ಭಾರತದ ಅತ್ಯಂತ ಸುರಕ್ಷಿತ ಕಾರುಗಳು: ಟೈಗನ್ ಮತ್ತು ಕುಶಾಕ್ ಅನ್ನು ಹಿಂದಿಕ್ಕಿದ ಫೋಕ್ಸ್‌ವ್ಯಾಗನ್ ವರ್ಟಸ್ ಮತ್ತು ಸ್ಕೋಡಾ ಸ್ಲಾವಿಯಾ
ವೋಕ್ಸ್ವ್ಯಾಗನ್ ವಿಟರ್ಸ್ ಗಾಗಿ tarun ಮೂಲಕ ಏಪ್ರಿಲ್ 05, 2023 10:18 pm ರಂದು ಪ್ರಕಟಿಸಲಾಗಿದೆ
- 21 Views
- ಕಾಮೆಂಟ್ ಅನ್ನು ಬರೆಯಿರಿ
ಈ ಸೆಡಾನ್‌ಗಳು ವಯಸ್ಕ ಮತ್ತು ಮಗು ಈ ಎರಡೂ ಪ್ರಯಾಣಿಕರ ಸುರಕ್ಷೆಯಲ್ಲೂ ಫೈವ್ ಸ್ಟಾರ್‌ಗಳನ್ನು ಗಳಿಸಿದೆ .
- ಫ್ರಂಟಲ್, ಸೈಡ್ ಬಾರಿಯರ್ ಮತ್ತು ಸೈಡ್ ಪೋಲ್ ಇಂಪಾಕ್ಟ್ ಪರೀಕ್ಷೆಗಳನ್ನು ವರ್ಟಸ್ ಮತ್ತು ಸ್ಲಾವಿಯಾದ ಮೇಲೆ ಕೈಗೊಳ್ಳಲಾಯಿತು
- ಈ ಸೆಡಾನ್‌ಗಳು ವಯಸ್ಕ ಪ್ರಯಾಣಿಕರಿಗೆ 34 ರಲ್ಲಿ 29.71 ಅಂಕಗಳನ್ನು ಗಳಿಸಿವೆ ಮತ್ತು ಮಕ್ಕಳ ರಕ್ಷಣೆಯಲ್ಲಿ 49 ರಲ್ಲಿ 42 ಅಂಕಗಳನ್ನು ಗಳಿಸಿವೆ.
- ಬಾಡಿಶೆಲ್ ಇಂಟೆಗ್ರಿಟಿ ಮತ್ತು ಫೂಟ್‌ವೆಲ್ ಏರಿಯಾವು ಸ್ಥಿರವೆಂಬುದಾಗಿ ರೇಟ್ ಆಗಿವೆ.
- ಈ ಸೆಡಾನ್‌ಗಳು ಇಎಸ್‌ಸಿ, ಟ್ರಾಕ್ಷನ್ ಕಂಟ್ರೋಲ್, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, TPMS ಮತ್ತು ISOFIX ಸೀಟ್ ಮೌಂಟ್‌ಗಳನ್ನು ಪಡೆಯುತ್ತವೆ.
ಬ್ರೇಕಿಂಗ್ ನ್ಯೂಸ್! ಫೋಕ್ಸ್‌ವ್ಯಾಗನ್ ವರ್ಟಸ್ ಮತ್ತು ಸ್ಕೋಡಾ ಸ್ಲಾವಿಯಾ ತಮ್ಮದೇ ಸಹೋದರ ಎಸ್‌ಯುವಿಗಳನ್ನು ಹಿಂದಿಕ್ಕಿ ಭಾರತದ ಅತ್ಯಂತ ಸುರಕ್ಷಿತ ಕಾರುಗಳೆನಿಸಿಕೊಂಡಿವೆ. ಇವೆರಡನ್ನೂ ಎಸ್‌ಯುವಿಗಳಂತಹ ಅಪ್ಡೇಟೆಡ್ ಗ್ಲೋಬಲ್ NCAP ಸ್ಟಾಂಡರ್ಡ್‌ಗಳ ಮೂಲಕ ಕ್ರ್ಯಾಶ್ ಪರೀಕ್ಷೆಗೆ ಒಳಪಡಿಸಲಾಯಿತು ಮತ್ತು ಪೂರ್ಣ ಫೈವ್ ಸ್ಟಾರ್ ರೇಟಿಂಗ್ ಅನ್ನು ಗಳಿಸಿದವು ಹಾಗೂ ಒಟ್ಟಾರೆ ಸ್ಕೋರ್‌ಗಳು ಕುಶಾಕ್ ಮತ್ತು ಟೈಗನ್‌ಗಿಂತ ತುಸು ಹೆಚ್ಚಿದ್ದವು.
