• English
  • Login / Register

ಸೆ.14 ರಂದು ಮಾರುಕಟ್ಟೆಗೆ ಬರಲಿವೆ ನವೀಕೃತ ಟಾಟಾ ನೆಕ್ಸಾನ್ ಮತ್ತು ನೆಕ್ಸಾನ್ ಇವಿ

ಟಾಟಾ ನೆಕ್ಸಾನ್‌ ಗಾಗಿ tarun ಮೂಲಕ ಆಗಸ್ಟ್‌ 28, 2023 11:57 am ರಂದು ಪ್ರಕಟಿಸಲಾಗಿದೆ

  • 30 Views
  • ಕಾಮೆಂಟ್‌ ಅನ್ನು ಬರೆಯಿರಿ

ಹೊಸ ನೆಕ್ಸಾನ್ ವಿನ್ಯಾಸ ಮತ್ತು ವೈಶಿಷ್ಟ್ಯಗಳ ವಿಷಯದಲ್ಲಿ ಹೆಚ್ಚು ಪ್ರೀಮಿಯಂ ಆಗಿರುತ್ತದೆ

Tata Nexon 2023

  •  ನೆಕ್ಸಾನ್ ಮತ್ತು ಅದರ ಇವಿ ಆವೃತ್ತಿಯು ಕರ್ವ್ ಮತ್ತು ಹ್ಯಾರಿಯರ್‌ನಿಂದ ಸ್ಪೂರ್ತಿ ಪಡೆದು ಒಳಗೆ ಮತ್ತು ಹೊರಗೆ ಟಾಟಾದ ಹೊಸ ವಿನ್ಯಾಸವನ್ನು ಪಡೆಯುತ್ತಿದೆ.
  •  ಟಚ್-ಆಧಾರಿತ ಎಸಿ ಪ್ಯಾನಲ್, 10.25-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್ ಮತ್ತು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಇದರಲ್ಲಿನ ನಿರೀಕ್ಷಿತ ಫೀಚರ್‌ಗಳಾಗಿವೆ.
  •   ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮಾರಾ ಮತ್ತು ಮುಂಭಾಗ ಹಾಗೂ ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಅಳವಡಿಸುವುದರ ಮೂಲಕ ಸುರಕ್ಷತೆಯನ್ನು ಹೆಚ್ಚಿಸಲಾಗುತ್ತಿದೆ.
  •  ಹೊಸ ನೆಕ್ಸಾನ್ ಡಿಸೇಲ್ ಎಂಜಿನ್ ಅನ್ನು ಉಳಿಸಿಕೊಂಡು ಹೆಚ್ಚು ಶಕ್ತಿಶಾಲಿ 1.2 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಪಡೆಯುವ ಸಾಧ್ಯತೆಯಿದೆ.
  •  ನೆಕ್ಸಾನ್ ಇವಿಯ ಪವರ್‌ಟ್ರೇನ್ ಕುರಿತು ಇನ್ನೂ ಯಾವುದೇ ವರದಿಯಿಲ್ಲ.

 ನವೀಕೃತ ಟಾಟಾ ನೆಕ್ಸಾನ್ ಅಂತಿಮವಾಗಿ ಬಿಡುಗಡೆ ದಿನಾಂಕವನ್ನು ಹೊಂದಿದ್ದು ಇದು ಸೆಪ್ಟೆಂಬರ್ 14 ರಂದು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ. ಟಾಟಾ ತನ್ನ ಎಸ್‌ಯುವಿಗೆ ಸೌಮ್ಯ ಅಪ್‌ಡೇಟ್‌ಗಳನ್ನು ಹಲವು ವರ್ಷಗಳಿಂದ ನೀಡುತ್ತಿದ್ದರೆ, ಇದು 2020 ರಿಂದ ಅವರ ಮೊದಲ ಪ್ರಮುಖ ಅಪ್‌ಗ್ರೇಡ್ ಆಗಿರುತ್ತದೆ. ಈ ನವೀಕೃತ ನೆಕ್ಸಾನ್ EV ಅದೇ ವಿನ್ಯಾಸ ಮತ್ತು ವೈಶಿಷ್ಟ್ಯ ಬದಲಾವಣೆಯನ್ನು ಪಡೆಯಲು ಬಾಕಿಯಿದ್ದು ಅದೇ ದಿನ ಮಾರುಕಟ್ಟೆಗೆ ಲಗ್ಗೆಯಿಡಲಿದೆ.

 ನವೀನ ವಿನ್ಯಾಸ

Tata Nexon 2023 Front Profile

ಸ್ಪೈಶಾಟ್‌ಗಳ ಪ್ರಕಾರ, ನವೀಕೃತ ನೆಕ್ಸಾನ್ ಸಂಪೂರ್ಣವಾಗಿ ಹೊಸದಾದ ವಿನ್ಯಾಸವನ್ನು ಹೊಂದಿದೆ. ಮುಂಭಾಗದ ಪ್ರೊಫೈಲ್ ಪೂರ್ಣ ಉದ್ದದ LED DRL, ಸ್ಲೀಕ್ ಗ್ರಿಲ್, ಸ್ಪ್ಲಿಟ್ ಹೆಡ್‌ಲ್ಯಾಂಪ್‌ ವಿನ್ಯಾಸ ಮತ್ತು ಶಾರ್ಪರ್ ಬಂಪರ್‌ಗಳನ್ನು ಪಡೆದು ಟಾಟಾ ಕರ್ವ್ ಮತ್ತು ಹ್ಯಾರಿಯರ್‌ನಿಂದ ಸ್ಪೂರ್ತಿ ಹೊಂದಿದೆ.

 ನವೀಕೃತ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯಲ್ಲಿ ಅಲಾಯ್ ವ್ಹೀಲ್‌ಗಳನ್ನು ಮರುವಿನ್ಯಾಸಗೊಳಿಸಲಾಗುತ್ತಿದೆ. ಹಿಂಭಾಗದಲ್ಲಿ, ನಾವು ಸಂಪರ್ಕಿತ LED ಟೈಲ್‌ಲೈಟ್‌ಗಳು, ಮರುವಿನ್ಯಾಸಗೊಳಿಸಲಾದ ಬಂಪರ್‌ ಮತ್ತು ಹೆಚ್ಚು ಸ್ಪಷ್ಟವಾದ ಬೂಟ್ ಅನ್ನು ನೋಡಬಹುದು. ಇದೇ ರೀತಿಯ ಬದಲಾವಣೆಗಳನ್ನು ನೆಕ್ಸಾನ್ ಇವಿಯಲ್ಲಿ ವಿಶೇಷ ದೃಶ್ಯ ಎಲಿಮೆಂಟ್‌ಗಳೊಂದಿಗೆ ನಿರೀಕ್ಷಿಸಲಾಗಿದೆ.

 

ಹೊಸದಾದ ಇಂಟೀರಿಯರ್‌ಗಳು

 ನೆಕ್ಸಾನ್ ಇವಿ ಮತ್ತು ಅದರ ಇವಿ ಆವೃತ್ತಿಯು ಕ್ಯಾಬಿನ್ ಅಲ್ಲಿ ಗಮನಾರ್ಹ ಬದಲಾವಣೆಯನ್ನು ಪಡೆದಿದೆ. ನವೀಕೃತ ನೆಕ್ಸಾನ್ ಹೊಸ 2-ಸ್ಪೋಕ್ ಸ್ಟೀರಿಂಗ್ ವ್ಹೀಲ್, ಟಚ್-ಆಧಾರಿತ ಕ್ಲೈಮೆಟ್ ಕಂಟ್ರೋಲ್ ಪ್ಯಾನಲ್, ಪರಿಷ್ಕೃತ ಸೀಟ್ ಮೇಲ್ಗವಸುಗಳನ್ನು ಪಡೆಯಲಿದೆ. ಇದೇ ಬದಲಾವಣೆಗಳು ನೆಕ್ಸಾನ್ ಇವಿ ಆವೃತ್ತಿಯೂ ಸಹ ಪಡೆಯಬೇಕು.

Tata Nexon 2023

  

ಹೆಚ್ಚಿನ ಫೀಚರ್‌ಗಳು

ನವೀಕೃತ ನೆಕ್ಸಾನ್ 10.25-ಇಂಚಿನ ಟಚ್‌ಸ್ಕ್ರೀನ್ ಇನ್‌ಫೊಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮರಾ ಮತ್ತು ಹಿಂಭಾಗ ಹಾಗೂ ಮುಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಪಡೆಯಲಿದೆ. ನೆಕ್ಸಾನ್ ಇವಿ ಮತ್ತು ಅದರ ICE ಆವೃತ್ತಿಯು ADAS (ಸುಧಾರಿತ ಚಾಲಕ ಸಹಾಯ ವ್ಯವಸ್ಥೆ) ಅನ್ನು ಸಹ ಪಡೆಯಬಹುದು, ಇದು ಈ ಸುರಕ್ಷತಾ ಫೀಚರ್‌ ಅನ್ನು ಪಡೆಯುವ ಮೊದ ಸಬ್-4 ಮೀಟರ್ ಎಸ್‌ಯುವಿ ಆಗಿರುತ್ತದೆ.

 ಇದನ್ನೂ ಓದಿ: ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳು

 

ಹೊಸ ನೆಕ್ಸಾನ್ ಪವರ್‌ಟ್ರೇನ್‌ಗಳು

2023 Tata Nexon Rear Spied

ನೆಕ್ಸಾನ್ ಅನ್ನು ಪೆಟ್ರೋಲ್, ಡಿಸೇಲ್ ಮತ್ತು ಸಹಜವಾಗಿ ಎಲೆಕ್ಟ್ರಿಕ್ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ನೀಡಲಾಗುವುದು. ಇದು 1.5 ಲೀಟರ್ ಡಿಸೇಲ್ ಎಂಜಿನ್ (6-ಸ್ಪೀಡ್ ಮ್ಯಾನ್ಯುವಲ್ ಮತ್ತು AMT ಆಯ್ಕೆಗಳು) ಅನ್ನು ಉಳಿಸಿಕೊಳ್ಳುವ ಸಾಧ್ಯತೆಯಿದ್ದು 1.2 ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ ಅನ್ನು ಟಾಟಾದ ಹೊಸ 1.2 TGDI ಟರ್ಬೋ-ಪೆಟ್ರೋಲ್ ಎಂಜಿನ್ ಬದಲಿಸುವ ಸಾಧ್ಯತೆಯಿದೆ.

 ಸದ್ಯಕ್ಕೆ ನೆಕ್ಸಾನ್ ಇವಿ ಪವರ್‌ಟ್ರೇನ್‌ಗೆ ಯಾವುದೇ ನವೀಕರಣವನ್ನು ಪಡೆಯುತ್ತದೆಯೇ ಎಂಬುದರ ಕುರಿತು ಮಾಹಿತಿಯಿಲ್ಲ. ಇದು ಪ್ರಸ್ತುತ 30.2kWh (ಪ್ರೈಮ್) ಮತ್ತು 40.5kWh (ಮ್ಯಾಕ್ಸ್) ಬ್ಯಾಟರಿ ಪ್ಯಾಕ್‌ ಅನ್ನು ಪಡೆಯುತ್ತದೆ, ಮತ್ತು ಇದು ಕ್ರಮವಾಗಿ 312 ಕಿಮೀ ಮತ್ತು 453 ಕಿಮೀ ಕ್ಲೈಮ್ ಮಾಡುತ್ತದೆ. 

ಇದನ್ನೂ ಓದಿ: ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಸೆರೆಯಾದ ಟಾಟಾ ಪಂಚ್ ಇವಿ 

 

2023 ನೆಕ್ಸಾನ್ ಬೆಲೆಗಳು

Tata Nexon EV Max

 (ಉಲ್ಲೇಖಕ್ಕಾಗಿ ಪ್ರಸ್ತುತ ನೆಕ್ಸಾನ್ ಇವಿ ಮ್ಯಾಕ್ಸ್)

 ಗಮನಾರ್ಹವಾದ ನವೀಕರಣದಿಂದ ನೆಕ್ಸಾನ್ ಮತ್ತು ನೆಕ್ಸಾನ್ ಇವಿ ನವೀಕೃತ ಆವೃತ್ತಿಗಳ ಬೆಲೆಯನ್ನು, ವಿಶೇಷವಾಗಿ ಅವುಗಳ ಉನ್ನತ ಆವೃತ್ತಿಗಳಿಗೆ ಹೆಚ್ಚಿಸಲಾಗುವುದು. ICE ಆವೃತ್ತಿಯು ಪ್ರಸ್ತುತ ರೂ. 8 ಲಕ್ಷದಿಂದ ರೂ. 14.60 ಲಕ್ಷಗಳವರೆಗಿದ್ದರೆ, ಇವಿಯ ಕೌಂಟರ್‌ಪಾರ್ಟ್ ರೂ. 14.49 ಲಕ್ಷದಿಂದ ರೂ. 19.54 ಲಕ್ಷಗಳವರೆಗೆ ಬೆಲೆಯನ್ನು ಹೊಂದಿದೆ. (ಎಲ್ಲಾ ಬೆಲೆಗಳು ಎಕ್ಸ್-ಶೋರೂಮ್)

 ಚಿತ್ರ ಕೃಪೆ

ಇನ್ನಷ್ಟು ಇಲ್ಲಿ ಓದಿ : ಟಾಟಾ ನೆಕ್ಸಾನ್  ಆಟೋಮ್ಯಾಟಿಕ್

was this article helpful ?

Write your Comment on Tata ನೆಕ್ಸಾನ್‌

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience