ಹೊಸ ಲಿಮಿಟೆಡ್ ಎಡಿಷನ್‌ಅನ್ನು ಪಡೆಯಲಿರುವ Toyota Urban Cruiser Taisor, ಏನಿದರ ವಿಶೇಷತೆ ?
ಟೊಯೋಟಾ ಟೈಸರ್ ಗಾಗಿ shreyash ಮೂಲಕ ಅಕ್ಟೋಬರ್ 16, 2024 08:12 pm ರಂದು ಪ್ರಕಟಿಸಲಾಗಿದೆ
- 38 Views
- ಕಾಮೆಂಟ್ ಅನ್ನು ಬರೆಯಿರಿ
ಟೈಸರ್‌ನ ಈ ಲಿಮಿಟೆಡ್ ಎಡಿಷನ್ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ವರ್ಧಿತ ಸ್ಟೈಲಿಂಗ್‌ಗಾಗಿ ಎಕ್ಸ್‌ಟಿರಿಯರ್ ಮತ್ತು ಇಂಟಿರಿಯರ್ ಆಕ್ಸಸ್ಸರಿಗಳೊಂದಿಗೆ ಬರುತ್ತದೆ
-
ಎಕ್ಸ್‌ಟಿರಿಯರ್ ಆಕ್ಸಸ್ಸರಿಗಳಲ್ಲಿ ಸಿಲ್ವರ್ ಸ್ಕಿಡ್ ಪ್ಲೇಟ್‌ಗಳು, ಗ್ರಿಲ್ ಮತ್ತು ಹೆಡ್‌ಲೈಟ್‌ಗಳಿಗೆ ಕ್ರೋಮ್ ಗಾರ್ನಿಶ್‌ಗಳು, ಸೈಡ್ ಬಾಡಿ ಕ್ಲಾಡಿಂಗ್ ಮತ್ತು ಡೋರ್ ವೈಸರ್‌ಗಳು ಸೇರಿವೆ.
-
ಇದು 3D ಮ್ಯಾಟ್ಸ್ ಮತ್ತು ಪಡಲ್ ಲ್ಯಾಂಪ್‌ಗಳನ್ನು ಸಹ ಪಡೆಯುತ್ತದೆ.
-
ಟೈಸರ್ ಲಿಮಿಟೆಡ್ ಎಡಿಷನ್‌ಗೆ ನೀಡಲಾದ ಆಕ್ಸಸ್ಸರಿಗಳ ಮೊತ್ತ 20,160 ರೂ. ಆಗಿದೆ.
-
ಟೈಸರ್‌ನ ಲಿಮಿಟೆಡ್ ಎಡಿಷನ್ 2024ರ ಅಕ್ಟೋಬರ್ ಅಂತ್ಯದವರೆಗೆ ಮಾತ್ರ ಲಭ್ಯವಿದೆ.
ಮಾರುತಿ ಫ್ರಾಂಕ್ಸ್‌ನ ಮರುಬ್ಯಾಡ್ಜ್ ಆವೃತ್ತಿಯಾಗಿರುವ ಟೊಯೊಟಾ ಟೈಸರ್ 2024 ರ ಹಬ್ಬದ ಸೀಸನ್‌ಗಾಗಿ ಲಿಮಿಟೆಡ್ ಎಡಿಷನ್ ಅನ್ನು ಪಡೆದುಕೊಂಡಿದೆ. ಟೈಸರ್‌ನ ಈ ಲಿಮಿಟೆಡ್-ಸಂಖ್ಯೆಯ ಎಡಿಷನ್ 20,160 ರೂ.ಗಿಂತ ಹೆಚ್ಚಿನ ಮೌಲ್ಯದ ವಿಶೇಷ ಎಕ್ಸ್‌ಟಿರಿಯರ್ ಮತ್ತು ಇಂಟಿರಿಯರ್ ಆಕ್ಸಸ್ಸರಿಗಳೊಂದಿಗೆ ನೀಡಲಾಗುತ್ತಿದೆ, ಇದು ಈ ಸಬ್‌ಕಾಂಪ್ಯಾಕ್ಟ್ ಕ್ರಾಸ್‌ಒವರ್ ಎಸ್‌ಯುವಿಯ ಒಟ್ಟಾರೆ ಶೈಲಿಯನ್ನು ಹೆಚ್ಚಿಸುತ್ತದೆ. ಟೈಸರ್‌ನ ಲಿಮಿಟೆಡ್ ಎಡಿಷನ್ 2024ರ ಅಕ್ಟೋಬರ್ ಅಂತ್ಯದವರೆಗೆ ಲಭ್ಯವಿರುತ್ತದೆ ಮತ್ತು ಟರ್ಬೊ-ಪೆಟ್ರೋಲ್ ವೇರಿಯೆಂಟ್‌ಗಳೊಂದಿಗೆ ಮಾತ್ರ ಹೊಂದಬಹುದು ಎಂಬುದನ್ನು ನಾವಿಲ್ಲಿ ಗಮನದಲ್ಲಿಟ್ಟುಕೊಳ್ಳಬೇಕು.
ಟೈಸರ್ ಲಿಮಿಟೆಡ್ ಎಡಿಷನ್‌ನಲ್ಲಿನ ಬದಲಾವಣೆಗಳು
ಎಕ್ಸ್‌ಟಿರಿಯರ್‌ನ ಆಕ್ಸಸ್ಸರಿಗಳು ಮುಂಭಾಗ ಮತ್ತು ಹಿಂಭಾಗದ ಸ್ಕೀಡ್ ಪ್ಲೇಟ್‌ಗಳನ್ನು ಗ್ರೇ ಮತ್ತು ಕೆಂಪು ಆಯ್ಕೆಗಳಲ್ಲಿ ಫಿನಿಶ್ ಮಾಡಲಾಗಿದೆ ಮತ್ತು ಗ್ರಿಲ್ ಮತ್ತು ಹೆಡ್‌ಲೈಟ್‌ಗಳಿಗೆ ಕ್ರೋಮ್‌ನ ಅಲಂಕಾರವಿದೆ. ಇದು ಡೋರ್ ವೈಸರ್‌ಗಳು, ಸೈಡ್ ಬಾಡಿ ಕ್ಲಾಡಿಂಗ್, ಡೋರ್ ಸಿಲ್ ಗಾರ್ಡ್‌ಗಳು ಮತ್ತು 3D ಮ್ಯಾಟ್‌ಗಳು ಮತ್ತು ಒಳಗೆ ಬಾಗಿಲುಗಳಲ್ಲಿ ವೆಲ್‌ಕಮ್ ಲೈಟ್‌ಗಳನ್ನು ಸಹ ಪಡೆಯುತ್ತದೆ. ಈ ಎಲ್ಲಾ ಆಕ್ಸಸ್ಸರಿಗಳನ್ನು ಡೆಲಿವೆರಿ ಸಮಯದಲ್ಲಿ ಡೀಲರ್‌ಶಿಪ್‌ಗಳಲ್ಲಿ ಅಳವಡಿಸಲಾಗುವುದು.
ಲಭ್ಯವಿರುವ ಫೀಚರ್‌ಗಳು
ಟೊಯೊಟಾ ಟೈಸರ್ ಅನ್ನು 9 ಇಂಚಿನ ಟಚ್‌ಸ್ಕ್ರೀನ್, 6-ಸ್ಪೀಕರ್ ಸೌಂಡ್ ಸಿಸ್ಟಮ್, ಹೆಡ್‌ಸ್ ಅಪ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಆಟೋ ಎಸಿಯಂತಹ ಸೌಕರ್ಯಗಳೊಂದಿಗೆ ಸಜ್ಜುಗೊಳಿಸಿದೆ. ಇದು ಪ್ಯಾಡಲ್ ಶಿಫ್ಟರ್‌ಗಳನ್ನು (ಆಟೋಮ್ಯಾಟಿಕ್‌ನಲ್ಲಿ ಮಾತ್ರ) ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಸಹ ಪಡೆಯುತ್ತದೆ. ಟೈಸರ್‌ನಲ್ಲಿರುವ ಸುರಕ್ಷತಾ ಫೀಚರ್‌ಗಳು 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), 360-ಡಿಗ್ರಿ ಕ್ಯಾಮೆರಾ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಒಳಗೊಂಡಿದೆ.
ಇದನ್ನು ಪರಿಶೀಲಿಸಿ: Toyota Hyryder ಫೆಸ್ಟಿವಲ್ ಲಿಮಿಟೆಡ್ ಎಡಿಷನ್ ಬಿಡುಗಡೆ, ಹೊಸ ಆಕ್ಸಸ್ಸರಿಗಳ ಸೇರ್ಪಡೆ
ಪವರ್‌ಟ್ರೈನ್ ಆಯ್ಕೆಗಳು
ಟೊಯೋಟಾವು ನ್ಯಾಚುರಲಿ ಆಸ್ಪಿರೇಟೆಡ್ ಮತ್ತು ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಟೈಸರ್ ಅನ್ನು ನೀಡುತ್ತದೆ. ವಿವರವಾದ ವಿಶೇಷಣಗಳು ಈ ಕೆಳಗಿನಂತಿವೆ:
ಎಂಜಿನ್ |
1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ |
1-ಲೀಟರ್ ಟರ್ಬೊ-ಪೆಟ್ರೋಲ್ |
ಪವರ್ |
90 ಪಿಎಸ್ |
100 ಪಿಎಸ್ |
ಟಾರ್ಕ್ |
113 ಎನ್‌ಎಮ್ |
148 ಎನ್‌ಎಮ್ |
ಟ್ರಾನ್ಸ್‌ಮಿಷನ್ |
5-ಸ್ಪೀಡ್ ಮ್ಯಾನುವಲ್, 5-ಸ್ಪೀಡ್ ಎಎಮ್‌ಟಿ |
5-ಸ್ಪೀಡ್ ಮ್ಯಾನುವಲ್/6-ಸ್ಪೀಡ್ ಆಟೋಮ್ಯಾಟಿಕ್ |
ಟೈಸರ್ 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಸಿಎನ್‌ಜಿ-ಪೆಟ್ರೋಲ್ ಎಂಜಿನ್‌ನ ಆಯ್ಕೆಯನ್ನು ಸಹ ಪಡೆಯುತ್ತದೆ, ಇದು 77 ಪಿಎಸ್ ಮತ್ತು 98.5 ಎನ್‌ಎಂನಷ್ಟು ಔಟ್‌ಪುಟ್ ಅನ್ನು ಉತ್ಪಾದಿಸುತ್ತದೆ. ಇದು ಕೇವಲ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಯಾಗಿ ಬರುತ್ತದೆ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ದೆಹಲಿಯಲ್ಲಿ ಟೊಯೊಟಾ ಟೈಸರ್‌ನ ಎಕ್ಸ್ ಶೋರೂಂ ಬೆಲೆ ರೂ 7.74 ಲಕ್ಷ ರೂ.ನಿಂದ 13.04 ಲಕ್ಷ ರೂ.ವರೆಗೆ ಇದೆ. ಇದು ಮಾರುತಿ ಫ್ರಾಂಕ್ಸ್‌ಗೆ ನೇರ ಪ್ರತಿಸ್ಪರ್ಧಿಯಾಗಿದ್ದು, ಹ್ಯುಂಡೈ ಎಕ್ಸ್‌ಟರ್ ಮತ್ತು ಟಾಟಾ ಪಂಚ್‌ನಂತಹ ಮೈಕ್ರೋ ಎಸ್‌ಯುವಿಗಳು ಮತ್ತು ಟಾಟಾ ನೆಕ್ಸನ್ ಮತ್ತು ಮಾರುತಿ ಬ್ರೆಝಾ ಸೇರಿದಂತೆ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಪರ್ಯಾಯವಾಗಿದೆ.
ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ
ಇನ್ನಷ್ಟು ಓದಿ: ಟೈಸರ್ ಎಎಮ್‌ಟಿ