• English
  • Login / Register

ಹುಂಡೈ ಎಕ್ಸ್‌ಟರ್: ಎರಡನೇ ದೀರ್ಘಾವಧಿಯ ವರದಿ: 8000 ಕಿ.ಮೀ

Published On ಡಿಸೆಂಬರ್ 19, 2023 By arun for ಹುಂಡೈ ಎಕ್ಸ್‌ಟರ್

  • 1 View
  • Write a comment

ಎಕ್ಸ್‌ಟರ್ ಸುಮಾರು 3000 ಕಿಮೀನ ರಸ್ತೆ ಪ್ರಯಾಣಕ್ಕಾಗಿ ನಮ್ಮೊಂದಿಗೆ ಸೇರಿಕೊಂಡಿತು ಮತ್ತು ನಮ್ಮನ್ನು ವಿಶೇಷವಾಗಿ ಆಶ್ಚರ್ಯಗೊಳಿಸಿತು 

ದೂರದ ರೋಡ್‌-ಟ್ರಿಪ್‌ಗಾಗಿ ನಾವು ಹುಂಡೈ ಎಕ್ಸ್‌ಟರ್‌ನಂತಹ ನಗರ-ಕೇಂದ್ರಿತ ಕಾರನ್ನು ಆಯ್ಕೆ ಮಾಡುವ ಆಗಿಲ್ಲ. ಆದರೆ ನಾವು ಇದನ್ನೇ ಆಯ್ಕೆ ಮಾಡಿದ್ದೇವೆ. ಚಿಕ್ಕದಾದ ವಾಹನದೊಂದಿಗೆ, ವಾರದ ಅವಧಿಯ ಪ್ರವಾಸಕ್ಕಾಗಿ ಹೆಚ್ಚಿನ ಸಮಯವನ್ನು ಕಳೆಯುವ ಮೂಲಕ ನಮಗೆ ಈ ವಾಹನದ ಕುರಿತು ಕೆಲವು ಆಸಕ್ತಿದಾಯಕ ಮಾಹಿತಿಯನ್ನು ನೀಡಿತು. ಅವುಗಳನ್ನು ಒಂದೊಂದಾಗಿ ಗಮನಿಸೋಣ.

ಆರಾಮದಾಯಕ ಅನುಭವ

Hyundai Exter Front Seats

ಸರಾಸರಿ ಗಾತ್ರದ ಪ್ರಯಾಣಿಕರಿಗೆ, ಎಕ್ಸ್‌ಟರ್‌ನ ಆಸನಗಳು ಅತ್ಯುತ್ತಮ ಬೆಂಬಲ ಮತ್ತು ಆರಾಮದಾಯಕವಾದ ಅನುಭವವನ್ನು ನೀಡುತ್ತದೆ. ನಾವು ಒಂದು ರೈಡ್‌ನಲ್ಲಿ ಸುಮಾರು 5 ಗಂಟೆಗಳ ಕಾಲ ಕಳೆದಿದ್ದೇವೆ ಮತ್ತು ಯಾವುದೇ ನೋವು, ಸುಸ್ತು ಅಥವಾ ಮರಗಟ್ಟುವಿಕೆ ಇರಲಿಲ್ಲ. ನೀವು XL-ಗಾತ್ರದವರಾಗಿದ್ದರೆ, ನಿಮಗೆ ಮುಂಭಾಗದ ಆಸನಗಳು ಸ್ವಲ್ಪ ಕಡಿಮೆ ಎನಿಸುತ್ತದೆ. ನಿಮ್ಮ ಬೆನ್ನು ಮತ್ತು ಭುಜದ ಭಾಗಗಳಿಗೆ ಸ್ವಲ್ಪ ಹೆಚ್ಚಿನ ಬೆಂಬಲವನ್ನು ನೀವು ಬಯಸುತ್ತೀರಿ. ಅಂತೆಯೇ, ನೀವು ಎತ್ತರವಾಗಿದ್ದರೆ, ಎಕ್ಸ್‌ಟರ್‌ನಲ್ಲಿನ ಇಂಟಿಗ್ರೇಟೆಡ್ ಹೆಡ್‌ರೆಸ್ಟ್ ನಿಮಗೆ ಸಾಕಾಗುವುದಿಲ್ಲ. ನೀವು ಇದಕ್ಕೆ ಪರಿಹಾರವಾಗಿ ನೆಕ್ ಕುಶನ್‌ನ ಖರೀದಿ ಮಾಡಬೇಕಾಗುತ್ತದೆ. 

ನಮ್ಮ ಈ ಲಾಂಗ್‌ ರೈಡ್‌ನಲ್ಲಿ, ನಾವು ಮುಂಭಾಗದ ಆರ್ಮ್‌ರೆಸ್ಟ್ ಅನ್ನು ಮಿಸ್‌ ಆಗಿರುವುದು ಗೊತ್ತಾಗುತ್ತಿತ್ತು. ಇದು ಹ್ಯುಂಡೈಗೆ ಸ್ವಲ್ಪ ಹೆಚ್ಚು ಸ್ಟೋರೆಜ್‌ಗೆ ಸ್ಥಳಾವಕಾಶವನ್ನು ನೀಡಲು ಸಹ ಸಹಕಾರಿಯಾಗಿದೆ. 

ಸ್ಥಳಾವಕಾಶದ ವಿಷಯದಲ್ಲಿ, ನ್ಯೂನತೆಯನ್ನು ಪಟ್ಟಿ ಮಾಡಲು ಏನೂ ಇಲ್ಲ. ಎತ್ತರದ ಆಸನದ ಭಂಗಿ ಮತ್ತು ದೊಡ್ಡ ಕಿಟಕಿಗಳಿಂದಾಗಿ ನೀವು ಕ್ಯಾಬಿನ್‌ನಲ್ಲಿ ಯಾವುದೇ ರೀತಿಯ ಇಕ್ಕಟ್ಟಾದ ಆನುಭವವಾಗುವುದಿಲ್ಲ.

ಆರಾಮದಾಯಕ? ಹೌದು. ಶಕ್ತಿಯುತ? ಇಲ್ಲ!

ಪ್ರವಾಸದ ಸಂಪೂರ್ಣ ಅವಧಿಯಲ್ಲಿ, ನಿರಂತರವಾಗಿ 100 ಕಿಮೀ ಕ್ಕಿಂತ ಹೆಚ್ಚಿನ ವೇಗದಲ್ಲಿ ಡ್ರೈವ್‌ ಮಾಡುವಾಗಲೂ ಎಕ್ಸ್‌ಟರ್ ಹೆಚ್ಚು ಆರಾಮದಾಯಕವಾಗಿತ್ತು. ಇದು ಹೆಚ್ಚಿನ ವೇಗವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ, ಆದರೆ ಪ್ರಯಾಣದುದ್ದಕ್ಕು ಎಂಜಿನ್ ಒತ್ತಡವನ್ನು ಅನುಭವಿಸುತ್ತದೆ.

Hyundai Exter

ಇಂಧನದ ಮೈಲೇಜ್‌ ದೃಷ್ಟಿಕೋನದಿಂದ ಹೇಳುವುದಾದರೆ, ನೀವು ವೇಗವನ್ನು ಕಡಿಮೆ ಮಾಡಬೇಕು ಮತ್ತು ಸರಾಸರಿಯಾಗಿ 75-80 kmph ವೇಗದಲ್ಲಿ ಪ್ರಯಾಣಿಸಬೇಕಾಗುತ್ತದೆ.

ಆದಾಗಿಯೂ, ಈ ವೇಗಗಳಲ್ಲಿ ತ್ವರಿತವಾಗಿ ಓವರ್‌ಟೇಕ್‌ಗಳನ್ನು ಮಾಡಲು ಇದು ಪ್ರಾಮಾಣಿಕವಾಗಿ ಹೆಣಗಾಡುತ್ತದೆ. ಟ್ರಾಫಿಕ್ ಅನ್ನು ಓವರ್‌ ಟೇಕ್‌ ಮಾಡಲು ನಾವು ಮೂರನೇ ಅಥವಾ ಕೆಲವೊಮ್ಮೆ ಎರಡನೇ ಗೇರ್ ಅನ್ನು ಬಳಸಿಕೊಂಡಿದ್ದೇವೆ.

