• English
  • Login / Register

ಲಿಮಿಟೆಡ್‌ ಎಡಿಷನ್‌ ಪಡೆಯಲಿರುವ Toyota Hyryder, Taisor ಮತ್ತು Toyota Glanza; ವರ್ಷಾಂತ್ಯದ ಡಿಸ್ಕೌಂಟ್‌ಗಳು ಲಭ್ಯ

ಟೊಯೋಟಾ hyryder ಗಾಗಿ dipan ಮೂಲಕ ನವೆಂಬರ್ 13, 2024 09:02 pm ರಂದು ಪ್ರಕಟಿಸಲಾಗಿದೆ

  • 298 Views
  • ಕಾಮೆಂಟ್‌ ಅನ್ನು ಬರೆಯಿರಿ

ಟೊಯೊಟಾ ರೂಮಿಯಾನ್‌, ಟೈಸರ್‌ ಮತ್ತು ಗ್ಲಾಂಜಾದ ಇಯರ್‌-ಎಂಡ್‌ ಡಿಸ್ಕೌಂಟ್‌ಗಳು ಡಿಸೆಂಬರ್ 31ರವರೆಗೆ ಮಾತ್ರ ಮಾನ್ಯವಾಗಿರುತ್ತವೆ

  • ಟೊಯೊಟಾವು 50,817 ರೂ.ವರೆಗಿನ ಆಕ್ಸಸ್ಸರಿಗಳೊಂದಿಗೆ ಹೈರಿಡರ್, ಟೈಸರ್ ಮತ್ತು ಗ್ಲಾಂಝಾಗೆ ಲಿಮಿಟೆಡ್‌ ಎಡಿಷನ್‌ ಅನ್ನು ಪರಿಚಯಿಸಿದ್ದು, ಆದರೆ ಇದನ್ನು ಪ್ರತ್ಯೇಕವಾಗಿ ಖರೀದಿಸಬೇಕಾಗಿದೆ.

  • ಆಕ್ಸಸ್ಸರಿಗಳು ಫ್ಲೋರ್‌ ಮ್ಯಾಟ್‌ಗಳು, ಗ್ರಿಲ್ ಗಾರ್ನಿಶ್ ಮತ್ತು ಕ್ರೋಮ್ ಟ್ರಿಮ್‌ಗಳಂತಹ ಮೆಟಿರಿಯಲ್‌ಗಳನ್ನು ಒಳಗೊಂಡಿವೆ.

  • ಟೊಯೊಟಾ ರೂಮಿಯಾನ್‌, ಟೈಸರ್‌ ಮತ್ತು ಗ್ಲಾಂಜಾವು  1 ಲಕ್ಷ ರೂ.ವರೆಗಿನ ಇಯರ್‌-ಎಂಡ್‌ ಡಿಸ್ಕೌಂಟ್‌ನೊಂದಿಗೆ ಸಹ ಲಭ್ಯವಿದೆ. 

  • ಗ್ರಾಹಕರು ಲಿಮಿಟೆಡ್‌ ಎಡಿಷನ್‌ ಅಥವಾ ಇಯರ್‌ ಎಂಡ್‌ ಆಫರ್‌ಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು ಆದರೆ ಎರಡನ್ನೂ ಸಂಯೋಜಿಸಲು ಸಾಧ್ಯವಿಲ್ಲ.

  • ಆಕ್ಸೆಸರಿ ಪ್ಯಾಕ್‌ಗಳನ್ನು ಹೊಂದಿರುವ ಮೊಡೆಲ್‌ಗಳ ಎಂಜಿನ್‌ಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ.

ಟೊಯೊಟಾವು ಹೈರೈಡರ್‌, ಟೈಸರ್‌ ಮತ್ತು ಗ್ಲಾಂಜಾದಲ್ಲಿ ಲಿಮಿಟೆಡ್‌ ಎಡಿಷನ್‌ ಅನ್ನು ಪರಿಚಯಿಸಿದೆ, ಇದು ಆಯ್ದ ವೇರಿಯೆಂಟ್‌ಗಳಲ್ಲಿ 50,817 ರೂ.ವರೆಗಿನ ಆಕ್ಸಸ್ಸರಿಗಳನ್ನು ನೀಡುತ್ತದೆ. ಟೊಯೊಟಾ ರೂಮಿಯಾನ್‌ (CNG ವೇರಿಯೆಂಟ್‌ಗಳನ್ನು ಹೊರತುಪಡಿಸಿ), ಟೈಸರ್‌ ಮತ್ತು ಗ್ಲಾಂಜಾ ಸಹ 1 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೌಲ್ಯದ ಇಯರ್‌-ಎಂಡ್‌ ಡಿಸ್ಕೌಂಟ್‌ಗಳನ್ನು ಹೊಂದಿದೆ, ಆದರೆ ಗ್ರಾಹಕರು ಲಿಮಿಟೆಡ್‌ ಎಡಿಷನ್‌ನ ಮೊಡೆಲ್‌ಗಳು ಅಥವಾ ವರ್ಷಾಂತ್ಯದ ರಿಯಾಯಿತಿಗಳನ್ನು ಆಯ್ಕೆ ಮಾಡಬಹುದು. ಲಿಮಿಟೆಡ್‌ ಎಡಿಷನ್‌ನೊಂದಿಗೆ ನೀಡಲಾದ ಆಕ್ಸಸ್ಸರಿಗಳ ಪಟ್ಟಿ ಇಲ್ಲಿದೆ:

ಮೊಡೆಲ್‌

ಟೊಯೋಟಾ ಗ್ಲಾಂಜಾ

ಟೊಯೋಟಾ ಟೈಸರ್‌

ಟೊಯೋಟಾ ಹೈರೈಡರ್‌

ಆಕ್ಸಸ್ಸರಿಗಳನ್ನು ನೀಡುವ ವೇರಿಯೆಂಟ್‌ಗಳು

ಎಲ್ಲಾ ವೇರಿಯೆಂಟ್‌ಗಳು

E, S, ಮತ್ತು ಎಸ್‌ ಪ್ಲಸ್‌ (ಪೆಟ್ರೋಲ್ ವೇರಿಯೆಂಟ್‌ಗಳು ಮಾತ್ರ)

ಮೈಲ್ಡ್‌-ಹೈಬ್ರಿಡ್ ಆವೃತ್ತಿ: S, G ಮತ್ತು V ವೇರಿಯೆಂಟ್‌ಗಳು

ಸ್ಟ್ರಾಂಗ್‌ ಹೈಬ್ರಿಡ್ ಆವೃತ್ತಿ: ಕೇವಲ G ಮತ್ತು V ವೇರಿಯೆಂಟ್‌ಗಳಲ್ಲಿ

ಆಕ್ಸಸ್ಸರಿಗಳ ಪಟ್ಟಿ

3D ಫ್ಲೋರ್‌ ಮ್ಯಾಟ್‌ಗಳು

ಡೋರ್‌ ವೈಸರ್‌ಗಳು

ಕೆಳಗಿನ ಗ್ರಿಲ್ ಗಾರ್ನಿಶ್‌

ಕ್ರೋಮ್ ಔಟ್‌ಸೈಡ್‌ ರಿಯರ್‌ವ್ಯೂ ಮಿರರ್ (ORVM) ಗಾರ್ನಿಶ್

ಕ್ರೋಮ್ ಟೈಲ್ ಲೈಟ್ ಗಾರ್ನಿಶ್‌

ಮುಂಭಾಗದ ಬಂಪರ್ ಗಾರ್ನಿಶ್‌

ಫೆಂಡರ್‌ಗಳಲ್ಲಿ ಕ್ರೋಮ್ ಗಾರ್ನಿಶ್‌

ಬಂಪರ್ ಕಾರ್ನರ್ ಪ್ರೊಟೆಕ್ಷನ್

ಕ್ರೋಮ್ ಹಿಂಭಾಗದ ಬಂಪರ್ ಗಾರ್ನಿಶ್‌

3D ಫ್ಲೋರ್‌ ಮ್ಯಾಟ್‌ಗಳು

3D ಬೂಟ್ ಮ್ಯಾಟ್

ಹೆಡ್‌ಲೈಟ್‌ ಗಾರ್ನಿಶ್‌

ಮುಂಭಾಗದ ಗ್ರಿಲ್ ಗಾರ್ನಿಶ್‌

ಬಾಡಿ ಕವರ್‌

ಪ್ರಕಾಶಿತ ಡೋರ್‌ ಸಿಲ್ ಗಾರ್ಡ್‌ಗಳು

ಕಪ್ಪು ಹೊಳಪು ಮತ್ತು ಕೆಂಪು ಹಿಂಭಾಗದ ಬಂಪರ್ ಕಾರ್ನರ್‌ ಗಾರ್ನಿಶ್‌

ಕಪ್ಪು ಹೊಳಪು ಮತ್ತು ಕೆಂಪು ರೂಫ್-ಮೌಂಟೆಡ್ ಸ್ಪಾಯ್ಲರ್ ಎಕ್ಸ್‌ಟೆಂಡರ್

ಕಪ್ಪು ಹೊಳಪು ಮತ್ತು ಕೆಂಪು ಮುಂಭಾಗದ ಬಂಪರ್ ಗಾರ್ನಿಶ್‌

ಮಡ್ ಫ್ಲಾಪ್ಸ್

ಡೋರ್ ವೈಸರ್

3D ಫ್ಲೋರ್‌ ಮ್ಯಾಟ್ಸ್

ಮುಂಭಾಗದ ಬಂಪರ್ ಗಾರ್ನಿಶ್‌

ಹಿಂಭಾಗದ ಬಂಪರ್ ಗಾರ್ನಿಶ್‌

ಹೆಡ್‌  ಗಾರ್ನಿಶ್‌

ಹುಡ್ ಲಾಂಛನ

ಬಾಡಿ ಕ್ಲಾಡಿಂಗ್

ಫೆಂಡರ್ ಗಾರ್ನಿಶ್‌

ಹಿಂದಿನ ಬಾಗಿಲಿನ ಲಿಡ್‌ ಗಾರ್ನಿಶ್‌

ಫುಟ್‌ವೆಲ್ ಬೆಳಕು

ಡ್ಯಾಶ್‌ಕ್ಯಾಮ್‌

ಕ್ರೋಮ್ ಡೋರ್ ಹ್ಯಾಂಡಲ್‌ಗಳು

ಬೆಲೆ

17,381 ರೂ. 

17,931 ರೂ.

50,817 ರೂ.

Toyota Glanza (image of standard model used for representation purposes only)

ಈ ಆಕ್ಸಸ್ಸರಿಗಳು ಉಚಿತವಾಗಿಲ್ಲ ಮತ್ತು ಆಯ್ಕೆಮಾಡಿದ ಕಾರಿನ ನಿರ್ದಿಷ್ಟ ವೇರಿಯೆಂಟ್‌ನ ಬೆಲೆಯ ಮೇಲೆ ನೀವು ಈ ಆಕ್ಸಸ್ಸರಿಗಳಿಗೆ ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ ಎಂಬುದನ್ನು ದಯವಿಟ್ಟು ಗಮನಿಸಬೇಕು. ಆಕ್ಸೆಸರಿ ಪ್ಯಾಕ್‌ಗಳೊಂದಿಗೆ ಬರುವ ಕಾರುಗಳಲ್ಲಿ ಯಾವುದೇ ಯಾಂತ್ರಿಕ ಬದಲಾವಣೆಗಳಿಲ್ಲ.

Toyota Rumion (image of standard model used for representation purposes only

ಟೊಯೋಟಾ ಟೈಸರ್‌ ಮತ್ತು ಗ್ಲಾಂಜಾದ ಗ್ರಾಹಕರು ಆಕ್ಸೆಸರಿ ಪ್ಯಾಕ್‌ಗಳು ಅಥವಾ ಇಯರ್‌-ಎಂಡ್‌ ಆಫರ್‌ಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು, ಆದರೆ ಎರಡನ್ನೂ ಅಲ್ಲ. ಪೆಟ್ರೋಲ್ ವೇರಿಯೆಂಟ್‌ಗಳನ್ನು ಆಯ್ಕೆ ಮಾಡುವ ಟೊಯೊಟಾ ರೂಮಿಯಾನ್ ಗ್ರಾಹಕರು ವರ್ಷಾಂತ್ಯದ ಆಫರ್‌ನ ಲಾಭವನ್ನು ಪಡೆಯಬಹುದು. ಟೊಯೊಟಾ ಪ್ರತಿ ಮಾಡೆಲ್‌ಗೆ ನಿಖರವಾದ ಮೊತ್ತವನ್ನು ನಿರ್ದಿಷ್ಟಪಡಿಸದಿದ್ದರೂ, ಆಫರ್‌ಗಳು 1 ಲಕ್ಷಕ್ಕೂ ಹೆಚ್ಚು ಮೌಲ್ಯದ್ದಾಗಿದೆ ಎಂದು ಹೇಳಿದೆ. ಗಮನಾರ್ಹವಾಗಿ, ಈ ವರ್ಷಾಂತ್ಯದ ಆಫರ್‌ಗಳು  2024ರ ಡಿಸೆಂಬರ್ 31ರವರೆಗೆ ಮಾತ್ರ ಲಭ್ಯವಿರುತ್ತವೆ.

ಇದನ್ನೂ ಓದಿ: MG Hectorಗೆ ಹೊಸ ಎರಡು ವೇರಿಯೆಂಟ್‌ಗಳ ಸೇರ್ಪಡೆ, ಬೆಲೆಗಳು 19.72 ಲಕ್ಷ ರೂ.ನಿಂದ ಪ್ರಾರಂಭ

ಪವರ್‌ಟ್ರೈನ್‌ ಆಯ್ಕೆಗಳು

ಟೊಯೊಟಾ ಗ್ಲಾಂಜಾ:

  • 1.2-ಲೀಟರ್ ಪೆಟ್ರೋಲ್ ಎಂಜಿನ್ (90 ಪಿಎಸ್‌/113 ಎನ್‌ಎಮ್‌) ಜೊತೆಗೆ 5-ಸ್ಪೀಡ್ ಮ್ಯಾನುವಲ್ ಅಥವಾ AMT (ಆಟೋಮೆಟೆಡ್‌ ಮ್ಯಾನುವಲ್ ಟ್ರಾನ್ಸ್‌ಮಿಷನ್)

  • 1.2-ಲೀಟರ್ ಪೆಟ್ರೋಲ್-CNG ಆಯ್ಕೆ (77 ಪಿಎಸ್‌/98.5 ಎನ್‌ಎಮ್‌) ಜೊತೆಗೆ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್.

Toyota Taisor (image of standard model used for representation purposes only)

ಟೊಯೊಟಾ ಟೈಸರ್‌

  • 1.2-ಲೀಟರ್ ಪೆಟ್ರೋಲ್ ಎಂಜಿನ್ (90 ಪಿಎಸ್‌/113 ಎನ್‌ಎಮ್‌) ಜೊತೆಗೆ 5-ಸ್ಪೀಡ್ ಮ್ಯಾನುವಲ್ ಅಥವಾ ಎಎಮ್‌ಟಿ.

  • 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (100 ಪಿಎಸ್‌/148 ಎನ್‌ಎಮ್‌) ಜೊತೆಗೆ 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್.

  • 1.2-ಲೀಟರ್ ಪೆಟ್ರೋಲ್-CNG ಆಯ್ಕೆ (77 ಪಿಎಸ್‌/98.5 ಎನ್‌ಎಮ್‌) ಜೊತೆಗೆ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್.

ಟೊಯೋಟಾ ರೂಮಿಯಾನ್‌:

  • 1.5-ಲೀಟರ್ ಪೆಟ್ರೋಲ್ ಎಂಜಿನ್ (103 ಪಿಎಸ್‌/137 ಎನ್‌ಎಮ್‌) ಜೊತೆಗೆ 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್.

  • 1.5-ಲೀಟರ್ ಪೆಟ್ರೋಲ್-ಸಿಎನ್‌ಜಿ ಆಯ್ಕೆ (88 ಪಿಎಸ್‌/121.5 ಎನ್‌ಎಮ್‌) ಜೊತೆಗೆ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್

Toyota Hyryder (image of standard model used for representational purposes only)

ಟೊಯೋಟಾ ಹೈರೈಡರ್‌

  • 1.5-ಲೀಟರ್ ಮೈಲ್ಡ್-ಹೈಬ್ರಿಡ್ ಎಂಜಿನ್ (103 ಪಿಎಸ್‌/137 ಎನ್‌ಎಮ್‌) ಜೊತೆಗೆ 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್. ಇದು ಫ್ರಂಟ್-ವೀಲ್-ಡ್ರೈವ್ (FWD) ಅಥವಾ ಆಲ್-ವೀಲ್-ಡ್ರೈವ್ (AWD ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ) ಲಭ್ಯವಿದೆ.

  • 1.5-ಲೀಟರ್ ಸ್ಟ್ರಾಂಗ್-ಹೈಬ್ರಿಡ್ ಎಂಜಿನ್ (116 ಪಿಎಸ್‌/122 ಎನ್‌ಎಮ್‌) ಜೊತೆಗೆ e-CVT (ಎಲೆಕ್ಟ್ರಾನಿಕ್ ಕಂಟಿನ್ಯೂವಸ್ಲಿ ವೇರಿಯೆಬಲ್‌ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌)

  • 1.5-ಲೀಟರ್ ಪೆಟ್ರೋಲ್-ಸಿಎನ್‌ಜಿ ಎಂಜಿನ್ (88 ಪಿಎಸ್‌/121.5 ಎನ್‌ಎಮ್‌) ಜೊತೆಗೆ 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್.

ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಟೊಯೊಟಾ ಗ್ಲಾಂಜಾದ ಬೆಲೆಗಳು 6.86 ಲಕ್ಷ ರೂ.ನಿಂದ 10 ಲಕ್ಷ ರೂ.ವರೆಗೆ ಇದೆ. ಇದು ಮಾರುತಿ ಬಲೆನೊ, ಹ್ಯುಂಡೈ i20 ಮತ್ತು ಟಾಟಾ ಆಲ್ಟ್ರೋಜ್‌ಗೆ ಪ್ರತಿಸ್ಪರ್ಧಿಯಾಗಿದೆ.

Toyota Taisor Rear

 ಟೊಯೊಟಾ ಟೈಸರ್‌ನ ಬೆಲೆ 7.74 ಲಕ್ಷ ರೂ.ನಿಂದ 13.08 ಲಕ್ಷ ರೂ.ವರೆಗೆ ಇದೆ. ಇದು ನೇರವಾಗಿ ಮಾರುತಿ ಫ್ರಾಂಕ್ಸ್‌ಗೆ ಪ್ರತಿಸ್ಪರ್ಧಿಯಾಗಿದೆ, ಸ್ಕೋಡಾ ಕೈಲಾಕ್, ಮಾರುತಿ ಬ್ರೆಝಾ, ಟಾಟಾ ನೆಕ್ಸಾನ್ ಮತ್ತು ಹ್ಯುಂಡೈ ವೆನ್ಯೂನಂತಹ ಸಬ್-4m ಎಸ್‌ಯುವಿಗಳಿಗೆ ಪ್ರತಿಸ್ಪರ್ಧಿಯಾಗಿದೆ.

ಟೊಯೊಟಾ ರುಮಿಯಾನ್‌ನ ಬೆಲೆ 10.44 ಲಕ್ಷ ರೂ.ನಿಂದ 13.73 ಲಕ್ಷ ರೂ.ವರೆಗೆ ಇದೆ. ಇದು ಮಾರುತಿ ಎರ್ಟಿಗಾ, ಮಾರುತಿ XL6 ಮತ್ತು ಕಿಯಾ ಕಾರೆನ್ಸ್‌ನಂತಹ ಎಮ್‌ಪಿವಿಗಳಿಗೆ ಪ್ರತಿಸ್ಪರ್ಧಿಯಾಗಿದೆ.

Toyota Hyryder

ಟೊಯೊಟಾ ಹೈರೈಡರ್‌ನ ಬೆಲೆ 11.14 ಲಕ್ಷ ರೂ.ನಿಂದ 19.99 ಲಕ್ಷ ರೂ.ವರೆಗೆ ಇದೆ. ಇದು ಹ್ಯುಂಡೈ ಕ್ರೆಟಾ, ಸ್ಕೋಡಾ ಕುಶಾಕ್, ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಹೋಂಡಾ ಎಲಿವೇಟ್ ಸೇರಿದಂತೆ ಇತರ ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಪ್ರತಿಸ್ಪರ್ಧಿಯಾಗಿದೆ.

ಎಲ್ಲಾ ಬೆಲೆಗಳು ಭಾರತದಾದ್ಯಂತದ ಎಕ್ಸ್ ಶೋರೂಂ 

ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

ಇನ್ನಷ್ಟು ಓದಿ : ಅರ್ಬನ್ ಕ್ರೂಸರ್ ಹೈರೈಡರ್ ಆನ್‌ರೋಡ್‌ ಬೆಲೆ

was this article helpful ?

Write your Comment on Toyota hyryder

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
  • ಟಾಟಾ ಸಿಯೆರಾ
    ಟಾಟಾ ಸಿಯೆರಾ
    Rs.10.50 ಲಕ್ಷಅಂದಾಜು ದಾರ
    ಸೆಪಟೆಂಬರ್, 2025: ನಿರೀಕ್ಷಿತ ಲಾಂಚ್‌
  • ಕಿಯಾ syros
    ಕಿಯಾ syros
    Rs.9.70 - 16.50 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಬಿವೈಡಿ sealion 7
    ಬಿವೈಡಿ sealion 7
    Rs.45 - 49 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಎಂಜಿ majestor
    ಎಂಜಿ majestor
    Rs.46 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಟಾಟಾ ಹ್ಯಾರಿಯರ್ ಇವಿ
    ಟಾಟಾ ಹ್ಯಾರಿಯರ್ ಇವಿ
    Rs.30 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience