• English
  • Login / Register

2024 Renault Triber Review: ಬಜೆಟ್‌ನಲ್ಲಿ ಒಂದು ಫ್ಯಾಮಿಲಿ ಕಂಫರ್ಟ್

Published On ಜುಲೈ 04, 2024 By ansh for ರೆನಾಲ್ಟ್ ಟ್ರೈಬರ್

ಈ ಎಮ್‌ಪಿವಿಯು ನೀಡುವ ಸ್ಥಳಾವಕಾಶ ಮತ್ತು ಸೌಕರ್ಯವು ಸಹ ಇದರ ಹಳೆಯ ರೀತಿಯ ಲುಕ್‌ ಮತ್ತು ಕಡಿಮೆ ಪರ್ಫಾರ್ಮೆನ್ಸ್‌ನಿಂದಾಗಿ ಸಪ್ಪೆ ಅನಿಸುತ್ತದೆ

ರೆನಾಲ್ಟ್ ಟ್ರೈಬರ್ ಮಾರುಕಟ್ಟೆಯಲ್ಲಿ ಅತ್ಯಂತ ಕೈಗೆಟುಕುವ ಎಮ್‌ಪಿವಿ ಆಗಿದ್ದು, ಇದರಲ್ಲಿ ಏಳು ಪ್ರಯಾಣಿಕರಿಗೆ ಪ್ರಯಾಣಿಸಬಹುದು. ಹಾಗೆಯೇ ಇದರ ಬೆಲೆಗಳು 6 ಲಕ್ಷ ರೂ.ನಿಂದ 8.97 ಲಕ್ಷ ರೂ.ವರೆಗೆ (ಎಕ್ಸ್ ಶೋ ರೂಂ) ಇದೆ. ಇದು ಮಾರುಕಟ್ಟೆಯಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಯನ್ನು ಹೊಂದಿಲ್ಲ ಮತ್ತು ಮಾರುತಿ ಸ್ವಿಫ್ಟ್‌ನಂತಹ ಹ್ಯಾಚ್‌ಬ್ಯಾಕ್‌ಗಳಿಗೆ ಪರ್ಯಾಯವಾಗಿ ಪರಿಗಣಿಸಬಹುದು. 2024 ರಲ್ಲಿ ಇದು ಇನ್ನೂ ಕಾರ್ಯಸಾಧ್ಯವಾದ ಆಯ್ಕೆಯಾಗಿದೆಯೇ ಅಥವಾ ಅದಕ್ಕೆ ಅಪ್‌ಡೇಟ್ ಅಗತ್ಯವಿದೆಯೇ ಎಂದು ನೋಡಲು ನಾವು ಟ್ರೈಬರ್ ಅನ್ನು ಓಡಿಸಿದ್ದೇವೆ ಮತ್ತು ಮೌಲ್ಯಮಾಪನ ಮಾಡಿದ್ದೇವೆ.

ಡಿಸೈನ್‌

Renault Triber

ಟ್ರೈಬರ್ ತನ್ನ ವಿನ್ಯಾಸದಲ್ಲಿ ಯಾವುದೇ ಪ್ರೀಮಿಯಂ ಅಥವಾ ರಗಡ್‌ ಅಂಶಗಗಳನ್ನಾಗಲಿ, ಹಾಗೆಯೇ ಯಾವುದೇ ಅಸಂಬದ್ಧ ಸರಳ ವಿನ್ಯಾಸವನ್ನೂ ಹೊಂದಿಲ್ಲ. ಇದನ್ನು ಬಳಸಿರುವುದರಿಂದ, ಇದು ಸರಳವಾಗಿ ಕಾಣುತ್ತದೆ ಮತ್ತು ಅದರ ವಿನ್ಯಾಸದಲ್ಲಿ ಏನೂ ಎದ್ದು ಕಾಣುವುದಿಲ್ಲ. ಆದರೆ ಮೊದಲ ನೋಟದಲ್ಲಿ, ಅದರ ದಪ್ಪ ಮತ್ತು ಬೃಹತ್ ಆಕಾರದ ಕಾರಣ ಇದನ್ನು ಎಸ್‌ಯುವಿ ಎಂದು ನೀವು ಭಾವಿಸಬಹುದು.

Renault Triber Rear

ಆದಾಗ್ಯೂ, ಕಳೆದ 5 ವರ್ಷಗಳಲ್ಲಿ ಇದರ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಆಗದ ಕಾರಣ, ಇದು ಈಗ ಹಳೆಯದಾಗಿ ಕಾಣುತ್ತದೆ ಮತ್ತು ಇತರವುಗಳ ಮುಂದೆ ಎದ್ದು ಕಾಣುವುದಿಲ್ಲ. ಪ್ರಸ್ತುತ ಕಾಲದಲ್ಲಿ ಅದನ್ನು ನಯವಾಗಿ ಮತ್ತು ಸ್ಟೈಲಿಶ್ ಆಗಿ ಕಾಣುವಂತೆ ಮಾಡುವ ಯಾವುದೇ ಅಂಶಗಳಿಲ್ಲ, ಮತ್ತು ಇದು ಉತ್ತಮವಾದ ರೋಡ್‌ ಪ್ರೆಸೆನ್ಸ್‌ ಅನ್ನೂ ಹೊಂದಿಲ್ಲ. ಟ್ರೈಬರ್ ಅನ್ನು ಎದ್ದು ಕಾಣುವಂತೆ ಮಾಡಲು ಆಧುನಿಕ ವಿನ್ಯಾಸದ ಅಂಶಗಳೊಂದಿಗೆ ಪೀಳಿಗೆಯ ಅಪ್‌ಡೇಟ್ ಅಲ್ಲದಿದ್ದರೂ ಫೇಸ್‌ಲಿಫ್ಟ್ ಅಗತ್ಯವಿದೆ.

