ಹುಂಡೈ ಗ್ರಾಂಡ್ i10 ಚಾಲನೆಯ ವಿಮರ್ಶೆ
Published On ಮೇ 09, 2019 By siddharth for ಹುಂಡೈ ಗ್ರಾಂಡ್ ಐ10
- 0 Views
- Write a comment
ನವೀಕರಣಗೊಳಿಸಿರುವ ಗ್ರಾಂಡ್ i10 ಹಿಂದಿನದಕ್ಕಿಂತ ಚೆನ್ನಾಗಿದೆಯೇ ಮತ್ತು ಮಾರುತಿ ಸುಜುಕಿ ಸ್ವಿಫ್ಟ್ ಜೊತೆ ಹೋಲಿಸಿದಾಗ ಇದು ಹೇಗಿರುತ್ತದೆ? ಬನ್ನಿ ತಿಳಿಯೋಣ.
ಪರೀಕ್ಷಿಸಿದ ಕಾರು : ಹುಂಡೈ ಗ್ರಾಂಡ್ i10 1.2 U2 CRDi Asta
ಎಂಜಿನ್ : ೧.೨ ಲೀಟರ್ ಡೀಸೆಲ್ , ಮಾನ್ಯುಯಲ್ ಟ್ರಾನ್ಸ್ಮಿಷನ್ (75PS/190Nm)
ARAI ಸರ್ಟಿಫೈಡ್ ಮೈಲೇಜ್ : ೨೪. ೪ KMPL
ಬೆಲೆ : ರೂ ೫. ೭೦ ಲಕ್ಷ ದಿಂದ ರೂ ೭. ೩೭ ಲಕ್ಷ ವರೆಗೂ.
ಹುಂಡೈ ಗ್ರಾಂಡ್ i10 ೨೦೧೩ ನಲ್ಲಿ ಬಿಡುಗಡೆ ಮಾಡಿದಾಗ ಹೆಚ್ಚು ಆಕರ್ಷಕ ಕಾರ್ ಆಗಿತ್ತು , ಇದರ ಬೆಲೆ ಸ್ಪರ್ಧಾತ್ಮಕವಾಗಿತ್ತು, ಆಂತರಿಕಗಳು ಚೆನ್ನಾಗಿದ್ದವು ಮತ್ತು ಗುಣಮಟ್ಟವೂ ಚೆನ್ನಾಗಿತ್ತು. ಸೆಗ್ಮೆಂಟ್ ನ ಮೊದಲ ಬಾರಿಯ ಫೀಚರ್ ಗಳು ಇದ್ದವು ಮತ್ತು ಇದಕ್ಕೆ ನಂಬಬಹುದಾದ ಆಫ್ಟರ್ ಸೇಲ್ ನೆಟ್ವರ್ಕ್ ಸಹ ಇತ್ತು. ಗ್ರಾಂಡ್ i10 ಪೆಟ್ರೋಲ್ ಹಾಗು ಡೀಸೆಲ್ ನಲ್ಲಿ ಇದ್ದರೂ ಸಹ, ಡೀಸೆಲ್ ಎಂಜಿನ್ ಸೆಗ್ಮೆಂಟ್ ನ ಇತರ ಕಾರುಗಳಿಗೆ ಹೋಲಿಸಿದಾಗ ಅಷ್ಟೇನೂ ಶಕ್ತಿಯುತವಾಗಿರಲಿಲ್ಲ. ಇದೊಂದು ಹಿಂಜರಿಕೆಯ ವಿಷಯವಾಗಿತ್ತು. ಇದರ ಹೊರತಾಗಿ ಮಿಕ್ಕೆಲ್ಲಾ ವಿಷಯಗಳೂ ಚೆನ್ನಾಗಿತ್ತು . ಗ್ರಾಂಡ್ i10 ಫೇಸ್ ಲಿಫ್ಟ್ ಅನ್ನು ಭಾರತದಲ್ಲಿ ೩ ವರ್ಷಗಳ ನಂತರ ತರಲಾಯಿತು. ಇದು ಎಲ್ಲಾ ತರಹದ್ಲಲೂ ಚೆನ್ನಾಗಿದ್ದು ಹೆಚ್ಚಿದ ಸ್ಪರ್ಧೆಯನ್ನು ನಿಭಾಯಿಸುವದಕ್ಕೆ ಸನ್ನದ್ಧವಾಗಿತ್ತು ಕೂಡ. ಆದರೂ ನವೀಕರಿಸಿದ ಗ್ರಾಂಡ್ i10 ಹಿಂದಿನದ್ದಕ್ಕಿಂತ ಚೆನ್ನಾಗಿದ್ದು , ಇದು ಮಾರುತಿ ಇಗ್ನಿಸ್ ನಂತಹ ಪ್ರತಿಸ್ಪರ್ದಿಗಳೊಂದಿಗೆ ಹೇಗೆ ಸ್ಪರ್ದಿಸುತ್ತದೆ ನೋಡೋಣ.
ಬಾಹ್ಯ
ಹುಂಡೈ ಗ್ರಾಂಡ್ i10 ಈಗಿನಷ್ಟೇ ಆಕರ್ಷಕವಾಗಿ ಹಿಂದೆ ಇರಲಿಲ್ಲ, ಇದು ಸ್ಮಾರ್ಟ್ ಆಗಿದೆ ಕೂಡ. ಫೇಸ್ ಲಿಫ್ಟ್ ಮಾಡೆಲ್ ಕಂಪನಿಯ ಹೊಸ ವಿನ್ಯಾಸ ಶೈಲಿಗೆ ಹೊಂದುತ್ತದೆ. ಮುಂಬಾಗದಲ್ಲಿ ಬದಲಾವಣೆಗಳಿಲ್ಲ " ಕ್ಯಾಸ್ಕೇಡಿಂಗ್ ಗ್ರಿಲ್ " ವಿನ್ಯಾಸ ಇದೆ. ಮೇಲ್ಬಾಗದ ಗ್ರಿಲ್ ಅನ್ನು ನವೀಕರಿಸಲಾಗಿದೆ, ಹೊಸ ಫಾಗ್ ಲ್ಯಾಂಪ್, ಸರೌಂಡ್ ಗಳು ಮತ್ತು ಹೊಸ LED DRL ಗಳನ್ನೂ ಅಳವಡಿಸಲಾಗಗಿದೆ.
ಪಕ್ಕಗಳಲ್ಲಿ ಅಷ್ಟೊಂದು ನವೀಕರಿಸಲಾಗಿಲ್ಲ , ೧೪- ಇಂಚು ಅಲಾಯ್ ವೀಲ್ ಹೊರತು ಹಿಂಬದಿಯಲ್ಲಿ ಹೊಸ ಬಂಪರ್ ಇದ್ದು ಅದರಲ್ಲಿ ಕಪ್ಪು ಇನ್ಸರ್ಟ್ ಗಳು ಹಾಗು ದುಂಡಾದ ರೆಫ್ಲೆಕ್ಟರ್ ಗಳು ಇವೆ. ಹೊಸ ವಿನ್ಯಾಸದ ಬಂಪರ್ ವಿಧವಾದ ಅನಿಸಿಕೆಗಳನ್ನು ಪಡೆಯುತ್ತದೆ. ಫೇಸ್ ಲಿಫ್ಟ್ ಗಿಂತಲೂ ಹಿಂದಿನ ಮಾಡೆಲ್ ಚೆನ್ನಾಗಿತ್ತು ಮತ್ತು ನವೀಕರಿಸುವ ಅಗತ್ಯವಿರಲಿಲ್ಲ ಎಂದೆನಿಸುತ್ತದೆ.
ಆಂತರಿಕ ವಿನ್ಯಾಸ ಮತ್ತು ಅನುಭವ
ಒಳಹೊಕ್ಕರೆ ಕ್ಯಾಬಿನ್ ನಲ್ಲಿ ವಾತಾವರಣ ಚೆನ್ನಾಗಿದೆ ಹಾಗು ಬೆಲೆಬಾಳುವಂತಿದೆ ಎಂದೆನಿಸುತ್ತದೆ. ಸೀಟ್ ಕವರ್ ಗಳಾಗಿರಬಹುದು, ಪ್ಲಾಸ್ಟಿಕ್ ಟ್ರಿಮ್ ಗಳು ಡ್ಯಾಶ್ ಬೋರ್ಡ್ ಹಾಗು ಡೋರ್ ಗಾಲ ಮೇಲೆ ಇದೆ. ಬಟನ್ ಗಳು, ಟಚ್ಸ್ಕ್ರೀನ್ ಬಳಕೆ ಎಲ್ಲವೂ ಒಳ್ಳೆಯೇ ಅನಿಸಿಕೆ ನೀಡುತ್ತದೆ. ಹುಂಡೈ ಅಂತರಿಕಗಳನ್ನು ಬದಲಾಯಿಸಿಲ್ಲ . ನಿಮಗೆ ಡುಯಲ್ ಟೋನ್ ಟ್ರಿಮ್ ಇನ್ನೂ ಸಿಗುತ್ತದೆ, ೪ ದೊಡ್ಡದಾದ AC ವೆಂಟ್ ಗಳು ಡ್ಯಾಶ್ ಬೋರ್ಡ್ ನಲ್ಲಿ , ಡೀಪ್ ಸೆಟ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ೩-ಸ್ಪೋಕ್ ಸ್ಟಿಯರಿಂಗ್ ವೀಲ್, ಮತ್ತು ದೊಡ್ಡದಾದ ಮುಲ್ತಿಫುನ್ಕ್ಷನ್ ಬಟನ್ ಗಳು, ಹೈ ಮೌಂಟ್ ಗೇರ್ ಶಿಫ಼್ಟ್ ಲೀವರ್ ಅನ್ನು ಕೊಡಲಾಗಿದೆ.
ಸೆಂಟರ್ ಕನ್ಸೋಲ್ ಇನ್ನೂಊ ಸ್ವಲ್ಪ ಹಿಂದಿನಂತೆಯೇ ಇದೆ ಆದಾರರು ನಿಮಗೆ ದೊಡ್ಡದಾದ ೭. ೦ ಇಂಚು ಟಚ್ಸ್ಕ್ರೀನ್ ಡಿಸ್ಪ್ಲೇ ಮತ್ತು ಫುಲ್ಲಿ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಇದೆ. ಸ್ಕ್ರೀನ್ ನೋಡಲು ಚೆನ್ನಾಗಿದ್ದು ಎಡಿಎ ಸುತ್ತಲಿನ ಬಟನ್ ಗಳು ಟಚ್ಸ್ಕ್ರೀನ್ ಇಲ್ಲದ ಹಿಂದಿನದಾರಂತೆ ಕಾಣುತ್ತದೆ. ಕ್ಲೈಮೇಟ್ ಕಂಟ್ರೋಲ್ ಒಂದು ಉತ್ತಮ ಅಳವಡಿಕೆ ಆಗಿದ್ದು ಕಾರು ಇತರ ಪ್ರತಿಸ್ಪರ್ದಿಗಳಿಗೆ ತಕ್ಕುದಾಗಿದೆ.
ಮುಂದಿನ ಸೀಟ್ ಆರಾಮದಾಯಕವಾಗಿದೆ. ಕ್ಯೂಷನ್ನ್ಗ್ ಹೆಚ್ಚು ಕಠಿಣ ಅಥವ ತುಂಬಾ ಮೃದುವವಾಗಿಯೂ ಇಲ್ಲ. ಸೀಟ್ ಗಳನ್ನೂ ಸ್ವಲ್ಪ ಮಟ್ಟಿಗೆ ನವೀಕರಿಸಲಾಗಿದೆ ಎಂದು ಅನಿಸುತ್ತದೆ. ಡ್ರೈವರ್ ಸೀಟ್ ಅನ್ನು ಎತ್ತರ ಅಳವಡಿಸಬಹುದಾಗಿದೆ . ಇಂಟಿಗ್ರೇಟೆಡ್ ಹೆಡ್ರ್ಸ್ಟ್ ಗಳು ಸ್ವಲ್ಪ ಸರಿಯಾಗ್ಗಿಲ್ಲ ಎಂದೆನಿಸುತ್ತದೆ. ಅದು ಕ್ಯಾಬಿನ್ ನ ಪ್ರೀಮಿಯಂ ಗುಣಗಳನ್ನು ಕಡಿಮೆ ಗೊಳಿಸುವ ಹಾಗು ಎತ್ತರದ ಹಾಗು ಕುಳ್ಳಗಿನ ವ್ಯಕ್ತಿಗಳಿಗೆ ಸರಿದೂಗುವಂತೆ ಮಾಡಲು ಸ್ವಲ್ಪ ಕಷ್ಟ ವಾಗುತ್ತದೆ. ಹಿಂಬದಿಯ ಸೀಟ್ ನ ಪ್ಯಾಸೆಂಜರ್ ಗಳಿಗೆ ಗ್ರಾಂಡ್ i10 ಇಬ್ಬರು ವ್ಯಕ್ತಿಗಳಿಗೆ ಆರಾಮದಾಯಕವಾಗಿದೆ ಎಂದೆನಿಸುತ್ತದೆ.
ಕ್ಯಾಬಿನ್ ಮೂರು ಪ್ಯಾಸೆಂಜರ್ ಗಳಿಗೆ ಹೊಂದುವಂತೆ ಇದ್ದರೂ ಸಹ , ಸ್ವಲ್ಪ ಹೆಚ್ಚಿಸಲ್ಪಟ್ಟ ಮದ್ಯದ ಟನಲ್ ಹಾಗು ಹಿಂಬದಿಯ AC ವೆಂಟ್ ಕನ್ಸೋಲ್ ಸೆಂಟರ್ ಪ್ಯಾಸೆಂಜರ್ ಗಾಲ ಜಾಗವನ್ನು ಆಕ್ರಮಿಸುತ್ತದೆ. ಹೆಡ್ ರೆಸ್ಟ್ ಇಲ್ಲದಿರುವುದರಿಂದ ( ಇನ್ನೆರೆಡು ಪ್ಯಾಸೆಂಜರ್ ಗಳಿಗೆ ಸರಿಪಡಿಸಬಹುದಾದದದ್ದು ಇದೆ) ಮತ್ತು ಲ್ಯಾಪ್ ಬೆಲ್ಟ್ ( ಮೂರು ಪಾಯಿಂಟ್ ಗಾಳ ಯೂನಿಟ್ ಬೇರೆ ಎರಡಕ್ಕೆ) ಇದನ್ನು ಕಡಿಮೆ ಸುರಕ್ಷತೆಯಿರುವ ಜಾಗವಾಗಿ ಮಾಡಿದೆ. ಕಾಲುಗಳ ಜಾಗ , ಮಂಡಿ ಗಳ ಜಾಗ ಆರು ಅಡಿ ಇರುವ ಮುಂದಿನ ಸೀಟ್ ಗಾಲ ಪ್ಯಾಸೆಂಜರ್ ಗಳಿಗೆ ಸಾಕಾಗುತ್ತದೆ. ಇದು ಕ್ಲಾಸ್ ಲೀಡಿಂಗ್ ಅಲ್ಲದಿದ್ದರೂ ಎತ್ತರದ ಪ್ಯಾಸೆಂಜರ್ ಗಳಿಗೆ ಅನಾನುಕೂಲ ಎಂದು ಹೇಳಲು ಕರಣ ಸಿಗುವುದಿಲ್ಲ.
ಹಿಂದಡಿಯ ಸೀಟ್ ನ ಬ್ಯಾಕ್ ರೆಸ್ಟ್ ಅನ್ನು ಮಡಚಬಹುದು , ಆದರೆ ಸ್ಪ್ಲಿಟ್ ಮಾಡಿ ಮಡಚಲು ಆಗುವುದಿಲ್ಲ. ಲಗೇಜ್ ಕಂಪಾರ್ಟ್ಮೆಂಟ್ ೨೫೬ ಲೀಟರ್ ಕೆಪ್ಯಾಸಿಟಿ ಹೊಂದಿದ್ದು ಹಿಂದಿನದ್ದಕ್ಕಿಂತ ಬದಲಾವಣೆ ಇಲ್ಲ ಎನಿಸುತ್ತದೆ, ಇಗ್ನಿಸ್ ಗಿಂತ ೫ ಲೀಟರ್ ಹೆಚ್ಚಗೆ ಇದ್ದು , ಸೆಗ್ಮೆಂಟ್ ನಲ್ಲೆ ದೊಡ್ಡದು ಎನಿಸುತ್ತದೆ.
ಟೆಕ್ನಾಲಜಿ ಮತ್ತು ಸಲಕರಣೆಗಳು,
ಗ್ರಾಂಡ್ i10 ನಲ್ಲಿ ಮುಂದಿನ ಬಂಪರ್ ನಲ್ಲಿ ಫಾಗ್ ಲ್ಯಾಂಪ್ ಜೊತೆಗೆ LED DRL ಗಳನ್ನೂ ಅಳವಡಿಸಲಾಗಿದೆ. ಇದು ಹೊಸತಾಗಿದ್ದರೂ ಆಫ್ಟರ್ ಮಾರ್ಕೆಟ್ ನಿಂದ ತರಲಾಗಿದೆ ಎಂದು ಅನಿಸುತ್ತದೆ. DRL ನ ವಿಶೇಷತೆ ಎಂದರೆ ನೀವು ಪಾರ್ಕಿಂಗ್ ಬ್ರೇಕ್ ಹಾಕಿದರೆ ಅವು ಸ್ವಿಚ್ ಆಫ್ ಆಗುತ್ತದೆ, ಕಾರು ಸ್ವಿಚ್ ಆನ್ ಇದ್ದರೂ ಸಹ. ಇದು ಇತರ ವಾಹನ ಚಾಲಕರಿಗೆ ನಿಮ್ಮ ವಾಹನ ಮುಂದೆ ಸಾಗುವುದಿಲ್ಲ ಎಂದು ತಿಳಿಯುತ್ತದೆ.
ಆಂತರಿಕದಲ್ಲಿ ದೊಡ್ಡದಾದ ಬದಲಾವಣೆಯೆಂದರೆ ಹೊಸ ೭-ಇಂಚು ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸ್ಕ್ರೀನ್ . ಇದನ್ನು ನಿಮ್ಮ ಸ್ಮಾರ್ಟ್ ಫೋನ್ ಗೆ MirrorLink ಮುಕಾಂತರ ಅಳವಡಿಯಬಹುದು, ಹಾಗು ನಿಮ್ಮ ಅನುಕೂಲಕ್ಕಾಗಿ Android Auto and Apple CarPlay ಸಪೋರ್ಟ್ ಮಾಡುತ್ತದೆ ಕೂಡ. ಗ್ರಾಂಡ್ i10 ನಲ್ಲಿ ರೇರ್ ಪಾರ್ಕಿಂಗ್ ಕ್ಯಾಮೆರಾ ಇನ್ಫೋಟೈನ್ಮೆಂಟ್ ಸ್ಕ್ರೀನ್ ಮೇಲೆ ಗೈಡ್ ಡಿಸ್ಪ್ಲೇ ಒಂದಿಗೆ ಬರುತ್ತದೆ.
ಹುಂಡೈ ಗ್ರಾಂಡ್ i10 ನಾವು ಪರೀಕ್ಷಿಸಿದ ಸ್ಮಾರ್ಟ್ ಫೋನ್ ಅಳವಡಿಕೆ ಇರುವ ಕೆಲವು ಕಾರುಗಳಲ್ಲಿ ಒಂದಾಗಿದೆ. ಇದರ ಚತುರವಾದ ಟಚ್ಸ್ಕ್ರೀನ್ ಆಶ್ಚರ್ಯ ಉಂಟುಮಾಡಿತು. ಇನ್ಫೋಟೈನ್ಮೆಂಟ್ ಸಿಸ್ಟಮ್ ಸ್ಟಿಯರಿಂಗ್ ಮೌಂಟೆಡ್ ಕಂಟ್ರೋಲ್ ಚೆನ್ನಾಗಿ ಕೆಲಸ ಮಾಡುತ್ತದೆ. ಹೊಸ ಗ್ರಾಂಡ್ i10 ನಲ್ಲಿ ಇನ್ಫೋಟೈನ್ಮೆಂಟ್ ಸಿಸ್ಟಮ್ ಗೆ ವಾಯ್ಸ್ ಕಮಾಂಡ್ ಇದ್ದು ಸ್ಮಾರ್ಟ್ ಫೋನ್ ಅಳವಡಿಕೆಗೆ ಗೆ ಅನುಕೂಲವಾಗಿದೆ.
ಎಂಜಿನ್ ಮತ್ತು ಕಾರ್ಯ ದಕ್ಷತೆ
ಹುಂಡೈ ಗ್ರಾಂಡ್ i10 ಎರೆಡು ಎಂಜಿನ್ ಆಯ್ಕೆ ಗಳಲ್ಲಿ ಬರುತ್ತದೆ. ೧. ೨ ಲೀಟರ್ ೪-ಸಿಲಿಂಡರ್ ಪೆಟ್ರೋಲ್ ಎಂಜಿನ್ ೫-ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ನೊಂದಿಗೆ ಹಾಗು ೪-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಒಂದಿಗೆ . ನಾವು ಟೆಸ್ಟ್ ಮಾಡಿದ ಕಾರು ಹೊಸ ೧. ೨ ಲೀಟರ್ ೩-ಸಿಲಿಂಡರ್ ಟರ್ಬೊ ಚಾರ್ಜ್ ಡೀಸೆಲ್ ಎಂಜಿನ್ ೫-ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಒಂದಿಗೆ. ನಿಮಗೆ ಎಂಜಿನ್ ಸ್ವಿಚ್ ಆಫ್ ಮಾಡಿದಾಗ ಮಾತ್ರ ಕ್ಯಾಬಿನ್ ಶೇಕ್ ಆಗುವಂತೆ ಆಗಿ ಎಂಜಿನ್ ನ ವೈಬ್ರೆಷನ್ ಅರಿವಿಗೆಬರುತ್ತದೆ.
ಡೀಸೆಲ್ ಎಂಜಿನ್ ಒಂದು ೧.೧ ಲೀಟರ್ ನ ಎಂಜಿನ್ ನ ಪುನರಾವರ್ತನೆಯಂತೆ ಕಾಣುತ್ತದೆ . ಡಿಸ್ಪ್ಲೇಸ್ಮೆಂಟ್ ಅನ್ನು ಹೆಚ್ಚಿಸಿರುವುದರಿಂದ ಪವರ್ 71PS ನಿಂದ 75PS ಗೆ ಮತ್ತು ಟಾರ್ಕ್ 160Nm ನಿಂದ 190Nm ಗೆ , ಇದು ಸಿಟಿ ಯಲ್ಲಿ ಡ್ರೈವ್ ಮಾಡಲು ಅನುಕೂಲವಾಗುತ್ತದೆ.
ಹೊಸ ೧. ೨ ಲೀಟರ್ 'U2 CRDi' 190Nm ಟಾರ್ಕ್ ಅನ್ನು 1,750rpm ನಲ್ಲಿ ಕೊಡುತ್ತದೆ. ಗ್ರಾಂಡ್ 10 ಕೆಲವು ಬಾರಿ ಹೆಚ್ಚಿನ ಪವರ್ ನಿಂದ ಕೂಡಿದೆ ಎಂದೆನಿಸುತ್ತದೆ. ಹೈ ವೆ ಗಳಲ್ಲಿ 4,000rpm ನಲ್ಲಿ ಸ್ವಲ್ಪ ಮಂದವಾಗಿರುವಂತೆ ಕಾಣುತ್ತದೆ, ಮತ್ತು 110-120kmph ನಂತರ ವೇಗದ ಬೆಳವಣಿಗೆ ನಿಧಾನವಾಗುತ್ತದೆ. ಗ್ರಾಂಡ್ i10 ಡೀಸೆಲ್ 0-100kmph ಗೆ 17.32 ಸೆಕೆಂಡ್ ತೆಗೆದುಕೊಳ್ಳುತ್ತದೆ.
೫-ಸ್ಪೀಡು ಮಾನ್ಯುಯಲ್ ಟ್ರಾನ್ಸ್ಮಿಷನ್ ಉಪಯೋಗಿಸಲು ಸುಲಭವಾಗಿದೆ. ಶೀಘ್ರ ಗೇರ್ ಬದಲಾವಣೆಗೆ ಸಹಕಾರಿಯಾಗಿದೆ. ಗ್ರಾಂಡ್ i10 ನ ಹೊಸ ಡೀಸೆಲ್ ಎಂಜಿನ್ ಎಫಿಷಿಯೆಂಟ್ ಆಗಿದೆ . ಇದು 19.1kmpl ಸಿಟಿ ಯಲ್ಲಿ ಹಾಗು 22.19kmpl ಹೈ ವೆ ಗಳಲ್ಲಿ ಕೊಡುತ್ತದೆ. ಒಟ್ಟಿನ ಮೈಲೇಜ್ 20.71kmpl ಆಗಿದೆ. ಇದು ARAI ಸರ್ಟಿಫೈಡ್ ಮೈಲೇಜ್ ಆದ 22.4kmpl ಗೆ ಹತ್ತಿರವಿದೆ.
ರೈಡ್ ಮತ್ತು ಹ್ಯಾಂಡಲಿಂಗ್
ಹುಂಡೈ ಗ್ರಾಂಡ್ 10 ನಲ್ಲಿ ಸಸ್ಪೆನ್ಷನ್ ಸಿಟಿ ಉಪಯೋಗಕ್ಕೆ ತಕ್ಕಂತೆ ಇದೆ. ಇದು ತುಂಬಾ ಮೃದುವಾಗು ಇಲ್ಲ ಅಥವಾ ಕಠಿಣವಾಗು ಇಲ್ಲ, ಸರಿಯಾಗಿದೆ. ಸಸ್ಪೆನ್ಷನ್ ನಿಶ್ಯಬ್ದ ವಾಗಿ ಕಾರ್ಯ ನಿರ್ವಹಿಸುತ್ತದೆ. ಅತೀ ಕಠಿಣವಾದ ಹಳ್ಳ ದಿಣ್ಣೆಗಳಲ್ಲಿ ಮಾತ್ರ ಸ್ವಲ್ಪ ಶಬ್ದ ಬರುತ್ತದೆ. ಒಟ್ಟಿನಲ್ಲಿ ನಿಮಗೆ ಯಾವಾಗಲೂ ಆರಾಮದಾಯಕವಾಗಿಲ್ಲ ಎಂದೆನಿಸುವುದಿಲ್ಲ. ಕಡಿಮೆ ಎಂಜಿನ್ ನ ಶಬ್ದ ಮತ್ತು ವೈಬ್ರೆಷನ್ ಗಳು ಹಾಗು ಗ್ರಾಂಡ್ i10 ನ ಅಂತರಿಕಗಳನ್ನು ಚೆನ್ನಾಗಿದೆ ಎನ್ನುವಂತೆ ಮಾಡುತ್ತದೆ. ಸ್ಟಿಯರಿಂಗ್ ಬಳಸಲು ಸುಲಭ ವಾಗಿದ್ದು ಚಿಕ್ಕ ಟರ್ನಿಂಗ್ ಸರ್ಕಲ್ ರೇಡಿಯಸ್ ಗ್ರಾಂಡ್ i10 ಅನ್ನು ಸಿಟಿ ಉಪಯೋಗಕ್ಕೆ ತಕ್ಕುದಾಗಿ ಮಾಡಿದೆ. ಸ್ಟಿಯರಿಂಗ್ ಉತ್ತಮವಾಗಿಲ್ಲವೆನಿಸಿದರೂ ಸಸ್ಪೆನ್ಷನ್ ಮತ್ತು ಬ್ರೇಕ್ (ABS ನೊಂದಿಗೆ) ನಿಮಗೆ ಚೇತೋಹಾರಿಯಾಗಿರುತ್ತದೆ.
ಪರ್ಫಾರ್ಮೆನ್ಸ್ ನಂಬರ್ ಗಳು
0-100kmph ವೇಗ - 13.21 seconds
30-80kmph ಗೇರ್ ನಲ್ಲಿನ ವೇಗ (3rd gear) - 7.93 seconds
1st- ಗೇರ್ ನ ಗರಿಷ್ಟ ವೇಗ - 39.6kmph
2nd ಗೇರ್ ನ ಗರಿಷ್ಟ ವೇಗ - 68.3kmph
3rd ಗೇರ್ ನ ಗರಿಷ್ಟ ವೇಗ - 100.5kmph
100-0kmph ನಿಲ್ಲಲು ಬೇಕಾದ ಸಮಯ - 3.55 seconds, 47 metres
80-0kmph ನಿಲ್ಲಲು ಬೇಕಾದ ಸಮಯ - 2.84 seconds, 29.3 metre
ಸುರಕ್ಷತೆಗಳು
ಹುಂಡೈ ಗ್ರಾಂಡ್ i10 ನಲ್ಲಿ ಡ್ರೈವರ್ ಏರ್ಬ್ಯಾಗ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ. ನಾವು ಟೆಸ್ಟ್ ಮಾಡಿದ ಟಾಪ್ ಆ ದಿ ಲೈನ್ ಆಸ್ತಾ ವೇರಿಯೆಂಟ್ ನಲ್ಲಿ ಡುಯಲ್ ಫ್ರಂಟ್ ಏರ್ಬ್ಯಾಗ್ , ABS , ಇಂಪ್ಯಾಕ್ಟ್ ಸೆನ್ಸಿಂಗ್ ಡೋರ್ ಅನ್ಲಾಕ್, ರೇರ್ ಡಿ ಫಾಗರ್ ಮತ್ತು ರೇರ್ ಪಾರ್ಕಿಂಗ್ ಸೆನ್ಸರ್ ಗಳು ಮತ್ತು ಕ್ಯಾಮೆರಾ ವನ್ನು ಕೊಡಲಾಗಿದೆ.
ಹುಂಡೈ ಗ್ರಾಂಡ್ i10 ನ ಬೆಳೆಗೆ ತಕ್ಕಂತೆ ಸುರಕ್ಷತಾ ಸಲಕರಣೆಗಳನ್ನು ಫೋರ್ಡ್ ಫಿಗೊ ನಂತೆ ಕೊಡಲಾಗಿಲ್ಲ. ಫೋರ್ಡ್ ಫಿಗೊ ದಲ್ಲಿ ೬ ಏರ್ಬ್ಯಾಗ್, ABS and EBD ಇದ್ದು ಗ್ರಾಂಡ್ i10 ಸುರಕ್ಷತೆಯಲ್ಲಿ ಮೀರಿಸುತ್ತದೆ.
ವೇರಿಯೆಂಟ್ ಗಳು,
ಹುಂಡೈ ಗ್ರಾಂಡ್ i10 ನಲ್ಲಿ ೧. ೨ ಲೀಟರ್ ಪೆಟ್ರೋಲ್ ಎಂಜಿನ್ ಇದ್ದು ೬ ವೇರಿಯೆಂಟ್ ಗಳಲ್ಲಿ ಲಭ್ಯವಿದೆ. ಹಾಗು ಡೀಸೆಲ್ ೧. ೨ ಲೀಟರ್ ಎಂಜಿನ್ ಒಂದಿಗಿನದ್ದು ೪- ವೇರಿಯೆಂಟ್ ಗಳಲ್ಲಿ ಲಭ್ಯವಿದೆ.
ಬೇಸ್ ವೇರಿಯೆಂಟ್ ಎರ ನಲ್ಲಿ ಪವರ್ ವಿಂಡೋ, ಮಾನ್ಯುಯಲ್ ಏರ್ ಕಂಡೀಶನ್, ಡ್ರೈವರ್ ಏರ್ಬ್ಯಾಗ್ ಮತ್ತು ಗೇರ್ ಶಿಫ್ಟ್ ಇಂಡಿಕೇಟರ್ ಇದೆ. ಮ್ಯಾಗ್ನ ವೇರಿಯೆಂಟ್ ನಲ್ಲಿ ಮೇಲಿನ ಫೀಚರ್ ಗಳು ಮತ್ತು ಮುಂದಿನ ಫಾಗ್ ಲ್ಯಾಂಪ್ ಗಳು, ಕೀ ಲೆಸ್ ಎಂಟ್ರಿ, ಫುಲ್ ವೀಲ್ ಕವರ್, ಮತ್ತು ಹಿಂಬದಿ AC ವೆಂಟ್ ಗಳು ಇದೆ. ಸಾಇರ್ತ್ಜ್ ವೇರಿಯೆಂತ್ ನಲ್ಲಿ, ಮೇಲಿನ ಸಲಕರಣೆಗಳ ಜೊತೆಗೆ ರೇರ್ ಪಾರ್ಕಿಂಗ್ ಸೆನ್ಸರ್, ರೇವೂರ್ ಡಿ ಫಾಗರ್ , ತಂಪಾದ ಗ್ಲೋವ್ ಬಾಕ್ಸ್, ಮತ್ತು ೫.೦ ಇಂಚು ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಇದೆ. ಸ್ಪೋರ್ಟ್ಜ್ (O) ದಲ್ಲಿ ೭. ೦ ಇಂಚು ಇನ್ಫೋಟೈನ್ಮೆಂಟ್ ಸಿಸ್ಟಮ್ Apple CarPlay and Android Auto ನೊಂದಿಗೆ ಬರುತ್ತದೆ, LED DRL ಗಳು, ಮತ್ತು ೧೪-ಇಂಚು ಅಲಾಯ್ ವೀಲ್ ಗಳು ಸಹ ಇವೆ. ಟಾಪ್ ಆ ದಿ ಲೈನ್ ವೇರಿಯೆಂಟ್ ಆದ ಆಸ್ತಾ ದಲ್ಲಿ ABS , ಪುಶ್ ಬಟನ್ ಸ್ಟಾರ್ಟ್/ ಸ್ಟಾಪ್ , ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ರೇರ್ ಸ್ಪೋಇಲೆರ್ ಗಳು ಇವೆ.
ಸ್ಪೋರ್ಟ್ಜ್ (O) ಮತ್ತು ಅದಕ್ಕಿಂತ ಹೆಚ್ಚಿನ ವೇರಿಯೆಂಟ್ ಗಳಿಗೆ ಹೋಗುವುದು ಒಂದು ಉತ್ತಮ ಆಯ್ಕೆ, ಇದಕ್ಕೆ ಕೆಳಗಿನ ವೇರಿಯೆಂಟ್ ಗಳು ಕ್ಲಿಷ್ಟಕರ ಆಯ್ಕೆ ಆಗಿರುತ್ತದೆ. ಒಂದು ಆಶರ್ಯಕರ ಸಂಗತಿಯೆಂದರೆ ಎರ ಮತ್ತು ಮ್ಯಾಗ್ನ ವೇರಿಯೆಂಟ್ ಗಳಲ್ಲಿ ಮಲ್ಟಿಮೀಡಿಯಾ ಸಿಸ್ಟಮ್ ಅನ್ನು ಫ್ಯಾಕ್ಟರಿ ಫೈಟ್ಮೆಂಟ್ ನಲ್ಲಿ ಕೊಡಲಾಗಿಲ್ಲ. ಆಸ್ತಾ ವೇರಿಯೆಂತ್ ನಲ್ಲಿ ಮಾತ್ರ ABS ಕೊಡಲಾಗಿದೆ, ಮತ್ತು ಇದು ಒಂದು ಅತುತ್ತಮ ಆಯ್ಕೆ ಆಗಿರುತ್ತದೆ.
ಅಂತಿಮ ಅನಿಸಿಕೆ
ಫೇಸ್ ಲಿಫ್ಟ್ ಮಾಡೆಲ್ ಆದ ಹುಂಡೈ ಗ್ರಾಂಡ್ i10 ಈ ಸೆಗ್ಮೆಂಟ್ ನಲ್ಲಿ ಒಂದು ಉತ್ತಮ ಆಯೆ ಆಗಿರುತ್ತದೆ. ಹೊರಗಿನ ವಿನ್ಯಾಸದ ಬದಲಾವಣೆಗಳು ಕಡಿಮೆ ಇದ್ದರೂ , ಸಲಕರಣೆಗಳ ಪಟ್ಟಿಯಲ್ಲಿ ಸಾಕಷ್ಟು ಮುಂದುವರೆದಿದೆ. , ಮತ್ತು ಹೊಸಾ ೧. ೨ ಲೀಟರ್ ಡೀಸೆಲ್ ಎಂಜಿನ್ ಸಹ ಚೆನ್ನಾಗಿದೆ. ಹಿನ್ನಡತೆಯ ವಿಷಯವೆಂದರೆ ಗ್ರಾಂಡ್ i10 ಆರಾಮದಾಯಕವಾಗಿದೆ, ವಿಶಾಲವಾಗಿದೆ, ಮತ್ತು ಒಂದು ಉತ್ತಮ ಫೀಚರ್ ಗಳನ್ನೂ ಹೊಂದಿರುವ ನಗರಗಳಿಗಾಗಿ ಇರುವ ಹ್ಯಾಚ್ ಬ್ಯಾಕ್ ಆಗಿದೆ. ಆದರೂ ಇದು ಪ್ರತಿಸ್ಪರ್ದಿಗಳೊಂದಿಗೆ ಹೋಲಿಸಿದಾಗ ಅವಲ್ಪ ಹಿನ್ನಡತೆ ಹೊಂದುತ್ತದೆ, ವಿಶೇಷವಾಗಿ ಮಾರುತಿ ಸುಜುಕಿ ಇಗ್ನಿಸ್.
ಗ್ರಾಂಡ್ i10 ನಲ್ಲಿ ನಮಗೆ ಇಷ್ಟವಾಗುವ ವಿಷಯಗಳು:
ಡೀಸೆಲ್ ಎಂಜಿನ್ ಶಕ್ತಿಯುತವಾಗಿದೆ, ಹೆಚ್ಚಿನ ಟಾರ್ಕ್ ಟೌನ್ ನಲ್ಲಿ ಸುತ್ತಾಡುವಿಕೆಗೆ ಅನುಕೂಲವಾಗಿದೆ.
ಕ್ಯಾಬಿನ್ ಮರ್ಕಟ್ಟೆಯ ರೀತಿಗಳಿಗೆ ಅನ್ವ್ಯಯಿಸುವಂತಿದೆ. ಒಟ್ಟಿನಲ್ಲಿ ಹೆಚ್ಚು ಆಕರ್ಷಕವಾಗಿದೆ.
ವಿಶಾಲವಾದ ಪ್ಯಾಸೆಂಜರ್ ಹಾಗು ಲಗೇಜ್ ಜಾಗ ; ಅನುಕೂಲಕರ ಫೀಚರ್ ಗಳು ಆಲೋಚಿಸಿ ಕೊಡಲಾಗಿದೆ
ಹೊಸ ಸ್ಮಾರ್ಟ್ ಫೋನ್ ಹೊಂದಿಕೊಳ್ಳುವ ಇನ್ಫೋಟೈನ್ಮೆಂಟ್ ಸಿಸ್ಟಮ್ ( ಟಾಪ್ ಎಂಡ್ ವೇರಿಯೆಂತ್ ಆದ ಆಸ್ತಾ ದಲ್ಲಿದೆ) ಚೆನ್ನಾಗಿ ಕಾರ್ಯ ನಿರ್ವಹಿಸುತ್ತದೆ.
ಗ್ರಾಂಡ್ i10 ನಲ್ಲಿ ನಮಗೆ ಇಷ್ಟವಾಗದ ವಿಷಯಗಳು
ಬೇಸ್ ವೇರಿಯೆಂಟ್ ನಲ್ಲಿ ಕೇವಲ ಡ್ರೈವರ್ ಏರ್ಬ್ಯಾಗ್ ಇದೆ ABS ಇಲ್ಲ. ಮಾರುತಿ ಇಗ್ನಿಸ್ ನಲ್ಲಿ ಡುಯಲ್ ಏರ್ಬ್ಯಾಗ್ ಗಳು ಇದ್ದು ABS ಸ್ಟ್ಯಾಂಡರ್ಡ್ ಆಗಿದೆ.
ABS ಅನ್ನು ಟಾಪ್ ಆ ದಿ ಲೈನ್ ಆಸ್ತಾ ವೇರಿಯೆಂಟ್ ನಲ್ಲಿ ಮಾತ್ರ ಕೊಡಲಾಗಿದೆ.
ಆಡಿಯೋ ಸಿಸ್ಟಮ್ ಅನ್ನು ಬೇಸ್ ವೇರಿಯೆಂಟ್ ನಲ್ಲಿ ಸ್ಟ್ಯಾಂಡರ್ಡ್ ಆಗಿ ಕೊಟ್ಟಿಲ್ಲ
ಮುಂದಿನ ಸೀಟ್ ಗಳ ಇಂಟಿಗ್ರೇಟೆಡ್ ಹೆಡ್ ರೆಸ್ಟ್ ಗಳು ಉಪಯುಕ್ತತೆಯನ್ನು ಕಡಿಮೆ ಮಾಡುತ್ತದೆ.
ವಿಶೇಷವಾದ ಫೀಚರ್ ಗಳು:
೭. ೦ ಇಂಚು ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ Android Auto and Apple CarPlay ನೊಂದಿಗೆ.
ಆಟೋ ಫೋಲ್ಡಿಂಗ್ ORVM ಗಳು ಲಾಕ್/ ಅನ್ಲೋಕ್ ಗೆ ಅನುಕೂಲವಾಗಿದೆ ಮತ್ತು ಪ್ರೀಮಿಯಂ ಆಗಿದೆ ಎಂದೆನಿಸುತ್ತದೆ.
ಹೊಸಾ ೧. ೨ ಲೀಟರ್ ಡೀಸೆಲ್ ಎಂಜಿನ್ ಗ್ರಾಂಡ್ i10 ನ್ನು ನಗರಗಳಿಗೆ ಉತ್ತಮವಾಗಿದೆ ಎನ್ನುವಂತೆ ಮಾಡುತ್ತದೆ.
ಅತ್ಯುತ್ತಮ NVH ಕಂಟ್ರೋಲ್ ಹಾಗು ಒಟ್ಟಾರೆ ಆಂತರಿಕ ಗುಣಮಟ್ಟವು ಗ್ರಾಂಡ್ i10 ಅನ್ನು ಈ ಸೆಗ್ಮೆಂಟ್ ಗೆ ಮೀರಿದೆ ಎಂದೆನಿಸುತ್ತದೆ.