ಮೊದಲ ಡ್ರೈವ್: ಹುಂಡೈ ಕ್ರೆಟಾ ಪೆಟ್ರೋಲ್ ಆಟೋಮ್ಯಾಟಿಕ್
Published On ಜುಲೈ 02, 2019 By aman for ಹುಂಡೈ ಕ್ರೆಟಾ 2015-2020
- 1 View
- Write a comment
ಹುಂಡೈ ಕ್ರೆಟಾ ಬಗ್ಗೆ ಬಹಳಷ್ಟು ಹೇಳಲಾಗದೆ ಮತ್ತು ಬರೆಯಲಾಗಿದೆ ಕೂಡ, ಮತ್ತು ಅದರ ಏರುತ್ತಿರುವ ಮಾರಾಟವಾದ ಯೂನಿಟ್ ಗಳ ಸಂಖ್ಯೆ ಅದರ ಹೆಚ್ಚುತ್ತಿರುವುವ ಪ್ರಖ್ಯಾತಿಯನ್ನು ತೋರಿಸುತ್ತದೆ ಭಾರತದ SUV ಮಾರ್ಕೆಟ್ ನಲ್ಲಿ. ನನಗೆ, ಕ್ರೆಟಾ ಯಾವಾಗಲು ಒಂದು ಸುರಕ್ಸಿತ ಕಾಂಪ್ಯಾಕ್ಟ್ SUV ಆಯ್ಕೆ ಆಗಿದೆ, ಸುರಕ್ಷಿತ ಯಾಕೆ? ಏಕೆಂದರೆ ಇದು ಒಂದು MNC ಯಲ್ಲಿ ಒಂದು ಘನೆತೆಯುಕ್ತ ಸ್ಥಾನದಲ್ಲಿ ಕೆಲಸಮಾಡುತ್ತಿರುವವರಿಗೆ ತಕ್ಕಂತೆ ಇದೆ. ಅವರಿಗೆ ಚೆನ್ನಾಗಿ ಸಂಭಾವನೆ ಕೊಡಲಾಗುತ್ತದೆ, ಚೆನ್ನಾಗಿ ಡ್ರೆಸ್ ಮಾಡಿಕೊಳ್ಳುತ್ತಾರೆ, ಮತ್ತು ಅವರು ಕಂಪನಿ ಯಲ್ಲಿ ಒಬ್ಬ ಉತ್ತಮ ವ್ಯಕ್ತಿ ಎಂದೆನಿಸಿಕೊಡಿರುತ್ತಾರೆ. ಆದರೆ ಅವರು ಅತಿ ಎಂದೆನಿಸುವಂತೆ ಡ್ರೆಸ್ ಮಾಡಿಕೊಳ್ಳುವುದಿಲ್ಲ, ಕೇವಲ ಬಾಸ್ ಗಳಿಗೆ ಮೆಚ್ಚುವಂತೆ ಮಾಡಿ ಸಾಯಂಕಾಲದ ಪಾರ್ಟಿ ಗೆ ಹೋಗಲು. ಕ್ರೆಟಾ ಒಂದು ತರಹದಲ್ಲಿ ಸುರಕ್ಷತ ಎಂಬ ಟ್ಯಾಗ್ ಅನ್ನು ಪಡೆಯುತ್ತದೆ. ಇದನ್ನು ಚೆನ್ನಾಗಿ ಸಿoಗರಿಸಲಾಗಿದೆ, ಇದು ಹುಂಡೈ ನ ಫ್ಲ್ಯೂಇದಿಕ್ ಡಿಸೈನ್ ತತ್ವವನ್ನು ಬೆಂಬಲಿಸಿತ್ತದೆ, ಮತ್ತು ಇದರ ಆಂತರಿಕಗಳಲ್ಲಿ ಬಹಳಷ್ಟು ಉತ್ತಮ ಸಲಕರಣೆಗಳನ್ನು ಕೊಡಲಾಗಿದೆ. ಇದು ಎಲ್ಲ ತರಹದಲ್ಲೂ ನೋಡಲು ಚೆನ್ನಾಗಿದೆ, ಹಾಗಾಇ ಇದು ಭಾರತದ SUV ಗ್ರಾಹಕರ ಮನಸ್ಸನ್ನು ಗೆದ್ದಿದೆ.
