ಹಬ್ಬದ ಸೀಸನ್‌ನಲ್ಲಿ ಲಿಮಿಟೆಡ್ ಎಡಿಷನ್‌ನ ಪಡೆದ Toyota Glanza, 20,567 ರೂ. ಮೌಲ್ಯದ ಆಕ್ಸಸ್ಸರಿಗಳ ಸೇರ್ಪಡೆ
ಟೊಯೋಟಾ ಗ್ಲ್ಯಾನ್ಜಾ ಗಾಗಿ shreyash ಮೂಲಕ ಅಕ್ಟೋಬರ್ 18, 2024 07:44 pm ರಂದು ಪ್ರಕಟಿಸಲಾಗಿದೆ
- 73 Views
- ಕಾಮೆಂಟ್ ಅನ್ನು ಬರೆಯಿರಿ
ಗ್ಲಾಂಝಾದ ಈ ಲಿಮಿಟೆಡ್ ಎಡಿಷನ್ 3D ಫ್ಲೋರ್ ಮ್ಯಾಟ್ಸ್ ಮತ್ತು ಪಡಲ್ ಲ್ಯಾಂಪ್‌ಗಳಂತಹ ಕೆಲವು ಇಂಟಿರಿಯರ್ ಆಕ್ಸಸ್ಸರಿಗಳ ಜೊತೆಗೆ ಹೊರಭಾಗದಲ್ಲಿ ಕ್ರೋಮ್ ಸ್ಟೈಲಿಂಗ್ ಅಂಶಗಳನ್ನು ಪಡೆಯುತ್ತದೆ
-
ಎಕ್ಸ್‌ಟಿರಿಯರ್‌ನ ಆಕ್ಸಸ್ಸರಿಗಳಲ್ಲಿ ಸೈಡ್ ಬಾಡಿ ಮೋಲ್ಡಿಂಗ್, ಡೋರ್ ವೈಸರ್‌ಗಳು ಮತ್ತು ಕೆಲವು ಕ್ರೋಮ್ ಹೈಲೈಟ್‌ಗಳು ಸೇರಿವೆ.
-
ಒಳಭಾಗದಲ್ಲಿ, ಇದು ನೆಕ್ ಕುಶನ್‌ಗಳು, 3D ಫ್ಲೋರ್ ಮ್ಯಾಟ್‌ಗಳು ಮತ್ತು ಪಡಲ್ ಲ್ಯಾಂಪ್‌ಗಳನ್ನು ಹೊಂದಿದೆ.
-
ಇದು ಟೊಯೋಟಾ ಗ್ಲಾಂಝಾದ ಎಲ್ಲಾ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.
-
ಗ್ಲಾಂಝಾದ ಲಿಮಿಟೆಡ್ ಎಡಿಷನ್ 2024ರ ಅಕ್ಟೋಬರ್ ಅಂತ್ಯದವರೆಗೆ ಲಭ್ಯವಿರುತ್ತದೆ.
-
ಯಾವುದೇ ಯಾಂತ್ರಿಕ ಬದಲಾವಣೆಗಳನ್ನು ಪಡೆಯುವುದಿಲ್ಲ ಮತ್ತು ರೆಗುಲರ್ ಮೊಡೆಲ್‌ನಂತೆಯೇ ಅದೇ ಪೆಟ್ರೋಲ್ ಮತ್ತು ಸಿಎನ್‌ಜಿ ಆಯ್ಕೆಗಳೊಂದಿಗೆ ಇನ್ನೂ ನೀಡಲಾಗುತ್ತದೆ.
ಮಾರುತಿ ಬಲೆನೊದ ಮರುಬ್ಯಾಡ್ಜ್ ಮಾಡಲಾದ ಮತ್ತು ಮರುಹೊಂದಿಸಲಾದ ಆವೃತ್ತಿಯಾದ ಟೊಯೊಟಾ ಗ್ಲಾಂಝಾವು ಈ ಹಬ್ಬದ ಸೀಸನ್‌ನಲ್ಲಿ ಲಿಮಿಟೆಡ್ ಎಡಿಷನ್ ಅನ್ನು ಪಡೆದುಕೊಂಡಿದೆ. ಇದು 20,567 ರೂ. ಮೌಲ್ಯದ ಎಕ್ಸ್‌ಟಿರಿಯರ್ ಮತ್ತು ಇಂಟಿರಿಯರ್ ಆಕ್ಸಸ್ಸರಿಗಳ ಸೆಟ್‌ನೊಂದಿಗೆ ಬರುತ್ತದೆ. ಟೊಯೊಟಾ ತನ್ನ ಗ್ಲಾಂಝಾದ ಎಲ್ಲಾ ವೇರಿಯೆಂಟ್‌ಗಳಲ್ಲಿ ಲಿಮಿಟೆಡ್ ಎಡಿಷನ್ ಅನ್ನು ನೀಡುತ್ತಿದೆ ಮತ್ತು ಅಕ್ಟೋಬರ್ ಅಂತ್ಯದವರೆಗೆ ಈ ಆಫರ್ ಮಾನ್ಯವಾಗಿರುತ್ತದೆ.