ವಯಸ್ಕ ಪ್ರಯಾಣಿಕರ ರಕ್ಷಣೆ
ಸ್ಕೋಡಾ ಸ್ಲಾವಿಯಾ ಮತ್ತು ಫೋಕ್ಸ್‌ವ್ಯಾಗನ್ ವರ್ಟಸ್ ವಯಸ್ಕರ ರಕ್ಷಣೆಯಲ್ಲಿ 34 ಅಂಕಗಳಲ್ಲಿ 29.71 ಅಂಕಗಳನ್ನು ಗಳಿಸಿದವು. ಇದಕ್ಕೆ ಹೋಲಿಸಿದರೆ, ಕುಶಾಕ್ ಮತ್ತು ಟೈಗನ್ ಅದೇ ಪರೀಕ್ಷೆಗಳಲ್ಲಿ 29.64 ಅಂಕಗಳನ್ನು ಗಳಿಸಿದವು. ಫ್ರಂಟ್ ಇಂಪಾಕ್ಟ್ ಪರೀಕ್ಷೆಯಲ್ಲಿ, ಸೆಡಾನ್‌ಗಳು ತಲೆ, ಕುತ್ತಿಗೆ, ಚಾಲಕರ ತೊಡೆಗಳು ಮತ್ತು ಸಹ ಪ್ರಯಾಣಿಕರ ಕಾಲುಗಳಿಗೆ ಉತ್ತಮ ರಕ್ಷಣೆಯನ್ನು ಒದಗಿಸಿವೆ. ಮುಂಭಾಗದ ಪ್ರಯಾಣಿಕರಿಬ್ಬರ ಎದೆ ಭಾಗವು ಸಾಕಷ್ಟು ರಕ್ಷಣೆಯನ್ನು ಪಡೆದವು.
ಸೈಡ್ ಬ್ಯಾರಿಯರ್ ಇಂಪಾಕ್ಟ್ ಪರೀಕ್ಷೆಯಲ್ಲಿ, ವಸ್ತಿ ಕುಹರ (ಪೆಲ್ವಿಸ್)ದ ಭಾಗಕ್ಕೆ ಉತ್ತಮ ರಕ್ಷಣೆಯನ್ನು ತೋರಿದರೆ, ತಲೆ, ಎದೆ ಮತ್ತು ಕಿಬ್ಬೊಟ್ಟೆ ಭಾಗಗಳು ಸಾಕಷ್ಟು ರಕ್ಷಿತವಾಗಿದ್ದವು. ಈ ಪರೀಕ್ಷೆಯಲ್ಲಿ, ಕಾರನ್ನು ಸ್ಥಾಯಿಯಾಗಿ ಇಡಲಾಗುತ್ತದೆ ಮತ್ತು ಪಾರ್ಶ್ವದಿಂದ ಬ್ಯಾರಿಯರ್ 50kmph ನಲ್ಲಿ ಬರುತ್ತದೆ. ಸೈಡ್ ಪೋಲ್ ಇಂಪಾಕ್ಟ್ ಪರೀಕ್ಷೆಯಲ್ಲಿ, ಈ ಸೆಡಾನ್‌ಗಳು ತಲೆ, ಕುತ್ತಿಗೆ ಮತ್ತು ವಸ್ತಿ ಕುಹರ ಭಾಗಕ್ಕೆ ಉತ್ತಮ ರಕ್ಷಣೆಯನ್ನು ತೋರಿಸಿವೆ, ಆದರೆ ಎದೆ ಭಾಗಕ್ಕೆ ಸಾಧಾರಣ ರಕ್ಷಣೆ ಪ್ರದರ್ಶಿಸಿವೆ.
ಬಾಡಿಶೆಲ್ ಇಂಟೆಗ್ರಿಟಿ ಮತ್ತು ಫೂಟ್‌ವೆಲ್ ಸ್ಥಿರ ರೇಟಿಂಗ್ ಪಡೆದಿವೆ ಮತ್ತು ಈ ಕಾರುಗಳು 64kmph ರ ಕ್ರ್ಯಾಶ್ ಪರೀಕ್ಷೆ ವೇಗಕ್ಕಿಂತ ಹೆಚ್ಚಿನ ಲೋಡಿಂಗ್‌ಗಳನ್ನು ತಾಳಿಕೊಳ್ಳಬಲ್ಲ ಸಾಮರ್ಥ್ಯವನ್ನು ಹೊಂದಿವೆ. ಬೇರೆಲ್ಲಾ ಇತರೆ ಕಾರುಗಳಂತೆ, ಮೂಲ ವೇರಿಯೆಂಟ್‌ಗಳನ್ನು ಫ್ರಂಟಲ್ ಮತ್ತು ಸೈಡ್ ಕ್ರ್ಯಾಶ್ ಪರೀಕ್ಷೆಗಳಿಗೆ ಬಳಸಲಾಯಿತು, ಸೈಡ್ ಪೋಲ್ ಇಂಪ್ಯಾಕ್ಟ್‌ಗೆ ಟಾಪ್ ಎಂಡ್ ವೇರಿಯೆಂಟ್ ಅನ್ನು ಬಳಸಲಾಯಿತು.
ಪ್ರಯಾಣಿಕ ಮಗುವಿನ ರಕ್ಷಣೆ
ಪ್ರಯಾಣಿಕ ಮಗುವಿನ ರಕ್ಷಣೆಗಾಗಿ, ಸ್ಲಾವಿಯಾ ಮತ್ತು ವರ್ಟಸ್ 49 ರಲ್ಲಿ 42 ಅಂಕಗಳನ್ನು ಗಳಿಸಿವೆ. ಮೂರು ವರ್ಷದ ಮತ್ತು 18 ತಿಂಗಳ ಮಕ್ಕಳನ್ನು ಹಿಂಭಾಗದಲ್ಲಿ ISOFIX ಸೀಟುಗಳಿಗೆ ಮುಖ ಮಾಡಿ ಕೂರಿಸಲಾಗಿತ್ತು, ಫ್ರಂಟಲ್ ಮತ್ತು ಸೈಡ್ ಇಂಪಾಕ್ಟ್ ವೇಳೆ ಇವು ಸಂಪೂರ್ಣ ರಕ್ಷಣೆಯನ್ನು ಖಾತ್ರಿಗೊಳಿಸಿದವು. ಪ್ರಯಾಣಿಕ ಮಕ್ಕಳ ರಕ್ಷಣೆಯಲ್ಲಿ ಫೈವ್ ಸ್ಟಾರ್‌ಗಳನ್ನು ಹೊಂದಿರುವ ತಮ್ಮ ಸಹ ಎಸ್‌ಯುವಿಗಳೊಂದಿಗೆ ಈ ಸೆಡಾನ್‌ಗಳು ಸ್ಥಾನ ಹಂಚಿಕೊಂಡಿವೆ.
