• English
  • Login / Register

2024ರಲ್ಲಿ 8 ಕಾರುಗಳನ್ನು ಬಿಡುಗಡೆ ಮಾಡಲಿರುವ Skoda ಮತ್ತು Volkswagen

ಸ್ಕೋಡಾ ಸೂಪರ್‌ ಗಾಗಿ ansh ಮೂಲಕ ಡಿಸೆಂಬರ್ 26, 2023 12:23 pm ರಂದು ಪ್ರಕಟಿಸಲಾಗಿದೆ

  • 45 Views
  • ಕಾಮೆಂಟ್‌ ಅನ್ನು ಬರೆಯಿರಿ

8ರಲ್ಲಿ ನಾಲ್ಕು ಮಾದರಿಗಳು ಸಂಪೂರ್ಣವಾಗಿ ಹೊಸದಾಗಿದ್ದು, ಉಳಿದವು ಪರಿಷ್ಕೃತ ಮತ್ತು ಮಾದರಿ ವರ್ಷದ ನವೀಕರಣಗಳಾಗಿವೆ

Upcoming Skoda-Volkswagen Cars In India

ಸ್ಕೋಡಾ-ಫೋಕ್ಸ್‌ ವ್ಯಾಗನ್‌ ಸಮೂಹವು ಸದ್ಯಕ್ಕೆ ಭಾರತದಲ್ಲಿ ಕಾಂಪ್ಯಾಕ್ಟ್‌ ಸೆಡಾನ್‌, ಕಾಂಪ್ಯಾಕ್ಟ್‌ SUV ಮತ್ತು ಮಿಡ್‌ ಸೈಜ್‌ SUV ವಿಭಾಗದಲ್ಲಿ ಒಟ್ಟು 6 ಕಾರುಗಳನ್ನು ಹೊಂದಿದೆ. ಎರಡೂ ಕಾರು ತಯಾರಕ ಸಂಸ್ಥೆಗಳು ಭಾರತದ ಕಾರು ಮಾರುಕಟ್ಟೆಯಲ್ಲಿ ತಮ್ಮ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶವನ್ನು ಹೊಂದಿದ್ದು, ಈ ಉದ್ದೇಶಕ್ಕಾಗಿ ಮುಂದಿನ ವರ್ಷದಲ್ಲಿ ಇವು ಹೊಸ ಕಾರುಗಳು ಮತ್ತು ಪರಿಷ್ಕೃತ ಮಾದರಿಗಳನ್ನು ಬಿಡುಗಡೆ ಮಾಡಲಿವೆ. ಸ್ಕೋಡಾ ಮತ್ತು ಫೋಕ್ಸ್‌ ವ್ಯಾಗನ್‌ ನಿಂದ ಭಾರತದಲ್ಲಿ 2024ರಲ್ಲಿ ಬಿಡುಗಡೆಯಾಗಲಿರುವ 8 ಕಾರುಗಳ ಪಟ್ಟಿ ಇಲ್ಲಿದೆ:

