ವೊಲ್ಕ್ಸ್ವಾಗನ್ ವೆಂಟೋ ಫೇಸ್ ಲಿಫ್ಟ್ ಬಿಡುಗಡೆ ಮಾಡಲಾಗಿದೆ.
ಪ್ರಕಟಿಸಲಾಗಿದೆ ನಲ್ಲಿ sep 10, 2019 11:43 am ಇವರಿಂದ sonny ವೋಕ್ಸ್ವ್ಯಾಗನ್ ವೆಂಟೊ ಗೆ
- 12 ವೀಕ್ಷಣಿಗಳು
- ಕಾಮೆಂಟ್ ಅನ್ನು ಬರೆಯಿರಿ
ಹಲವು ಸೌಂದರ್ಯಕ ತುಣುಕುಗಳನ್ನು ಪಡೆಯುತ್ತದೆ . ಹೊಸ GT ಲೈನ್ ವೇರಿಯೆಂಟ್ ಮತ್ತು VW ಕನೆಕ್ಟ್
- ಫೇಸ್ ಲಿಫ್ಟ್ ಆಗಿರುವ ವೆಂಟೋ ದಲ್ಲಿ ಸೌಂದರ್ಯಕಗಳ ನವೀಕರಣ ಕೊಡಲಾಗಿದೆ, ಹೊಸ ಫ್ರಂಟ್ ಗ್ರಿಲ್, ಸೈಡ್ ಸ್ಕರ್ಟ್ ಗಳು, ಮತ್ತು ನವೀಕರಣಗೊಂಡ ಟೈಲ್ ಲ್ಯಾಂಪ್ ಗಳು.
- ಈಗ ಇದರ ಬೆಲೆ ರೂ 8.76 ಲಕ್ಷ ದಿಂದ ರೂ 14.34 ಲಕ್ಷ ವರೆಗೂ ವ್ಯಾಪಿಸಿದೆ(ಎಕ್ಸ್ ಶೋ ರೂಮ್ , ಭಾರತ )
- ಪವರ್ ಟ್ರೈನ್ ಹಾಗು ಫೀಚರ್ ಗಳ ಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿಲ್ಲ. ಇದರಲ್ಲಿ BS4 ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಕೊಡಲಾಗಿದೆ ಹಿಂದಿನಂತೆ.
- ಹೊಸ GT ಲೈನ್ ವೇರಿಯೆಂಟ್ ಜೊತೆಗೆ ಡುಯಲ್ ಟೋನ್ ಬಾಹ್ಯಗಳಲ್ಲಿ ಕಪ್ಪು ORVM ಗಳು, ರೂಫ್ ಮತ್ತು ರೇರಾರ್ ಸ್ಪೋಇಲರ್ ಕೊಡಲಾಗಿದೆ.
- ಇದರ ಪ್ರತಿಸ್ಪರ್ಧೆ ಟೊಯೋಟಾ ಯಾರೀಸ್, ಹುಂಡೈ ವೆರ್ನಾ, ಹೋಂಡಾ ಸಿಟಿ, ಮಾರುತಿ ಸಿಯಾಜ್, ಮತ್ತು ಸ್ಕೊಡಾ ರಾಪಿಡ್ ಜೊತೆಗೆ ಮುಂದುವರೆಯಲಿದೆ.
ಇಂಡಿಯಾ ಸ್ಪೆಕ್ ವೋಕ್ಸ್ವ್ಯಾಗನ್ ವೆಂಟೋ ಗಾಗಿ ಮತ್ತೊಂದು ಫೇಸ್ ಲಿಫ್ಟ್ ಕೊಡಲಾಗಿದೆ ಜನರೇಶನ್ ನವೀಕರಣ ಇನ್ನು ದೂರ ಇದೆ ಎನ್ನುವಂತಹ ಸಂದರ್ಭದಲ್ಲಿ. ಇದರಲ್ಲಿ ನವೀಕರಣಗೊಂಡ ಬಾಹ್ಯ ಸೌಂದರ್ಯಕಗಳು ಮತ್ತು ಹಲವು ಹೆಚ್ಚುವರಿ ಫೀಚರ್ ಗಳನ್ನು ಕೊಡಲಾಗಿದೆ. ವೆಂಟೋ 2019 ಬೆಲೆ ರೂ 8.76 ಲಕ್ಷ ದಿಂದ ಪ್ರಾರಂಭವಾಗುತ್ತದೆ (ಎಕ್ಸ್ ಶೋ ರೂಮ್ ಭಾರತದಾದ್ಯಂತ )
ವೇರಿಯೆಂಟ್ ಗಳಿಗೆ ಅನುಗುಣವಾಗಿ ಹೊಸ ವೆಂಟೋ ಬೆಲೆ ಇನ್ನು ಬಹಿರಂಗಪಡಿಸಲಾಗಿಲ್ಲ, ಆದರೆ ಲಭ್ಯವಿರುವ ಮಾಹಿತಿ ಕೆಳಗಿನಂತಿದೆ ( ಎಲ್ಲವು ಎಕ್ಸ್ ಶೋ ರೂಮ್, ಭಾರತ ):
|
2019 ವೆಂಟೋ |
ಫೇಸ್ ಲಿಫ್ಟ್ ಮುಂಚೆಯ ವೆಂಟೋ |
ಪೆಟ್ರೋಲ್ |
Rs 8.76 lakh to Rs 13.17 lakh |
Rs 8.65 lakh to Rs 12.99 lakh |
ಡೀಸೆಲ್ |
Rs 9.58 lakh to Rs 14.49 lakh |
Rs 9.47 lakh to Rs 14.34 lakh |
ವೆಂಟೋ ಫೇಸ್ ಲಿಫ್ಟ್ ಆವೃತ್ತಿ ತನ್ನ ನವೀಕರಣಗಳನ್ನು ಹೊಸ ಪೋಲೊ ದೊಂದಿಗೂ ಸಹ ಹಂಚಿಕೊಂಡಿದೆ, ಅದರಲ್ಲಿ ಹೊಸ ಟೈಲ್ ಲ್ಯಾಂಪ್ ಗಳು, ಹೊಂಸ ಫ್ರಂಟ್ ಗ್ರಿಲ್ ವಿನ್ಯಾಸ ಜೊತೆಗೆ ಹನಿ ಕಾಂಬ ಶೈಲಿ ಮೆಶ್ , ಹೊಸ ರೇರ್ ಡಿಫ್ಫ್ಯೂಸೆರ್ ಮತ್ತು ಹೊಸ ಸೈಡ್ ಸ್ಕರ್ಟ್ ಗಳು ಸೇರಿವೆ. ಅದರೊಟ್ಟಿಗೆ, ಕ್ಯಾಬಿನ್ ಹಾಗೆಯೆ ಉಳಿದಿದೆ ಜೊತೆಗೆ ವೋಕ್ಸ್ವ್ಯಾಗನ್ ಕನೆಕ್ಟ್ ಫೀಚರ್ ಗಳನ್ನು ಡಾಂಗಲ್ ನೊಂದಿಗೆ ಕೊಡಲಾಗಿದೆ.
ವೋಕ್ಸ್ವ್ಯಾಗನ್ ನವರು ಹೊಸ GT ಲೈನ್ ವೇರಿಯೆಂಟ್ ಅನ್ನು ವೆಂಟೋ ದಲ್ಲಿ ಪರಿಚಯಿಸಿದ್ದಾರೆ ಅದು ಸ್ಪರ್ಧಾತ್ಮಕ ಫ್ರಂಟ್ ಮತ್ತು ರೇರ್ ಬಂಪರ್ ಜೊತೆಗೆ ಡುಯಲ್ ಟೋನ್ ಬಾಹ್ಯ ಫೀಚರ್ ಗಳಾದ ಬ್ಲಾಕ್ ರೂಫ್, ಬ್ಲಾಕ್ ORVM ಗಳು, ರೇರ್ ಸ್ಪೋಇಲರ್ ಮತ್ತು GT ಲೈನ್ ಬ್ಯಾಡ್ಜ್ ಪಡೆಯುತ್ತದೆ. ಈ ಕಾಂಪ್ಯಾಕ್ಟ್ ಸೆಡಾನ್ ಅದೇ ವ್ಯಾಪ್ತಿ ಪೆಟ್ರೋಲ್ ಹಾಗು ಡೀಸೆಲ್ ಪವರ್ ಟ್ರೈನ್ ಅನ್ನು ಪಡೆಯುತ್ತದೆ ಮಾನ್ಯುಯಲ್ ಮತ್ತು ಆಟೋಮ್ಯಾಟಿಕ್ ಆಯ್ಕೆಗಳನ್ನು ಸಹ ಪಡೆಯುತ್ತದೆ.
ಪೆಟ್ರೋಲ್ ಆಯ್ಕೆ 1.6- ಲೀಟರ್ ಮತ್ತು 1.2-ಲೀಟರ್ ಟರ್ಬೊ ಚಾರ್ಜ್ ಎಂಜಿನ್ , ಎರೆಡೂ 105PS ಪವರ್ ಕೊಡುತ್ತದೆ. ನೈಸರ್ಗಿಕ ಗಲಿ ತೆಗೆದುಕೊಳ್ಳುವ ಎಂಜಿನ್ ಕೇವಲ 5-ಸ್ಪೀಡ್ ಮಾನ್ಯುಯಲ್ ಒಂದಿಗೆ ದೊರೆಯುತ್ತದೆ. TSI ಎಂಜಿನ್ ಅನ್ನು 7-ಸ್ಪೀಡ್ DSG ಆಟೋಮ್ಯಾಟಿಕ್ ಒಂದಿಗೆ ಮಾತ್ರ ಕೊಡಲಾಗುತ್ತದೆ. 1.5- ಲೀಟರ್ ಡೀಸೆಲ್ ಎಂಜಿನ್ ಈಗಲೂ ಸಹ 110PS ಪವರ್ ಮತ್ತು 250Nm ತಾರ್ಕ್ ಕೊಡುತ್ತದೆ ಮತ್ತು ಅದು 5- ಸ್ಪೀಡ್ ಮಾನ್ಯುಯಲ್ ಮತ್ತು 7- ಸ್ಪೀಡ್ DSG ಆಟೋ ಒಂದಿಗೆ ದೊರೆಯುತ್ತದೆ.
ಕ್ಯಾಬಿನ್ ವಿಚಾರದಲ್ಲಿ ಯಾವುದೇ ನವೀಕರಣಗಳು ಇಲ್ಲದೆ ಇದ್ದರು, ವೆಂಟೋ ದಲ್ಲಿ ಹೆಚ್ಚು ಸಲಕರಣೆಗಳನ್ನು ಕೊಡಲಾಗಿದೆ. ಫೀಚರ್ ಗಳ ಹೈಲೈಟ್ ನಲ್ಲಿ ಕ್ರೂಸ್ ಕಂಟ್ರೋಲ್, ನಾಲ್ಕು ಏರ್ಬ್ಯಾಗ್ ಗಳು, ಆಟೋ AC ಜೊತೆಗೆ ರೇರ್ ವೆಂಟ್ ಗಳು, ಮತ್ತು ಪೂರ್ಣ LED ಹೆಡ್ ಲ್ಯಾಂಪ್ ಗಳು ಸೇರಿವೆ. ಅದರಲ್ಲಿ ಡುಯಲ್ ಫ್ರಂಟ್ ಏರ್ಬ್ಯಾಗ್ ಗಳು, ರೇರ್ ಪಾರ್ಕಿಂಗ್ ಸೆನ್ಸಾರ್ ಗಳು, ABS ಜೊತೆಗೆ EBD, ಸ್ಪೀಡ್ ಅಲರ್ಟ್ ಮತ್ತು ಫ್ರಂಟ್ ಸೀಟ್ ಬೆಲ್ಟ್ ವಾರ್ನಿಂಗ್ ಗಳನ್ನೂ ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ.
ವೋಕ್ಸ್ವ್ಯಾಗನ್ ನವರು ಗ್ರಾಹಕರ ವಾಹನಕ್ಕಾಗಿ ಮಾಡುವ ಒಟ್ಟಾರೆ ಖರ್ಚು ಕಡಿಮೆ ಮಾಡಕ್ ಸಹ ಪ್ರಯತ್ನಿಸುತ್ತಿದೆ. ಕಾರ್ ಮೇಕರ್ ಈಗ 5-ವರ್ಷ ವಾರಂಟಿ ಯನ್ನು ಎಲ್ಲ ಡೀಸೆಲ್ ಎಂಜಿನ್ ವೇರಿಯೆಂಟ್ ಗಳೊಂದಿಗೆ ಸ್ಟ್ಯಾಂಡರ್ಡ್ ಆಗಿ ಕೊಡುತ್ತಿದ್ದಾರೆ. ಇತರ ಮಾಡೆಲ್ ಗಳು 4EVER ಕಾರ್ ಪ್ಯಾಕೇಜ್ ಪಡೆಯುತ್ತದೆ ಅದರಲ್ಲಿ 4-ವರ್ಷ /1 ಲಕ್ಷ ಕಿಮಿ ವಾರರಂಟಿ ಮತ್ತು ರಸ್ತೆ ಬದಿಯ ಸಹಾಯ ಜೊತೆಗೆ ಮೂರೂ ಉಚಿತ ಸರ್ವಿಸ್ ಕೊಡುತ್ತಿದ್ದಾರೆ. ವೋಕ್ಸ್ವ್ಯಾಗನ್ ಘೋಷಿಸಿರುವಂತೆ ಅವರು ಎಕ್ಸ್ಟೆಂಡೆಡ್ ವಾರರಂತಿ ಪ್ಯಾಕೇಜ್ ಅನ್ನು 7 ವರ್ಷ ವರೆಗೂ ವ್ಯಾಪಿಸುವಂತೆ ಮಾಡಲಿದ್ದಾರೆ.
2019 ವೆಂಟೋ ತನ್ನ ಸ್ಪರ್ಧೆಯನ್ನು ಹೋಂಡಾ ಸಿಟಿ, ಹುಂಡೈ ವೆರ್ನಾ, ಸ್ಕೊಡಾ ರಾಪಿಡ್ ಟೊಯೋಟಾ ಯಾರೀಸ್ ಮತ್ತು ಮಾರುತಿ ಸಿಯಾಜ್ ಗಳೊಂದಿಗೆ ಮುಂದುವರೆಸಲಿದ್ದಾರೆ
- Renew Volkswagen Vento Car Insurance - Save Upto 75%* with Best Insurance Plans - (InsuranceDekho.com)
- Loan Against Car - Get upto ₹25 Lakhs in cash
0 out of 0 found this helpful