• English
    • Login / Register

    Volvo C40 Recharge EV: ಭಾರತದಲ್ಲಿ ಡೆಲಿವರಿಗಳು ಶುರು

    ಸೆಪ್ಟೆಂಬರ್ 15, 2023 12:27 pm ರಂದು rohit ಮೂಲಕ ಪ್ರಕಟಿಸಲಾಗಿದೆ

    56 Views
    • ಕಾಮೆಂಟ್‌ ಅನ್ನು ಬರೆಯಿರಿ

    ಮೊದಲ ಎರಡು C40 ರಿಚಾರ್ಜ್ ಮಾಡೆಲ್‌ಗಳನ್ನು ಕೇರಳ ಮತ್ತು ತಮಿಳುನಾಡಿನಲ್ಲಿ ಡೆಲಿವರಿ ಮಾಡಲಾಗಿತ್ತು

    Volvo C40 Recharge

    •  ತನ್ನ C40 ರಿಚಾರ್ಜ್‌ಗೆ ವೋಲ್ವೋ ರೂ 61.25 ಲಕ್ಷ  (ಆರಂಭಿಕ ಎಕ್ಸ್-ಶೋರೂಂ ಪ್ಯಾನ್-ಇಂಡಿಯಾ) ನಿಗದಿಪಡಿಸಿದೆ.
    •  ಈ EVಯು XC40 ರಿಚಾರ್ಜ್‌ನದ್ದೇ ಪ್ಲಾಟ್‌ಫಾರ್ಮ್ ಆಧಾರಿತವಾಗಿದ್ದು ಅದರ ಕೋಪ್ ಆವೃತ್ತಿಯಾಗಿದೆ.
    •  WLTP ಕ್ಲೈಮ್ ಮಾಡಲಾದ 530km ರೇಂಜ್‌ಗೆ ಸೂಕ್ತವಾದ 78kWh ಬ್ಯಾಟರಿ ಪ್ಯಾಕ್ ಹೊಂದಿದೆ.
    • 9-ಇಂಚು ಟಚ್‌ಸ್ಕ್ರೀನ್, 12.3-ಇಂಚು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ADAS ಫೀಚರ್‌ಗಳನ್ನು ಪಡೆದಿದೆ.

    ಸೆಪ್ಟೆಂಬರ್ 4ರಂದು ವೋಲ್ವೋ C40 ರಿಚಾರ್ಜ್ ಅನ್ನು ಮಾರಾಟ ಮಾಡಲಾಗಿದ್ದು ಸುಮಾರು 10 ದಿನಗಳ ನಂತರ ಕಾರುತಯಾರಕರು ಈ EV ಯನ್ನು ಗ್ರಾಹಕರಿಗೆ ಡೆಲಿವರಿ ನೀಡಲು ಪ್ರಾರಂಭಿಸಿದ್ದಾರೆ.ಈ ವೋಲ್ವೋ EVಯ ಮೊದಲ ಎರಡು ಯೂನಿಟ್‌ಗಳನ್ನು ಕೇರಳ ಮತ್ತು ತಮಿಳುನಾಡಿನಲ್ಲಿ ಡೆಲಿವರಿ ಮಾಡಲಾಗಿದೆ. ಇದು XC40 ರಿಚಾರ್ಜ್  ಇಲೆಕ್ಟ್ರಿಕ್ SUVಯ ಕೂಪ್ ಆವೃತ್ತಿಯಾಗಿದ್ದು, ರೂ 61.25 ಲಕ್ಷದ (ಆರಂಭಿಕ ಎಕ್ಸ್-ಶೋರೂಂ ಪ್ಯಾನ್-ಇಂಡಿಯಾ) ಒಂದು, ಸಂಪೂರ್ಣ ಲೋಡ್‌ನ ವೇರಿಯೆಂಟ್ ಆಗಿದೆ.

    ಇಂಜಿನ್‌ನಲ್ಲಿ ಏನಿದೆ?

    Volvo C40 Recharge front

    ಈ C40 ರಿಚಾರ್ಜ್‌ಗೆ ವೋಲ್ವೋ 78kWh ಬ್ಯಾಟರಿ ಪ್ಯಾಕ್ ನೀಡಿದ್ದು, ಇದು 530km WLTP-ಕ್ಲೈಮ್ ಮಾಡಲಾದ ರೇಂಜ್‌ ಮತ್ತು 683km ನ ICAT-ಕ್ಲೇಮ್ ಮಾಡಲಾದ ರೇಂಜ್ ಅನ್ನು ಪಡೆದಿದೆ.  ಈ EV, ಎರಡು-ಮೋಟರ್‌ನ AWD ಸೆಟಪ್‌ನೊಂದಿಗೆ ಬರುತ್ತದೆ ಮತ್ತು 408PS ಮತ್ತು 660Nm ಅನ್ನು ಉತ್ಪಾದಿಸಿ EV ಗೆ 4.7 ಸೆಕೆಂಡುಗಳಲ್ಲಿ 0-100kmph ಗೆ ಸ್ಪ್ರಿಂಟ್ ಮಾಡುವ ಸಾಮರ್ಥ್ಯ ನೀಡಿದೆ.

    ವೋಲ್ವೋ ಇದಕ್ಕೆ 150kW ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯ ನೀಡಿದ್ದು, ಬ್ಯಾಟರಿಯನ್ನು 27 ನಿಮಿಷಗಳಲ್ಲಿ 10 ರಿಂದ 80 ಪ್ರತಿಶತದಷ್ಟು ರಿಫಿಲ್ ಮಾಡಲು ನೆರವಾಗುತ್ತದೆ. ಈ ಕಾರುತಯಾರಕರು C40 ರಿಚಾರ್ಜ್‌ಗೆ 11kW ಚಾರ್ಜರ್ ಅನ್ನು ಪೂರೈಕೆ ಮಾಡಿದೆ.

    ಇದನ್ನೂ ಪರಿಶೀಲಿಸಿ: ಸ್ಲೀಕರ್ ನೋಟಗಳು ಮತ್ತು ಚೆಂದದ ಕ್ಯಾಬಿನ್‌ನೊಂದಿಗೆ ನವೀಕೃತ ಟೆಸ್ಲಾ ಮಾಡೆಲ್ 3 

    ಫೀಚರ್‌ಭರಿತವಾಗಿದೆ

    Volvo C40 Recharge interior

     ಈ C40 ರಿಚಾರ್ಜ್‌ನ ಸಾಧನಗಳ ಪಟ್ಟಿಯು 9-ಇಂಚಿನ ನೇರವಾದ ಟಚ್‌ಸ್ಕ್ರೀನ್, ಹೀಟಿಂಗ್ ಮತ್ತು ಕೂಲಿಂಗ್ ಕಾರ್ಯದ ಮುಂಭಾಗದ ಪವರ್ ಆಸನಗಳು, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, 12.3-ಇಂಚು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 13-ಸ್ಪೀಕರ್ ಹರ್ಮನ್ ಕಾರ್ಡೋನ್ ಸೌಂಡ್ ಸಿಸ್ಟಮ್ ಮತ್ತು ವಿಹಂಗಮ ಗ್ಲಾಸ್ ಸನ್‌ರೂಫ್ ಅನ್ನು ಒಳಗೊಂಡಿದೆ. ಮುಂಭಾಗದಲ್ಲಿ (31 ಲೀಟರ್‌ಗಳು) ಮತ್ತು ಹಿಂಭಾಗದಲ್ಲಿ (413 ಲೀಟರ್‌ಗಳು) ಲಗೇಜ್ ಸ್ಪೇಸ್ ಅನ್ನು ಒಳಗೊಂಡಿದೆ.

    ವೋಲ್ವೋ ತನ್ನ EVಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ  ಏಳು ಏರ್‌ಬ್ಯಾಗ್‌ಗಳು, ಹಿಲ್ ಅಸಿಸ್ಟ್, 360-ಡಿಗ್ರಿ ಕ್ಯಾಮರಾ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಕೊಲಿಶನ್ ತಡೆಗಟ್ಟುವಿಕೆ ಮತ್ತು ಬ್ಲೈಂಡ್-ಸ್ಪಾಟ್ ಡಿಟೆಕ್ಷನ್‌ನಂತಹ ಕೆಲವು ಸುಧಾರಿತ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌ಗಳನ್ನು ನೀಡಿದೆ. 

    ಪ್ರತಿಸ್ಪರ್ಧಿಗಳು ಯಾರು?

    Volvo C40 Recharge rear

    ವೋಲ್ವೋನ ಈ ಎರಡನೇ EV ಆಫರಿಂಗ್‌ಗೆ ಭಾರತದಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಗಳಿಲ್ಲ, ಆದರೆ ಇದು  BMW i4, ಕಿಯಾ EV6, ಹ್ಯುಂಡೈ ಅಯಾನಿಕ್ 5, ಮತ್ತು ವೋಲ್ವೋ XC40 ರಿಚಾರ್ಜ್‌ಗೆ ಪರ್ಯಾಯವಾಗಿದೆ.

    ಇದನ್ನೂ ಓದಿ: ಜಾಗತಿಕವಾಗಿ ಬಿಡುಗಡೆಯಾಲಿದೆ ಕಿಯಾ EV5, 2025 ಕ್ಕೆ ಭಾರತಕ್ಕೆ ಬರುವ ನಿರೀಕ್ಷೆ

     ಇನ್ನಷ್ಟು ಓದಿ: ವೋಲ್ವೋ C40 ರಿಚಾರ್ಜ್ ಆಟೋಮ್ಯಾಟಿಕ್

    was this article helpful ?

    Write your Comment on Volvo ಸಿ40 ರೀಚಾರ್ಜ್

    ಇನ್ನಷ್ಟು ಅನ್ವೇಷಿಸಿ on ವೋಲ್ವೋ ಸಿ40 ರೀಚಾರ್ಜ್

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    ಟ್ರೆಂಡಿಂಗ್ ಎಲೆಕ್ಟ್ರಿಕ್ ಕಾರುಗಳು

    • ಪಾಪ್ಯುಲರ್
    • ಉಪಕಮಿಂಗ್
    ×
    We need your ನಗರ to customize your experience