• English
  • Login / Register

ಟಾಟಾ ಹ್ಯಾರಿಯೆರ್ vs ಹುಂಡೈ ಕ್ರೆಟಾ vs ಜೀಪ್ ಕಂಪಾಸ್: ಹೋಲಿಕೆ ವಿಮರ್ಶೆ

Published On ಜುಲೈ 02, 2019 By arun for ಟಾಟಾ ಹ್ಯಾರಿಯರ್ 2019-2023

  • 1 View
  • Write a comment

ಹ್ಯಾರಿಯೆರ್ ನ ಬೆಲೆ ಪಟ್ಟಿ ನಮಗೆ ಇದು ಕ್ರೆಟಾ ಗೆ ಹೋಲಿಸಿದರೆ ಉತ್ತಮವಾದದ್ದೇ ಎಂದು ಅನುಮಾನ ಮೂಡಿಸುತ್ತದೆ; ಇದರ ಸಾಮರ್ಥ್ಯ ನಮಗೆ ಕಂಪಾಸ್ ಗೆ ಪ್ರೀಮಿಯಂ ಬೆಲೆ ಕೊಡುವುದು ಸೂಕ್ತವೇ ಎಂದು  ಪ್ರಶ್ನೆ ಗಳು ಉದ್ಭವಿಸುತ್ತವೆ.

ನಾವು ಆನೆಯಂತಹದನ್ನು ಗುರಿಯಾಗಿರಿಸುತ್ತ  ಪ್ರಾರಂಭಿಸೋಣ. ಹೌದು ಹ್ಯಾರಿಯೆರ್ ಮತ್ತು ಕ್ರೆಟಾ ಹತ್ತಿರದ ಸ್ಪರ್ಧೆ ಹೊಂದಿದೆ ಬೆಲೆ ಪಟ್ಟಿ ವಿಷಯದಲ್ಲಿ, ಕಂಪಾಸ್ ಹೆಚ್ಚು ಬೆಲೆ ಪಟ್ಟಿ ಉಳ್ಳದ್ದಾಗಿದೆ. ನೀವು ಐದು ಸೀಟೆರ್ SUV ಅನ್ನು ಕುಟುಂಬದ ಉಪಯೋಗಕ್ಕಾಗಿ ಕೊಳ್ಳುವುದಕ್ಕೆ ಮಾರ್ಕೆಟ್ ನಲ್ಲಿ ಇದ್ದರೆ, ನಿಮಗೆ ಹುಂಡೈ ಮತ್ತು ಜೀಪ್ ತಯಾರಕರ ನಡುವೆ ಯಾವುದೇ ಆಯ್ಕೆಗಳನ್ನು ಹೊಂದಿರಲಿಲ್ಲ. ಈಗ ನಿಮಗೆ ಅದು ಲಭ್ಯವಿದೆ, ಹ್ಯಾರಿಯೆರ್ ಅವತಾರದಲ್ಲಿ, ಇಲ್ಲ ಹಲವು ಮುಖ್ಯ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. 

  • ಹ್ಯಾರಿಯೆರ್ ಹೆಚ್ಚು ಮೌಲ್ಯಯುಕ್ತವಾಗಿದೆಯೇ , ನಾವು ಕ್ರೆಟಾ ದೊಂದಿಗೆ ಹೋಲಿಸಿದಾಗ? ಅದು ಒಂದು ಅಧಿಕೃತ SUV ಅನುಭವ ಕೊಡಬಲ್ಲದೇ?
  • ಕಂಪಾಸ್ ಬೆಲೆ Rs 4 lakh-5 lakh ಹೆಚ್ಚು ಆಗಿರುವುದನ್ನುವಿಶ್ವವಸಾರ್ಹವಾಗಿ ಸಮರ್ಥಿಸಿಕೊಳ್ಳಬಲ್ಲದೇ?

Tata Harrier vs Hyundai Creta vs Jeep Compass: Comparison Review

ಒಂದು ಹೇಳಿಕೆ ನೀಡಿ 

 ... ಅದಕ್ಕಾಗಿಯೇ ನೀವು SUV  ಯನ್ನು ಪ್ರಮುಖವಾಗಿ ಕೊಳ್ಳಬೇಕೆಂದಿದ್ದೀರಿ ? ಎತ್ತರದ, ಒಳ್ಳೆ ನಿಲುವು ಹೊಂದಿರುವ  ಚೊಕ್ಕದಾಗಿ ಇರುವ SUV ಎದ್ದುಕಾಣುವಂತೆ ಇದ್ದು (ಬರಹಪೂರ್ವಕವಾಗಿ ) ಸಮುದ್ರದಂತಿರುವ ಲೋ ಸ್ಲಗ್ ಸೆಡಾನ್ ಮತ್ತು ಹ್ಯಾಚ್ ಬ್ಯಾಕ್  ಗಳ ಮದ್ಯೆ, ಎಲ್ಲ ಮೂರು ವಾಹನಗಳು ತಮ್ಮದೇ ಆದ ರೀತಿಯಲ್ಲಿ ತಮ್ಮ  ಸಾಮರ್ಥ್ಯವನ್ನು ತೋರಿಸಬಲ್ಲದೇ.

Tata Harrier vs Hyundai Creta vs Jeep Compass: Comparison Review

ಕ್ರೆಟಾ ಗೆ ಉತ್ಸಾಹದೊಂದಿಗೆ ಬಹಳಷ್ಟು ಸಮಯ ಕಳೆದಿದೆ. ಫೇಸ್ ಲಿಫ್ಟ್ ನಲ್ಲಿ ಹುಂಡೈ ಅಷ್ಟೇನೂ ಡಿಸೈನ್ ವಿಷ್ಯದಲ್ಲಿ ಬದಲಾವಣೆ ತಂದಿಲ್ಲ. ನೀವು ಒಂದೇ ಆಕರ್ಷಕವಾಗಿರುವ ಆರೆಂಜ್ ಅಥವಾ ನೀಲಿ ಯನ್ನು ಆಯ್ಕೆ ಮಾಡಿ , ಅದು ಬಹಳಷ್ಟು ಗಮನಸೆಳೆಯುತ್ತದೆ ಕೂಡ. ಅದರೆ ಈ ವಿಷ್ಯದಲ್ಲಿ ಅದು ಸ್ವಲ್ಪ ಸೌಮ್ಯವಾಗಿ ಕಾಣುತ್ತಿದೆ ಎನ್ನಬಹುದು. ವಿಶೇಷವಾಗಿ ಇದರ ಅಳತೆಗಳು ಇತರ ಎರೆಡು ವಾಹಾನಗಳಿಗೆ ಹೋಲಿಸಿದರೆ ಅಷ್ಟೇನೂ ದೊಡ್ಡದಾಗಿಲ್ಲ.

Tata Harrier vs Hyundai Creta vs Jeep Compass: Comparison Review

ಜೀಪ್ ಕಂಪಾಸ್ ಹಳೆ ಶೈಲಿಯ SUV ಯನ್ನು ತಂದಿದೆ, ಜೊತೆಗೆ ಆಧುನಿಕತೆಯ ತುಣುಕುಗಳನ್ನು ಕೊಡಲಾಗಿದೆ. ಇದರಲ್ಲಿರುವ ನವೀಕರಿಸಲಾದ ಬಾನೆಟ್ ಮತ್ತು ಟ್ರೇಡ್ಮಾರ್ಕ್ ಏಳು ಸ್ಲಾಟ್ ಇರುವ ಗ್ರಿಲ್ ಒಂದಿಗೆ ಜೀಪ್ ಹಲವು ಆಕರ್ಷಕ ವಿಷಯಗಳ್ಳನ್ನು ಪಡೆದಿದೆ. ಇದರಲ್ಲಿ ಉತ್ತಮ ನಿಲುವು ಇದೆ, ಉತ್ತಮ ಅನುಪಾತಗಳು ಕೂಡಿದ್ದು ಒಂದು  ಆಕರ್ಷಕ SUV ಆಗಿದೆ. 

Tata Harrier vs Hyundai Creta vs Jeep Compass: Comparison Review

ಕ್ರೆಟಾ ದಲ್ಲಿ ನಿಮಗೆ ಬಹಳಷ್ಟು ಸಲಕರಣೆಗಳು ದೊರೆಯಬಲ್ಲದಾಗಿದೆ, ಕಂಪಾಸ್  ಅದರ ಬಾಕ್ಸಿ ಶೈಲಿಯೊಂದಿಗೆ ಗಮನ ಸೆಳೆಯುತ್ತದೆ, ಹ್ಯಾರಿಯೆರ್ ಇವೆರೆಡನ್ನು ಮೀರಿಸುತ್ತದೆ. ಅದು ಈ ಹೋಲಿಕೆಯಲ್ಲಿ ದೊಡ್ಡ SUV  ಆಗಿದೆ, ಮತ್ತು ಅದಕ್ಕಾಗಿ ವಿಶೇಷ ಸ್ಥಾನ ದೊರೆಯುತ್ತದೆ. ಜೊತೆಗೆ, ಇದರಲ್ಲಿರುವ ಡಿಸೈನ್ ತೆಳ್ಳಗಿರುವ ಟೈಲ್ ಲ್ಯಾಂಪ್ ನೊಂದಿಗೆ ಮತ್ತು ದೃಢವಾದ ವೀಲ್ ಆರ್ಚ್ ನೊಂದಿಗೆ ಒಪ್ಪಿಗೆ ಆಗದಿರಲು ಸಾಧ್ಯವಿಲ್ಲ, .

 

ಟಾಟಾ ಹ್ಯಾರಿಯೆರ್

ಹುಂಡೈ ಕ್ರೆಟಾ

ಜೀಪ್ ಕಂಪಾಸ್

Dimensions

Length

4598mm

4270mm

4395mm

Width

1894mm

1780mm

1818mm

Height

1706mm

1665mm

1640mm

Wheelbase

2741mm

2590mm

2636mm

Kerb Weight

1675kg

1398kg

1654kg (4x4) / 1584kg (4x2)

Tyre Size

235/65 R17

215/60 R17

225/55 R18

ಹ್ಯಾರಿಯೆರ್ ಪೂರ್ಣ  203mm ಉದ್ದವಾಗಿದೆ ಕಂಪಾಸ್ ಗಿಂತಲೂ, ಮತ್ತು ಆಶ್ಚರ್ಯಕರವಾಗಿ 328mm ಹೆಚ್ಚು ಉದ್ದವಾಗಿದೆ ಕ್ರೆಟಾ ಗಿಂತಲೂ. ಇದು ಎರೆಡನ್ನು ಅಗಲದ ವಿಷಯದಲ್ಲಿ ಸಹ ಗೆಲ್ಲುತ್ತದೆ, 80mm  ಹೆಚ್ಚು ಜೀಪ್ ಗಿಂತಲೂ ಮತ್ತು 114mm ಹೆಚ್ಚು ಹುಂಡೈ  ಗಿಂತಲೂ. ವೀಲ್ ಬೇಸ್ ಸಹ  2741mm ಇದ್ದು, ಎರೆಡಕ್ಕಿಂತಲೂ ಗಣನೀಯವಾಗಿ ದೊಡ್ಡದಾಗಿದೆ. 

Tata Harrier vs Hyundai Creta vs Jeep Compass: Comparison Review

ಸಲಕರಣೆಗಳ ವಿಚಾರದಲ್ಲಿ, ಈ ಮುರರಲ್ಲಿ ಅಷ್ಟೇನು ವಿಭಿನ್ನತೆ ಇಲ್ಲ. ಉದಾಹರಣೆಗೆ , ಮೂರರಲ್ಲೂ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳನ್ನೂ ಕೊಡಲಾಗಿದೆ, ಮತ್ತು ಟೈಲ್ ಲ್ಯಾಂಪ್ ನಲ್ಲಿ LED  ತುಣುಕುಗಳನ್ನು ಕೊಡಲಾಗಿದೆ. ಎಲ್ಲದರಲ್ಲೂ ಅಲಾಯ್ ವೀಲ್ ಅನ್ನು ಕೊಡಲಾಗಿದೆ---ಹ್ಯಾರಿಯೆರ್ ಮತ್ತು ಕ್ರೆಟಾ ಗಳು 17-ಇಂಚು ಅಲಾಯ್ ವೀಲ್ ಗಳನ್ನೂ ಪಡೆದಿದೆ, ಮತ್ತು ಕಂಪಾಸ್ ಅದರ ಹೊಸ ಲಿಮಿಟೆಡ್ ಪ್ಲಸ್ ವೇರಿಯೆಂಟ್ ನಲ್ಲಿ ಆಶ್ಚರ್ಯವಾಗುವಂತೆ 18-ಇಂಚು ಅಲಾಯ್ ವೀಲ್ ಹೊಂದಿದೆ. 

 

ಟಾಟಾ ಹ್ಯಾರಿಯೆರ್

ಹುಂಡೈ ಕ್ರೆಟಾ

ಜೀಪ್ ಕಂಪಾಸ್

Exterior

Projector Headlamps

Xenon

Halogen

Bi-Xenon

Daytime Running Lamps

Yes

Yes

Yes

Alloy Wheels

17-inch

17-inch (Machine-Finished)

18-inch (machine-finished)

LED Tail Lamps

Yes

Yes

Yes

ಯಾವುದನ್ನಾದರೂ ತೆಗೆದುಕೊಳ್ಳಿ ಒಂದು ಅದ್ಭುತವಾದ SUV  ನಿಮ್ಮ ಪಾರ್ಕಿಂಗ್ ನಲ್ಲಿ ಇರುತ್ತದೆ. ನಾವು ಒಂದನ್ನು ಆಯ್ಕೆ ಮಾಡಬೇಕಾದರೆ ನಾವು ಹ್ಯಾರಿಯೆರ್ ಪರವಾಗಿ ನಿಲ್ಲುತ್ತೇವೆ. ಅದು  ಚಲಿಸುವಾಗ ಸುಲಭವಾಗಿ ನೋಡುಗರ ಗಮನವನ್ನು ಸೆಳೆಯುತ್ತದೆ. 

ಆಂತರಿಕಗಳಲ್ಲಿ ದೊಡ್ಡದಾಗಿದೆಯೇ?

 Tata Harrier vs Hyundai Creta vs Jeep Compass: Comparison Review

ಟಾಟಾ ದವರು ಅಳತೆಯ ವಿಚಾರವನ್ನು ಮುಂದೆ ಮಾಡಿದ್ದಾರೆ, ಹಾಗಾಗಿ ಅದು ಆಂತರಿಕಗಳಮೇಲೂ ಸಹ ಪರಿಣಾಮ ಬೀರಿದೆ. ಒಟ್ಟಾರೆ ಅಂತರಿಕಗಳ ವಿಶಾಲತೆ ವಿಶೇಷವಾಗಿ ಹ್ಯಾರಿಯೆರ್ ನ ಎರೆಡನೆ ಸಾಲಿನಲ್ಲಿನ ವಿಶಾಲತೆ, ಮೆಚ್ಚುವಂತಹದ್ದಾಗಿದೆ. ನೀವು ಬಾಡಿಗೆ ಡ್ರೈವರ್ ಇರಿಸಿಕೊಳ್ಳಬಹುದಾದ SUV ಯನ್ನು ಕೊಂಡುಕೊಳ್ಳಬೇಕೆಂದಿದ್ದರೆ , ಅಥವಾ ನಿಮ್ಮ ಹತ್ತಿರದವರನ್ನು ದೂರದ ಪ್ರಯಾಣಗಳಿಗೆ ತೆಗೆದುಕೊಂಡು ಹೋಗಬೇಕೆಂದಿದ್ದರೆ , ಹ್ಯಾರ್ರಿರ್ ಒಂದು ಉತ್ತಮ ಆಯ್ಕೆ ಆಗಿದೆ ಇಲ್ಲಿ.   ನಮ್ಮ ಸ್ನೇಹಿತಾರದಂತಹ ಮತ್ತು ದೈತ್ಯಾಕಾರದ ತುಷಾರ್ ಅವರು 6.5ft ಇದ್ದಾರೆ, ಅವರಿಗೆ ಡ್ರೈವರ್ ಸೀಟ್ ನ ಹಿಂದುಗಡೆಯ ಸೀಟ್  ನಲ್ಲಿ ಬಹಳ ಕಡಿಮೆ  ಸ್ಥಳಾವಕಾಶ ಇತ್ತು. ನಾನು ಕೂಡ ಹಿಂಬದಿಯ ಸೀಟ್ ಗೆ ಸ್ಥಳಾಂತರಗೊಂಡಾಗ (ನಿಮಗೆ ತಿಳಿದಿರಲೇ .. ನಾನು ಸ್ವಲ್ಪ ದಡೂತಿ ಮನುಷ್ಯ ಎಂದು) ನಮ್ಮ ಮದ್ಯ ಸಾಕಷ್ಟು ಜಾಗ ಇತ್ತು, ಮತ್ತು ಅಲ್ಲಿ ಒಬ್ಬ ವ್ಯಕ್ತಿ ಕುಳಿತುಕೊಳ್ಳಬಹುದಿತ್ತು . ಹೌದು ಮದ್ಯದಲ್ಲಿ ಸ್ವಲ್ಪ ಉಬ್ಬುಗಳು ಇದೆ, ಆದರೆ ಅದು ಚಿಕ್ಕದಾಗಿದ್ದು ಮದ್ಯದಲ್ಲಿ ಕುಳಿತಿರುವ ವ್ಯಕ್ತಿಗೆ ಎರೆದುವು ಬದಿಗಳಲ್ಲಿ ಕಾಲುಗಳನ್ನು ಇರಿಸಲು ಕಷ್ಟವಾಗುವುದಿಲ್ಲ.

Tata Harrier vs Hyundai Creta vs Jeep Compass: Comparison Review

ಇನ್ನೊಂದು ಬದಿಯಲ್ಲಿ, ಹುಂಡೈ ನವರು ಕ್ರೆಟಾ ದಲ್ಲಿರುವ ನಿಯಮಿತ ಸ್ಥಳಾವಕಾಶವನ್ನು ಪೂರ್ಣವಾಗಿ ಬಳಸಿಕೊಂಡಿದೆ. ಇದರಲ್ಲಿ ಹೋಲಿಕೆಯಲ್ಲಿ ಎರೆಡನೆ ಸ್ಥಾನದಲ್ಲಿರುವಂತಹ ಹಿಂಬದಿಯ ಸೀಟ್ ಸ್ಥಳಾವಕಾಶ ಇದೆ. ಕ್ಯಾಬಿನ್ ಅರಮನೆಯಂತಿಲ್ಲದಿದ್ದರೂ, ಆರು ಅಡಿ ಎತ್ತರದ ವ್ಯಕ್ತಿ ಆರಾಮದಾಯಕವಾಗಿ ಕುಳಿತುಕೊಳ್ಳಬಹುದು. ಅಗಲದ ಬಗ್ಗೆ ಸ್ವಲ್ಪ ಸಮಸ್ಯೆ ಇದೆ, ಹಿಂಬದಿಯ ಸೀಟ್ ನಲ್ಲಿ  ಮೂವರು ಕುಳಿತುಕೊಂಡಾಗ ಇಕ್ಕಟ್ಟಾದ ಅನುಭವವಾಗುತ್ತದೆ. ಆದರೆ, ಕ್ರೆಟಾ ದಲ್ಲಿ ಚಪ್ಪಟೆ ಕೆಳಭಾಗವಿದೆ, ಮದ್ಯದ ವ್ಯಕ್ತಿಗೆ ಜೀಪ್ ನಲ್ಲಿರುವಷ್ಟು ಅನಾನುಕೂಲತೆ ಆಗಬಹುದು. 

Tata Harrier vs Hyundai Creta vs Jeep Compass: Comparison Review

ಕಂಪಾಸ್ ಜೊತೆಗೆ, ಹೊರಗಡೆಯಲ್ಲಿರುವ ವಿಶಾಲತೆ ವಿಶಾಲವಾದ ಕ್ಯಾಬಿನ್ ಆಗಿ ಬದಲಾಗುವುದಿಲ್ಲ. ಹಿಂಬದಿಯಲ್ಲಿ, ಅಗಲ ಕಡಿಮೆ ಇರುವಿಕೆ ನಿಮಗೆ ಆಶ್ಚರ್ಯವಾಗಬಹುಹದು. ದೊಡ್ಡದಾದ ತಳದಲ್ಲಿರುವ ಉಬ್ಬುಗಳು (ಏಕೆಂದರೆ ಇದು  4x4!) ವೈಶಾಲ್ಯತೆಯನ್ನು ಕಡಿಮೆ ಮಾಡುತ್ತದೆ. ಹಾಗಾಗಿ ವಿಷಯಗಳು ಸ್ವಲ್ಪ ಕಡಿದಾಗಿರುತ್ತದೆ ಪ್ಯಾಸೆಂಜರ್ ಗಳಿಗೆ. ಇದ್ದು ಒಂದು ನಾಲ್ಕು ಸೆಟರ್ ಆಗಿದ್ದು ಕಂಪಾಸ್ ಹೊಳೆಯುತ್ತದೆ. ನಿಮಗೆ ನಾಲ್ಕು ಆರು ಅಡಿ ಪ್ಯಾಸೆಂಜರ್ ಗಳು ಇದ್ದಾಗ ಯಾವುದೇ ಅನಾನುಕೂಲ ಆಗುವುದಿಲ್ಲ.

ಅಳತೆಗಳ ಬಗ್ಗೆ ಕೆಳಗೆ ಟೇಬಲ್ ನಲ್ಲಿ ಕೊಡಲಾಗಿದೆ.

Interior Measurements (Rear)

ಟಾಟಾ ಹ್ಯಾರಿಯೆರ್

ಹುಂಡೈ ಕ್ರೆಟಾ

ಜೀಪ್ ಕಂಪಾಸ್

Shoulder Room

1400mm

1250mm

1345mm

Headroom

940mm

980mm

900mm

Kneeroom

720-910mm

615mm-920mm

640-855mm

Seat Base Width

1340mm

1260mm

1305mm

Seat Base Length

475mm

450mm

510mm

Seat Back Height

625mm

640mm

635mm

Floor Hump Height

120mm

-

85mm

Floor Hump Width

295mm

-

350mm

Tata Harrier vs Hyundai Creta vs Jeep Compass: Comparison Review

ಮುಂಭಾಗದಲ್ಲಿ, ವಿಷಯಗಳು ಅಷ್ಟೇನು ವಿಭಿನ್ನವಾಗಿಲ್ಲ. ಹ್ಯಾರಿಯೆರ್ ನಲ್ಲಿ ಬಹಳಷ್ಟು ಅಗಲ ಇದ್ದು ಎತ್ತರದ ಸೀಟ್ ಪೊಸಿಷನ್ ಸಹ ಇದೆ, ಇದು ಒಂದು ಮುಂದುವರೆದ SUV ವಿಭಾಗಕ್ಕೆ ಹೊಂದುವಂತಿದೆ. ಆದರೆ,  ಟಾಟಾ ದಲ್ಲಿ ಎಲ್ಲವು ಕೂಡ ಚೆನ್ನಾಗಿದೆ ಎಂದು ಹೇಳಲಾಗುವುದಿಲ್ಲ. ಡ್ರೈವರ್ ಗಾಗಿ ಉತ್ತಮ ಸ್ಥಾನ ಕಲ್ಪಿಸಲು ಹ್ಯಾರಿಯೆರ್ ನಲ್ಲಿ ಬಹಳ ಕಷ್ಟ ಪಡಬೇಕಾಗುತ್ತದೆ, ಕುಳ್ಳಗಿರುವ ವ್ಯಕ್ತಿಗಳಿಗೆ ಅದು ಇನ್ನು ಕಷ್ಟವಾಗಬಹುದು. ಪೆಡಲ್ ಬಾಕ್ಸ್ ಸ್ವಲ್ಪ ಮಟ್ಟಿಗೆ ಚಿಕ್ಕದಾಗಿದೆ ಎನಿಸುತ್ತದೆ. ಡೆಡ್ ಪೆಡಲ್ ಅನ್ನು ಅಸ್ತವ್ಯಸ್ತವಾಗಿ ಇಡಲಾಗಿದೆ, ಮತ್ತು ಎತ್ತರದ ವ್ಯಕ್ತಿಗಳಿಗೆ ಅವರ ಮೊಣಕಾಲು ಡ್ಯಾಶ್ ಬೋರ್ಡ್ ಗೆ ತಾಕುವಂತಹ ಅನುಭವ ಆಗಬಹುದು. ನಾವು ಹ್ಯಾರಿಯೆರ್ ಜೊತೆ ಕಳೆದಂತಹ ಒಂದು ವಾರ ದಲ್ಲಿ ಸೀಟ್ ವಿಚಾರದಲ್ಲಿ ಬಹಳಷ್ಟು ಬಾರಿ  ಕಷ್ಟ ಪಟ್ಟೆವು. ನಾವು ಕಂಡುಕೊಂಡ ಪರಿಹಾರವು ಸ್ವಲ ಕೆಳಭಾಗದಲ್ಲಿ  ಮತ್ತು ಸ್ವಲ್ಪ ಹಿಂದೆ ಸರಿದು ಕುಳುತುಕೊಳ್ಳುವುದು. 

Tata Harrier vs Hyundai Creta vs Jeep Compass: Comparison Review

ಇನ್ನೊಂದು ಕಡೆಯಿಂದ ನೋಡಿದರೆ, ಹುಂಡೈ ಕ್ರೆಟಾ ದ ಎರ್ಗೊನೊಮಿಕ್ಸ್ ಗಳು ಅದ್ಭುತವಾಗಿದೆ. ಉತ್ತಮ ಸೀಟ್ ಸ್ಥಾನವನ್ನು ಪಡೆದುಕೊಳ್ಳುವುದು ಸುಲಭ, ಮತ್ತ್ತು ಅದು ಟೆಲೆಸ್ಕೋಪಿಕ್ ಅಳವಡಿಕೆಯ ಸ್ಟಿಯರಿಂಗ್ ವೀಲ್ ಇಲ್ಲದಿದ್ದರೂ ಸಹ. ಎತ್ತರದ ವ್ಯಕ್ತಿಗಳಿಗೆ ಬಹಳಷ್ಟು ಸ್ಥಳಾವಕಾಶ ಇದೆ, ಮತ್ತು ಅಗಲ ಕೂಡ ಯಾವುದೇ ಸಮಸ್ಯೆ ಎಂದೆನಿಸುವುದಿಲ್ಲ. ಕ್ರೆಟಾ ನಿಮಗೆ SUV  ತರಹ ಕಂಡರೂ ನೀವು S-ಕ್ರಾಸ್ ತರಹದ್ದಕ್ಕೆ ಹೋಲಿಸಿದಾಗ; ಈ ಗುಂಪಿನಲ್ಲಿ, ಇದು ಕಾರ್ ತರಹ ಇದೆ. 

Tata Harrier vs Hyundai Creta vs Jeep Compass: Comparison Review

ಜೀಪ್ ಬಗ್ಗೆ ಹೇಳಬೇಕೆಂದರೆ.... ಅದು ಒಂದು ತರಹ ಜೀಪ್ ನಂತೆಯೇ ಅನುಭವವಾಗುತ್ತದೆ,  ನೀವು ಬಾನೆಟ್ ನ ಹೆಣೆಭಾಗವನ್ನು ನೋಡಬಲ್ಲಿರಿ ನೀವು ಇತರ ಪ್ರತಿದಿನ ಕಾಣುವ ಹ್ಯಾಚ್ ಬ್ಯಾಕ್/ ಹುಸಿ SUV ಗಳಿಗಿಂತ ಎತ್ತರ ಸ್ಥಾನದಲ್ಲಿ ಕುಳಿತುಕೊಳ್ಳಬಲ್ಲಿರಿ. ಆದರೆ ಹ್ಯಾರಿಯೆರ್ ನಂತೆ , ಜೀಪ್ ಕಂಪಾಸ್  ನಲ್ಲೂ ಸಹ ಪೆಡಲ್ ಬಾಕ್ಸ್ ಸ್ವಲ್ಪ ಇಕ್ಕಾಟ್ಟಾಗಿದೆ ಎಂದು ಅನ್ನಿಸುತ್ತದೆ, ಅದರಲ್ಲೂ ನೀವು ದೊಡ್ಡ ಶೂ ಹಾಕಿಕೊಂಡಿದ್ದರೆ. ಡೆಡ್ ಪೆಡಲ್ ಸ್ಥಾನ ಹ್ಯಾರಿಯೆರ್ ಗಿಂತಲೂ ಉತ್ತಮವಾಗಿದೆ, ಆದರೂ ಸ್ವಲ್ಪ ವಿಚಿತ್ರವಾದ ಕೋನಗಳಿಂದ ಕೂಡಿದೆ. ಇದಕ್ಕೆ ಹೊಂದಿಕೊಳ್ಳುವುದು ಧನ್ಯವಾದಗಳೊಂದಿಗೆ ಸುಲಭವಾಗಿದೆ.

Interior Measurements (Front)

ಟಾಟಾ ಹ್ಯಾರಿಯೆರ್

ಹುಂಡೈ ಕ್ರೆಟಾ

ಜೀಪ್ ಕಂಪಾಸ್

Legroom

930-1110mm

925-1120mm

905-1090mm

Kneeroom

540-780mm

610-840mm

600-800mm

Seat base length

460mm

595mm

500mm

Seat base width

490mm

505mm

490mm

Seat back height

660mm

645mm

630mm

Headroom (min-max)

940-1040mm

920-980mm

860-980mm

Cabin width

1485mm

1400mm

1405mm

ನಿಮ್ಮ ಹಣಕ್ಕೆ ಸೂಕ್ತವಾದ ಮೌಲ್ಯ 

ಈ ಮೂರನ್ನು ಒಂದೇಕಡೆ ಸೇರಿಸುವ ವಿಚಾರ ಈದ್ ಎಂದರೆ, ಅದು, ಈ ಎಲ್ಲದರಲ್ಲೂ ಮುಂಬದಿಯ ಗ್ರಿಲ್ ಗಳಿಗೆ ಫೀಚರ್ ಗಳನ್ನು ಕೊಡಲಾಗಿದೆ. ನೀವು ಟಾಪ್ ಸ್ಪೆಕ್ ಆವೃತ್ತಿಯನ್ನು ತೆಗೆದುಕೊಳ್ಳಿ, ನಿಮಗೆ ಫೀಚರ್ ಗಳಾದ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಸ್ಟಿಯರಿಂಗ್ ಮೌಂಟ್ ಆಗಿರುವ ಆಡಿಯೋ ಕಂಟ್ರೋಲ್, ಒಂದು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಪಾರ್ಕಿಂಗ್ ಕ್ಯಾಮೆರಾ (ಅಳವಡಿಕೆಯ ಗೈಡ್ ಲೈನ್ ಗಳೊಂದಿಗೆ), ಕೀ ಲೆಸ್ ಎಂಟ್ರಿ ಮತ್ತು ಪುಶ್ ಬಟನ್ ಸ್ಟಾರ್ಟ್/ಸ್ಟಾಪ್.

Tata Harrier vs Hyundai Creta vs Jeep Compass: Comparison Review

ವಾಸ್ತವವಾಗಿ ಈ ಎಲ್ಲ SUV ಗಳಲ್ಲಿ ತಮ್ಮದೇ ಆದ ವಿಶೇಷವಾದ ವಿಚಾರಗಳಲ್ಲೂ ಟೇಬಲ್ ನಲ್ಲಿ ಅಳವಡಿಸಲಾಗಿದೆ. ಉದಾಹರಣೆಗೆ, ನಿಮಗೆ ಟಾಟಾ ದಲ್ಲಿ ಸುಂದರವಾದ 7-ಇಂಚು TFT ಸ್ಕ್ರೀನ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸಿಗುತ್ತದೆ, ಮತ್ತು ಚಿಕ್ಕ ಮತ್ತು ಚೊಕ್ಕ ವಿಚಾರಗಳಾದ ಪುಡ್ಡ್ಲ್ ಲ್ಯಾಂಪ್ ಮತ್ತು ಆಟೋ ಫೋಲ್ಡಿಂಗ್ ಮಿರರ್ ಗಳನ್ನೂ ಕೊಡಲಾಗಿದೆ. ಇಲ್ಲಿ ಹೇಳಬಹುದಾದ ಇನ್ನೊಂದು ವಿಚಾರವೆಂದರೆ ಹುರ್ರಿರ್ ನಲ್ಲಿ ಅತಿ ದೊಡ್ಡ ಟಚ್ ಸ್ಕ್ರೀನ್  (8.8-ಇಂಚು) ಕೊಡಲಾಗಿದೆ , ಕ್ರೆಟಾ ದ ಜೊತೆಗೆ ಹೋಲಿಸಿದಾಗ   (7-ಇಂಚು) , ಮತ್ತು ಕಂಪಾಸ್   (8.4-ಇಂಚು ). ಇದರಲ್ಲಿ 9-ಸ್ಪೀಕರ್  JBL ಸೌಂಡ್ ಸಿಸ್ಟಮ್ ಜೊತೆಗೆ ಸಬ್ ವೂಫರ್ ಅನ್ನು ಕೊಡಲಾಗಿದೆ, ಮಿಕ್ಕೆರೆಡರಲ್ಲಿ  6-ಸ್ಪೀಕರ್ ಸೆಟ್ ಅಪ್ ದೊರೆಯುತ್ತದೆ.  ಮಿಸ್ ಆಗಿರುವುದು ಯಾವುದು?  ನಮಗೆ ಇಲ್ಲಿ ಬಹಳಷ್ಟು ಬೇಸಿಕ್ ಫೀಚರ್ ಗಳನ್ನು ಪರಿಗಣಿಸಿದ್ದರೆ ಚೆನ್ನಾಗಿರುತ್ತಿತ್ತು ಎನಿಸುತ್ತದೆ.:  ಆಟೋ ಡಿಮ್ಮಿಂಗ್ ರೇರ್ ವ್ಯೂ ಮಿರರ್, ಎತ್ತರ ಅಳವಡಿಕೆಯ ಸೀಟ್ ಬೆಲ್ಟ್ ಗಳು , ಆಟೋ ಅಪ್/ ಡೌನ್ ಎಲ್ಲ ವಿಂಡೋ ಗಳಿಗೆ ಕೊಟ್ಟಿದ್ದರೆ ಒಟ್ಟಾರೆ ಹ್ಯಾರ್ರಿರ್ ನ ಕ್ಯಾಬಿನ್ ಗುಣಮಟ್ಟ ಅದ್ಬುತವಾಗಿರುತ್ತಿತ್ತು.

Tata Harrier vs Hyundai Creta vs Jeep Compass: Comparison Review

ಕಂಪಾಸ್ ನಲ್ಲಿ ಬಹಳಷ್ಟು ವಿಶೇಷತೆಗಳಿವೆ  ಪೂರ್ಣ ಪನೋರಮಿಕ್ ಸನ್ ರೂಫ್, ವಿದ್ಯುತ್ ಡ್ರೈವರ್ ಸೀಟ್ ಜೊತೆಗೆ ಮೆಮೊರಿ ಮತ್ತು ಡುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್. ಆದರೆ ಅದಕ್ಕಾಗಿ ಅಲ್ಲ ನೀವು ಹೆಚ್ಚು ಖರ್ಚು ಮಾಡುತ್ತಿರುವುದು. ಜೀಪ್ ನಲ್ಲಿ ನಿಮಗೆ ಅತಿ ಮೃದುವಾದ ಡ್ಯಾಶ್ ಬೋರ್ಡ್ ಸಿಗುತ್ತದೆ, ಮೃದು ಹೊರಮೈ ಉಳ್ಳ ಡೋರ್ ಪ್ಯಾಡ್ ಗಳು, ಮತ್ತು ನಿಜವಾಗಿಯೂ ಉತ್ತಮ ಅಗುನ ಮಟ್ಟ ಹೊಂದಿರುವ ಲೆಥರ್ ಹೊರಪದರಗಳು ದೊರೆಯುತ್ತದೆ. ಅದೇ ಸಮಯದಲ್ಲಿ ಕಂಪಾಸ್ ನಲ್ಲಿ ಮಿಸ್ ಆಗಿರುವುದನ್ನು ಹೇಳದಿರಲು ಸಾಧ್ಯವಿಲ್ಲ. ಕೇಳುತ್ತಿರುವ ಬೆಳೆಯನ್ನು ಪರಿಗಣಿಸಿದರೆ, ಬಿಟ್ಟಿರುವ ವಿಷಯಗಳಾದ, ಕ್ರೂಸ್ ಕಂಟ್ರೋಲ್, ಆಂಬಿಯೆಂಟ್ ಲೈಟಿಂಗ್, ಮತ್ತು ಮುಂಬದಿಯ ಪಾರ್ಕಿಂಗ್ ಸೆನ್ಸರ್ ಗಳು, ಅಷ್ಟೇನೂ ಸಮಂಜಸವಾಗಿ ಕಾಣುವುದಿಲ್ಲ.

Tata Harrier vs Hyundai Creta vs Jeep Compass: Comparison Review

ಹುಂಡೈ ಕ್ರೆಟಾವನ್ನು ನಿಜವಾಗಿಯೂ ಚೆನ್ನಾಗಿ ಸಿಂಗರಿಸಲಾಗಿದೆ. ಒಂದನ್ನೇ ಪರಿಗಣಿಸಿದರೆ, ಇದರಲ್ಲಿ ಉತ್ತಮ ಸಲಕರಣೆಗಳನ್ನು ಕೊಡಲಾಗಿದೆ, ಈ ಗುಂಪಿನಲ್ಲಿ. SX (O) ವೇರಿಯೆಂಟ್ ನೊಂದಿಗೆ ನಿಮಗೆ ಬಹಳಷ್ಟು ಉತ್ತಮ ವಿಚಾರಗಳು ಸಿಗುತ್ತದೆ, ವಿದ್ಯುತ್ ಸನ್ ರೂಫ್, ವಿದ್ಯುತ್ ಅಳವಡಿಕೆಯ ಡ್ರೈವರ್ ಸೀಟ್ ಮತ್ತು  ವಯರ್ಲೆಸ್ ಚಾರ್ಜಿನ್ಗ್. ನೀವು SX (O) ಎಸ್ಎಕ್ಯುಟಿವ್ ವೇರಿಯೆಂಟ್ ಪರಿಗಣಿಸಿದಾಗ, ನಿಮಗೆ ವೆಂಟಿಲ್ಲಟೆಡ್ ಸೀಟ್ ಗಳು ಸಿಗುತ್ತದೆ ಕೂಡ. ಇದರಲ್ಲಿ ಚಿಕ್ಕ ಮಿಸ್ ಗಳು ಆಗಿಲ್ಲ ಎಂದು ಹೇಳಲಾಗುವುದಿಲ್ಲ. ನಾವು ಆಳವಾಗಿ ಚಿಂತಿಸಿ ನೋಡಿದಾಗ ಕ್ರೆಟಾ ದಲ್ಲಿ ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಗಳು, ಮತ್ತು ರೈನ್ ಸೆನ್ಸಿಂಗ್ ವೈಪರ್ ಗಳು ಇರುವುದಿಲ್ಲ.

ಆದರೆ, ನಾವು  ಒತ್ತುಕೊಡಬೇಕಾದಂತಹ ವಿಚಾರವೆಂದರೆ ವೇರಿಯೆಂಟ್ ವೇದಿಕೆಯ ಅನುಗುಣವಾಗಿ  ಫೀಚರ್ ಗಳ  ಅಳವಡಿಕೆ. ಹೌದು ಕ್ರೆಟಾ ಉತ್ತಮವಾದ ಸಲಕರಣೆಗಳನ್ನು ಹೊಂದಿದೆ, ಆದರೆ ಅದು ನೀವು ಟಾಪ್ ಸ್ಪೆಕ್ ವೇರಿಯೆಂಟ್ ಅನ್ನು ಪರಿಗಣಿಸಿದಾಗ ಮಾತ್ರ: SX (O) ಮತ್ತು  SX (O) ಎಸ್ಎಕ್ಯುಟಿವ್. ಕಂಪಾಸ್ ಹಾಗು ಹ್ಯಾರಿಯೆರ್ ಗಳ ಜೊತೆ ಹೋಲಿಸಿದಾಗ, ನೀವು ಬೇಗನೆ ಗಮನಿಸಬಹುದು, ಬೇಸಿಕ್ ಹಾಗು ಮದ್ಯದ ವೇರಿಯೆಂಟ್ ಗಳು ಕೂಡ ಉತ್ತಮವಾದ ಫೀಚರ್ ಗಳೊಂದಿಗೆ ಬರುತ್ತದೆ ಎಂದು.

ನಮ್ಮ ನಗರದಲ್ಲಿ ….

Tata Harrier vs Hyundai Creta vs Jeep Compass: Comparison Review

ನಿಂತುಕೊಳ್ಳಿ, ನಾವು ಬೇಸಿಕ್ ಗಳನ್ನು  ಮೊದಲು ಸರಿಪಡಿಸೋಣ. ನಿಯಾಗೆ ಟಾಟಾ ಹ್ಯಾರಿಯೆರ್ ಬೇಕೆನಿಸಿದಲ್ಲಿ, ನಿಮಗೆ ಬೇರೆ ಆಯ್ಕೆಗಳಿಲ್ಲ, ಡೀಸೆಲ್ ಎಂಜಿನ್ ಒಂದಿಗೆ ಮಾನ್ಯುಯಲ್ ಟ್ರಾನ್ಸ್ಮಿಸಿಯೋನ್ ಸಂಯೋಜನೆ ಆಗಿರುವುದು ಬಿಟ್ಟು. ಕಂಪಾಸ್ ಹಾಗು ಕ್ರೆಟಾ ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಗಳ ಆಯ್ಕೆ ಇದೆ. ಗಮನರ್ಹವಾಗಿ: ಹುಂಡೈ 6- ಸ್ಪೀಡ್ ಟಾರ್ಕ್ ಕಾನ್ವೆರ್ಟರ್ ಕೊಟ್ಟರೆ, ಎರೆಡೂ ಇಂಧನ ಆಯ್ಕೆಗಳಲ್ಲಿ, ಜೀಪ್ ನಲ್ಲಿ 7-ಸ್ಪೀಡ್ ಡುಯಲ್ ಕ್ಲಚ್ ಆಟೋಮ್ಯಾಟಿಕ್ ಜೊತೆಗೆ ಪೆಟ್ರೋಲ್ ಮೋಟಾರ್ ಮಾತ್ರ ದೊರೆಯುತ್ತದೆ. ಜೀಪ್ ಡೀಸೆಲ್ ಆಟೋ ಕಂಪಾಸ್ ಮದ್ಯ-2019 ನಲ್ಲಿ ಬಿಡುಗಡೆ ಆಗಬಹುದು., ಹ್ಯಾರಿಯೆರ್ ಆಟೋಮ್ಯಾಟಿಕ್ ಅನ್ನು ದೀಪಾವಳಿ 2019 ನಲ್ಲಿ ಬಿಡುಗಡೆ ಮಾಡಬಹುದು. ಇವುಗಳನ್ನು ಬಿಟ್ಟು ಶೀಘ್ರವಾಗಿ ತಿಳಿಯಲು ಅನುಕೂಲವಾಗುವಂತೆ ಸ್ಪೆಸಿಫಿಕೇಷನ್ ಗಳ  ಪಟ್ಟಿ ಕೊಡಲಾಗಿದೆ:

Engine Specifications

ಟಾಟಾ ಹ್ಯಾರಿಯೆರ್

ಹುಂಡೈ ಕ್ರೆಟಾ

ಜೀಪ್ ಕಂಪಾಸ್

Engine

2.0 litre, 4 cylinder

1.6 litre, 4 cylinder

2.0 litre, 4 cylinder

Power

140PS @ 3750rpm

128PS @ 4000rpm

173PS @ 3750rpm

Torque

350Nm @1750-2500rpm

260Nm @ 1500-3000rpm

350Nm @1750-2500rpm

Transmission

6-speed MT

6-speed MT

6-speed MT

4x4

NA

NA

Yes

ನೀವು ನಿಮ್ಮ ಹೊಸ SUV ಯನ್ನು ಸಾದಾರಣವಾಗಿ ಸಿಟಿ ಯಲ್ಲಿ ಉಪಯೋಗಿಸುವುವಿರಾಗಿದ್ದರೆ . ಕ್ರೆಟಾ ನಿಮಗೆ ಸುಲಭದ ಆಯ್ಕೆ ಆಗುತ್ತದೆ. ನೀವು ಹ್ಯಾಚ್ ಬ್ಯಾಕ್ ನಿಂದ ಮೇಲ್ದರ್ಜೆಗೆ ಹೋಗಬೇಕೆಂದಿದ್ದರೆ, ನೀವು ಹುಂಡೈ ನ ಅಳತೆಗಳಿಗೆ ಸುಲಭವಾಗಿ ಹೊಂದಿಕೊಳ್ಳುತ್ತೀರಿ. ಇದರಲ್ಲಿರುವ ಕಂಟ್ರೋಲ್ ಗಳು, ಸ್ಟಿಯರಿಂಗ್ ಸೇರಿಸಿ, ಕ್ಲಚ್ ಬಳಕೆ ಮತ್ತು ಗೇರ್ ಗಳ ಬದಲಾವಣೆಗೆ  ಅಷ್ಟೇನೂ ಪ್ರಯತ್ನ ಪಡಬೇಕಾಗಿಲ್ಲ. ನೀವು ನಿಮ್ಮ ರಕ್ತದೊತ್ತಡ ಹೆಚ್ಚಿಸಬಲ್ಲ ಟ್ರಾಫಿಕ್ ನಲ್ಲಿ ಸಿಕ್ಕಿಕೊಂಡರು ಸಹ, ಕ್ರೆಟಾ ನಿಮಗೆ ಹೆಚ್ಚಿನ ಒತ್ತಡ ಬೀರುವುದಿಲ್ಲ. ಕ್ರೆಟಾ ವನ್ನು ಹೆಚ್ಚಿನ ಉಪಯೋಗಕ್ಕಾಗಿ ಆಯ್ಕೆ ಮಾಡಲು ಇನ್ನೊಂದು ಕಾರಣ ಅದರ ಮೈಲೇಜ್ ಸಂಖ್ಯೆಗಳು. ಆಶ್ಚರ್ಯಪಡಬೇಕಾಗಿಲ್ಲದಿರುವಂತೆ ಇದು ಒಂದು ಸಿಟಿ ಯಲ್ಲಿ ಹೆಚ್ಚು ಮೈಲೇಜ್ ಕೊಡುವುದಾಗಿತ್ತು, ಸರಿ ಸುಮಾರು 14kmpl. ಜೊತೆಗೆ ಎಂಜಿನ್ ನೀವು ಇರಬೇಕಾದ್ದಕ್ಕಿಂತ ಹೆಚ್ಚಿನ ಗೇರ್ ನಲ್ಲಿ ಇದ್ದರೂ ಸಹ ತಡವರಿಸುವುದಿಲ್ಲ. ನೀವು ಮೂರನೇ ಗೇರ್ ನಲ್ಲಿ ಸ್ಪೀಡ್ ಬ್ರೇಕರ್ ಗಳ ಮೇಲೆ ಹಾರಬಹುದು, ಅವಶ್ಯಕತೆ ಇದ್ದಲ್ಲಿ. ಮತ್ತು ಸ್ಪೀಡ್ ಬ್ರೇಕರ್ ಗಾಲ ಬಗ್ಗೆ ಹೇಳಬೇಕೆಂದರೆ ಕ್ಯಾಬಿನ್ ನಲ್ಲಿ ಅದರ ಪರಿಣಾಮ ಬೀರುವುದಿಲ್ಲ. ಕ್ರೆಟಾ ದ ಸಸ್ಪೆನ್ಷನ್ ನಿಶಬ್ದವಾಗಿ ಕೆಲಸ ಮಾಡುತ್ತದೆ., ಅಲ್ಪ ಸ್ವಲ್ಪ ಬದಿಗಳಲ್ಲಿ ಎಳೆತ ಉಂಟಾಗಬಹುದು, ನಿಮಗೆ ಸಮಸ್ಯೆ ಕೊಡುವಂತಹುದು ಇಲ್ಲ.

Fuel Efficiency

ಟಾಟಾ ಹ್ಯಾರಿಯೆರ್

ಹುಂಡೈ ಕ್ರೆಟಾ

ಜೀಪ್ ಕಂಪಾಸ್

City

11.29kmpl

13.99kmpl

11.07kmpl

ಹ್ಯಾರಿಯೆರ್ ನ 2XL ಅಳತೆ ಅದನ್ನು ನಗರಗಳಲ್ಲಿನ ಉಪಯೋಗಕ್ಕೆ ಸ್ವಲ್ಪ ಇಕ್ಕಟ್ಟಾಗಿದೆ ಎನಿಸುತ್ತದೆ. ನೀವು ಬ್ಲೈಂಡ್ ಸ್ಪಾಟ್ ಗಳ ಬಗ್ಗೆ ಅತಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಬಲಗಡೆಯ ತಿರುವುಗಳನ್ನು ತೆಗೆದುಕೊಳ್ಳುವಾಗ ವಿಶೇಷವಾಗಿ ಪೂರ್ಣ ತಿರುಗುವಾಗ ಮತ್ತು T-ಜುಂಕ್ಷನ್ ಗಳಲ್ಲಿ, ಟೂ ವೀಲರ್ ಗಳನ್ನೂ ಸುಲಭವಾಗಿ ಮಿಸ್ ಮಾಡಬಹುದು (ನಾವು ನಾನೋ ವನ್ನು ಹತ್ತಿರದಿಂದ ಮಿಸ್ ಮಾಡಿದೆವು ) ಅದು ದಪ್ಪಗಿರುವ A-ಪಿಲ್ಲರ್ ನಿಂದಾಗಿ ಕಾಣದಂತಾಗುತ್ತದೆ, ಮತ್ತು ದೊಡ್ಡದಾದ ವಿಂಗ್ ಮಿರರ್ ಗಳಿಂದಾಗಿ ಕೂಡ. ಇಲ್ಲೂ ಸಹ ಕ್ಲಚ್ ಮತ್ತು ಸ್ಟಿಯರಿಂಗ್ ಗಳು ಆಹ್ಲಾದಕರವಾಗಿ ಕಡಿಮೆ ಬರವುಳ್ಳದಾಗಿದೆ, ಅದರಿಂದ ಡ್ರೈವ್ ಮಾಡುವುದು ಸುಲಭವಾಗಿದೆ. ಆದರೂ, ನಾವು ಗೇರ್ ಬಾಕ್ಸ್ ನಿಂದ ಇನ್ನು ಹೆಚ್ಚು ಪವರ್ ಶಿಫ್ಟ್ ಅನ್ನು ಬಯಸಿದ್ದೆವು; ಅದು ಸ್ವಲ್ಪ ಎಳೆದಂತೆ ಇರುತ್ತದೆ. ತುಂಡಾಗಿರುವ ರಸ್ತೆಗಳು ಮತ್ತು ಪಾಟ್ ಹೋಲ್ ಗಳಲ್ಲಿ ಹ್ಯಾರಿಯೆರ್ ಕ್ಯಾಬಿನ್ ನ  ಕುಶನ್ ಚೆನ್ನಾಗಿರುವಂತೆ ನೋಡಿಕೊಳ್ಳುತ್ತದೆ. ಹೌದು, ಇದರಲ್ಲಿ ಸ್ವಲ್ಪ ಲಂಬಾಕಾರದ ಅಲುಗುವಿಕೆ ಇರುತ್ತದೆ ಕ್ಯಾಬಿನ್ ಸೆಟ್ಲ್ ಆಗುವುದಕ್ಕೆ ಮುಂಚೆ. ಆದರೆ , ಕ್ಯಾಬಿನ್ ಒಳಗೆ , ನಿಮಗೆ ಪಾಟ್ ಹೊಲ್ ಗಳು ಕೇಳಿಬರುತ್ತವೆ , ಅನುಭವಿಸುವುದಕ್ಕಿಂತ ಹೆಚ್ಚಾಗಿ.

Tata Harrier vs Hyundai Creta vs Jeep Compass: Comparison Review

ಕಂಪಾಸ್ ವಿಚಾರಕ್ಕೆ ಬಂದಾಗ, ಕ್ಲಚ್ ಬೇಕಾಗಿರುವುದಕ್ಕಿಂತ ಹೆಚ್ಚಾಗಿ ಕಠಿಣವಾಗಿದೆ. ಅದನ್ನು ಹೆಚ್ಚಾದ ಟ್ರಾವೆಲ್ ಗೆ ಸೇರಿಸಿ , ನಿಮಗೆ ಉಚಿತವಾದ ಕಾಲುಗಳ ವ್ಯಾಯಾಮ ಆಗುತ್ತದೆ , ನೀವು ಪ್ರತಿ ಬಾರಿ ಬಂಪರ್ ನಿಂದ ಬಂಪರ್ ನ ವರೆಗಿನ ಟ್ರಾಫಿಕ್ ನಲ್ಲಿ ಸಿಲುಕಿಕೊಂಡಾಗ. ಸ್ಟಿಯರಿಂಗ್ ಸಹ ಇತರ ಎರೆಡರಂತೆ ಸುಲಭವಾಗಿಲ್ಲ. ಜೊತೆಗೆ ಜೀಪ್ ನೀವು ಸರಿಯಾದ ವೇಗದಲ್ಲಿ ಸರಿಯಾದ ಗೇರ್ ಆಯ್ಕೆ ಮಾಡುವಂತೆ ಮಾಡುತ್ತದೆ. ಸ್ಪೀಡ್  ತೀರಾ ಕಡಿಮೆ ಆದಾಗ, ಎಂಜಿನ್ ಬೇಗನೆ ನಾಕ್ ಮಾಡುತ್ತದೆ ಮತ್ತು ತೀವ್ರವಾಗಿ ಪ್ರತಿಭಟಿಸುತ್ತದೆ. ಹೌದು, ಹ್ಯಾರಿಯೆರ್ ನಲ್ಲಿ ಕಂಪಾಸ್ ನಂತಹುದೇ ಎಂಜಿನ್ ಅಳವಡಿಸಲಾಗಿದೆ, ಆದರೆ ಅದರಲ್ಲಿ ಚೆನ್ನಾಗಿ ವ್ಯವಹರಿಸಲಾಗಿದೆ ಅದಕ್ಕೆ ಡ್ರೈವಿಂಗ್ ಮೋಡ್ ಗಳು ಸಹಕಾರಿಯಾಗಿವೆ. ಅಂತಿಮವಾಗಿ ಜೀಪ್ ನ ರೈಡ್ ನಲ್ಲಿ ಒಂದು ಕಠಿಣತೆ ಕೂಡ ಇದೆ. ಅದರಬಗ್ಗೆ ಹೇಳುವುದೆಂದರೆ ನಿಮಗೆ ದೊಡ್ಡದಾದ ಬಂಪ್  ಗಳು ಕ್ಯಾಬಿನ್ ಒಳಗೆ ಪ್ರವೇಶಿಸಿದಂತಾಗುತ್ತದೆ.  ಈ ಸಮಸ್ಯೆಗೆ ಇದಕ್ಕೆ ಸುಲಭವಾದ ಉಪಾಯವೆಂದರೆ ವೇಗವನ್ನು ಹೆಚಿಸುವುದು-- ನೀವು ಹಾಗೆ ಮಾಡುವುದರಿಂದಾಗು ಬಂಪ್  ಗಳ  ತೀವ್ರತೆ ಕಡಿಮೆಗೊಳ್ಳುತ್ತದೆ 

Tata Harrier vs Hyundai Creta vs Jeep Compass: Comparison Review

ಹಾಗಾಗಿ, ಹೌದು, ಹುಂಡೈ ನಗರಗಲ್ಲಿನ ಉಪಯೋಗಕ್ಕೆ ಉತ್ತಮವಾದ ಆಯ್ಕೆ ಆಗಿದೆ. ಉಳಿದ ಎರೆಡರಲ್ಲಿ , ನಾವು ಟಾಟಾ ಕಡೆಗೆ ವಾಲುತ್ತೇವೆ ನಯವಾದ ಕಂಟ್ರೋಲ್ ಗಳಿಗಾಗಿ. ಜೀಪ್ ಬಗ್ಗೆ ಹೇಳಬೇಕೆಂದರೆ, ಅದು ಹೈವೆ ಗಳಲ್ಲಿ ಒಂದು ಸಂಪೂರ್ಣ ರಾಕ್ ಸ್ಟಾರ್ ಆಗಿ ಇರುತ್ತದೆ. ಮತ್ತು ಅದು ನಮ್ಮನ್ನು ಮುಂದಿನ ವಿಷಯಕ್ಕೆ ತೆಗೆದುಕೊಂಡು ಹೋಗುತ್ತದೆ.  

ರಾಜ್ಯಗಳನ್ನು ದಾಟುವುದು 

ನಾವು ಇದರ ಬಗ್ಗೆ ಸ್ಪಷ್ಟತೆ ಕೊಡೋಣ.: ನಿಮಗೆ SUV ಎರೆಡನೆ ವಾಹನವಾಗಿದ್ದರೆ,   ದೂರದ ಪ್ರಯಾಣಗಳಿಗೆ ಹೆಚ್ಚಾಗಿ ಬಳಸುವಂತಿದ್ದರೆ, ಮತ್ತು ನಿಮ್ಮಲ್ಲಿ ಈಗಾಗಲೇ ಚಿಕ್ಕ ಹ್ಯಾಚ್ ಬ್ಯಾಕ್ ಇದ್ದು, ನಗರಗಳಲ್ಲಿನ ಉಪಯೋಗಕ್ಕಾಗಿ, ನಿಮಗೆ ಕಂಪಾಸ್ ಸಂತೋಷ ಕೊಡುತ್ತದೆ. ನಿಮಗೆ SUV ದೂರದ ಪ್ರಯಾಣಗಳಿಗೆ ಬೇಕಾಗಿದ್ದರೆ , ನಾವು ನಿಮಗೆ ಕಂಪಾಸ್ ಕೊಳ್ಳಲು ಹೇಳುತ್ತೇವೆ. ಇದು ಹೈ ವೆ ಗಳಲ್ಲಿ ತುಂಬಾ ಸುಲಭವಾಗಿ ವರ್ತಿಸುತ್ತದೆ: ಇದರ ಸಸ್ಪೆನ್ಷನ್ ನಿಂದಾಗಿ ಕಂಪಾಸ್ ಚಪ್ಪಟೆಯಾಗಿ ಚಲಿಸುತ್ತದೆ, ಮತ್ತು ಕ್ಲಚ್ ಸಹ ಅಷ್ಟೇನು ಕಷ್ಟ ಕೊಡುವುದಿಲ್ಲ. ಹೌದು, ನಾವು ಕ್ರೂಸ್ ಕಂಟ್ರೋಲ್ ಅನ್ನು ಬಹಳವಾಗಿ ಮಿಸ್ ಮಾಡುತ್ತೇವೆ, ಆಶ್ಚರ್ಯವಾಗುವಂತೆ, ಕಂಪಾಸ್ ಗೆ ಕಾಲುಗಳಿವೆಯೇ ಎಂದೆನಿಸುತ್ತದೆ.ಇದರಲ್ಲಿ 4x4 ಇದ್ದಾಗಿಯೂ ಸಹ , ಹ್ಯಾರಿಯೆರ್ ಗಿಂತಲೂ ಕಡಿಮೆ ಬಾರ ಇದೆ. ಇದಕ್ಕಿಂತ ಹೆಚ್ಚಾಗಿ, ಜೀಪ್ ನಲ್ಲಿ 33 ಹಾರ್ಸ್ ಪವರ್ ಹೆಚ್ಚಾಗಿ ಸಿಗುತ್ತದೆ. ಇದು  ನಿಂತಲ್ಲಿನಿಂದ ಅತಿ ಕಡಿಮೆ ಸಮಯದಲ್ಲಿ 100kmph ವೇಗಗತಿಯನ್ನು ಪಡೆಯುತ್ತದೆ.

 

ಟಾಟಾ ಹ್ಯಾರಿಯೆರ್

ಹುಂಡೈ ಕ್ರೆಟಾ

ಜೀಪ್ ಕಂಪಾಸ್

Performance

0-100kmph

12.11seconds

10.83 seconds

10.03 seconds

30-80kmph (3rd)

7.20 seconds

7.93 seconds

7.32 seconds

40-100kmph (4th)

11.38 seconds

13.58 seconds

11.65 seconds

Braking

100-0kmph

45.70 metres

43.43 metres

45.09 metres

 Tata Harrier vs Hyundai Creta vs Jeep Compass: Comparison Review

 ಹ್ಯಾರಿಯೆರ್ ಬಗ್ಗೆ ಹೇಳಬೇಕೆಂದರೆ ಅದು ಹೈವೇ ನಲ್ಲಿ ಆಟ ಆಡಿದ ಹಾಗೆ. ಇದರ ನಿಲುವುಗೆ  ಧನ್ಯವಾದ ,  ನಾವು ನೋಡಿದ ಹಾಗೆ ಬಹಳಷ್ಟು ಮೋಟಾರಿಸ್ಟ್ ಗಳು ತಮ್ಮಷ್ಟಕ್ಕೆ ತಾವೇ  ಮಾಡಿಕೊಡುತ್ತಿದ್ದರು . ಕಂಪಾಸ್ ನಂತೆ ಹ್ಯಾರಿಯೆರ್ ಸಹ  ಒಂದೇ ಸಮನೆ ಮೂರು ಸಂಖ್ಯೆ ವೇಗಗಲ್ಲಿ ಇರಲು ಮತ್ತು ದೂರ ಕ್ರಮಿಸಲು ಹಿಂಜರಿಯುವುದಿಲ್ಲ. ವಾಸ್ತವದಲ್ಲಿ, ಗೇರ್ ನಲ್ಲಿನ ವೇಗಗತಿಗಳಲ್ಲಿ, ಇದು ಮೂರರಲ್ಲಿ ಹೆಚ್ಚು ದೃಢವಾಗಿರುವುದು. ಅದು ಹೇಳಿದ ನಂತರ ನಾವು ಹೇಳಬೇಕಾದ ವಿಷಯವೆಂದರೆ ನಾವು ಇನ್ನು ಉತ್ತಮವಾದ ಟೈಮಿಂಗ್ ಅನ್ನು ಪಡೆಯಬಹುದಿತ್ತು 0-100kmph ಗೆ. ನಾವು ಟೆಸ್ಟ್ ಮಾಡಿದ ಕಾರ್ ನಲ್ಲಿ (ನಮಗೆ ಸ್ವಲ್ಪ ಬೇಕಂತಲೇ ಕಷ್ಟ ಕೊಟ್ಟಹಾಗೆ ಇತ್ತು ) ಅಷ್ಟೇನೂ ಸರಿಯಿರಲಿಲ್ಲ, ಮತ್ತು ಆ ಸ್ವಲ್ಪ ಮಟ್ಟಿಗೆ ಸ್ಲಿಪ್ ಆಗುತ್ತಿತ್ತು. ಅದನ್ನು ಬಿಟ್ಟು, ನಾವು ಒಂದು ಸರಿಯಿಲ್ಲದಿರುವುದನು ತೋರಿಸಬೇಕೆಂದರೆ, ಸ್ಟಿಯರಿಂಗ್ ಸ್ವಲ್ಪ ತಡವರಿಸುತ್ತಿರುವ ಹಾಗೆ ಇತ್ತು ಮೂರು ಅಂಕೆಗಳ ವೇಗಗಳಲ್ಲಿ. ಹಾಗು, ರೈಡ್ ಸ್ವಲ್ಪ ಮಟ್ಟಿಗೆ ಎತ್ತಿಹಾಕುವ ಹಾಗೆ ಇತ್ತು ರಸ್ತೆ ಯ ವಕ್ರಗತಿಗಳಲ್ಲಿ, ಅದರಲ್ಲೂ ಹಿಂಬದಿ ಸೀಟ್ ಪ್ಯಾಸೆಂಜರ್ ಗಳಿಗೆ.

Tata Harrier vs Hyundai Creta vs Jeep Compass: Comparison Review

ಹುಂಡೈ ಕ್ರೆಟಾ ದಿನ ಪೂರ್ತಿ ದೂರದ ಪ್ರಯಾಣ ನಿಭಾಯಿಸಬಲ್ಲದು. ಇತರ ಎರೆಡು ಕಾರ್ ಗಳ ಸ್ಪೀಡ್ ಮತ್ತು ನಿಲುವಿಗೆ ಭಿನ್ನವಾಗಿ. ನಮಗೆ ಸ್ಟಿಯರಿಂಗ್ ನ ತೂಕದ ವಿಚಾರದಲ್ಲಿ ಸಮಸ್ಯೆ ಇಲ್ಲ. ಅದು ವಿಶ್ವಾಸ ಮೂಡಿಸಲು ಸಾಲುತ್ತದೆ. ಆದರೆ, ನೀವು  ಮೂರು ಅಂಕೆ ಗಳಲ್ಲಿ ಹೋಗುತ್ತಿರುವಾಗ, ರೈಡ್ ನ ಗುಣಮಟ್ಟ ಜೀಪ್ ಅಥವಾ ಟಾಟಾ ದಂತೆ ದೃಢವಾಗಿ ಇರುವುದಿಲ್ಲ. ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ ನಮಗೆ ಬ್ರೇಕ್ ನ ಗುಣಮಟ್ಟ ಇನ್ನೂ ಚೆನ್ನಾಗಿರಬಹುದಿತ್ತು ಎಂದು ಅನಿಸುತ್ತದೆ. ಮೂರರಲ್ಲಿ ಹೋಲಿಸಿದಾಗ ಇದರಲ್ಲಿ ಹೆಚ್ಚಿನ ವೇಗಗತಿಯಿಂದ ನಿಲ್ಲುವಿಕೆಗೆ ಬರಲು ಅತಿ ಕಡಿಮೆ ಅವಧಿ ತೆಗೆದುಕೊಳ್ಳುತ್ತದೆ. ಇಲ್ಲೂ ಸಹ 22kmpl  ಮೈಲೇಜ್ ನೊಂದಿಗೆ, ಹುಂಡೈ ಇತರ ಎರೆಡನ್ನು ಬಹಳಷ್ಟು ಅಂತರದಿಂದ ಗೆಲ್ಲುತ್ತದೆ.

Fuel Efficiency

ಟಾಟಾ ಹ್ಯಾರಿಯೆರ್

ಹುಂಡೈ ಕ್ರೆಟಾ

ಜೀಪ್ ಕಂಪಾಸ್

Highway

15.39kmpl

21.84kmpl

16.02kmpl

ಸುರಕ್ಷತೆಯ ವಿಚಾರಗಳು 

ಎಲ್ಲ ಮೂರು SUV ಗಳು ಡುಯಲ್ ಏರ್ಬ್ಯಾಗ್,  ABS ಜೊತೆಗೆ  EBD ಯನ್ನು ಸ್ಟ್ಯಾಂಡರ್ಡ್ ಕಿಟ್ ಆಗಿ ಕೊಡುತ್ತಿದೆ. ಕಂಪಾಸ್ ನಲ್ಲಿ ನಿಜವಾಗಿಯೂ ಉತ್ತಮ ಸಲಕರಣೆಗಳನ್ನು ಕೊಡಲಾಗಿದೆ. ಟ್ರಾಕ್ಷನ್ ಕಂಟ್ರೋಲ್, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್, ಮತ್ತು  ISOFIX  ಗಳನ್ನು ಬೇಸ್ ವೇರಿಯೆಂಟ್ ನಿಂದ ಕೊಡಲಾಗಿದೆ. ವಿಚಿತ್ರವಾಗಿ ಚೈಲ್ಡ್ ಸೀಟ್ ಮೌಂಟ್ ಅನ್ನು ಕೇವಲ  ಹ್ಯಾರಿಯೆರ್ ನ  XZ ವೇರಿಯೆಂಟ್ ನಲ್ಲಿ ಮಾತ್ರ ಕೊಡಲಾಗಿದೆ. ಇನ್ನೂ  ವಿಚಿತ್ರವಾಗಿ ಕ್ರೆಟಾ ದ ಆಟೋಮ್ಯಾಟಿಕ್ ವೇರಿಯೆಂಟ್ ಈ ಮೌಂಟ್ ಗಳನ್ನು ಪಡೆಯುತ್ತದೆ. ಮತ್ತು ಜೀಪ್ ನಲ್ಲಿ ಆರು ಏರ್ಬ್ಯಾಗ್ ಗಳನ್ನು ಕೊಡಲಾಗಿದೆ, 4x4  ಆವೃತ್ತಿಯಲ್ಲಿ .  ಟಾಪ್ ಸ್ಪೆಕ್ ಆವೃತ್ತಿಯ ಹ್ಯಾರಿಯೆರ್ ಮತ್ತು ಕ್ರೆಟಾ ಗಳಲ್ಲಿ ಒಟ್ಟಾರೆ ಆರು ಏರ್ಬ್ಯಾಗ್ ಗಳನ್ನು ಕೊಡಲಾಗಿದೆ.

Safety

ಟಾಟಾ ಹ್ಯಾರಿಯೆರ್

ಹುಂಡೈ ಕ್ರೆಟಾ

ಜೀಪ್ ಕಂಪಾಸ್

Dual Front Airbags

Yes

Yes

Yes

Side & Curtain Airbags

Yes

Yes

4x4 variants only

ABS with EBD

Yes

Yes

Yes

Traction Control

Yes

Yes

Yes

ESP/ESC

Yes

Yes

Yes

Hill-hold

Yes

Yes

Yes

Hill Descent Control

Yes

No

Yes

Rear Parking Sensors

Yes

Yes

Yes

Rear Camera

Yes

Yes

Yes

ISOFIX

Yes

AT only

Yes

ನೀವು ಯಾವುದನ್ನು ಕೊಳ್ಳಬೇಕು ?

ನಮಗೆ ಗೊತ್ತು ಇದು ಒಂದು ಗಾಬರಿಯಾಗುವಂತೆ ಮಾಡುವ ವಿವಾಹರ ಎಂದು, ಆದರೂ ಅದು ನಿಮ್ಮ ಅಂದುಕೊಂಡಿರಬಹುದಾದ ಉಪಯೋಗದ ಮೇಲು ಅವಲಂಬಿಸಿರುತ್ತದೆ. ನಾವು ಇವುಗಳಲ್ಲಿ ಯಾವುದು ವೈತ್ತಮ ಮತ್ತು ಯಾವುದು ಉತ್ತಮವಲ್ಲ ಎಂದು ಪ್ರತಿ SUV  ಗಳಲ್ಲೂ ತಿಳಿಯೋಣ, ನಿಮಗೆ ಸರಿಯಾದ ಕಾರ್ ಆಯ್ಕೆ ಮಾಡಿಕೊಳ್ಳಲು ಅನುಕೂಲವಾಗುವಂತೆ.

Diesel

ಟಾಟಾ ಹ್ಯಾರಿಯೆರ್

ಹುಂಡೈ ಕ್ರೆಟಾ  1.6

ಜೀಪ್ ಕಂಪಾಸ್

Ex-Showroom Delhi Prices

Rs 12.69 lakh - Rs 16.25 lakh

Rs 13.36 lakh - Rs 15.63 lakh

Rs 16.60 lakh - Rs 22.90 lakh

ಹುಂಡೈ ಕ್ರೆಟಾ

Tata Harrier vs Hyundai Creta vs Jeep Compass: Comparison Review

ನೀವು SUV  ಯನ್ನು ಪ್ರಮುಖವಾಗಿ ನಗರಗಳಲ್ಲಿ ಉಪಯೋಗಬಯಸುತ್ತಿದ್ದರೆ ನೀವು ಕ್ರೆಟಾ ಆಯ್ಕೆ ಮಾಡಿರಿ. ಹಾಗು, ನಿಮಗೆ ಸಣ್ಣ ಕುಟುಂಬ ಇದ್ದರೆ ಅಥವಾ 2-3 ಮಂದಿ ಮಾತ್ರ ಕಾರ್ ಅನ್ನು ಬಳಸುವವರಾಗಿದ್ದರೆ, ಬಹಳಷ್ಟು ಸಮಯ, ಹುಂಡೈ ಎಲ್ಲ ತರಹದಲ್ಲೂ ಒಂದು ಉತ್ತಮ ಆಯ್ಕೆ ಆಗುತ್ತದೆ. ಇದರ ಸುಲಭವಾಗಿ ಡ್ರೈವ್ ಮಾಡಬಹುದಾದ ಗುಣ, ಚೆನ್ನಾಗಿ ಮಾಡಲ್ಪಟ್ಟಿರುವ ಆಂತರಿಕಗಳು, ಮತ್ತು ಗ್ಯಾಜೆಟ್ ಗಳು, ನಿಮಗೆ ಇದು ಒಂದು ಪ್ರಬಲ ಪ್ಯಾಕೇಜ್ ಎನಿಸುತ್ತದೆ. ನೀವು  ದೊಡ್ಡದಾಗಿ ಕಾಣುವ ಮತ್ತು ವಿಶಾಲವಾಗಿರುವ ಆಂತರಿಕಗಳು ಉಳ್ಳ SUV ಬಯಸಿದರೆ , ಅಥವಾ ನೀವು ಹೆಚ್ಚಾಗಿ ಹೈವೇ ಗಳಲ್ಲಿ ಉಪಯೋಗಿಸ ಬಯಸಿದರೆ ಇತರ ಎರೆಡು ಕಾರ್ ಗಳನ್ನು ನೋಡಿರಿ.ಹಾಗು, ನಾವು ಹೇಳಬೇಕಾಗುತ್ತದೆ ಕ್ರೆಟಾ ದ ಬೆಲೆ ಇನ್ನು ಸ್ವಲ್ಪ ಸ್ಪರ್ಧಾತ್ಮಕವಾಗಿರಬಹುದಿತ್ತು ಎಂದು, ಮತ್ತು ಕೆಲ ಹಂತದ ವೇರಿಯೆಂಟ್ ಗಳಲ್ಲಿ ಇನ್ನಷ್ಟು ಸಲಕರಣೆಗಳು ಕೊಡಬಹುದಿತ್ತು ಎಂದು.

 ಜೀಪ್ ಕಂಪಾಸ್ 

Tata Harrier vs Hyundai Creta vs Jeep Compass: Comparison Review

ನಿಮಗೆ 4x4 ಅತ್ಯವಶ್ಯಕ ಎಂದೆನಿಸಿದರೆ ನೀವು ಕಂಪಾಸ್ ಆನು ಆಯ್ಕೆ ಮಾಡಬಹುದು . ಅದೇ ರೀತಿ , ನಿಮ್ಮ ಹೈವೇ ಉಪಯೋಗ ಸಿಟಿ ಉಪಯೋಗಕ್ಕಿಂತ ಹೆಚ್ಚು ಇದ್ದರೆ, ಜೀಪ್ ನಿಮಗೆ ಹೆಚ್ಚು ಉಪಯೋಗಕ್ಕೆ ಬರುತ್ತದೆ. ನಾವು ಮೊದಲಿಗೆ ಕೇಳಿದ ಪ್ರಶ್ನೆಯನ್ನು ಎರೆಡು ಬಾಗ ಮಾಡೋಣ, "ಕಂಪಾಸ್ ನಿಮಗೆ  Rs 4 lakh-Rs 5 lakh ಹೆಚ್ಚಾದ ಪ್ರೀಮಿಯಂ  ಗೆ ಅನುಗುಣವಾಗಿದೆಯೇ? " ಎರೆಡು ಬಾಗಗಳಲ್ಲಿ. ಹೌದು ಕಂಪಾಸ್ ಒಂದು ಉತ್ತಮ ಗುಣಮಟ್ಟ ಹೊಂದಿದೆ ಹೆಚ್ಚಿನ ಪ್ರೀಮಿಯಂ ಗೆ ಅನುಗುಣವಾಗಿ. ನೀವು ಜೀಪ್ ನ ಗುಣಮಟ್ಟ ಮತ್ತು ಜೀಪ್ ನ ಘನತೆಗೆ ಕೊಡುತ್ತಿರುವ ಮೌಲ್ಯವಾಗಿದೆ. ಆದರೆ ನಮ್ಮಷ್ಟಕ್ಕೆ ನಾವೇ  ಹೆಚ್ಹಿನ ಪ್ರೀಮಿಯಂ ಅನ್ನು ಸಮರ್ಥಿಸಿಕೊಳ್ಳಲು ಆಗುವುದಿಲ್ಲ. ಊಹಿಸಿರಿ, ಹ್ಯಾರಿಯೆರ್ ನಲ್ಲಿ ಪನರಾಮಿಕ್ ಸನ್ ರೂಫ್, ಮತ್ತು 4x4, ಇದ್ದಿದರೆ ಹೇಗಿರುತ್ತಿತ್ತು ಎಂದು (ಕಾಲ್ಪನಿಕವಾಗಿ )ಸರಿ ಸುಮಾರು Rs 2.5 lakh  ಕಡಿಮೆ ಬೆಲೆ ಉಳ್ಳದ್ದಾಗಿದೆ ಕಂಪಾಸ್ ಗಿಂತಲೂ. 

ಟಾಟಾ ಹ್ಯಾರಿಯೆರ್ 

Tata Harrier vs Hyundai Creta vs Jeep Compass: Comparison Review

ಇವೆಲ್ಲವೂ ಬಹಳಷ್ಟು ಕಾರಣಗಳಾಗುತ್ತವೆ ಹ್ಯಾರಿಯೆರ್ ಅನ್ನು ಇಷ್ಟಪಡಲು. ಆದರೆ, ನಮಗೆ ಹೆಚ್ಚು ಮೆಚ್ಚುಗೆಯಾದದ್ದು ಅದು ತುಂಬುವ ಮೌಲ್ಯತೆ. ಇದು ನಿಜವಾಗಿಯೂ ಕ್ರೆಟಾ ಗಿಂತಲೂ ಹೆಚ್ಚು ಮೌಲ್ಯಯುಕ್ತವಾಗಿದೆ, ಮತ್ತು ಒಂದು ಪೂರ್ಣ SUV ತರಹದ ಅನುಭವ ಕೊಡುತ್ತದೆ. ಇದರ ಡಿಸೈನ್ ಮೆಚ್ಚುವಂತಿದೆ, ಆದರೆ ಸ್ವಲ್ಪ ವಿಷಯಗಳನ್ನು ಮಿಸ್ ಮಾಡಿಕೊಳ್ಳುತ್ತೀರಿ (ಅವು ಸಿಲ್ಲಿ ಯಾಗಿರುತ್ತದೆ ) ಮತ್ತು ಇದರಲ್ಲಿ ಉತ್ತಮ ಸಲಕರಣೆಗಳನ್ನು ಕೊಡಲಾಗಿದೆ. ನಿಮಗೆ ಒಂದು ದೊಡ್ಡ SUV ಹೊಂದಿರುವ ಅನುಭಾವ ಆಗಬೇಕೆಂದಿದ್ದರೆ, ಅಥವಾ ಬಾಡಿಗೆ ಡ್ರೈವರ್ ಅನ್ನು ಇರಿಸಬೇಕೆಂದಿದ್ದರೆ,  ಇದು ಒಂದು ಉತ್ತಮ ಆಯ್ಕೆ. ಹೌದು ಇದು ಸಿಟಿ ಯಲ್ಲಿ ಡ್ರೈವ್ ಮಾಡಲು ಅಷ್ಟೇನೂ ಸುಲಭವಾಗಿಲ್ಲ ( ಇದರ ಅಳತೆಗಳು ಹಾಗೆ ಮಾಡುತ್ತವೆ) ನಮ್ಮ ಲೆಕ್ಕದ ಪ್ರಕಾರ ನೀವು  ಸಾಮ್ಯ ಕಳೆದಂತೆ ಅದಕ್ಕೆ ಸರಿಹೊಂದಿಕೊಳ್ಳುತ್ತೀರಿ. ಸದ್ಯದಲ್ಲಿ ಇದು ಸಿಟಿ ಹಾಗು ಹೈವೆ ಉಪಯೋಗಕ್ಕೆ ಅನುಗುಣವಾಗಿ ಮಾಡಲದಂತಹ ಒಂದು ಉತ್ತಮ ವಾಹನ ಆಗಿದೆ.

Tata Harrier vs Hyundai Creta vs Jeep Compass: Comparison Review

 ಒಟ್ಟಾರೆ ಹೇಳಬೇಕೆಂದರೆ, ಎಲ್ಲ ಮೂರು  SUV ಗಳು ಅದರದೇ ಎಡಿಎ ವೈಶಿಷ್ಟ್ಯತೆ ಹೊಂದಿದೆ. ಆದರೆ ನಿಮಗೆ ಒಂದು  ಎಲ್ಲ ತರಹದ ಉಪಯೋಗಕ್ಕೆ ಬರುವ SUV ಬೇಕೆಂದು ಬಯಸಿದರೆ, ನೀವು ಟಾಟಾ ಶೋ ರೂಮ್ ಗೆ ಧಾವಿಸಿರಿ. ಹ್ಯಾರಿಯೆರ್ ನಲ್ಲಿ ಇವೆಲ್ಲಕ್ಕೂ ಉತ್ತಮ ಸಮತೋಲನ ಮಾಡಲಾಗಿದೆ ಮತ್ತು ಮಾನವರಿಕೆಯಾಗುವಂತೆ  ಇದೆ ಕೂಡ

 

Also Read

Published by
arun

ಇತ್ತೀಚಿನ ಎಸ್ಯುವಿ ಕಾರುಗಳು

ಮುಂಬರುವ ಕಾರುಗಳು

  • ಕಿಯಾ syros
    ಕಿಯಾ syros
    Rs.9.70 - 16.50 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • M ಜಿ Majestor
    M ಜಿ Majestor
    Rs.46 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ be 6
    ಮಹೀಂದ್ರ be 6
    Rs.18.90 - 26.90 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ xev 9e
    ಮಹೀಂದ್ರ xev 9e
    Rs.21.90 - 30.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಆಡಿ ಕ್ಯೂ6 ಈ-ಟ್ರಾನ್
    ಆಡಿ ಕ್ಯೂ6 ಈ-ಟ್ರಾನ್
    Rs.1 ಸಿಆರ್ಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌

ಇತ್ತೀಚಿನ ಎಸ್ಯುವಿ ಕಾರುಗಳು

×
We need your ನಗರ to customize your experience