ಕ್ರೆಟಾ ಪ್ರತಿಸ್ಪರ್ದಿಗಳಿಂದ ಎತ್ತರಕ್ಕೆ ನಿಲ್ಲುವುದಲ್ಲದೆ , ಅದರ ಮೋದಿ ಮಾಡುವ ಶೈಲಿಯೊಂದಿಗೆ, ಅದು ಈ ವಿಭಾಗದಲ್ಲಿ ಮುಂಚೂಣಿಯಲ್ಲಿದೆ , ಪೂರ್ಣ ಆಟೋಮ್ಯಾಟಿಕ್ ಪೆಟ್ರೋಲ್ ವೇರಿಯೆಂಟ್ ಹೊರತರುವುದರೊಂದಿಗೆ. ಇದನ್ನು ಹೊರತರುವ ಸೂಚನೆಗಳೂ ಇದ್ದಾಗಿಯೂ ಸಹ , 1.6-ಲೀಟರ್ ಎಂಜಿನ್ ಬಿಡುಗಡೆ ನಂತರ ಸುತೋ ಬಾಕ್ಸ್ ನೊಂದಿಗೆ , ಇದು ಒಂದು ಉತ್ತಮ ಬೆಳವಣಿಗೆ ಆಗಿದೆ ಎಂದು ಹೇಳಬಹುದು. ಈ ಹೊಸ ಆಟೋಮ್ಯಾಟಿಕ್ ಅಥವಾ ನಾವು ಕ್ಲಚ್ ಇಲ್ಲದಿರುವುದು ಎಂದು ಹೇಳಬಹುದು, ಇದರ ಬೇಡಿಕೆ ( ಮಾರ್ಕೆಟ್ ನಲ್ಲಿರುವ AMT ಗಳನ್ನೂ ಪರಿಗಣಿಸಿ) ಸಮಯಾಂತರದಲ್ಲಿ ನಮ್ಮ ಪ್ರದೇಶಗಳಲ್ಲಿ ಹೆಚ್ಚುತ್ತಿದೆ, ಹುಂಡೈ ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದೆ.
ಹಾಗಾಗಿ, ನಾವು ಈ ಹೊಸ ಕ್ರೆಟಾ ವನ್ನು ಒಂದು ದಿನದ ಡ್ರೈವ್ ಗೆ ತೆಗೆದುಕೊಂಡು ಹೋದೆವು , ನಿಮಗೆ ಇದು ಒಂದು ಮೌಲ್ಯ ಯುಕ್ತ ಆಯ್ಕೆ ಆಗಬಹುದೇ ಎಂದು ತಿಳಿಯಲು.
ಬಾಹ್ಯ ವಿನ್ಯಾಸ
ಹುಂಡೈ ನವರು ಕ್ರೆಟಾ ದ ಬಾಹ್ಯದಲ್ಲಿ ಯಾವುದೇ ಬದಲಾವಣೆ ತಂದಿಲ್ಲ, ಮತ್ತು ಏಕೆ ತರಬೇಕು? ಅದನ್ನು ನೋಡಿ, ಅದು ಎಲ್ಲ ತರಹದಲ್ಲೂ ಚೆನ್ನಾಗಿದೆ. ಮಾರ್ಕೆಟ್ ನಲ್ಲಿ ಬಿಡುಗಡೆಯಾದಾಗಿನಿಂದ ಬಹಳಷ್ಟು ಸಮಯ ಕಳೆದಿದ್ದರು ಸಹ, ಕ್ರೆಟಾ ಯಾವುದೇ ತರಹದ ಹಿನ್ನಡತೆ ಹೊಂದಿಲ್ಲ. ನಾವು ಹಿಂದೆ ಹೇಳಿದಂತೆ, ಇದನ್ನು ಉತ್ತಮವಾಗಿ ಸಿಂಗರಿಸಲಾಗಿದೆ!
ಸ್ವಲ್ಪ ಮಟ್ಟಿಗೆ ಓರೆಯಾಗಿ ಮಾಡಲಾದ ಮೂರು ಕ್ರೋಮ್ ಸ್ಲಾಟ್ ಗಳು ಮುಂಬದಿಯ ಗ್ರಿಲ್ ಗಳೊಂದಿಗೆ ಸಂಯೋಜನೆ ಮಾಡಲಾಗಿದೆ ಮತ್ತು ಸ್ವೀಪ್ಟ್ ಬ್ಯಾಕ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳು ಅದರ ಫ್ಲ್ಯೂಇಡಿಕ್ ಶೈಲಿಯನ್ನು ಸಮರ್ಥಿಸುತ್ತದೆ. ಕ್ರೆಟಾ ಡಿಸೈನ್ ನ ಮುಖ್ಯ ವಿಚಾರವೆಂದರೆ ಅದರಲ್ಲಿ ಮಿಕ್ಸ್ ವಕ್ರಗಳು ಮತ್ತು ತೀಕ್ಷ್ಣವಾದ ನೇರ ಗೆರೆಗಳು ಪರಿಪೂರ್ಣವಾಗಿದ್ದು ಒಂದು ಉತ್ತಮ SUV ನಿಲುಮೆ ಕೊಡುತ್ತದೆ ಮತ್ತು ಹೆಚ್ಚಾಗಿರುವ ವಿಷಯಗಳನ್ನು ತೆಗೆಯಲಾಗಿದ್ದು ನೋಡಲು ಇನ್ನಷ್ಟು ಚೆನ್ನಾಗಿರುವಂತೆ ಮಾಡಲಾಗಿದೆ. ಲಂಬಾಕಾರದಲ್ಲಿರುವ ಫಾಗ್ ಲ್ಯಾಂಪ್ ಗಳು ಇದನ್ನು ನಯವಾದ ಕಾಂಪ್ಯಾಕ್ಟ್ SUV ಯಾಗಿ ಕಾಣುವಂತೆ ಮಾಡುತ್ತದೆ.
ಹಿಂಬದಿಗೆ ಸರಿಯಿರಿ ಟೈಲ್ ಲೈಟ್ ಗಳು ಅಕ್ರ್ಷಕವಾಗಿ ಕಾಣುತ್ತವೆ ಆದರೆ ನನಗನಿಸುವಂತೆ ಅವು SUV ಟ್ಯಾಗ್ ಗೆ ಸರಿಹೊಂದುವುದಿಲ್ಲ. ನಾನಕ್ ಸ್ವಲ್ಪ ಮಟ್ಟಿಗೆ ನಿರ್ದಿಷ್ಟವಾಗಿ ಇರುವುದಕ್ಕೆ ಕ್ಷಮಿಸಿ, ಮತ್ತು ಇತರರಿಗೆ ಇದು ಬೇರೆಯ ತರಹ ಅನಿಸಬಹುದು ಕೂಡ. ಒಟ್ಟಾರೆ ಸೆಟ್ ಅಪ್ ಇದರ SUV ನೋಟವನ್ನು ಕಡಿತಗೊಳಿಸುತ್ತದೆ ಮತ್ತು ಹೆಚ್ಚಾಗಿ ಸೆಡಾನ್ ತರಹ ಹಿಂಬದಿ ಹೊಂದಿದಂತೆ ಕಾಣಿಸತೊಡಗಿದೆ. ನನ್ನ ಮಟ್ಟಿಗೆ ಅದು ಒಂದು ಹಿನ್ನಡತೆ.
ಆದರೆ ಆ ವಿಚಾರವನ್ನು ಬದಿಗೆ ಇರಿಸಿದರೆ, ಮತ್ತು ಆಟೋಮ್ಯಾಟಿಕ್ ವೇರಿಯೆಂಟ್ SX+ ವಿಭಾಗಕ್ಕೆ ಸೇರುತ್ತದೆ ಮತ್ತು ಡೇ ಟೈಮ್ ರನ್ನಿಂಗ್ ಲೈಟ್ ಗಳನ್ನೂ ಹೆಡ್ ಲ್ಯಾಂಪ್ ನಲ್ಲಿ , ಸ್ಪೋರ್ಟಿ ಯಾಗಿರುವ 17’’ ಡೈಮಂಡ್ ಕಟ್ ಅಲಾಯ್ ವೀಲ್, ಇಂಟಿಗ್ರೇಟೆಡ್ ರೇವೂರ್ ಸ್ಪೋಇಲೆರ್, ಕ್ರೋಮ್ ಡೋರ್ ಹ್ಯಾಂಡಲ್ ಗಳು, ಮತ್ತು ಶಾರ್ಕ್ ಫ಼ಿನ್ ಆಂಟೆನಾ ಗಳನ್ನೂ ಸಹ ಕೊಡಲಾಗಿದೆ.
ಆಂತರಿಕಗಳು
ಅದರ ತತ್ವಕ್ಕೆ ಅನುಗುಣವಾಗಿ -----" ಸರಿಯಾಗಿರುವುದನ್ನು ಬದಲಿಸುವುದು ಏಕೆ?" ಹುಂಡೈ ನವರು ಆಂತರಿಕಗಳಲ್ಲಿ ಹೆಚ್ಚಾಗಿ ಬದಲಾವಣೆ ತಂದಿಲ್ಲ, ಆಟೋಮ್ಯಾಟಿಕ್ ಗೇರ್ ಯೂನಿಟ್ ಅನ್ನು ಹೊಂದಿಸುವುದರ ಹೊರತಾಗಿ, ಮತ್ತು ಸೆಂಟರ್ ಕನ್ಸೋಲ್ ನಲ್ಲಿ ಸರಿಯಾಗಿ ಕೊಡಿಸುವುದರ ಹೊರತಾಗಿ. ಡ್ಯಾಶ್ ಬೋರ್ಡ್ ನ ಲೇಔಟ್ ಬಹಳಷ್ಟು ಆಧುನಿಕವಾಗಿದೆ ಮತ್ತು ಚೊಕ್ಕದಾಗಿ ಮಾಡಲಾಗಿದೆ. ಬೀಜ್ ಹೊರಪದರಗಳನ್ನು ಒಳಗೊಂಡ ಮತ್ತು ಮೃದುವಾದ ಪ್ಲಾಸ್ಟಿಕ್ ಹೊರಮೈ ಡ್ಯಾಶ್ ಬೊರ್ಡ್ ಗೆ ಕೊಡಲಾಗಿದೆ, ಅದು ಮುಂಬದಿಯ ಡೋರ್ ನ ಗ್ರಬ್ ಹ್ಯಾಂಡಲ್ ವರೆಗೂ ವಿಸ್ತರಿಸುತ್ತದೆ ಮತ್ತು ಪೂರ್ಣ ಕಪ್ಪು ಕ್ಯಾಬಿನ್ ಗೆ ಒಂದು ವಿಶೇಷತೆ ಕೊಡುತ್ತದೆ. ನನಗೆ ಡ್ಯಾಶ್ ಬೋರ್ಡ್ ಮೇಲೆ ಕೊಡಲಾಗಿರುವ ಕಪ್ಪು ಪ್ಲಾಸ್ಟಿಕ್ ಕೇಸಿಂಗ್ ಕ್ಯಾಬಿನ್ ಅನ್ನು ಬಾಣದ ಶೈಲಿಯಲ್ಲಿ ವಿಂಗಡಿಸುತ್ತದೆ ಅದು ನನಗೆ ಇಷ್ಟವಾಯಿತು.
ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಮದ್ಯ ಭಾಗದಲ್ಲಿದ್ದು ಉಪಯೋಗಿಸಲು ಸುಲಭವಾಗಿದೆ ಮತ್ತು ಚೆನ್ನಾಗಿ ಪ್ರತಿಕ್ರಿಯಿಸುತ್ತದೆ. ನನಗೆ ಕಷ್ಟವಾದ ಒಂದು ಚಿಕ್ಕ ವಿಚಾರವೆಂದರೆ ಸ್ಕ್ರೀನ್ ದಿನದ ಬೆಳಕಿನಲ್ಲಿ ಮಂದವಾಗಿ ಕಾಣುತ್ತದೆ, ಡೇ ಮೋಡ್ ಅನ್ನು ಆಯ್ಕೆ ಮಾಡಿದಾಗಲೂ ಸಹ. ಎಂಟರ್ಟೈನ್ಮೆಂಟ್ ವಿಚಾರಗಳಿಗೆ ನಿಮಗೆ USB, AUX ಮತ್ತು ಬ್ಲೂಟೂತ್ ಕನೆಕ್ಟಿವಿಟಿ ಕೊಡಲಾಗಿದೆ. ಅದನ್ನು ಪರೀಕ್ಷಿಸಲು ನಾನು ನನ್ನ ಸ್ಮಾರ್ಟ್ ಫೋನ್ ಅನ್ನು ಕನೆಕ್ಟ್ ಮಾಡಿದೆ ಕೆಲವು EDM ಟ್ರ್ಯಾಕ್ ಗಳನ್ನು ಕೇಳಲು. ಆಡಿಯೋ ಗುಣಮಟ್ಟ OK ಆಗಿದೆ ಆದರೆ ಅದು ಇತೀಚೆಗೆ ಬಹಳಷ್ಟು ತಯಾರಕರು ಕೊಡುತ್ತಿರುವ ಉತ್ತಮ ಗುಣಮಟ್ಟದ ಯೂನಿಟ್ ಗಳಿಗೆ ಹೋಲಿಸಿದರೆ ಸ್ವಲ್ಪ ಹಿನ್ನಡೆ ಪಡಯುತ್ತದೆ( ಉದಾಹರಣೆಗೆ ಟಾಟಾ --ಅವರ ಹರ್ಮನ್ ಯೂನಿಟ್ ಟಿಯಾಗೋ ದಲ್ಲಿ ಕೊಟ್ಟಿದೆ ಮತ್ತು ಅದು ಅತಿ ಉತ್ತಮ ಗುಣಮಟ್ಟ ಹೊಂದಿದೆ). ಆದರೆ, ಮುಶ್ಚ ಅನ್ನು ಹೆಚ್ಚಾಗಿ ಇಷ್ಟಪಡುವವರಿಗೆ ಹೊರಗಡೆಯಿಂದ ಅಳವಡಿಸಲಾದ amp ಮತ್ತು bass ಗಳು ಚೆನ್ನಾಗಿರುತ್ತದೆ ಎನಿಸುತ್ತದೆ.
ಸೀಟ್ ಗಳು ಭಹಳಷ್ಟು ಆರಾಮದಾಯಕವಾಗಿದೆ ಎರೆಡೂ ಸಾಲುಗಳಲ್ಲಿ ಮತ್ತು ಬಹಳಷ್ಟು ಸೈಡ್ ಬಾಸ್ಟರಿಂಗ್ ಗಳನ್ನೂ ಕೊಡಲಾಗಿದೆ ಮುಂದಿನ ಸಾಲಿನಲ್ಲಿ. ಒಟ್ಟಿನಲ್ಲಿ, ಈ ಆಟೋಮ್ಯಾಟಿಕ್ ಪೆಟ್ರೋಲ್ ಆವೃತ್ತಿ ಬಹಳಷ್ಟು ಉಪಯುಕ್ತ ಫೀಚರ್ ಗಳನ್ನು ಪಡೆದಿದೆ, ನೀವು ಕಂಪ್ಲೇಂಟ್ ಮಾಡಬಹುದಾದ ವಿಚಾರ ತೀರಾ ಕಡಿಮೆ ಇದೆ. ಆದರೆ ಇದು ಕೂಡ ಒಂದು ಕೊನೆ ಹಂತ ತಲುಪಿದಂತ ವಿಚಾರ.
ನೀವು ಗಮನಿಸಬೇಕಾದ ವಿಚಾರವೆಂದರೆ ಈ ಪೆಟ್ರೋಲ್ ಆಟೋಮ್ಯಾಟಿಕ್ ವೇರಿಯೆಂಟ್ SX+ ಟ್ರಿಮ್ ನಲ್ಲಿ ಸಿಗುತ್ತದೆ , ಟಾಪ್ ವೇರಿಯೆಂಟ್ ನಲ್ಲಿ ಅಲ್ಲ. ಹಾಗಾಗಿ ಇದರಲ್ಲಿ ಕೆಲವು ಫೀಚರ್ ಗಳನ್ನೂ ಕಡಿತಗೊಳಿಸಲಾಗಿದೆ. ಕೆಲವು ಎನ್ನಲಾಗುವುದಿಲ್ಲ, ಸ್ವಲ್ಪ ಮಟ್ಟಿಗೆ ಅನ್ನಬಹುದು! ಮೊತ್ತ ಮೊದಲ ವಿಚಾರ ಎಂದರೆ, ಇದರಲ್ಲಿ ಲೆಥರ್ ಸೀಟ್ ಕೊಡಲಾಗಿಲ್ಲ, ನಿಮಗೆ ಸಿಗುವಂತಹುದು ಕೇವಲ ಫ್ಯಾಬ್ರಿಕ್ ಲೇಔಟ್. ನಿಮಗೆ ಸಿಗದಿರುವ ವಿಚಾರಗಳೆಂದರೆ ಕ್ರೂಸ್ ಕಂಟ್ರೋಲ್, ಆಟೋ ಡಿಮ್ಮಿಂಗ್ IRVM, ಆಟೋ ಹೆಡ್ ಲ್ಯಾಂಪ್ ಗಳು, ಮತ್ತು ರೈನ್ ಸೆನ್ಸಿಂಗ್ ವೈಪರ್ ಗಳು. ಹುಂಡೈ ನವರು ಹಲವು ಸುರಕ್ಷತೆಗಳನ್ನು ಕಡಿತಗೊಳಿಸಿದ್ದಾರೆ ಕೇವಲ ಎರೆಗೂ ಮುಂಭಾಗದ ಏರ್ಬ್ಯಾಗ್ ಕೊಡುವುದರೊಂದಿಗೆ( ಡ್ರೈವರ್ ಮತ್ತು ಪ್ಯಾಸೆಂಜರ್), ಟಾಪ್ ವೇರಿಯೆಂಟ್ ನಲ್ಲಿ ಆರು ಕೊಡಲಾಗಿದೆ. ಹಾಗು, ಇದರಲ್ಲಿ ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್ ಯೂನಿಟ್ ಸಹ ಇಲ್ಲ, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC ) ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ (HAC ) ಗಳನ್ನೂ ಸಹ ಕೊಡಲಾಗಿಲ್ಲ. ಬೆಲೆ ವಿಚಾರದಲ್ಲಿ ವೆಲ್ಪ ಮಟ್ಟಿಗೆ ಹೆಚ್ಚು ಎನಿಸಿದರೂ Rs 12.86 ಲಕ್ಷ (ಎಕ್ಸ್ ಶೋ ರೂಮ್ ದೆಹಲಿ), ಮತ್ತು ಮೇಲೆ ಹೇಳಿದ ಫೀಚರ್ ಗಳ ಇಲ್ಲದಿರುವಿಕೆ ವಾಸ್ತವದಲ್ಲಿ ಅಷ್ಟೇನೂ ಸಮಂಜಸವಾಗಿ ಕಾಣುವುದಿಲ್ಲ ಮತ್ತು ಬೆಲೆ ಪಟ್ಟಿಯು ಸಲಕರಣೆಗಳ ಪಟ್ಟಿಗೆ ಅನುಗುಣವಾಗಿಲ್ಲ.
ಆದರೆ, ಇನ್ನೊಂದು ಬದಿಯಲ್ಲಿ, ಈ ಪೆಟ್ರೋಲ್ ಆಟೋಮ್ಯಾಟಿಕ್ ಟ್ರಿಮ್ ನಲ್ಲಿ ಹಲವು ಎಕ್ಸ್ಟ್ರಾ ಫೀಚರ್ ಗಳನ್ನು ಕೊಟ್ಟಿದ್ದಾರೆ. ಇದರಲ್ಲಿ ಸ್ಟಿಯರಿಂಗ್ ವೀಲ್ ಮತ್ತು ಗೇರ್ ಕ್ನೋಬ್ ಗೆ ಲೆತ್ತೆರ್ ಪ್ಯಾಕೇಜ್ ಕೊಡಲಾಗಿದೆ. 60:40 ಸ್ಪ್ಲಿಟ್ ಹಿಂಬದಿಯ ಸೀಟ್ ಆಯ್ಕೆ ಒಂದು ಸ್ವಾಗತಾರ್ಹ ಬದಲಾವಣೆ ಆಗಿದೆ, ಇದರಿಂದ ಹಿಂಬದಿಯಲ್ಲಿ ಹೆಚ್ಚಾಗ ಸ್ಥಳಾವಕಾಶ ಇದೆ. ಹಿಂದೆ ಹೇಳಿದಂತೆ 402 ಲೀಟರ್ ಬೂಟ್ ಸ್ಪೇಸ್ ಇದ್ದು , ನೀವು ಅದನ್ನು ಬಹಳಷ್ಟು ಉಪಯೋಗಿಸುತ್ತೀರಿ ಕೂಡ.
ಡ್ರೈವ್
ಈ 1.6- ಲೀಟರ್ ಪೆಟ್ರಿಲ್ ಮೋಟಾರ್ ಒಟ್ಟಾರೆ 123PS ಪವರ್ ಮತ್ತು 151Nm ಟಾರ್ಕ್ ಅನ್ನು ಹೊರಸೂಸುತ್ತದೆ, ಇವೇನು ಆಶ್ಚರ್ಯಪಡಬೇಕಾದ ವಿಚಾರವಾಗಿರುವುದಿಲ್ಲ, ಮತ್ತು ನಾವು ಇದರ ಒಟ್ಟಾರೆ ಭಾರವಾದ 1200kg ಪರಿಗಣಿಸಿದಾಗ , ಸುಮಾರು 98PS ಒಂದು ಟನ್ ಗೆ ಸಾಕಷ್ಟು ಆಗುತ್ತದೆ ಮತ್ತು ಅದು ಈ ಕಾಂಪ್ಯಾಕ್ಟ್ SUV ಗೆ ತಕ್ಕುದಾಗಿದೆ ಯಾವುದೇ ಸಮಯದಲ್ಲಿ.
ಡ್ರೈವ್ ಮಾಡಲು ವಾಹನ ದಟ್ಟಣೆ ಇರುವ NH8(ಗುರುಗ್ರಾಂ ನಿಂದ ದೆಹಲಿ ರಸ್ತೆ) ಅದು ಹೆಚ್ಚು ವಾಹನ ದಟ್ಟಣೆ ಇರುವ ಸಮಯದಲ್ಲಿ, ನಾನು ಕ್ರೆಟಾ ದಲ್ಲಿರುವ ಆಟೋ ಬಾಕ್ಸ್ ಅನ್ನು ಪೂರ್ಣವಾಗಿ ಬಳಸಿದೆ. ಇದರ ಎಂಜಿನ್ ಅನ್ನು 6- ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಗೆ ಅಳವಡಿಸಲಾಗಿದೆ ಮತ್ತು ಅದು ಟಾರ್ಕ್ ಕನ್ವರ್ಟರ್ ಅನ್ನು ಬಳಸುತ್ತದೆ. ಈಗ, ಹಲವರು ಕನ್ವರ್ಟರ್ ನಿಂದ ಜಡತ್ವವನ್ನು ನಿರೀಕ್ಷಿಸಬಹುದು , ಆದರೆ ಆಶರ್ಯವಾಗುವಂತೆ ಅದು ಗೇರ್ ಗಳನ್ನು ಸುಲಭವಾಗಿ ಬದಲಾಯಿಸುತ್ತದೆ, ಆದರೆ ಇವೆಲ್ಲವೂ ವೇಗಗತಿ ಪಡೆಯುವಿಕೆಯಮೇಲೆ ಅವಲಂಬಿತವಾಗಿರುತ್ತದೆ. ಹ್ಸ್ವಲ್ಪ ನಯವಾಗಿ ಡ್ರೈವ್ ಮಾಡುವಾಗ ಗೇರ್ ಶಿಫ್ಟ್ ಗಳು ಸುಲಭವಾಗಿರುತ್ತದೆ, ಸುಮಾರು 2000rpm ನಲ್ಲಿ, ಮತ್ತು ಇದು ಮೈಲೇಜ್ ಅನ್ನು ಸಹ ಹೆಚ್ಚಿಸುತ್ತದೆ. ನಾವು ಪರೀಕ್ಷಿಸುವಾಗ ಮೈಲೇಜ್ ಸಂಖ್ಯೆ ಗಳು 12.7kmpl ದೊರೆತಿದ್ದವು ಮತ್ತು ಅವು ಈ ಅಳತೆಯ ವಾಹನಕ್ಕೆ ಅನುಗುಣವಾಗಿದೆ. ಆದರೆ, ಇದು ಒಂದು ಆಟೋಮ್ಯಾಟಿಕ್ ಸೆಟ್ ಅಪ್ ಆಗಿದ್ದು ಮತ್ತು AMT ಆಗಿಲ್ಲದಿರುವುದರಿಂದ ಸುಲಭವಾಗಿ ಶಿಫ್ಟ್ ಮಾಡಲು ಸಾಧ್ಯ. ನಾನು ನಿಜವಾಗಿಯೂ ಈ ಕಾಂಪ್ಯಾಕ್ಟ್ SUV ಯನ್ನು ಪರೀಕ್ಷಿಸಲು ಇಷ್ಟಪಟ್ಟಿದ್ದೆ.
ಪವರ್ ಡೆಲಿವರಿ ಸ್ವಲ್ಪ ನೇರವಾಗಿದೆ. ಮತ್ತು ಕ್ಯಾಬಿನ್ ಅಣು ಬಹಳಷ್ಟು ಚೆನ್ನಾಗಿ ಇನ್ಸುಲೇಟ್ ಮಾಡಲಾಗಿದೆ ಎಂಜಿನ್ ನ್ ಶಬ್ದ ಒಳಗೆ ಬರದಂತೆ ಮಾಡಲು,ನೀವು ಆರಾಮದಾಯಕವಾಗಿ ಡ್ರೈವ್ ಮಾಡುತ್ತಿರಲು. ಆದರೆ, ನೀವು ವೇಗಗತಿ ಪೆಡಲ್ ಅನ್ನು ಹೆಚ್ಚು ಒತ್ತಿದಾಗ ಎಂಜಿನ್ ನ ಶಬ್ದ ಕ್ಯಾಬಿನ್ ಒಳಗೆ ಪ್ರವೇಶಿಸುತ್ತದೆ, ಟಾನ್ಸ್ಮಿಷನ್ ಗೇರ್ ಬದಲಾವಣೆ ಮಾಡಲು ತನ್ನದೇ ಆದ ಸಮಯ ತೆಗೆದುಕೊಳ್ಳುತಿರಬೇಕಾದರೆ. ಹೌದು ಇದರಲ್ಲಿ ಖಂಡಿತವಾಗಿಯೂ ಸ್ವಲ್ಪ ಲ್ಯಾಗ್ ಇದೆ, ಆದರೆ ಇದೇನು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಉತ್ತಮ ಹಂತಕ್ಕೆ ಬರಲು (AMT ಸೆಟ್ ಅಪ್ ನಲ್ಲಿರುವಂತೆ ). ಟಾರ್ಕ್ ಕನ್ವರ್ಟರ್ ನಲ್ಲಿರುವ ಒಳ್ಳೆ ವಿಚಾರವೆಂದರೆ ಅದು ನಿಮ್ಮ ಇನ್ಪುಟ್ ಗಳಿಗೆ ಅಳವಡಿಸಿಕೊಳ್ಳುತ್ತದೆ ಹಾಗಾಗಿ ಅದು ಗೇರ್ ಅನ್ನು ಹೋಲ್ಡ್ ಮಾಡಬಲ್ಲದು ಹೆಚ್ಚಿನ rpm ಗಳಲ್ಲಿ. ಆದರೆ, ಈ ಎಲ್ಲ ವಿಚಾರಗಳು ನಿಗದಿತ ಬೆಲೆಯಲ್ಲಿ ಸಿಗುತ್ತದೆ , ನೀವು ನಿಮ್ಮಲ್ಲಿರುವ ಷೂಮಾಕರ್ ಅನ್ನು ಹೊರತರಲು. ಈ ವಿಚಾರವನ್ನು ಸರೊಪಡಿಸಬಹುದಾದ ಇನ್ನೊಂದು ಬಗೆಯೆಂದರೆ ನೀವು ಮಾನ್ಯುಯಲ್ ಮೋಡ್ ಗೆ ಸ್ವಿಚ್ ಆಗುವುದು ಮತ್ತು ಈ ವಿಚಾರವನ್ನು ನಿಮ್ಮ ಸುಪರ್ದಿಗೆ ತೆಗೆದುಕೊಳ್ಳುವುದು. ನಿಜವಾಗಿಯೂ, ಮಾನ್ಯುಯಲ್ ಶಿಫ್ಟ್ ಗಳು ಬಹಳ ನಯವಾಗವೆ ಹಾಗಾಗಿ ನೀವು ಎಂಜಿನ್ ಗೆ ಕಷ್ಟ ಕೊಡುವುದು ತಪ್ಪಿಸಬಹುದು.
ನಾನು ಹೇಳಬೇಕಾದ ವಿಚಾರ, ಮತ್ತು ಇದು ಹುಂಡಿ ನ ಹಳೆ ಓನರ್ ನಿಂದ ಬದಿರುವಂತಹುದು, ಇದರಲ್ಲಿರುವ ಸ್ಟಿಯರಿಂಗ್ ನಾವು ನೋಡಿರುವುದವುಗಳಲ್ಲಿ ಅತಿ ಚೆನ್ನಾಗಿರುವುದು ಆಗಿದೆ. ಸಾದಾರಣವಾಗಿ ಅತಿ ಸೂಕ್ಷ್ಮವಾದ ಸ್ಟಿಯರಿಂಗ್ ಕೊಡುತ್ತಾರೆ ಅಂದು ಟೀಕಿಸಲ್ಪಟ್ಟದ್ದಕ್ಕೆ ವಿರುದ್ಧವಾಗಿ ಇದು ಸ್ವಲ್ಪ ತೂಕವುಳ್ಳದ್ದಾಗಿದೆ ಮತ್ತು ಹ್ಯಾಂಡಲ್ ಮಾಡಲು ಚೆನ್ನಾಗಿದೆ, ದೆಹಲಿಯ ಅಸ್ತವ್ಯಸ್ತವಾಗಿರುವ ರಸ್ತೆಗಳಲ್ಲೂ ಸಹ. ಬಾಡಿ ರೋಲ್ ಅತಿ ಕಡಿಮೆ ಇದ್ದು ತಿರುವುಗಳನ್ನು ಸುಲಭವಾಗಿ ನಿಭಾಯಿಸುತ್ತದೆ ಆದರೂ, ಅಲ್ಲಲ್ಲಿ ಸ್ವಲ್ಪ ತಡವರಿಸಿದಂತೆ ಆಗುತ್ತದೆ ಎಂದು ಕಾಣಬಹುದು, ಹೆಚ್ಚಾಗಿ ತಿರುವುಗಳಲ್ಲಿ ಡ್ರೈವ್ ಮಾಡಿದಾಗ. ಒಟ್ಟಾರೆ ರೈಡ್ ಗುಣಮಟ್ಟವು ಇದರಲ್ಲಿರುವಂತಹ ಸಸ್ಪೆನ್ಷನ್ ಸೆಟ್ ಅಪ್ ಉಪಯೋಗಿಸುತ್ತಿರುವ
ಇತರ ವೇರಿಯೆಂಟ್ ಗಳಂತೆಯೇ ಇದೆ. ಇದು ರಸ್ತೆಯ ಅಂಕು ಡೊಂಕುಗಳನ್ನು ಸುಲಭವಾಗಿ ನಿಭಾಯಿಸುತ್ತದೆ, ಬದಿಗಳಲ್ಲಿ ಸಸ್ಪೆನ್ಷನ್ ಸ್ವಲ್ಪ ಕಠಿಣವಾಗಿದೆ ಎಂದೆನಿಸಿದರೂ, ನಿಮಗೆ ಸ್ವಲ್ಪ ಜೆರ್ಕ್ ಗಳು ಪಡೆದ ಅನುಭವ ಆಗುತ್ತದೆ, ಒಟ್ಟಾರೆ ಪರಿಗಣಿಸಿದಾಗ ಡ್ರೈವ್ ಗುಣಮಟ್ಟ ಅದ್ಭುತವಾಗಿದೆ.
ಇದು ಕೊಳ್ಳಲು ಮೌಲ್ಯಯುಕ್ತವಾಗಿದೆಯೇ?
ಇದಕ್ಕೆ ಉತ್ತರಿಸಬೇಕೆಂದರೆ, ನಾವು ಎಲ್ಲವನ್ನು ಒಟ್ಟುಗೂಡಿಸೋಣ. ಇದು ಒಂದು ಉತ್ತಮವಾಗಿ ಸಿಗರಿಸಲ್ಪಟ್ಟ SUV ಆಗಿದೆ., ಇದರಲ್ಲಿ ಉತ್ತಮವಾದ ಮೋಟಾರ್ ಇದೆ ಬಾನೆಟ್ ಒಳಗಡೆ, ಆಟೋ ಬಾಕ್ಸ್ ಬಹಳಷ್ಟು ನವೀಕರಣಗೊಂಡಿದೆ, ಆಂತರಿಕಗಳನ್ನು ಚೆನ್ನಾಗಿ ಅಳವಡಿಸಲಾಗಿದೆ, ಮತ್ತು ಫೀಚರ್ ಗಳ ಪಟ್ಟಿ ಸಹ ದೊಡ್ಡದಾಗಿದೆ.ಈ ಎಲ್ಲ ವಿಚಾರಗಳು ನಿಮಗೆ ಉತ್ಸಾಹ ಮೂಡುವಂತೆ ಮಾಡದಿದ್ದರೆ, ಮತ್ತಾವುದು ಹಾಗೆ ಮಾಡುತ್ತದೆ ಎಂದು ನನಗೆ ಗೊತ್ತಿಲ್ಲ. ಆದರೆ, ಹೌದು ಇದರಲ್ಲಿ "ಆದರೆ " ಎಂಬುದು ಇದೆ, ಈ ವೇರಿಯೆಂಟ್ ನ ಬೆಲೆ Rs 12.86 ಲಕ್ಷ (ಎಕ್ಸ್ ಶೋ ರೂಮ್ ದೆಹಲಿ) ಸ್ವಲ್ಪ ಜಾಸ್ತಿ ಎಂದೇ ಹೇಳಬಹುದು. ಹಾಗು, ಇದು ಟಾಪ್ ಆ ದಿ ಲೈನ್ ವೇರಿಯೆಂಟ್ ಅಲ್ಲ, ಹಾಗಾಗಿ ನೀವು ಬಹಳಷ್ಟು ಫೀಚರ್ ಗಳನ್ನು ಮಿಸ್ ಮಾಡಿಕೊಳ್ಳಬಹುದು.ಇದರ ನಂತರ ಅವೆಲ್ಲ ಡೀಲ್ ಬ್ರೇಕರ್ ಗಳು ಎಂದು ಪರಿಗಣಿಸಲಾಗುವುದಿಲ್ಲ. ನನ್ನ ಪ್ರಕಾರ, ನೀವು ಆಟೋ ಬಾಕ್ಸ್ ನ ಉಪಯುಕ್ತತೆಯನ್ನು ಪರಿಗಣಿಸಬಹುದು, ಅದು ದಟ್ಟವಾದ ಟ್ರಾಫಿಕ್ ನಲ್ಲಷ್ಟೇ ಅಲ್ಲದೆ ಅಗಲವಾದ ರಸ್ತೆಗಳಲ್ಲೂ ಸಹ ನಿಮಗೆ ಸಹಕಾರಿಯಾಗಿರುತ್ತದೆ. ಒಟ್ಟಾರೆ ಪ್ಯಾಕೇಜ್ ಪರಿಗಣಿಸಿದಾಗ, ಇದು ನಿಮ್ಮ ಗಮನ ಸೆಳೆಯುವುದಕ್ಕೆ ಅನುಗುಣವಾಗಿದೆ. ಆದರೆ, ನಾವು ನಿಮಗೆ ಹೋಂಡಾ BRV CVT ಪೆಟ್ರೋಲ್ ಆರಂಭ ಹಂತದ ಬೆಲೆ 11.99 ಲಕ್ಷ, ಮತ್ತು ಫೋರ್ಡ್ ಎಕೋಸ್ಪೋರ್ಟ್ ಪೆಟ್ರೋಲ್ ಟೈಟಾನಿಯಂ AT Rs 9.61 ಲಕ್ಷ (ಎಕ್ಸ್ ಶೋ ರೂಮ್ ದೆಹಲಿ ) ಇವುಗಳನ್ನು ಒಮ್ಮೆ ನೋಡಲು ಶಿಫಾರಸು ಮಾಡುತ್ತೇವೆ.