ಇದನ್ನೂ ಓದಿ: ಸ್ಕೋಡಾ ಕುಶಾಕ್ ಅಪ್ಡೇಟೆಡ್ ಗ್ಲೋಬಲ್ NCAP ಪರೀಕ್ಷೆಗಳಲ್ಲಿ ಪಡೆದಿದೆ 5 ಸ್ಟಾರ್ ರೇಟಿಂಗ್
ಸ್ಟಾಂಡರ್ಡ್ ಸುರಕ್ಷಾ ಫೀಚರ್‌ಗಳು
ಬೇಸ್ ಸ್ಪೆಕ್ ಸ್ಲಾವಿಯಾ ಮತ್ತು ವರ್ಟಸ್, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಡಿಫರೆನ್ಶಿಯಲ್ ಲಾಕಿಂಗ್, ಟ್ರಾಕ್ಷನ್ ಕಂಟ್ರೋಲ್, ಎಲ್ಲಾ ಐದು ಸೀಟುಗಳಿಗೆ ತ್ರೀ ಪಾಯಿಂಟ್ ಸೀಟ್‌ಬೆಲ್ಟ್‌ಗಳು, ISOFIX ಚೈಲ್ಡ್ ಸೀಟ್ ಮೌಂಟ್‌ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಸಹಿತ ಸುಸಜ್ಜಿತ ಸ್ಟಾಂಡರ್ಡ್ ಫೀಚರ್ ಪಟ್ಟಿಯನ್ನು ಪಡೆದಿದೆ. ಹೈಯರ್ ಎಂಡ್ ವೇರಿಯೆಂಟ್‌ಗಳು ಆರು ಏರ್‌ಬ್ಯಾಗ್‌ಗಳ ತನಕ, ರಿಯರ್ ಪಾರ್ಕಿಂಗ್ ಕ್ಯಾಮರಾ ಮತ್ತು ಹಿಲ್ ಹೋಲ್ಡ್ ಕಂಟ್ರೋಲ್ ಅನ್ನು ಹೊಂದಿರುತ್ತವೆ.
ಅಪ್ಡೇಟೆಡ್ ಗ್ಲೋಬಲ್ NCAP ಕ್ರ್ಯಾಶ್ ಪರೀಕ್ಷೆಗಳು
ಹೊಸ ಗ್ಲೋಬಲ್ NCAP ನಿಯಮಗಳು ಈಗ ಫ್ರಂಟಲ್ ಇಂಪ್ಯಾಕ್ಟ್, ಸೈಡ್ ಬ್ಯಾರಿಯರ್ ಮತ್ತು ಪೋಲ್ ಇಂಪ್ಯಾಕ್ಟ್ ಮತ್ತು ಪಾದಚಾರಿ ಸುರಕ್ಷತಾ ಪರೀಕ್ಷೆಗಳನ್ನು ಎಲೆಕ್ಟ್ರಾನಿಕ್ ಸ್ಥಿರತೆ ನಿಯಂತ್ರಣವನ್ನು ಸ್ಟಾಂಡರ್ಡ್ ಆಗಿ ಒಳಗೊಂಡಿವೆ. ಈ ಮಾನದಂಡವನ್ನು ತೇರ್ಗಡೆಯಾಗುವುದರಿಂದ ಕಾರು ಸಂಪೂರ್ಣ ಫೈವ್ ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆಯುತ್ತದೆ.
ಫೋಕ್ಸ್‌ವ್ಯಾಗನ್ ವರ್ಟಸ್ ರೂ 11.48 ಲಕ್ಷದಿಂದ ರೂ 18.57 ಲಕ್ಷ ತನಕ ಬೆಲೆ ಹೊಂದಿದೆ, ಸ್ಲಾವಿಯಾ ಬೆಲೆ ರೂ 11.39 ಲಕ್ಷದಿಂದ ರೂ 18.45 ಲಕ್ಷ ತನಕ ಇದೆ (ಎಲ್ಲಾ ಬೆಲೆಗಳು ದೆಹಲಿ ಎಕ್ಸ್-ಶೋರೂಂನದ್ದಾಗಿದೆ).
ಇನ್ನಷ್ಟು ಓದಿ: ಫೋಕ್ಸ್‌ವ್ಯಾಗನ್ ವರ್ಟಸ್ ಆನ್ ರೋಡ್ ಬೆಲೆ