• English
  • Login / Register

ಹುಂಡೈ ಕ್ರೆಟಾ vs ರೆನಾಲ್ಟ್ ಕ್ಯಾಪ್ಟರ್ vs ಮಾರುತಿ S-ಕ್ರಾಸ್ : ಡೀಸೆಲ್ ಮಾನ್ಯುಯಲ್ ಹೋಲಿಕೆ ವಿಮರ್ಶೆ

Published On ಜುಲೈ 02, 2019 By tushar for ಹುಂಡೈ ಕ್ರೆಟಾ 2015-2020

  • 1 View
  • Write a comment

ಫ್ರಾನ್ಸ್ ನವರು ಕೊರಿಯಾ  ಮತ್ತು ಜಪಾನ್ ಜೊತೆಗೆ ಹೋರಾಟ ಮಾಡುತ್ತಿದ್ದಾರೆ ಉಹಾತ್ಮಕವಾದ USV  ವರ್ಲ್ಡ್ ಕಪ್ ನಲ್ಲಿ ! ಯಾವ ಕಾರ್ ಟ್ರೋಫಿ ತೆಗೆದುಕೊಂಡು ಹೋಗುತ್ತದೆ?

Creta vs Captur vs S Cross

ಪರೀಕ್ಷಿಸಲಾದ ಕಾರ್ ಗಳು: ಹುಂಡೈ ಕ್ರೆಟಾ SX (O) /  ರೆನಾಲ್ಟ್ ಕ್ಯಾಪ್ಟರ್ ಪ್ಲೇಟಿನ್ / ಮಾರುತಿ ಸುಜುಕಿ S-ಕ್ರಾಸ್ 

ಎಂಜಿನ್:ಕ್ರೆಟಾ- 1.6-ಲೀಟರ್  4-ಸಿಲಿಂಡರ್ ಡೀಸೆಲ್ | 128PS/260Nm vs ಕ್ಯಾಪ್ಟರ್  - 1.5-ಲೀಟರ್  4-ಸಿಲಿಂಡರ್ ಡೀಸೆಲ್ | 110PS/240Nm vs S-ಕ್ರಾಸ್ 1.3-ಲೀಟರ್  4-ಸಿಲಿಂಡರ್ ಡೀಸೆಲ್  | 90PS/200Nm

ಕ್ರೆಟಾ ರೋಡ್ ಟೆಸ್ಟ್ ನ ಮೈಲೇಜ್:13.99kmpl (ಸಿಟಿ ) / 21.84kmpl (ಹೈವೇ )

ಕ್ಯಾಪ್ಟರ್ ರೋಡ್ ಟೆಸ್ಟ್ ನ ಮೈಲೇಜ್: 15.50kmpl (ಸಿಟಿ ) / 20.37kmpl (ಹೈವೇ )

S-ಕ್ರಾಸ್ ರೋಡ್ ಟೆಸ್ಟ್ ನ  ಮೈಲೇಜ್ :19.16(ಸಿಟಿ ) / 20.65kmpl (ಹೈವೇ)

ಟೆಸ್ಟ್ ಮಾಡಿದಾಗಿನ  ಬೆಲೆ: ಹುಂಡೈ ಕ್ರೆಟಾ: Rs 15.03 ಲಕ್ಷ  | ರೆನಾಲ್ಟ್ ಕ್ಯಾಪ್ಟರ್ : Rs 14.05 ಲಕ್ಷ  | ಮಾರುತಿ  S-ಕ್ರಾಸ್ : Rs 11.33 ಲಕ್ಷ (ಎಲ್ಲ ಬೆಲೆ ಎಕ್ಸ್ ಶೋ ರೂಮ್ ದೆಹಲಿ)

ಅನುಕೂಲಗಳು

ಹುಂಡೈ ಕ್ರೆಟಾ

 Creta vs Captur vs S Cross

  • ಕಾರ್ ನಂತೆ ಇರುವ ಡ್ರೈವಿಂಗ್ . ಸೂಕ್ಷ್ಮವಾದ ಕ್ಲಚ್ , ಸೂಕ್ಷ್ಮವಾದ ಸ್ಟಿಯರಿಂಗ್ ಮತ್ತು ಟ್ರಕ್ಟ್ಯಾಬಲ್ ಎಂಜಿನ್ ಇದನ್ನು ಸಿಟಿ ಹಾಗು ಹೈವೇ ಯಲ್ಲಿನ ಉಪಯೋಗಕ್ಕೆ ಉತ್ತಮವಾಗಿರಿಸುತ್ತದೆ 
  • ಸ್ಥಿರವಾದ ಫಿಟ್, ಫಿನಿಷ್, ಮತ್ತು ಬಿಲ್ಡ್ ಗುಣಮಟ್ಟ. 
  • ಆರಾಮದಾಯಕ ರೈಡ್ ಗುಣಮಟ್ಟ 
  • ಫೀಚರ್ ಗಳಿಂದ ಬರಿತ: ಟಚ್ ಸ್ಕ್ರೀನ್ ಮತ್ತು ಆಂಡ್ರಾಯ್ಡ್ ಆಟೋ /ಆಪಲ್ ಕಾರ್ ಪ್ಲೇ, ಸನ್ ರೂಫ್, ಪವರ್ ಡ್ರೈವರ್ ಸೀಟ್, ಆಟೋ AC , ಲೆಥರ್ ಹೊರಪದರಗಳು ಮುಂತಾದವು  

ರೆನಾಲ್ಟ್ ಕ್ಯಾಪ್ಟರ್

Creta vs Captur vs S Cross 

  • ಸದೃಢವಾದ ಬಿಲ್ಡ್ ಕ್ವಾಲಿಟಿ. ಒಂದು ಉತ್ತಮ ಯುರೋ ಕಾರ್ ತರಹ ಇದೆ 
  • ಮೆಚ್ಚುಗೆಯಾಗುವಂತಹ ರೈಡ್ ಗುಣಮಟ್ಟ. ಹತಿನ ಹಾಗು ಅತಿ ವೇಗದ ಅಳವಡಿಕೆಗಳೊಂದಿಗೆ ಸುಲಭವಾಗಿ ನಿಭಾಯಿಸಬಹುದಾಗಿದೆ. 
  • ಮೆಚ್ಚುಗೆಯಾಗುವಂತಹ ಶೈಲಿ: ಭಾರತದ್ಲಲಿರು ಎಲ್ಲದಕ್ಕಿಂತ ಭಿನ್ನವಾಗಿದೆ 
  • ಫೀಚರ್ ಗಳಿಂದ ಬರಿತ: ಟಚ್ ಸ್ಕ್ರೀನ್ ನೇವಿಗೇಶನ್ ಜೊತೆಗೆ, LED ಹೆಡ್ ಲೈಟ್ ಗಳು ಮತ್ತು ಫಾಗ್ ಲೈಟ್ ಗಳು, LED ಆಂತರಿಕ ಲೈಟಿಂಗ್, ಡೈಮಂಡ್ ಶೈಲಿಯಲ್ಲಿ ಮಾಡಲಾದ ಲೆಥರ್ ಹೊರಪದರಗಳು, ಸ್ಮಾರ್ಟ್ ಕಾರ್ಡ್ ಮುಂತಾದವು.

ಮಾರುತಿ ಸುಜುಕಿ S –ಕ್ರಾಸ್

Creta vs Captur vs S Cross

  • ವಿಶಾಲವಾದ ಕ್ಯಾಬಿನ್: ಉತ್ತಮ  5-ಸೆಟರ್ ಈ ಸ್ಪರ್ಧೆಯಲ್ಲಿ 
  • ಚೆನ್ನಾಗಿರುವ ರೈಡ್ ಗುಣಮಟ್ಟ: ಕಡಿಮೆ ಸ್ಪೀಡ್ ಆರಾಮದಾಯಕತೆ ಹೆಚ್ಚಿಸುತ್ತದೆ, ಉತ್ತಮ ಕಠಿಣ ರಸ್ತೆ ಕಾರ್ಯದಕ್ಷತೆ ಮತ್ತು ಹೈ ಸ್ಪೀಡ್ ಸ್ಟೆಬಿಲಿಟಿ. 
  • ಹೆಚ್ಚು ಮೈಲೇಜ್ ಕೊಡುತ್ತದೆ  ಸಿಟಿ ಗಳಲ್ಲಿ: ಪ್ರತಿನಿತ್ಯ ಉಪಯೋಗಕ್ಕೆ ಉತ್ತಮ ಆಯ್ಕೆ . 
  • ಫೀಚರ್ ಗಳಿಂದ ತುಂಬಲಾಗಿದೆ: ತೌಸ್ಚ್ ಸ್ಕ್ರೀನ್ ಆಂಡ್ರಾಯ್ಡ್ ಆಟೋ ಆಪಲ್ ಕಾರ್ ಪ್ಲೇ, ಆಟೋ AC , ಲೆಥರ್ ಹೊರಪದರ, ರೀಚ್ ಅಳವಡಿಕೆಯ ಸ್ಟಿಯರಿಂಗ್, LED ಪ್ರೊಜೆಕ್ಟರ್ ಹೆಡ್ ಲೈಟ್ಸ್. ಮುಂತಾದವು

ಅನಾನುಕೂಲಗಳು 

ಹುಂಡೈ ಕ್ರೆಟಾ

  • ದುಬಾರಿ, ಇತರ ಪ್ರತಿಸ್ಪರ್ದಿಗಳಿಗಿಂತ ಹೆಚ್ಚಿನ ಬೆಲೆ ಹೊಂದಿದೆ. 
  • ಕೆಲವು ವಿಚಿತ್ರ ಫೀಚರ್ ಬಿಟ್ಟಿರುವಿಕೆ:: ಆಟೋ ಹೆಡ್ ಲ್ಯಾಂಪ್ ಗಳು, ಆಟೋ ವೈಪರ್ ಗಳು, ISOFIX  ಕೇವಲ SX ಆಟೋಮ್ಯಾಟಿಕ್ ವೇರಿಯೆಂಟ್ ನಲ್ಲಿ ಕೊಡಲಾಗಿದೆ.

ರೆನಾಲ್ಟ್ ಕ್ಯಾಪ್ಟರ್ 

  • ವಿಶಲವಾದ ಕ್ಯಾಬಿನ್, ವಿಶೇಷವಾಗಿ ಹೊರಗಿನ ಅಳತೆಗಳನ್ನು ನೋಡಿದಾಗ 
  • ಭಾರವಾದ ಸ್ಟಿಯರಿಂಗ್, ತೂಕದ ಮತ್ತು ಉದ್ದನೆಯ ಟ್ರಾವೆಲ್ ಇರುವ ಕ್ಲಚ್, ಟರ್ಬೊ ಲ್ಯಾಗ್  ಮತ್ತು ಶಾರ್ಟ್ ಗೇರ್ ರೇಶಿಯೋ ಇದನ್ನು ಸಿಟಿ ಟ್ರಾಫಿಕ್ ನಲ್ಲಿ ಬಳಸಲು ಕಷ್ಟವಾಗುವಂತೆ ಮಾಡುತ್ತದೆ. 
  • ಎರ್ಗೋನಾಮಿಕ್ ಹಿನ್ನಡತೆಗೆಳು: ಡಿಫಾಲ್ಟ್ ಡ್ರೈವರ್ ಸೀಟ್  ತುಂಬಾ ದೊಡ್ಡದಾಗಿದೆ, ಸ್ವಿಚ್ ಗೇರ್ ನ ಸ್ಥಾನ ಗೊಂದಲ ಉಂಟು ಮಾಡುತ್ತದೆ. ಟಚ್ ಸ್ಕ್ರೀನ್ ಅನ್ನು ವಿಚಿತ್ರವಾದ ಕೋನದಲ್ಲಿ ಇಡಲಾಗಿದೆ, ಮತ್ತು ಬೆಳಗಿನ ಸಮಯದಲ್ಲಿ ಸೂರ್ಯನ ಕಿರಣಗಳಿಂದ ಸ್ವಲ್ಪ ಗ್ಲೆರ್ ಆಗುತ್ತದೆ.

ಮಾರುತಿ ಸುಜುಕಿ S -ಕ್ರಾಸ್ 

  • ಸೈಡ್ ಮತ್ತು ಕರ್ಟನ್ ಏರ್ಬ್ಯಾಗ್ ಗಳನ್ನೂ ಮಿಸ್ ಮಾಡುತ್ತದೆ. ಇದಕ್ಕಿಂತ ಒಂದು ಅಥವಾ ಎರೆಡು ವಿಭಾಗ ಕೆಲ ಹಂತದ ಕಾರ್ ಗಳಲ್ಲಿ ಇದನ್ನು ಕೊಡಲಾಗಿದೆ. 
  • ಸ್ವಲ್ಪ ಮಟ್ಟಿಗೆ ಟರ್ಬೊ ಲ್ಯಾಗ್ ಇದ್ದು ಅದನ್ನು ಬಳಸಲು ಸ್ವಲ್ಪ ಸಮಯ ಹಿಡಿಯುತ್ತದೆ.

ವಿಭಿನ್ನವಾದ ಫೀಚರ್ ಗಳು 

ಹುಂಡೈ ಕ್ರೆಟಾ 

Creta vs Captur vs S Cross

  • ವಿದ್ಯುತ್ ಅಳವಡಿಕೆಯ ಡ್ರೈವರ್ ಸೀಟ್ 
  • ದುನ್ ರೂಫ್ 
  • ರೇವೆರ್ಸಿಂಗ್ ಕ್ಯಾಮೆರಾ ಗೆ ಡೈನಾಮಿಕ್ ಗೈಡ್ ಲೈನ್ ಅನ್ನು ಕೊಡಲಾಗಿದೆ. 
  • ವಯರ್ಲೆಸ್ ಫೋನ್ ಚಾರ್ಜರ್ 

ರೆನಾಲ್ಟ್ ಕ್ಯಾಪ್ಟರ್ 

Creta vs Captur vs S Cross

  • LED  ಹೆಡ್ ಲೈಟ್ ಮತ್ತು ಫಾಗ್ ಲೈಟ್ ಗಳು 
  • LED ಇಂಟೀರಿಯರ್ ಲೈಟ್ ಗಳು 
  • ಡೈಮೆಂಡ್ ಕ್ವಿಲ್ಟೆಡ್ಲೆಥರ್ ಮೇಲ್ಪದರಗಳು

ಮಾರುತಿ ಸುಜುಕಿ S -ಕ್ರಾಸ್ 

Creta vs Captur vs S Cross

  • ರೀಚ್ ಸರಿಹೊಂದಿಸಬಹುದಾದ  ಸ್ಟಿಯರಿಂಗ್ 
  • LED ಪ್ರೊಜೆಕ್ಟರ್ ಫಾಗ್ ಲೈಟ್ ಗಳು 
  • ರೇರ್ ವೀಲ್ ಡಿಸ್ಕ್ ಬ್ರೇಕ್

ಬಾಹ್ಯ 

Creta vs Captur vs S-Cross

ಒಂದಂತೂ ನಿಜ, ಸ್ಟೈಲಿಂಗ್ ವಿಚಾರಕ್ಕೆ ಬಂದಾಗ , ಗ್ರಾಹಕರು  ಈ ವಿಭಾಗದಲ್ಲಿ ಯಾವುದು  ಕೊಳ್ಳಬೇಕೆಂಬ ಗೊಂದಲಕ್ಕೆ ಈಡಾಗುತ್ತಾರೆ. ಹುಂಡೈ ನವರು ಸಾಂಪ್ರದಾಯಿಕ SUV  ನಿಲುವನ್ನು ತೆಗೆದುಕೊಂಡಿದ್ದಾರೆ ಈ ಡಿಸೈನ್ನಲ್ಲಿ, ಮಾರುತಿ ಸುಜುಕಿ S -ಕ್ರಾಸ್ ಹಾಗು ರೆನಾಲ್ಟ್ ಕ್ಯಾಪ್ಟರ್ ಎರಡೂ ಕ್ರಾಸ್ ಓವರ್ ಗಳಾಗಿವೆ.

Dimensions

Creta

S-Cross

Captur

Length

4270mm

4300mm

4329mm

Width

1780mm

1785mm

1813mm

Height

1630mm

1595mm

1619mm

Wheelbase

2590mm

2600rpm

2673mm

Creta vs Captur vs S-Cross

 ಆದರೂ, ಇವೆಲ್ಲವುಗಳಲ್ಲಿ  ಸಾಮಾನ್ಯವಾಗಿರುವ ವಿಚಾರ ಎಂದರೆ ಇವೆಲ್ಲ ಒಂದು ಸದೃಢ ನಿಲುವನ್ನು ಕೊಡುತ್ತದೆ. S-ಕ್ರಾಸ್ ನಲ್ಲಿ ಬಹಳಷ್ಟು ಬಲವಾದ ಗೆರೆಗಳನ್ನು ಬಾನೆಟ್ ಮತ್ತು ಬಾಡಿ ಪ್ಯಾನೆಲ್ ಮೇಲೆ ಹೊಂದಿದೆ, ಮತ್ತು ಈ ವಿಭಾಗದಳ್ಳಿ ಸ್ಟೇಬಲ್ ಕಪ್ಪು ಬಾಡಿ ಜೊತೆಗೆ  ಕ್ಲಾಡ್ಡಿಂಗ್  ಕೊಡಲಾಗಿದೆ. ಇದು ಇಲ್ಲಿ ಎಲ್ಲ ಕಾರ್ ಗಳಿಗಿಂತ  ಎಲ್ಲ ಅಳತೆಗಳಲ್ಲಿ  ಚಿಕ್ಕದಾಗಿದ್ದರೂ ( ವೀಲ್ ಗಳನ್ನೂ ಸೇರಿ, S -ಕ್ರಾಸ್ ನಲ್ಲಿ 16-ವೀಲ್ ಗಳು ಇವೆ ಕ್ರೆಟಾ ಮತ್ತು ಕ್ಯಾಪ್ಟರ್ ನ 17-ಇಂಚು ಗಳಿಗೆ ಹೋಲಿಸಿದಾಗ), S-ಕ್ರಾಸ್ ಗೆ ಒಂದು ದೃಢವಾದ ನಿಲುವು ಇದೆ. ಇದರಲ್ಲಿ ಉತ್ತಮವಾದ 180mm ಗ್ರೌಂಡ್ ಕ್ಲಿಯರೆನ್ಸ್ ಇದೆ, ನಿಮಗೆ ಎಲ್ಲ ತರಹದ ರಸ್ತೆಗಳಲ್ಲಿ ತಿರುಗಾಡಲು ಅನುಕೂಲವಾಗುವಂತೆ.

Creta vs Captur vs S-Cross

ಆದರೆ, ನಿಮಗೆ ರಸ್ತೆಯಲ್ಲಿನ ನಿಲುವು ಪ್ರಾಮುಖ್ಯತೆ ಪಡೆದರೆ, ರೆನಾಲ್ಟ್ ಡಸ್ಟರ್ ಅಚ್ಚುಮೆಚ್ಚು ಆಗುತ್ತದೆ. ಇದರಲ್ಲಿರುವ ಕೋನಗಳುಳ್ಳ ಸ್ಟೈಲಿಂಗ್ ಮತ್ತು ಸುತ್ತಲಿನ ಹೌನ್ಚ್ ಗಳು ನಿಮಗೆ ಇದು ಕಾಂಪ್ಯಾಕ್ಟ್ ಎಂಬ ಭಾವನೆ ಕೊಡುತ್ತದೆ, ಕ್ಯಾಪ್ಟರ್ ವಾಸ್ತವದಲ್ಲಿ ಉದ್ದವಾಗಿದೆ ಮತ್ತು ಅಗಲವಾಗಿ ಇರುವ ಊಹೆಯ -SUV ಆಗಿದೆ ಈ ಹೋಲಿಕೆಯಲ್ಲಿ, ಮತ್ತು ಇದಕ್ಕೆ ಉದ್ದನೆಯ ವೀಲ್ ಬೇಸ್ ಸಹ ಇದೆ. ಇದರಲ್ಲಿ ಕೊಡಲಾಗಿರುವ  17-ಇಂಚು ವೀಲ್ ಗಳು ನೋಡಲು ಕಾನ್ಸೆಪ್ಟ್ ಕಾರ್ ಗಳಿಂದ ನೇರವಾಗಿ  ತೆಗೆದುಕೊಂಡ ಹಾಗೆ ಇದೆ. ಇದರಲ್ಲಿರುವ  210mm ಗ್ರೌಂಡ್ ಕ್ಲಿಯರೆನ್ಸ್ ನಿಂದಾಗಿ ರೆನಾಲ್ಟ್ ನಿಮಗೆ ಎದೆ ಉಬ್ಬುವಂತೆ ಮಾಡುತ್ತದೆ, ನೀವು  ಬಡ ಹಾಯ್ ಟು ಬೆಹ್ತಾರ್ ಹಾಯ್ ಎಂಬ ಆಡು ಮಾತನ್ನು ಹೆಚ್ಚು ಅನುಸರಿಸುವವರಾಗಿದ್ದರೆ (ದೊಡ್ಡದು ಉತ್ತಮ !).

Ground Clearance

Creta

S-Cross

Captur

Unladen Figures

190mm

180mm

210mm

S-ಕ್ರಾಸ್ ಹಾಗು ಕ್ಯಾಪ್ಟರ್ ಎರೆಡರಲ್ಲೂ ಆಶ್ಚರ್ಯಕರ ಡಿಸೈನ್  ತುಣುಕುಗಳು ಇವೆ, ಮಾರುತಿಯಾ LED ಪ್ರೊಜೆಕ್ಟರ್ ಹೆಡ್ ಲೈಟ್ ಗಳು ಮತ್ತು ರೆನಾಲ್ಟ್ ನ LED ಹೆಡ್ ಲೈಟ್ ಗಳು ಜೊತೆಗೆ LED ಫಾಗ್ ಲೈಟ್ ಗಳು. ಹೋಲಿಕೆಯಲ್ಲಿ 2018 ಕ್ರೆಟಾ ಹಿಂದುಳಿಯುತ್ತದೆ. ಕ್ರೆಟಾ ಫೇಸ್ ಲಿಫ್ಟ್ ನಲ್ಲಿ ಹೊಸ ಮುಂಬದಿಯ ಗ್ರಿಲ್ ಇದೆ ಅಂದು ನೋಡಲು ಆಕರ್ಶಕವಾಗಿದೆ, 17-ಇಂಚು ವೀಲ್ ಗಳು ನೋಡಲು ಸ್ಪರ್ಧಾತ್ಮಕವಾಗಿದೆ. ಇದರಲ್ಲಿ ಹೊಸ ಬಂಪರ್ ಗಳಲ್ಲಿ DRL ಗಳನ್ನೂ ಸಂಯೋಜಿಸಲಾಗಿದೆ ಅದು ಹೊರಗಡೆ ಮಾರ್ಕೆಟ್ ನಿಂದ ತಂದು ಫಿಟ್ ಮಾಡಿದ ಹಾಗೆ ಕಾಣಿಸುತ್ತದೆ. ಕ್ರೆಟಾ ದ ಹೆಚ್ಚು ಆಕರ್ಷಕ ವಿಷಯವೆಂದರೆ ಅದು ಅದರ ಮೊನಚಾದ ಕೋಣೆಗಳು. ಹಾಗಾಗಿ, ಮಿಕ್ಕ ಎರೆಡರಲ್ಲಿ ಸ್ವಲ್ಪ ಹ್ಯಾಚ್ ಬ್ಯಾಕ್ ನ ನಿಶಾನೆ ಗಳು ತೋರಬಂದರೂ , ಕ್ರೆಟಾ ಡಾ ಸ್ಟೈಲಿಂಗ್ ಇದನ್ನು S-U-V ಎನ್ನುತ್ತದೆ. ಇದು ಅತಿ ಎತ್ತರದ ಸ್ಪರ್ದಿ ಆಗಿದೆ ಇಲ್ಲಿ, ಮತ್ತು ಇದರಲ್ಲಿ ಉತ್ತಮವಾದ 190mm ಗ್ರೌಂಡ್ ಕ್ಲಿಯರೆನ್ಸ್ ಇದೆ.

ಆಂತರಿಕಗಳು

ಎಲ್ಲ ಮೂರು ಸ್ಪರ್ದಿಗಳು  ಟ್ರೂ ಬ್ಲೂ SUV ಗಳಂತೆ ಕಂಡರೂ, ಇಂಗ್ರೆಸ್ಸ್ /ಎಗ್ರೆಸ್ಸ್ ಗಳು ಕಾರ್ ಗಳ  ತರಹ ಇದೆ. ಸುಲಭವಾಗಿ ಒಳಕ್ಕೆ ಹೋಗಲು ಅನುವುಮಾಡಿಕೊಡುವುದು ಮಾರುತಿ S-ಕ್ರಾಸ್ ಆಗಿದೆ. ಇದರಲ್ಲಿ ಸರಿಯಾದ ಎತ್ತರ ಇದೆ ಮತ್ತು ಸೀಟ್ ಗಳಿಗೆ ತಲುಪಲು ಬಹಳಷ್ಟು ಅಗಲವಾದ ಸ್ಥಳಾವಕಾಶ ಇದೆ, ಹಾಗಾಗಿ ಇದು ವಯೋ ವೃದ್ಧರಿಗೆ ಮೆಚ್ಚುಗೆಯಾಗುತ್ತದೆ. ಹುಂಡೈ ಕ್ರೆಟಾ ದಲ್ಲೂ ಸಹ ಒಳಗೆ ಹೋಗಲು ಮತ್ತು ಹೊರಕ್ಕೆ ಬರಲು ಸುಲಭವಾಗಿದೆ, ಆದರೆ ಬಡಿಗಲ್ಲಿರುವ ಸಿಲ್ ಗಳು ಸ್ವಲ್ಪ ಮಟ್ಟಿಗೆ ವಯೋ ವೃದ್ಧರಿಗೆ  ಸವಾಲು ಒಡ್ಡುತ್ತದೆ. ಕ್ಯಾಪ್ಟರ್ ನಲ್ಲಿ ಈ ವಿಚಾರದಲ್ಲಿ ಸ್ವಲ್ಪ ಹಿನ್ನಡತೆ ಇದೆ. ಡೀಫಾಲ್ಟ್ ಆಗಿರುವ ಡ್ರೈವರ್ ಸೀಟ್ ಎತ್ತರ ಕುಳ್ಳಗಿರುವ ಡ್ರೈವರ್ ಗಳಿಗೆ ಹತ್ತಿ ಕೂಡುವ ಅನುಭವ ಕೊಡುತ್ತದೆ. ಹಾಗು, ಹಿಂಬದಿಯ ಪ್ಯಾಸೇಜು ಕಡಿದಾಗಿದೆ ಎಂದೆನಿಸುತ್ತದೆ, ಮತ್ತು ಅದು ವಯೋ ವೃದ್ಧರಿಗೆ ಅನುಕೂಲಕರವಾಗಿಲ್ಲ.

ನೀವು ಒಮ್ಮೆ ಡ್ರೈವರ್ ಸೀಟ್ ನಲ್ಲಿ ಕುಳಿತರೆ, ಈ ಎಲ್ಲ ಮೂರು ಕಾರ್ ಗಳಲ್ಲಿ ನಿಮಗೆ ಎತ್ತರದ ನಿಲುವುನ ಡ್ರೈವಿಂಗ್ ಅನುಭವ ಉಂಟಾಗುತ್ತದೆ. ನೀವು ಯಾವುದನ್ನೂ ಆಯ್ಕೆ ಮಾಡಿದರೂ ಸಹ, ನೀವು ಬಾನೆಟ್ ಮೇಲಿನಿಂದ ನೋಡಬಹುದು, ಮತ್ತು ನಿಮಗೆ ಇತರ ವಾಹನ ಬಳಸುವವರಿಗಿಂತ ಸ್ವಲ್ಪ ಎತ್ತರದಲ್ಲಿ ಇರುವ ಅನುಭವ ಉಂಟಾಗುತ್ತದೆ. ಅವುಗಳಲ್ಲಿ ಅಗಲವಾದ ಗ್ಲಾಸ್ ಏರಿಯಾ ಇದೆ, ಹಾಗಾಗಿ ಕ್ಯಾಬಿನ್ ವಿಶಾಲವಾಗಿದೆ ಎಂದೆನಿಸುತ್ತದೆ. ಆದರೆ ಕ್ಯಾಪ್ಟರ್ ನ ಡ್ರೈವರ್ ಸೀಟ್ ಎತ್ತರಕ್ಕೆ ಒಂದು ನಮನ, ಎತ್ತರವಾಗಿರುವ ಡ್ರೈವರ್ ಗಳಿಗೆ  (6 ಅಡಿ ಮತ್ತು ಅದಕ್ಕಿಂತ ಎತ್ತರ) ರೂಫ್ ಲೈನರ್ ನಿಂದಾಗಿ ಹೊರಗಡೆಯ ನೋಟಕ್ಕೆ ಅಡ್ಡವಾಗುತ್ತದೆ. ಮತ್ತು ಈ ವಿಚಾರದಲ್ಲಿ ಕ್ಯಾಪ್ಟರ್ ನ ಎರ್ಗೋನೊಮಿಕ್ಸ್ ಗಳು ನಿಮಗೆ ಇರುಸು ಮುರುಸು ಉಂಟುಮಾಡುತ್ತದೆ.

Creta vs Captur vs S-Cross

ನೀವು ರೆನಾಲ್ಟ್ ಅನ್ನು ಈ ಹಿಂದೆ ಹೊಂದಿರದಿದ್ದಲ್ಲಿ , ಕಂಟ್ರೋಲ್ ಗಳು ನಿಮಗೆ ನೈಸರ್ಗಿಕವಾಗಿ ಹೊಂದಾಣಿಕೆ ಆಗುವುದಿಲ್ಲ. ಉದಾಹರಣೆಗೆ, ಕ್ರೂಸ್ ಕಂಟ್ರೋಲ್ ನ ಆಕ್ಟಿವಾಷನ್ ಸ್ವಿಚ್ ಡ್ರೈವರ್ ನ ಮೊಣಕಾಲಿನ ಬಳಿ ಕೊಡಲಾಗಿದೆ, ಮತ್ತು ಇತರ ಸೆಟ್ಟಿಂಗ್ ಗಳನ್ನೂ ಸ್ಟಿಯರಿಂಗ್ ನಿಂದ ನಿರ್ವಹಿಸಲಾಗಿದೆ. ಆಡಿಯೋ ಕಾರ್ಯಗಳನ್ನು ಸಹ ಸ್ಟಿಯರಿಂಗ್ ವೀಲ್ ಹಿಂಬದಿಯಿಂದ ಮಾಡಲಾಗುತ್ತದೆ, ಮತ್ತು ಅವು ಉಪಯೋಗಿಸಲು ಪ್ರಾರಂಭದಲ್ಲಿ  ಹಲವು ಬಾರಿ ಉಪಾಯವನ್ನು ಮಾಡಬೇಕಾಗಿ ಬರುತ್ತದೆ.ಪುಶ್ ಬಟನ್ ಸ್ಟಾರ್ಟ್ ಅನ್ನು ಸಹ ಸೆಂಟರ್ ಕನ್ಸೋಲ್ ನಲ್ಲಿ ಕೆಲ ಮಟ್ಟದಲ್ಲಿ ಇಡಲಾಗಿದೆ, ಹಾಗೆಯೆ ಆಟೋ AC ಕಂಟ್ರೋಲ್ ಸಹ. ನಿಮಗೆ ಕ್ಯಾಪ್ಟರ್ ನ  ಚಮತ್ಕಾರಗಳು ಒಪ್ಪಿಗೆಯಾಗುತ್ತವೆಯೇ? ಕೆಲವೇ ನಿಮಿಷಗಳಲ್ಲಿ ಹಾಗೆ ಸಂಪೂರ್ಣವಾಗಿ ಒಪ್ಪಿಗೆಯಾಗಲಾರದು, ಹಲವುಬಾರಿ ಶೋ ರೂಮ್ ನಿಂದ ಆಚೆ ಹೋಗಲು ಪ್ರೇರೇಪಿಸಬಹುದು ಕೂಡ.

Creta vs Captur vs S-Cross

ತದ್ವಿರುದ್ಧವಾಗಿ S-ಕ್ರಾಸ್ ಹಾಗು ಕ್ರೆಟಾ ಗಾಲ ಲೇಔಟ್ ನಲ್ಲಿ  ಯಾವ ಕಂಟ್ರೋಲ್ ಎಲ್ಲಿದೆ ಎಂದು ಸುಲಭವಾಗಿ ತಿಳಿದುಕೊಳ್ಳಬಹುದು, ಮತ್ತು ಅದು ಸಾಧಾರಣವಾಗಿಯೇ ತಿಳುದುಕೊಳ್ಳುವಂತೆ ಇದೆ. ಕ್ರೆಟಾ ದಲ್ಲಿರುವ ಒಂದು ಕಿರಿಕಿರಿ ಎಂದರೆ ಬ್ಯುಸಿ ಸ್ಟಿಯರಿಂಗ್ ವೀಲ್, ಕ್ಯಾಪ್ಟರ್ ನಂತೆ ಇದರಲ್ಲಿ ರೀಚ್ ಸರಿಪಡಿಸುವಿಕೆ ಕೊಡಲಾಗಿಲ್ಲ, ಇದು S -ಕ್ರಾಸ್ ನಲ್ಲಿ ಕೊಡಲಾಗಿದೆ.

Creta vs Captur vs S-Cross 

S-ಕ್ರಾಸ್ ನಲ್ಲಿ ಚೆನ್ನಾಗಿರುವ ಇನ್ನೊಂದು ವಿಷಯ ಎಂದರೆ ಅದು ಕ್ಯಾಬಿನ್ ವಿಶಾಲತೆ. ಇದು ಹೊರಗಡೆಯಿಂದ ಅತಿ ಚಿಕ್ಕ ಕಾರ್ ಎಂದೆನಿಸಿಕೊಂಡರೂ, ಮಾರುತಿ ಸುಜುಕಿ ಒಳಗಿನ ಸ್ಥಳವನ್ನು ಬುದ್ದಿವಂತಿಕೆಯಿಂದ ಬಳಸಿಕೊಂಡಿದೆ. ಇಬ್ಬರು ಆರು ಅಡಿ ವ್ಯಕ್ತಿಗಳು ಒಬ್ಬರ ಹಿಂದೆಯೊಬ್ಬರು ಸುಲಭವಾಗಿ ಕುಳಿತುಕೊಳ್ಳಬಹುದು , ಮತ್ತು ವಿಶಾಲವಾಗಿರುವ ಶೌಲ್ಡರ್ ರೂಮ್ ಮೂವರು ವ್ಯಕ್ತಿಗಳು ಕುಳಿತುಕೊಳ್ಳಲು ಅನುವುಮಾಡಿಕೊಡುತ್ತದೆ.  ಮದ್ಯದಲ್ಲಿ ಕುಳಿತ ವ್ಯಕ್ತಿ ಮದ್ಯ ಅಳತೆಯ ಉಬ್ಬುಗಳಿಗೆ ಹೊಂದಿಕೊಡು ಕುಳಿತುಕೊಳ್ಳಬೇಕಾಗುತ್ತದೆ. ನಮಗೆ ಅನಿಸುವಂತೆ ಮಾರುತಿ ಸುಜುಕಿ ಇನ್ನಷ್ಟು ಹೆಡ್ ರೂಮ್ ಅನ್ನು ಕೊಡಬಹುದಿತ್ತು, ಆರು ಅಡಿ ಎತ್ತರದ ವ್ಯಕ್ತಿಗೆ ಇದು ಇಲ್ಲದಾಗಿದೆ.

Measurements (Rear)

Creta

S-Cross

Captur

Rear Shoulder Room

1250mm

1350mm

1280mm

Rear Head Room

980mm

925mm

945mm

Rear Knee Room

615mm-920mm

675mm-910mm

640mm-850mm

Rear Seat Base Width

1260mm

1265mm

1245mm

Rear Seat Base Length

450mm

470mm

460mm

Rear Seat Back Height

640mm

590mm

590mm

Measurements (Front)

Creta

S-Cross

Captur

Legroom (min-max)

925-1120mm

955-1850mm

945-1085

Knee room (min-max)

610-840mm

565-778mm

540-730mm

Seat base length

595mm

490mm

490mm

Seat base width

505mm

480mm

505mm

Seat back height

645mm

605mm

660mm

Headroom (min-max)

920-980mm

965-1010mm

940-990mm

Cabin width

1400mm

1405mm

1355mm

 Hyundai Creta

ಕ್ಯಾಬಿನ್ ವಿಶಾಲತೆ ವಿಚಾರಕ್ಕೆ ಕ್ರೆಟಾ ಗೆ ಎರೆಡನೆ ಸ್ಥಾನ ಲಭಿಸುತ್ತದೆ. ಇದರಲ್ಲಿ ಬಹಳಷ್ಟು ಮೊಣಕಾಲಿನ ಜಾಗ ಮತ್ತ್ತು ಹೆಡ್ ರೂಮ್ ಇದೆ ನಾಲ್ಕು ವ್ಯಕ್ತಿಗಳಿಗೆ ಅನುವಾಗುವಂತೆ. ಆದರೆ ಹಿಂಬದಿಯ ಶೌಲ್ಡರ್ ರೂಮ್ ಹುಂಡೈ ವೆರ್ನಾ ಗಿಂತಲೂ ಕಡಿಮೆ ಇದೆ, ಹಾಗಾಗಿ ಇದು 5-ಸೆಟರ್ ಎಂದೆನಿಸಿಕೊಳ್ಳುವುದಿಲ್ಲ. ಇಲ್ಲಿ ಭಿನ್ನವಾಗಿರುವುದು ರೆನಾಲ್ಟ್ ಕ್ಯಾಪ್ಟರ್. ಇದು ಹೊರಗಡೆಯಿಂದ ದೊಡ್ಡದಾಗಿ ಕಂಡರೂ , ಕ್ಯಾಬಿನ್ ನ ಸ್ಥಳಾವಕಾಶವನ್ನು ಸರಿಯಾಗಿ ಬಳಸಿಕೊಳ್ಳಲಾಗಿಲ್ಲ. ಒಟ್ಟಾರೆ ಹಿಂಬದಿಯ ಸೀಟ್ ನ ಮೊಣಕಾಲು ಜಾಗ ಕಡಿಮೆಯಿದೆ ಎಂದೆನಿಸುತ್ತದೆ , ಆದರೂ ಶೌಲ್ಡರ್ ರೂಮ್ ಕ್ರೆಟಾ ಗಿಂತಲೂ ಹೆಚ್ಚು ಇದ್ದು ಮೂರು ವ್ಯಕ್ತಿಗಳಿಗೆ ಕುಳಿತುಕೊಳ್ಳಲು ಅನುವುಮಾಡಿಕೊಡುತ್ತದೆ. ಆದರೂ ಇದು ಒಟ್ಟಾರೆ ಚಿಕ್ಕದಾಗಿದೆ ಎಂದೆನಿಸುತ್ತದೆ ಇತರ ಎರೆಡಕ್ಕೆ ಹೋಲಿಸಿದಾಗ. 

ಅದೃಷ್ಟವಶಾತ್, ಕ್ಯಾಪ್ಟರ್ ನ ಕ್ಯಾಬಿನ್ ಗುಣಮಟ್ಟ ಮೆಚ್ಚುವಂತೆ ಇದೆ. ಅದರಲ್ಲೂ ಟಚ್ ಮತ್ತು ಫೀಲ್ ವಿಷಯದಲ್ಲಿ, ಇದು ಓಟರ್ ಚೆನ್ನಾಗಿ ಬಿಲ್ಡ್ ಮಾಡಲಾಗಿದೆ ಎಂದೆನಿಸುತ್ತದೆ ಮತ್ತು ಲೆಥರ್ ನ ಗುಣಮಟ್ಟ ದ ಆಯ್ಕೆ ಚೆನ್ನಾಗಿದೆ ಎಂದೆನಿಸುತ್ತದೆ. ಕ್ಯಾಬಿನ್ ನಲ್ಲಿ  ಎಲ್ಲ ಕಡೆ ಹಾರ್ಡ್ ಪ್ಲಾಸ್ಟಿಕ್ ಗಳು ಇವೆ, ಅದು ಒಟ್ಟಾರೆ ದೃಢತೆಗೆ ಸೇರುತ್ತದೆ, ಆದರೆ ಸ್ವಲ್ಪ ಮೃದುವಾದ ತುಣಿಕುಗಳು ಇದಿದ್ದರೆ ಚೆನ್ನಾಗಿರುತ್ತಿತ್ತು ಎಂದೆನಿಸುತ್ತದೆ.

 Maruti S-Cross

S-ಕ್ರಾಸ್ ಸಹ ಚೆನ್ನಾಗಿ ಮಾಡಲಾಗಿದೆ ಎಂದೆನಿಸುತ್ತದೆ, ಮತ್ತು ಲೆಥರ್ ಹಾಗು ಸಾಫ್ಟ್ ಟಚ್ ಡ್ಯಾಶ್ ಬೋರ್ಡ್ ಇನ್ಸರ್ಟ್ ಗಳು ಅನುಭಾವಕ್ಕೆ ಸೇರುತ್ತದೆ. ಪ್ಲಾಸ್ಟಿಕ್ ಗುಣಮಟ್ಟ ದ ಫಿನಿಶಿಂಗ್ ಕೂಡ ಚೆನ್ನಾಗಿದೆ ಎಂದೆನಿಸುತ್ತದೆ ಆದರೆ ಮಾರುತಿ ಯಲ್ಲಿ ಸಾಧಾರಣವಾಗಿರುವಂತೆ ಇದರಲ್ಲೂ ಕೊಡಲಾಗಿದೆ. ಹಾಗು, ತುಣಿಕು ವಿಚಾರಗಳಾದ ಪವರ್ ವಿಂಡೋ ಸ್ವಿಚ್ ಗಳನ್ನು  ಈಗಲೂ ಸಹ  ಕಡಿಮೆ ಬೆಲೆಯ ಮಾರುತಿ ಕಾರ್ ಗಳೊಂದಿಗೆ ಹಂಚಿಕೊಳ್ಳಲಾಗಿದೆ, ಹಾಗಾಗಿ ಅದು ಒಂದು ಹಿನ್ನಡತೆ ಆಗಿದೆ.

Hyundai Creta

ಕ್ರೆಟಾ ಈ ವಿಚಾರದಲ್ಲಿ ಉತ್ತಮವಾಗಿದೆ. ಪ್ಲಾಸ್ಟಿಕ್ ಗಟ್ಟಿಯಾಗಿದೆ ಎಂದೆನಿಸುತ್ತದೆ ಆದರೆ ಮೃದುವಾದ ಫಿನಿಷ್ ಹೊಂದಿದೆ. ಕ್ಯಾಬಿನ್ ನ ಯಾವುದೇ ಭಾಗ ಒರಟಾಗಿ/ ಅಥವಾ ಕಡಿಮೆ ಬೆಳೆಯದ್ದು ಎನ್ನುವಂತಿಲ್ಲ ಮತ್ತು ಆಶ್ಚರ್ಯವುಂಟಾಗುವುದು ಯಾವುದು ಇಲ್ಲವಾದರೂ , ನಿಮಗೆ ನಿಮ್ಮ ಹಣಕ್ಕೆ ತಕ್ಕುದಾದ ಮೌಲ್ಯ ಸಿಕ್ಕಿದೆ ಎಂದೆನಿಸುತ್ತದೆ. ಮತ್ತು ಹಣಕ್ಕೆ ತಕ್ಕ ಫೀಚರ್ ಗಳನ್ನೂ ಬಯಸಿದಲ್ಲಿ, ಹುಂಡೈ ನಲ್ಲಿ ದೊಡ್ಡದಾದ ಪಟ್ಟಿ ಇದೆ.

ಟೆಕ್ನಾಲಜಿ 

ಹಾಡು, ಈ ಬೆಲೆಯಲ್ಲಿ ಹಲವು ಸೆಗ್ಮೆಂಟ್ ನಲ್ಲಿನ ವಿಶೇಷತೆಗಳನ್ನು ಕೊಡಲಾಗಿದೆ. ಹಾಗಾಗಿ , ಅಲ್ಲ ಪ್ರತಿಸ್ಪರ್ದಿಗಳು ಸ್ಮಾರ್ಟ್ ಕೀ ಅಥವಾ ಕಾರ್ಡ್ ಗಳು ಪಸ್ಸಿವೆ ಕೀ ಲೆಸ್ ಎಂಟ್ರಿ ಮತ್ತು ಪುಶ್ ಬಟನ್ ಸ್ಟಾರ್ಟ್ ಗಾಗಿ, ಆಟೋ AC, ಲೆಥರ್ ಮೇಲ್ಪದರಗಳು, ಮತ್ತು ಎತ್ತರ ಸರಿಹೊಂದಿಸಬಹುದಾದ ಡ್ರೈವರ್ ಸೀಟ್ ಗಳನ್ನೂ ಕೊಡಲಾಗಿದೆ.  ನಿಮಗೆ ಕ್ರೂಸ್ ಕಂಟ್ರೋಲ್, ರೇವೂರ್ ಪಾರ್ಕಿಂಗ್ ಸೆನ್ಸರ್ ಗಳು, ರೇವೂರ್ ಕ್ಯಾಮೆರಾ ಗಳು, ಸ್ಟಿಯರಿಂಗ್ ಮೌಂಟೆಡ್ ಆಡಿಯೋ ಮತ್ತು ಫೋನ್ ಕಂಟ್ರೋಲ್ ಗಳು, ಜೊತೆಗೆ ಸರಿಹೊಂದಿಸಬಹುದಾದ ಮುಂಬದಿ ಹಾಗಿ ಹಿಂಬದಿ ಹೆಡ್ ರೆಸ್ಟ್ ಗಳನ್ನೂ ಕೊಡಲಾಗಿದೆ.

Hyundai Creta

ಕ್ರೆಟಾ ದಲ್ಲಿ ಅವಶ್ಯಕತೆಗಳು ಮತ್ತು ಬೇಡಿಕೆಗಳನ್ನು ಸರಿಸಮಾನವಾಗಿ ನಿಭಾಯಿಸಲಾಗಿದೆ. ಅನನ್ಯ ವಾದ ವಿಚಾರ ಎಂದರೆ ಇಲ್ಲಿ ವಿದ್ಯುತ್ ಅಳವಡಿಕೆಯ ಡ್ರೈವರ್ ಸೀಟ್, ವಯರ್ಲೆಸ್ ಫೋನ್ ಚಾರ್ಜಿನ್ಗ್, ಮತ್ತು ಇವು ಈಗ ಅವಶ್ಯಕತೆಗಿಂತಲೂ ಹೆಚ್ಚು ಬೇಡಿಕೆಯಿರುವುದು ಎಂದು ಹೇಳಬಹುದಾದರೂ , ಕ್ರೆಟಾ ದಲ್ಲಿ ಮಾತ್ರ ಸನ್ ರೂಫ್ ಅನ್ನು ಕೊಡಲಾಗಿದೆ.

