Login or Register ಅತ್ಯುತ್ತಮ CarDekho experience ಗೆ
Login

ವೀಕ್ಷಿಸಿ: ಕಾರ್‌ಗಳಲ್ಲಿ ಪ್ಲಗ್-ಇನ್ ಹೈಬ್ರಿಡ್ ಟೆಕ್ ಕುರಿತು ಒಂದಷ್ಟು

published on ಮೇ 28, 2024 09:09 pm by ansh for ಬಿಎಂಡವೋ ಎಕ್ಸೆಎಮ್‌

ಪ್ಲಗ್-ಇನ್ ಹೈಬ್ರಿಡ್ ವಾಹನಗಳು ಉತ್ತಮ ಮೈಲೇಜ್ ನೀಡುತ್ತವೆ ಮತ್ತು ದೊಡ್ಡ ಬ್ಯಾಟರಿಗಳನ್ನು ಹೊಂದಿರುತ್ತವೆ, ಆದರೆ ಅವುಗಳ ಬೆಲೆ ಕೂಡ ದುಬಾರಿ

ಭಾರತೀಯ ಕಾರುಗಳ ಮಾರುಕಟ್ಟೆಯು ಇತ್ತೀಚಿನ ವರ್ಷಗಳಲ್ಲಿ ಬಹಳಷ್ಟು ಹೊಸ ಹೈಬ್ರಿಡ್ ವಾಹನಗಳನ್ನು ನೋಡಿವೆ, ಆದರೆ ಅವುಗಳಲ್ಲಿ ಹೆಚ್ಚಿನವು ಮಾರುತಿ, ಟೊಯೋಟಾ ಮತ್ತು ಹೋಂಡಾದಂತಹ ಬ್ರಾಂಡ್‌ಗಳಿಗೆ ಸೇರಿವೆ. ಮತ್ತು ಅವುಗಳಲ್ಲಿ ಎರಡು ವಿಧಗಳಾಗಿವೆ: ಮೈಲ್ಡ್ ಹೈಬ್ರಿಡ್ ಮತ್ತು ಸ್ಟ್ರಾಂಗ್ ಹೈಬ್ರಿಡ್.

ಪ್ಲಗ್-ಇನ್ ಹೈಬ್ರಿಡ್ ವೆಹಿಕಲ್ಸ್ (PHEVs) ಎಂದು ಕರೆಯಲ್ಪಡುವ ಮತ್ತೊಂದು ರೀತಿಯ ಹೈಬ್ರಿಡ್ ಕಾರು ಇದೆ, ಇದು ಹೆಚ್ಚಾಗಿ ಪ್ರೀಮಿಯಂ ಸೆಗ್ಮೆಂಟ್ ನಲ್ಲಿ ಕಂಡುಬರುತ್ತದೆ. ಅದು ಹೇಗೆ ಕೆಲಸ ಮಾಡುತ್ತದೆ ಎಂಬುದರ ವಿವರಗಳು ಇಲ್ಲಿವೆ:

ಪ್ಲಗ್-ಇನ್ ಹೈಬ್ರಿಡ್ ಬೇಸಿಕ್ಸ್

ಮೈಲ್ಡ್ ಮತ್ತು ಸ್ಟ್ರಾಂಗ್ ಹೈಬ್ರಿಡ್‌ಗಳಲ್ಲಿ ತಮ್ಮದೇ ಇಂಜಿನ್ ಬಳಸಿ ಬ್ಯಾಟರಿಗಳನ್ನು ಚಾರ್ಜ್ ಮಾಡಲಾಗುತ್ತದೆ, ಆದರೆ ಪ್ಲಗ್-ಇನ್ ಹೈಬ್ರಿಡ್ ಕಾರುಗಳಲ್ಲಿ ಬ್ಯಾಟರಿಗಳನ್ನು ರೀಚಾರ್ಜ್ ಮಾಡಲು ಚಾರ್ಜರ್‌ಗೆ ಪ್ಲಗ್ ಮಾಡಬೇಕಾಗುತ್ತದೆ.

ಅವು ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೊಟಾ ಇನ್ನೋವಾ ಹೈಕ್ರಾಸ್‌ನಂತಹ ಸ್ಟ್ರಾಂಗ್ ಹೈಬ್ರಿಡ್ ಕಾರುಗಳಂತೆಯೇ ಕೆಲಸ ಮಾಡುತ್ತವೆ. ಇಲ್ಲಿ ದೊಡ್ಡ ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಮೋಟರ್ ಎಂಜಿನ್ ಉತ್ತಮ ಮೈಲೇಜ್ ಪಡೆಯಲು ಸಹಾಯ ಮಾಡುತ್ತದೆ. ಅವು ದೊಡ್ಡ ಬ್ಯಾಟರಿಯನ್ನು ಹೊಂದಿರುವ ಕಾರಣ, ನಗರದ ಟ್ರಾಫಿಕ್ ನಲ್ಲಿ ಕೇವಲ ಎಲೆಕ್ಟ್ರಿಕ್ ಚಾರ್ಜ್ ನಿಂದ ಹೆಚ್ಚು ಸಮಯ ಓಡುತ್ತವೆ.

ಇದನ್ನು ಕೂಡ ಓದಿ: ಟಾಟಾ ಪಂಚ್ EV ಲಾಂಗ್ ರೇಂಜ್ ವರ್ಸಸ್ ಸಿಟ್ರೊಯೆನ್ eC 3: ರಸ್ತೆಯಲ್ಲಿ ಯಾವುದು ಹೆಚ್ಚು ರೇಂಜ್ ಅನ್ನು ನೀಡುತ್ತದೆ?

ಪ್ಲಗ್-ಇನ್ ಹೈಬ್ರಿಡ್ ಕಾರುಗಳು ಸಾಮಾನ್ಯವಾಗಿ ಶಕ್ತಿಶಾಲಿಯಾದ ಎಲೆಕ್ಟ್ರಿಕ್ ಮೋಟಾರ್‌ಗಳನ್ನು ಹೊಂದಿರುತ್ತವೆ, ಇದು ಉತ್ತಮ ಮೈಲೇಜ್ ನೀಡಲು ಎಂಜಿನ್‌ಗೆ ಸಹಾಯ ಮಾಡುತ್ತವೆ. ಉದಾಹರಣೆಗೆ, BMW XM, ಪ್ರತಿ ಗಂಟೆಗೆ 61.9 ಕಿ.ಮೀನಷ್ಟು ಇಂಧನ ದಕ್ಷತೆಯನ್ನು ಹೊಂದಿದೆ ಮತ್ತು 88 ಕಿ.ಮೀವರೆಗಿನ EV ರೇಂಜ್ ಅನ್ನು ನೀಡುತ್ತದೆ.

ಆದರೆ, ಪ್ಲಗ್-ಇನ್ ಹೈಬ್ರಿಡ್ ಮತ್ತು ಸಾಮಾನ್ಯ ಸ್ಟ್ರಾಂಗ್ ಹೈಬ್ರಿಡ್ ನಡುವೆ ಒಂದು ವ್ಯತ್ಯಾಸವಿದೆ. ಸ್ಟ್ರಾಂಗ್ ಹೈಬ್ರಿಡ್ ಕಾರುಗಳಲ್ಲಿ ಬ್ಯಾಟರಿಯಲ್ಲಿನ ಚಾರ್ಜ್ ಖಾಲಿಯಾದರೆ, ರೀಚಾರ್ಜ್ ಮಾಡಲು ಎಂಜಿನ್ ಜನರೇಟರ್ ಆಗಿ ಕೆಲಸ ಮಾಡುತ್ತದೆ. ಆದರೆ, ದೊಡ್ಡ ಬ್ಯಾಟರಿ ಇರುವ ಕಾರಣ ಪ್ಲಗ್-ಇನ್ ಹೈಬ್ರಿಡ್ ವಾಹನಗಳಲ್ಲಿ ಇದು ಸಾಧ್ಯವಿಲ್ಲ. ಈ ವಾಹನಗಳಲ್ಲಿ, ಎಂಜಿನ್ ಬ್ಯಾಟರಿಯನ್ನು ಸ್ವಲ್ಪ ಮಟ್ಟಿಗೆ ಚಾರ್ಜ್ ಮಾಡುತ್ತದೆ, ಆದರೆ ಕಾರನ್ನು ಸಾಕಷ್ಟು ದೂರ ಓಡಿಸಲು ಇದು ಸಾಕಾಗುವುದಿಲ್ಲ. ಸಂಪೂರ್ಣವಾಗಿ ರೀಚಾರ್ಜ್ ಮಾಡಲು ಬ್ಯಾಟರಿಯನ್ನು ವಿದ್ಯುತ್ ಮೂಲಕ್ಕೆ ಪ್ಲಗ್-ಇನ್ ಮಾಡಬೇಕಾಗುತ್ತದೆ.

ಮೈಲೇಜ್ ವ್ಯತ್ಯಾಸ

ಸ್ಟ್ರಾಂಗ್ ಹೈಬ್ರಿಡ್ ಗಳಲ್ಲಿ, ನೀವು ಪ್ರತಿ ಗಂಟೆಗೆ 20 ಕಿ.ಮೀ ಮೈಲೇಜ್ ಪಡೆಯಬಹುದು (ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೋಟಾ ಇನ್ನೋವಾ ಹೈಕ್ರಾಸ್ ಇದಕ್ಕೆ ಪ್ರಮುಖ ಉದಾಹರಣೆಗಳಾಗಿವೆ), ಆದರೆ BMW XM ನಲ್ಲಿ, ಪ್ಲಗ್-ಇನ್ ಹೈಬ್ರಿಡ್ ಸೆಟಪ್‌ ಇರುವ ಕಾರಣ ಮೈಲೇಜ್ ಪ್ರತಿ ಗಂಟೆಗೆ 61.9 ಕಿ.ಮೀವರೆಗೆ ಹೋಗುತ್ತದೆ. ಇದು ತಕ್ಷಣಕ್ಕೆ ದೊಡ್ಡ ವ್ಯತ್ಯಾಸದಂತೆ ಕಾಣಿಸಬಹುದು, ಆದರೆ ವಾಸ್ತವದಲ್ಲಿ, ಅಂತರವು ಅಷ್ಟೊಂದು ದೊಡ್ಡದಾಗಿಲ್ಲ.

ಪ್ಲಗ್-ಇನ್ ಹೈಬ್ರಿಡ್ ವಾಹನಗಳು ತಮ್ಮ ಬ್ಯಾಟರಿಯನ್ನು ಎಂಜಿನ್‌ನ ಸಹಾಯದಿಂದ ಸಂಪೂರ್ಣವಾಗಿ ಚಾರ್ಜ್ ಮಾಡಲು ಸಾಧ್ಯವಿಲ್ಲದ ಕಾರಣ, ಬ್ಯಾಟರಿಯ ಚಾರ್ಜ್ ಖಾಲಿಯಾದಾಗ ಮೈಲೇಜ್ ಬಹಳಷ್ಟು ಕಡಿಮೆಯಾಗುತ್ತದೆ. ಮತ್ತೊಂದೆಡೆ, ಸ್ಟ್ರಾಂಗ್ ಹೈಬ್ರಿಡ್ ಕಾರುಗಳಲ್ಲಿ, ಎಂಜಿನ್ ಅದರ ಬ್ಯಾಟರಿಯನ್ನು ರೀಚಾರ್ಜ್ ಮಾಡುತ್ತಲೇ ಇರುತ್ತದೆ, ಆದ್ದರಿಂದ ಮೈಲೇಜ್ ಬಹುತೇಕ ಒಂದೇ ರೀತಿ ಇರುತ್ತದೆ.

ಇದನ್ನು ಕೂಡ ನೋಡಿ: ಮರ್ಸಿಡೀಸ್-ಮೇಬ್ಯಾಕ್ GLS 600 ನ ಒಳಗೆ ಸುಲಭವಾಗಿ ಪ್ರವೇಶಿಸುವುದು ಹೇಗೆ?

ಲಾಂಗ್ ಡ್ರೈವ್ ಹೋಗುವಾಗ, ಸ್ಟ್ರಾಂಗ್ ಹೈಬ್ರಿಡ್ ಕಾರಿನ ಮೈಲೇಜ್ ಸ್ಥಿರವಾಗಿ ಉಳಿಯುತ್ತದೆ, ಆದರೆ ಪ್ಲಗ್-ಇನ್ ಹೈಬ್ರಿಡ್ ಕಾರಿನ ಮೈಲೇಜ್ ಅದರ ಬ್ಯಾಟರಿ ಎಷ್ಟು ಚಾರ್ಜ್ ಹೊಂದಿದೆ ಎಂಬುದರ ಆಧಾರದ ಮೇಲೆ ಬದಲಾಗಬಹುದು.

ಹೆಚ್ಚು ದುಬಾರಿ ಬೆಲೆ

ದೊಡ್ಡ ಬ್ಯಾಟರಿ ಪ್ಯಾಕ್, ಎಲೆಕ್ಟ್ರಿಕ್ ಮೋಟಾರ್‌ಗಳು ಮತ್ತು ಒಟ್ಟಾರೆ ಪ್ಲಗ್-ಇನ್ ಹೈಬ್ರಿಡ್ ಸೆಟಪ್‌ಗಳಿಂದಾಗಿ, ಈ ವಾಹನಗಳ ಬೆಲೆಯು ಹೆಚ್ಚು ದುಬಾರಿಯಾಗಿವೆ. ಉದಾಹರಣೆಗೆ BMW XM ಬೆಲೆಯು ರೂ. 2.60 ಕೋಟಿ (ಎಕ್ಸ್ ಶೋರೂಂ) ಮತ್ತು ಅದರ ಆನ್-ರೋಡ್ ಬೆಲೆ ರೂ. 3 ಕೋಟಿ ದಾಟುತ್ತದೆ. XM ಬೆಲೆಯಂತೆಯೇ, ಭಾರತದಲ್ಲಿ ಈ ಹಿಂದೆ ಮಾರಾಟವಾಗಿರುವ ಇತರ ಪ್ಲಗ್-ಇನ್ ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳು (PHEV ಗಳು) ಕೂಡ ದುಬಾರಿಯಾಗಿದ್ದು, ಹೆಚ್ಚಾಗಿ ಪ್ರೀಮಿಯಂ ಅಥವಾ ಐಷಾರಾಮಿ ಸೆಗ್ಮೆಂಟ್ ಗಳಲ್ಲಿ ಕಂಡುಬರುತ್ತವೆ. ಇದರಿಂದಾಗಿ ಅವುಗಳು ಸಾಮಾನ್ಯ ಜನರ ಬಜೆಟ್ ನಲ್ಲಿ ಬರುವುದಿಲ್ಲ.

ಇದನ್ನು ಕೂಡ ಓದಿ: ಕಿಯಾ EV3 ಬರಲಿದೆ, ಈ ಕಾಂಪ್ಯಾಕ್ಟ್ ಎಲೆಕ್ಟ್ರಿಕ್ SUV 600 ಕಿಮೀ ವರೆಗೆ ರೇಂಜ್ ನೀಡುವ ಸಾಧ್ಯತೆ

ಪ್ರಸ್ತುತ, ಭಾರತದಲ್ಲಿ, ಉತ್ತಮ ಮೈಲೇಜ್ ನೀಡುವಂತಹ ಸ್ಟ್ರಾಂಗ್ ಮತ್ತು ಪ್ಲಗ್-ಇನ್ ಹೈಬ್ರಿಡ್ ಕಾರುಗಳ ವೈವಿಧ್ಯಮಯ ಆಯ್ಕೆಗಳನ್ನು ಹೊಂದಿದ್ದೇವೆ. ಪ್ಲಗ್-ಇನ್ ಹೈಬ್ರಿಡ್ ಕಾರುಗಳು ದುಬಾರಿಯಾಗಿರುವ ಕಾರಣ ಭಾರತದ ಮಾರುಕಟ್ಟೆಯಲ್ಲಿ ವಿರಳವಾಗಿವೆ. ಆದರೆ, ನೀವು ಅವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾರತದ ರಸ್ತೆಗಳಲ್ಲಿ ನೋಡಲು ಬಯಸುವಿರಾ? ಕಾಮೆಂಟ್‌ಗಳಲ್ಲಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ!

ಇನ್ನಷ್ಟು ಓದಿ: XM ಆಟೋಮ್ಯಾಟಿಕ್

a
ಅವರಿಂದ ಪ್ರಕಟಿಸಲಾಗಿದೆ

ansh

  • 30 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಬಿಎಂಡವೋ ಎಕ್ಸೆಎಮ್‌

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