ಭಾರತದಲ್ಲಿ Volvo XC90 ಫೇಸ್‌ಲಿಫ್ಟ್‌ನಬಿಡುಗಡೆಗೆ ದಿನಾಂಕ ನಿಗದಿ
ವೋಲ್ವೋ XC90 2025 ಗಾಗಿ dipan ಮೂಲಕ ಫೆಬ್ರವಾರಿ 12, 2025 10:20 pm ರಂದು ಪ್ರಕಟಿಸಲಾಗಿದೆ
- 10 Views
- ಕಾಮೆಂಟ್ ಅನ್ನು ಬರೆಯಿರಿ
2025 ರ ವೋಲ್ವೋ XC90 ಬಹುಶಃ ಮೈಲ್ಡ್-ಹೈಬ್ರಿಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮುಂದುವರಿಯಬಹುದು, ಆದರೆ ಕಂಪನಿಯು ಫೇಸ್‌ಲಿಫ್ಟ್ ಆಗಿರುವ ಮಾಡೆಲ್‌ನಲ್ಲಿ ಪ್ಲಗ್-ಇನ್ ಹೈಬ್ರಿಡ್ ಆಯ್ಕೆಯನ್ನು ಸಹ ಪರಿಚಯಿಸಬಹುದು
-
ಇದು ಹೊಸ ಬಂಪರ್‌ಗಳು ಮತ್ತು ಮರುವಿನ್ಯಾಸಗೊಳಿಸಲಾದ ಹೆಡ್‌ಲೈಟ್‌ಗಳು ಮತ್ತು ಟೈಲ್ ಲೈಟ್‌ಗಳನ್ನು ಪಡೆಯಬಹುದು.
-
ಒಳಗೆ, ಇದು ಹೊಸ 11.2-ಇಂಚಿನ ಫ್ರೀ-ಸ್ಟ್ಯಾಂಡಿಂಗ್ ಟಚ್‌ಸ್ಕ್ರೀನ್ ಮತ್ತು 3-ಸ್ಪೋಕ್ ಸ್ಟೀರಿಂಗ್ ವೀಲ್‌ನೊಂದಿಗೆ ಬರಬಹುದು.
-
ಇತರ ವೈಶಿಷ್ಟ್ಯಗಳಲ್ಲಿ 12.3-ಇಂಚಿನ ಡ್ರೈವರ್ ಡಿಸ್ಪ್ಲೇ, 4-ವಲಯ ಆಟೋ AC ಮತ್ತು ಪನೋರಮಿಕ್ ಸನ್‌ರೂಫ್ ಸೇರಿವೆ.
-
ಸುರಕ್ಷತೆಯ ವಿಷಯದಲ್ಲಿ, ಇದು ಮಲ್ಟಿ ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ADAS ನೊಂದಿಗೆ ಬರಬಹುದು.
-
ಬೆಲೆಗಳು ರೂ. 1.05 ಕೋಟಿಗಳಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ (ಎಕ್ಸ್ ಶೋರೂಂ, ಪ್ಯಾನ್-ಇಂಡಿಯಾ).
ಫೇಸ್‌ಲಿಫ್ಟ್ ಆಗಿರುವ ವೋಲ್ವೋ XC90 ಭಾರತದಲ್ಲಿ ಮಾರ್ಚ್ 4, 2025 ರಂದು ಬಿಡುಗಡೆಯಾಗಲಿದೆ. ಹೆಚ್ಚಿನ ಫೇಸ್‌ಲಿಫ್ಟ್‌ಗಳಂತೆ, ವೋಲ್ವೋ ಟಾಪ್ SUV ಒಳಗೆ ಮತ್ತು ಹೊರಗೆ ಕೆಲವು ಸಣ್ಣ ವಿನ್ಯಾಸ ಅಪ್ಡೇಟ್‌ಗಳನ್ನು ಪಡೆಯುತ್ತದೆ, ಆದರೆ ಅದರ ತಾಂತ್ರಿಕ ಸ್ಪೆಸಿಫಿಕೇಷನ್‌ಗಳು ಈಗಿರುವ ಮಾಡೆಲ್‌ನಂತೆಯೇ ಉಳಿಯುವ ನಿರೀಕ್ಷೆಯಿದೆ. 2025 ವೋಲ್ವೋ XC90 ಪಡೆಯಬಹುದಾದ ಎಲ್ಲಾ ಫೀಚರ್‌ಗಳ ವಿವರ ಇಲ್ಲಿದೆ:
ಹೊರಭಾಗ
2025 ರ ವೋಲ್ವೋ XC90 ಈಗಿರುವ ಮಾಡೆಲ್ ನ ಆಕಾರವನ್ನೇ ಪಡೆಯಲಿದೆ, ಆದರೆ ಇದು ಓರೆಯಾದ ಮಾದರಿಯಲ್ಲಿ ಕ್ರೋಮ್ ಅಂಶಗಳೊಂದಿಗೆ ಅಪ್ಡೇಟ್ ಆಗಿರುವ ಗ್ರಿಲ್ ಅನ್ನು ಪಡೆಯುತ್ತದೆ. ಇದು ಆಧುನಿಕ ಥೋರ್‌ನ -ಹ್ಯಾಮರ್-ಆಕಾರದ LED ವಿನ್ಯಾಸದೊಂದಿಗೆ ಸ್ಲಿಮ್ ಆಗಿರುವ LED ಹೆಡ್‌ಲೈಟ್‌ಗಳನ್ನು ಹೊಂದಿರುತ್ತದೆ. ಹೊಸ ಲುಕ್ ಅನ್ನು ನೀಡಲು ಬಂಪರ್ ಅನ್ನು ಸ್ವಲ್ಪ ಅಪ್ಡೇಟ್ ಮಾಡಲಾಗಿದೆ.
ಹೊಸ XC90 ಕಾರಿನ ಬದಿಗಳಲ್ಲಿ ಸಾಂಪ್ರದಾಯಿಕ ಪುಲ್-ಟೈಪ್ ಡೋರ್ ಹ್ಯಾಂಡಲ್‌ಗಳು, ಬಾಡಿ-ಬಣ್ಣದ ಸೈಡ್ ಮಿರರ್‌ಗಳು ಮತ್ತು ಸಿಲ್ವರ್ ರೂಫ್ ರೈಲ್‌ಗಳನ್ನು ಹೊಂದಿರುತ್ತದೆ. ಇದು ಹೊಸ ಡ್ಯುಯಲ್-ಟೋನ್ ಅಲಾಯ್ ವೀಲ್ ಗಳನ್ನು ಸಹ ಪಡೆಯಲಿದ್ದು, ಈಗಿರುವ ಮಾಡೆಲ್‌ನ (21 ಇಂಚುಗಳು) ಗಾತ್ರದಲ್ಲಿರಬಹುದು.
ಹಿಂಭಾಗದಲ್ಲಿ, ಇದು ಅಡ್ಡಲಾಗಿರುವ ಕ್ರೋಮ್ ಸ್ಟ್ರಿಪ್ ಮತ್ತು ಮರುವಿನ್ಯಾಸಗೊಳಿಸಲಾದ LED ಟೈಲ್ ಲೈಟ್‌ಗಳೊಂದಿಗೆ ಸ್ವಲ್ಪ ಅಪ್ಡೇಟ್ ಆಗಿರುವ ಬಂಪರ್ ಅನ್ನು ಹೊಂದಿರುತ್ತದೆ.
ಒಳಭಾಗ
![Volvo XC90 2025 DashBoard](https://stimg.cardekho.com/pwa/img/spacer3x2.png)
![Volvo XC90 2025 Rear Seats](https://stimg.cardekho.com/pwa/img/spacer3x2.png)
ಒಳಗಡೆ, ಫೇಸ್‌ಲಿಫ್ಟ್ ಆಗಿರುವ ವೋಲ್ವೋ XC90 ಈಗಿರುವ-ಸ್ಪೆಕ್ ಮಾಡೆಲ್‌ನಂತೆಯೇ ಸರಳವಾದ ವಿನ್ಯಾಸ ಮತ್ತು 7-ಸೀಟುಗಳ ವಿನ್ಯಾಸದೊಂದಿಗೆ ಬರಬಹುದು. ಇದು 3-ಸ್ಪೋಕ್ ಸ್ಟೀರಿಂಗ್ ವೀಲ್, ಡ್ಯುಯಲ್-ಟೋನ್ ಥೀಮ್ ಮತ್ತು ಲೆಥೆರೆಟ್ ಸೀಟ್ ಅಪ್ಹೋಲ್ಸ್ಟರಿಯೊಂದಿಗೆ ಬರಬಹುದು. ಒಂದು ಸಂಭಾವ್ಯ ಬದಲಾವಣೆಯೆಂದರೆ, ಅಪ್ಡೇಟ್ ಆಗಿರುವ XC90 ಒಳಗೆ ಹೆಚ್ಚು ಸುಸ್ಥಿರ ವಸ್ತುಗಳನ್ನು ಬಳಸಬಹುದು.
ಇದನ್ನು ಕೂಡ ಓದಿ: ವಿಂಟೇಜ್ ಮತ್ತು ಕ್ಲಾಸಿಕ್ ಕಾರುಗಳಿಗೆ ಆಮದು ನಿಯಮಗಳನ್ನು ಈಗ ಸ್ವಲ್ಪ ಮಟ್ಟಿಗೆ ಸಡಿಲುಗೊಳಿಸಲಾಗಿದೆ
ಫೀಚರ್ ಗಳು ಮತ್ತು ಸುರಕ್ಷತೆ
ಈಗಿರುವ XC90 ನಂತೆ, ಫೇಸ್‌ಲಿಫ್ಟ್ ಆಗಿರುವ ಮಾಡೆಲ್ ಕೂಡ ಫೀಚರ್‌ಗಳಿಂದ ತುಂಬಿರುತ್ತದೆ. ಇದು 12.3-ಇಂಚಿನ ಡ್ರೈವರ್ ಡಿಸ್ಪ್ಲೇ, 11.2-ಇಂಚಿನ ಫ್ರೀಸ್ಟ್ಯಾಂಡಿಂಗ್ ಟಚ್‌ಸ್ಕ್ರೀನ್ ಮತ್ತು 19-ಸ್ಪೀಕರ್ ಬೋವರ್ಸ್ & ವಿಲ್ಕಿನ್ಸ್ ಸೌಂಡ್ ಸಿಸ್ಟಮ್ ಅನ್ನು ಒಳಗೊಂಡಿರಬಹುದು. 2025 ರ XC90 SUV ಯ ಫೀಚರ್ ಗಳ ಪಟ್ಟಿಯಲ್ಲಿ ಕಲರ್ಡ್ ಹೆಡ್ಸ್-ಅಪ್ ಡಿಸ್ಪ್ಲೇ (HUD), ವೆಂಟಿಲೇಷನ್ ಮತ್ತು ಮಸಾಜ್ ಫoಕ್ಷನ್ ಹೊಂದಿರುವ ಪವರ್ಡ್ ಸೀಟುಗಳು, ಪನೋರಮಿಕ್ ಸನ್‌ರೂಫ್, 2 ನೇ ಮತ್ತು 3 ನೇ ಸಾಲಿನ ಪ್ರಯಾಣಿಕರಿಗೆ AC ವೆಂಟ್‌ಗಳನ್ನು ಹೊಂದಿರುವ ನಾಲ್ಕು-ಜೋನ್ ಆಟೋ AC ಸಹ ಇರಬಹುದು.
ಸುರಕ್ಷತೆಯ ವಿಷಯದಲ್ಲಿ, ಇದು ಮಲ್ಟಿ ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಸೆಟಪ್, ಹಿಲ್ ಸ್ಟಾರ್ಟ್ ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್ ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಪಡೆಯಬಹುದು. ಇದು ಲೇನ್ ಕೀಪ್ ಅಸಿಸ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ಫೀಚರ್ ಗಳೊಂದಿಗೆ ಲೆವೆಲ್ 2 ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ಸೂಟ್ ಅನ್ನು ಸಹ ಪಡೆಯುತ್ತದೆ. ಇದರ ಜೊತೆಗೆ, 2025 ವೋಲ್ವೋ XC90 ಪಾರ್ಕ್ ಅಸಿಸ್ಟ್ ಫಂಕ್ಷನ್‌ಗಳೊಂದಿಗೆ ಮುಂಭಾಗ, ಹಿಂಭಾಗ ಮತ್ತು ಸೈಡ್‌ಗಳಲ್ಲಿ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಸಹ ಒಳಗೊಂಡಿರಬಹುದು.
ಪವರ್‌ಟ್ರೇನ್ ಆಯ್ಕೆಗಳು
ಗ್ಲೋಬಲ್-ಸ್ಪೆಕ್ 2025 ವೋಲ್ವೋ XC90 ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ, ಮತ್ತು ಅದರ ವಿವರಗಳು ಈ ಕೆಳಗಿನಂತಿವೆ:
ಎಂಜಿನ್ |
48V ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನದೊಂದಿಗೆ 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ |
ಪ್ಲಗ್-ಇನ್-ಹೈಬ್ರಿಡ್ ತಂತ್ರಜ್ಞಾನದೊಂದಿಗೆ 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ |
ಪವರ್ |
250 PS |
455 PS |
ಟಾರ್ಕ್ |
360 Nm |
709 Nm |
ಟ್ರಾನ್ಸ್‌ಮಿಷನ್ |
8-speed AT 8-ಸ್ಪೀಡ್ AT |
8-speed AT 8-ಸ್ಪೀಡ್ AT |
ಡ್ರೈವ್‌ಟ್ರೇನ್ |
AWD* |
AWD |
*AWD = ಆಲ್-ವೀಲ್-ಡ್ರೈವ್
ಭಾರತದಲ್ಲಿ ವೋಲ್ವೋ XC90 ಪ್ರಸ್ತುತ ಮೈಲ್ಡ್-ಹೈಬ್ರಿಡ್ ಎಂಜಿನ್ ಅನ್ನು ಹೊಂದಿದ್ದು, ಫೇಸ್‌ಲಿಫ್ಟ್ ಆಗಿರುವ ವರ್ಷನ್ ಕೂಡ ಅದೇ ರೀತಿಯ ಎಂಜಿನ್ ಅನ್ನು ಹೊಂದಿರುವ ನಿರೀಕ್ಷೆಯಿದೆ. ಆದರೆ, ಅಧಿಕೃತ ದೃಢೀಕರಣಕ್ಕಾಗಿ ನಾವು ಕಾಯಬೇಕಾಗಿದೆ.
ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಈಗಿರುವ ವೋಲ್ವೋ XC90 ಬೆಲೆಯು ರೂ.1.01 ಕೋಟಿಗಳಾಗಿದ್ದು, ಫೇಸ್‌ಲಿಫ್ಟ್ ಆಗಿರುವ ಮಾಡೆಲ್ ಬೆಲೆಯು ಸುಮಾರು ರೂ.1.05 ಕೋಟಿ ಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಬಹುದು. ಇದು ಮರ್ಸಿಡಿಸ್-ಬೆನ್ಜ್ GLE, BMW X5, ಆಡಿ Q7 ಮತ್ತು ಲೆಕ್ಸಸ್ RX ನಂತಹ ಕಾರುಗಳಿಗೆ ಪ್ರತಿಸ್ಪರ್ಧಿಯಾಗಲಿದೆ.
ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