Login or Register ಅತ್ಯುತ್ತಮ CarDekho experience ಗೆ
Login

ಭಾರತದಲ್ಲಿ VinFast VF 3 ಬಿಡುಗಡೆ 2026ಕ್ಕೆ ಮುಂದೂಡಿಕೆ

vinfast vf3 ಗಾಗಿ dipan ಮೂಲಕ ಫೆಬ್ರವಾರಿ 06, 2025 07:39 pm ರಂದು ಪ್ರಕಟಿಸಲಾಗಿದೆ

ವಿಎಫ್ 6 ಮತ್ತು ವಿಎಫ್ 7 ನಂತರ ವಿಎಫ್ 3ಯು ವಿಯೆಟ್ನಾಂ ಕಾರು ತಯಾರಕ ಕಂಪನಿಯಾದ ವಿನ್‌ಫಾಸ್ಟ್‌ನಿಂದ ಭಾರತದಲ್ಲಿ ಬಿಡುಗಡೆ ಮಾಡುತ್ತಿರುವ ಮೂರನೇ ಎಲೆಕ್ಟ್ರಿಕ್‌ ವಾಹನವಾಗಬಹುದು, ಇವೆರಡೂ 2025ರ ದೀಪಾವಳಿಯ ವೇಳೆಗೆ ಬಿಡುಗಡೆಯಾಗಲಿವೆ

  • VF 3 ಬಾಕ್ಸ್ ಮಾದರಿಯ ಮತ್ತು ದೃಢವಾದ ಬಾಹ್ಯ ವಿನ್ಯಾಸವನ್ನು ಹೊಂದಿದ್ದು, ಸುತ್ತಲೂ ಹ್ಯಾಲೊಜೆನ್ ಲೈಟ್‌ಗಳು ಮತ್ತು 3 ಬಾಗಿಲುಗಳನ್ನು ಹೊಂದಿದೆ.

  • ಇಂಟೀರಿಯರ್‌ 4 ಆಸನಗಳು, 2-ಸ್ಪೋಕ್ ಸ್ಟೀರಿಂಗ್ ವೀಲ್ ಮತ್ತು 10-ಇಂಚಿನ ಟಚ್‌ಸ್ಕ್ರೀನ್‌ನೊಂದಿಗೆ ಸರಳವಾಗಿದೆ.

  • ಇದರ ಸುರಕ್ಷತಾ ಜಾಲವು ಬಹು ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್‌ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಒಳಗೊಂಡಿದೆ.

  • ಜಾಗತಿಕವಾಗಿ, ಇದು 18.64 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಹಿಂಭಾಗದ ಆಕ್ಸಲ್-ಮೌಂಟೆಡ್ ಮೋಟಾರ್ (41 ಪಿಎಸ್‌ / 110 ಎನ್‌ಎಮ್‌)ಅನ್ನು ಹೊಂದಿದೆ.

  • 215 ಕಿ.ಮೀ.ಗಳವರೆಗಿನ ಕ್ಲೈಮ್‌ ಮಾಡಲಾದ ರೇಂಜ್‌ ಅನ್ನು ನೀಡುತ್ತದೆ.

  • ಬೆಲೆಗಳು 10 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ.

ಇತ್ತೀಚೆಗೆ ಮುಕ್ತಾಯಗೊಂಡ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ರಲ್ಲಿ ವಿಯೆಟ್ನಾಂ ಮೂಲದ ಎಲೆಕ್ಟ್ರಿಕ್ ಕಾರು ತಯಾರಕರಾದ ವಿನ್‌ಫಾಸ್ಟ್, ಈ ವರ್ಷದ ದೀಪಾವಳಿಯ ವೇಳೆಗೆ ವಿನ್‌ಫಾಸ್ಟ್ ವಿಎಫ್ 6 ಮತ್ತು ವಿನ್‌ಫಾಸ್ಟ್ ವಿಎಫ್ 7 ಬಿಡುಗಡೆ ಮಾಡುವುದಾಗಿ ದೃಢಪಡಿಸಿತು. ಈಗ, ಕಾರು ತಯಾರಕರು ತಮ್ಮ ಅತ್ಯಂತ ಕೈಗೆಟುಕುವ ಬೆಲೆಯನ್ನು ಹೊಂದಿರುವ ಜಾಗತಿಕ ಕೊಡುಗೆಯಾದ ವಿನ್‌ಫಾಸ್ಟ್ ವಿಎಫ್ 3 ಅನ್ನು 2026 ರಲ್ಲಿ ಭಾರತದಲ್ಲಿ ಪರಿಚಯಿಸಲಾಗುವುದು ಎಂದು ದೃಢಪಡಿಸಿದ್ದಾರೆ. ನಿಖರವಾದ ಬಿಡುಗಡೆ ದಿನಾಂಕ ಇನ್ನೂ ಬಹಿರಂಗಗೊಂಡಿಲ್ಲವಾದರೂ, ವಿನ್‌ಫಾಸ್ಟ್‌ ವಿಎಫ್‌ 3 ಅದರ ಜಾಗತಿಕ-ಸ್ಪೆಕ್ ಮೊಡೆಲ್‌ನಲ್ಲಿ ಬರುವ ಎಲ್ಲವೂ ಇಲ್ಲಿದೆ:

ವಿನ್‌ಫಾಸ್ಟ್ ವಿಎಫ್ 3 ಎಕ್ಸ್‌ಟೀರಿಯರ್‌

ʻ

ವಿನ್‌ಫಾಸ್ಟ್ ವಿಎಫ್ 3 ಒಟ್ಟಾರೆ ಬಾಕ್ಸೀ ವಿನ್ಯಾಸ ಮತ್ತು ಎಂಜಿ ಕಾಮೆಟ್ ಇವಿಯಂತೆಯೇ ಎರಡೂ ಬದಿಗಳಲ್ಲಿ ಎರಡು ಬಾಗಿಲುಗಳೊಂದಿಗೆ ಬರುತ್ತದೆ. ಇದು ಹ್ಯಾಲೊಜೆನ್ ಹೆಡ್‌ಲೈಟ್‌ಗಳೊಂದಿಗೆ ಮುಚ್ಚಲ್ಪಟ್ಟಿರುವ ಕಪ್ಪು ಗ್ರಿಲ್ ಮತ್ತು ವಿನ್‌ಫಾಸ್ಟ್‌ ಲೋಗೋದೊಂದಿಗೆ ಗ್ರಿಲ್‌ನ ಮಧ್ಯದಲ್ಲಿ ಕ್ರೋಮ್ ಬಾರ್ ಅನ್ನು ಹೊಂದಿದೆ. ಇದು ಸಂಪೂರ್ಣ ಕಪ್ಪು ಬಣ್ಣದ ಮುಂಭಾಗ ಮತ್ತು ಹಿಂಭಾಗದ ಬಂಪರ್ ಅನ್ನು ಹೊಂದಿದ್ದು, ಅದು ಬಾಡಿಯಾದ್ಯಂತ ಹಾದುಹೋಗುವ ಬಾಡಿ ಕ್ಲಾಡಿಂಗ್‌ಗೆ ಸರಾಗವಾಗಿ ಸಂಯೋಜಿಸುತ್ತದೆ. ಮುಂಭಾಗದಂತೆಯೇ, ಹಿಂಭಾಗವು ಹ್ಯಾಲೊಜೆನ್ ಟೈಲ್ ಲೈಟ್‌ಗಳು ಮತ್ತು ಮಧ್ಯದಲ್ಲಿ ವಿನ್‌ಫಾಸ್ಟ್ ಲೋಗೋ ಹೊಂದಿರುವ ಕ್ರೋಮ್ ಬಾರ್ ಅನ್ನು ಹೊಂದಿರುವ ಕಪ್ಪು ಸೆಕ್ಷನ್‌ಅನ್ನು ಸಹ ಪಡೆಯುತ್ತದೆ.

ವಿನ್‌ಫಾಸ್ಟ್ ವಿಎಫ್ 3 ಇಂಟೀರಿಯರ್, ಫೀಚರ್‌ಗಳು ಮತ್ತು ಸುರಕ್ಷತೆ

ವಿನ್‌ಫಾಸ್ಟ್‌ ವಿಎಫ್‌ 3 ಸರಳವಾದ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಹೊಂದಿದ್ದು, ದಪ್ಪವಾಗಿ ಕಾಣುವ 2-ಸ್ಪೋಕ್ ಸ್ಟೀರಿಂಗ್ ವೀಲ್ ಮತ್ತು 10-ಇಂಚಿನ ಫ್ಲೋಟಿಂಗ್‌ ಟಚ್‌ಸ್ಕ್ರೀನ್ ಅನ್ನು ಹೊಂದಿದ್ದು ಅದು ಚಾಲಕನ ಡಿಸ್‌ಪ್ಲೇಯಾಗಿಯೂ ಕಾರ್ಯನಿರ್ವಹಿಸುತ್ತದೆ. ಜಾಗತಿಕ-ಸ್ಪೆಕ್ ಮೊಡೆಲ್‌ ಸಂಪೂರ್ಣ ಕಪ್ಪು ಕ್ಯಾಬಿನ್ ಥೀಮ್ ಮತ್ತು 4 ಸೀಟುಗಳನ್ನು ಹೊಂದಿದ್ದು, ಸಹ-ಚಾಲಕನ ಸೀಟನ್ನು ಮಡಿಸುವ ಮೂಲಕ ಹಿಂದಿನ ಸಾಲನ್ನು ಪ್ರವೇಶಿಸಬಹುದು. ಇತರ ಫೀಚರ್‌ಗಳಲ್ಲಿ ಮ್ಯಾನುವಲ್ ಎಸಿ ಮತ್ತು ಮುಂಭಾಗದ ಪವರ್ ವಿಂಡೋಗಳು ಸೇರಿವೆ. ಇದರ ಸುರಕ್ಷತಾ ಸೂಟ್ ಬಹು ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್‌ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಒಳಗೊಂಡಿದೆ.

ಇದನ್ನೂ ಓದಿ: 2025ರ ಆಟೋ ಎಕ್ಸ್‌ಪೋದಲ್ಲಿ VinFastನಿಂದ 6 ಎಲೆಕ್ಟ್ರಿಕ್ ಎಸ್‌ಯುವಿಗಳು ಮತ್ತು 1 ಎಲೆಕ್ಟ್ರಿಕ್ ಪಿಕಪ್ ಟ್ರಕ್ ಕಾನ್ಸೆಪ್ಟ್‌ನ ಪ್ರದರ್ಶನ

ವಿನ್‌ಫಾಸ್ಟ್ ವಿಎಫ್ 3 ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟಾರ್

ಜಾಗತಿಕ-ಸ್ಪೆಕ್ ವಿನ್‌ಫಾಸ್ಟ್ ವಿಎಫ್ 3 ಹಿಂಭಾಗದ ಆಕ್ಸಲ್-ಮೌಂಟೆಡ್ (ಆರ್‌ಡಬ್ಲ್ಯೂಡಿ) ಎಲೆಕ್ಟ್ರಿಕ್ ಮೋಟರ್‌ಗೆ ಜೋಡಿಸಲಾದ ಒಂದೇ ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಬರುತ್ತದೆ. ವಿವರವಾದ ವಿಶೇಷಣಗಳು ಈ ಕೆಳಗಿನಂತಿವೆ:

ಬ್ಯಾಟರಿ ಪ್ಯಾಕ್‌

18.64 ಕಿ.ವ್ಯಾಟ್‌

ಎಲೆಕ್ಟ್ರಿಕ್ ಮೋಟರ್‌ಗಳ ಸಂಖ್ಯೆ

1

ಪವರ್‌

41 ಪಿಎಸ್‌

ಟಾರ್ಕ್‌

110 ಎನ್‌ಎಮ್‌

ಕ್ಲೈಮ್‌ ಮಾಡಲಾದ ರೇಂಜ್‌

215 ಕಿ.ಮೀ.

ಡ್ರೈವ್‌ಟ್ರೈನ್‌

ರಿಯರ್‌ ವೀಲ್‌ ಡ್ರೈವ್‌ (RWD)

VF 3 ಅನ್ನು 36 ನಿಮಿಷಗಳಲ್ಲಿ 10-70 ಪ್ರತಿಶತದಷ್ಟು ವೇಗವಾಗಿ ಚಾರ್ಜ್ ಮಾಡಬಹುದು. ಭಾರತ-ಸ್ಪೆಕ್ VF 3 ಅದೇ ರೀತಿಯ ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟಾರ್ ವಿಶೇಷಣಗಳನ್ನು ಹೊಂದಿರುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ.

ವಿನ್‌ಫಾಸ್ಟ್‌ VF 3 ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಭಾರತ-ಸ್ಪೆಕ್ ವಿನ್‌ಫಾಸ್ಟ್ ವಿಎಫ್ 3ಯ ಬೆಲೆ 10 ಲಕ್ಷ ರೂ.ಗಳಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ. ಜಾಗತಿಕವಾಗಿ, ವಿನ್‌ಫಾಸ್ಟ್ ವಿಎಫ್ 3, ಎಂಜಿ ವಿಂಡ್ಸರ್ ಮತ್ತು ಎಂಜಿ ಝಡ್‌ಎಸ್ ಇವಿ ಸೇರಿದಂತೆ ಎಂಜಿ ಎಲೆಕ್ಟ್ರಿಕ್ ಕಾರುಗಳಲ್ಲಿ ಲಭ್ಯವಿರುವ ಬ್ಯಾಟರಿ ಚಂದಾದಾರಿಕೆ ಯೋಜನೆಯೊಂದಿಗೆ ಬರುತ್ತದೆ. ಅಂತಹ ಚಂದಾದಾರಿಕೆ ಯೋಜನೆಯನ್ನು ಭಾರತದಲ್ಲಿ ಅಳವಡಿಸಿದರೆ, ಬೆಲೆಗಳು ಮೇಲೆ ತಿಳಿಸಿದ ಬೆಲೆಗಿಂತ ಕಡಿಮೆಯಾಗಬಹುದು ಎಂದು ನಾವು ನಿರೀಕ್ಷಿಸಬಹುದು. ಹಾಗೆಯೇ, ಇದು ಎಮ್‌ಜಿ ಕಾಮೆಟ್‌ಗೆ ನೇರವಾಗಿ ಪ್ರತಿಸ್ಪರ್ಧಿಯಾಗಲಿದೆ ಮತ್ತು ಟಾಟಾ ಟಿಯಾಗೊ ಇವಿ, ಸಿಟ್ರೊಯೆನ್ eC3 ಮತ್ತು ಟಾಟಾ ಟಿಗೋರ್ ಇವಿಗಳಿಗೆ ಕೈಗೆಟುಕುವ ಪರ್ಯಾಯವಾಗಲಿದೆ.

ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ

Share via

Write your Comment on VinFast vf3

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಎಲೆಕ್ಟ್ರಿಕ್ಹೊಸ ವೇರಿಯೆಂಟ್
Rs.18.90 - 26.90 ಲಕ್ಷ*
ಎಲೆಕ್ಟ್ರಿಕ್ಹೊಸ ವೇರಿಯೆಂಟ್
Rs.21.90 - 30.50 ಲಕ್ಷ*
Rs.9 - 17.80 ಲಕ್ಷ*
ಹೊಸ ವೇರಿಯೆಂಟ್
Rs.44.90 - 55.90 ಲಕ್ಷ*
Rs.75.80 - 77.80 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