Maruti S-Cross 

ಮುಂದಿನದು S -ಕ್ರಾಸ್ ಮತ್ತು ಹಿಂದೆ ಹೇಳಿದಂತಹ LED ಪ್ರೊಜೆಕ್ಟರ್ ಗಳನ್ನು ಬಿಟ್ಟು, ಇದರಲ್ಲಿ ರೀಚ್ ಸರಿಹೊಂದಿಸುವುಕೆ ಸ್ಟಿಯರಿಂಗ್ ಗಾಗಿ (ಇತರವುಗಳಲ್ಲಿ ರೆಕ್ ಸರಿಹೊಂದಿಸುವಿಕೆ ಮಾತ್ರ) ಕೊಡಲಾಗಿದೆ. ಹಾಗು, ಹಿಂಬದಿಯ ಸೀಟ್  60:40 ಸ್ಪ್ಲಿಟ್ ಆಗಿರುವುದಷ್ಟೇ ಅಲ್ಲದೆ, ಎರೆಡೂ ಬದಿಗಳಲ್ಲಿ ಸರಿಹೊಂದಿಸಬಹುದಾದ ಬ್ಯಾಕ್ ರೆಸ್ಟ್ ಸಹ ಕೊಡಲಾಗಿದೆ, ಅದರಿಂದ ವಿಭಿನ್ನ ಅಳತೆಯ ಜನಗಳನ್ನು ಕೂಡಿಸಲು ಅನುಕೂಲವಾಗುತ್ತದೆ. ನಾವು S-ಕ್ರಾಸ್ ನಲ್ಲಿ ಮಾತ್ರ ರೇವೂರ್ AC ಮಿಸ್ ಆಗಿದೆ ಎಂದು ಹೇಳಬಯಸುತ್ತೇವೆ, ನಮಗೆ ಸರಿಸುಮಾರು 40-ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ತಂಪಾದ ವಾತಾವರಣ ಬೇಕೆನಿಸದೆ ಇರಲಿಲ್ಲ.

 Renault Captur

ನೀವು ಕ್ಯಾಪ್ಟರ್ ನ ಫೀಚರ್ ಗಾಲ ಪಟ್ಟಿಯನ್ನು ಹತ್ತಿರದಿಂದ ನೋಡಬೇಕಾಗುತ್ತದೆ ಇದರ ಪ್ರತಿಪಾದನೆ ಯನ್ನು ಅರ್ಥಮಾಡಿಕೊಳ್ಳಲು, ಇದರಲ್ಲಿ ಹೆಚ್ಚು ಹೆಚ್ಚಾದ ವಿಷಯಗಳನ್ನು ಕೂಡಿಸುವಲ್ಲಿ ವಿಶೇಷವಾಗಿ ಗಮನ ಹರಿಸಲಾಗಿದೆ , ಕಾರ್ಯತತ್ಪರಿತೆಗಿಂತಲೂ ಹೆಚ್ಚಾಗಿ. ಉದಾಹರಣೆಗೆ, ಇದರಲ್ಲಿ ಮಾತ್ರವೇ ಆಂತರಿಕ ಲ್ಯಾಂಪ್ ಗಳನ್ನೂ, ಮತ್ತು LED ಫಾಗ್ ಲೈಟ್ ಗಳನ್ನೂ ಕೊಡಲಾಗಿದೆ. ಇವು ಕ್ರೆಟಾ ದ ಫಾಗ್ ಲೈಟ್ ಗಳಂತೆ ಕಾರ್ನೆರಿಂಗ್ ಕಾರ್ಯವನ್ನು ಸಹ ನಿಭಾಯಿಸುತ್ತದೆ. ಹೆಚ್ಚಾಗಿ, ಲೆಥರ್ ಮೇಲ್ಪದರಗಳು ಎಲ್ಲದರಲ್ಲೂ ಸಾಮಾನ್ಯವಾಗಿದ್ದರೂ , ಗುಣಮಟ್ಟ ಮತ್ತು ಫಿನಿಷ್ ಗಳು ಕ್ಯಾಪ್ಟರ್ ನಲ್ಲಿ ಶ್ರೀಮಂತವಾಗಿದೆ.

Renault Captur

ಕ್ಯಾಪ್ಟರ್ ನಲ್ಲಿರುವ ದೊಡ್ಡದಾದ ಸಮಸ್ಯೆ ಎಂದರೆ , ಅದು ಟಚ್ ಸ್ಕ್ರೀನ್. ಪ್ರಾರಂಭದಲ್ಲಿ , ಇದು ಕೆವಿಡ್ ನಲ್ಲಿ ಕೊಟ್ಟಿರುವಂತೆಯೇ ಇದೆ, ಅದು ಕಡಿಮೆ ಬೆಲೆಯ ಕಾರ್ ಆಗಿದೆ. ಬಣ್ಣ ನೋಡಲು ಸ್ವಲ್ಪ ಹಳತಾಗಿದೆ ಎಂದೆನಿಸುತ್ತದೆ, ಡಿಸ್ಪ್ಲೇ ಹೊರಗಡೆಯಿಂದ ತಂದು ಸೇರಿಸಲಾಗಿದೆ ಎಂದೆನಿಸುತ್ತದೆ, ಟಚ್ ನ ಪ್ರತಿಕ್ರಿಯೆ ಅಷ್ಟು ಚೆನ್ನಾಗಿ ಇಲ್ಲ, ಕ್ರೆಟಾ ಅಥವಾ S-ಕ್ರಾಸ್ ಗಳಲ್ಲಿ ಇರುವಂತೆ. ಮತ್ತು ಇದರಲ್ಲಿ ಚಿಪ್ಪ್ಲೆ ಕಾರ್ ಪ್ಲೇ, ಅಥವಾ ಆಂಡ್ರಾಯ್ಡ್ ಆಟೋ ವನ್ನು ಸಹ ಕೊಡಲಾಗಿಲ್ಲ.

Maruti S-Cross

S-ಕ್ರಾಸ್ ಹಾಗು ಕ್ರೆಟದಲ್ಲಿರುವ    7-ಇಂಚು ಟಚ್ ಸ್ಕ್ರೀನ್ ಸುಂದರವಾದ ಡಿಸ್ಪ್ಲೇ ಹೊಂದಿದೆ, ಮತ್ತು ಅವು ಉಪಯೋಗಿಸಲು ಸಹ ಸುಲಭವಾಗಿದೆ. ನಾವು ಉತ್ತಮವಾದುದನ್ನು ಆಯ್ಕೆ ಮಾಡಬೇಕೆಂದರೆ , ನಾವು ಹೇಳುತ್ತೇವೆ ಇದು ಕ್ರೆಟಾ ಗಿಂತಲೂ ಹೆಚ್ಚು ಉತ್ತಮವಾಗಿದೆ ಎಂದು. ಸೆಲ್ ಫೋನ್ ತರಹದ UI ಸುಲಭವಾಗಿ ಉಪಯೋಗಿಸಬಹುದು, ಮತ್ತು ಚಿಕ್ಕ ವಿಚಾರಗಳಾದ ಡೈನಾಮಿಕ್ ರೆವೆರ್ಸೆ ಗೈಡ್ ಗಳು ಹೆಚ್ಚು ಉಪಯುಕ್ತತೆಯನ್ನು ಸೇರಿಸುತ್ತದೆ.

Hyundai Creta

ಕಾರ್ಯದಕ್ಷತೆ 

Creta vs Captur vs S-Cross

ನಾವು ಎಲ್ಲಿ ನಿಲ್ಲಿಸಿದೇವೆಯೋ ಅಲ್ಲಿಂದ ಪ್ರಾರಂಭಿಸೋಣ, ಮುಂದುವರೆಯೋಣವೇ, ಮತ್ತು ನಾವು ಸ್ಪಷ್ಟವಾದ ಹೇಳಿಕೆಕೊಡೋಣ ನಮ್ಮ ಅಭಿಮತವನ್ನು.ರೆನಾಲ್ಟ್ ಕಾರ್ ನೀವು ಮೆಚ್ಚುವುದಕ್ಕಿಂತ ಮುಂಚೆ  ಹೊಂದಿಕೊಳ್ಳುವುದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುವಂತೆ ಮಾಡುತ್ತದೆ. ಮುಖ್ಯವಾದ ವಿಚಾರ: ಡ್ರೈವಿಂಗ್ ಅನುಭವ. ಇದು ಮದ್ಯದಲ್ಲಿ ಸೇರಿಕೊಳ್ಳುತ್ತದೆ ನೀವು ಪೇಪರ್ ನಲ್ಲಿರುವ ವಿಚಾರಗಳನ್ನು ಪರಿಗಣಿಸಿದಾಗ. ಆದರೆ ಡ್ರೈವಿಂಗ್ ಅನುಭವ ಇತರ ಎರೆಡಕ್ಕಿಂತ ಭಿನ್ನವಾಗಿದೆ.

Powertrain

Creta

S-Cross

Captur

Engine

1.6L/4cyl

1.3L/4cyl

1.5L/4cyl

Power

128PS @ 4000rpm

90PS @ 4000rpm

110PS @3850rpm

Torque

260Nm @ 1500-3000rpm

200Nm @ 1750rpm

240Nm @ 1750rpm

Transmission

6-speed MT

5-speed MT

6-speed MT

Tyres

215/60 R17

215/60 R16

215/60 R17

 ಉದಾಹರಣೆಗೆ, ನೀವು ಟೆಸ್ಟ್ ಡ್ರೈವ್ ನಲ್ಲೆ ನಿರ್ದರಿಸಬಲ್ಲಿರಿ ಸ್ಟಿಯರಿಂಗ್ ಸ್ವಲ್ಪ ಬಾರವಾಗಿದೆ ಎಂದು. ಪಾರ್ಕಿಂಗ್ ವೇಗಗಗಳಲ್ಲಿ, ಇದನ್ನು ಬಳಸಲು ಸ್ವಲ್ಪ ಪರಿಶ್ರಮ ಪಡಬೇಕಾಗುತ್ತದೆ. ನಂತರ ಕ್ಲಚ್ ಇದೆ, ಅದು ಬಾರವಾಗಿರುವುದಲ್ಲದೆ ಹೆಚ್ಚು ಟ್ರಾವೆಲ್ ಅನ್ನು ಸಹ ಒಳಗೊಂಡಿದೆ, ಮತ್ತು ಹೊಂದಿಕೊಳ್ಳುವಿಕೆಯನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಕಷ್ಟವಾಗುತ್ತದೆ. ಹಾಗಾಗಿ ನೀವು ಸ್ಟಾಲ್ ಮಾಡಿದರೆ ಆಶ್ಚರ್ಯ ಪಡಬೇಕಾಗಿಲ್ಲ. ದೊಡ್ಡ ಸಮಸ್ಯೆಇಲ್ಲಿ ಎಂದರೆ , ಅದು ಪವರ್ ಟ್ರೈನ್. 1.5-ಲೀಟರ್ ಎಂಜಿನ್ ಅನ್ನು ಡಸ್ಟರ್ ಹಾಗು ಲಾಡ್ಜಿ ಗಳಲ್ಲಿ ಹಂಚಿಕೊಳ್ಳಲಾಗಿದೆ. ಮತ್ತು ಇದನ್ನು ಕೇವಲ 110PS/240Nm ಟ್ಯೂನ್ ನಲ್ಲಿ ಕೊಡಲಾಗುತ್ತದೆ. 

Creta vs Captur vs S-Cross

ನಾವು ಹಿಂದೆ ನೋಡಿದಂತೆ, ಎಂಜಿನ್ ಟ್ಯೂನ್ ನಲ್ಲಿ ಬಹಳಷ್ಟು ಟರ್ಬೊ ಲ್ಯಾಗ್ ಇದೆ. ಎಷ್ಟರಮಟ್ಟಿಗೆ ಎಂದರೆ ಅದು ನಿಂತೇ ಹೋಗಿದೆ ಎಂದೇ ಹೇಳಬಹುದು , ಹೆಚ್ಚು ವೇಗಗತಿ ಪಡೆಯುವುದಕ್ಕಿಂತ ಮುಂಚೆ . ಚಿಕ್ಕ ಎತ್ತರದ ಹಾದಿಗಳು ಕೂಡ ಮೋಟಾರ್ ಗೆ ಹೆಚ್ಚು ಪರಿಷ್ಟ್ರಮ ಪಡುವಂತೆ ಮಾಡುವುದು ನಿಂತು ಹೋಗುವ ವರೆಗೂ ಬರಬಹುದು. ಈ ಎಲ್ಲ ವಿಚಾರಗಳನ್ನು ಒಟ್ಟು ಗೂಡಿಸಿರಿ, ನಿಮಗೆ ಇದು ಒಂದು ಸಿಟಿ ಉಪಯೋಗಕ್ಕೆ ಒಲ್ಲದ ಕ್ರಾಸ್ಒವರ್ ಆಗಿದೆ ಎಂದೆನಿಸುತ್ತದೆ. ಪ್ರತಿನಿತ್ಯದ ಉಪಯೋಗಕ್ಕೆ ಕಷ್ಟಕರವಾಗಿರುತ್ತದೆ ಮತ್ತು ಓವರ್ಟೇಕ್ ಮಾಡಲೂ ಸಹ ಮುಂಚೆಯೇ ನಿಯೋಜನೆ ಮಾಡಿರಬೇಕಾಗುತ್ತದೆ.  ಕ್ಟ್ರಾಫಿಕ್ ನ ಚಿಕ್ಕ ಜಾಗಗಳಲ್ಲಿ ಮುಂದುವರೆಯಲು ನಿಮಗೆ ಡೌನ್ ಶಿಫ್ಟ್ ಮಾಡುವಂತೆ ಮಾಡುವುದು. ಹಾಗಾಗಿ ನೀವು ಎಂಜಿನ್ ಅನ್ನು 1800rpm ಗಿಂತಲೂ ಹೆಚ್ಚು ವೇಗಗತಿ ಪಡೆಯುವಂತೆ ಮತ್ತು ನಿಮಗೆ ಹೆಚ್ಚು  ವೇಗಗತಿಯನ್ನು ಪಡೆಯಲು ಹೆಚ್ಚು ಶಕ್ತಿ ಪ್ರಯೋಗಿಸುವಂತೆ ಮಾಡುತ್ತದೆ.  ನೀನು ನಿಮ್ಮ್ಷ್ಟಕ್ಕೆ ನೋಡಬಹುದು , ನೀವು ಕೆಲವು ಗೇರ್ ಗಳಲ್ಲಿ ಹಾಗೆಯೆ ಉಳಿಯುವಿರಿ ಎಂದು ಆಗಾಗ್ಗೆ ಗೇರ್ ಬದಲಾವಣೆ ಮಾಡುವುದನ್ನು ತಡೆಗಟ್ಟಲು. 

ಕ್ಯಾಪ್ಟರ್ ಅನ್ನು ಹೈವೆ ಗಳಲ್ಲಿ ಹೆಚ್ಚು ಉತ್ಸಾಹಭರಿತವಾಗಿ ಉಪಯೋಗಿಸಬಹುದು. ಎಂಜಿನ್ ಅನ್ನು ಸುಮಾರು 2000rpmನಲ್ಲಿ ಇಡೀ ನೀವು ಹೆಚ್ಚು ವೇಗಾಗ್ತಿ ಇರುವ ಟ್ರಾಫಿಕ್ ನಲ್ಲಿ ಸುಲಭವಾಗಿ ಡ್ರೈವ್ ಮಾಡಬಹುದು. ಇದರಲ್ಲಿ ಮದ್ಯ ವುಅಪ್ತಿಯಲ್ಲಿ ಬಹಳಷ್ಟು ಚ್ಛಕ್ತಿ ತುಂಬಲಾಗಿದೆ. ಹಾಗಾಗಿ ನೀವು 100kmph ಹೆಚ್ಚಿನ ವೇಗವನ್ನು ದಿನ ಪೂರ್ತಿ ಉತ್ಸಾಹಭರಿತರಾಗಿ  ಪ್ರಯೋಗಿಸಬಹುದು. ಈ ವಿಚಾರದಲ್ಲಿ ಸ್ಟಿಯರಿಂಗ್ ಬಾರವಾಗಿರುವುದು ಸಹಕಾರಿಯಾಗಿದೆ ಮತ್ತು  ನಿಮಗೆ ಹೆಚ್ಚು ವೇಗದಲ್ಲಿ ಡ್ರೈವ್ ಮಾಡುವಾಗ  ಲೇನ್ ಬದಲಾಯಿಸಲು ಪ್ರೋತ್ಸಾಹಿಸುತ್ತದೆ.  

 Creta vs Captur vs S-Cross

ತದ್ವಿರುದ್ಧವಾಗಿ ಮಾರುತಿ S-ಕ್ರಾಸ್ ಎಂಜಿನ್ ನಿಮಗೆ ಹೈವೇ ಗಳಲ್ಲಿ ಹೆಚ್ಚು ಕಾರ್ಯದಕ್ಷತೆ ತೋರಿಸುತ್ತದೆ. ಹೆಚ್ಚು ವೆಗಾಗಲಿತ್ಯ ಓವರ್ಟೇಕ್ ಗಳಿಗೆ ಸ್ವಲ್ಪ ಮುಂಚೆಯೇ ಯೋಜನೆ ಮಾಡಬೇಕಾಗುತ್ತದೆ, ನಿಮಗೆ ಕಾರ್ಯದಕ್ಷತೆಯಲ್ಲಿ ಏನು ಕಡಿತ ಕಾಣದಿದ್ದರೂ , ಹೆಚ್ಚು ಉತ್ಸಾಹ ಬಾರಿಸುವುದು ಸಹ ಏನೂಇಲ್ಲ. ಅದಕ್ಕಾಗಿ ನಿಮಗೆ 1.6-ಲೀಟರ್  DDiS320 ಬೇಕಾಗುತ್ತದೆ, ಆದರೆ ಅದನ್ನು ಫೇಸ್ ಲಿಫ್ಟ್ ನಲ್ಲಿ ಮುಂದುವರೆಸಲಾಗಿಲ್ಲ. ಇದರಲ್ಲಿರುವ 1.3-ಲೀಟರ್ ಮೋಟಾರ್ ಸಿಟಿ ಯಲ್ಲಿ ಡ್ರೈವ್ ಮಾಡಲು ವಿಶೇಷವಾಗಿದೆ. ಮಾರುತಿ ಫೇಸ್ ಲಿಫ್ಟ್ ನೊಂದಿಗೆ ಟ್ಯೂನಿಂಗ್ ಬದಲಿಸಿಲ್ಲದಿದ್ದರೂ, ಈ ಎಂಜಿನ್ ನಲ್ಲಿರುವ ಕುಖ್ಯಾತಿ ಪಡೆದ ಟರ್ಬೊ ಲ್ಯಾಗ್ ಅನ್ನು ಬಹಳಷ್ಟು ನಿಯಂತ್ರಿಸಲಾಗಿದೆ. ಈ ಬದಲಾವಣೆಯನ್ನು  ಎಂಜಿನ್ ಗೆ ಸಹಕರಿಸುವ SHVS ಮೈಕ್ರೋ ಹೈಬ್ರಿಡ್ ಟೆಕ್  ತಂದಿದೆ, ಇದು ಮೈಲೇಜ್ ಅನ್ನು ಹೆಚ್ಚಿಸಿದೆ ಮತ್ತು ಹೆಚ್ಚು ಶಕ್ತಿಭರಿತ ತ್ರೋಟಲ್ ಪ್ರತಿಕ್ರಿಯೆ ಸಿಗುತ್ತದೆ ಕೂಡ. ಹಾಗಾಗಿ ಸಿಟಿ ಯಲ್ಲಿನ ಡ್ರೈವ್ ಮಾಡುವಿಕೆ ನಿಮಗೆ ಸುಲಭವಾಗಿದೆ ಮತ್ತು ನೀವು ಕಾರ್ಯದಕ್ಷತೇ ಹೆಚ್ಚಿಸಲು ಟರ್ಬೊ ಕಾರ್ಯ ನಿರ್ವಹಿಸುವ ಮುಂಚೆ ಪರಿಶ್ರಮ ಪಡಬೇಕಾಗಿಲ್ಲ. ನಿಮಗೆ ಅಷ್ಟು ಶಕ್ತಿ ದೊರೆಯುವಂತಾದರೂ, ಅದು ನಿಮಗೆ ಹೆಚ್ಚು ಸಾಹಸಗಳನ್ನು ಮಾಡಲು ಪ್ರೋತ್ಸಾಹಿಸುವುದಿಲ್ಲ, ಹಾಗಾಗಿ ಇದು ಹೊಸ ಡ್ರೈವರ್ ಗಳಿಗೂ ಸಹ ಸಹಕಾರಿಯಾಗಿದೆ.

RT

Creta

S-Cross

Captur

Claimed FE

20.5kmpl

25.1kmpl

20.37kmpl

Tested City Fe

13.99kmpl

19.16kmpl

15.50kmpl

Tested Hy Fe

21.84kmpl

20.65kmpl

21.1kmpl

S-ಕ್ರಾಸ್ ಅನ್ನು ಉತ್ತಮ ಬಳಕೆ ಸ್ನೇಹಿ ಯಾಗಿ ಮಾಡುವ ವಿಚಾರವೆಂದರೆ ಅದು ಮೈಲೇಜ್ ಆಗಿದೆ. ನಗರಗಳಲ್ಲಿ, ಮೈಲೇಜ್ ಇತರ ಪ್ರತಿಸ್ಪರ್ದಿಗಳಿಗಿಂತ ಹೆಚ್ಚು ಇದೆ. ಮತ್ತು ಆರನೇ ಗೇರ್ ಇದನ್ನು  ಹೈವೇ ಯ್ಲಲೂ ಸಹ ಹೆಚ್ಚು ಮೈಲೇಜ್ ಕೊಡುವಂತೆ ಮಾಡುತ್ತಿತ್ತು.

 Creta vs Captur vs S-Cross

ಆದರೆ, ಈ ವಿಚಾರದಲ್ಲಿ ಹುಂಡೈ ಕ್ರೆಟಾ ದಲ್ಲಿ ಹೆಚ್ಚು ಸಮತೋಲನ ಮಾಡಲಾಗಿದೆ. ಕ್ರೆಟಾ ಗೆ ಅದರ ಕಾರ್ ನಂತೆಯೇ ಡ್ರೈವ್ ಗಾಗಿ ಖ್ಯಾತಿ ದೊರೆತಿದೆ. ಹಾಗಾಗಿ ನಿಮಗೆ ಸೂಕ್ಷ್ಮವಾದ ಸ್ಟಿಯರಿಂಗ್ ಮತ್ತು ಹಗುರವಾದ ಕ್ಲಚ್, ಜೊತೆಗೆ ಗೇರ್ ಲೀವರ್ ಬಳಸಲು S-ಕ್ರಾಸ್ ನದಕ್ಕಿಂತಲೂ ಮತ್ತು ಕ್ರೆಟಾ ಗಿಂತಲೂ ಚೆನ್ನಾಗಿದೆ ಎಂದೆನಿಸುತ್ತದೆ. ಪ್ರಮುಖವಾಗಿ, ಇದರಲ್ಲಿ ಟರ್ಬೊ ಲ್ಯಾಗ್ ಇಲ್ಲ. ಹಾಗಾಗಿ ಡ್ರೈವ್ ಸುಲಭವಾಗಿದೆ. ಹಗುರವಾದ ತ್ರೋಟಾಲ್  ಇನ್ಪುಟ್ ಗಳು ಸಾಕಾಗುತ್ತದೆ ನಿಮಗೆ ಸಿಟಿ ಯಲ್ಲಿ ಸುಲಭವಾಗಿ ಡ್ರೈವ್ ಮಾಡಲು. ಹೈವೇ ಗಳಲ್ಲಿ, ಹೆಚ್ಚು ಶಕ್ತಿ ಇದೆ ಹಾಗು 100kmph ಕ್ಕಿಂತ ಹೆಚ್ಚು ವೇಗಗಳಲ್ಲಿ ಓವರ್ ಟೇಕ್ ಮಾಡಲು ಪರಿಶ್ರಮಪಡಬೇಕಾಗಿಲೊಳ. ಕ್ರೆಟಾ ನಮ್ಮ ಹೈವೇ ಯಲ್ಲಿನ ಮೈಲೇಜ್ ಪರೀಕ್ಷೆಯಲ್ಲಿ ಹೆಚ್ಚು ಮೈಲೇಜ್ ಕೊಡುವ ಕಾಂಪ್ಯಾಕ್ಟ್ SUV  ಗಳಲ್ಲಿ ಒಂದು ಆಗಿದೆ.

ರೈಡ್ ಮತ್ತು ಹ್ಯಾಂಡಲಿಂಗ್ 

Creta vs Captur vs S-Cross

ನಾವು ಒಂದು ವಿಚಾರವನ್ನು ಖಂಡಿತವಾಗಿ ಹೇಳಬಹುದು ಈ SUV ಗಳಲ್ಲಿ ಯಾವುದೂ ನಿಮಗೆ ನಿರಾಸೆ ಉಂಟುಮಾಡುವುದಿಲ್ಲ, ರೈಡ್ ಗುಣಮಟ್ಟದ ವಿಚಾರದಲ್ಲಿ. ಕ್ರೆಟಾ ಇವೆಲ್ಲವುಗಳಲ್ಲಿ ಹೆಚ್ಚು ಆರಾಮದಾಯಕವಿಗಿರುವುದು ಎಂದು ಹೇಳಬಹುದು. ಕಡಿಮೆ ವೇಗಗಳಲ್ಲಿ ಬಂಪ್ ಗಳನ್ನೂ ಸುಲಭವಾಗಿ ತೆಗೆದುಕೊಳ್ಳುತ್ತದೆ, ಮತ್ತು ಕೇವಲ ದೊಡ್ಡ ಪಾಟ್ ಹೋಲ್ ಗಳಲ್ಲಿ ನಿಮಗೆ ಅನಾನುಕೂಲ ಉಂಟಾದಂತೆ ಭಾಸವಾಗುತ್ತದೆ. ನಿಮಗೆ ಕ್ರೆಟಾ ತನ್ನ ಹಿಡಿತವನ್ನು ಕಳೆದುಕೊಂಡಿದೆ ಎಂದು ಅನಿಸಬಹುದು. ಕ್ರೆಟಾ ದಲ್ಲಿ ಹೆಚ್ಚು ವೇಗಗಗಳಲ್ಲಿ ರೈಡ್ ಬಹಳಷ್ಟು ಸ್ಟೇಬಲ್ ಆಗಿದೆ  ಹಾಗು ಸ್ವಲ್ಪ ನಿರ್ಣಾಯಕ ವಿಷಯಗಳು ಕ್ಯಾಬಿನ್ ನಲ್ಲಿ ತೇಲುವಂತೆ ಅನುಭವಾಗುತ್ತದೆ. ಹಾಗು ಸ್ಟಿಯರಿಂಗ್ ತುಂಬಾ ಹಗುರವಾಗಿದೆ ನಗರದಲ್ಲಿನ  ಡ್ರೈವ್ ಸುಲಭವಾಗಿದೆ. ಇದು ಹೈವೇ ಗಳಲ್ಲಿ ಸ್ವಲ್ಪ ತೂಕವಾಗಿದೆ ಎಣಿಸಬಹುದು ಹಾಗು ತಿರುವುಗಳಲ್ಲಿ ಚೆನ್ನಾಗಿ ಪ್ರತಿಕ್ರಿಯೆ ಕೊಡುತ್ತದೆ ಕೂಡ.

Creta vs Captur vs S-Cross

ಈ ವಿಚಾರದಲ್ಲಿ ಕ್ಯಾಪ್ಟರ್ ಹಿನ್ನಡತೆ ಹೊಂದುತ್ತದೆ. ಹೆಚ್ಚು ವೇಗಗತಿ ಪಡೆಯುವಿಕೆಯಲ್ಲಿ ಹಿನ್ನಡತೆ ಹೊಂದಿದೆ ಮತ್ತು ನಿರ್ಣಾಯಕಗಳನ್ನು ತೆಗೆದುಹಾಕಲಾಗಿದೆ, ಅವು ಇರಲಿಲವೇನೋ ಎಂಬುವಂತೆ. ಸ್ಟೆಬಿಲಿಟಿ ಯು ಇದೆ ಎಂದುಕೊಳ್ಳಬೇಕಾಗುತ್ತದೆ ಮತ್ತು ಅದು ಇಂತಹ ಎತ್ತರದ SUV ಗಳಿಗೆ ಸೂಕ್ತವಾಗಿದೆ. ಡಸ್ಟರ್ ನಂತೆ , ಕಠಿಣ ರಸ್ತೆಗಳಲ್ಲಿ ಚೆನ್ನಾಗಿ ನಿಭಾಯಿಸುತ್ತದೆ. ಈ ಎರೆಡು ಸ್ಪರ್ದಿಗಳು ನಿಮಗೆ ಕಠಿಣ ರಸ್ತೆಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ, ಕ್ರೆಟಾ ಒಂದು ಹೆಜ್ಜೆ ಮುಂದೆ ಹೋಗಿ ರಸ್ತೆಯನ್ನೇ ಆಳುತ್ತದೆ. ಅದರಲ್ಲಿ ಸ್ವಲ್ಪ ಕಠಿಣತೆ ತೋರಿಬರುತ್ತದೆ ಕಡಿಮೆ ವೇಗಗಳಲ್ಲಿ, ಹಾಗಾಗಿ ಅದು ಡಸ್ಟರ್ ಗೆ ಸರಿಸಮನಾಗಿ ಇಲ್ಲದ್ದರು  ಹತ್ತಿರ ಬರುತ್ತದೆ.

Creta vs Captur vs S-Cross

ಈ ವಿಚಾರದಲ್ಲಿ S-ಕ್ರಾಸ್ ಬಹಳಷ್ಟು ಸಮತೋಲನ ಕಾಪಾಡುತ್ತದೆ. ಕಡಿಮೆ ವೇಗಗಳಲ್ಲಿ ರೈಡ್ ಆರಾಮದಾಯಕವಾಗಿದೆ  ಮತ್ತು ನೀವು ಕಠಿಣ ರಸ್ತೆಗಳನ್ನು ಮತ್ತು ಪಾಟ್ ಹೋಲ್ ಗಳನ್ನೂ ಸುಲಭವಾಗಿ ನಿಭಾಯಿಸಬಹುದು. ಅದೇ ಸಮಯದಲ್ಲಿ, ಇದು ರಸ್ತೆಗೆ ಅಂಟಿಕೊಂಡು ಸಾಗುತ್ತದೆ ಹೈವೇ ಗಳಲ್ಲಿ , ಹಾಗಾಗು ನಿಮಗೆ  ಕ್ರೆಟಾ ದಲ್ಲಿ ಇರುವಂತೆ ಎತ್ತಿಹಾಕುವ ಅನುಭಾವ ಉಂಟಾಗುವುದಿಲ್ಲ. ಒಟ್ಟಾರೆ ಹೇಳಬೇಕೆಂದರೆ ಇದರಲ್ಲಿ ಉತ್ತಮ ಕಡಿಮೆ ವೇಗದಲ್ಲಿನ ಗುಣಮಟ್ಟ ಇದೆ, ಇದು ಹೆಚ್ಚಿನ ವೇಗದಲ್ಲಿ ಕ್ಯಾಪ್ಟರ್ ನಂತೆ ಇಲ್ಲದಿದ್ದರೂ , ಅದರ ಹತ್ತಿರ ಬರುತ್ತದೆ.

ಸುರಕ್ಷತೆಗಳು 

Creta vs Captur vs S-Cross

ಎಲ್ಲ ಕಾರ್ ಗಳಲ್ಲಿ ಡುಯಲ್ ಫ್ರಂಟ್ ಏರ್ಬ್ಯಾಗ್ ಗಳು ಮತ್ತು  ABS ಸ್ಟ್ಯಾಂಡರ್ಡ್ ಆಗಿ ಇವೆ. ಅವುಗಳಲ್ಲಿ ರೇರ್ ಪಾರ್ಕಿಂಗ್ ಸೆನ್ಸಾರ್ ಮತ್ತು ರೇರ್ ಕ್ಯಾಮರಾ ಗಳು ಲಭ್ಯವಿದೆ ಆದರೆ ಕ್ರೆಟಾ ದಲ್ಲಿ ಮಾತ್ರ ಡೈನಾಮಿಕ್  ಗೈಡ್ ಲೈನ್ ಗಳು ಇದೆ. ಆದರೂ, ಹುಂಡೈ ನಲ್ಲಿ ಆಶ್ಚರ್ಯಕರವಾದ ಬಿಟ್ಟಿರುವಿಕೆ ಎಂದರೆ ಅದು ISOFIX. S-ಕ್ರಾಸ್ ಹಾಗು ಕ್ಯಾಪ್ಟರ್ ನಲ್ಲಿ ಅವು ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ, ಕ್ರೆಟಾ ದಲ್ಲಿ ಕೇವಲ  SX ಆಟೋಮ್ಯಾಟಿಕ್ ವೇರಿಯೆಂತ್ ನಲ್ಲಿ ಮಾತ್ರ ಇದೆ. ಕ್ರೆಟಾ ದಲ್ಲಿ ಆಟೋ ಹೆಡ್ ಲ್ಯಾಂಪ್ ಗಳು ಮತ್ತು ಆಟೋ ವೈಪರ್ ಗಳು ಮಿಸ್ ಆಗಿವೆ ಮತ್ತು ಇವುಗಳು ಪ್ರತಿಸ್ಪರ್ದಿಗಳಲ್ಲಿ ಕೊಡಲಾಗಿದೆ.

ಕೇವಲ ಕ್ರೆಟಾ ಮತ್ತು ಕ್ಯಾಪ್ಟರ್ ಗಳಲ್ಲಿ ಕಾರ್ನೆರಿಂಗ್ ಫಾಗ್ ಲೈಟ್ ಗಳನ್ನೂ ಕೊಡಲಾಗಿದೆ. ರೇರ್ ವೀಲ್ ಡಿಸ್ಕ್ ಬ್ರೇಕ್ ಗಳನ್ನೂ ವಿಶೇಷವಾಗಿ S-ಕ್ರಾಸ್ ನಲ್ಲಿ ಕೊಡಲಾಗಿದೆ. ದುರದೃಷ್ಟವಶಾತ್ S-ಕ್ರಾಸ್ ನಲ್ಲಿ  2 ಏರ್ಬ್ಯಾಗ್ ಗಳಿಗಿಂತ ಹೆಚ್ಹು ಕೊಡಲಾಗಿಲ್ಲ, ಪೂರ್ಣವಾಗಿ ಲೋಡ್ ಆಗಿರುವ ಅಲ್ಫಾ ವೇರಿಯೆಂತ್ ನಲ್ಲಿ ಸಹ. ಕ್ಯಾಪ್ಟರ್ ನಲ್ಲಿ ಸೈಡ್ ಏರ್ಬ್ಯಾಗ್ಸ್ ಕೊಡಲಾಗಿದೆ  (ಒಟ್ಟಾರೆ  4), ಕ್ರೆಟಾ ದಲ್ಲಿ ಸೈಡ್ ಮತ್ತು ಕರ್ಟನ್ ಏರ್ಬ್ಯಾಗ್ ಕೊಡಲಾಗಿದೆ (ಒಟ್ಟಾರೆ  6).

ಅಂತಿಮ ಅನಿಸಿಕೆಗಳು 

Creta vs Captur vs S-Cross

ನಾವು ಒಂದು ನಿರ್ದಿಷ್ಟವಾದ ವಿಚಾರವನ್ನು ಹೇಳುತ್ತ್ತೇವೆ:  ಹುಂಡೈ ಕ್ರೆಟಾ (Rs 15.05 ಲಕ್ಷ ಎಕ್ಸ್ ಶೋರ್ ರೂಮ್ ದೆಹಲಿ ) ಮತ್ತು ರೆನಾಲ್ಟ್ ಕ್ಯಾಪ್ಟರ್ (Rs 14.04 ಲಕ್ಷ ಎಕ್ಸ್ ಶೋರ್ ರೂಮ್ ದೆಹಲಿ)  ಗಳು ಹತ್ತಿರದ ಬೆಲೆ ಅಂತರ ಉಳ್ಳದ್ದಾಗಿದೆ,  ಮಾರುತಿ ಸುಜುಕಿ S-ಕ್ರಾಸ್  (Rs 11.33 ಲಕ್ಷ ಎಕ್ಸ್ ಶೋರ್ ರೂಮ್ ದೆಹಲಿ ) ಬಹಳಷ್ಟು ಬೆಲೆ ಕಡಿತ ಹೊಂದಿದೆ. ಆದರೂ, ಇದು ಪ್ರೀಮಿಯಂ ವಿಭಾಗವಾಗಿದ್ದು ಬೆಲೆ ಪಟ್ಟಿಯನ್ನು ಮಾತ್ರವೇ  ಪರಿಗಣನೆಗೆ ತೆಗೆದುಕ್ಕೊಳ್ಳಲಾಗುವುದಿಲ್ಲ. ಹಾಗಾದರೆ, ಯಾವುದನ್ನು ಆಯ್ಕೆ ಮಾಡಬೇಕು?

ನಾವು ಕ್ಯಾಪ್ಟರ್ ಒಂದಿಗೆ ಪ್ರಾರಂಭಿಸೋಣ. ಈ ಯುರೋ ಕ್ರಾಸ್ಒವರ್ ನಲ್ಲಿರುವಂತಹುದು ಮತ್ತು ಇದರ ಸ್ಟೈಲಿಂಗ್ ಇದಕ್ಕೋ ಕೊಟ್ಟಿರುವಂತಹುದು ಈ ವಿಭಾಗದ ಬೇರೆ ಯಾವುದರಲ್ಲೂ ಕೊಡಲಾಗಿಲ್ಲ. ಇದನ್ನು ಸದೃಢವಾಗಿ ಬಿಲ್ಡ್ ಮಾಡಲಾಗಿದೆ ಮತ್ತು ಇದನ್ನು ಹೈವೇ ಪ್ರವಾಸಗಳಿಗಾಗಿ ಮಾಡಲಾಗಿದೆ. ಇದರಲ್ಲಿ ಉತ್ತಮ ಹೈ ಸ್ಪೀಡ್ ಸ್ಟೆಬಿಲಿಟಿ ಇರುವುದಲ್ಲದೆ ಉತ್ತಮ ರೈಡ್ ಗುಣಮಟ್ಟ ಸಹ ಇದೆ. ಇದರಲ್ಲಿ ಕಡಿಮೆ ಇರುವುದು ಎಂದರೆ ಅದು ವಿವರಗಳಿಗೆ ಕೊಡಲಾದಂತಹ ಗಮನ ಕಡಿಮೆ ಎನಿಸುತ್ತದೆ. ಪವರ್ ಟ್ರೈನ್ ನಗರದಲ್ಲಿನ ಉಪಯೋಗಕ್ಕೆ ಕಷ್ಟಕರವಾಗಿದೆ ಕ್ಯಾಬಿನ್ ನ ವಿಶಾಲತೆ ಇಂತಹ ಅಳತೆಯ ವಾಹನಗಳಿಗೆ ಹೋಲಿಸಿದರೆ ಕಡಿಮೆ ಎನಿಸುತ್ತದೆ ಮತ್ತು ಇದರಲ್ಲಿರುವ ವಿಶೇಷ ಫೀಚರ್ ಗಳು ಕಾರ್ಯ ತತ್ಪರತೆಗೆ ಅಷ್ಟು ಸಹಾಯವಾಗುವುದಿಲ್ಲ. ಇದು ಒಂದೇ ನೋಟದಲ್ಲಿ ಅಷ್ಟು ಪರಿಣಾಮಕಾರಿಯಾದ ಪ್ರಭಾವ ಬೀರುವುದಿಲ್ಲ ,ಆದರೆ ಸ್ವಲ್ಪ ದಿನ ಉಪಯೋಗಿಸಿ, ನಿಮಗೆ ಇದು ಅಚ್ಚು ಮೆಚ್ಚು ಆಗುವುದರಲ್ಲಿ ಸಂಶಯವಿಲ್ಲ. ಆದರೂ, ಎಲ್ಲ ಕೂಡಿಸಿದರೆ, ಉಪಯುಕ್ತತೆಯಲ್ಲಿನ ಸಮಸ್ಯೆಗಳನ್ನು  ಗಮನಿಸದೆ ಇರಲು ಸಾಧ್ಯವಿಲ್ಲ, ಇದೆ ಕಾರಣಕ್ಕಾಗಿ ಕ್ಯಾಪ್ಟರ್ ಇಲ್ಲಿ ಗೆದ್ದಿರುವಂತಹುದು ಅಲ್ಲ.

ಹಾಗಾದರೆ ಮತ್ತಾವುದು, ಅದು ಮಾರುತಿ S-ಕ್ರಾಸ್ ಆಗಿದೆಯೇ? ಅದು ಒಂದು ಖರ್ಚು ಮಡಿದ ಹಣಕ್ಕೆ ತಕ್ಕ ಮೌಲ್ಯ ಕೊಡುವಂತಹದಾಗಿದೆ , ಮತ್ತು ಅತಿ ಉತ್ತಮ ಆಯ್ಕೆ ಆಗಿರುತ್ತದೆ ನೀವು ಕುಟುಂಬದೊಂದಿಗೆ ಪ್ರಯಾಣಮಾಡುವಾತಹವರಾಗಿದ್ದರೆ . ಇದು ನಗರಗಳಲ್ಲಿನ ಉಪಯೋಗಕ್ಕೆ ಹೆಚ್ಚು ಮೈಲೇಜ್ ಕೊಡುತ್ತದೆ ಮತ್ತು ಇದರ ರೈಡ್ ಗುಣಮಟ್ಟ ಸಿಟಿ ಹಾಗು ಹೈವೇ ಗಳಿಗೆ ಸೂಕ್ಲ್ತವಾಗಿದೆ. ಆದರೆ, ಇದರಲ್ಲಿ ಕೂಡ ಸ್ವಲ್ಪ ಹಿನ್ನಡತೆಗಳು ಇವೆ. ಹೈವೇ ಯಲ್ಲಿನ ಕಾರ್ಯತತ್ಪರತೆ ಇತರ ಎರೆಡು ಕಾರ್ ಗಳಿಗೆ ಹೋಲಿಸಿದರೆ ಹಿನ್ನಡತೆ ಹೊಂದುತ್ತದೆ. ಇದಕ್ಕೆ ಕರಣ ಇದರಲ್ಲಿರುವ ಎಂಜಿನ್ ಅನ್ನು ನಗರಗಳಲ್ಲಿನ ಉಪಯುಕ್ತತೆಯನ್ನು ಗಮನದ್ಲಲಿರಿಸಿಕೊಂಡು ಮಡಿದ ಹಾಗೆ ಇದೆ. ಹಾಗು ಇದರಲ್ಲಿ ಸುರಕ್ಷತೆಗಳಾದ ಸೈಡ್ ಮತ್ತು ಕರ್ಟನ್ ಏರ್ಬ್ಯಾಗ್ ಗಳು ಮಿಸ್ ಆಗಿವೆ.

Creta vs Captur vs S-Cross

ಇಲ್ಲಿ ಗೆದ್ದಿರುವಂತಹುದು ಹುಂಡೈ ಕ್ರೆಟಾ. ವೆರ್ನಾ ದಲ್ಲಿರುವಂತೆ, ಇದರಲ್ಲಿ ಅಸಾಮಾನ್ಯ  ಎನ್ನಬಹುದಾದಂತಹುದು  ಯಾವುದೂ ಇಲ್ಲ. ಇದು ಅಂದುಕೊಂಡಂತೆ ಕೆಲಸ ಮಾಡುತ್ತದೆ. ಡ್ರೈವ್ ಅನುಭ ನಗರಗಳಲ್ಲಿ ಅತಿ ಸುಲಭವಾಗಿದೆ, ಮತ್ತು 1.6-ಲೀಟರ್ ಎಂಜಿನ್ ನ ನವೀಕರಣ ಹೈವೇ ಮತ್ತು ಇತರ ದೂರದ ಪ್ರಯಾಣಗಳಲ್ಲಿ ಬೆಳಕಿಗೆ ಬರುತ್ತದೆ. ಕ್ಯಾಬಿನ್ ನಿಮಗೆ ಆಶ್ಚರ್ಯ ಉಂಟುಮಾಡುವುದಿಲ್ಲ. ಆದರೆ ಡಿಸೈನ್ ಮತ್ತು ನೋಟ ಮತ್ತು ಒಟ್ಟಾರೆ ಗುಣಮಟ್ಟ  ಸ್ಥಿರವಾಗಿದ್ದು ಪ್ರೀಮಿಯಂ ಆಗಿದೆ. ಇದರಲ್ಲಿ ಹೆಚ್ಚು ಫೀಚರ್ ಗಳನ್ನೂ ಸಹ ಕೊಡಲಾಗಿದೆ. ಅವು ಇದರ ವಿಭಿನ್ನತೆಗೆ ಮತ್ತು ಕಾರ್ಯತಪರತೆಗೆ ಹೆಚ್ಚು ಅನುವುಮಾಡಿಕೊಡುತ್ತದೆ.

ಒಂದು ಹಿನ್ನಡೆತೆ ಉಳಿಯುತ್ತದೆ ಅದು ಇದರ ಬೆಲೆ, ಅದು ಸರಿ ಸುಮಾರು Rs 50,000 ಅಷ್ಟು ಕಡಿಮೆ ಇದ್ದಿದರೆ ಚೆನ್ನಾಗಿರುತಿತ್ತು ಮತ್ತು ಹಲವು  ಫೀಚರ್ ಗಳು ಇಲ್ಲದಿರುವಿಕೆ ಆಶ್ಚರ್ಯ ಉಂಟುಮಾಡುತ್ತದೆ. ಅವೆಂದರೆ ಆಟೋ ಹೆಡ್ ಲ್ಯಾಂಪ್ ಗಳು ಮತ್ತು  ISOFIX. ಒಟ್ಟಾರೆ, ಇದು ಒಂದು ಹೆಚ್ಚು ಬೆಲೆ ಯುಳ್ಳ ಆಯ್ಕೆ ಆಗಿದೆ ಆದರೆ ನಿಮಗೆ ನಿಮ್ಮ ಹಣಕ್ಕೆ ತಕ್ಕ ಮೌಲ್ಯ ದೊರೆತಂತೆ ಅನಿಸುತ್ತದೆ.

 

Published by
tushar

ಇತ್ತೀಚಿನ ಎಸ್ಯುವಿ ಕಾರುಗಳು

ಮುಂಬರುವ ಕಾರುಗಳು

  • ಕಿಯಾ syros
    ಕಿಯಾ syros
    Rs.9.70 - 16.50 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಎಂಜಿ majestor
    ಎಂಜಿ majestor
    Rs.46 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ವೋಲ್ವೋ XC90 2025
    ವೋಲ್ವೋ XC90 2025
    Rs.1.05 ಸಿಆರ್ಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ be 6
    ಮಹೀಂದ್ರ be 6
    Rs.18.90 - 26.90 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ xev 9e
    ಮಹೀಂದ್ರ xev 9e
    Rs.21.90 - 30.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌

ಇತ್ತೀಚಿನ ಎಸ್ಯುವಿ ಕಾರುಗಳು

×
We need your ನಗರ to customize your experience