ಬೂಟ್‌ ಸ್ಪೇಸ್‌

Renault Triber Boot Space

ಎಲ್ಲಾ ಮೂರು ಸಾಲು ಸೀಟುಗಳಲ್ಲಿ ಪ್ರಯಾಣಿಕರಿದ್ದರೆ, ಒಂದು ಅಥವಾ ಎರಡು ಸಣ್ಣ ಬ್ಯಾಗ್‌ಗಳನ್ನು ಇರಿಸಿಕೊಳ್ಳಲು ಸಾಕಾಗುವಷ್ಟು ಸಣ್ಣ ಸ್ಥಳಾವಕಾಶವಿದೆ. ಆದರೆ ಮೂರನೇ ಸಾಲಿನ ಸೀಟ್‌ಗಳನ್ನು ಮಡಚಿದರೆ ಅಥವಾ ಹೊರತೆಗೆದರೆ, ಇದು 680 ಲೀಟರ್ ವರೆಗೆ ಬೂಟ್ ಸ್ಪೇಸ್ ಅನ್ನು ನೀಡುತ್ತದೆ.

Renault Triber Boot Space

ನಿಮಗೆ ಸಂಪೂರ್ಣ ಸೂಟ್‌ಕೇಸ್ ಸೆಟ್ (ಸಣ್ಣದು, ಮಿಡಿಯಮ್‌ ಮತ್ತು ದೊಡ್ಡದು), ಕೆಲವು ಮೃದುವಾದ ಬ್ಯಾಗ್‌ಗಳನ್ನು ಇರಿಸಿಕೊಳ್ಳಲು ಮತ್ತು ಹೆಚ್ಚಿನ ಲಗೇಜ್‌ಗಾಗಿ ಬೇಕಾಗುವ ಸ್ಥಳಾವಕಾಶವನ್ನೂ ಇದು ಹೊಂದಿದೆ.

ಇಂಟಿರೀಯರ್‌

Renault Triber Dashboard

ಟ್ರೈಬರ್‌ನ ಒಳಭಾಗವು ಹೊರಭಾಗದಂತೆಯೇ ಸಿಂಪಲ್‌ ಆಗಿದೆ. ಇದು ಸಂಪೂರ್ಣ ಕಪ್ಪು ಡ್ಯಾಶ್‌ಬೋರ್ಡ್‌ನೊಂದಿಗೆ ಬಿಳಿ ಮತ್ತು ಕಪ್ಪು ಕ್ಯಾಬಿನ್ ಥೀಮ್ ಅನ್ನು ಹೊಂದಿದೆ, ಇದು ಕ್ರೋಮ್ ಸ್ಟ್ರಿಪ್‌ನೊಂದಿಗೆ ಪ್ರೀಮಿಯಂನ ಸ್ವಲ್ಪ ಸ್ಪರ್ಶವನ್ನು ಪಡೆಯುತ್ತದೆ. ಈಗ, ಇದು ನೋಡಲು ಡಲ್‌ ಆಗಿರುವ ಕ್ಯಾಬಿನ್‌ನಂತೆ ಕಾಣಿಸಬಹುದು, ಅದರ ಬೆಲೆಗೆ, ಇದು ತುಂಬಾ ಸ್ವೀಕಾರಾರ್ಹವಾಗಿದೆ.

Renault Triber Climate Control Buttons

ಕ್ಯಾಬಿನ್‌ನ ಫಿಟ್ ಮತ್ತು ಫಿನಿಶ್‌ನಲ್ಲಿ ಯಾವುದೇ ಸಮಸ್ಯೆ ಇಲ್ಲ. ಇಲ್ಲಿ ಬಳಸಿದ ಪ್ಲಾಸ್ಟಿಕ್‌ಗಳು ಸ್ಕ್ರ್ಯಾಚಿ  ಅನುಭವವನ್ನು ನೀಡುವುದಿಲ್ಲ, ಮತ್ತು ಬಟನ್‌ಗಳು ಸಹ ತುಂಬಾ ಉತ್ತಮವಾಗಿದೆ. 