ನ್ಯೂ-ಜೆನ್‌ ಸ್ಕೋಡಾ ಸುಪರ್ಬ್‌

4th-gen Skoda Superb

 ನಿರೀಕ್ಷಿತ ಬೆಲೆ: ರೂ 40 ಲಕ್ಷ

ನಿರೀಕ್ಷಿತ ಬಿಡುಗಡೆ: ಜೂನ್ 2024

ಸ್ಕೋಡಾ ಸುಪರ್ಬ್‌ ಅನ್ನು ಈ ವರ್ಷದ ಆರಂಭದಲ್ಲಿ ಭಾರತದ ಶೋರೂಂಗಳಿಂದ ಹಿಂಪಡೆಯಲಾಗಿದ್ದು, ಇದು ಮತ್ತೆ ಮಾರುಕಟ್ಟೆಗೆ ಮರಳುವ ಸಾಧ್ಯತೆಗಳು ಕಡಿಮೆ. ಆದರೆ ಸ್ಕೋಡಾ ಸಂಸ್ಥೆಯು ಇತ್ತೀಚೆಗೆ ನಾಲ್ಕನೇ ತಲೆಮಾರಿನ ಸುಪರ್ಬ್ ಅನ್ನು ಜಾಗತಿಕ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದ್ದು, ಇದು ಭಾರತಕ್ಕೂ ಬರಲಿದೆ. ಹೊಸ ಅಗ್ರಗಣ್ಯ ಸುಪರ್ಬ್‌ ಸೆಡಾನ್‌ ವಾಹನವು ಹೊರಾಂಗಣದ ವಿನ್ಯಾಸದಲ್ಲಿ ಬದಲಾವಣೆಯನ್ನು ಕಂಡಿದ್ದು ಹೊಚ್ಚಹೊಸ ಕ್ಯಾಬಿನ್‌ ಅನ್ನು ಪಡೆದಿದೆ. ಅಂತರಾಷ್ಟ್ರೀಯವಾಗಿ ಇದು ಫ್ರಂಟ್‌ ವೀಲ್‌ ಡ್ರೈವ್‌ ಮತ್ತು ಆಲ್‌ ವೀಲ್‌ ಡ್ರೈವ್‌ ವ್ಯವಸ್ಥೆಗಳು ಸೇರಿದಂತೆ, ಹೈಬ್ರೀಡ್‌ ಮತ್ತು ಪ್ಲಗ್‌ ಇನ್‌ ಹೈಬ್ರೀಡ್‌ ಆಯ್ಕೆಗಳು ಸೇರಿದಂತೆ ವಿವಿಧ ಪವರ್‌ ಟ್ರೇನ್‌ ಗಳೊಂದಿಗೆ ದೊರೆಯಲಿದೆ. ಇದು ಲಿಮಿಟೆಡ್‌ ಯೂನಿಟ್‌ ಇಂಪೋರ್ಟ್‌ ಆಗಿ ಬರಲಿದ್ದು, ಮಾರುಕಟ್ಟೆಯಲ್ಲಿ ದುಬಾರಿ ಆಯ್ಕೆ ಎನಿಸಲಿದೆ. ಭಾರತಕ್ಕೆ ಯಾವ ಪವರ್‌ ಟ್ರೇನ್‌ ಬರಬಹುದು ಎಂಬ ಕುರಿತು ನಿಮಗೆ ಇನ್ನಷ್ಟು ತಿಳಿಯುವ ಇಚ್ಛೆ ಇದ್ದಲ್ಲಿ, ಇಲ್ಲಿ ಕ್ಲಿಕ್‌ ಮಾಡಿರಿ.

ನ್ಯೂ-ಜೆನ್‌ ಸ್ಕೋಡಾ ಕೊಡಿಯಾಕ್

New-gen Skoda Kodiaq

 ನಿರೀಕ್ಷಿತ ಬೆಲೆ: ರೂ 40 ಲಕ್ಷ

ನಿರೀಕ್ಷಿತ ಬಿಡುಗಡೆ: ಜೂನ್ 2024

ನ್ಯೂ-ಜೆನ್‌ ಕೊಡಿಯಾಕ್‌ ಸುಪರ್ಬ್‌ ಜೊತೆಗೆ ಸ್ಕೋಡಾ ಸಂಸ್ಥೆಯು ನ್ಯೂ-ಜೆನ್‌ ಕೊಡಿಯಾಕ್‌ ಅನ್ನು ಸಹ ಅನಾವರಣಗೊಳಿಸಿದೆ. ಇದರ ಬಾಹ್ಯ ವಿನ್ಯಾಸದಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಲಾಗಿದ್ದು, ಕ್ಯಾಬಿನ್‌ ನಲ್ಲಿಯೂ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಈ ಪ್ರೀಮಿಯಂ SUV ಯು, ಮೈಲ್ಡ್‌ ಹಾಗೂ ಪ್ಲಗ್‌ ಇನ್‌ ಹೈಬ್ರೀಡ್‌ ಸಿಸ್ಟಂಗಳು ಮತ್ತು ಫ್ರಂಟ್‌ ಹಾಗೂ ಆಲ್‌ ವೀಲ್‌ ಡ್ರೈವ್‌ ಟ್ರೇನ್‌ ಗಳನ್ನು ಒಳಗೊಂಡಂತೆ ಸೆಡಾನ್‌ ನಲ್ಲಿರುವ ಪವರ್‌ ಟ್ರೇನ್‌ ಆಯ್ಕೆಗಳನ್ನೇ ಪಡೆಯಲಿದೆ. ಹೊಸ ಸ್ಕೋಡಾ ಕೊಡಿಯಾಕ್ ಕುರಿತು ಇನ್ನಷ್ಟು ಮಾಹಿತಿಯನ್ನು ನೀವು  ಇಲ್ಲಿ ಪಡೆಯಬಹುದು. ಸುಪರ್ಬ್‌ ನಂತೆಯೇ ಈ ಪರಿಷ್ಕೃತ SUVಯನ್ನು ಸಹ ಸೀಮಿತ ಸಂಖ್ಯೆಯಲ್ಲಿ ಇಲ್ಲಿಗೆ ತರಲಾಗುತ್ತದೆ.

