ಹೋಂಡಾ WR-V vs ಮಾರುತಿ ವಿಟಾರಾ ಬ್ರೆ: ಹೋಲಿಕೆ ವಿಮರ್ಶೆ
Published On ಮೇ 14, 2019 By alan richard for ಹೋಂಡಾ ಡವೋಆರ್-ವಿ 2017-2020
- 0 Views
- Write a comment
ವಾಸ್ತವಿಕತೆ ಹಾಗು ಹೊರ ನೋಟ ಎವೆರೆಡರ ಅವಶ್ಯಕತೆಯನ್ನಿ ಮಾರುತಿ ವಿಟಾರಾ ದ ಯಶಸ್ಸು ನೋಡಿಸಿದೆ. ಹೋಂಡಾ ದ ಜಾಜ್ ಆಧಾರಿತ WR-V ಇನ್ನೂ ಹೆಚ್ಚು ಪ್ಯಾಕೇಜ್ ಕೊಡುತ್ತದೆಯೇ?
ಪರ
WR-V: ಕ್ಲಾಸಿಕ್- ಮುಂಚೂಟಿಯಲ್ಲಿರುವ ಪ್ಯಾಸೆಂಜರ್ ಮೊಣಕಾಲು ಇರಿಸುಲು ಜಾಗ
WR-V: ಎಂಜಿನ್ ನಗರಗಳಲ್ಲಿ ಡ್ರೈವ್ ಮಾಡಲು ಚೆನ್ನಾಗಿದೆ
ವಿಟಾರಾ ಬ್ರೆಝ: ಹೊರ ನೋಟ ಹಾಗು ರಸ್ತೆಯಲ್ಲಿನ ಆಕರ್ಷಣೆ
ವಿಟಾರಾ ಬ್ರೆಝ: ಆಶ್ಚರ್ಯಕರ ಇಂಧನ ಉಳಿತಾಯ
ವಿಟಾರಾ ಬ್ರೆಝ: ಕಮಾಂಡಿಂಗ್ ಆಗಿರುವ ಸೀಟ್ ಗಳು ಡ್ರೈವ್ ಮಾಡಲು ಆರಾಮದಾಯಕವಾಗಿರುತ್ತದೆ.
ವಿರೋಧ
WR-V: ಸಸ್ಪೆನ್ಷನ್ ತುಂಬಾ ಮೃದುವಾಗಿದ್ದು ಹೈವೆ ನಲ್ಲಿ ಬೌನ್ಸಿ ಆಗಿದೆ
WR-V: ನಿರಾಶೆ ಮುಡಿಸುವ ಇನ್ಫೋಟೈನ್ಮೆಂಟ್ ಸಿಸ್ಟಮ್ ನ್ ಇಂಟರ್ಫೇಸ್
ವಿಟಾರಾ ಬ್ರೆಝ: ನಗರಗಳಲ್ಲಿ ನಿಧಾನಗತಿಯ ಎಂಜಿನ್
ವಿಟಾರಾ ಬ್ರೆಝ: ಸಸ್ಪೆನ್ಷನ್ ಸ್ವಲ್ಪ ಕಠಿಣವಾಗಿದೆ ನಗರಗಳಲ್ಲಿ.
ಸ್ಟ್ಯಾಂಡರ್ಡ್ ಫೀಚರ್ ಗಳು
ಹೋಂಡಾ WR-V: ಸನ್ ರೂಫ್ ಇದೆ
ಮಾರುತಿ ವಿಟಾರಾ ಬ್ರೆಝ : ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿ.
ಭಾರತದ ರಸ್ತೆಗಳ ಸ್ಥಿತಿಗತಿಗಳನ್ನು ಪರಿಗಣಿಸಿದರೆ ನಗರಗಳಲ್ಲಿಯೂ ಸಹ SUV ತರಹ ಇರುವ ಚಿಕ್ಕ ಕಾರುಗಳಿಗೆ ವಾಹನ ದಟ್ಟಣೆ ಇರುವ ರಸ್ತ್ತೆಗಳಲ್ಲಿ ಹಾಗು ಚಿಕ್ಕ ಪಾರ್ಕಿಂಗ್ ವ್ಯವಸ್ಥೆಗಳಲ್ಲಿ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ನಾವು ಹೋಂಡಾ ದ ದೃಢವಾದ ಹೊಸ ಕ್ರಾಸ್ಒವರ್ WR-V , ಹೆಚ್ಚು ಪ್ರಖ್ಯಾತಿ ಪಡೆದಿರುವ ಕಾಂಪ್ಯಾಕ್ಟ್ SUV ಮಾರುತಿ ವಿಟಾರಾ ಬ್ರೆಝ ಜೊತೆಗೆ ಹೇಗೆ ನಿಲ್ಲುತ್ತದೆ ನೋಡೋಣ.
ಬಾಹ್ಯ
ಎರೆಡೂ ಕಾರ್ ಗಳು ತಮ್ಮ ವೇದಿಕೆಯಲ್ಲದ ಕಾರುಗಳಂತೆ ಕಾಣುವುದು ಒಂದು ವಿಶೇಷವೇ ಸರಿ . ಹೋಂಡಾ ಹೊಸ ಹೆಅಡಿಲೈಟ್ ಹಾಗು ಎತ್ತರದ ಬಾನೆಟ್ ಲೈನ್ ಗಳು ಜಾಜ್ ಗಿಂತ ಭಿನ್ನವಾಗಿ ಹೆಚ್ಚು SUV ಯಂತೆ ಕಾಣುತ್ತದೆ.
ಸಾಂಪ್ರದಾಯಿಕ ಶೈಲಿಯ ಶೋಲ್ಡರ್ ಲೈನ್ , ಫೆಂಡರ್ ಉಬ್ಬುಗಳು ಮತ್ತು ಸರಳವಾದ ಮುಂಬಾಗ ದೊಡ್ಡ ಕ್ರೋಮ್ ಗ್ರಿಲ್ ನೊಂದಿಗೆ ಆಕರ್ಷಕವಾಗಿ ಕಾಣುತ್ತದೆ. ಇದು 1790mm ಉದ್ದವಿದ್ದು ಬ್ರೆಝ WR-V ಗಿಂತಲೂ ಅಗಲವಾಗಿದೆ (1734mm). ಹೌದು WR-V ಯು ಜಾಜ್ ಗಿಂತಲೂ ವಿಭಿನ್ನವಾಗಿದ್ದು ಎತ್ತರವಾಗಿಯೂ ಸಹ ಇದೆ. ಆದರೆ ಬ್ರೆಝ 40mm ಎತ್ತರವಿದೆ (1640mm vs 1601mm). ಬ್ರೆಝ ದಲ್ಲಿ 10mm ಹೆಚ್ಚು ಗ್ರೌಂಡ್ ಕ್ಲಿಯರೆನ್ಸ್ ಇದೆ (198mm vs 188mm) ಮತ್ತು SUV ತರಹದ ಟೈಯರ್ ಗಳು ಸಹ ಇದೆ ಅವು ಹೆಚ್ಚು ಎತ್ತರ ಹಾಗು ಅಗಲವೂ ಇದೆ WR-V ಗೆ ಹೋಲಿಸಿದಾಗ. WR-V ಮುಂಬಾಗ ಹೆಚ್ಚು ಆಕರ್ಷಕವಾಗಿದೆ. ವಿಭಿನ್ನವಾದ ಕೋನಗಳಿಂದ ಹಾಗು ಆಕಾರಗಳಿಂದ ಮುಂಬಾಗ ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡಲಾಗಿದೆ. ಬದಿಗಳಿಂದ ನೋಡಿದಾಗ ಇದರಲ್ಲಿ ಜಾಜ್ ನ ಹೋಲಿಕೆಗಳು ಕಂಡುಬರುತ್ತದೆ.
ಇದರ ಹಿಂಬದಿ ಪರಿಚಿತವಾಗಿ ಕಾಣುತ್ತದೆ ಆದರೂ ಬೂಮ್ ರಂಗ್ ಶೈಲಿಯ ಟೈಲ್ ಲೈಟ್ ಗಳನ್ನೂ ಟೈಲ್ ಗೇಟ್ ಗೆ ಅಳವಡಿಸಲಾಗಿದ್ದು ಹೊಸತಾಗಿ ಕಾಣುತ್ತದೆ. ಬಂಪರ್ ಮೇಲಿರುವ ಸಿಲ್ವರ್ ಸ್ಕ್ಯೂಫ್ ಗೌರ್ಡ್ ಗಳು ಮತ್ತು ಕಪ್ಪು ಕ್ಲಾಡ್ಡಿಂಗ್ ಗಳು ಪ್ಯಾಕೇಜ್ ಆಕರ್ಷಕತೆಯನ್ನು ಹೆಚ್ಚಿಸುತ್ತದೆ. ಇದೇ ರೀತಿಯಲ್ಲಿ ನೋಡಿದಾಗ ಬ್ರೆಝ ಹೆಚ್ಚು ಗಮನ ಸೆಳೆಯುತ್ತದೆ.
ಅಂತರಿಕಗಳು
ನೀವು ಒಳಗೆ ನೋಡಿದಾಗ ಇವೆರೆಡರಲ್ಲಿ ಹತ್ತಿರದ ಸ್ಪರ್ಧೆ ಇರುವುದು ಗೊತ್ತಾಗುತ್ತದೆ. ಎವೆರೆಡರಲ್ಲು ಒಂದೇ ತರಹ ದ ಡಿಸೈನ್ ಇರುವ ಡ್ಯಾಶ್ ಬೋರ್ಡ್ ಇದೆ, ಮತ್ತು ನಾವು ಟೆಸ್ಟ್ ಮಾಡಿದ ಎರೆಡೂ ಟಾಪ್ ವೇರಿಯೆಂಟ್ ನಲ್ಲಿ ಪೂರ್ಣ ಕಪ್ಪು ಉಳ್ಳದಾಗಿದೆ. ಹೋಂಡಾ ದಲ್ಲಿ ಸರಳವಾದ ಲೇಔಟ್ ಇದೆ ಮತ್ತು ನನ್ನ ಅಭಿಪ್ರಾಯದಲ್ಲಿ ನೋಡಲು ಆಕರ್ಷಕವಾಗಿದೆ ಕೂಡ. ಎರೆಡರಲ್ಲೂಯೂ ಪ್ಲಾಸ್ಟಿಕ್ ನ ಗುಣಮಟ್ಟ ಚೆನ್ನಾಗಿದೆ. ಆದರೆ ಬ್ರೆಝ ದಲ್ಲಿ ಸ್ವಲ್ಪ ಚಿಕ್ಕದಾದ ಗ್ಲೋವ್ ಬಾಕ್ಸ್ ಲೀಡ್ ಇದೆ. ಎವೆರೆದುವು ಮುಂಭಾಗದಲ್ಲಿ ಸಮಪ್ರಮಾಣದಲ್ಲಿ ಹೋಲಿಕೆ ಹೊಂದಿದೆ
ಎತ್ತರವಾಗಿರುವ ಸೀಟ್ ಗಳು ಬ್ರೆಝ ದಲ್ಲಿ ಹೆಚ್ಚು ನಿರ್ದಿಷ್ಟವಾಗಿದೆ, ಎರೆಡರಲ್ಲಿ ಹೋಲಿಸಿದರೆ. ಮತ್ತು ನಿಮಗೆ SUV ಯನ್ನು ಡ್ರೈವ್ ಮಾಡಿದಂಥ ಅನುಭವ ಆಗುತ್ತದೆ. WR -V ಯಾ ಇನ್ನೊಂದು ಬದಿಯಲ್ಲಿ ಹೆಚ್ಚು ಗ್ಲಾಸ್ ಅನ್ನು ಹೊಂದಿದೆ. ದೊಡ್ಡ ವಿಂಡೋ ಹಾಗು ವಿಂಡ್ಸ್ಕ್ರೀನ್ ಇದಕ್ಕೆ ಪೂರಕವಾಗಿದೆ. ನ ಈ ಸೆಗ್ಮೆಂಟ್ ನಲ್ಲಿ ಮೊದಲಬಾರಿಗೆ ತಂದಿರುವ ಸನ್ ರೂಫ್ ನಿಮಗೆ ದೊಡ್ಡ ಕಾರಿನ ಒಳಗೆ ಕೂತ ಅನುಭವ ಕೊಡುತ್ತದೆ.
ಹೋಂಡಾ ದ " ಮ್ಯಾನ್ ಮ್ಯಾಕ್ಸಿಮಮ್ " ತತ್ವದ ಪರಿಣಾಮವಾಗಿ ಹಿಂಬದಿಯ ಸೀಟ್ ಪ್ರಯಾಣಿಕರಿಗೆ ಹೆಚ್ಚು ಮೊಣಕಾಲಿನ ಜಾಗ ಸಿಗುತ್ತದೆ. WR -V ಯಲ್ಲಿ 990mm ಜಾಗ ಇದೆ, ಹಾಗು ಬ್ರೆಝ ದಲ್ಲಿ 860mm( ಐದು ಇಂಚು ಜಾಸ್ತಿ ) ಗರಿಷ್ಟ ಮೊಣಕಾಲಿನ ಜಾಗ ಇದೆ. ಹಿಂದೆ ಹೇಳಿದಂತೆ WR -V ಯು ಹೆಚ್ಚು ಗಾಳಿ ಸಂಚಾರ ಇರುವುದರಿಂದ ಹೆಚ್ಚು ಜಾಗ ಇರುವಂತೆ ಕಾಣುತ್ತದೆ, ಎರೆಡರಲ್ಲಿ ಹೋಲಿಸಿದರೆ. ಆದರೆ ಸೀಟ್ ನ ಆರಾಮದಾಯಕತೆ ಮತ್ತು ಸರಿಮಾಡಲು ಆಗದಂತಹ ಹೆಡ್ ರೆಸ್ಟ್ ಹಿಂಬದಿಯ ಸೀಟ್ ಅನ್ನು ಉತ್ತಮವಾಗಿರಿಸುತ್ತದೆ, ಹತ್ತಿರದ ಪ್ರಯಾಣಕ್ಕೆ.
ನಂತರ, ಟೇಪ್ ಗಳಿಂದ ಅಳತೆ ಮಾಡಿದಾಗ, ಬ್ರೆಝ ನಮಗೆ ಆಶ್ಚರ್ಯ ಉಂಟುಮಾಡಿತು. ಬ್ರೆಝ ದಲ್ಲಿ ಐದು ಇಂಚು ಮೊಣಕಾಲಿನ ಜಾಗ ಕಡಿಮೆ ಆದರೂ ಇದರಲ್ಲಿ ಐದು ಇಂಚು ಶೋಲ್ಡರ್ ರೂಮ್ ಜಾಗ ಹೆಚ್ಚಾಗಿದ್ದು 1400mm, WR -V ಯು1270mm ಗಿಂತಲೂ ಹೆಚ್ಚಾಗಿದೆ. WR -V ಯು ಪ್ಯಾಸೆಂಜರ್ ಗಳು ಕಾಲನ್ನು ಚಾಚಬಹುದಾದರೂ ಬ್ರೆಝ ದಲ್ಲಿನ ಹಿಂಬದಿಯ ಸೀಟ್ ಮೂರು ಮಂದಿಗೆ ಹೆಚ್ಚು ಆರಾಮದಾಯಕವಾಗಿರುತ್ತದೆ. ಬ್ರೆಝ ದ್ಲಲೂ ಸಹ ಮುಂಬದಿಯ ಡ್ರೈವರ್ ಹಾಗು ಪ್ಯಾಸೆಂಜರ್ ಗಳಿಗೆ ಹೆಚ್ಚು ಶೋಲ್ಡರ್ ರೂಮ್ ಹಾಗು ಹೆಡ್ ರೂಮ್ ಇದ್ದು ಕಾಲು ಚಾಚಲು ಸೀಟ್ ಗಳ ಸರಿಪಡಿಸುವಿಕೆಗೂ ಸಹ ಅವಕಾಶ ಇದೆ.
WR -Vಯಲ್ಲಿ ದೊಡ್ಡದಾದ ಬೂಟ್ ಇದೆ 363 litres. ಆದರೆ ಬ್ರೆಝ ದಲ್ಲಿ ಒಂದು ಮದ್ಯಮ ಅಳತೆಯ ಸೂಟಕೇಸ್ ಅನ್ನು 328 litres ಜಗದಲ್ಲಿ ಇಡಬಹುದು.
ಆಶ್ಚರ್ಯಕರ ರೀತಿಯಲ್ಲಿ ಹೋಂಡಾ ದಲ್ಲಿ ಚಪ್ಪಟೆಯಾಗಿ ಹಾಕ ಬಹುದಾದ ಸೀಟ್ ಗಳು ಇಲ್ಲ, ಜಾಜ್ ನಲ್ಲಿ ಇದ್ದಂತೆ . ಬ್ರೆಝ ದ ಸ್ಪ್ಲಿಟ್ 60:40 ಮತ್ತು ಫೋಲ್ಡ್ ಡೌನ್ ಫ್ಲಾಟ್ ಗೆ ಅವಕಾಶ ಇರುವ ಸೀಟ್ ಇದೆ. ಹಾಗಾಗಿ ದೊಡ್ಡದಾದ ಲಗೇಜ್ ಅಥವಾ ಎರೆಡು ಪೂರ್ಣ ಗಾಲ್ಫ್ ಕ್ಲಬ್ ಸೆಟ್ ಗಳನ್ನೂ ತೆಗೆದುಕೊಂಡು ಹೋಗಬಹುದಾಗಿದೆ.
ಟೆಕ್ನಾಲಜಿ
ಈ ಸೆಗ್ಮೆಂಟ್ ನಲ್ಲಿ ಹೆಚ್ಚು ಸ್ಪರ್ಧೆ ಗಳು ಇರುವುದರಿಂದ ಎರೆಡೂ ಕಾರ್ ತಯಾರಕರು ಈ ಮಾಡೆಲ್ ಗಳಲ್ಲಿ ಹೆಚ್ಚು ಫೀಚರ್ ಗಳನ್ನೂ ತುಂಬಿರುವುದು ಆಶ್ಚರ್ಯವಿಲ್ಲ. ಎರೆಡರಲ್ಲೂ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಇದೆ, ಆದರೆ ಹೋಂಡಾ ದಲ್ಲಿ ಇರುವ ಭಾರತದಲ್ಲಿ ತಯಾರಾಗಿರುವ ಯೂನಿಟ್ ಅಸ್ಟೇನು ಚೆನಾಗಿಲ್ಲ. ಅದು ಸ್ವಲ್ಪ ನಿದಾನ ಮತ್ತು ಎಳೆಯುವಂತಿರುತ್ತದೆ ಅರ್ಥವಾಗಲು ಕಷ್ಟವಾಗುತ್ತದೆ. ಇದರಲ್ಲಿ ನಮಗೆ ಗ್ರಾಫಿಕ್ ಈಕ್ವಾಲೈಸೆರ್ ಸೆಟ್ಟಿಂಗ್ ಅನ್ನು ಸರಿ ಮಾಡಲು ಅರ್ಧ ತಾಸು ಕಷ್ಟಪಡಬೇಕಾಯಿತು, ತದನಂತರವೂ ನಮಗೆ ಇದರ ಹಿಡಿರುವ ತರ್ಕ ಅರ್ಥವಾಗಲಿಲ್ಲ. ಇದು ಮಿರರ್ ಲಿಂಕ್ ಹಾಗು ನೇವಿಗೇಶನ್ ಅನ್ನು ಸಪೋರ್ಟ್ಅನ್ನು ಬೆಂಬಲಿಸುತ್ತದೆ. ಆದರೆ ಆಪಲ್ ಕಾರ್ ಪ್ಲೇ ಮಿಸ್ ಆಗಿದೆ.
ಮಾರುತಿ ಯಲ್ಲಿ ಅದರದೇ ಆದ ವಿಷಯಗಳಿವೆ. ,ಆದರೆ ಅದು ಉಪಯೋಗಿಯಲು ಸುಲಭವಾಗಿದೆ. ಅದು ಬಹಳ ಸೂಕ್ಷ್ಮವಾಗಿದೆ ಆದರೆ ಮಿರರ್ ಲಿನ್ಲ ಮತ್ತು ಕಾರ್ ಪ್ಲೇ ಯನ್ನು ಬೆಂಬಲಿಸುತ್ತದೆ. ಹಾಗು, ಇದು ಬೇಗ ಪ್ರತಿಕ್ರಯಿಸುತ್ತದೆ , ಆದರೆ ಹೋಂಡಾ ದಲ್ಲಿ ಸುಮಾರು 4-5 ಸೆಕೆಂಡ್ ಸಮಯ ಹೆಚ್ಚು ಬೇಕಾಗುತ್ತದೆ ಸ್ಟಿಯರಿಂಗ್ ಮೌಂಟೆಡ್ ಕಂಟ್ರೋಲ್ ಗಳಿಂದ ಆಡಿಯೋ ಟ್ರ್ಯಾಕ್ ಬದಲಾಯಿಸಲು .
ಇವೆರೆಡರಲ್ಲೂ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಇದೆ, ಮತ್ತು WR-V ಯಾ ಟಚ್ ಕಂಟ್ರೋಲ್ ಗಳು ತುಂಬಾ ವೇಗವಾಗಿವೆ, ಆದರೆ ಉಪಯೋಗಿಸಲು ಅಷ್ಟು ಸುಲಭವಲ್ಲ.
ಡ್ರೈವ್ ಮತ್ತು ಎಂಜಿನ್ ಗಳು
ಎವೆರೆಡನ್ನು ಸ್ಟಾರ್ಟ್ ಮಾಡಿದಾಗ ನಿಮಗೆ ಡೀಸೆಲ್ ಎಂಜಿನ್ ನ ಪರಿಚಿತ ಅನುಭವ ಆಗುತ್ತದೆ ಮತ್ತು ಎಂಜಿನ್ ಸಮ ವೇಗ ಪಡೆದನಂತರ ನಿಮಗೆ ತಟಸ್ಥ ಮನೋಭಾವ ಸಿಗುತ್ತದೆ. ಇವೆರೆಡರ ಬಗ್ಗೆ ಅಸ್ಟೇನು ಹೇಳುವ ವಿಷಯಗಳಿಲ್ಲ ಪರಿಷ್ಕರಣ ವಿಷಯ ಹೊರತುಪಡಿಸಿ. ಇದರ 1.5 i-DTEC ಎಂಜಿನ್ ನಗರಗಳ ಸ್ಟಾಪ್ ಮತ್ತು ಗೋ ಟ್ರಾಫಿಕ್ ಗಳಲ್ಲಿ ಓಡಿಸುವುದಕ್ಕೆ ಹಿತವಾಗಿರುತ್ತದೆ ಮತ್ತು ಸ್ಪೂರ್ತಿದಾಯಕವಾಗಿರುತ್ತದೆ ಕೂಡ. ಇದರಲ್ಲಿ ನಿಮಗೆ ಬ್ರೆಝ ಗಿಂತಲೂ ಕಡಿಮೆ ಗೇರ್ ಶಿಫ್ಟ್ ಮಾಡಬೇಕಾಗುತ್ತದೆ. ಮಾರುತಿ ಯ1.3 DDiS 200 ನಲ್ಲಿ ನೀವು ಕಡಿಮೆ ಗೇರ್ ಗಳಿಗೆ ಬರುತ್ತಿರಬೇಕಾಗುತ್ತದೆ ಏಕೆಂದರೆ ಅದರ ಟಾರ್ಕ್ 1700rpm ನಂತರ ತೀವ್ರವಾಗಿ ಹೆಚ್ಚುತ್ತದೆ, ಮತ್ತು ಅದಕ್ಕಿಂತ ಕಡಿಮೆ ಯಲ್ಲಿ ಅಸ್ಟೇನು ವೆತ್ಯಾಸ ಕಾಣುವುದಿಲ್ಲ. ಆದರೂ WR-V ಗೆ ಹೋಲಿಸಿದಾಗ ಇದು ಒಂಟೆ ಯಂತೆ ಕಡಿಮೆ ಇಂಧನ ವನ್ನು ತೆಗೆದುಕೊಳ್ಳುತ್ತದೆ. ನೀಡು ಅತ್ಯಾಶ್ಚರ್ಯವಾಗುವ ರೀತಿಯಲ್ಲಿ 21.70kmpl ಕೊಟ್ಟಿತು (ನಾವು ಎರೆಡು ಕಾರುಗಳನ್ನು ಟೆಸ್ಟ್ ಡ್ರೈವ್ ಮಾಡಿದೆವು ಇದನ್ನು ಖಚಿತಪಡಿಸಿಕೊಳ್ಳಲು ) ನಮ್ಮ ಟೆಸ್ಟ್ ಡ್ರೈವ್ ನಲ್ಲಿ, ಹೋಲಿಕೆಯಲ್ಲಿ WR-V ಯಲ್ಲಿ ಸಾದಾರಣ 15.35kmpl ದೊರೆಯಿತು.
ಹೈವೆ ಗಳಲ್ಲಿ ಮಾರುತಿ ಎಂಜಿನ್ ಅದರದೇ ಆದ ರೀತಿಯಲ್ಲಿ ವ್ಯವಹರಿಸಿತ್ತು. ಇದರ ಹೆಚ್ಚು ಬೇಗ ವೇಗಗತಿ ಪಡೆಯುವಿಕೆ ಓವರ್ಟೇಕ್ ಮಾಡಲು ವರಪ್ರದಾಯಕವಾಗಿತ್ತು, ಆದರೆ WR-V ಯೂ ಸಹ ಅಗಲವಾದ ರಸ್ತೆಗಳಲ್ಲಿ ಅದರದೇ ಆದ ರೀತಿಯಲ್ಲಿ ನೇರವಾದ ಮತ್ತು ವೇಗಯುಕ್ತವಾದ ಕಾರ್ಯದಕ್ಷತೆ ನೋಡಿಸಿತು. WR-V ಯು ಅದರ ಸಿಕ್ಸ್ ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಆರಾಮದಾಯಕವಾಗಿರುತ್ತದೆ, ಹಾಗಾಗಿ ಕಡಿಮೆ ವೇಗಗಳಲ್ಲಿ ಬ್ರೆಝ ದ ಫೈವ್ ಸ್ಪೀಡ್ ಗೇರ್ ಬಾಕ್ಸ್ ನಂತೆಯೇ ವರ್ತಿಸುತ್ತದೆ. ಹಾಗಾಗಿ WR-V ಯೂ ಸಹ ಬ್ರೆಝ ದಂತೆ ಹೆಚ್ಚು ಮೈಲೇಜ್ ಸಂಖ್ಯೆಗಳನ್ನು ಕೊಡುವಂತಾಗುತ್ತದೆ. ಮತ್ತು ಹೈವೆ ಗಳಲ್ಲಿ ನಮಗೆ 25.88kmpl ಕೊಟ್ಟಿತು, ಬ್ರೆಝ ದಲ್ಲಿ 25.30kmpl ದೊರೆತಿತ್ತು.
ರೈಡ್ ಮತ್ತು ಹ್ಯಾಂಡಲಿಂಗ್
ನಗರಗಳಲ್ಲಿ WR-V ಯು ತನ್ನ ಮೃದುವಾದ ಸಸ್ಪೆನ್ಷನ್ ನಿಂದ ಪ್ರಾರಂಭದಿಂದಲೇ ಹೆಚ್ಚು ಅಂಕ ಗಳಿಸುತ್ತದೆ . ಅದು ರಸ್ತೆಗಳ ವಕ್ರಗಳನ್ನು , ಅಂಕು ಡೊಂಕು ಗಳನ್ನೂ, ಮತ್ತಿ ದೊಡ್ಡದಾದ ಸ್ಪೀಡ್ ಬ್ರೇಕರ್ ಗಳನ್ನೂ ಸಹ ತೆಗೆದುಕೊಳ್ಳುತ್ತದೆ. ಮೃದುವಾದ ಸ್ಟಿಯರಿಂಗ್ ಸಹ ಡ್ರೈವ್ ಮಾಡಲು ಮತ್ತು ಪಾರ್ಕ್ ಮಾಡಲು ಸಹಕಾರಿಯಾಗಿದೆ.
ಬ್ರೆಝ ಇನ್ನೊಂದು ರೀತಿಯಲ್ಲಿ ಕಠಿಣ ಸಸ್ಪೆನ್ಷನ್ ಹೊಂದಿದೆ ಹಾಗಾಗಿ ನಿಮಗೆ ರಸ್ತೆಯ ಅಂಕು ಡೊಂಕುಗಳ ಅನುಭವ ಆಗುತ್ತದೆ ನಗರಗಳ ರಸ್ತೆಗಳಲ್ಲಿ ಹೋಗುವಾಗ. ಬ್ರೆಝ ದ ರೈಡ್ ಸ್ವಲ್ಪ ಕಠಿಣ ಎನಿಸಿದರೂ ಅದು ಒಂದು ಹಿನ್ನಡತೆ ಅಲ್ಲ, ನಿಮಗೆ ಹೆಚ್ಚು ವೇಗಗಳಲ್ಲಿ ಹೋಂಡಾ ಆರಾಮದಾಯಕವಾಗಿದೆ ಎಂದೆನಿಸುತ್ತದೆ.
ವೇಗಗತಿ ಹೆಚ್ಚಾದಾಗ ಅದರ ಕಥೆಯೇ ವಿಭಿನ್ನವಾಗಿರುತ್ತದೆ, ಬ್ರೆಝ ದ ಕಠಿಣತ್ವ ನಿಮಗೆ ಸರಿಯೆಂದೇ ಅನ್ನಿಸುತ್ತದೆ. ಅದರಲ್ಲಿ ಒಂದು ಅಚಲವಾದ ಚಾಸ್ಸಿಸ್ ಮತ್ತು ರಸ್ತೆಯ ಅಂಕು ಡೊಂಕು ಗಳನ್ನೂ ನಿಭಾಯಿಸುವುದು, ಹಾಗು ರಸ್ತೆಯ ವೈಪರೀತ್ಯಗಳು ಬ್ರೆಝ ವನ್ನು ಅಸ್ಟೇನು ಭಾದಿಸದು.
ಸ್ಟಿಯರಿಂಗ್ ಸಹ ಚೆನ್ನಾಗಿದ್ದು ನಿಮಗೆ ಸ್ಟಿಯರಿಂಗ್ ವೀಲ್ ನ ಮುಂದೆ ಕೂಡುವುದು ಒಂದು ಸುರಕ್ಷಿತ ವಾದ ಅನುಭವ ಆಗುತ್ತದೆ. WR-V ಯು ಹೆಚ್ಚುವೇಗಗಳಲ್ಲಿ ತಡವರಿಸುತ್ತದೆ ಮೃದುವಾದ ಸಸ್ಪೆನ್ಷನ್ ನಿಂದಾಗಿ ಪ್ಯಾಸೆಂಜರ್ ಗಳಿಗೆ ಎತ್ತಿಹಾಕಿದಂತಹ ಅನುಭವ ಆಗುತ್ತದೆ. ಬಹಳಷ್ಟು ಲಂಬ ಕೋಣದ ಅಲಗುವಿಕೆಯುನ್ನು ತಡೆಯಲಾಗುವುದಿಲ್ಲವಾದ್ದರಿಂದ ವೇಗಗತಿ ಪಡೆದಾಗ ಕಂಟ್ರೋಲ್ ಮಾಡಲು ಕಷ್ಟವಾಗುತ್ತದೆ. ಮತ್ತು ಸ್ಟಿಯರಿಂಗ್ ಸಹ ಬಹಳಷ್ಟು ಚೆನ್ನಾಗಿದೆ ಆದರೆ ಅದು ಬ್ರೆಝ ದಸ್ತು ಚೆನ್ನಾಗಿಲ್ಲ. ನೀವು ಹೈವೇ ಗಳಲ್ಲಿ ಹೆಚ್ಚು ದೂರದ ಪ್ರಯಾಣ ಮಾಡುವಂಥವರಾದರೆ ನೀವು ವಿಟಾರಾ ಬ್ರೆಝ ದಲ್ಲಿ ಹೆಚ್ಚು ಆರಾಮದಾಯಕವನ್ನು ಅನುಭವಿಸುವಿರು.
ಬ್ರೆಝ ದಲ್ಲಿ ತೀಕ್ಷ್ಣವಾದ ಎಂಜಿನ್ ಇದ್ದರೂ ಸಹ ಇದು ಡ್ರೈವ್ ಮಾಡಲು ಸಮಂಜಸವಾದ ಕಾರ್ ಆಗಿದೆ. ಗುಣಮಟ್ಟದ ಸ್ಟಿಯರಿಂಗ್, ಸುಲಭವಾಗಿ ಉಪಯೋಗಿಸಬಹುದಾದ ಗೇರ್ ಬಾಕ್ಸ್, ಮತ್ತು ಚೆನ್ನಾಗಿರುವ ಚಾಸ್ಸಿಸ್ ಇದಕ್ಕೆ ಪೂರಕವಾಗಿದೆ. ಬ್ರೇಕ್ ಗಳು ಬ್ರೆಝ ದಲ್ಲಿ WR-V ಗಿಂತಲೂ ಚೆನ್ನಾಗಿ ಸಹ ಮುಂದುವರೆದಿದೆ, ಮತ್ತು ಇದು ಬ್ರೇಕ್ ತಂತ್ರಜ್ಞಾನದಲ್ಲಿ ಉತ್ತಮವಾದ ಬೆಳವಣಿಗೆಯಾಗಿದೆ.
ಸುರಕ್ಷತೆ
WR-V ಯಲ್ಲಿ ABS, EBD , ಹಾಗು ಡುಯಲ್ ಏರ್ಬ್ಯಾಗ್ ಗಳನ್ನೂ ಕೊಡಲಾಗಿದೆ, ಇವೆಲ್ಲವೂ ಬ್ರೆಝ ದ ಎರೆಡು ಕೆಳ ವೇರಿಯೆಂಟ್ ಗಳಲ್ಲಿ ಆಯ್ಕೆಯಾಗಿ ಸಿಗುತ್ತದೆ, ಮತ್ತು ಇತರ ವೇರಿಯೆಂಟ್ ಗಳಲ್ಲಿ ಸ್ಟ್ಯಾಂಡರ್ಡ್ ಆಗಿ ದೊರೆಯುತ್ತದೆ. WR-V ಯಲ್ಲಿ ಬ್ರೇಕ್ ಓವರ್ ರೈಡ್ ಸಿಸ್ಟಮ್ ಸಹ ಸಿಗುತ್ತದೆ, ಇದು ಬ್ರೇಕ್ ಮತ್ತು ಆಕ್ಸಿಲರೇಟರ್ ಎರೆಡನ್ನು ಒಮ್ಮೆಗೆ ಒತ್ತಿದಾಗ ಆಕ್ಸಿಲರೇಟರ್ ಅನ್ನು ಹಿಂತೆಗೆಯುತ್ತದೆ. ಎರೆಡೂ ಕಾರ್ ಗಳಲ್ಲಿ ಟಾಪ್ ವೇರಿಯೆಂಟ್ ಗಳಲ್ಲಿ ರೇವೂರ್ ಪಾರ್ಕಿಂಗ್ ಕ್ಯಾಮೆರಾ ಇದೆ. ಆದರೆ ಬ್ರೆಝ ದಲ್ಲಿ ಪಾರ್ಕಿಂಗ್ ಸೆನ್ಸರ್ ಗಳು ಕೆಲ ಹಂತದ ವೇರಿಯೆಂಟ್ ಮತ್ತು ಟಾಪ್ ಎಂಡ್ ವೇರಿಯೆಂಟ್ ಗಳಲ್ಲೂ ಸಹ ಲಭ್ಯವಿದೆ.
ವೇರಿಯೆಂಟ್ ಗಳು
ಹೋಂಡಾ ನಿಮಗೆ ಇಂಧನ ಆಯ್ಕೆ ಕೊಡುತ್ತದೆ ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಕೊಡುವುದರೊಂದಿಗೆ. ಆದರೆ ಕೇವಲ ಎರೆಡು ಟ್ರಿಮ್ ಗಳಲ್ಲಿ ಮಾತ್ರ. ಬ್ರೆಝ ದಲ್ಲಿ ಕೇವಲ ಒಂದು ಎಂಜಿನ್ ಆಯ್ಕೆ ಇದೆ, ಆದರೆ ಆರು ವೇರಿಯೆಂಟ್ ಗಳ ಆಯ್ಕೆ ಇದೆ, ಮತ್ತು ಅದರ ನಾಲ್ಕು ಟ್ರಿಮ್ ಗಳಲ್ಲಿ ABS, EBD, ಹಾಗು ಡುಯಲ್ ಏರ್ಬ್ಯಾಗ್ ಗಳು ಸ್ಟ್ಯಾಂಡರ್ಡ್ ಆಗಿ ಸಿಗುತ್ತದೆ.
ಅಂತಿಮ ಅನಿಸಿಕೆ
WR-V ಯು ನಗರಗಳಲ್ಲಿನ ಉಪಯೋಗಕ್ಕೆ ಅದರದೇ ಆದ ರೀತಿಯಲ್ಲಿ ಹೆಚ್ಚು ಪ್ರಯೋಜನಕಾರಿಯಾಗಿದೆ. ನಗರಗಳ ಸುತ್ತ ಮುತ್ತ ಹೋಗುವಾಗ ನಿಮಗೆ ಅದರ ರೈಡ್ ಗುಣಮಟ್ಟ, ಮೃದುವಾದ ಸ್ಟಿಯರಿಂಗ್, ಇಷ್ಟವಾಗುತ್ತದೆ. ಆದರೆ ಹೈವೇ ಗಳಲ್ಲಿ ಇದು ಬ್ರೆಝ ಅಷ್ಟು ಸ್ಟೇಬಲ್ ಹಾಗು ಆರಾಮದಾಯಕವಾಗು ಇಲ್ಲ. ನಿಮಗೆ ಹೆಚ್ಚು ನಗರಗಳಲ್ಲಿ ಡ್ರೈವ್ ಮಾಡಲು ಬೇಕಾಗಿರುವ ಕಾರ್ ಹಾಗು ಅದರಲ್ಲಿ ಹೆಚ್ಚು ಜಾಗ, ಅನುಕೂಲತೆಗಳು ಮತ್ತು ಬಹಳಷ್ಟು ಆಶ್ಚರ್ಯಭರಿತ ಫೀಚರ್ ಗಳು ಬೇಕೆನಿಸಿದರೆ WR-V ನಂತರ ಯೋಚಿಸಬೇಡಿ. ಆದರೆ ನೀವು ಕ್ರಾಸ್ಒವರ್ ಮಾರ್ಕೆಟ್ ಮೆಚ್ಚಿದ್ದರೆ ಮತ್ತು ಹೆಚ್ಚು ಬಹುಮುಖಿ ಉಪಯೋಗಕರ ಮತ್ತು ಅಪ್ ಮಾರ್ಕೆಟ್ ಆಗಿರುವ ಕಾರ್ ಇಷ್ಟವಾದರೆ ನಿಮಗೆ ವಿಟಾರಾ ಬ್ರೆಝ WR-V ಕೊಡುವ ಎಲ್ಲ ಫೀಚರ್ ಗಳನ್ನೂ ಕೊಡುತ್ತದೆ ಹಾಗು ಹೆಚ್ಚು ಬಹುಮುಖಿ ಉಪಯೋಗಕಾರಿಯಾಗಿಯೂ ಇರುತ್ತದೆ ಹಾಗು SUV ತರಹದ ನಿಲುವು ಸಹ ಇರುತ್ತದೆ. ಬ್ರೆಝ ದ ಕೊರತೆಗಳು ಇದ್ದರೂ ಸಹ ಅದರ ಕಾರ್ಯದಕ್ಷತೆ ಹಾಗು ವಿದ ವಿದವಾದ ರಸ್ತೆ ಗಳಿಗೆ ಹೊಂದಿಕೊಳ್ಳುವಿಕೆ ಯಿಂದ ಮೆಚ್ಚುಗೆಯಾಗುತ್ತದೆ. ಹೆಚ್ಚು ಪ್ಯಾಸೆಂಜರ್ ಗಳ ಜೊತೆ ಪ್ರಯಾಣ ಮಾಡಲು, ಮತ್ತು ಆರಾಮದಾಯಕವಾದ ಪ್ರಯಾಣ ಮಾಡಲು ಹಾಗು ಮನೋರಂಜಿತವಾದ ಡ್ರೈವ್ ಮಾಡಲು ಸಹಕಾರಿಯಾಗುತ್ತದೆ.
Also Read: Comparison Review: Honda WR-V vs Hyundai i20 Active