Renault Triber Front Seats

ನೀವು ಕಾರಿನೊಳಗೆ ಕುಳಿತಾಗ, ಮುಂಭಾಗದ ಆಸನಗಳು ಆರಾಮದಾಯಕವಾಗಿದೆ ಎಂದು ನಿಮಗೆ ಅನಿಸುತ್ತದೆ ಮತ್ತು ಅವುಗಳು ನಿಮ್ಮನ್ನು ಸೀಟಿನಲ್ಲಿ ಹಿಡಿದಿಟ್ಟುಕೊಳ್ಳುತ್ತವೆ. ಡ್ರೈವರ್ ಸೀಟ್‌ಗೆ ಮ್ಯಾನ್ಯುವಲ್ ಹೈಟ್ ಅಡ್ಜಸ್ಟ್‌ಮೆಂಟ್ ಕೂಡ ಇದೆ, ಆದರೆ ಇಲ್ಲಿ ಸ್ವಲ್ಪ ಸಮಸ್ಯೆ ಇದೆ. ಸೆಂಟರ್ ಕನ್ಸೋಲ್‌ನಲ್ಲಿರುವ ಫೋನ್ ಟ್ರೇ ಸ್ವಲ್ಪ ಚೂಪಾದ ಅಂಚನ್ನು ಹೊಂದಿದೆ, ನೀವು ಚಾಲನೆ ಮಾಡುವಾಗ ಅದು ನಿಮ್ಮ ಮೊಣಕಾಲಿನ ಹತ್ತಿರ ಇರುತ್ತದೆ. ಆದರೆ ಒಮ್ಮೆ ನೀವು ಇದನ್ನು ಬಳಸಲು ಪ್ರಾರಂಭಿಸಿದ ಮೇಲೆ ಈ ಕಿರಿಕಿರಿಯನ್ನು ತಪ್ಪಿಸುವುದು ಹೇಗೆ ಎಂಬ ಪರಿಹಾರವನ್ನು ಕಂಡುಕೊಳ್ಳುತ್ತೀರಿ, ಆದರೆ ಪ್ರಾರಂಭದಲ್ಲಿ ಇದು ನಿಮಗೆ ಸ್ವಲ್ಪ ನೋವನ್ನು ಉಂಟುಮಾಡುವ ಸಾಧ್ಯತೆ ಇದೆ. 

ಫೀಚರ್‌ಗಳು

Renault Triber Touchscreen

ರೆನಾಲ್ಟ್ ಈ ವರ್ಷದ ಆರಂಭದಲ್ಲಿ ಕೆಲವು ಸೇರ್ಪಡೆಗಳೊಂದಿಗೆ ಟ್ರೈಬರ್‌ಗೆ ಸಾಕಷ್ಟು ಬೇಸಿಕ್‌ ಫೀಚರ್‌ಗಳ ಪಟ್ಟಿಯನ್ನು ನೀಡಿದೆ. ಇದು 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಪಡೆಯುತ್ತದೆ, ಇದು ವಿಳಂಬರಹಿತವಾಗಿದೆ ಮತ್ತು ವಯರ್ಡ್‌ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಅನ್ನು ಬೆಂಬಲಿಸುತ್ತದೆ. ಹಾಗೆಯೇ, ಈ ಟಚ್‌ಸ್ಕ್ರೀನ್‌ನಲ್ಲಿ ಬಳಸಲಾದ ಆಪರೇಟಿಂಗ್ ಸಿಸ್ಟಮ್ ಈಗ ಹಳೆಯದಾಗಿದೆ.

Renault Triber Digital Driver's Display

ಇದು 7-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್‌ಪ್ಲೇಯನ್ನು ಸಹ ಪಡೆಯುತ್ತದೆ, ಇದು ಗರಿಗರಿಯಾದ ಡಿಸ್‌ಪ್ಲೇಯನ್ನು ಹೊಂದಿದೆ ಮತ್ತು ಇದು ಮ್ಯಾನುಯಲ್ ಕ್ಲೈಮೇಟ್ ಕಂಟ್ರೋಲ್, 2 ನೇ ಮತ್ತು 3 ನೇ ಸಾಲುಗಳಿಗೆ ಎಸಿ ವೆಂಟ್‌ಗಳಂತಹ ಬೇಸಿಕ್‌ ಫೀಚರ್‌ಗಳನ್ನು ಪಡೆಯುತ್ತದೆ ಮತ್ತು ಈ ವರ್ಷ ರೆನಾಲ್ಟ್ ಇದಕ್ಕೆ ಏರ್ ಪ್ಯೂರಿಫೈಯರ್ ಮತ್ತು ವಯರ್‌ಲೆಸ್‌ ಫೋನ್ ಚಾರ್ಜರ್ ಅನ್ನು ಕೂಡ ಸೇರಿಸಿದೆ. 

ಈ ವೈಶಿಷ್ಟ್ಯದ ಪಟ್ಟಿ ಚಿಕ್ಕದಾಗಿದೆ ಎಂದು ತೋರುತ್ತದೆಯಾದರೂ, ಇದು ನಿಮ್ಮ ದೈನಂದಿನ ಬಳಕೆಗೆ ಸಾಕು, ಮತ್ತು ಈ ಬೆಲೆಗೆ ಹೆಚ್ಚಿನದನ್ನು ನಿರೀಕ್ಷಿಸಲಾಗುವುದಿಲ್ಲ.

ಪ್ರಾಯೋಗಿಕತೆ ಮತ್ತು ಚಾರ್ಜಿಂಗ್ ಆಯ್ಕೆಗಳು

Renault Triber Door Bottle Holders

ಟ್ರೈಬರ್ ಎಲ್ಲಾ ನಾಲ್ಕು ಬಾಗಿಲುಗಳಲ್ಲಿ 1-ಲೀಟರ್ ಬಾಟಲಿ ಹೋಲ್ಡರ್‌ಗಳು, ಎರಡು ಗ್ಲೋವ್‌ಬಾಕ್ಸ್‌ಗಳು, ಮುಂಭಾಗದಲ್ಲಿ ಕೂಲ್ಡ್ ಸೆಂಟ್ರಲ್ ಸ್ಟೋರೇಜ್, ಸೆಂಟರ್ ಕನ್ಸೋಲ್‌ನಲ್ಲಿ ಎರಡು ಕಪ್‌ಹೋಲ್ಡರ್‌ಗಳು ಮತ್ತು ನಿಮ್ಮ ಫೋನ್ ಅನ್ನು ಮುಂಭಾಗದಲ್ಲಿ ಇರಿಸಲು ಟ್ರೇಯನ್ನು ಹೊಂದಿದೆ. 2ನೇ ಸಾಲಿನಲ್ಲಿ, ನಿಮ್ಮ ಸಣ್ಣ ವಸ್ತುಗಳನ್ನು ಇರಿಸಿಕೊಳ್ಳಲು ನೀವು ಸೀಟ್‌ಬ್ಯಾಕ್ ಪಾಕೆಟ್‌ಗಳನ್ನು ಪಡೆಯುತ್ತೀರಿ ಮತ್ತು 3ನೇ ಸಾಲಿನಲ್ಲಿ, ನಿಮ್ಮ ಫೋನ್ ಮತ್ತು ವ್ಯಾಲೆಟ್ ಅನ್ನು ಇರಿಸಿಕೊಳ್ಳಲು ಆರ್ಮ್‌ರೆಸ್ಟ್‌ನಲ್ಲಿ ಸ್ಲಾಟ್‌ಗಳಿವೆ.

Renault Triber Charging Options

ಚಾರ್ಜಿಂಗ್ ಆಯ್ಕೆಗಳಿಗಾಗಿ, ವೈರ್‌ಲೆಸ್ ಫೋನ್ ಚಾರ್ಜರ್‌ನ ಹೊರತಾಗಿ, ಮುಂಭಾಗದಲ್ಲಿ USP ಟೈಪ್ A ಪೋರ್ಟ್ ಅನ್ನು ನೀಡಲಾಗಿದೆ ಮತ್ತು ಪ್ರತಿ ಸಾಲಿನ ಹಿಂಭಾಗದಲ್ಲಿ ಒಂದು 12V ಸಾಕೆಟ್ ಅನ್ನು ಪಡೆಯುತ್ತದೆ.

2ನೇ ಸಾಲಿನ ಅನುಭವ

Renault Triber 2nd Row Seats

ಈ ಕಾರಿನಲ್ಲಿ 6-7 ಜನರಿಗೆ ಸೀಟ್‌ನ ಅವಕಾಶ ಕಲ್ಪಿಸಲಾಗಿದೆ ಮತ್ತು ಇದರಲ್ಲಿ 6-7 ಜನರಿಗೆ ಸುಲಭವಾಗಿ ಕುಳಿತು ಪ್ರಯಾಣಿಸಬಹುದು. 2ನೇ ಸಾಲಿನ ಸೀಟ್‌ಗಳು ಆರಾಮದಾಯಕ ಮತ್ತು ವಿಶಾಲವಾಗಿವೆ, ಸಾಕಷ್ಟು ಪ್ರಮಾಣದ ಹೆಡ್‌ರೂಮ್ ಇದೆ ಮತ್ತು ಮೊಣಕಾಲು ಇಡುವಲ್ಲಿಯೂ ಉತ್ತಮವಾಗಿದೆ. ಹೆಚ್ಚು ಲೆಗ್‌ರೂಮ್‌ಗಾಗಿ ಈ ಸೀಟ್‌ಗಳನ್ನು ಸ್ಲೈಡ್ ಮಾಡಬಹುದು ಮತ್ತು ಹೆಚ್ಚಿನ ಸೌಕರ್ಯಕ್ಕಾಗಿ ಅವುಗಳನ್ನು ಹಿಂದಕ್ಕೆ ಬೆಂಡ್‌ ಆಗುತ್ತವೆ. ಆದರೆ, ಸೀಟ್‌ನ ಕುಶನ್‌ ಇನ್ನೂ ಮೃದುವಾಗಿರಬಹುದಿತ್ತು, ತೊಡೆಯ ಕೆಳಭಾಗದ ಬೆಂಬಲವು ಉತ್ತಮವಾಗಿಸಬಹುದಿತ್ತು ಮತ್ತು ರೆನಾಲ್ಟ್ ಸೆಂಟ್ರಲ್‌ ಆರ್ಮ್‌ರೆಸ್ಟ್ ಅನ್ನು ನೀಡುವುದಿಲ್ಲ, ಅದು ಇಲ್ಲಿ ಮಿಸ್‌ ಆಗಿದೆ. ಆದರೆ, ಇದನ್ನು ಹೊರತುಪಡಿಸಿ, ಈ ಜಾಗದಲ್ಲಿ ಯಾವುದೇ ರಾಜಿ ಇಲ್ಲ.

Renault Triber 2nd Row Seats

3 ಜನರು ಇಲ್ಲಿ ಸುಲಭವಾಗಿ ಕುಳಿತುಕೊಳ್ಳಬಹುದು, ಆದರೆ ಅವರ ಭುಜಗಳು ಪರಸ್ಪರ ಉಜ್ಜುವ ಅನುಭವವಾಗಬಹುದು. ಮತ್ತು ಸೌಕರ್ಯವು ಹಾಗೇ ಉಳಿಯುತ್ತದೆ. ಅಲ್ಲದೆ, 2 ನೇ ಸಾಲಿನ ಪ್ರಯಾಣಿಕರು ಬಿ-ಪಿಲ್ಲರ್‌ಗಳಲ್ಲಿ ಎಸಿ ವೆಂಟ್‌ಗಳನ್ನು ಪಡೆಯುತ್ತಾರೆ ಮತ್ತು ಅವರು ಅಲ್ಲಿಯೇ ಫ್ಯಾನ್ ವೇಗವನ್ನು ಸಹ ನಿಯಂತ್ರಿಸಬಹುದು.

3ನೇ ಸಾಲಿನ ಅನುಭವ

Renault Triber 3rd Row Seats

ಕೊನೆಯ ಸಾಲಿನಲ್ಲಿ, ಉತ್ತಮವಾದ ಹೆಡ್ ರೂಂ ಇದೆ, ಮತ್ತು ವಯಸ್ಕರು ಸ್ವಲ್ಪ ದೂರದವರೆಗೆ ಮಾತ್ರ ಇಲ್ಲಿ ಕುಳಿತುಕೊಳ್ಳಬಹುದು. ಆದರೆ, 2ನೇ ಸಾಲಿನಲ್ಲಿ ವಿಶೇಷವಾಗಿ ಎತ್ತರದ ವ್ಯಕ್ತಿ ಕುಳಿತುಕೊಂಡರೆ, ಲೆಗ್‌ರೂಮ್‌ನಲ್ಲಿ ರಾಜಿ ಮಾಡಿಕೊಳ್ಳಬೇಕಾಗುತ್ತದೆ, ವಿಶೇಷವಾಗಿ ಎಡ ಪ್ರಯಾಣಿಕರಿಗೆ. ಈ ಸಾಲಿನಲ್ಲಿ ಮಕ್ಕಳು ಕುಳಿತು ಪ್ರಯಾಣಿಸಿದರೆ ಅದು ಉತ್ತಮವಾಗಿರುತ್ತದೆ.

ಸುರಕ್ಷತಾ ಫೀಚರ್‌ಗಳು

ಟ್ರೈಬರ್‌ನ ಸುರಕ್ಷತಾ ವೈಶಿಷ್ಟ್ಯಗಳು ಸಹ ಸಾಕಷ್ಟು ಬೇಸಿಕ್‌ ಆಗಿದೆ. ಇದು 4 ಏರ್‌ಬ್ಯಾಗ್‌ಗಳನ್ನು(ಲೋವರ್‌ ವೇರಿಯೆಂಟ್‌ಗಳಲ್ಲಿ 2), ಇಬಿಡಿ ಜೊತೆಗೆ ಎಬಿಎಸ್‌, ಎಲೆಕ್ಟ್ರಾನಿಕ್ ಸ್ಟೇಬಿಲಿಟಿ ಕಂಟ್ರೋಲ್‌ (ESC), ಟೈರ್ ಪ್ರೆಶರ್‌ ವಾರ್ನಿಂಗ್‌ ಸಿಸ್ಟಮ್‌ ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟ್ ಅನ್ನು ನೀಡುತ್ತದೆ.

Renault Triber Seatbelt

ಇದು ಉತ್ತಮ ಕ್ಯಾಮೆರಾ ಗುಣಮಟ್ಟದೊಂದಿಗೆ ರಿಯರ್‌ವ್ಯೂ ಕ್ಯಾಮೆರಾವನ್ನು ಸಹ ಪಡೆಯುತ್ತದೆ, ಆದರೆ ಅದರ ಕಾರ್ಯಗತಗೊಳಿಸುವಿಕೆಯು ಉತ್ತಮವಾಗಿರಬಹುದಿತ್ತು. ಕಡಿಮೆ ಬ್ರೈಟ್‌ನೆಸ್‌ ಮತ್ತು ಮ್ಯಾಟ್ ಫಿನಿಶ್ಡ್‌ನ ಕಾರಣ, ಕ್ಯಾಮೆರಾದ ಫೀಡ್ ಅನ್ನು ನೋಡಲು ಕಷ್ಟವಾಗುತ್ತದೆ, ವಿಶೇಷವಾಗಿ ಹೆಚ್ಚಿನ ಬೆಳಕಿನಲ್ಲಿ.