ಸ್ಕೋಡಾ ಎನ್ಯಾಕ್‌ iV

Skoda Enyaq iV

 ನಿರೀಕ್ಷಿತ ಬೆಲೆ: ರೂ 60 ಲಕ್ಷ 

ನಿರೀಕ್ಷಿತ ಬಿಡುಗಡೆ: ಸೆಪ್ಟೆಂಬರ್‌ 2024

ಸ್ಕೋಡಾ ಸಂಸ್ಥೆಯು ಎನ್ಯಾಕ್‌ iV ಮೂಲಕ 2024ರಲ್ಲಿ ಭಾರತದ EV ಕ್ಷೇತ್ರದಲ್ಲೂ ಕಾಲಿಡಲಿದೆ. ಈ EVಯು ಭಾರತೀಯ ರಸ್ತೆಗಳಲ್ಲಿ ಪರೀಕ್ಷಾರ್ಥವಾಗಿ ಓಡುವುದನ್ನು ಗಮನಿಸಲಾಗಿದ್ದು, CBU (ಕಂಪ್ಲೀಟ್ಲಿ ಬಿಲ್ಟ್‌ ಅಪ್‌ ಯೂನಿಟ್) ಆಗಿ ಇಲ್ಲಿಗೆ ಆಗಮಿಸಲಿದೆ.  ಜಾಗತಿಕವಾಗಿ ಇದು 3 ಬ್ಯಾಟರಿ ಪ್ಯಾಕ್‌ ಆಯ್ಕೆಗಳೊಂದಿಗೆ ಬರುತ್ತದೆ: 52 kWh, 58 kWh ಮತ್ತು 77 kWh. ಇದು ರಿಯರ್‌ ವೀಲ್‌ ಡ್ರೈವ್‌ ಮತ್ತು ಆಲ್‌ ವೀಲ್‌ ಡ್ರೈವ್‌ ಆಯ್ಕೆಗಳೆರಡನ್ನೂ ಹೊಂದಿದ್ದು 510 km ತನಕದ ಶ್ರೇಣಿಯನ್ನು ನೀಡಲಿದೆ. ಸ್ಕೋಡಾವು ಎನ್ಯಾಕ್ iV‌ ಅನ್ನು ಆಧರಿಸಿ ಮೊಬೈಲ್‌ ಆಫಿಸ್‌ ಅನ್ನು ಅನಾವರಣಗೊಳಿಸಿದ್ದು ಇದನ್ನು ನೀವು  ಇಲ್ಲಿ ಪರಿಶೀಲಿಸಬಹುದು.

ಸ್ಕೋಡಾ ಸ್ಲಾವಿಯಾ ಮತ್ತು ಕುಶಕ್‌ ಮಾದರಿಗಳಿಗೆ ವಾರ್ಷಿಕ ಪರಿಷ್ಕರಣೆಗಳು

Skoda Slavia & Kushaq

 ಸ್ಕೋಡಾ ಕುಶಕ್ ಮತ್ತು ಸ್ಲಾವಿಯಾ ಕಾರುಗಳು ಕ್ರಮವಾಗಿ 2021 ಮತ್ತು 2022ರಲ್ಲಿ ಭಾರತದ ಮಾರುಕಟ್ಟೆಗಳಲ್ಲಿ ಕಾಣಿಸಿಕೊಂಡಿದ್ದು, ಎರಡೂ ಮಾದರಿಗಳಿಗೆ ತಾಜಾತನವನ್ನು ನೀಡುವುದಕ್ಕಾಗಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಲಾಗಿದೆ. ತಮ್ಮ ಪ್ರತಿಸ್ಪರ್ಧಿಗಳನ್ನು ಎದುರಿಸುವುದಕ್ಕಾಗಿ ಈ ಎರಡೂ ವಾಹನಗಳಿಗೆ ಪರಿಷ್ಕರಣೆಯ ಅಗತ್ಯವಿದ್ದು, ಇವು ಮುಂದಿನ ವರ್ಷದಲ್ಲಿ ಕಾಣಿಸಿಕೊಳ್ಳಲಿವೆ. ಎರಡೂ ಸ್ಕೋಡಾ ಕಾರುಗಳ ಕ್ಯಾಬಿನ್‌ ನಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದ್ದು, ಅವುಗಳ ವೈಶಿಷ್ಟ್ಯಗಳಲ್ಲಿ ಕೆಲವೊಂದು ಪ್ರಮುಖ ಬದಲಾವಣೆಗಳನ್ನು ಮಾಡಲಾಗುವುದು. ಈ ಸಣ್ಣಪುಟ್ಟ ಪರಿಷ್ಕರಣೆಗಳ ಕಾರಣ ಬೆಲೆಯಲ್ಲಿಯೂ ಹೆಚ್ಚಳ ಉಂಟಾಗಬಹುದು.

ಇದನ್ನು ಸಹ ಓದಿರಿ: ಸ್ಕೋಡಾ ಕುಶಕ್‌ ಮತ್ತು ಸ್ಕೋಡಾ ಸ್ಲಾವಿಯಾ ಎಲೆಗೆನ್ಸ್‌ ಆವೃತ್ತಿಗಳ ಬಿಡುಗಡೆ, ಬೆಲೆಗಳು ರೂ. 17.52 ಲಕ್ಷದಿಂದ ಪ್ರಾರಂಭ

ಫೋಕ್ಸ್‌ ವ್ಯಾಗನ್ ID.4 GTX

Volkswagen ID.4 GTX

 ನಿರೀಕ್ಷಿತ ಬೆಲೆ: ರೂ 45 ಲಕ್ಷ

ನಿರೀಕ್ಷಿತ ಬಿಡುಗಡೆ: 2024ರ ಮಧ್ಯ ಭಾಗ

ಫೋಕ್ಸ್‌ ವ್ಯಾಗನ್ ಸಂಸ್ಥೆಯು ಭಾರತದಲ್ಲಿ  ID.4 GTX ಮೂಲಕ EV ವಿಭಾಗವನ್ನು ಪ್ರವೇಶಿಸಲಿದೆ. ಆಕರ್ಷಕ ನೋಟದ ಈ ಎಲೆಕ್ಟ್ರಿಕ್‌ SUVಯನ್ನು ಜಾಗತಿಕವಾಗಿ 2 ಬ್ಯಾಟರಿ ಪ್ಯಾಕ್‌ ಗಳೊಂದಿಗೆ ನೀಡಲಾಗುತ್ತದೆ: ರಿಯರ್‌ ವೀಲ್‌ ಡ್ರೈವ್‌ ಮತ್ತು ಆಲ್‌ ವೀಲ್‌ ಡ್ರೈವ್‌ ವ್ಯವಸ್ಥೆಗಳೊಂದಿಗೆ 52 kWh ಮತ್ತು 77 kWh. ID.4 ವಾಹನವು 510 km ಶ್ರೇಣಿಯನ್ನು ಹೊಂದಿದ್ದು 36 ನಿಮಿಷಗಳೊಳಗೆ 5ರಿಂದ 80 ಶೇಕಡಾದಷ್ಟು ಚಾರ್ಜ್‌ ಮಾಡಬಹುದು.  ಫೋಕ್ಸ್‌ ವ್ಯಾಗನ್‌ ID.4 GTX ಕುರಿತು ನೀವು ತಿಳಿದುಕೊಳ್ಳಬೇಕಾದ 5 ವಿಷಯಗಳು ಇಲ್ಲಿವೆ.

