• English
  • Login / Register

ಇಲ್ಲಿವೆ 2023 ರಲ್ಲಿ ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್ ಮಾಡಲಾದ ಎಲ್ಲಾ 7 ಭಾರತೀಯ ಕಾರುಗಳ ಮಾಹಿತಿ

ಮಾರುತಿ ಆಲ್ಟೊ ಕೆ10 ಗಾಗಿ shreyash ಮೂಲಕ ಡಿಸೆಂಬರ್ 29, 2023 04:28 pm ರಂದು ಪ್ರಕಟಿಸಲಾಗಿದೆ

  • 55 Views
  • ಕಾಮೆಂಟ್‌ ಅನ್ನು ಬರೆಯಿರಿ

ಕ್ರ್ಯಾಶ್ ಟೆಸ್ಟ್ ಮಾಡಲಾದ 7 ಕಾರುಗಳಲ್ಲಿ, 5 ಕಾರುಗಳು 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆಯುವ ಮೂಲಕ ಸುದ್ದಿ ಮಾಡಿದೆ

Tata Harrier, Maruti Alto K10, Volkswagen Virtus, Hyundai Verna 

ಭಾರತದಲ್ಲಿ ವಾಹನ ಸುರಕ್ಷತೆಯ ಬಗ್ಗೆ ಹೆಚ್ಚುತ್ತಿರುವ ಜಾಗೃತಿ ಮತ್ತು ಅದಕ್ಕೆ ಆದ್ಯತೆ ನೀಡುವ ಗ್ರಾಹಕರ ಸಂಖ್ಯೆಯು ಹೆಚ್ಚಾದ ಪರಿಣಾಮವಾಗಿ, ವಾಹನ ತಯಾರಕರು ಕಾರುಗಳಲ್ಲಿನ ಸುರಕ್ಷತಾ ಸಾಧನಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಅದು 6 ಏರ್‌ಬ್ಯಾಗ್‌ಗಳು, ಸುಧಾರಿತ ಡ್ರೈವರ್ ಅಸ್ಸಿಸ್ಟನ್ಸ್ ಸಿಸ್ಟಮ್ಸ್ ಅಥವಾ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಆಗಿರಲಿ, ಈ ವರ್ಷ ಅನೇಕ ಕಾರುಗಳು ಈ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದುಕೊಂಡಿವೆ. 2023 ರಲ್ಲಿ, ಗ್ಲೋಬಲ್ NCAP ಮಾರುತಿ, ಸ್ಕೋಡಾ, ಫೋಕ್ಸ್‌ವ್ಯಾಗನ್, ಹ್ಯುಂಡೈ ಮತ್ತು ಟಾಟಾದ ಮಾಡೆಲ್‌ಗಳನ್ನು ಒಳಗೊಂಡಂತೆ ಒಟ್ಟು ಭಾರತಕ್ಕಾಗಿ ತಯಾರಿಸಿದ 7 ಕಾರುಗಳನ್ನು ಕ್ರ್ಯಾಶ್-ಟೆಸ್ಟ್ ಮಾಡಿದೆ. ಬನ್ನಿ, ಅದರ ಫಲಿತಾಂಶಗಳನ್ನು ಸಂಕ್ಷಿಪ್ತವಾಗಿ ನೋಡೋಣ. ಅಲ್ಲದೆ, ಭಾರತದ ತನ್ನದೇ ಆದ ಕ್ರ್ಯಾಶ್ ಟೆಸ್ಟ್ ಏಜೆನ್ಸಿಯಾದ ಭಾರತ್ NCAP ಅನ್ನು ಪರಿಚಯಿಸಿದೆ. ಹೀಗಾಗಿ, ಗ್ಲೋಬಲ್ NCAP ಇನ್ನು ಮುಂದೆ ಭಾರತಕ್ಕಾಗಿ ತಯಾರಿಸಿದ ಕಾರುಗಳನ್ನು ಪರೀಕ್ಷಿಸುವುದಿಲ್ಲ.

