• English
    • Login / Register

    KBCಯ 1 ಕೋಟಿ ಬಹುಮಾನದ ವಿಜೇತರಿಗೆ ಸಿಹಿ ಸುದ್ದಿ: ಈಗ ಬಹುಮಾನವಾಗಿ ಸಿಗಲಿದೆ Hyundai Venue

    ಹುಂಡೈ ವೆನ್ಯೂ ಗಾಗಿ dipan ಮೂಲಕ ಸೆಪ್ಟೆಂಬರ್ 27, 2024 12:55 pm ರಂದು ಪ್ರಕಟಿಸಲಾಗಿದೆ

    • 65 Views
    • ಕಾಮೆಂಟ್‌ ಅನ್ನು ಬರೆಯಿರಿ

    ಗೇಮ್ ಶೋನಲ್ಲಿ ರೂ 7 ಕೋಟಿ ಬಹುಮಾನದ ವಿಜೇತರಿಗೆ ಈ ಸೀಸನ್‌ನಲ್ಲಿ ಹುಂಡೈ ಅಲ್ಕಾಜರ್ ಅನ್ನು ನೀಡಲಾಗುತ್ತದೆ

    Hyundai Venue awarded to KBC winner

    ಜನಪ್ರಿಯ ಟಿವಿ ಗೇಮ್ ಶೋ ಕೌನ್ ಬನೇಗಾ ಕರೋಡ್‌ಪತಿ (KBC) 16 ನೇ ಸೀಸನ್‌ನ ಮೊದಲ 'ಕೋಟ್ಯಧಿಪತಿ'ಗೆ ಹೊಚ್ಚಹೊಸ ಹುಂಡೈ ವೆನ್ಯೂ ನೀಡಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಯುಪಿಎಸ್‌ಸಿ ಆಕಾಂಕ್ಷಿಯಾಗಿರುವ 22 ವರ್ಷದ ಚಂದರ್ ಪ್ರಕಾಶ್ ಅವರು 1 ಕೋಟಿ ರೂಪಾಯಿಯ ಪ್ರಶ್ನೆಗೆ ಸರಿಯಾದ ಉತ್ತರವನ್ನು ನೀಡಿ ಗೇಮ್ ಶೋನಲ್ಲಿ ಬಹುಮಾನದ ಹಣವನ್ನು ಗೆದ್ದಿದ್ದಾರೆ. ಹುಂಡೈ ಮೋಟಾರ್ಸ್ ಇಂಡಿಯಾ ಲಿಮಿಟೆಡ್ ಗೇಮ್ ಶೋನ ಪ್ರಮುಖ ಪ್ರಾಯೋಜಕರಲ್ಲಿ ಒಂದಾಗಿರುವ ಕಾರಣ ಅವರು ವಿಜೇತರಿಗೆ ತಮ್ಮ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ಅನ್ನು ಬಹುಮಾನವಾಗಿ ನೀಡಿದ್ದಾರೆ.

     ಹುಂಡೈ ಮೋಟಾರ್ ಇಂಡಿಯಾದ ಚೀಫ್ ಆಪರೇಟಿಂಗ್ ಆಫೀಸರ್ (COO) ಆಗಿರುವ ತರುಣ್ ಗಾರ್ಗ್ ಕೂಡ ವಿಜೇತರ ಸಾಧನೆಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಆದರೆ, ಪ್ರಕಾಶ್ ಅವರು 7 ಕೋಟಿ ರೂಪಾಯಿಯ ಪ್ರಶ್ನೆಗೆ ಉತ್ತರಿಸುವ ಮೊದಲು ಆಟವನ್ನು ಬಿಡಲು ನಿರ್ಧರಿಸಿದರು. ಈ ಪ್ರಶ್ನೆಗೆ ಅವರು ಸರಿಯಾದ ಉತ್ತರ ನೀಡಿದ್ದರೆ ಅವರಿಗೆ ಶೋನ ಅತ್ಯಂತ ಹೆಚ್ಚು ಬಹುಮಾನದ ಮೊತ್ತದೊಂದಿಗೆ ಹುಂಡೈ ಅಲ್ಕಾಜರ್ ಅನ್ನು ಗೆಲ್ಲಬಹುದಿತ್ತು.

    A post shared by Sony Entertainment Television (@sonytvofficial)

     ನಾವು ಹುಂಡೈ ವೆನ್ಯೂ ಕಾರಿನ ಒಂದು ಸಂಕ್ಷಿಪ್ತ ಪರಿಚಯ ನೋಡೋಣ:

    ಹ್ಯುಂಡೈ ವೆನ್ಯೂ: ಒಂದು ಪರಿಚಯ

     ಚಂದರ್ ಪ್ರಕಾಶ್‌ಗೆ ಹುಂಡೈ ವೆನ್ಯೂ ಅನ್ನು ಕೊರಿಯನ್ ಕಾರು ತಯಾರಕರ ಪರವಾಗಿ ಬಾಲಿವುಡ್ ಸೂಪರ್‌ಸ್ಟಾರ್ ಮತ್ತು ಕಾರ್ಯಕ್ರಮದ ನಿರೂಪಕರಾದ ಅಮಿತಾಬ್ ಬಚ್ಚನ್ ನೀಡಿದರು. ನೀಡಲಾದ ವೆನ್ಯೂ ಕಾರಿನ ನಿಖರವಾದ ವಿವರಗಳನ್ನು ಬಹಿರಂಗಪಡಿಸದಿದ್ದರೂ, ಫುಲ್ ಲೋಡ್ ಆಗಿರುವ SX(O) ಮಾಡೆಲ್ ಅನ್ನು ನೀಡಲಾಗಿದೆ ಎಂದು ನಾವು ಅಂದುಕೊಳ್ಳಬಹುದು. ಈ ವೇರಿಯಂಟ್ ಬೆಲೆಯು ರೂ 12.44 ಲಕ್ಷದಿಂದ ಪ್ರಾರಂಭವಾಗುತ್ತದೆ (ಎಕ್ಸ್ ಶೋ ರೂಂ).

    Hyundai Venue gets LED projector headlights
    Hyundai Venue gets connected LED tail lights

    ಹುಂಡೈ ವೆನ್ಯೂ LED ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, LED DRL ಗಳು ಮತ್ತು ಕನೆಕ್ಟೆಡ್ LED ಟೈಲ್ ಲೈಟ್‌ನೊಂದಿಗೆ ಬರುತ್ತದೆ. ಇದು 15-ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳು ಮತ್ತು ಮುಂಭಾಗ ಮತ್ತು ಹಿಂಭಾಗದಲ್ಲಿ ಸಿಲ್ವರ್ ಸ್ಕಿಡ್ ಪ್ಲೇಟ್‌ಗಳನ್ನು ಪಡೆಯುತ್ತದೆ.

    Hyundai Venue dual-tone interior

     ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ಸಿಲ್ವರ್ ಅಕ್ಸೆನ್ಟ್‌ನೊಂದಿಗೆ ಡ್ಯುಯಲ್-ಟೋನ್ ಬ್ಲಾಕ್ ಮತ್ತು ಗ್ರೇ ಕ್ಯಾಬಿನ್ ಥೀಮ್ ಅನ್ನು ಹೊಂದಿದೆ. ಸೀಟುಗಳು ಅದೇ ರೀತಿಯ ಡ್ಯುಯಲ್-ಟೋನ್ ಲೆಥೆರೆಟ್ ಅಪ್ಹೋಲ್ಸ್ಟರಿಯನ್ನು ಹೊಂದಿವೆ. ಎಲ್ಲಾ ಪ್ರಯಾಣಿಕರಿಗೆ ಅಡ್ಜಸ್ಟ್ ಮಾಡಬಹುದಾದ ಹೆಡ್‌ರೆಸ್ಟ್‌ಗಳನ್ನು ಒದಗಿಸಲಾಗಿದೆ ಮತ್ತು ವೆನ್ಯೂ ಸಿಂಗಲ್-ಪೇನ್ ಸನ್‌ರೂಫ್‌ನೊಂದಿಗೆ ಬರುತ್ತದೆ.

    Hyundai Venue gets a semi-digital instrument cluster

     ಫೀಚರ್‌ಗಳ ವಿಷಯದಲ್ಲಿ, ಈ ಹುಂಡೈ ಎಸ್‌ಯುವಿ 8-ಇಂಚಿನ ಟಚ್‌ಸ್ಕ್ರೀನ್, ಸೆಮಿ-ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಪುಶ್-ಬಟನ್ ಸ್ಟಾರ್ಟ್/ಸ್ಟಾಪ್‌ನೊಂದಿಗೆ ಕೀಲೆಸ್ ಎಂಟ್ರಿಯನ್ನು ಹೊಂದಿದೆ.

    Hyundai Venue

    ಸುರಕ್ಷತೆಗಾಗಿ ಆರು ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್‌ ಆಗಿ), ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಹಿಂಬದಿ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಒಳಗೊಂಡಿದೆ. ಇದು ಲೇನ್-ಕೀಪ್ ಅಸಿಸ್ಟ್ ಮತ್ತು ಫಾರ್ವರ್ಡ್ ಕೊಲಿಷನ್ ವಾರ್ನಿಂಗ್ ಸೇರಿದಂತೆ ಲೆವೆಲ್-1 ಅಡ್ವಾನ್ಸ್ಡ್ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ (ADAS) ಫೀಚರ್‌ಗಳನ್ನು ಹೊಂದಿದೆ.

    ಹ್ಯುಂಡೈ ವೆನ್ಯೂ: ಪವರ್‌ಟ್ರೇನ್ ಆಯ್ಕೆಗಳು

    Hyundai Venue gets 3 engine options

     ಹುಂಡೈ ವೆನ್ಯೂ ಮೂರು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ, ಮತ್ತು ಅದರ ಸ್ಪೆಸಿಫಿಕೇಷನ್‌ಗಳು ಈ ಕೆಳಗಿನಂತಿವೆ:

     ಎಂಜಿನ್ ಆಯ್ಕೆ

     1.2-ಲೀಟರ್ N/A ಪೆಟ್ರೋಲ್

     1-ಲೀಟರ್ ಟರ್ಬೊ-ಪೆಟ್ರೋಲ್

     1.5-ಲೀಟರ್ ಡೀಸೆಲ್

     ವರ್

    83 PS

    120 PS

    116 PS

     ಟಾರ್ಕ್

    114 Nm

    172 Nm

    250 Nm

     ಟ್ರಾನ್ಸ್‌ಮಿಷನ್‌

     5-ಸ್ಪೀಡ್ ಮಾನ್ಯುಯಲ್

     6- ಸ್ಪೀಡ್ iMT*, 7- ಸ್ಪೀಡ್ DCT*

     6- ಸ್ಪೀಡ್ ಮಾನ್ಯುಯಲ್

     *iMT = ಕ್ಲಚ್‌ಲೆಸ್ ಮಾನ್ಯುಯಲ್; DCT = ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌

    ಹ್ಯುಂಡೈ ವೆನ್ಯೂ: ಬೆಲೆ ಮತ್ತು ಪ್ರತಿಸ್ಪರ್ಧಿಗಳು

    Hyundai Venue

    ಹುಂಡೈ ವೆನ್ಯೂ ಬೆಲೆಯು ರೂ. 7.94 ಲಕ್ಷದಿಂದ ರೂ. 13.44 ಲಕ್ಷದವರೆಗೆ (ಎಕ್ಸ್ ಶೋ ರೂಂ, ನವದೆಹಲಿ) ಇದೆ. ಇದು ಕಿಯಾ ಸೊನೆಟ್, ಮಹೀಂದ್ರಾ XUV 3XO, ಟಾಟಾ ನೆಕ್ಸಾನ್ ಮತ್ತು ಮಾರುತಿ ಬ್ರೆಝಾ ಮುಂತಾದ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಪ್ರತಿಸ್ಪರ್ಧಿಯಾಗಿದೆ. ಇದನ್ನು ಮಾರುತಿ ಫ್ರಾಂಕ್ಸ್ ಮತ್ತು ಟೊಯೋಟಾ ಟೈಸರ್‌ನಂತಹ ಸಬ್-4m ಕ್ರಾಸ್‌ಒವರ್‌ಗಳಿಗೆ ಪರ್ಯಾಯ ಆಯ್ಕೆಯಾಗಿ ಕೂಡ ಪರಿಗಣಿಸಬಹುದು.

     ವಾಹನ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸ್ಆಪ್  ಚಾನಲ್ ಅನ್ನು ಫಾಲೋ ಮಾಡಿ.

     ಇನ್ನಷ್ಟು ಓದಿ : ವೆನ್ಯೂ ಆನ್ ರೋಡ್ ಬೆಲೆ

    was this article helpful ?

    Write your Comment on Hyundai ವೆನ್ಯೂ

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience