ಈ ಹಬ್ಬದ ಋತುವಿನಲ್ಲಿ MG ZS EV ಬೆಲೆಗಳಲ್ಲಿ ಭಾರಿ ಕಡಿತ
ಎಂಜಿ ಜೆಡ್‌ಎಸ್ ಇವಿ ಗಾಗಿ rohit ಮೂಲಕ ಅಕ್ಟೋಬರ್ 09, 2023 11:45 am ರಂದು ಪ್ರಕಟಿಸಲಾಗಿದೆ
- 71 Views
- ಕಾಮೆಂಟ್ ಅನ್ನು ಬರೆಯಿರಿ
ಈ ಬೆಲೆ ಕಡಿತದೊಂದಿಗೆ ZS EV ಈಗ ರೂ 2.30 ಲಕ್ಷಗಳ ವರೆಗೆ ಅಗ್ಗವಾಗಿದೆ
- ಈ MG ZS EV ಯ ಬೆಲೆಯನ್ನು ಈಗ ರೂ 22.88 ಲಕ್ಷ ಮತ್ತು ರೂ 25.90 ನಡುವೆ ನಿಗದಿಪಡಿಸಲಾಗಿದೆ.
- ಹೆಕ್ಟರ್ ಅನ್ನು MG ರೂ 14.73 ಲಕ್ಷದಿಂದ ರೂ 21.73 ಲಕ್ಷ ಬೆಲೆಗೆ ನೀಡುತ್ತಿದೆ.
- ಹೆಕ್ಟರ್ ಪ್ಲಸ್ ಬೆಲೆಯನ್ನು ರೂ 17.50 ಮತ್ತು ರೂ 22.43 ಲಕ್ಷದ ನಡುವೆ ನಿಗದಿಪಡಿಸಲಾಗಿದೆ.
MG ಹೆಕ್ಟರ್ ಮತ್ತು MG ಹೆಕ್ಟರ್ ಪ್ಲಸ್ ಬೆಲೆ ಇಳಿಕೆಯ ಸುದ್ದಿಯನ್ನು ನಾವು ಇತ್ತೀಚೆಗಷ್ಟೇ ನಿಮಗೆ ನೀಡಿದ್ದೆವು. ಹಬ್ಬದ ಅವಧಿಗಾಗಿ ಕಾರು ತಯಾರಕರು ಈ ಎರಡು SUVಗಳ ಬೆಲೆಗಳನ್ನು ಕಡಿತಗೊಳಿಸಿದ್ದು ಇದೀಗ MG ZS EV ಯ ಸರದಿ. ಇದರ ಬೆಲೆಯನ್ನೂ ಕಡಿತಗೊಳಿಸಲಾಗುತ್ತಿದೆ. ಈ ಇಲೆಕ್ಟ್ರಿಕ್ SUVಯ ಪರಿಷ್ಕೃತ ವೇರಿಯೆಂಟ್‌ವಾರು ಬೆಲೆಗಳ ವಿವರಗಳನ್ನು ಕೆಳಗೆ ನೀಡಲಾಗಿದೆ:
ZS EV
ವೇರಿಯೆಂಟ್ |
ಹಳೆಯ ಬೆಲೆ |
ಹೊಸ ಬೆಲೆ |
ಎಕ್ಸೈಟ್ |
ರೂ 23.38 ಲಕ್ಷ |
ರೂ 22.88 ಲಕ್ಷ |
ಎಕ್ಸ್‌ಕ್ಲೂಸಿವ್ |
ರೂ 27.30 ಲಕ್ಷ |
ರೂ 25 ಲಕ್ಷ |
ಎಕ್ಸ್‌ಕ್ಲೂಸಿವ್ ಪ್ರೊ |
ರೂ 27.90 ಲಕ್ಷ |
ರೂ 25.90 ಲಕ್ಷ |
ಈ ಬೆಲೆ ಇಳಿಕೆಯೊಂದಿಗೆ, MG ZS EVಯ ಆರಂಭಿಕ ಬೆಲೆಯು ರೂ 50,000ದಷ್ಟು ಅಗ್ಗವಾಗಿದೆ. ಇದರ ಮಿಡ್-ಸ್ಪೆಕ್ ಮತ್ತು ಟಾಪ್-ರೇಂಜ್ ವೇರಿಯೆಂಟ್‌ಗಳು ರೂ 2 ಲಕ್ಷಕ್ಕೂ ಹೆಚ್ಚಿನ ಭಾರೀ ಬೆಲೆ ಕಡಿತವನ್ನು ಪಡೆದಿದೆ. ಈ ಇಲೆಕ್ಟ್ರಿಕ್ SUV 50.3kWh ನ ಬ್ಯಾಟರಿ ಪ್ಯಾಕ್ ಹೊಂದಿದ್ದು, ಇದನ್ನು 177PS ಮತ್ತು 280Nm ಉತ್ಪಾದಿಸುವ ಇಲೆಕ್ಟ್ರಿಕ್ ಮೋಟರ್‌ನೊಂದಿಗೆ ಜೋಡಿಸಲಾಗಿದೆ. ಈ ಸೆಟಪ್‌ನೊಂದಿಗೆ ಇದು 461km ಕ್ಲೈಮ್ ಮಾಡಲಾದ ರೇಂಜ್ ಅನ್ನು ಪಡೆದಿದೆ.
ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್
ನಮ್ಮ ಹಿಂದಿನ ವರದಿಯಲ್ಲಿ ಈಗಾಗಲೇ ನೋಡಿರುವಂತೆ MG ಹೆಕ್ಟರ್‌ನ ಬೆಲೆಗಳು ರೂ 1.29 ಲಕ್ಷದಷ್ಟು ಇಳಿಕೆಯಾಗಿದ್ದು, MG ಹೆಕ್ಟರ್ ಪ್ಲಸ್‌ನ ಬೆಲೆಗಳು ರೂ 1.37 ಲಕ್ಷಗಳ ತನಕ ಅಗ್ಗವಾಗಿದೆ. ಅವುಗಳ ಪರಿಷ್ಕೃತ ಬೆಲೆಗಳು ಅನುಕ್ರಮವಾಗಿ ರೂ 14.73 ಲಕ್ಷದಿಂದ ರೂ 21.73 ಲಕ್ಷದ ತನಕ, ಮತ್ತು ರೂ 17.50 ಲಕ್ಷದಿಂದ ರೂ 22.43 ಲಕ್ಷದ ತನಕ ಇದೆ. ಮಧ್ಯಮ ಗಾತ್ರದ SUVಗಳ ಟಾಪ್ ವೇರಿಯೆಂಟ್‌ಗಳು ಕೂಡಾ ಗಮನಾರ್ಹ ಬೆಲೆ ಕಡಿತವನ್ನು ಪಡೆದಿವೆ. ಹೆಕ್ಟರ್ 5-ಸೀಟಿನ SUV ಆಗಿದ್ದರೆ, ಹೆಕ್ಟರ್ ಪ್ಲಸ್ ಅನ್ನು 6- ಮತ್ತು 7-ಸೀಟರ್ ಲೇಔಟ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ.
ಎರಡೂ SUVಗಳು ಒಂದೇ ರೀತಿಯ ಇಂಜಿನ್ ಆಯ್ಕೆಗಳನ್ನು ಪಡೆದಿವೆ: 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ CVT ಜೊತೆಗೆ ಜೋಡಿಸಲಾದ 1.5-ಲೀಟರ್ ಟರ್ಬೋ-ಪೆಟ್ರೋಲ್ (143PS/250Nm) ಮತ್ತು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ಜೋಡಿಸಲಾದ 2-ಲೀಟರ್ ಡೀಸೆಲ್ ಇಂಜಿನ್ (170PS/350Nm).
ಇದನ್ನೂ ಪರಿಶೀಲಿಸಿ: ಸೆಪ್ಟೆಂಬರ್ 2023ರ ಅತ್ಯುತ್ತಮ-ಮಾರಾಟವಾದ ಟಾಪ್ 15 ಕಾರುಗಳ ನೋಟ
MG ಪ್ರತಿಸ್ಪರ್ಧಿಗಳು
ಈ MG ZS EV ಹ್ಯುಂಡೈ ಕೋನಾ ಇಲೆಕ್ಟ್ರಿಕ್ ಮತ್ತು BYD ಒಟ್ಟೋ 3ಗೆ ಪ್ರತಿಸ್ಪರ್ಧಿಯಾದರೆ, ಟಾಟಾ ನೆಕ್ಸಾನ್ EVಗೆ ದುಬಾರಿ ಪರ್ಯಾಯವಾಗಿದೆ. ಇನ್ನೊಂದೆಡೆ, MG ಹೆಕ್ಟರ್ ಮತ್ತು MG ಹೆಕ್ಟರ್ ಪ್ಲಸ್‌ಗೆ ಟಾಟಾ ಹ್ಯಾರಿಯರ್, ಟಾಟಾ ಸಫಾರಿ, ಮಹೀಂದ್ರಾ XUV700 ಮತ್ತು ಹ್ಯುಂಡೈ ಅಲ್ಕಾಝಾರ್ ಪ್ರತಿಸ್ಫರ್ಧಿಯಾಗಿವೆ.
ಈ ಲೇಖನದಲ್ಲಿ ಉಲ್ಲೇಖಿಸಲಾದ ಎಲ್ಲಾ ಬೆಲೆಗಳು ಎಕ್ಸ್-ಶೋರೂಂ ದೆಹಲಿ ಪ್ರಕಾರವಾಗಿ ಇರುತ್ತದೆ.
ಇನ್ನಷ್ಟು ಓದಿ : ZS EV ಆಟೋಮ್ಯಾಟಿಕ್
0 out of 0 found this helpful