• English
    • Login / Register

    ಟಾಟಾ ನೆಕ್ಸನ್‌ EV ಫೇಸ್‌ ಲಿಫ್ಟ್‌ ಮತ್ತು ICE ಆವೃತ್ತಿ ನಡುವಿನ ಹೋಲಿಕೆ: ಯಾವುದು ಉತ್ತಮ ?

    ಟಾಟಾ ನೆಕ್ಸಾನ್ ಇವಿ ಗಾಗಿ ansh ಮೂಲಕ ಸೆಪ್ಟೆಂಬರ್ 11, 2023 12:10 pm ರಂದು ಪ್ರಕಟಿಸಲಾಗಿದೆ

    • 23 Views
    • ಕಾಮೆಂಟ್‌ ಅನ್ನು ಬರೆಯಿರಿ

    ಹೊಸ ಎಲೆಕ್ಟ್ರಿಕ್‌ ನೆಕ್ಸನ್‌ ವಾಹನವು ವಿನ್ಯಾಸ, ಇನ್ಫೊಟೈನ್‌ ಮೆಂಟ್‌ ಮತ್ತು ಸುರಕ್ಷತೆಯ ವಿಚಾರದಲ್ಲಿ ಸಾಕಷ್ಟು ನವೀನತೆಯನ್ನು ಪಡೆದಿದೆ.

    Facelifted Tata Nexon EV vs Facelifted Tata Nexon

    ನವೀಕೃತ ಟಾಟಾ ನೆಕ್ಸನ್‌ EV ವಾಹನದ ವೈಶಿಷ್ಟ್ಯಗಳು ಮತ್ತು ವಿವರಗಳನ್ನು ಬಹಿರಂಗಗೊಳಿಸಲಾಗಿದೆ. ಟಾಟಾ ಸಂಸ್ಥೆಯು ಈ ವಾಹನವನ್ನು ಸಹ ಇತ್ತೀಚಿಗೆ ಬಿಡುಗಡೆಗೊಂಡ ನೆಕ್ಸನ್‌ ಫೇಸ್‌ ಲಿಫ್ಟ್ ಕಾರಿನಂತೆಯೇ ಅಂದಗೊಳಿಸಿದ್ದರೂ EV ವಾಹನಕ್ಕೆ ಅನ್ವಯವಾಗುವ ಬದಲಾವಣೆಗಳಿಗೆ ಒತ್ತು ನೀಡಿದೆ. ಆದರೆ ಸೌಂದರ್ಯಕ್ಕೆ ಸಂಬಂಧಿಸಿದ ಬದಲಾವಣೆಗಳು ಮತ್ತು ಪವರ್‌ ಟ್ರೇನ್‌ ಗಳು ಮಾತ್ರವೇ ಈ ಎರಡು ವಾಹನಗಳಲ್ಲಿರುವ ಭಿನ್ನತೆಗಳಲ್ಲ. ಬದಲಾಗಿ ಹೊಸ ನೆಕ್ಸನ್‌ EV ಕಾರು ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ರಸ್ತೆಗೆ ಇಳಿಯಲಿದೆ.

    ಹೊಸ ಬಣ್ಣ,  ಭಿನ್ನವಾದ ಲುಕ್

    Tata Nexon EV Empowered Oxide

    ಎಲೆಕ್ಟ್ರಿಕ್‌ ಮತ್ತು ICE ನೆಕ್ಸನ್‌ ನಡುವಿನ ಅತ್ಯಂತ ದೊಡ್ಡ ವ್ಯತ್ಯಾಸವೆಂದರೆ, ಅದರ ಮುಂಭಾಗ. ಈ ಬದಲಾವಣೆಯನ್ನು ಸುಲಭವಾಗಿ ಗುರುತಿಸಬಹುದು. ಇಲ್ಲಿ, ನೆಕ್ಸನ್‌ EV ವಾಹನವು ಕ್ಲೋಸ್ಡ್‌ ಆಫ್‌ ಗ್ರಿಲ್‌ ಸುತ್ತಲೂ ಫೇಶಿಯಕ್ಕೆ DRL ಸ್ಟ್ರಿಪ್‌ ಅನ್ನು ಪಡೆಯಲಿದೆ. ಚಾರ್ಜ್‌ ಮಾಡುವಾಗ ಇದು ಮಿನುಗಿ ಸ್ಪಂದಿಸುವ ಮೂಲಕ ಎಷ್ಟು ಚಾರ್ಜ್‌ ಆಗಿದೆ ಎಂಬುದನ್ನು ತೋರಿಸುತ್ತದೆ.

    ಇದನ್ನು ಸಹ ಓದಿರಿ: ಟಾಟಾ ನೆಕ್ಸನ್ EV ಫೇಸ್‌ ಲಿಫ್ಟ್ ವೇರಿಯಂಟ್‌ ಗಳಲ್ಲಿ ಬಣ್ಣಗಳ ಆಯ್ಕೆಗಳು

    ಅಲ್ಲದೆ, ಟಾಟಾ ಸಂಸ್ಥೆಯು ಟಾಪ್‌ ಸ್ಪೆಕ್‌ ನೆಕ್ಸನ್‌ EV ಎಂಪವರ್ಡ್‌ ವೇರಿಯಂಟ್‌ (ಟಾಟಾವು ಇದನ್ನು ಈಗ ಪರ್ಸೋನಾ ಎಂದು ಕರೆಯುತ್ತದೆ) ವಾಹನಕ್ಕೆ “ಎಂಪವರ್ಡ್‌ ಆಕ್ಸೈಡ್”‌ ಬಣ್ಣದ ಆಯ್ಕೆಯನ್ನು ಸೇರಿಸಿದೆ. ಇದನ್ನು ಅಟೋ ಎಕ್ಸ್ಪೋ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾದ  ಸಿಯೆರಾ EV ಪರಿಕಲ್ಪನೆಯಿಂದ ಎರವಲು ಪಡೆಯಲಾಗಿದೆ.

     

    ದೊಡ್ಡದಾದ ಮತ್ತು ಉತ್ತಮ ಮಟ್ಟದ ಇನ್ಫೋಟೈನ್‌ ಮೆಂಟ್

    Tata Nexon EV 12.3-inch Touchscreen

    ICE (ಇಂಟರ್ನಲ್‌ ಕಂಬಶನ್‌ ಎಂಜಿನ್)‌ ನೆಕ್ಸನ್‌ ಫೇಸ್‌ ಲಿಫ್ಟ್‌ ವಾಹನವು ಈಗಾಗಲೇ ದೊಡ್ಡದಾದ 10.25 ಇಂಚಿನ ಟಚ್‌ ಸ್ಕ್ರೀನ್‌ ಇನ್ಫೋಟೈನ್‌ ಮೆಂಟ್‌ ಸಿಸ್ಟಂ ಅನ್ನು ಒದಗಿಸುತ್ತದೆ. ಆದರೆ ಹೊಸ ನೆಕ್ಸನ್‌ EV ಮಾದರಿಯು ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿ ದೊಡ್ಡದಾದ 12.3 ಇಂಚಿನ ಯೂನಿಟ್‌ ಅನ್ನು ಒದಗಿಸಲಿದೆ.

    Tata Nexon EV Arcade.ev

     ಪರಿಷ್ಕೃತ ನೆಕ್ಸನ್‌ ವಾಹನದಲ್ಲಿರುವ ಇನ್ಫೊಟೈನ್‌ ಮೆಂಟ್‌ ವಾಹನದಂತೆಯೇ, ಇದು ಸಹ ವೈರ್‌ ಲೆಸ್‌ ಆಂಡ್ರಾಯ್ಡ್‌ ಅಟೋ ಮತ್ತು ಆಪಲ್‌ ಕಾರ್‌ ಪ್ಲೇಯನ್ನು ಆಧರಿಸಲಿದೆ. ಆದರೆ ICE ನೆಕ್ಸನ್‌ ಮಾದರಿಗೆ ಹೋಲಿಸಿದರೆ ನೆಕ್ಸನ್‌ EV ಫೇಸ್‌ ಲಿಫ್ಟ್‌ ಕಾರು, Arcade.ev ಎಂಬ ವೈಶಿಷ್ಟ್ಯವನ್ನು ಹೊಂದಿದೆ. Arcade.ev ಎನ್ನುವುದು ಒಂದು ಆಪ್‌ ಆಗಿದ್ದು, ಪರಿಷ್ಕೃತ ನೆಕ್ಸನ್‌ EV ವಾಹನದ 10.25 ಇಂಚಿನ ಮತ್ತು 12.3 ಇಂಚಿನ ಪರದೆಗಳಲ್ಲಿ ವಿವಿಧ ಬಗೆಯ ಆಪ್‌ ಗಳನ್ನು ಡೌನ್‌ಲೋಡ್‌ ಮಾಡಿ ಬಳಸಲು ನಿಮಗೆ ಅನುವು ಮಾಡಿ ಕೊಡುತ್ತದೆ. ಈ ವೈಶಿಷ್ಟ್ಯವನ್ನು ಬಳಸಿ ನೀವು ಗೇಮ್‌ ಗಳನ್ನು ಆಡಬಹುದು, ಸಂಗೀತದ ಆಪ್‌ ಗಳನ್ನು ಡೌನ್ಲೋಡ್‌ ಮಾಡಬಹುದು ಮತ್ತು ನೆಟ್‌ ಫ್ಲಿಕ್ಸ್‌, ಹಾಟ್‌ ಸ್ಟಾರ್‌ ಮತ್ತು ಅಮೆಜಾನ್‌ ಪ್ರೈಂ ವೀಡಿಯೋ ಮುಂತಾದ OTT ಆಪ್‌ ಗಳ ಮೂಲಕ ವೀಡಿಯೋಗಳನ್ನು ನೋಡಬಹುದು. ಈ ಎಲೆಕ್ಟ್ರಿಕ್‌ SUV ಯನ್ನು ಚಾರ್ಜಿಂಗ್‌ ಗೆ ಸಂಪರ್ಕಿಸಿದಾಗ ಸಮಯ ಕಳೆಯುವುದಕ್ಕಾಗಿ ಈ ವೈಶಿಷ್ಟ್ಯವನ್ನು ಒದಗಿಸಲಾಗಿದೆ. ಅಲ್ಲದೆ ಚಾಲಕನಿಗೆ ಗಮನಭಂಗ ಉಂಟಾಗುವುದನ್ನು ತಪ್ಪಿಸುವುದಕ್ಕಾಗಿ ಈ ಸೌಲಭ್ಯವು ವಾಹನ ಚಾಲನೆಯಲ್ಲಿರುವಾಗ ದೊರೆಯುವುದಿಲ್ಲ.

    ಹೆಚ್ಚುವರಿ ಸುರಕ್ಷಾ ವ್ಯವಸ್ಥೆಗಳು

    Tata Nexon EV All-wheel Disc Brakes

    ನೆಕ್ಸನ್ EV ಮತ್ತು ನೆಕ್ಸನ್ ICE‌ ವಾಹನಗಳೆರಡೂ 6 ಏರ್‌ ಬ್ಯಾಗುಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಕಂಟ್ರೋಲ್ (ESC), ಟಯರ್‌ ಪ್ರೆಶರ್‌ ಮಾನಿಟರಿಂಗ್‌ ಸಿಸ್ಟಂ (TPMS), ಹಿಲ್‌ ಹೋಲ್ಡ್‌ ಅಸಿಸ್ಟ್‌ ಮತ್ತು ಬ್ಲೈಂಡ್‌ ವ್ಯೂ ಮಾನಿಟರ್‌ ಜೊತೆಗೆ 360 ಡಿಗ್ರಿ ಕ್ಯಾಮರಾ ಮುಂತಾದ ಸುರಕ್ಷಾ ಸೌಲಭ್ಯಗಳನ್ನು ಹೊಂದಿವೆ. ಆದರೆ ನೆಕ್ಸನ್‌ EV ಜೊತೆಗೆ ನೀವು ಹೆಚ್ಚಿನ ಅನುಕೂಲತೆ ಮತ್ತು ಸುರಕ್ಷತೆಗಾಗಿ ಎಲೆಕ್ಟ್ರಾನಿಕ್‌ ಪಾರ್ಕಿಂಗ್‌ ಬ್ರೇಕ್‌ ಮತ್ತು ಆಲ್‌ ವೀಲ್‌ ಡಿಸ್ಕ್‌ ಬ್ರೇಕ್‌ ಗಳನ್ನು ಸಹ ಪಡೆಯಲಿದ್ದೀರಿ.

