನಕ್ಕಿಟ್ಟ ಕಾರಿಗೆ ಹೊಡೆದಾಗ 5 ಲಕ್ಷ ರೂಪಾಯಿಗಳನ್ನು ಚಾರಿಟೇಬಲ್ ಉದ್ದೇಶಕ್ಕೆ ದೇಣಿಗೆ ನೀಡುವುದಾಗಿ ಟಾಟಾದ ಈ ಮೊದಲೇ ಘೋಷಣೆಯನ್ನು ಮಾಡಿತ್ತು. ಕೋಲ್ಕತ್ತಾದ ಟಾಟಾ ಮೆಮೋರಿಯಲ್ ಆಸ್ಪತ್ರೆಯಲ್ಲಿ ಸೌರ ಫಲಕಗಳ ಸ್ಥಾಪನೆಗೆ ಅದೇ ಮೊತ್ತದ ಕೊಡುಗೆಯನ್ನು ಘೋಷಿಸುವ ಮೂಲಕ ಕಂಪನಿಯು ತನ್ನ ಬದ್ಧತೆಯನ್ನು ತೋರ್ಪಡಿಸಿದೆ. ಆದರೆ ಈವರೆಗೆ ಬೇರೆ ಯಾವುದೇ ಆಟಗಾರ್ತಿಯು ಕಾರಿಗೆ ತಾಗುವಂತೆ ಬಾಲ್ ಅನ್ನು ಹೊಡೆಯಲು ಸಾಧ್ಯವಾಗದ ಕಾರಣ, ಎಲ್ಲಿಸ್ ಅವರ ಈ ಅದ್ಭುತ ಸಿಕ್ಸರ್ ಹೆಚ್ಚು ಸ್ಮರಣೀಯವಾಗಿಸುತ್ತದೆ.
ಇದನ್ನು ಸಹ ಓದಿ: ವಿದೇಶದಲ್ಲಿ Hyundai Creta EVಯನ್ನು ರಹಸ್ಯವಾಗಿ ಟೆಸ್ಟಿಂಗ್, ಭಾರತದಲ್ಲಿ 2025ರ ವೇಳೆಗೆ ಬಿಡುಗಡೆ ಸಾಧ್ಯತೆ
ಪಂಚ್ EV ಬಗ್ಗೆ ಇನ್ನಷ್ಟು
ಟಾಟಾ ಪಂಚ್ EV ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತದೆ - MR (ಮಿಡಿಯಮ್ ರೇಂಜ್) ಮತ್ತು LR (ಲಾಂಗ್ ರೇಂಜ್) - ಮತ್ತು ಅವುಗಳ ವಿಶೇಷಣಗಳನ್ನು ಕೆಳಗೆ ವಿವರಿಸಲಾಗಿದೆ:
ವೇರಿಯೆಂಟ್ |
ಎಂಆರ್ |
ಲಾಂಗ್ ರೇಂಜ್ |
ಬ್ಯಾಟರಿ ಪ್ಯಾಕ್ |
25 ಕಿ.ವ್ಯಾಟ್ |
35 ಕಿ.ವ್ಯಾಟ್ |
ಪವರ್ |
82 ಪಿಎಸ್ |
122 ಪಿಎಸ್ |
ಟಾರ್ಕ್ |
114 ಎನ್ಎಂ |
190 ಎನ್ಎಂ |
ಕ್ಲೇಮ್ ಮಾಡಿರುವ ರೇಂಜ್ (MIDC ರೇಟ್) |
315 ಕಿ.ಮೀ |
421 ಕಿ.ಮೀ |
ವೈಶಿಷ್ಟ್ಯಗಳು ಮತ್ತು ಸುರಕ್ಷತೆ
ಟಾಟಾ ಪಂಚ್ ಇವಿಯು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಎಲೆಕ್ಟ್ರಿಕ್ ಸನ್‌ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಕ್ರೂಸ್ ಕಂಟ್ರೋಲ್ ಮತ್ತು ಏರ್ ಪ್ಯೂರಿಫೈಯರ್‌ನಂತಹ ಸೌಕರ್ಯಗಳನ್ನು ಹೊಂದಿದೆ..
ಪ್ರಯಾಣಿಕರ ಸುರಕ್ಷತೆಯನ್ನು ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್‌ಗಳು ನೋಡಿಕೊಳ್ಳುತ್ತವೆ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ದೆಹಲಿಯಲ್ಲಿ ಟಾಟಾ ಪಂಚ್ ಇವಿಯ ಎಕ್ಸ್ ಶೋರೂಂ ಬೆಲೆ ರೂ 10.99 ಲಕ್ಷ ರೂ.ನಿಂದ 15.49 ಲಕ್ಷ ರೂ.ವರೆಗೆ ಇರಲಿದೆ. ಇದು Citroen eC3 ನಂತಹವುಗಳ ವಿರುದ್ಧ ಮಾರುಕಟ್ಟೆಯಲ್ಲಿ ಸ್ಪರ್ಧಿಸುತ್ತದೆ ಮತ್ತು ಟಾಟಾ ನೆಕ್ಸಾನ್ ಇವಿಗೆ ಕೈಗೆಟುಕುವ ಆಯ್ಕೆಯಾಗಿದ್ದು, ಟಾಟಾ ಟಿಯಾಗೊ ಇವಿಗೆ ಪ್ರೀಮಿಯಂ ಪರ್ಯಾಯವಾಗಿ ಪರಿಗಣಿಸಬಹುದು.
ಇನ್ನಷ್ಟು ಓದಿ: ಟಾಟಾ ಪಂಚ್ ಇವಿ ಆಟೋಮ್ಯಾಟಿಕ್