ಫೋಕ್ಸ್‌ ವ್ಯಾಗನ್‌ ಟೈಗುನ್ ಫೇಸ್‌ ಲಿಫ್ಟ್

Volkswagen T-Cross and Volkswagen Taigun

 ನಿರೀಕ್ಷಿತ ಬೆಲೆ: ರೂ 11 ಲಕ್ಷ

ನಿರೀಕ್ಷಿತ ಬಿಡುಗಡೆ: 2024ರ ಮಧ್ಯ ಭಾಗ

ಕುಶಕ್‌ ನಂತೆಯೇ ಫೋಕ್ಸ್‌ ವ್ಯಾಗನ್‌ ಟೈಗುನ್ ಸಹ ಪ್ರಮುಖ ಬದಲಾವಣೆಗೆ ಒಳಪಡಲಿದ್ದು, ಅಗತ್ಯ ಪರಿಷ್ಕರಣೆಗಳೊಂದಿಗೆ 2024ರಲ್ಲಿ ರಸ್ತೆಗಿಳಿಯಲಿದೆ. ಅಂತರಾಷ್ಟ್ರೀಯವಾಗಿ ಫೋಕ್ಸ್‌ ವ್ಯಾಗನ್‌ ಸಂಸ್ಥೆಯು ಹೊಸ T-ಕ್ರಾಸ್‌ ಅನ್ನು ಈ ವರ್ಷದ ಆರಂಭದಲ್ಲಿ ಬಿಡುಗಡೆ ಮಾಡಿದ್ದು, ಇದು ಭಾರತದಲ್ಲಿ ಮಾರಲ್ಪಡುವ ಟೈಗುನ್‌ ಗೆ ಸಂಬಂಧಿಸಿದೆ. ಇದು ಅದೇ ಪವರ್‌ ಟ್ರೇನ್‌ ಆಯ್ಕೆಗಳನ್ನು ಬಳಸುತ್ತಿದ್ದು, ವಿನ್ಯಾಸ, ವೈಶಿಷ್ಟ್ಯಗಳು ಮತ್ತು ಸುರಕ್ಷತೆಯ ವಿಚಾರದಲ್ಲಿ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುತ್ತಿದೆ. ಪರಿಷ್ಕೃತ ಟೈಗುನ್‌ ವಾಹನವು T-ಕ್ರಾಸ್‌ ನಿಂದ ಈ ಪರಿಷ್ಕರಣೆಗಳನ್ನು ಎರವಲು ಪಡೆಯಲಿದ್ದು, ಏನೆಲ್ಲ ಬದಲಾವಣೆಗಳನ್ನು ಮಾಡಬಹುದು ಎನ್ನುವ ಕುರಿತು ನಿಮಗೆ ನೋಡಬೇಕಾದರೆ  ಇಲ್ಲಿ ಕ್ಲಿಕ್‌ ಮಾಡಿರಿ.

ಫೋಕ್ಸ್‌ ವ್ಯಾಗನ್‌ ವರ್ಟೊಸ್ -‌ ಮಾದರಿ ವರ್ಷದ ಪರಿಷ್ಕರಣೆ

Volkswagen Virtus

ಸ್ಕೋಡಾದಂತೆಯೇ ಫೋಕ್ಸ್‌ ವ್ಯಾಗನ್‌ ಸಂಸ್ಥೆಯು ಸಹ ತನ್ನ ಕಾಂಪ್ಯಾಕ್ಟ್‌ ಸೆಡಾನ್‌ ಕಾರಿಗೆ ಪರಿಷ್ಕರಣೆ ಮಾಡಲಿದೆ. ಸ್ಲಾವಿಯಾದಂತೆಯೇ ಫೋಕ್ಸ್‌ ವ್ಯಾಗನ್‌ ವರ್ಟೊಸ್ ಸಹ ವಾರ್ಷಿಕ ಪರಿಷ್ಕರಣೆಗೆ ಒಳಪಡಲಿದ್ದು, ವಿನ್ಯಾಸದಲ್ಲಿ ಸಣ್ಣಪುಟ್ಟ ಬದಲಾವಣೆಗಳು, ವಿಶೇಷ ಆವೃತ್ತಿಗಳು, ಹೊಸ ವೈಶಿಷ್ಟ್ಯಗಳು ಮತ್ತು ಸುರಕ್ಷತೆಯಲ್ಲಿ ಸುಧಾರಣೆ ಇತ್ಯಾದಿಗಳನ್ನು ಒಳಗೊಂಡಿರಲಿದೆ. ಈ ಪರಿಷ್ಕರಣೆಯಿಂದಾಗಿ ಬೆಲೆಯಲ್ಲಿ ಹೆಚ್ಚಳ ಉಂಟಾಗಬಹುದು

ಇದನ್ನು ಸಹ ಓದಿರಿ: ಫೋಕ್ಸ್‌ ವ್ಯಾಗನ್‌ ಟೈಗುನ್‌ ಮತ್ತು ವರ್ಟೊಸ್‌ ಕಾರುಗಳ ಡೀಪ್‌ ಬ್ಲ್ಯಾಕ್‌ ಎಕ್ಸ್‌ ಟೀರಿಯರ್‌ ಶೇಡ್‌ ಈಗ ಇನ್ನಷ್ಟು ಅಗ್ಗ

ಸ್ಕೋಡಾ ಅಥವಾ ಫೋಕ್ಸ್‌ ವ್ಯಾಗನ್‌ ನ ಯಾವ ಮಾದರಿಗಾಗಿ ನೀವು ಆತುರತೆಯಿಂದ ಕಾಯುತ್ತಿದ್ದೀರಿ? ನಿಮ್ಮ ಪ್ರತಿಕ್ರಿಯೆಗಳನ್ನು ನಮಗೆ ತಿಳಿಸಿರಿ.

was this article helpful ?

Write your Comment on Skoda ಸೂಪರ್‌

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience