• English
  • Login / Register

Volvo C40 Recharge ಎಲೆಕ್ಟ್ರಿಕ್ ಕೂಪ್‌ ಎಸ್‌ಯುವಿ ಕಾರಿಗೆ ಬೆಂಕಿ: ವಾಹನ ತಯಾರಕರ ಪ್ರತಿಕ್ರಿಯೆ ಇಲ್ಲಿದೆ

ವೋಲ್ವೋ ಸಿ40 ರೀಚಾರ್ಜ್ ಗಾಗಿ shreyash ಮೂಲಕ ಜನವರಿ 31, 2024 03:17 pm ರಂದು ಪ್ರಕಟಿಸಲಾಗಿದೆ

  • 36 Views
  • ಕಾಮೆಂಟ್‌ ಅನ್ನು ಬರೆಯಿರಿ

ವರದಿಗಳ ಪ್ರಕಾರ, ಚಾಲಕ ಸೇರಿದಂತೆ ಕಾರಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ವಾಹನದಿಂದ ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ

Volvo C40 Recharge FireICE (ಇಂಟರ್ನಲ್ ಕಮ್ಬಾಷನ್ ಎಂಜಿನ್) ವಾಹನಗಳ ಹೊರಸೂಸುವಿಕೆಯ ಬಗ್ಗೆ ಹೆಚ್ಚುತ್ತಿರುವ ಕಳವಳದಿಂದಾಗಿ ಎಲೆಕ್ಟ್ರಿಕ್ ವಾಹನಗಳನ್ನು ಮೊಬಿಲಿಟಿಯ ಭವಿಷ್ಯವೆಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. EV ವಾಹನಗಳ ಬಳಕೆಗೆ ಹಲವು ಅಡೆತಡೆಗಳ ನಡುವೆ, ನೇರ ಅಪಘಾತವಾಗದೆ ವಿದ್ಯುತ್ ಕಾರ್‌ಗಳು ಬೆಂಕಿಯನ್ನು ಹಿಡಿಯುವ ಸಾಂದರ್ಭಿಕ ವರದಿಗಳು ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಕಾಳಜಿಯನ್ನು ಎತ್ತಿಹಿಡಿಯುತ್ತಿದೆ. ಇತ್ತೀಚೆಗೆ, ವೋಲ್ವೋ C40 ರೀಚಾರ್ಜ್ ಕಾರು ಬೆಂಕಿಯ ಜ್ವಾಲೆಯಲ್ಲಿ ಸುತ್ತುವರಿದಿರುವುದನ್ನು ತೋರಿಸುವ ವೀಡಿಯೊ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ, ಇದು ಜಾಗತಿಕವಾಗಿ ಅತ್ಯಂತ ಸುರಕ್ಷಿತ ಕಾರುಗಳನ್ನು ನಿರ್ಮಿಸುವ ಬ್ರ್ಯಾಂಡ್‌ ಎಂದು ಹೆಸರು ಪಡೆದಿರುವ ವೋಲ್ವೋಗೆ ಅಚ್ಚರಿಯ ವಿಷಯವಾಗಿದೆ.

 ಕಾರು ಛತ್ತೀಸ್‌ಗಢದ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಮತ್ತು ಪ್ರಯಾಣಿಕರು ವಾಹನಕ್ಕೆ ಬೆಂಕಿ ಹಿಡಿಯುವ ಮೊದಲು ಯಶಸ್ವಿಯಾಗಿ ಹೊರಬಂದಿದ್ದಾರೆ.

 CD ಸುರಕ್ಷತೆ ಸಲಹೆ:- ಎಲೆಕ್ಟ್ರಿಕ್ ಕಾರ್ ಬೆಂಕಿಯನ್ನು ವೃತ್ತಿಪರ ಅಗ್ನಿಶಾಮಕ ದಳದವರು ಸೂಕ್ತವಾದ ಅಗ್ನಿಶಾಮಕ ಸಾಧನಗಳನ್ನು ಉಪಯೋಗಿಸುವ ಮೂಲಕ ಶಮನ ಮಾಡುವುದು ಮುಖ್ಯವಾಗಿದೆ. ಅಂತಹ ಘಟನೆಯ ಭಾಗವಾಗಿದ್ದರೆ ಅಥವಾ ಹತ್ತಿರದಲ್ಲಿದ್ದರೆ, ದಯವಿಟ್ಟು ಸಣ್ಣ ಪ್ರಮಾಣದ ನೀರಿನಿಂದ ಬೆಂಕಿಯನ್ನು ನಂದಿಸಲು ಪ್ರಯತ್ನಿಸಬೇಡಿ ಮತ್ತು ವಾಹನದಿಂದ ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳಿ. ಅಲ್ಲದೆ, ಸುಡುವ EV ವಾಹನದಿಂದ ನೇರವಾಗಿ ಬರುವ ಯಾವುದೇ ಹೊಗೆಯನ್ನು ಉಸಿರಾಡುವುದನ್ನು ತಪ್ಪಿಸಿ, ಏಕೆಂದರೆ ಅವುಗಳು ಹೊಗೆ ಮತ್ತು ಬೂದಿಯ ಜೊತೆಗೆ ಇತರ ಹಾನಿಕಾರಕ ಅಂಶಗಳನ್ನು ಕೂಡ ಹೊಂದಿರಬಹುದು.

 ವೋಲ್ವೋ ಇಂಡಿಯಾದ ಹೇಳಿಕೆ

Volvo C40 Recharge Fire

 ಈ ಘಟನೆಯು ವೋಲ್ವೋ ಗಮನಕ್ಕೆ ಬಂದಿದ್ದು, ಅಧಿಕೃತ ಹೇಳಿಕೆಯನ್ನು ವಾಹನ ತಯಾರಕರು ನೀಡಿದ್ದಾರೆ. “ಶನಿವಾರದಂದು C40 ಅನ್ನು ಚಾಲನೆ ಮಾಡುವಾಗ ಬೆಂಕಿ ಹತ್ತಿಕೊಂಡ ಘಟನೆಯ ಬಗ್ಗೆ ನಮಗೆ ತಿಳಿದಿದೆ. ಎಂಬೆಡ್ ಮಾಡಲಾಗಿರುವ ಸುರಕ್ಷತಾ ಫೀಚರ್ ಗಳು ಕಾರನ್ನು ರಸ್ತೆಯ ಪಕ್ಕಕ್ಕೆ ತೆಗೆದುಕೊಂಡು ಹೋಗಿ ನಿಲ್ಲಿಸಿ ಕಾರಿನಿಂದ ಹೊರಬರಲು ಚಾಲಕನಿಗೆ ತಿಳಿಸಿತು. ಯಾರಿಗೂ ಯಾವುದೇ ಗಾಯಗಳಾಗಿಲ್ಲ ಮತ್ತು ಕಾರಿನಲ್ಲಿದ್ದ ಎಲ್ಲರು ಸುರಕ್ಷಿತವಾಗಿದ್ದಾರೆ. ಅಗತ್ಯವಿರುವ ಸುರಕ್ಷತಾ ಕ್ರಮಗಳ ಕುರಿತು ಕಸ್ಟಮರ್ ಗೆ ಮಾರ್ಗದರ್ಶನ ನೀಡಲು ನಮ್ಮ ಕಸ್ಟಮರ್ ಕೇರ್ ಕಾಲ್ ಸೆಂಟರ್ ಲಭ್ಯವಿತ್ತು. ವೋಲ್ವೋ ಕಾರ್ಸ್ ಸಂಸ್ಥೆಯಲ್ಲಿ ನಾವು ನಮ್ಮ ಕಾರುಗಳ ಸುರಕ್ಷತೆಯ ಬಗ್ಗೆ ಹೆಮ್ಮೆಪಡುತ್ತೇವೆ ಮತ್ತು ಈ ಘಟನೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಘಟನೆಯ ಕಾರಣವನ್ನು ಖಚಿತಪಡಿಸಿಕೊಳ್ಳಲು ಬೆಂಕಿ ಹಿಡಿದ ವಾಹನವನ್ನು ನಮ್ಮ ತಾಂತ್ರಿಕ ತಜ್ಞರು ಸೂಕ್ಷ್ಮವಾಗಿ ಪರಿಶೀಲಿಸುತ್ತಾರೆ. ನಾವು ಗ್ರಾಹಕರೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ಗ್ರಾಹಕರನ್ನು ಬೆಂಬಲಿಸುವುದನ್ನು ಮುಂದುವರಿಸುತ್ತೇವೆ” ಎಂದು ವೋಲ್ವೋ ಹೇಳಿತು

 ವೋಲ್ವೋ C40 ರೀಚಾರ್ಜ್ ಬ್ಯಾಟರಿ ಪ್ಯಾಕ್ ಮತ್ತು ರೇಂಜ್

 ವೋಲ್ವೋ C40 ರೀಚಾರ್ಜ್ ಅನ್ನು ಸೆಪ್ಟೆಂಬರ್ 2023 ರಲ್ಲಿ XC40 ರೀಚಾರ್ಜ್ ಎಲೆಕ್ಟ್ರಿಕ್ SUVಯ ಕೂಪ್ ಶೈಲಿಯ ವರ್ಷನ್ ಆಗಿ ಭಾರತದಲ್ಲಿ ಲಾಂಚ್ ಮಾಡಲಾಗಿತ್ತು. C40 ರೀಚಾರ್ಜ್ 78 kWh ಬ್ಯಾಟರಿ ಪ್ಯಾಕ್ ಅನ್ನು ಕೂಡ ಬಳಸುತ್ತದೆ, ಇದು WLTP-ಕ್ಲೇಮ್ ಮಾಡಿರುವ 530 ಕಿಮೀ ರೇಂಜ್ ಅನ್ನು ನೀಡುತ್ತದೆ. ಇದು XC40 ರೀಚಾರ್ಜ್‌ಗಿಂತ ವಿಭಿನ್ನವಾದ ಬ್ಯಾಟರಿ ಕೆಮಿಸ್ಟ್ರಿಯನ್ನು ಹೊಂದಿದೆ, ಆದ್ದರಿಂದ ಹೆಚ್ಚುವರಿ ರೇಂಜ್ ಅನ್ನು ನೀಡುತ್ತದೆ. ಬ್ಯಾಟರಿ ಪ್ಯಾಕ್ ಅನ್ನು ಆಲ್-ವೀಲ್-ಡ್ರೈವ್ (AWD) ಡ್ಯುಯಲ್-ಎಲೆಕ್ಟ್ರಿಕ್ ಮೋಟಾರ್ ಸೆಟಪ್‌ಗೆ ಜೋಡಿಸಲಾಗಿದೆ, ಹಾಗಾಗಿ ಇದು 408 PS ಮತ್ತು 660 Nm ನೀಡುತ್ತದೆ.

 ಇದನ್ನು ಕೂಡ ಓದಿ: ಟೊಯೊಟಾ ಡೀಸೆಲ್ ಕಾರುಗಳ ಮಾಲೀಕರಿಗೆ ಪ್ರಮುಖ ಅಪ್‌ಡೇಟ್! ಇನ್ನೋವಾ ಕ್ರಿಸ್ಟಾ, ಫಾರ್ಚುನರ್ ಮತ್ತು ಹಿಲಕ್ಸ್ ಮೇಲೆ ಪರಿಣಾಮ ಬೀರುತ್ತದೆ

 ಫೀಚರ್ ಗಳು ಮತ್ತು ಸುರಕ್ಷತೆ

Volvo C40 Recharge Interior

 ವೋಲ್ವೋ ತನ್ನ C40 ರೀಚಾರ್ಜ್ ಗೆ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (ವರ್ಟಿಕಲ್-ಓರಿಯಂಟ್ ಆಗಿರುವ) ಮತ್ತು 12-ಇಂಚಿನ ಡಿಜಿಟಲ್ ಡ್ರೈವರ್‌ಸ್ ಡಿಸ್‌ಪ್ಲೇ, ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಮುಂಭಾಗದ ಸೀಟುಗಳು (ಹೀಟಿಂಗ್ ಮತ್ತು ಕೂಲಿಂಗ್ ಫಂಕ್ಷನ್ ನೊಂದಿಗೆ), ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ಪನೋರಮಿಕ್ ಸನ್‌ರೂಫ್ ಅನ್ನು ನೀಡಿದೆ.

 ಪ್ಯಾಸೆಂಜರ್ ಸುರಕ್ಷತೆಗಾಗಿ ಏಳು ಏರ್‌ಬ್ಯಾಗ್‌ಗಳು, ಹಿಲ್ ಹೋಲ್ಡ್ ಮತ್ತು ಡಿಸೆಂಟ್ ಕಂಟ್ರೋಲ್ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ನೀಡಲಾಗಿದೆ. C40 ರೀಚಾರ್ಜ್ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಮುಂಭಾಗಕ್ಕೆ ಕೊಲಿಷನ್ ಅವಾಯ್ಡ್ಎನ್ಸ್ ಮತ್ತು ಮಿಟಿಗೇಷನ್, ಲೇನ್ ಕೀಪ್ ಅಸಿಸ್ಟ್, ಮುಂಭಾಗ ಮತ್ತು ಹಿಂಭಾಗ ಎರಡಕ್ಕೂ ಕ್ರಾಸ್ ಟ್ರಾಫಿಕ್ ಅಲರ್ಟ್ ನೊಂದಿಗೆ ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ನಂತಹ ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ (ADAS) ಪಡೆಯುತ್ತದೆ.

 ಬೆಲೆ ಮತ್ತು ಪ್ರತಿಸ್ಪರ್ಧಿಗಳು

 ವೋಲ್ವೋ C40 ರೀಚಾರ್ಜ್ ಬೆಲೆ ರೂ 62.95 ಲಕ್ಷವಾಗಿದ್ದು (ಎಕ್ಸ್ ಶೋ ರೂಂ ಪ್ಯಾನ್ ಇಂಡಿಯಾ), ಇದು ಒಂದೇ ವೇರಿಯಂಟ್ ನಲ್ಲಿ ಲಭ್ಯವಿದೆ. ಇದು ಕಿಯಾ EV6 ಮತ್ತು ಹ್ಯುಂಡೈ ಐಯೋನಿಕ್ 5 ಗೆ ನೇರ ಪ್ರತಿಸ್ಪರ್ಧಿಯಾಗಿದ್ದು, ಹಾಗೆಯೇ ಇದನ್ನು ವೋಲ್ವೋ XC40 ರೀಚಾರ್ಜ್‌ಗೆ ಸ್ಪೋರ್ಟಿಯರ್ ಆಗಿ ಕಾಣುವ ಪರ್ಯಾಯ ಆಯ್ಕೆಯಾಗಿ ಪರಿಗಣಿಸಬಹುದು.

 ಇನ್ನಷ್ಟು ಓದಿ: C40 ರೀಚಾರ್ಜ್ ಆಟೋಮ್ಯಾಟಿಕ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Volvo ಸಿ40 ರೀಚಾರ್ಜ್

Read Full News

explore ಇನ್ನಷ್ಟು on ವೋಲ್ವೋ ಸಿ40 ರೀಚಾರ್ಜ್

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience