• English
  • Login / Register

ಮಾರುತಿ ವಿಟಾರಾ ಬ್ರೆಝ ತಜ್ಞರ ವಿಮರ್ಶೆ

Published On ಜೂನ್ 11, 2019 By abhishek for ಮಾರುತಿ ವಿಟರಾ ಬ್ರೆಜ್ಜಾ 2016-2020

ಮಾರುತಿ ವಿಟಾರಾ ಬ್ರೆಝ ಮೊದಲ ಡ್ರೈವ್ ನೋಡಿರಿ

ವಿವಿಧ ಹಂತಗಳು ಜೀವನದ ಒಂದು ಭಾಗ, ಅದು ಯಾವುದೇ ಆಗಿರಬಹುದ್, ಉದಾಹರಣೆಗೆ ಫ್ಯಾಷನ್ ಅಥವಾ ಟಚ್ನಲಜಿ, ಇಲ್ಲಿನ ವಿಷ್ಯದಲ್ಲಿ ಕಾರ್ ಗಳು. ನಿಮಗೆ ಬೇಕಾಗಿರುವುದು ಜೀವನದಲ್ಲಿ ಉತ್ಸಾಹ ತುಂಬಬಲ್ಲ ಒಂದು ವಸ್ತುವು. ಮಿಕ್ಕೆಲ್ಲ ಹಾಗೆ ಹಿಂದೆ ಬರುತ್ತದೆ. ಇಲ್ಲಿನ ವಿಷ್ಯದಲ್ಲಿ, ಫೋರ್ಡ್ ಎಕೋಸ್ಪೋರ್ಟ್ ಇವೆಕ್ಕಳಾ ಪ್ರಾರಂಭ ಕೊಟ್ಟಂತಹ ಕಾರ್. ಅದು ದೇಶದಲ್ಲಿ ಪ್ರಥಮವಾಗಿ ಬಾನಂತಹ ನೂತನ ಮಾಡೆಲ್, ಅದು ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಬೆಳವಣಿಗೆಗೆ ಕಾರಣವಾಯಿತು, ಈಗ ಎಲ್ಲ ತಯಾರಕರು ಈ ವಿಭಾಗದಲ್ಲಿ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ. ಮಾರುತಿ ಸುಜುಕಿ ಯು ಸಹ ಕಾರ್ಯರೂಪಕ್ಕೆ ತರಲು ಶುರು ಮಾಡಿದೆ, ಮತ್ತು ಈ ನಿಟ್ಟಿನಲ್ಲಿ ವಿಟಾರಾ ಬ್ರೆಝ ವನ್ನು ಹೊರತಂದಿದೆ. ಬ್ರೆಝ ಜೊತೆಗೆ ಭಾರತದ ಅತಿ ದೊಡ್ಡ ಕಾರ್ ಮೇಕರ್ ಕೊನೆಗೆ ಒಂದು ಕಾಂಪ್ಯಾಕ್ಟ್ SUV ಹೊಂದಿದೆ. ಈ ಮಾಡೆಲ್ ಮಾರುತಿಯ ಲೈನ್ ಅಪ್ ನಲ್ಲಿ ಮಿಸ್ ಆಗಿತ್ತು ಎಂದೆನಿಸುತ್ತದೆ.

Maruti Vitara Brezza - Expert Review

ಬ್ರೆಝ ಮಾರುತಿ ಅವರಿಗೆ ಒಂದು ಮುಖ್ಯವಾದ ಕಾರ್ ಆಗಿದೆ, ಅದಕ್ಕೆ ಬಹಳಷ್ಟು ಕಾರಣಗಳಿವೆ ಕೂಡ. ಉದಾಹರಣೆಗೆ, ಅದು ಫೋರ್ಡ್ ಎಕೋಸ್ಪೋರ್ಟ್ ಹಾಗು ಮಹಿಂದ್ರಾ TUV300 ಯೊಂದಿಗೆ ಸ್ಪರ್ದಿಸಬೇಕಿತ್ತು. ಎರೆಡನೇಯದಾಗಿ, ಮಾರುತಿ ಯು ಬಹಳಷ್ಟು ಯೋಚನೆ ಮತ್ತು ಯೋಜನೆಯನ್ನು ಇದರಲ್ಲಿ ಅಳವಡಿಸಿದೆ. ನಾವು ಅದನ್ನು ವಿವರವಾಗಿ ತಿಳಿಯೋಣ. ವಿತರ ಬ್ರೆಝ ಮಾರುತಿ ಯ ಭಾರತದಲ್ಲಿ ವಿನ್ಯಾಸ ಮತ್ತು ತಯಾರಿಸಿರುವ ಕಾರ್ ಆಗಿದೆ. ಮತ್ತು ಸ್ಥಳೀಯವಾಗಿ ಮಾಡಿರುವುದರಿಂದ  ಸರಿಸುಮಾರು 98% ಪ್ರಯೋಜನ ಕೂಡ ಆಗಿದೆ,  ಮತ್ತು ಅದು ಕಾರ್ ನ ಹಾಗು ಪಾರ್ಟ್ ಗಳ   ಬೆಲೆ ಪಟ್ಟಿ ನಿಗದಿ ಪಡಿಸುವಾಗ ಸಹಾಯವಾಗುತ್ತದೆ. ನಂತರ ವಿನ್ಯಾಸ, ಇದನ್ನು  ಮಾರುತಿ ಸರಿಯಾಗಿ ಮಾಡಬೇಕಾಗಿತ್ತು. ಕಾರ್ ನಿಖರವಾದ ಶೈಲಿಯಲ್ಲಿ ಇರಬೇಕಾಗಿತ್ತು ಅದಾಲ್ಲಿ ಕಾಂಪ್ಯಾಕ್ಟ್ ಅಳತೆ ಹಾಗು SUV ನೋಟ ಸಹ ಇರಬೇಕಾಗಿತ್ತು. ನಾವು ಬ್ರೆಝ ವನ್ನು ಡ್ರೈವ್ ಮಾಡಿ  ಅದರ ವಿಶೇಷತೆಗಳನ್ನು ನಿಮಗೆ ತಿಳಿಸಲು ನಿರ್ಧರಿಸಿದೆವು.

 Maruti Vitara Brezza - Expert Review

ಬಾಹ್ಯ

Maruti Vitara Brezza - Expert Review

ಸಬ್ 4-ಮೀಟರ್  SUV ಯನು ವಿನ್ಯಾಸ ಮಾಡುವುದು ಒಂದು ಕಠಿಣ ಕೆಲಸವೇ ಆಗಿದೆ. ಜೊತೆಗೆ ಉದ್ದಳತೆಯ ನಿರ್ಬಂಧ ಇರುವುದರಿಂದ, ಅಗಲ ಮತ್ತು ಎತ್ತರವನ್ನು ಹೆಚ್ಚಿಸಿ ವಿಚಿತ್ರವಾಗಿರುವ ವಿನ್ಯಾಸ ಮಾಡುವ ಸಾಧ್ಯತೆ ಇತ್ತು. ಆದರೆ ಮಾರುತಿ ತಮಗೆ ಭಾರತದಲ್ಲಿ ಇರುವ ಬೇಡಿಕೆ ಗಳಬಗ್ಗೆ ಜ್ಞಾನಕಣ್ಣು ತೋರಿಸಿ ಕೊಟ್ಟಿತು, ಇತರರಿಗಿಂದ ಮುಂದುವರೆದು. ಬ್ರೆಝ ಒಂದು ಖ್ಯಾತಿ ಪಡೆದಿರುವ  ಮಾರ್ಕೆಟ್ ನಲ್ಲಿರುವ ಕಾಂಪ್ಯಾಕ್ಟ್ SUV ಗಳಲ್ಲಿ ಒಂದು ಆಗಿದೆ.

Maruti Vitara Brezza - Expert Review

ಇದನ್ನು ಚೆನ್ನಾಗಿ ವಿನ್ಯಾಸ ಮಾಡಲಾಗಿದೆಯೇ? ಮುಂದುವರೆಯಲು, ಇದು ದೊಡ್ಡದಾಗಿ ಮತ್ತು ವಿಶಾಲವಾಗಿ ಕಾಣುತ್ತದೆ ಚಿತ್ರಗಳಲ್ಲಿ.  SUV  ಯನ್ನು  ಹ್ಯಾಚ್ ಬ್ಯಾಕ್ ಬೆಲೆಯಲ್ಲಿ ಬಯಸುವವರಿಗೆ ಮತ್ತು ಮುಖ್ಯವಾಗಿ ಅಳತೆಯ ನಿರ್ಬಂಧತೆಗಳ ಬಗ್ಗೆ ಇದು ಸರಿಯಾಗಿದೆ ಎಂದೆನಿಸುತ್ತದೆ. ಬಣ್ಣಗಳ ಬಳಕೆ, ನೇರವಾದ ಗೆರೆಗಳು ಮತ್ತು ವಕ್ರತೆಗಳು, ಚೆನ್ನಾಗಿ ಯೋಚಿಸಿದಂತಿದೆ, ಮತ್ತು ಅದು ಬ್ರೆಝ ಗೆ ಒಂದು ಉತ್ತಮನಿಲುವು ಕೊಡುತ್ತದೆ. ಒಟ್ಟಾರೆ ಮುರು ಡುಯಲ್ ಟಿನೇ ಪೈಂಟ್ ಆಯ್ಕೆ ಕೊಡಲಾಗಿದೆ ನೀವು ಕೆಂಪು ಬ್ರೆಝ ಜೊತೆಗೆ ಕಪ್ಪು ರೂಫ್ ಅಥವಾ ನೀಲಿ ಅಥವಾ ಹಲಾಯಿ ಬಣ್ಣ ಜೊತ್ಗೆ ಬಿಳಿಯ ರೂಫ್ ಅನ್ನು ಪಡೆಯಬಹುದಾಗಿದೆ. ನಮಗೆ ಮೆಚ್ಚುಗೆಯಾದದ್ದು ನೀಲಿ/ಬಿಳಿ ಸಂಯೋಜನೆ, ಮತ್ತು ಅದು ಅರ್ಶಕವಾಗಿದೆ ಕೂಡ. ಇದು ಹೇಳಿದ ನಂತರ, ಕೆಂಪು/ಕಪ್ಪು ಸಂಯೋಜನೆ ಬಹಳಷ್ಟು ಬೇಡಿಕೆ ಪಡೆಯುವುದರಲ್ಲಿ ಸಂಶಯವಿಲ್ಲ.

Maruti Vitara Brezza - Expert Review

ಮಾರುತಿ ಯ ಇತರ ಕಾರ್ ಗಳಂತೆ ಬ್ರೆಝ ದ ಡಿಸೈನ್ ಬಗ್ಗೆ ಅಷ್ಟೇನೂ ಹೇಳಲಾಗಿಲ್ಲ. ವಾಸ್ತವವಾಗಿ, ಮಾರುತಿ ಯು ಮೊದಲ ಬಾರಿಗೆ ಇಂತಹ ಆಕರ್ಷಕವಾದ ಶೈಲಿಯ ಕಾರ್ ಅನ್ನು ಹರತಂದಿದೆ ದೊಡದಾದ ಗ್ರಿಲ್ ನಿಮಗೆ XA ಅಲ್ಫಾ ವನ್ನು ಜ್ಞಾಪಿಸುತ್ತದೆ, ಅದರ ತುಣುಕುಗಳು ಬ್ರೆಝ ಅಲ್ಲಿದೆ. ಒದ್ದ ಕ್ರೋಮಾ ನಿಂದ ಮಾಡಲ್ಪಟ್ಟಿರುವ ಸ್ಲಾಬ್  ಎರೆಡೂ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಅನ್ನು ಸೇರುತ್ತದೆ ಮತ್ತು ಎಲ್ಲವನ್ನು ಎದ್ದು ಕಾಣುವಂತೆ ಮಾಡುತ್ತದೆ. ಬಂಪರ್ ಕೂಡ ಆಕರ್ಷಕವಾಗಿದೆ, ದೊಡ್ಡ ಏರ್ ಡ್ಯಾಮ್ ಮತ್ತು ಫಾಕ್ಸ್ ಸ್ಕಿಡ್ ಪ್ಲೇಟ್ ಸಿಲ್ವರ್ ಫಿನಿಷ್ ನೊಂದಿಗೆ ಮಾಡಲ್ಪಟ್ಟಿದೆ. ಚಿಕ್ಕ ವಿವರಗಳಾದ ಟರ್ನ್ ಇಂಡಿಕೇಟರ್ ಅನ್ನು ಬಂಪರ್ ನ ಭಿನ್ನವಾದ ಪೋದ್ ನಲ್ಲಿ ಇರಿಸಲಾಗಿದೆ, ಮತ್ತು ಬ್ಲಾಕೆಡ್ ಔಟ್ ಸುತ್ತನ್ನು ಫಾಗ್ ಲ್ಯಾಂಪ್ ಗೆ ಕೊಡಲಾಗಿದ್ದು ಮುಂಬದಿಯ ವಿನ್ಯಾಸವನ್ನು ಪೂರ್ಣ ಗೊಳಿಸತ್ತದೆ.

Maruti Vitara Brezza - Expert Review

ಮಾರುತಿ ಸುಜುಕಿ ಯ ಮಾರಾಟಗಾರರು ನಿಮಗೆ ಬ್ರೆಝ ಬಗ್ಗೆ ಮೊದಲಿಗೆ ತೋರಿಸುವಂತಹುದು ಅದರ ಫ್ಲೋಟಿಂಗ್ ರೂಫ್. ಈ ಕಾನ್ಸೆಪ್ಟ್ ಅನ್ನು ಸ್ವಿಫ್ಟ್ ನಲ್ಲಿ ಅಳವಡಿಸಲಾಗಿತ್ತು. ಮತ್ತು ಮಾರುತಿ ಯು ತನ್ನ ಇತರ ಕಾರ್ ಗಳಿಗೂ ಬಳಸುತ್ತಿದೆ. A-ಪಿಲ್ಲರ್ ಮತ್ತು ಅದರ ಭಾಗಗಳು, ಮತ್ತು C-ಪಿಲ್ಲರ್ ಅನ್ನು ಬ್ಲಾಕೆಡ್ ಔಟ್ ಮಾಡಲಾಗಿದೆ. ಇದನ್ನು ಬಿಳಿ ರೂಫ್ ನೊಂದಿಗೆ ಹೆಚ್ಚು ಗಮನಿಸಬಹುದಾಗಿದೆ. 

ಇದರ ಹೊರಮೈ ನಲ್ಲಿ ವಿಶೇಷವಾದ ಗೆರೆಗಳನ್ನು ಕೊಡಲಾಗಿದೆ. ಒಂದು ಗೆರೆ ಎರೆಡೂ ಹೆಡ್ ಲ್ಯಾಂಪ್ ಅನ್ನು ಸೇರಿಸುತ್ತದೆ ಮತ್ತೊಂದು ವೀಲ್ ಬೇಸ್ ನ ಬಳಿ ವಕ್ರವಾದ ಗೆರೆಗಳೊಂದಿಗೆ ಇದೆ. ಬ್ರೆಝ ದಲ್ಲಿಚೌಕ ಆಕಾರದ ವೀಲ್ ಆರ್ಚ್ ಗಳು, ಮತ್ತು ಕಷ್ಟೋಮರಿ ಬ್ಲಾಕ್ ಕ್ಲಾಡ್ಡಿಂಗ್ ಕಾರ್ ನ ಉದ್ದಕ್ಕೂ ಇದೆ. ಇದರಲ್ಲಿರುವ 16-ಅಲಾಯ್ ವೀಲ್ ನೋಡಲು ಚೆನ್ನಾಗಿದೆ. ಹಾಗು ಸರಳವಾದ ದುಂಡಾಕಾರವಾದ ವೀಲ್ ಆರ್ಚ್ ಗಳು ಇದೆ. ನಮಗೆ ಗನ್ ಮೆಟಲ್ ಗ್ರೇ ಶೇಡ್ ಇರುವ ವೀಲ್ ಗಳು ಇಷ್ಟವಾದವು, ಮತ್ತು ಅದರ ವಿನ್ಯಾಸ ಇನ್ನು ಚೆನಾಗಿರಬಹುದುತ್ತು ಎನಿಸಿತು. ಹಾಗು, ಸರಳವಾದ ದುಂಡಳತೆಯ ವೀಲ್ ಆರ್ಚ್ ಗಳು ಬ್ರೆಝ ವನ್ನು ನೋಡಲು ಹೆಚ್ಚು ಆಕರ್ಶಕವಾಗಿ ಕಾಣುವಂತೆ ಮಾಡಿತು.

Maruti Vitara Brezza - Expert Review

Maruti Vitara Brezza - Expert Review

ಇತರ ಸಮಾನ ಕಾಲದ ಕಾರ್ ಗಳಂತೆ ಬ್ರೆಝ ದಲ್ಲಿ ಬೂಟ್ ನಲ್ಲಿ ಸ್ಪೇರ್ ವೀಲ್ ಆಳವಾಯಿಕೆಯ ಆಳ ಇರುವುದಿಲ್ಲ. ನಿಮಗೆ ದೊರೆಯುವಂತಹುದು ಸರಳವಾದ ಜಾಕ್ ಮೇಲ್ಬಾಗಕ್ಕೆ ತೆರೆದುಕೊಳ್ಳುವಂತಹುದು.  TUV300  ನಲ್ಲಿರುವ ಹ್ಯಾಚ್ ಡೋರ್ ಮತ್ತು ಫೋರ್ಡ್ ಎಕೋಸ್ಪೋರ್ಟ್ ನಲ್ಲಿ ಪಕ್ಕಕ್ಕೆ ತೆರೆಯುವ ಡೋರ್ ಇದೆ, ಮತ್ತು ಅದು ಪಾರ್ಕಿಂಗ್ ಲಾಟ್ ನಲ್ಲಿ ಸಮಸ್ಯೆಯಾಗಬಹುದು. ಮಾರುತಿ ಈ ವಿನ್ಯಾಸಕ್ಕಾಗಿ ಮೆಚ್ಚುಗೆ ಪಡೆಯುತ್ತದೆ. ಟೈಲ್ ಲ್ಯಾಂಪ್ ನಲ್ಲಿ ಸರಳವಾದ ಕ್ಲಸ್ಟರ್ ಇದ್ದು ಅದಕ್ಕೆ L-ವಿನ್ಯಾಸದ  LED ಕೊಡಲಾಗಿದೆ ಮತ್ತು ಅದು ಪೈಲಟ್ ಲ್ಯಾಂಪ್ ಗಳನ್ನು  ಸ್ವಿಚ್ ಆನ್ ಮಾಡಿದಾಗ ಸ್ವಿಚ್ ಆಗುತ್ತದೆ. ಆ ಕಾಂಪ್ಯಾಕ್ಟ್ SUV ಬೂಟ್ ಮೇಲೆ ದೊಡ್ಡ ಕ್ರೋಮ್ ನ ಸ್ಲಾಬ್ ಪಡೆಯುತ್ತದೆ ಕೂಡ, ಜೊತೆಗೆ 'ವಿಟಾರಾ ಬ್ರೆಝ' ಎಂಬೋಸಿಂಗ್ ಸಹ ಇದೆ.

 Maruti Vitara Brezza - Expert Review

ಬ್ರೆಝ ದ ಡಿಸೈನ್ ಅತ್ಯಂತ ಆಕರ್ಷಕವಾಗಿದೆ, ಯಾವುದೇ ತಪ್ಪುಗಳು ಕಾಣಿಸುವುದಿಲ್ಲ. ವೀಲ್  ಗಳನ್ನು ಬಿಟ್ಟು ಎಂದು ಹೇಳಬಹುದು. ನೋಟವು ಬ್ರೆಝ ಗೆ ಒಂದು ಮಾರಾಟವಾಗುವುದಕ್ಕೆ ಸಹಾಯವಾಗುವ ವಿಷಯ  ಆಗಿದೆ.

 

Maruti Vitara Brezza - Expert Review 

ಆಂತರಿಕಗಳು

Maruti Vitara Brezza - Expert Review

ನೀವು ಬ್ರೆಝ ಒಳಗೆ ಕಾಲು ಇಡುತ್ತಿದಂತೆಯೇ ನಿಮಗೆ ಒಂದು ಸ್ನೇಹ ಭಾವ ಮುಡುತ್ತದೆ. ನಿಮಗೆ 'ನಾನು ಇಲ್ಲಿಗೆ ಒಮ್ಮೆ ಬಂದಿದ್ದೆ' ಎಂಬ ಭಾವನೆ ಮುಡುತ್ತದೆ ಮತ್ತು ಯಾವುದೂ ನಿಮಗೆ ಕ್ಲಿಷ್ಟ ಅಥವಾ ಸರಿಯಿಲ್ಲ ಎಂದೆನಿಸುವುದಿಲ್ಲ. ಎಕೋಸ್ಪೋರ್ಟ್ ನಲ್ಲಿ ಕುಳಿತಿದ್ದವರಾದರೆ ಉದಾಹರಣೆಗೆ ಸೆಂಟ್ರೋಲ್ ಕನ್ಸೋಲ್ ಮೇಲಿರುವ ಬುಟಾನ್ ಗಳನ್ನೂ ನೋಡಿ ಆಶ್ಚರ್ಯವಾಗಬಹುದು. ಈ ವಿಚಾರದಲ್ಲಿ, ಬ್ರೆಝ ಒಂದು ಸ್ವಾಗತಾರ್ಹವಾಗಿದೆ ಬೇರೆ ತರಹ ಅಲ್ಲ. ಲೇಔಟ್ ಚೆನ್ನಾಗಿದ್ದು ನಿಮಗೆ ಕಡಿಮೆ ಸಮಯದಲ್ಲಿ ಯಾವುದು ಎಲ್ಲಿದೆ ಎಂದು ಗೋಚರವಾಗುತ್ತದೆ.

Maruti Vitara Brezza - Expert Review

ಒಳಭಾಗದಲ್ಲಿರುವ ಮೆಟೀರಿಯಲ್ ಗಳ ಗುಣಮಟ್ಟ ಅಷ್ಟೇನೂ ಚೆನ್ನಾಗಿಲ್ಲ. ಅಸು ಎಕೋಸ್ಪೋರ್ಟ್ ಗಿಂತ ಸ್ವಲ್ಪ ಕಡಿಮೆ ಇದೆ ಮತ್ತು   TUV300 ಗಿಂತಲೂ ಸ್ವಲ್ಪ ಹೆಚ್ಚು ಚೆನ್ನಾಗಿದೆ. ಇದರಲ್ಲಿ   ಡ್ಯಾಶ್ ನ ಕೆಳಗಿನ ಅರ್ಧ ಭಾಗದಲ್ಲಿ ಬಹಳಷ್ಟು ಹಾರ್ಡ್ ಪ್ಲಾಸ್ಟಿಕ್ ಗಲಿದೆ. ಮತ್ತು ಬಹಳಷ್ಟು ಭಾಗಗಳನ್ನು ಮಾರುತಿ ಯ ಇತರ ವಾಹನಗಳಿಂದ ತಂದಿರುವುದು ಸ್ವಲ್ಪ ಹಿನ್ನಡತೆ ಸೂಚಿಸುತ್ತದೆ. ಉದಾಹರಣೆಗೆ, ಪವರ್ ವಿಂಡೋ ಸ್ವಿಚ್ ಗಳನ್ನೂ ದಶಕಗಳಷ್ಟು ಹಳೆಯದಾದ ಸ್ವಿಫ್ಟ್ ನಿಂದ ತರಲಾಗಿದೆ, ಸ್ಟಿಯರಿಂಗ್ ನೀವು S-ಕ್ರಾಸ್ ನಲ್ಲಿ ಕಂಡಂತಹ ಸ್ಟಿಯರಿಂಗ್ ಆಗಿರುತ್ತದೆ, ಮತ್ತು ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಅನ್ನು ಬಲೆನೊ ಮತ್ತು ಸಿಯಾಜ್ ನಿಂದ ತರಲಾಗಿದೆ. ಮತ್ತು ಚಿಕ್ಕ ವಸ್ತುಗಳಾದ ಸ್ಟಾರ್ಟ್-ಸ್ಟಾಪ್ ಬಟನ್, ORVM ಅಡ್ಜಸ್ಟ್ಮೆಂಟ್ ಬಟನ್ ಮತ್ತು ರೆವೆರ್ಸೆ  ಪಾರ್ಕಿಂಗ್ ಸೆನ್ಸರ್ ಗಳನ್ನೂ ಇತರ ಮಾಡೆಲ್ ಗಳಿಂದ ಹಂಚಿಕೊಳ್ಳಲಾಗಿದೆ. ಇದು ಹೇಳಿದ ನಂತರ, ಎಲ್ಲ ವಿಷಯಗಳು ಕಾರ್ಯ ತತ್ಪರವಾಗಿರುತ್ತದೆ ಮತ್ತು ಯಾವುದು ಕೂಡ ನಿಮಗೆ ಸಮಸ್ಯೆ ತರುವುದಿಲ್ಲ. ಎಲ್ಲರು ಹೇಳುವಂತೆ ಹೊಸ ವೀಲ್ ಆವಿಷ್ಕರಿಸುವುದು ಏಕೆ? ಎನ್ನುವಂತೆ.

Maruti Vitara Brezza - Expert Review

ಬ್ರೆಝ ದ ಕ್ಯಾಬಿನ್ ಅನ್ನು ಸಮುದ್ರ ಕಪ್ಪು ಯಿಂದ ಸಿಂಗರಿಸಲಾಗಿದೆ. ನಮಗೆ ಮೆಚ್ಚುವಂತಹ ವಿಷಯವೆಂದರೆ ಡಲ್ ಸಿಲ್ವರ್ ಅಸ್ಸೇನ್ಟ್ ಡ್ಯಾಶ್ ಬೋರ್ಡ್ ನ ಉದ್ದಕ್ಕೂ ಇದೆ. ಅದು ಪೂರ್ಣ ಬ್ಲಾಕ್ ಇರುವುದನ್ನು ತಡೆಯುತ್ತದೆ. ಲೇಔಟ್ ಸರಳವಾಗಿದೆ ಮತ್ತು ಸ್ವಚ್ಛ ವಾಗಿದೆ  7"  ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ವಿಥ್ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಮದ್ಯದಲ್ಲಿ ಇದೆ. ಸ್ಕ್ರೀನ್ ಅನ್ನು 4 ಸ್ಪೀಕರ್ ಮತ್ತು ಎರೆಡು ಟ್ವಿಟರ್ ಗಳೊಂದಿಗೆ ಸಂಯೋಜಿಸಲಾಗಿದೆ. ಆಡಿಯೋ ಗುಣಮಟ್ಟ ಚೆನ್ನಾಗಿದೆ ಮತ್ತು ಒಪ್ಪುವಂತಿದೆ, ಬಹಳಷ್ಟು ಜನ ನವೀಕರಣ ಬೇಕಾಗಿಲ್ಲ ಎನ್ನಬಹುದು.

Maruti Vitara Brezza - Expert Review

ಇನ್ನೊಂದು ಒಳ್ಳೆ ವಿಚಾರ ಎಂದರೆ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನಲ್ಲಿ ಮೂಡ್ ಲೈಟಿಂಗ್ ಸಹ ಇದೆ. ಇದು ಒಂದು ಮೋಜಿನ ಫೀಚರ್ ಆದರೂ ನಿಮಗೆ ಹುಡುಗಾಟದ ಮನೋಭಾವ ಮೂಡುವಂತೆ ಮಾಡುತ್ತದೆ. ನೀವು ಐದು ಬಣ್ಣಗಳಲ್ಲಿ ಆಯ್ಕೆ ಮಾಡಬಹುದು. (ಕೆಂಪು, ಆರೆಂಜ್, ಬಿಳಿ, ಮತ್ತು ಹಳದಿ ) ಟ್ಯಾಚೊಮೆತೆರ್ ಹಾಗು ಸ್ಪೀಡೊ ಡಯಲ್ ಗಳಿಗೆ ಮತ್ತು ಬೆಳಕಿನ ಪ್ರಕಾರವನ್ನು ಕಂಟ್ರೋಲ್ ಮಾಡಬಹದು. ಸಂಯುಕ್ತ  MID ಯನ್ನು ಎರೆಡು ಮೀಟರ್ ಗಳಿಗೆ ಅಳವಡಿಸಲಾಗಿದೆ ಮತ್ತು ಅದು ವಿಷಯಗಳಾದ ಸಮಯ, ತಾಪಮಾನ, ಇಂಧನ, ಟ್ರಿಪ್ ಡಿಸ್ಟೆನ್ಸ್ ಮುಂತಾದವು. TUV ಯ (ಕಳಪೆ) ಮೊನೊ ಕ್ರೋಮ್  ಡಿಸ್ಪ್ಲೇ  ಇನ್ಸ್ಟ್ರುಮೆಂಟ್ ಗೆ ಹೋಲಿಸಿದರೆ ಇದು ಚೆನ್ನಾಗಿದೆ.

Maruti Vitara Brezza - Expert Review

ಸ್ಟಿಯರಿಂಗ್ ವೀಲ್, ನಾವು ಹಿಂದೆ ಹೇಳಿದಂತೆ S-ಕ್ರಾಸ್ ನಿಂದ ನೇರವಾಗಿ ತೆಗೆದುಕೊಳ್ಳಲಾಗಿದೆ , ಮತ್ತು ಇದರಲ್ಲಿ ರೆಕ್ ಮತ್ತು ರೀಚ್ ಹೊಂದಾಣಿಕೆ ಮಾಡಬಹುದು. ಸ್ಟಿಯರಿಂಗ್ ಹಿಡಿಯಲು ಚೆನ್ನಾಗಿದೆ ನತ್ತು ನಿರ್ದಿಷ್ಟವಾಗಿದೆ. ಇದರಲ್ಲಿ ವಾಲ್ಯೂಮ್ , ಕಾಲ್ ಗಳನ್ನು  ತೆಗೆದುಕೊಳ್ಳುವುದು ಅಥವಾ ರಿಜೆಕ್ಟ್ ಮಾಡುವುದಕ್ಕೆ ಕೊನ್ಟ್ರೋಲ್ ಗಳನ್ನು ಕೊಡಲಾಗಿದೆ, ಮತ್ತು ಕ್ರ್ಸ್ ಕಂಟ್ರೋಲ್ ಸಹ ಕೊಡಲಾಗಿದೆ.

ಡ್ರೈವರ್ ಸೀಟ್ ಕೂರಲು ಆರಾಮದಾಯಕವಾಗಿದೆ, ನಿಮಗೆ ಕುಳಿತುಕೊಳ್ಳಲು ಮತ್ತು ರಸ್ತೆಯನ್ನು ನೋಡಲು ಅನುಕೂಲವಾಗಿದೆ. ಸೀಟ್ ಆರಾಮದಾಯಕವಾಗಿದೆ ಮತ್ತು  ಕುಳಿತುಕೊಳ್ಳಲು ಉತ್ತಮ  ಗುಣಮಟ್ಟದ ಬೆಂಬಲ  ಸಿಗುತ್ತದೆ. ದೂರದ ಪ್ರಯಾಣದ ನಂತರ ನಮಗೆ ದುರುವಂತಹ ಯಾವುದೇ ಸಮಸ್ಯೆ ಕಂಡುಬರಲಿಲ್ಲ, ಸೈಡ್ ಬಾಸ್ಟರಿಂಗ್ ಹಾಗು ಮೆತ್ತನೆಯ ಫೀಚರ್ ಗಳು ಉತ್ತಮವಾಗಿದೆ. ಎತ್ತರ ಅಳವಡಿಕೆಗೆ ಸಾಕಷ್ಟು ಅವಕಾಶವಿದ್ದು ಕುಳ್ಳಗಿರುವ ಡ್ರೈವರ್ ಗಳಿಗೂ ಸಹ ಡ್ರೈವ್ ಮಾಡುವಾಗಿನ ಬಂಗಿ ಉತ್ತಮವಾಗಿರುತ್ತದೆ.

 Maruti Vitara Brezza - Expert Review 

ನಮ್ಮ ಪ್ರಕಾರ ಬ್ರೆಝ ದ ಎರ್ಗಾನೋಮಿಕ್ಸ್ ಚೆನ್ನಾಗಿದೆ. ಒಮ್ಮೆ ಮುಂದುವರೆದರೆ ನುಮಗೆ ಎಲ್ಲವು ಕೈಗೆಟುವಂತೆ ಇರುವುದು ತಳಿಯುತ್ತದೆ. ನಾವು ಕ್ಲೈಮೇಟ್ ಕಂಟ್ರೋಲ್ ಇಂಟರ್ಫೇಸ್ ನ ಉದಾಹರಣೆ ತೆಗೆದುಕೊಳ್ಳೋಣ. ಯೂನಿಟ್ ನಲ್ಲಿ ದೊಡ್ಡದಾದ ಬಟನ್ ಎಂದರೆ 'ಆಟೋ ' ಈ ಬಟನ್ ಆರಂಭಿಸುತ್ತದೆ ಹಾಗು ಟೆಂಪರೇಚರ್ ಅನ್ನು ನಿಯಂತ್ರಿಸುತ್ತದೆ ಕೂಡ.  ಈ ತರಹದ ಚಿಕ್ಕ ಸ್ಪರ್ಶಗಳು ನಿಮಗೆ ಮಾರುತಿ  ಕಾರ್ ಒಂದು ಕುಟುಂಬದ ಕಾರ್ ಎಂದೆನಿಸುತ್ತದೆ, ಏರ್ ಕಾನ್  ಕೂಡ ಮಾರುತಿ ತರಹ  ಸಂಪೂರ್ಣ ತಂಪಾಗಿರಿಸುತ್ತದೆ. ಇದು ಕ್ಯಾಬಿನ್ ಅನ್ನು ತಂಪಾಗಿ 20° C ನಲ್ಲಿ ಹರಿಷ್ಟ ಬಿಸಿಲು ಇರುವ ದಿನ ಪುಣೆಯಲ್ಲಿ ಕೊಟ್ಟಿತ್ತು. ಒಂದು ಗಮನಿಸ ಬೇಕಾದ ವಿಷಯವೆಂದರೆ ಬ್ರೆಝ ದಲ್ಲಿ ಹಿಂಬದಿ AC ವೆಂಟ್ ಇಲ್ಲ. ಆದರೆ, ನಮ್ಮ ಪ್ರಕಾರ ಅದರ ಬಗ್ಗೆ ಚಿಂತಿಸಬೇಕಾಗಿಲ್ಲ. ಏರ್ ಕಾನ್ ಶಕ್ತಿಯುತವಾಗಿದೆ ಮತ್ತು ಅರ್ಧ ಕ್ಯಾಬಿನ್ ಅನ್ನು ಕೆಲವೇ ನಿಮಿಷಗಳಲ್ಲಿ ತಂಪಾಗಿರಿಸುತ್ತದೆ.

Maruti Vitara Brezza - Expert Review

ಹಿಂಬದಿಯ ಬೆಂಚ್ ನಲ್ಲಿ ಬಹಳಷ್ಟು ಜಾಗ ಇದೆ, ಮತ್ತು ಅದು ಮುಂದಿನದಕ್ಕಿಂತ ಸ್ವಲ್ಪ ಎತ್ತರದಲ್ಲಿದೆ. ಹಾಗಾಗಿ ನಿಮಗೆ  ಮುಂಬದಿಯ ಸೀಟ್ ನ ಕೆಳಗೆ ಕಾಲು ಚಾಚಲು ಅನುಕೂಲವಾಗುತ್ತದೆ.  ಲೆಗ್ ರೂಮ್ ಸಾಕಷ್ಟು ಇದೆ: ಇಬ್ಬರು ಆರು ಅಡಿ ಎತ್ತರದ ವ್ಯಕ್ತಿಗಳು ಹಿಂಬದಿಯಲ್ಲಿ ಕುಳಿತುಕೊಳ್ಳಬಹುದು.  ಸರಿಸಬಹುದಾದ ಮುಂಬದಿಯ ಸೀಟ್ ನಿಂದ ಹೆಚ್ಚಿನ ಲೆಗ್ ರೂಮ್ ಸಿಗುತ್ತದೆ. ನೀವು ಆರು ಅಡಿಯ ಎತ್ತರದ ವ್ಯಕ್ತಿ ಆಗಿದ್ದರೆ ಹಿಂಬದಿಯಲ್ಲಿ ಮೇಲ್ಚಾವಣಿಗೆ ಸಮೀಪವಾಗಿ ಇರುವಂತೆ ಭಾಸವಾಗುತ್ತದೆ. ಬ್ರೆಝ TUV300 ನಷ್ಟು ಅಗಲವಾಗಿಲ್ಲ, ಹಾಗಾಗಿ  ಮೂವರಿಗೆ ಸೀಟ್ ನಲ್ಲಿ ಕುಳಿತುಕೊಳ್ಳಲು ಕಷ್ಟವಾಗಬಹುದು ಮಹಿಂದ್ರಾ ಗೆ ಹೋಲಿಸಿದಾಗ.  

Maruti Vitara Brezza - Expert Review

ಕೊನೆಯದಾಗಿ, ಬಹಳಷ್ಟು ಸ್ಟೋರೇಜ್ ಜಾಗ ಇದೆ ನಿಮ್ಮ ತಿಂಡಿ ಗಳನ್ನೂ ಇಡಲು ಸಹ.  ಎರೆಡು ಗ್ಲೋವ್ ಬಾಕ್ಸ್ ಗಳಿವೆ (ಒಂದರಲ್ಲಿ ತಂಪು ಹವಾ ಇದೆ), ಎಲ್ಲ ಡೋರ್ ಗಳಲ್ಲಿ ಬಾಟಲ್ ಹೋಲ್ಡರ್ ಇದೆ,  ಆರ್ಮ್ ರೆಸ್ಟ್ ನಲ್ಲಿ ಸಹ ಜಾಗ ಇದೆ, ಮತ್ತು ಅಂಡರ್ ಸೀಟ್ ಟ್ರೇ ಸಹ ಇದೆ. ಬೂಟ್ ನಲ್ಲಿ  328 ಲೀಟರ್ ಜಾಗ ಇದೆ.  ಚೌಕವಾದ ಬೇ ಹಾಗು ಕೆಳಹಂತದ ಲೋಡಿಂಗ್ ಬೇ ಬ್ರೆಝ ದಲ್ಲಿ ಹೆಚ್ಚು ಲಗೇಜ್ ಇಡಲು ಸಹಕಾರಿಯಾಗಿದೆ. ಹಿಂಬದಿ ಸೀಟ್ ನಲ್ಲಿ 60:40  ಸ್ಪ್ಲಿಟ್ ಇದೆ, ನಿಮಗೆ ಲಗೇಜ್ ಇಡಲು ಹೆಚ್ಚು ಜಾಗ ಬೇಕಾದಲ್ಲಿ.

Maruti Vitara Brezza - Expert Review

ಬ್ರೆಝ ದ ಕ್ಯಾಬಿನ್ ನಲ್ಲಿ ಬಹಳಷ್ಟು ಫೀಚರ್ ಗಳು ಇವೆ. ಯಾವುದೇ ಕಡಿಮೆಗಳಿಲ್ಲ, ಮತ್ತು ಸಮಸ್ಯೆಗಳು ಇಲ್ಲ. ಇದರ ಸಮಕಾಲೀನ ಲೇಔಟ್ ಹೊಂದಿಕೊಳ್ಳುತ್ತದೆ. ಇಷ್ಟು ಅದರ ವಿಚಾರ.  

Maruti Vitara Brezza - Expert Review

ಎಂಜಿನ್ ಮತ್ತು ಕಾರ್ಯದಕ್ಷತೆ

Maruti Vitara Brezza - Expert Review

ಬ್ರೆಝ ದಲ್ಲಿ ಬಹಳಷ್ಟು ಬಾರಿ ಪ್ರಯ್ತ್ನಿಸಿದಂತಹ ( ಆಗಾಗ್ಗ್ಗೆ ಪರೀಕ್ಷೆಗೆ ಒಳಪಟ್ಟಂತಹ )  DDiS ಎಂಜಿನ್ ಅನ್ನು ಅಳವಡಿಸಲಾಗಿದೆ, ಮತ್ತು ಅದನ್ನುಲೆಕ್ಕ ಸಿಗದಷ್ಟು ಕಾರ್ ಗಳಲ್ಲಿ ಬಳಸಲಾಗಿದೆ ಕೂಡ. ಇದನ್ನು  DDiS 200, ಎನ್ನುತ್ತಾರೆ, ಇದು ಫಿಯಟ್ ನಿಂದ ಪಡೆದ ಎಂಜಿನ್ ಆಗಿದ್ದು  90PS @ 4000 rpm ಗರಿಷ್ಟ ಪವರ್ ಹಾಗು  ಗರಿಷ್ಟ ತಾರ್ಕ್ 200Nm  ಅನ್ನು 1750 rpm ನಲ್ಲಿ ಕೊಡುತ್ತದೆ. ಈಗ ಮಾರುತಿ ಈ ಡೀಸೆಲ್ ಎಂಜಿನ್ ಅನ್ನ್ನು ಬ್ರೆಝ ದಲ್ಲಿ ಚೆನ್ನಾಗಿ ಕಾರ್ಯ ನಿರ್ವಹಿಸುವಂತೆ ಮಾಡಿದೆ. ಓಟರ್ ಬಾರ 1200 kg ಇದ್ದು , ಬ್ರೆಝ ನಯವಾಗಿ ಹೋಗುತ್ತದೆ. ಗೇರ್ ನಲ್ಲಿನ ಗೇಗಗತಿ ಪಡೆಯುವಿಕೆ ಸಹ ಸದೃಢವಾಗಿದೆ, ಹಾಗಾಗಿ ಓವರ್ಟೇಕ್ ಮಾಡಲು ಸುಲಭವಾಗಿದೆ. ಆದರೂ  1500 rpm ಕೆಳಗೆ ಟರ್ಬೊ ಲ್ಯಾಗ್ ಇದ್ದು ಸ್ವಲ್ಪ ಎಳೆಯುವಂತೆ ಆಗುತ್ತದೆ. ಇದಲ್ಲದೆ, ಡೀಸೆಲ್ ಎಂಜಿನ್  ವಿಶಸ್ತ್ಯತೆ ಎಂದರೆ  ಇದಕ್ಕೆ ಹೊದಿಸಿರುವ 5-ಸ್ಪೀಡ್ ಗೇರ್ ಬಾಕ್ಸ್ ನಲ್ಲಿ ಕೆಳ  ಹಂತದ ಗೇರ್ ಗೆ ಹೋದಾಗ ಕ್ಯಾಬಿನ ಗೆ ಶಬ್ದ ನುಗ್ಗುತ್ತದೆ.

Maruti Vitara Brezza - Expert Review

ಸುಮಾರು 100 km/h ವೇಗಗತಿಯಲ್ಲಿ ಎಂಜಿನ್ ಬಹಳಷ್ಟು ನಿಶಬ್ದವಾಗಿರುತ್ತದೆ ಮತ್ತು ಕೇವಲ 2100 rpm ನಲ್ಲಿ ಇರುತ್ತದೆ. ದೂರವನ್ನು ಕ್ರಮಿಸುವುದು ಬ್ರೆಝ ದಲ್ಲಿ ಅಷ್ಟೇನೂ ಸಮಸ್ಯೆ ಅಲ್ಲ. ಆದರೆ ನಾವು ಆಯ್ಕೆಯಾಗಿ 1.6 ಲೀಟರ್ DDiS ಯುನಿಟ್  ಅನ್ನು ಹೊಂದಬಹುದೇ, ಮಾರುತಿ?

ರೈಡ್ ಮತ್ತು ಹ್ಯಾಂಡಲಿಂಗ್

ಯಾವುದೇ ವಾಹನ SUV ತರಹ ಇದ್ದಾಗ ಅದರಲ್ಲಿ ಆರಾಮದಾಯಕಗಳು ಚೆನ್ನಾಗಿರುತ್ತವೆ ಎಂದು ಹೇಳಬಹುದು, ಅದಕ್ಕೆ ಲಾಂಗ್ ಟ್ರಾವೆಲ್ ಸಸ್ಪೆನ್ಷನ್  ಕಾರಣವಾಗಿರಬಹುದು ಮತ್ತು ತಿರುವುಗಳಲ್ಲಿ ಸಹಕಾರಿಯಾಗಿರಬಹುದು. ಬ್ರೆಝ ಹಾಗೆಯೇ ಇದೆ. ನಗರಗಳಲ್ಲಿ ಕಡಿಮೆ ವೇಗಗಳಲ್ಲಿ, 16-ಇಂಚ್ ವೀಲ್ ಎಲ್ಲ ಆಕೆನೂ ಡೊಂಕುಗಳನ್ನು ತೆಗೆದುಕೊಳ್ಳುತ್ತದೆ. ಆದರೆ ನಿಮಗೆ ಕಾಂಕ್ರೀಟ್ ಜಾಯಿಂಟ್ಸ್ ಅಥವಾ ದೊಡ್ಡ ಪಾಟ್ ಹೊಲ್ಸ್  ಅಡ್ಡ ಬಂದಾಗ ಬ್ರೆಝ ಸ್ವಲ್ಪ ತಿಣುಕುವಂತೆ ಕಾಣುತ್ತದೆ. ಅದು ಸ್ವಲ್ಪ ಕಠಿಣವಾಗಿ ಕಾಣುತ್ತದೆ ಮತ್ತು ರಸ್ತೆಯಲ್ಲಿ ಅಂಕು ಡೊಂಕು ಗಳು ಜಾಸ್ತಿ ಆದಾಗ ಕೆಲವೊಮ್ಮೆ ಕ್ಯಾಬಿನ್ ನಲ್ಲೂ ಸಹ ಅಸ್ತವ್ಯಸ್ತ  ಆದ ಹಾಗೆ ಆಗುತ್ತದೆ.

Maruti Vitara Brezza - Expert Review

ವಾಸ್ತವದಲ್ಲಿ ದೃಢತೆ ಹೆಚ್ಚು ವೇಗಗಳಲ್ಲಿ ಸಹಕಾರಿಯಾಗಿರುತ್ತದೆ , ನೀವು ಕಡಿಮೆ ಮೋಟರಿಂಗ್ ಮಾಡುವಾಗ. ಬ್ರೆಝ ತಿರುವುಗಳನ್ನು ಹ್ಯಾಚ್ ಬ್ಯಾಕ್ ನಂತೆಯೇ ನಿಭಾಯಿಸುತ್ತದೆ. ಮತ್ತು ಅದು ಸ್ವಲ್ಪ ಮನೋರಂಜನೆಯನ್ನು ಸಹ ಕೊಡುತ್ತದೆ. ಸ್ಟಿಯರಿಂಗ್ ಕಡಿಮೆ ವೇಗಗಳಲ್ಲಿ ಸ್ವಲ್ಪ ಎಳೆದಂತೆ ಆಗುತ್ತದೆ ಆದರೆ ಹೆಚ್ಚು ವೇಗಗತಿ ಪಡೆದಂತೆ ಚೆನ್ನಾಗಿ ಪ್ರತಿಕ್ರಿಯಿಸುತ್ತ್ತದೆ. ಹಾಗು ಸ್ವಲ್ಪ ಮಂದವಾಗಿರುತ್ತದೆ ಮದ್ಯವೇಗದಲ್ಲಿ, ಆದರೆ ದೂರುವಂತಹ ಸಮಸ್ಯೆ ಇಲ್ಲ.

ಅಂತಿಮ ಅನಿಸಿಕೆ

Maruti Vitara Brezza - Expert Review

ವಿಟಾರಾ ಬ್ರೆಝ ಒಂದು ಮಾರುತಿಯ ಮೆಚ್ಚುವಂತಕ ತಯಾರಿಕೆ ಆಗಿದೆ. ಇದು ನಿಮಗೆ ಫೋರ್ಡ್ ಎಕೋಸ್ಪೋರ್ಟ್ ನಷ್ಟು ಮೆಚ್ಚದಿರಬಹುದು. ಆದರೂ ಇದು ನೋಡಲು ಬಹಳ ಆಕರ್ಷಕವಾಗಿದೆ. ಉತ್ತಮ ಭಾಗವೆಂದರೆ ಇದನ್ನು ನೀವು ಕಸ್ಟಮೈಸ್ ಮಾಡಬಹುದು ನಿಮ ಅಭಿರುಚಿಗೆ ತಕ್ಕಂತೆ. ಇದರಲ್ಲಿ ಬಹಳಷ್ಟು ಫೀಚರ್ ಗಳು ಇವೆ. ಮತ್ತು ಸ್ಮಾರ್ಟ್ ಆಗಿರುವ ಸೀಟ್ ವ್ಯವಸ್ಥೆ ನಿಮಗೆ ಹೆಚ್ಚು ಅನುಕೂಲಕರವಾಗಿರುತ್ತದೆ. ಬಹಳಷ್ಟು ಬರಿ ಪರೀಕ್ಷೆಗೆ ಒಲ್ಪಟ್ಟಂತಹ ಫಿಯಟ್ ಎಂಜಿನ್ ಗೆ ಧನ್ಯವಾದಗಳು, ಬ್ರೆಝ ದಲ್ಲಿ ವಿನಮ್ರ ಕಾರ್ಯದಕ್ಷತೆ ಇದೆ ಮತ್ತು ಉತ್ತಮ ಮೈಲೇಜ್ ಸಹ ದೊರೆಯುತ್ತದೆ.

Maruti Vitara Brezza - Expert Review

ಆರಂಭಿಕ ಬೆಲೆ ಪಟ್ಟಿ  Rs. 6.99 ಲಕ್ಷ ದಿಂದ ಪ್ರಾರಂಭವಾಗುತ್ತದೆ (ಎಕ್ಸ್ ಶೋ ರೂಮ್ ದೆಹಲಿ ) ಬೇಸ್ ವೇರಿಯೆಂಟ್ LDi  ಗೆ, ಇದು ಎಕೋಸ್ಪೋರ್ಟ್ ಗಿಂತ ಬಹಳಷ್ಟು ಅಗ್ಗವಾಗಿದೆ. ವಾಸ್ತವದಲ್ಲಿ ಇತರ ವೇರಿಯೆಂಟ್ ಗಳು ಸಹ ಟಾಪ್ ವೇರಿಯೆಂಟ್ ZDi+ ಸೇರಿಸಿ, ಉತ್ತಮ ಮೌಲ್ಯ ಹೊಂದಿದೆ. ನಾವು ಈ ಕಾರ್ ಅನ್ನು ಸುದೀರ್ಘ ಪರೀಕ್ಷೆಗೆ ಒಳಪಡಿಸುತ್ತೇವೆ, ಅಷ್ಟರಲ್ಲಿ ಮಾರುತಿ ಗೆ ಬಹಳ ಹಣ ಸಂಪಾದನೆ ಆಗಬಹುದು ಈ ಹೊಸ ಕೊಡುಗೆಯಿಂದ! 

ಇತ್ತೀಚಿನ ಎಸ್ಯುವಿ ಕಾರುಗಳು

ಮುಂಬರುವ ಕಾರುಗಳು

ಇತ್ತೀಚಿನ ಎಸ್ಯುವಿ ಕಾರುಗಳು

×
We need your ನಗರ to customize your experience