ಇದರ ಸೈಲೆಂಟ್‌ ಆಗಿರುವ ಎಂಜಿನ್ ಮತ್ತು ಉತ್ತಮ ನಿಯಂತ್ರಿತ ರಸ್ತೆ, ಗಾಳಿ ಮತ್ತು ಟೈರ್ ಶಬ್ದವು ಕ್ಯಾಬಿನ್ ಅನ್ನು ಆರಾಮದಾಯಕ ಸ್ಥಳವನ್ನಾಗಿ ಮಾಡುತ್ತದೆ. ಭಾರತೀಯ ಹೆದ್ದಾರಿ ಪರಿಸ್ಥಿತಿಗಳಲ್ಲಿ, ಇದು ನೀವು ಪ್ರತಿ ಗಂಟೆಗೆ 50-60 ಕಿಮೀ ಕ್ರಮಿಸುವಂತೆ ಮಾಡುತ್ತದೆ, ಇದು ಉತ್ತಮವಾದ ಪ್ರಗತಿಯಾಗಿದೆ.

ಇಂಧನ ದಕ್ಷತೆಗೆ ಸಂಬಂಧಿಸಿದಂತೆ, ಒಂದು ಆರಾಮವಾಗಿರುವ ಹೆದ್ದಾರಿ ಚಾಲನೆಯು ನಿಮಗೆ ಪ್ರತಿ ಲೀ.ಗೆ 16-17 ವರೆಗೆ ಮೈಲೆಜ್‌ ನೀಡುತ್ತದೆ. ಆದರೆ ವೇಗವನ್ನು ಹೆಚ್ಚಿಸಿದರೆ, ನೀವು ಪ್ರತಿ ಲೀ.ಗೆ 13-14 ನಷ್ಟೇ ಮೈಲೇಜ್‌ನ್ನು ಪಡೆಯಬಹುದು. 

ಟೆಕ್ ಪ್ಯಾಕ್

Hyundai Exter Infotainment System

ಎಕ್ಸ್‌ಟರ್‌ನಲ್ಲಿ ನೀಡಲಾದ 8-ಇಂಚಿನ ಟಚ್‌ಸ್ಕ್ರೀನ್ ಬಳಸಲು ಸುಲಭವಾಗಿದೆ. ಇದು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಅನ್ನು ನೀಡಲಾಗುತ್ತದೆ, ಆದರೆ ದುಃಖಕರವೆಂದರೆ, ಇದು ವೈರ್‌ಲೆಸ್‌ ಆಲ್ಲ. ಸುದೀರ್ಘ ಪ್ರವಾಸದಲ್ಲಿ, ನಿಮ್ಮ ಫೋನ್ ನ್ನು ಕನೆಕ್ಟ್‌ ಮಾಡುವುದರೊಂದಿಗೆ ಮತ್ತು ನಿರಂತರವಾಗಿ 100 ಪ್ರತಿಶತ ಚಾರ್ಜ್‌ನಲ್ಲಿಡುವುದು ಫೋನ್‌ನ ಬ್ಯಾಟರಿ ಬಾಳಿಕೆಗೆ ಅಷ್ಟೇನು ಉತ್ತಮವಲ್ಲ. ಇದಕ್ಕೆ ವೈರ್‌ಲೆಸ್ ಆಂಡ್ರಾಯ್ಡ್ ಆಟೋ/ಆಪಲ್ ಕಾರ್ಪ್ಲೇ ಒಂದೇ ಪರಿಹಾರವಾಗಿದೆ.

ವೈರ್‌ಲೆಸ್ ನಡುವೆ, ಎರಡು ಟೈಪ್-ಎ ಮತ್ತು ಟೈಪ್-ಸಿ ಚಾರ್ಜರ್‌ಗಳ ಸಹಾಯದಿಂದ ನಾವು ನಾಲ್ಕು ಮೊಬೈಲ್‌ಗಳನ್ನು ಚಾರ್ಜ್ ಮಾಡಬಹುದು. ವೈರ್‌ಲೆಸ್ ಚಾರ್ಜರ್ ಸ್ವಲ್ಪ ನಿಧಾನವಾಗಿರುತ್ತದೆ ಮತ್ತು ನಿಮ್ಮ ಫೋನ್‌ನಿಂದ ನೀವು ಸಂಗೀತವನ್ನು ಪ್ಲೇ ಮಾಡುತ್ತಿದ್ದರೆ ಚಾರ್ಜ್ ಅನ್ನು ಕಡಿಮೆ ಆಗದಂತೆ ನೋಡಿಕೊಳ್ಳುತ್ತದೆ. ಅಲ್ಲದೆ ಟೈಪ್-ಸಿ ಪೋರ್ಟ್, ಆಪಲ್ ಕಾರ್‌ಪ್ಲೇ/ಆಂಡ್ರಾಯ್ಡ್ ಆಟೋ ಅನ್ನು ಸಕ್ರಿಯಗೊಳಿಸುವುದಾಗಿರಲಿ ಎಂದು ನಾವು ಬಯಸುತ್ತೇವೆ ಏಕೆಂದರೆ ಹೆಚ್ಚಿನ ಹೊಸ ಫೋನ್‌ಗಳು ಈಗ ಟೈಪ್-ಸಿ ಕೇಬಲ್‌ನೊಂದಿಗೆ ಬರುತ್ತಿದೆ. 

Hyundai Exter Dash Cam

ಟಾಪ್-ಎಂಡ್‌ ಮೊಡೆಲ್‌ಗಳಲ್ಲಿ ಇನ್‌-ಬಿಲ್ಟ್‌ ಡ್ಯಾಶ್‌ಕ್ಯಾಮ್ ಇದೆ, ಇದು ತುರ್ತು ಪರಿಸ್ಥಿತಿಯಲ್ಲಿ ಅಥವಾ ನೀವು ಡ್ರೈವಿಂಗ್‌ನ ಸುಂದರ ಕ್ಷಣಗಳನ್ನು ಸೆರೆ ಇಡಿಯಲು ಬಯಸಿದರೆ ಎರಡಕ್ಕೂ ಇದು ಉತ್ತಮವಾಗಿದೆ. ಈ ತಂತ್ರಜ್ಞಾನವು ರೋಡ್‌ ಟ್ರಿಪ್‌ಗಳಿಗೆ ನಿಜವಾಗಿಯೂ ಉಪಯುಕ್ತವಾಗಿದೆ.

ಟೇಕ್ ಇಟ್ ಈಸಿ!

Hyundai Exter

ಎಕ್ಸ್‌ಟರ್‌ನ ಮತ್ತೊಂದು ವೈಶಿಷ್ಟ್ಯವೆಂದರೆ ರೈಡ್ ಗುಣಮಟ್ಟವು ಎಷ್ಟು ಆರಾಮದಾಯಕವಾಗಿದೆ ಎಂಬುವುದು.  ಕಡಿಮೆ ವೇಗದಲ್ಲಿ, ಇದು ಕ್ಯಾಬಿನ್‌ನಲ್ಲಿ ಹೆಚ್ಚು ಚಲನೆಯಿಲ್ಲದೆ ಎಲ್ಲವನ್ನೂ ಶಾಂತಗೊಳಿಸುತ್ತದೆ. ಹೆಚ್ಚಿನ ವೇಗದ ಸ್ಥಿರತೆಯು ಸಹ ಶ್ಲಾಘನೀಯವಾಗಿದೆ, ಇದು ನೂರು ಕಿ.ಮೀ ವೇಗದಲ್ಲಿಯೂ ಕಾರು ಲೈಟ್‌ ಎನಿಸುತ್ತದೆ ಮತ್ತು ತೇಲುವಂತಹ ಅನುಭವವಾಗುವುದಿಲ್ಲ. ಆದಾಗಿಯೂ, ಹೆದ್ದಾರಿಯ ವೇಗದಲ್ಲಿ ರಸ್ತೆಯ ಮೇಲಿನ ಜಾಯಿಂಟ್‌ನಲ್ಲಿ ಅಥವಾ ಉಬ್ಬುಗಳ ಮೇಲೆ ಕಾರು ಸಾಗುವಾಗ ಮೇಲೆ-ಕೆಳಗೆ ಹೋದ ಅನುಭವವಾಗುತ್ತದೆ. ಈ ಅನುಭವವವು ಹಿಂದಿನ ಸೀಟಿನಲ್ಲಿರುವವರಿಗೂ ತಿಳಿಯುತ್ತದೆ

ಒಟ್ಟಾರೆಯಾಗಿ ಹೇಳುವುದಾದರೆ, ಕೆಲವು ನ್ಯೂನ್ಯತೆಗಳಿದ್ದರೂ ಸಹ ಎಕ್ಸ್‌ಟರ್ ಒಂದು ರೋಡ್‌ ಟ್ರಿಪ್‌ನ ಸ್ನೇಹಪರ ಒಡನಾಡಿಯಂತೆ ಭಾಸವಾಗುತ್ತದೆ. ಇದು ಶಾಂತ ರೀತಿಯಲ್ಲಿ ಓಡಿಸುವವರಿಗೆ ಇದು ಉತ್ತಮ ಕಾರಾಗಿದೆ.

ಎಕ್ಸ್‌ಟರ್ ಈಗ ಪುಣೆಯ ಬೇಸ್‌ಗೆ ಹಿಂತಿರುಗುತ್ತದೆ, ಅಲ್ಲಿ ಅದು ಶೂಟಿಂಗ್‌ಗಳಿಗೆ ಪ್ರಯಾಣಿಸಲು ಬೆಂಬಲವಾಗಿರುವ ಕಾರ್ ಆಗಲಿದೆ. 

ಸಕಾರಾತ್ಮಕ ಅಂಶಗಳು: ಆರಾಮದಾಯಕ ಆಸನಗಳು, ಬಳಸಲು ಸುಲಭವಾದ ಇಂಫೋ ಎಂಟಟೈನ್‌ಮೆಂಟ್‌ ಸಿಸ್ಟಮ್‌

ನಕಾರಾತ್ಮಕ ಅಂಶಗಳು: ಪವರ್‌ನ ಕೊರತೆ

ಕಾರನ್ನು ನಾವು ಪಡೆದ ದಿನಾಂಕ: ಅಕ್ಟೋಬರ್ 10, 2023

ಕಾರು ನಮ್ಮ ಬಳಿ ಬಂದಾಗಿದ್ದ ಕಿಲೋಮೀಟರ್‌ಗಳು: 3,974ಕಿಮೀ

ಇಲ್ಲಿಯವರೆಗಿನ ಕಿಲೋಮೀಟರ್‌ಗಳು: 8,300ಕಿಮೀ

Published by
arun

ಹುಂಡೈ ಎಕ್ಸ್‌ಟರ್

ರೂಪಾಂತರಗಳು*Ex-Showroom Price New Delhi
ಇಎಕ್ಸ್ (ಪೆಟ್ರೋಲ್)Rs.6.20 ಲಕ್ಷ*
ಇಎಕ್ಸ್‌ ಒಪ್ಶನಲ್‌ (ಪೆಟ್ರೋಲ್)Rs.6.56 ಲಕ್ಷ*
ಎಸ್‌ (ಪೆಟ್ರೋಲ್)Rs.7.58 ಲಕ್ಷ*
ಎಸ್ ಒಪ್ಶನಲ್‌ (ಪೆಟ್ರೋಲ್)Rs.7.73 ಲಕ್ಷ*
s opt plus (ಪೆಟ್ರೋಲ್)Rs.7.94 ಲಕ್ಷ*
ಎಸ್‌ ಎಎಂಟಿ (ಪೆಟ್ರೋಲ್)Rs.8.30 ಲಕ್ಷ*
ಎಸ್‌ಎಕ್ಸ್ (ಪೆಟ್ರೋಲ್)Rs.8.31 ಲಕ್ಷ*
ಎಸ್ಎಕ್ಸ್ ನೈಟ್ (ಪೆಟ್ರೋಲ್)Rs.8.46 ಲಕ್ಷ*
ಎಸ್‌ ಪ್ಲಸ್ ಎಎಂಟಿ (ಪೆಟ್ರೋಲ್)Rs.8.51 ಲಕ್ಷ*
ಎಸ್ಎಕ್ಸ್ ಡ್ಯುಯಲ್‌ ಟೋನ್‌ (ಪೆಟ್ರೋಲ್)Rs.8.55 ಲಕ್ಷ*
ಎಸ್‌ಎಕ್ಸ್‌ ನೈಟ್ ಡ್ಯುಯಲ್‌ ಟೋನ್‌ (ಪೆಟ್ರೋಲ್)Rs.8.70 ಲಕ್ಷ*
ಎಸ್‌ಎಕ್ಸ್‌ ಒಪ್ಶನಲ್‌ (ಪೆಟ್ರೋಲ್)Rs.8.95 ಲಕ್ಷ*
ಎಸ್‌ಎಕ್ಸ್ ಎಎಂಟಿ (ಪೆಟ್ರೋಲ್)Rs.8.98 ಲಕ್ಷ*
sx knight amt (ಪೆಟ್ರೋಲ್)Rs.9.13 ಲಕ್ಷ*
ಎಸ್‌ಎಕ್ಸ್‌ ಡ್ಯುಯಲ್‌ ಟೋನ್‌ ಎಎಮ್‌ಟಿ (ಪೆಟ್ರೋಲ್)Rs.9.23 ಲಕ್ಷ*
sx knight dt amt (ಪೆಟ್ರೋಲ್)Rs.9.23 ಲಕ್ಷ*
ಎಸ್‌ಎಕ್ಸ್‌ ಒಪ್ಶನಲ್‌ ಎಎಮ್‌ಟಿ (ಪೆಟ್ರೋಲ್)Rs.10 ಲಕ್ಷ*
ಎಸ್‌ಎಕ್ಸ್‌ ಒಪ್ಶನಲ್‌ ಕನೆಕ್ಟ್‌ (ಪೆಟ್ರೋಲ್)Rs.9.63 ಲಕ್ಷ*
sx opt connect knight (ಪೆಟ್ರೋಲ್)Rs.9.78 ಲಕ್ಷ*
ಎಸ್ಎಕ್ಸ್ ಒಪ್ಶನಲ್‌ ಕನೆಕ್ಟ್ ಡಿಟಿ (ಪೆಟ್ರೋಲ್)Rs.9.78 ಲಕ್ಷ*
sx opt connect knight dt (ಪೆಟ್ರೋಲ್)Rs.9.93 ಲಕ್ಷ*
ಎಸ್‌ಎಕ್ಸ್‌ ಒಪ್ಶನಲ್‌ ಕನೆಕ್ಟ್ ಎಎಮ್‌ಟಿ (ಪೆಟ್ರೋಲ್)Rs.10 ಲಕ್ಷ*
sx opt connect knight amt (ಪೆಟ್ರೋಲ್)Rs.10.15 ಲಕ್ಷ*
ಎಸ್‌ಎಕ್ಸ್‌ ಒಪ್ಶನಲ್‌ ಕನೆಕ್ಟ್ ಡ್ಯುಯಲ್‌ ಟೋನ್‌ ಎಎಮ್‌ಟಿ (ಪೆಟ್ರೋಲ್)Rs.9.38 ಲಕ್ಷ*
sx opt connect knight dt amt (ಪೆಟ್ರೋಲ್)Rs.10.50 ಲಕ್ಷ*
ಎಸ್ ಸಿಎನ್ಜಿ (ಸಿಎನ್‌ಜಿ)Rs.8.52 ಲಕ್ಷ*
ಎಸ್‌ಎಕ್ಸ್ ಸಿಎನ್‌ಜಿ (ಸಿಎನ್‌ಜಿ)Rs.9.24 ಲಕ್ಷ*
sx knight cng (ಸಿಎನ್‌ಜಿ)Rs.9.38 ಲಕ್ಷ*

ಇತ್ತೀಚಿನ ಎಸ್ಯುವಿ ಕಾರುಗಳು

ಮುಂಬರುವ ಕಾರುಗಳು

  • ಕಿಯಾ syros
    ಕಿಯಾ syros
    Rs.9.70 - 16.50 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • M ಜಿ Majestor
    M ಜಿ Majestor
    Rs.46 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ be 6
    ಮಹೀಂದ್ರ be 6
    Rs.18.90 - 26.90 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ xev 9e
    ಮಹೀಂದ್ರ xev 9e
    Rs.21.90 - 30.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಆಡಿ ಕ್ಯೂ6 ಈ-ಟ್ರಾನ್
    ಆಡಿ ಕ್ಯೂ6 ಈ-ಟ್ರಾನ್
    Rs.1 ಸಿಆರ್ಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌

ಇತ್ತೀಚಿನ ಎಸ್ಯುವಿ ಕಾರುಗಳು

×
We need your ನಗರ to customize your experience