ಗ್ಲಾಂಝಾದ ಲಿಮಿಟೆಡ್ ಎಡಿಷನ್‌ನಲ್ಲಿನ ಬದಲಾವಣೆಗಳು
ಹೊರಭಾಗದಲ್ಲಿ, ಇದು ಕ್ರೋಮ್ ಮತ್ತು ಸಂಪೂರ್ಣ ಕಪ್ಪಾದ ಸೈಡ್ ಬಾಡಿ ಮೋಲ್ಡಿಂಗ್, ಡೋರ್ ವೈಸರ್‌ಗಳು ಮತ್ತು ಟೈಲ್‌ಗೇಟ್‌ನಲ್ಲಿ ಕ್ರೋಮ್ ಗಾರ್ನಿಶ್, ORVM ಗಳು, ಹಿಂಭಾಗದ ಬಂಪರ್, ಫೆಂಡರ್ ಮತ್ತು ಹಿಂಭಾಗದ ರಿಫ್ಲೆಕ್ಟರ್‌ಗಳನ್ನು ಪಡೆಯುತ್ತದೆ. ಒಳಭಾಗದಲ್ಲಿ, ಇದು ನೆಕ್ ಕುಶನ್‌ಗಳು (ಕಪ್ಪು ಅಥವಾ ಬೆಳ್ಳಿ), 3D ಫ್ಲೋರ್ ಮ್ಯಾಟ್ಸ್ ಮತ್ತು ಪಡಲ್ ಲ್ಯಾಂಪ್‌ಗಳನ್ನು ಪಡೆಯುತ್ತದೆ. ಈ ಎಲ್ಲಾ ಆಕ್ಸಸ್ಸರಿಗಳನ್ನು ಡೆಲಿವೆರಿ ಸಮಯದಲ್ಲಿ ಡೀಲರ್‌ಶಿಪ್‌ಗಳಲ್ಲಿ ಅಳವಡಿಸಲಾಗುವುದು.
ಆಫರ್‌ನಲ್ಲಿರುವ ಫೀಚರ್‌ಗಳು
ಗ್ಲಾಂಝಾ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಹೆಡ್ಸ್-ಅಪ್ ಡಿಸ್‌ಪ್ಲೇ, 360-ಡಿಗ್ರಿ ಕ್ಯಾಮೆರಾ, ಹಿಂಭಾಗದ ದ್ವಾರಗಳೊಂದಿಗೆ ಆಟೋ ಎಸಿ ಮತ್ತು ಕ್ರೂಸ್ ಕಂಟ್ರೋಲ್‌ನಂತಹ ಸೌಕರ್ಯಗಳೊಂದಿಗೆ ಲೋಡ್ ಆಗುತ್ತದೆ. ಗ್ಲಾಂಝಾದಲ್ಲಿನ ಸುರಕ್ಷತಾ ಫೀಚರ್‌ಗಳು 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), 360-ಡಿಗ್ರಿ ಕ್ಯಾಮೆರಾ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಒಳಗೊಂಡಿದೆ.
ಇದನ್ನೂ ಓದಿ: ಹೊಸ ಲಿಮಿಟೆಡ್ ಎಡಿಷನ್‌ಅನ್ನು ಪಡೆಯಲಿರುವ Toyota Urban Cruiser Taisor, ಏನಿದರ ವಿಶೇಷತೆ ?
ಪವರ್‌ಟ್ರೈನ್ ಆಯ್ಕೆಗಳು
ಟೊಯೊಟಾವು ಗ್ಲಾಂಝಾವನ್ನು ಪೆಟ್ರೋಲ್ ಮತ್ತು ಸಿಎನ್‌ಜಿ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ನೀಡುತ್ತಿದೆ. ವಿಶೇಷಣಗಳನ್ನು ಕೆಳಗೆ ವಿವರಿಸಲಾಗಿದೆ:
ಎಂಜಿನ್ |
1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ |
1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್+ಸಿಎನ್‌ಜಿ |
ಪವರ್ |
90 ಪಿಎಸ್ |
77.5 ಪಿಎಸ್ |
ಟಾರ್ಕ್ |
113 ಎನ್‌ಎಮ್ |
98.5 ಎನ್‌ಎಮ್ |
ಗೇರ್‌ಬಾಕ್ಸ್ |
5-ಸ್ಪೀಡ್ ಮ್ಯಾನುವಲ್, 5-ಸ್ಪೀಡ್ ಎಎಮ್‌ಟಿ* |
5-ಸ್ಪೀಡ್ ಮ್ಯಾನುವಲ್ |
*ಎಎಮ್‌ಟಿ - ಆಟೋಮೆಟೆಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಟೊಯೊಟಾ ಗ್ಲಾಂಝಾದ ಎಕ್ಸ್ ಶೋರೂಮ್ ಬೆಲೆ 6.86 ಲಕ್ಷ ರೂ.ನಿಂದ 10 ಲಕ್ಷ ರೂ.ವರೆಗೆ ಇರಲಿದೆ. ಇದು ಟಾಟಾ ಆಲ್ಟ್ರೋಜ್, ಮಾರುತಿ ಬಲೆನೊ ಮತ್ತು ಹ್ಯುಂಡೈ ಐ20 ಗೆ ಪ್ರತಿಸ್ಪರ್ಧಿಯಾಗಿದೆ.
ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ
ಇನ್ನಷ್ಟು ಓದಿ : ಗ್ಲಾಂಝಾ ಎಎಮ್‌ಟಿ