ಇದರ ಸುರಕ್ಷತಾ ವೈಶಿಷ್ಟ್ಯಗಳ ಪಟ್ಟಿಯು ಅಷ್ಟು ವಿಸ್ತಾರವಾಗಿಲ್ಲ, ಆದರೆ 2021 ರಲ್ಲ, ಟ್ರೈಬರ್ 4-ಸ್ಟಾರ್ ಕ್ರ್ಯಾಶ್ ಟೆಸ್ಟ್ ಸುರಕ್ಷತಾ ರೇಟಿಂಗ್ ಅನ್ನು ಗಳಿಸಿತು, ಇದು ಬಹಳ ಪ್ರಭಾವಶಾಲಿಯಾಗಿದೆ. 

ಪರ್ಫಾರ್ಮೆನ್ಸ್‌

Renault Triber Engine

ಎಂಜಿನ್‌

1-ಲೀಟರ್‌ ಪೆಟ್ರೋಲ್‌

ಪವರ್‌

72 ಪಿಎಸ್‌

ಟಾರ್ಕ್‌

96 ಎನ್‌ಎಮ್‌

ಗೇರ್‌ಬಾಕ್ಸ್‌

5-ಸ್ಪೀಡ್‌ ಮ್ಯಾನುಯಲ್‌, 5-ಸ್ಪೀಡ್‌ ಎಎಮ್‌ಟಿ

ಈ ಎಮ್‌ಪಿವಿಯು 1-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ ಅದು 72 ಪಿಎಸ್‌ ಮತ್ತು 96 ಎನ್‌ಎಮ್‌ನಷ್ಟು ಔಟ್‌ಪುಟ್‌ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಎಎಮ್‌ಟಿ ಎಂಬ ಎರಡು ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ಪಡೆಯುತ್ತದೆ ಮತ್ತು ನಾವು ಮ್ಯಾನ್ಯುವಲ್ ಆವೃತ್ತಿಯನ್ನು ಓಡಿಸಿದ್ದೇವೆ.

ಈಗ, ನಗರದೊಳಗೆ ಚಾಲನೆ ಮಾಡುವಾಗ, ಪ್ರಯಾಣಿಸುವಾಗ ಅಥವಾ ಓವರ್‌ಟೇಕ್‌ಗಳನ್ನು ಮಾಡುವಾಗ, ನಿವು ಯಾವುದೇ ಸಮಸ್ಯೆ ಅಥವಾ ಶಕ್ತಿಯ ಕೊರತೆಯನ್ನು ಅನುಭವಿಸುವುದಿಲ್ಲ. ನಗರ ಡ್ರೈವ್‌ಗೆ ಸಹ ಶಕ್ತಿಯು ಸಾಕಾಗುತ್ತದೆ ಮತ್ತು ಬಂಪರ್ ಟು ಬಂಪರ್ ಟ್ರಾಫಿಕ್‌ನಲ್ಲಿಯೂ ಸಹ, ನೀವು ಆರಾಮವಾಗಿರುವ ಡ್ರೈವ್ ಅನುಭವವನ್ನು ಪಡೆಯುತ್ತೀರಿ ಮತ್ತು ಲೈಟ್ ಕ್ಲಚ್‌ನಿಂದಾಗಿ, ನಿಮ್ಮ ಎಡಗಾಲಿನಲ್ಲಿ ಯಾವುದೇ ನೋವನ್ನು ಅನುಭವಿಸುವುದಿಲ್ಲ.

Renault Triber

ಆದರೆ ಹೆದ್ದಾರಿಯಲ್ಲಿದ್ದಾಗ ನೀವು ಶಕ್ತಿಯ ಕೊರತೆಯನ್ನು ಅನುಭವಿಸುತ್ತೀರಿ. ಪ್ರಯಾಣಿಸುವಾಗ, ನೀವು ಮೃದುವಾದ ಡ್ರೈವ್ ಅನುಭವವನ್ನು ಪಡೆಯುತ್ತೀರಿ ಮತ್ತು ಶಕ್ತಿಯು ಸಾಕಷ್ಟಿದೆ ಎಂದನಿಸುತ್ತದೆ, ಆದರೆ ನೀವು ಓವರ್‌ಟೇಕ್‌ ಮಾಡಲು ಅಥವಾ ಹೆಚ್ಚಿನ ವೇಗದಲ್ಲಿ ಸಾಗಲು ಪ್ರಯತ್ನಿಸಿದ ತಕ್ಷಣ, ಈ ಎಂಜಿನ್ ಅನ್ನು ಇದಕ್ಕಾಗಿ ತಯಾರಿಸಲಾಗಿಲ್ಲ ಎಂದು ನೀವು ಅರ್ಥಮಾಡಿಕೊಳ್ಳುತ್ತೀರಿ.

ವೇಗವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವಾಗ, ನೀವು ಎಂಜಿನ್ ಅನ್ನು ತಳ್ಳುತ್ತಿರುವಂತೆ ಭಾಸವಾಗುತ್ತದೆ ಮತ್ತು ಓವರ್‌ಟೇಕ್‌ಗಳು ಸಮಯವನ್ನು ತೆಗೆದುಕೊಳ್ಳುತ್ತದೆ ಮತ್ತು ಮೊದಲೇ ಯೋಜಿಸಬೇಕಾಗುತ್ತದೆ. ಈ ಎಂಜಿನ್ ಅನ್ನು ಮೃದುವಾದ ಮತ್ತು ಶಾಂತವಾದ ಡ್ರೈವ್‌ಗಾಗಿ ಮಾಡಲಾಗಿದೆ ಮತ್ತು ನೀವು ತ್ವರಿತ ಓವರ್‌ಟೇಕ್‌ಗಳು ಮತ್ತು ಅತ್ಯಾಕರ್ಷಕ ಪರ್ಫಾರ್ಮೆನ್ಸ್‌ ಅನ್ನು ನಿರೀಕ್ಷಿಸುವಾಗಿಲ್ಲ. 

ಕೊನೆಯದಾಗಿ, NVH (ನಾಯ್ಸ್‌, ವೈಬ್ರೇಶನ್‌ ಮತ್ತು ಹಾರ್ಶ್‌ನೆಸ್‌) ಮಟ್ಟಗಳು ಸಹ ಸ್ವಲ್ಪ ಹೆಚ್ಚಾಗಿರುತ್ತದೆ. ಕ್ಯಾಬಿನ್ ಒಳಗೆ ಎಂಜಿನ್ ಶಬ್ದವನ್ನು ನೀವು ಕೇಳುತ್ತೀರಿ, ವಿಶೇಷವಾಗಿ ನೀವು ಇದರ ವೇಗವನ್ನು ಹೆಚ್ಚಿಸುವಾಗ ಮತ್ತು ಫುಟ್‌ವೆಲ್‌ನಲ್ಲಿಯೂ ಗಮನಾರ್ಹವಾದ ವೈಬ್ರೇಶನ್‌ಗಳಿವೆ. ರೆನಾಲ್ಟ್ ಇದರ ಕ್ಯಾಬಿನ್‌ಗೆ ಉತ್ತಮ ನಿರೋಧನವನ್ನು ಬಳಸಬಹುದಿತ್ತು.

ರೈಡ್‌ನ ಕಂಫರ್ಟ್‌

Renault Triber

ಟ್ರೈಬರ್‌ನ ಸವಾರಿ ಗುಣಮಟ್ಟವು ಸ್ವಲ್ಪ ಮಟ್ಟಿಗೆ ಆರಾಮದಾಯಕವಾಗಿದೆ. ನಗರದಲ್ಲಿ ಪ್ರಯಾಣಿಸುವಾಗ, ಕಳಪೆ ರಸ್ತೆಗಳ ಮೇಲೆ ಚಾಲನೆ ಮಾಡುವಾಗ, ಸಸ್ಪೆನ್ಸನ್‌ ಅವುಗಳನ್ನು ಹೀರಿಕೊಳ್ಳಲು ಉತ್ತಮ ಕೆಲಸವನ್ನು ಮಾಡುತ್ತದೆ ಮತ್ತು ಕ್ಯಾಬಿನ್‌ನಲ್ಲಿ ಹೆಚ್ಚಿನ ಜರ್ಕ್‌ಗಳ ಅನುಭವವಾಗುವುದಿಲ್ಲ.

ಆದರೆ ಅದೇ ಕಳಪೆ ರಸ್ತೆಗಳಲ್ಲಿ, ಕ್ಯಾಬಿನ್‌ನೊಳಗಿನ ಚಲನೆಯನ್ನು ನೀವು ಇನ್ನೂ ಅನುಭವಿಸುವಿರಿ. ಆದರೆ ಇದು ನಿಮಗೆ ಯಾವುದೇ ದೊಡ್ಡ ರೀತಿಯ ಸಮಸ್ಯೆಯನ್ನು ಉಂಟುಮಾಡುವುದಿಲ್ಲ, ಆದರೆ ನೀವು ಅವುಗಳನ್ನು ಗಮನಿಸಲು ಮತ್ತು ಭವಿಷ್ಯದಲ್ಲಿ ನಾನು ಈ ಕಿರಿಕಿರಿಯನ್ನು ತಪ್ಪಿಸುವುದು ಉತ್ತಮ ಎಂದು ಯೋಚಿಸಲು ಸಹಕಾರಿಯಾಗಿದೆ.

Renault Triber

ಅಲ್ಲದೆ, ತೀಕ್ಷ್ಣವಾದ ಸ್ಪೀಡ್ ಬ್ರೇಕರ್‌ಗಳು ಅಥವಾ ಆಳವಾದ ಗುಂಡಿಗಳ ಮೇಲೆ ಹೋಗುವಾಗ, ನೀವು ನಿಧಾನಗೊಳಿಸದಿದ್ದರೆ ನೀವು ದೊಡ್ಡದಾದ ಶಬ್ಧವನ್ನು ಅನ್ನು ಕೇಳುತ್ತೀರಿ. ಈ ಪ್ಯಾಚ್‌ಗಳಲ್ಲಿ ನಿಧಾನವಾಗಿ ಚಾಲನೆ ಮಾಡುವುದು ಉತ್ತಮ, ಇಲ್ಲದಿದ್ದರೆ ನೀವು ಆ ಶಬ್ದವನ್ನು ಕೇಳುತ್ತೀರಿ ಮತ್ತು ಹಠಾತ್ ಜರ್ಕ್‌ಅನ್ನು ಅನುಭವಿಸುತ್ತೀರಿ.

ಕೊನೆಯದಾಗಿ, ಹೆದ್ದಾರಿಯಲ್ಲಿ, ಸವಾರಿ ಸುಗಮ ಮತ್ತು ಆರಾಮದಾಯಕವಾಗಿದೆ, ಆದರೆ ಹಠಾತ್ ಲೇನ್ ಬದಲಾವಣೆಗಳನ್ನು ಮಾಡುವಾಗ ಗಮನಾರ್ಹವಾದ ಬಾಡಿ ರೋಲ್ ಇರುತ್ತದೆ.

ಅಂತಿಮ ಮಾತು

Renault Triber

ರೆನಾಲ್ಟ್ ಟ್ರೈಬರ್ ಏಳು ಪ್ರಯಾಣಿಕರಿಗೆ ಉತ್ತಮ ಸ್ಥಳಾವಕಾಶವನ್ನು ಹೊಂದಿರುವ ದೊಡ್ಡ ಕಾರಾಗಿದೆ, ನಿಮ್ಮ ಲಾಂಗ್‌ ಟ್ರಿಪ್‌ಗಳಿಗೆ ಸಾಕಾಗುವಷ್ಟು ಬೂಟ್‌ ಸ್ಪೇಸ್‌ ಅನ್ನು ಹೊಂದಿದ್ದು, ಕ್ಯಾಬಿನ್ ಫಿಟ್ ಮತ್ತು ಫಿನಿಶ್ ಉತ್ತಮವಾಗಿದೆ, ಇದು ಗ್ಲೋಬಲ್ ಎನ್‌ಸಿಎಪಿಯಿಂದ 4-ಸ್ಟಾರ್ ಕ್ರ್ಯಾಶ್ ಟೆಸ್ಟ್ ಸುರಕ್ಷತಾ ರೇಟಿಂಗ್ ಅನ್ನು ಹೊಂದಿದೆ, ಮತ್ತು ಇದು ಆರಾಮದಾಯಕ ಸವಾರಿಯನ್ನು ನೀಡುತ್ತದೆ. ಟ್ರೈಬರ್ ಅದನ್ನು ತಯಾರಿಸಿದ ಉದ್ದೇಶವನ್ನು ಪೂರೈಸುತ್ತದೆ ಮತ್ತು ಅದರ ಬೆಲೆ ರೇಂಜ್‌ನಲ್ಲಿ ನೀವು ಕೇಳಬಹುದಾದ ಎಲ್ಲವನ್ನೂ ನೀಡುತ್ತದೆ.

Renault Triber Rear

ಆದರೆ, ಅದರ ವಿನ್ಯಾಸವು ಹಳೆಯದಾಗಿದೆ, ಕ್ಯಾಬಿನ್ ಹಳೆಯದಾಗಿ ಕಾಣುತ್ತದೆ ಮತ್ತು ಹೆದ್ದಾರಿಗಳಲ್ಲಿ ಅದರ ಕಾರ್ಯಕ್ಷಮತೆ ಅಷ್ಟು ಉತ್ತಮವಾಗಿಲ್ಲ. ಹಾಗೆಯೇ ಈ ಎಮ್‌ಪಿವಿಯನ್ನು ಇನ್ನಷ್ಟು ಆಧುನಿಕವಾಗಿಸಲು ಸರಿಯಾದ ಫೇಸ್‌ಲಿಫ್ಟ್ ಅಗತ್ಯವಿದೆ ಮತ್ತು ಹೆದ್ದಾರಿಯ ಪ್ರಯಾಣವನ್ನು ಉತ್ತಮಗೊಳಿಸಲು ಟರ್ಬೊ-ಪೆಟ್ರೋಲ್ ಎಂಜಿನ್ ಅಗತ್ಯವಿದೆ.

ನೀವು 10 ಲಕ್ಷ ರೂಪಾಯಿಗಳ ಬಜೆಟ್ ಹೊಂದಿದ್ದರೆ (ಎಕ್ಸ್ ಶೋರೂಂ), ಮತ್ತು ನಿಮ್ಮ ದೊಡ್ಡ ಕುಟುಂಬಕ್ಕೆ ಬೇಕಾಗುವ ದೊಡ್ಡ ಕಾರನ್ನು ನೀವು ಬಯಸಿದರೆ, ಟ್ರೈಬರ್ ಉತ್ತಮ ಆಯ್ಕೆಯಾಗಿದೆ. ಆದರೆ ನೀವು ಇಲ್ಲಿ ವಿನ್ಯಾಸದಲ್ಲಿ ರಾಜಿ ಮಾಡಿಕೊಳ್ಳಲು ಸಿದ್ಧರಿರಬೇಕು.

ಇತ್ತೀಚಿನ ಎಮ್‌ಯುವಿ ಕಾರುಗಳು

ಮುಂಬರುವ ಕಾರುಗಳು

ಇತ್ತೀಚಿನ ಎಮ್‌ಯುವಿ ಕಾರುಗಳು

×
We need your ನಗರ to customize your experience