    Tata Nexon EV Electronic Parking Brake

    ನೆಕ್ಸನ್‌ EV ಫೇಸ್‌ ಲಿಫ್ಟ್‌ ವಾಹನದ ವೇರಿಯಂಟ್‌ ಪಟ್ಟಿಯಲ್ಲಿ ಮಾಡಲಾಗಿರುವ ಬದಲಾವಣೆಗಳು, ಬ್ಯಾಟರಿ ಮತ್ತು ಪವರ್‌ ಟ್ರೇನ್‌ ಕುರಿತು ಇನ್ನಷ್ಟು ಮಾಹಿತಿಯನ್ನು ಪಡೆಯಲು ಈ ವಾಹನದ  ಬಿಡುಗಡೆಯ ಕುರಿತ ನಮ್ಮ ವರದಿಯನ್ನು ಓದಿರಿ.

     

    ನಿರೀಕ್ಷಿತ ಬಿಡುಗಡೆ ಮತ್ತು ಬೆಲೆಗಳು

    Tata Nexon EV

    ಕೆಲವು ದಿನಗಳ ಅಂತರದಲ್ಲಿಯೇ ಬಿಡುಗಡೆಯಾಗಿದ್ದರೂ ಸಹ ಎರಡೂ ಕಾರುಗಳ ಬೆಲೆಗಳು ಸೆಪ್ಟೆಂಬರ್ 14ರಂದು ಬಹಿರಂಗಗೊಳ್ಳಲಿವೆ. ಪರಿಷ್ಕೃತ ಟಾಟಾ ನೆಕ್ಸನ್‌ ವಾಹನದ ಬೆಲೆಯು ರೂ. 8 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭಗೊಂಡರೆ ಪರಿಷ್ಕೃತ ನೆಕ್ಸನ್ EV‌ ವಾಹನದ ಬೆಲೆಯು ರೂ. 15 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭಗೊಳ್ಳಲಿದೆ. ICE ನೆಕ್ಸನ್‌ ವಾಹನವು ಕಿಯಾ ಸೋನೆಟ್, ಹ್ಯುಂಡೈ ವೆನ್ಯು, ಮಹೀಂದ್ರಾ XUV300 ಮತ್ತು ಮಾರುತಿ ಬ್ರೆಜ್ಜಾದ ಸ್ಪರ್ಧಿಸಲಿದ್ದು, ನೆಕ್ಸನ್ EV‌ ಮಾದರಿಯು ಮಹೀಂದ್ರಾ XUV400 ಮಾದರಿಗೆ ಪೈಪೋಟಿ ನೀಡಲಿದೆ.

    ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ನೆಕ್ಸನ್ ಆಟೋಮ್ಯಾಟಿಕ್

    was this article helpful ?

    Write your Comment on Tata ನೆಕ್ಸಾನ್ ಇವಿ

    explore similar ಕಾರುಗಳು

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಲೆಕ್ಟ್ರಿಕ್ ಕಾರುಗಳು

    • ಪಾಪ್ಯುಲರ್
    • ಉಪಕಮಿಂಗ್
    ×
    We need your ನಗರ to customize your experience