ಹಕ್ಕು ನಿರಾಕರಣೆ: 2022 ರಲ್ಲಿ, ಗ್ಲೋಬಲ್ NCAP ತನ್ನ ಮೌಲ್ಯಮಾಪನ ಪ್ರೋಟೋಕಾಲ್‌ಗಳನ್ನು ನವೀಕರಣ ಮಾಡಿದೆ, ಅದರ ಪ್ರಕಾರ ಕಾರ್‌ಗಳಿಗೆ ಕಡ್ಡಾಯವಾದ ಸೈಡ್ ಪೋಲ್ ಮತ್ತು ಪಾದಚಾರಿ ಪರೀಕ್ಷೆಗಳೊಂದಿಗೆ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಸೇರ್ಪಡೆಯನ್ನು ಕಡ್ಡಾಯಗೊಳಿಸಿತು. ವರದಿ ಮಾಡಲಾದ ಫಲಿತಾಂಶಗಳು ಈ ನವೀಕರಿಸಿದ ಗ್ಲೋಬಲ್ NCAP ಪ್ರೋಟೋಕಾಲ್‌ಗಳಿಗೆ ಅನುಗುಣವಾಗಿವೆ. ಹೆಚ್ಚಿನ ಮಾಹಿತಿಗಾಗಿ, ಇಲ್ಲಿ ಕ್ಲಿಕ್ ಮಾಡಿ.

 

ಮಾರುತಿ ವ್ಯಾಗನ್ R

Maruti Wagon R crash test

 

ರೇಟಿಂಗ್

ಸ್ಕೋರ್

ಅಡಲ್ಟ್ ಆಕ್ಯುಪೆಂಟ್ ಸುರಕ್ಷತೆ 

1-ಸ್ಟಾರ್

19.69 / 34

ಚೈಲ್ಡ್ ಆಕ್ಯುಪೆಂಟ್ ಸುರಕ್ಷತೆ

 0-ಸ್ಟಾರ್

3.40 / 49

ಗ್ಲೋಬಲ್ NCAP ಪ್ರಸ್ತುತ-ಜೆನೆರೇಶನ್ ನ ಮಾರುತಿ ವ್ಯಾಗನ್ R ಅನ್ನು ಮೊದಲ ಬಾರಿಗೆ 2019 ರಲ್ಲಿ ಪರೀಕ್ಷಿಸಿತು, ಇದರಲ್ಲಿ ಕಾರು ವಯಸ್ಕರ ಮತ್ತು ಮಕ್ಕಳ ಸುರಕ್ಷತೆಯಲ್ಲಿ ತಲಾ 2 ಸ್ಟಾರ್‌ಗಳನ್ನು ಪಡೆದುಕೊಂಡಿದೆ. ಗ್ಲೋಬಲ್ NCAP ನ ನವೀಕರಿಸಿದ ಮೌಲ್ಯಮಾಪನ ಪ್ರೋಟೋಕಾಲ್‌ಗಳ ಅಡಿಯಲ್ಲಿ ಮಾರುತಿ ಹ್ಯಾಚ್‌ಬ್ಯಾಕ್ ಅನ್ನು 2023 ರಲ್ಲಿ ಮತ್ತೊಮ್ಮೆ ಪರೀಕ್ಷಿಸಲಾಯಿತು, ಇದರಲ್ಲಿ ಕಾರು ವಯಸ್ಕರ ಸುರಕ್ಷತೆಯಲ್ಲಿ 1 ಸ್ಟಾರ್ ಅನ್ನು ಪಡೆದುಕೊಂಡಿದೆ ಮತ್ತು ಮಕ್ಕಳ ಸುರಕ್ಷತೆಯಲ್ಲಿ ಯಾವುದೇ ಸ್ಟಾರ್ ಅನ್ನು ಪಡೆದುಕೊಂಡಿಲ್ಲ. ಹ್ಯಾಚ್‌ಬ್ಯಾಕ್‌ನ ಫುಟ್‌ವೆಲ್ ಮತ್ತು ಬಾಡಿಶೆಲ್ ಎರಡನ್ನೂ ಅಸ್ಥಿರ ಎಂದು ರೇಟ್ ಮಾಡಲಾಗಿದೆ.

 ಮಾರುತಿ ತನ್ನ ವ್ಯಾಗನ್ R ಕಾರಿಗೆ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ABS ಜೊತೆಗೆ EBD, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಹಿಲ್-ಹೋಲ್ಡ್ ಅಸಿಸ್ಟ್ (AMT ವೇರಿಯಂಟ್ ಗಳಲ್ಲಿ ಮಾತ್ರ) ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ನೀಡಿದೆ.

ನೀವು ಇದನ್ನು ಕೂಡ ಓದಬಹುದು: ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಂಡಾಗ ನಿಮ್ಮ ಕಾರನ್ನು ರಕ್ಷಿಸಲು 7 ಸಲಹೆಗಳು

 

ಮಾರುತಿ ಆಲ್ಟೊ K10

Maruti Alto K10 crash test

 

 ರೇಟಿಂಗ್

 ಸ್ಕೋರ್

 ಅಡಲ್ಟ್ ಆಕ್ಯುಪೆಂಟ್ ಸುರಕ್ಷತೆ

 2-ಸ್ಟಾರ್

21.67 / 34

ಚೈಲ್ಡ್ ಆಕ್ಯುಪೆಂಟ್ ಸುರಕ್ಷತೆ

0-ಸ್ಟಾರ್

3.52 / 49

ಗ್ಲೋಬಲ್ NCAP ನಿಂದ ಕ್ರ್ಯಾಶ್-ಟೆಸ್ಟ್ ಆದ ಮತ್ತೊಂದು ಮಾರುತಿಯವರ ಕಾರು ಆಲ್ಟೊ K10. ಮಾರುತಿ ವ್ಯಾಗನ್ R ಗಿಂತ ಹೆಚ್ಚಿನ ಅಡಲ್ಟ್ ಆಕ್ಯುಪೆಂಟ್ ಪ್ರೊಟೆಕ್ಷನ್ (AOP) ಸ್ಕೋರ್ ಪಡೆದಿದ್ದರೂ ಕೂಡ, ವಯಸ್ಕರ ಸುರಕ್ಷತೆಯಲ್ಲಿ ಈ ಮಾರುತಿ ಕಾರು ಕೇವಲ 2 ಸ್ಟಾರ್ ಗಳನ್ನು ಪಡೆದಿದೆ. ಮಕ್ಕಳ ಸುರಕ್ಷತೆಯಲ್ಲಿ, ಆಲ್ಟೊ K10 ಒಂದೇ ಒಂದು ಸ್ಟಾರ್ ಕೂಡ ಪಡೆದಿಲ್ಲ. ಬಾಡಿ-ಶೆಲ್ ಸಮಗ್ರತೆಯನ್ನು ಸ್ಥಿರವೆಂದು ಪರಿಗಣಿಸಲಾಗಿದೆ ಮತ್ತು ಹೆಚ್ಚಿನ ಲೋಡ್ ಗಳನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದರೂ ಕೂಡ, ಅದರ ಫುಟ್‌ವೆಲ್ ಜಾಗವನ್ನು ಅಸ್ಥಿರವೆಂದು ರೇಟ್ ಮಾಡಲಾಗಿದೆ.

 ಸುರಕ್ಷತೆಗಾಗಿ, ಮಾರುತಿ ಆಲ್ಟೊ K10 ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, EBDಯೊಂದಿಗೆ ABS, ರಿವರ್ಸಿಂಗ್ ಕ್ಯಾಮೆರಾ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಹೊಂದಿದೆ.

 

ಫೋಕ್ಸ್‌ವ್ಯಾಗನ್ ವರ್ಟಸ್ ಮತ್ತು ಸ್ಕೋಡಾ ಸ್ಲಾವಿಯಾ

Volkswagen Virtus crash test

 

ರೇಟಿಂಗ್

 ಸ್ಕೋರ್

ಅಡಲ್ಟ್ ಆಕ್ಯುಪೆಂಟ್ ಸುರಕ್ಷತೆ

5-ಸ್ಟಾರ್

29.71 / 34

ಚೈಲ್ಡ್ ಆಕ್ಯುಪೆಂಟ್ ಸುರಕ್ಷತೆ

5-ಸ್ಟಾರ್

42 / 49

 ಫೋಕ್ಸ್‌ವ್ಯಾಗನ್ ವರ್ಟಸ್ ಮತ್ತು ಸ್ಕೋಡಾ ಸ್ಲಾವಿಯಾವನ್ನು ಗ್ಲೋಬಲ್ NCAP 2023 ರಲ್ಲಿ ಒಟ್ಟಿಗೆ ಕ್ರ್ಯಾಶ್-ಟೆಸ್ಟ್ ಮಾಡಿತು. ಎರಡೂ ಸೆಡಾನ್‌ಗಳು ಒಂದೇ ರೀತಿಯ ಪ್ಲಾಟ್‌ಫಾರ್ಮ್‌ಗಳನ್ನು (MQB A0IN) ಮತ್ತು ಪವರ್‌ಟ್ರೇನ್ ಆಯ್ಕೆಗಳನ್ನು ಹೊಂದಿದೆ. ಕಾರಿನ ಒಳಗೆ ಕೇವಲ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳನ್ನು ಹೊಂದಿದ್ದರೂ ಕೂಡ, ವರ್ಟಸ್ ಮತ್ತು ಸ್ಲಾವಿಯಾ ವಯಸ್ಕರ ಮತ್ತು ಮಕ್ಕಳ ಸುರಕ್ಷತೆಯಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದಿವೆ. ಎರಡೂ ಸೆಡಾನ್‌ಗಳ ಬಾಡಿಶೆಲ್‌ಗಳು ಮತ್ತು ಫುಟ್‌ವೆಲ್ ಜಾಗವು ಸ್ಥಿರವಾಗಿದೆ ಮತ್ತು ಹೆಚ್ಚಿನ ಲೋಡ್ ಗಳನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎಂದು ಪರಿಗಣಿಸಲಾಗಿದೆ.

 ಎರಡೂ ಸೆಡಾನ್‌ಗಳು ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್ ಹೋಲ್ಡ್ ಅಸಿಸ್ಟ್, ISOFIX ಚೈಲ್ಡ್ ಸೀಟ್ ಆಂಕರ್‌ಗಳು, ರಿಯರ್ ಪಾರ್ಕಿಂಗ್ ಸೆನ್ಸರ್ಸ್ ಮತ್ತು ರಿಯರ್ ಪಾರ್ಕಿಂಗ್ ಕ್ಯಾಮೆರಾದಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿವೆ.

ನೀವು ಇದನ್ನು ಕೂಡ ಓದಬಹುದು: ಹೊಸ ವಿನ್ಯಾಸದ ಹೋಂಡಾ ಎಲಿವೇಟ್ ಫೀಲ್ಡ್ ಎಕ್ಸ್‌ಪ್ಲೋರರ್ ಪರಿಕಲ್ಪನೆಯನ್ನು ಜಪಾನ್‌ನಲ್ಲಿ ಪ್ರಿವ್ಯೂ ಮಾಡಲಾಗಿದೆ

 

ಹುಂಡೈ ವೆರ್ನಾ

Hyundai Verna crash test

 

ರೇಟಿಂಗ್

 ಸ್ಕೋರ್

 ಅಡಲ್ಟ್ ಆಕ್ಯುಪೆಂಟ್ ಸುರಕ್ಷತೆ

 5-ಸ್ಟಾರ್

28.18 / 34

ಚೈಲ್ಡ್ ಆಕ್ಯುಪೆಂಟ್ ಸುರಕ್ಷತೆ

 5-ಸ್ಟಾರ್

42 / 49

 ಹೊಸದಾದ ಹ್ಯುಂಡೈ ವೆರ್ನಾವನ್ನು 2023 ರಲ್ಲಿ ಹೆಚ್ಚುವರಿ ಮತ್ತು ನವೀನ ವೈಶಿಷ್ಟ್ಯಗಳಾದ 6 ಏರ್‌ಬ್ಯಾಗ್‌ಗಳು ಮತ್ತು ಸುಧಾರಿತ ಡ್ರೈವರ್ ಅಸ್ಸಿಸ್ಟನ್ಸ್ ಸಿಸ್ಟಮ್ಸ್ (ADAS) ನೊಂದಿಗೆ ಹೊರತರಲಾಯಿತು. ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್ ನಲ್ಲಿ, ವೆರ್ನಾ ವಯಸ್ಕರ ಮತ್ತು ಮಕ್ಕಳ ಸುರಕ್ಷತೆ ಎರಡರಲ್ಲೂ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದು ಇಂತಹ ಸಾಧನೆ ಮಾಡಿದ ಮೊದಲ ಭಾರತ-ನಿರ್ಮಿತ ಹ್ಯುಂಡೈ ಕಾರು ಎಂಬ ಹೆಸರು ಪಡೆಯಿತು. 6 ಏರ್‌ಬ್ಯಾಗ್‌ಗಳನ್ನು ಹೊಂದಿದ್ದರೂ ಕೂಡ, ವೆರ್ನಾ ತನ್ನ ಪ್ರತಿಸ್ಪರ್ಧಿಗಳಾದ ಫೋಕ್ಸ್‌ವ್ಯಾಗನ್ - ಸ್ಕೋಡಾ ಸೆಡಾನ್‌ಗಳಿಗಿಂತ ಕಡಿಮೆ ಅಡಲ್ಟ್ ಆಕ್ಯುಪೆಂಟ್ ಪ್ರೊಟೆಕ್ಷನ್ (AOP) ಸ್ಕೋರ್ ಅನ್ನು ಹೊಂದಿತ್ತು. ಆದರೂ ಕೂಡ, ಎಲ್ಲಾ ಮೂರು ಫೋಕ್ಸ್‌ವ್ಯಾಗನ್ -ಸ್ಕೋಡಾ ಸೆಡಾನ್‌ಗಳಾದ - ವೆರ್ನಾ, ವರ್ಟಸ್ ಮತ್ತು ಸ್ಲಾವಿಯಾ - ಚೈಲ್ಡ್ ಆಕ್ಯುಪೆಂಟ್ ಪ್ರೊಟೆಕ್ಷನ್ (COP) ನಲ್ಲಿ ಸಮಾನ ಅಂಕಗಳನ್ನು ಪಡೆದಿವೆ.

 ವೆರ್ನಾದ ಸುರಕ್ಷತಾ ಕಿಟ್ ನಲ್ಲಿ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಫ್ರಂಟ್ ಪಾರ್ಕಿಂಗ್ ಸೆನ್ಸರ್ಸ್, ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಸಹ ಒಳಗೊಂಡಿದೆ.

ಟಾಟಾ ಹ್ಯಾರಿಯರ್ & ಸಫಾರಿ

Tata Safari crash test

 

ರೇಟಿಂಗ್

ಸ್ಕೋರ್

 ಅಡಲ್ಟ್ ಆಕ್ಯುಪೆಂಟ್ ಸುರಕ್ಷತೆ

 5-ಸ್ಟಾರ್

33.05 / 34

ಚೈಲ್ಡ್ ಆಕ್ಯುಪೆಂಟ್ ಸುರಕ್ಷತೆ

 5-ಸ್ಟಾರ್

45 / 49

ಟಾಟಾ ಹ್ಯಾರಿಯರ್ ಮತ್ತು ಸಫಾರಿ, ಈ ಎರಡೂ ಕಾರುಗಳು 2023 ರಲ್ಲಿ ಮಿಡ್‌ಲೈಫ್ ಅಪ್ಡೇಟ್ ಅನ್ನು ಪಡೆಯಿತು, ಮತ್ತು ಈ ಅಪ್ಡೇಟ್ ನಲ್ಲಿ ಕೆಲವು ಹೊಸ ವೈಶಿಷ್ಟ್ಯಗಳನ್ನು ಸೇರಿಸಲಾಯಿತು. ಈ ಲಿಸ್ಟ್ ನಲ್ಲಿ ನೀಡಲಾದ ಎಲ್ಲಾ ಮಾಡೆಲ್ ಗಳಲ್ಲಿ, ಹ್ಯಾರಿಯರ್ ಮತ್ತು ಸಫಾರಿ ಅಡಲ್ಟ್ ಆಕ್ಯುಪೆಂಟ್ ಪ್ರೊಟೆಕ್ಷನ್ (AOP) ಮತ್ತು ಚೈಲ್ಡ್ ಆಕ್ಯುಪೆಂಟ್ ಪ್ರೊಟೆಕ್ಷನ್ (COP) ನಲ್ಲಿ ಅತ್ಯಧಿಕ ಸ್ಕೋರ್‌ಗಳನ್ನು ಪಡೆದಿವೆ. ಈ ಕಾರುಗಳು ಎರಡೂ ವಿಭಾಗಗಳಲ್ಲಿ 5-ಸ್ಟಾರ್ ರೇಟಿಂಗ್ ಅನ್ನು ಗಳಿಸಿವೆ.

 ಟಾಟಾ ಹ್ಯಾರಿಯರ್ ಮತ್ತು ಸಫಾರಿ ಕಾರುಗಳು ಏಳು ಏರ್‌ಬ್ಯಾಗ್‌ಗಳು (6 ಏರ್‌ಬ್ಯಾಗ್‌ಗಳು ಸ್ಟ್ಯಾಂಡರ್ಡ್ ಆಗಿದೆ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್ ಅಸಿಸ್ಟ್, 360-ಡಿಗ್ರಿ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ಈಗ ಅಡಾಪ್ಟಿವ್ ಕ್ರೂಸ್ ನಿಯಂತ್ರಣವನ್ನು ಒಳಗೊಂಡಿರುವ ಸುಧಾರಿತ ಡ್ರೈವರ್ ಅಸ್ಸಿಸ್ಟನ್ಸ್ ಸಿಸ್ಟಮ್ಸ್ (ADAS), ಇಂತಹ ಹಲವಾರು ವೈಶಿಷ್ಟ್ಯಗಳನ್ನು ಪಡೆದಿವೆ.

ಇವೆಲ್ಲವೂ 2023 ರಲ್ಲಿ ಗ್ಲೋಬಲ್ NCAP ಕ್ರ್ಯಾಶ್-ಟೆಸ್ಟ್ ಮಾಡಿದ ಭಾರತಕ್ಕಾಗಿ ತಯಾರಾದ ಮಾಡೆಲ್‌ಗಳಾಗಿವೆ. ಇನ್ನು ಮುಂದೆ, ಭಾರತದಲ್ಲಿ ಮಾರಾಟವಾಗುವ ಕಾರುಗಳು ಭಾರತ್ NCAP ನಿಂದ ಸುರಕ್ಷತಾ ರೇಟಿಂಗ್ ಅನ್ನು ಪಡೆಯುತ್ತವೆ, ಮತ್ತು ಅದರ ಟೆಸ್ಟಿಂಗ್ ಮಾರ್ಗಸೂಚಿಗಳು ನವೀಕರಿಸಿದ GNCAP ಪ್ರೋಟೋಕಾಲ್‌ಗಳಿಗೆ ಸರಿಸಮಾನವಾಗಿದೆ. ಫೇಸ್ ಲಿಫ್ಟ್ ಆಗಿರುವ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಮಾಡೆಲ್ ಗಳನ್ನು ಭಾರತ್ NCAP ಮೂಲಕ ಮೊದಲು ಟೆಸ್ಟ್ ಮಾಡಲಾಗಿದೆ, ಮತ್ತು ನೀವು ಅವುಗಳ ಸ್ಕೋರ್‌ಗಳನ್ನು ಇಲ್ಲಿ ಕ್ಲಿಕ್ ಮಾಡುವ ಮೂಲಕ ನೋಡಬಹುದು.

 ಇನ್ನಷ್ಟು ಮಾಹಿತಿಗಾಗಿ ಓದಿ: ಮಾರುತಿ ಆಲ್ಟೊ K10 ಆನ್ ರೋಡ್ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Maruti ಆಲ್ಟೊ ಕೆ10

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience