Login or Register ಅತ್ಯುತ್ತಮ CarDekho experience ಗೆ
Login

ಪ್ರಕಟಗೊಂಡಿವೆ ಟೊಯೋಟಾ ಹೈರೈಡರ್ ಸಿಎನ್‌ಜಿ ಬೆಲೆಗಳು!

ಜನವರಿ 31, 2023 10:57 am ರಂದು tarun ಮೂಲಕ ಪ್ರಕಟಿಸಲಾಗಿದೆ
71 Views

ಸಿಎನ್‌ಜಿ ಕಿಟ್ ಅನ್ನು ಹೈರೈಡರ್ ಕಾಂಪ್ಯಾಕ್ಟ್ ಎಸ್‌ಯುವಿಯ ಮಿಡ್-ಸ್ಪಿಕ್ ಎಸ್ ಮತ್ತು ಜಿ ವೇರಿಯೆಂಟ್‌ನೊಂದಿಗೆ ಆಯ್ಕೆ ಮಾಡಬಹುದು

  • ಆಯಾ ಪೆಟ್ರೋಲ್ ವೆರಿಯೆಂಟ್‌ಗಳಿಗೆ ಹೋಲಿಸಿದರೆ ರೂ. 95,000 ಪ್ರೀಮಿಯಂನೊಂದಿಗೆ ರೂ. 13.23 ಲಕ್ಷದಿಂದ ರೂ. 15.29 ಲಕ್ಷದವರೆಗೆ ಬೆಲೆ ನಿಗದಿಪಡಿಸಲಾಗಿದೆ.

  • ಟ್ಯಾಪ್‌ನಲ್ಲಿ 88PS ನೊಂದಿಗೆ 1.5-ಲೀಟರ್ ಪೆಟ್ರೋಲ್-ಸಿಎನ್‌ಜಿ ಇಂಜಿನ್ ಅನ್ನು ಹೊಂದಿದ್ದು, 26.6ಕಿಮೀ/ಕೆಜಿ ದಕ್ಷತೆಯನ್ನು ಕ್ಲೈಮ್ ಮಾಡಿದೆ.

  • ಸಿಎನ್‌ಜಿ ವೇರಿಯೆಂಟ್‌ಗಳು 9-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, ಆರು ಏರ್‌ಬ್ಯಾಗ್‌ಗಳು, ಒಂದು ರಿಯರ್ ಕ್ಯಾಮರಾ ಮತ್ತು ಎಲ್‌ಇಡಿ ಹೆಡ್‌ಲ್ಯಾಂಪ್‌ಗಳನ್ನು ಒಳಗೊಂಡಿವೆ

  • ಗ್ರ್ಯಾಂಡ್ ವಿಟಾರಾ ಸಿಎನ್‌ಜಿಗಿಂತ ರೂ.45,000 ವರೆಗೆ ದುಬಾರಿಯಾಗಿದೆ.

ಟೊಯೋಟಾ ಹೈರೈಡರ್ ಮಾರುತಿ ಗ್ರ್ಯಾಂಡ್ ವಿಟಾರಾವನ್ನು ಹೋಲುತ್ತಿದ್ದು, ಇದು ದೇಶದಲ್ಲಿನ ಎರಡನೇ ಸಿಎನ್‌ಜಿ-ಚಾಲಿತ ಎಸ್‌ಯುವಿಯಾಗಿದೆ. ಇದು ಮಿಡ್-ಸೆಕ್ ಎಸ್ ಮತ್ತು ಜಿ ವೇರಿಯೆಂಟ್‌ಗಳಾಗಿದ್ದು, ಸಿಎನ್‌ಜಿ ಆಯ್ಕೆಯನ್ನು ಹೊಂದಿವೆ ಮತ್ತು ಬೆಲೆಗಳು ಇಂತಿವೆ:

ವೇರಿಯೆಂಟ್‌ಗಳು

ಸಿಎನ್‌ಜಿ

ಪೆಟ್ರೋಲ್-ಎಂಟಿ

ಗ್ರ್ಯಾಂಡ್ ವಿಟಾರಾ ಸಿಎನ್‌ಜಿ

ಎಸ್

ರೂ. 13.23 ಲಕ್ಷ

ರೂ 12.28 ಲಕ್ಷ

ರೂ. 12.85 ಲಕ್ಷ

ಜಿ

ರೂ. 15.29 ಲಕ್ಷ

ರೂ 14.34 ಲಕ್ಷ

ರೂ. 14.84 ಲಕ್ಷ

ಸಿಎನ್‌ಜಿ ವೇರಿಯೆಂಟ್‌ಗಳು ಪೆಟ್ರೋಲ್-ಮ್ಯಾನ್ಯುವಲ್ ವೇರಿಯೆಂಟ್‌ಗಳಿಗಿಂತ ರೂ. 95,000 ಪ್ರೀಮಿಯಂ ಅನ್ನು ಹೊಂದಿವೆ. ಮಾರುತಿಯ ತತ್ಸಮಾನ ಕಾರಿಗೆ ಹೋಲಿಸಿದರೆ, ಹೈರೈಡರ್ ಸಿಎನ್‌ಜಿ, ಅದರ ವೇರಿಯೆಂಟ್ ಅನ್ನು ಅವಲಂಬಿಸಿ ರೂ. 45,000 ದಷ್ಟು ಹೆಚ್ಚು ದುಬಾರಿಯಾಗಿದೆ.

ಟೊಯೋಟಾ ಹೈರೈಡರ್‌ನ 1.5-ಲೀಟರ್ ಪೆಟ್ರೋಲ್ ಇಂಜಿನ್ ಸಿಎನ್‌ಜಿ ಆಯ್ಕೆಯನ್ನು ಹೊಂದಿದ್ದು, ಇದು ಹಸಿರು ಇಂಜಿನ್ ಅಲ್ಲಿ ಚಲಿಸುತ್ತಿರುವಾಗ 88PS ಮತ್ತು 121.5Nm ಅನ್ನು ನೀಡುತ್ತದೆ. ಇದು 26.6ಕಿಮೀ/ಕೆಜಿ ದಕ್ಷತೆಯನ್ನು ಕ್ಲೈಮ್ ಮಾಡಿದೆ, ಇದು ಪ್ರಬಲ-ಹೈಬ್ರಿಡ್‌ನ 27.97kmpl ಗಿಂತ ಕೇವಲ ಒಂದು kmpl ಕಡಿಮೆಯಾಗಿದೆ. ಈ ಅನುಗುಣವಾದ ಪ್ರಬಲ ಹೈಬ್ರಿಡ್ ವೇರಿಯೆಂಟ್ ಸಿಎನ್‌ಜಿ ಆಯ್ಕೆಗಳಿಗಿಂತ ರೂ. 2 ಲಕ್ಷ ಅಧಿಕ ಬೆಲೆ ಹೊಂದಿವೆ.

ಇದನ್ನೂ ಓದಿ: ಇಲ್ಲಿದೆ ಮಾರುತಿ ಗ್ರ್ಯಾಂಡ್ ವಿಟಾರಾ ಸಿಎನ್‌ಜಿಯ ಬೂಟ್ ಸ್ಪೇಸ್‌ನ ಮೊದಲ ನೋಟ

ಸಿಎನ್‌ಜಿ ವೇರಿಯೆಂಟ್‌ಗಳು ಆಟೋಮ್ಯಾಟಿಕ್ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, 9-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಎಸಿ, ಸ್ಟಾರ್ಟ್ ಮತ್ತು ಸ್ಟಾಪ್ ಮಾಡಲು ಪುಶ್ ಬಟನ್, ಆರು ಏರ್‌ಬ್ಯಾಂಗ್‌ಗಳು, ರಿಯರ್ ಪಾರ್ಕಿಂಗ್ ಕ್ಯಾಮರಾ ಮತ್ತು ಹಿಲ್ ಹೋಲ್ಡ್ ಕಂಟ್ರೋಲ್ ಅನ್ನು ಹೊಂದಿದೆ.

ಹ್ಯುಂಡೈ ಕ್ರೇಟಾ, ಮಾರುತಿ ಗ್ರ್ಯಾಂಡ್ ವಿಟಾರಾ, ಕಿಯಾ ಸೆಲ್ಟೋಸ್, ನಿಸಾನ್ ಕಿಕ್ಸ್, ಸ್ಕೋಟಾ ಕುಶಾಕ್, ಎಂಜಿ ಆಸ್ಟರ್ ಮತ್ತು ಫೋಕ್ಸ್‌ವ್ಯಾಗನ್ ಟೈಗನ್‌ಗೆ ಈ ಹೈರೈಡರ್ ಪ್ರತಿಸ್ಪರ್ಧಿಯಾಗಿದೆ. ಈ ಸೆಗ್ಮೆಂಟ್‌ನಲ್ಲಿ ಟೊಯೋಟಾ ಮತ್ತು ಮಾರುತಿ ಇವೆರಡೇ ಪ್ರಬಲ ಹೈಬ್ರಿಡ್ ಮತ್ತು ಸಿಎನ್‌ಜಿಯನ್ನು ನೀಡುತ್ತಿವೆ.

ಈ ಕುರಿತು ಇನ್ನಷ್ಟು ಓದಿ : ಅರ್ಬನ್ ಕ್ರೂಸರ್‌ ಹೈರೈಡರ್‌ನ ಆನ್ ರೋಡ್ ಬೆಲೆ

Share via

Write your Comment on Toyota hyryder

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

ಟ್ರೆಂಡಿಂಗ್ ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
Rs.10 - 19.52 ಲಕ್ಷ*
ಎಲೆಕ್ಟ್ರಿಕ್ಹೊಸ ವೇರಿಯೆಂಟ್
Rs.17.49 - 22.24 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