• English
  • Login / Register

ಟಾಟಾ ನೆಕ್ಸಾನ್: ಮೊದಲ ಡ್ರೈವ್ ವಿಮರ್ಶೆ

Published On ಮೇ 28, 2019 By cardekho for ಟಾಟಾ ನೆಕ್ಸಾನ್‌ 2017-2020

ನೆಕ್ಸಾನ್ ಒಂದು ನಿದರ್ಶನ ಹೇಗೆ ಟಾಟಾ ಒಂದು ಕಾರ್ ಮೇಕರ್ ಆಗಿ ಎರೆಡು ದಶಕಗಳಲ್ಲಿ ಬೆಳೆಯಿತು ಎಂದು. ಆದರೆ ಇದು AMT  ವೇರಿಯೆಂಟ್ ವಿಭಾಗದಲ್ಲೂ ಹಾಗೆ ಮುಂದುವರೆಯಬಹುದೇ ಅಥವಾ ನೆಕ್ಸಾನ್ AMT ಒಂದು ನೋಡಲು ಚೆನ್ನಾಗಿರುವ ಆದರೆ ರಾಜಿ ಮಾಡಿಕೊಳ್ಳಬೇಕಾದ ಪ್ಯಾಕೇಜ್ ಹೊಂದಿದೆಯೇ? ನಾವು ಪರೀಕ್ಷಿಸಲು  ಮಹಾಬಲೇಶ್ವರ್ ಗೆ ಡ್ರೈವ್ ಮಾಡಿದ್ದೆವು.  

Tata Nexon

ಟಾಟಾ ನೆಕ್ಸಾನ್ AMT ಯನ್ನು 2018  ಆಟೋ ಎಕ್ಸ್ಪೋ ದಲ್ಲಿ ಪರಿಚಯಿಸಿತ್ತು ಮತ್ತು ಅದನ್ನು ಮಾರ್ಕೆಟ್ ನಲ್ಲಿ ಬೇಗನೆ ಬಿಡುಗಡೆ ಮಾಡುವ ಭರವಸೆಯನ್ನು ಕೊಟ್ಟಿತ್ತು. ಇತರರಂತೆ ನಾವು ಕೂಡ ಟಾಟಾ ದವರು AMT ವೇರಿಯೆಂಟ್ ಗಳನ್ನೂ ತರುತ್ತಿದ್ದಾರೆ ಎಂದು ತಿಳಿದು ಉತ್ಸಾಹಭರಿತರಾದೆವು.  ಆ ಉತ್ಸಾಹ  ಏಕೆಂದರೆ ಇದು ಮೊದಲನೆಯ AMT ವೇರಿಯೆಂಟ್  ಆಯ್ಕೆ ಕೊಡುತ್ತಿರುವ ಮೊದಲನೆಯ ಕಾಂಪ್ಯಾಕ್ಟ್ SUV ಆಗಿದೆ  ಮತ್ತು ಇವು ಪೆಟ್ರೋಲ್  ಎಂಜಿನ್ ಗಳೊಂದಿಗೂ ಸಹ ಸಿಗುತ್ತದೆ ಎಂದು. ಹಾಗು AMT ಗಳಿಗೆ ಯಾವಾಗಲು ಬೇಡಿಕೆ ಇದ್ದು ಅವು ಡ್ರೈವಿಂಗ್  ಮಾಡುವುದಕ್ಕೆ ಸುಲಭವಾಗಿರುತ್ತದೆ ಮತ್ತು ಅನುಕೂಲಕರವಾಗಿಯೂ ಇರುತ್ತದೆ ಎಂದು.

ಬಾಹ್ಯ

Tata Nexon

ಟಾಟಾ ನೆಕ್ಸಾನ್ AMT ನೋಡಲು ಮಾನ್ಯುಯಲ್ ವೇರಿಯೆಂಟ್ ಗಳ  ತರಹ ಇರುತ್ತದೆ. ಮಾನವೀಯತೆಯ ಗೆರೆಗಳು ಜೊತೆಗೆ ಪ್ರಮುಖವಾದ ಮುಂದಿನ ಗ್ರಿಲ್ ಮತ್ತು ದೃಢವಾದ ಶೋಲ್ಡರ್ ಲೈನ್ ಗಳಿಗೆ ರೂಫ್ ತರಹದ ಬಣ್ಣ ಕೊಡಲಾಗಿದೆ.

Tata Nexon

ಇದರಲ್ಲಿರುವ ವಿಭಿನ್ನತೆಯ ವಿಷಯವೆಂದರೆ  “XZA+”  ಪಟ್ಟಿ ಇರುವುದು ಟೈಲ್ ಗೇಟ್ ಮೇಲೆ.  ಈ AMT ವೇರಿಯೆಂಟ್ ಗಳನ್ನು ಎದ್ದುಕಾಣುವ ಎಟ್ನಾ ಆರೆಂಜ್ ಬಣ್ಣದಲ್ಲಿ ಬಿಡುಗಡೆ ಮಾಡಲಾಗುತ್ತದೆ ಹಾಗು ಟಾಟಾ ಈ ಬಣ್ಣವನ್ನು ಮಾನ್ಯುಯಲ್ ವೇರಿಯೆಂಟ್ ಗಳಲ್ಲೂ ಸಹ ಪರಿಚಯಿಸುತ್ತಿದ್ದಾರೆ.

Tata Nexon

ಆಂತರಿಕಗಳು

Tata Nexon

ಕ್ಯಾಬಿನ್ ಸಹ ಮಾನ್ಯುಯಲ್ ವೇರಿಯೆಂಟ್ ಗಳಂತೆ ಇದೆ. ಇದರಲ್ಲಿರುವ 6.5-ಇಂಚು ಹರ್ಮನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಆಂಡ್ರಾಯ್ಡ್ ಆಟೋ ಅಳವಡಿಕೆಯೊಂದಿಗೆ ಬರುತ್ತದೆ ಮತ್ತು ಆಂಡ್ರಾಯ್ಡ್ ಆಟೋ ಹೊಂದಾಣಿಕೆ ಸಹ ಇದೆ (ಆಪಲ್ ಕಾರ್ ಪ್ಲೇ ಇಲ್ಲ ). ಇದರಲ್ಲಿರುವ ಟಚ್ ಕಾರ್ಯ ಸ್ಪಂದಿಸುತ್ತದೆ ಆದರೆ ಕಾರ್ಯ ಸೂಚನೆ ಹಾಗು  ಕಾರ್ಯಮಾಡುವಿಕೆ ಮದ್ಯ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಕ್ಯಾಬಿನ್ ನಲ್ಲಿ ಅಳವಡಿಕೆಗಳು ಚೆನ್ನಾಗಿವ,ಮೃದುವಾದ ಹೊರಪದರಗಳು ಇಲ್ಲದಿದ್ದರೂ ಸಹ. ದೊಡ ವೆತ್ಯಾಸವೆಂದರೆ  AMT ಗೇರ್ ಲೀವರ್ ಮಧ್ಯದಲ್ಲಿದ್ದು ಅದರ ಹಿಂದೆ ಡ್ರೈವ್ ಮೋಡ್ ಸೆಲೆಕ್ಟರ್ ಕೊಡಲಾಗಿದೆ. ಕ್ಯಾಬಿನ್ ಈಗಲೂ ಸಹ ವೈಶಾಲ್ಯತೆಯನ್ನು ಕಾಪಾಡಿಕೊಳ್ಳುತ್ತದೆ.  ಮುಂದಿನ ಸಾಲಿನ ಸೀಟ್ ಅನ್ನು ಹಿಂದೆ ಸರಿಸಿದರೂ ಸಹ  ಹೆಚ್ಚು  ಎರೆಡನೆ ಸಾಲಿನಲ್ಲಿ  ಹೆಚ್ಚು ಮೊಣಕಾಲಿನ ಜಾಗ ಇರುತ್ತದೆ

Tata Nexon

AMT ಯು ಎಷ್ಟು ವಿಭಿನ್ನವಾಗಿದೆ?

Tata Nexon

ನಾವು ಪೆಟ್ರೋಲ್ ನದರೊಂದಿಗೆ ಪ್ರಾರಂಭಿಸೋಣ. ಮಾನ್ಯುಯಲ್ ಮತ್ತು AMT ವೇರಿಯೆಂಟ್ ಗಳ ಪವರ್ ನಲ್ಲಿ ಯಾವುದೇ ವೆತ್ಯಾಸ ಇಲ್ಲ.  ಇದರಲ್ಲಿರುವ  1.2-ರೆವೊಟ್ರಾನ್ ಪೆಟ್ರೋಲ್ ಮೋಟಾರ್ 110PS  ಗರಿಷ್ಟ ಪವರ್ ಮತ್ತು 170Nm  ಟಾರ್ಕ್ ಅನ್ನು 5000rpm ಮತ್ತು 1750-4000rpm ವ್ಯಾಪ್ತಿಯಲ್ಲಿ ಕೊಡುತ್ತದೆ. ಮ್ಯಾಗ್ನೆಟ್ಟಿ ಮರೆಲ್ಲಿ ಇಂದ ತರಲಾಗಿರುವ AMT ಗೇರ್ ಬಾಕ್ಸ್ ಮತ್ತು ಅದರದೇ ಆದ 6-ಸ್ಪಿಫ್ಡ್ ಮಾನ್ಯುಯಲ್ ಗೇರ್ ಬಾಕ್ಸ್ ಅನ್ನು ಮತ್ತು ಅದೇ ಗೇರ್ ರೇಶಿಯೋ ಗಳೊಂದಿಗೆ ಅಳವಡಿಸಲಾಗಿದೆ. ಹಾಗಾಗಿ  ಅದೇ ಗೇರ್ ಬಾಕ್ಸ್ ಅನ್ನು ಬಳಸಲಾಗಿದ್ದು ಕೇವಲ  ತಾವೇ ಗೇರ್ ಶಿಫ್ಟ್ ಮಾಡುವ ಅವಶ್ಯಕತೆ ಇರುವುದಿಲ್ಲ.

Tata Nexon

ನಾವು ಹಿಂದಿನ ವರ್ಷ ಮಾನ್ಯುಯಲ್ ಆವೃತ್ತಿಯನ್ನು ಡ್ರೈವ್ ಮಾಡಿದಾಗ, ನಮಗೆ ತಿಳಿದಿದ್ದು ಪೆಟ್ರೋಲ್ ಇದು ಡ್ರೈವ್ ಮಾಡಲು ಉತ್ಸಾಹಭರಿತವಾಗಿದೆ, ಆದರೆ ಪ್ರತಿನಿತ್ಯ ಡ್ರೈವ್ ಮಾಡಲು ಕಷ್ಟಕರವಾಗಿರಬಹುದು. ಆವೃತ್ತಿಯಲ್ಲಿ ನೀವು ಆಗಾಗ ಗೇರ್ ಬದಲಿಸಬೇಕಾಗುತ್ತಿರುತ್ತದೆ., ಮತ್ತು  1500rpm  ಯಲ್ಲಿ ಎಳೆತವು ಗಮನಾರ್ಹ. ಆದರೆ AMT ಆವೃತ್ತಿಯಲ್ಲಿ ಇದನ್ನು ಸರಿಪಡಿಸಲಾಗಿದೆ. ಟಾಟಾ ತ್ರೋಟಲ್ ವಿಚಾರದಲ್ಲಿ ಬಹಳಷ್ಟು ಕೆಲಸ ಮಾಡಿದೆ ಹಾಗಾಗಿ ಎಳೆತವನ್ನು ಗಮನಾರ್ಹವಾಗಿ ಕಡಿಮೆ ಮಾಡಲಾಗಿದೆ ಮಾನ್ಯುಯಲ್ ಗೇರ್ ಬಾಕ್ಸ್ ಇರುವ ಆವೃತ್ತಿಗಳಲ್ಲಿ.  ಪವರ್ ನ ಹೊರಹೊಮ್ಮುವಿಕೆ ನಯವಾಗಿದೆ ಮತ್ತು ಕಡಿಮೆ ಮಾಡುವುದೂ ಸುಲಭವಾಗಿದೆ. ಇದರಲ್ಲಿ ಬಹಳಷ್ಟು ಟಾರ್ಕ್ ಸಹ  ಕಡಿಮೆ ವೇಗಳಲ್ಲಿ ದೊರೆಯುತ್ತದೆ, ನೀವು ಟರ್ಬೊ ಕಿಕ್ ಗಾಗಿ ಕಾಯಬೇಕಾಗಿಲ್ಲ ಹೆಚ್ಚು ವೇಗಗತಿ ಪಡೆಯಲು.  

Tata Nexon

ಹಾಗು, ಗೇರ್ ಬದಲಿಸುವಾಗ ಸ್ವಲ್ಪ ಶಬ್ದ ಬರುತ್ತದೆ ಆದರೆ ಅದು ಹೆಚ್ಚಾಗಿರುವುದಿಲ್ಲ. ಅದು  ನಂತರ ನೀವು ತ್ರೋಟಲ್ ಅನ್ನು ಅಲುಗಿಸುತ್ತಿರಬೇಕಾಗುತ್ತದೆ  ಇದನ್ನು ಸಾಂಪ್ರದಾಯಿಕ AT  ಗೇರ್ ಬಾಕ್ಸ್ ನಂತೆ ಪರಿಗಣಿಸುವ ಹಾಗಿಲ್ಲ.  

Tata Nexon

ಈ ಗೇರ್ ಬಾಕ್ಸ್ ನೊಂದಿಗೆ ಮೂರು ಡ್ರೈವ್ ಮೋಡ್ ಗಳು ಬರುತ್ತದೆ. ಮತ್ತು ಅವನ್ನು ಗೇರ್ ಲೀವರ್ ನ ಹಿಂದೆ ಇರುವ ಡಯಲ್ ನಿಂದ ಆರಿಸಬಹುದು. ಮೂರು ಡ್ರೈವ್ ಮೋಡ್ ಗಳು ಯಾವುವೆಂದರೆ ಎಕೋ , ಸಿಟಿ, ಮತ್ತು ಸ್ಪೋರ್ಟ್, ಮತ್ತು ಈ ಮೂರು ಅದರದೇ ಆದ ವಿಶೇಷತೆ ಹೊಂದಿದೆ. ಏಕೋ ಮೋಡ್ ಒಂದು ಸ್ವ ವಿವರಣೆ ಕೊಡುವಂತದ್ದಾಗಿದೆ ಮತ್ತು ಬೇರೆಯದ್ದಕ್ಕಿಂತ  ಹೆಚ್ಚು ಮೈಲೇಜ್ ಕೊಡುವಂತದ್ದಾಗಿದೆ. ನೀವು ಸೌಮ್ಯತೆಯಿಂದ ಹಾಗು ಆರಾಮದಾಯಕವಾಗಿ ಹೈವೇ ಗಳಲ್ಲಿ 80-100kmph ವೇಗಗಳಲ್ಲಿ ಹೋಗಬಯಸುವಿರಾದರೆ ನಿಮಗೆ ಇದು ಸೂಕ್ತ. ಇದರಲ್ಲಿ ತ್ರೋಟಲ್ ಪ್ರತಿಕ್ರಿಯೆ ನಯವಾಗಿದೆ ಮತ್ತು ಗೇರ್ ಬಾಕ್ಸ್ 2000rpm ವೇಗಗತಿ ಪಡೆದ ನಂತರ ಹೆಚ್ಚು ಚೆನ್ನಾಗಿ ಪ್ರತಿಕ್ರಯಿಸುತ್ತದೆ. ಹಾಗು ಈ ಮೋಡ್ ನಲ್ಲಿ ಓವರ್ಟೇಕ್ ಮಾಡಲು ಅಂದುಕೊಳ್ಳಬೇಡಿ. ಸಿಟಿ ಮೋಡ್ ನಿಮಗೆ ಹೆಚ್ಚು ಬೇಗ ವೇಗಗತಿ ಪಡೆಯುವುದಕ್ಕೆ ಅನುಕೂಲ ಮಾಡಿಕೊಡುತ್ತದೆ, ನಿಮಗೆ ನಗರಗಳಲ್ಲಿ ವೇಗವಾಗಿ ಓವರ್ಟೇಕ್  ಮಾಡಲು ಮತ್ತು ಪ್ರತಿನಿತ್ಯ ಉಪಯೋಗಿಸುವುದಕ್ಕೆ ಅನುಕೂಲವಾಗಿರುತ್ತದೆ.  ಆದರೆ ನೀವು ಹೆಚ್ಚು ಉತ್ಸುಕವಾಗಿ ಡ್ರೈವ್ ಮಾಡಬಯಸುವಿರಾದರೆ ನೀವು  ಹಿಡಿಕೆಯನ್ನು ಸ್ಪೋರ್ಟ್ ಮೋಡ್ ಗೆ ತಿರುಗಿಸಬೇಕಾಗುತ್ತದೆ. ಮತ್ತು ನಿಮಗೆ ಗರಿಷ್ಟ ಪವರ್ ಹಾಗು  ಟಾರ್ಕ್ ಸಿಗುತ್ತದೆ, ಮತ್ತು ವೆತ್ಯಾಸವನ್ನು ಗಮನಿಸಬಹುದು ಕೂಡ.  

ಸ್ಪೋರ್ಟ್ಸ್ ಮೋಡ್ ನಲ್ಲಿ ನಿಮಗೆ ಹೆಚ್ಚು ಹೊತ್ತು ಹಾಗು ಅಧಿಕ ವೇಗಗಳಲ್ಲಿ ಉಪಯೋಗಿಸಲು ಅನುಕೂಲ ಮಾಡಿಕೊಡುತ್ತದೆ. ಗೇರ್  ಬದಲಿಸುವ ವೇಗದಲ್ಲಿ ಬದಲಾವಣೆ ಇರುವುದಿಲ್ಲ. ಆದರೆ ಪವರ್ ಹೊರಹೊಮ್ಮುವಿಕೆ ಹೆಚ್ಚು ಅವಶ್ಯಕವಾಗುತ್ತದೆ. ಮಾನ್ಯುಯಲ್ ಆಗಿ ಸರಿದೂಗಿಸಲು ನೀವು ಟಿಪ್ಟ್ರಾನಿಕ್ ಮೋಡ್ ಅನ್ನು ಸಹ ಬಳಸಬಹುದು ಮತ್ತು ಇದು ಡೀಫಾಲ್ಟ್ ಸೆಟ್ಟಿಂಗ್ ಆಗಿದೆ. ತ್ರೋಟಾಲ್ ಅನ್ನು ಸ್ವಲ್ಪ ಹಿಂಪಡೆಯುವುದು ಗೇರ್ ಶಿಫ್ಟಿಂಗ್ ಮಾಡುವಾಗ ಶಬ್ದ ಬರುವುದನ್ನು ಕಡಿಮೆ ಗೊಳಿಸುತ್ತದೆ. ಕಾರ್ ಹೆಚ್ಚು ಉಲ್ಲಾಸಭರಿತವಾಗಿ ಡ್ರೈವ್ ಮಾಡಲು ಅನುಕೂಲವಾಗುತ್ತದೆ.

Tata Nexon

ಕೆಲವು ಸಮಸ್ಯೆಗಳು ಸಹ ಇವೆ. ಹೇಗೆಂದರೆ ಅತಿ ಕಡಿಮೆ ವೇಗಗಳಲ್ಲಿ  3-ಸಿಲಿಂಡರ್ ಎಂಜಿನ್ ನಿಂದ ಕರ್ಕಶವಾದ ಶಬ್ದ ಬರುತ್ತದೆ. ಜೊತೆಗೆ ಸ್ಪೋರ್ಟ್ ಮೋಡ್ ಸಹ ಸ್ವಲ್ಪ ಜಾಗರೂಕವಾಗಿದೆ ಮತ್ತು ಗೇರ್ ವೇಗಗತಿ  ಹೆಚ್ಚುತ್ತಿದಂತೆ  ಮತ್ತು ಕೆಂಪು ಗೆರೆಯ ಹತ್ತಿರ ಬರುತ್ತಿದ್ದಂತೆ ಸ್ವಯಂಚಾಲಿತವಾಗಿ  ಆಗಿ ಹೆಚ್ಚಿನದಕ್ಕೆ ಹೋಗುತ್ತದೆ.ಹಾಗಾಗಿ ಅದು ಯಾವುದೇ ಉತ್ಸಾಹಿಗಳಿಗೆ ಮೆಚ್ಚುಗೆಯಾಗುವುದಿಲ್ಲ. ಆದರೆ ಇದರಲ್ಲಿ ಆಶ್ಚರ್ಯಆಗುವುದು ಏನು ಇಲ್ಲ. ಇದು ಹೇಳಿದ ನಂತರ ನೆಕ್ಸಾನ್ ಹೈವೇ ಗಳಲ್ಲಿ 100kmph ವೇಗವನ್ನು  2000rpm  ನಲ್ಲಿ ಮತ್ತು 80kmph ವೇಗವನ್ನು 1500rpm ನಲ್ಲಿ ಪಡೆಯುತ್ತದೆ.

ಡೀಸೆಲ್ ಎಂಜಿನ್ ಸಹ ಇದೆ ತರಹದ ಪವರ್ ಹಾಗು ಟಾರ್ಕ್ ಹೊರಹೊಮ್ಮುತ್ತದೆ 110PS (ಪೆಟ್ರೋಲ್ ನಂತೆಯೇ ) ಮತ್ತು  260Nm at 3750rpm ಮತ್ತು   1500-2750rpm ಮದ್ಯದಲ್ಲಿ ಅನುಗುಣವಾಗಿ ಕೊಡುತ್ತದೆ. ಡೀಸೆಲ್ ವೇರಿಯೆಂಟ್ ಡ್ರೈವ್ ಮಾಡಲು ಸಮಂಜಸವಾಗಿದ್ದು ಇದರಲ್ಲಿ ಪೆಟ್ರೋಲ್ ನಲ್ಲಿ ಇದ್ದಂತಹ ಹಿನ್ನಡತೆಗಳು  ಇಲ್ಲದಾಗಿದೆ. ಪವರ್ ಹೊರಹೊಮ್ಮುವಿಕೆ ನಯವಾಗಿದೆ. ಮತ್ತು ಪ್ರಾರಂಭದಿಂದಲೂ ಯಾವುದೇ ಎಳೆತವಿಲ್ಲ. ಗೇರ್ ಬದಲಾವಣೆ ಸಹ ನಯವಾಗಿದೆ, AT-ತರಹದ ಅನುಭವ ಆಗುತ್ತದೆ, ಇದಕ್ಕೆ ಸರಿಯಾಗಿರುವ ಟಾರ್ಕ್ ಕಾರಣವಾಗಿದೆ. ಡೀಸೆಲ್ ಎಂಜಿನ್ ಒಂದು ಹೈವೇ ಗಳಲ್ಲಿ ಬಳಸಬಹುದಾದ ಕಾರ್ ಆಗಿದೆ, ನೀವು 100kmph ವೇಗವನ್ನು 2000rpm ನಲ್ಲಿ, ಮತ್ತು 80kmph  ವೇಗವನ್ನು 1500rpm ನಲ್ಲಿ ಪಡೆಯಬಹುದು, ಹೈವೇ ಗಳಲ್ಲಿ. ಬ್ರೇಕ್ ಉಪಯೋಗಿಸುವಾಗ ಈ ಕಾರ್ ಹೆಚ್ಚು ಬಾರವಾಗಿರುವುದರಿಂದ ಸ್ವಲ್ಪ ಕಷ್ಟವಾಗಬಹುದು. ಆದರೆ ಅದೇ ಕಾರಣಕ್ಕೆ ಮುಂಭಾಗದಲ್ಲಿ ಹೆಚ್ಚು ನಿಖರತೆ ಇದೆ.

Tata Nexon

ಆದರೂ ಇದು ಸ್ವಲ್ಪ ಹಿನ್ನಡತೆ ಹೊಂದುತ್ತದೆ ಇಳಿಜಾರು ಪ್ರದೇಶಗಳಲ್ಲಿ, ಮತ್ತು ಒಮ್ಮೆ ಹಿಲ್ ಅಸಿಸ್ಟ್ ಉಪಯೋಗಕ್ಕೆ ಬಂದರೆ ಸರಿಹೋಗುತ್ತದೆ. ಹಿಲ್ ಅಸಿಸ್ಟ್ ಒಂದು ತೆವಳುವುದಕ್ಕೆ ಅನುಕೂಲವಾಗುತ್ತಾಏಯೇ ಹೊರತು ಬ್ರೇಕ್ ಹಾಕುವುದಕ್ಕಲ್ಲ, ಹಾಗಾಗಿ ಬ್ರೇಕ್ ಉಪಯೋಗಿಸುವುದು ಅವಶ್ಯ. ನೀವು ಗೇರ್ ಬದಲಿಸುವಾಗ ಸ್ವಲ್ಪ ಸ್ವಲ್ಪ ಸಂಯಮ ಹೊಂದಬೇಕಾಗುತ್ತದೆ. ಏಕೆಂದರೆ   ಉತ್ಸಾಹಭರಿತವಾಗಿ ಡ್ರೈವ್ ಮಾಡುವಾಗ ಹೆಚ್ಚು ತ್ರೋಟಲ್ ಒತ್ತುವುದು ಗೇರ್ ಬಾಕ್ಸ್ ಮೇಲೆ ಒತ್ತಡ ಬೀರುತ್ತದೆ. ಕೆಲವು ಸಮಯಗಳಲ್ಲಿ ಇಳಿಜಾರುಗಳಲ್ಲಿ ಇದು ಹೆಚ್ಚಾಗುತ್ತದೆ. ಅದನ್ನು ಬಿಟ್ಟು ಉಳಿದೆಡೆ ಡ್ರೈವ್ ಮಾಡುವುದು ಸಂತೋಷಕರವಾಗಿರುತ್ತದೆ, ಹೆಚ್ಚು ಲೋಡ್ ಇರುವಾಗಲೂ ಸಹ, ಲಗೇಜ್ ಸೇರಿ. ಮತ್ತು ತಿರುವುಗಳಲ್ಲಿ ಹೆಚ್ಚು  ಜಾಗೃತವಾಗಿ ಡ್ರೈವ್ ಮಾಡಲು ಸಹಕಾರಿಯಾಗಿರುತ್ತದೆ.

ರೈಡ್ ಮತ್ತು ಹ್ಯಾಂಡಲಿಂಗ್

Tata Nexon

ನೆಕ್ಸಾನ್ ನ ರೈಡ್ ಚೆನ್ನಾಗಿತ್ತು ಮತ್ತು ಇದರಲ್ಲಿ ಯಾವುದೇ ವೆತ್ಯಾಸ ಆಗಿಲ್ಲ, ಮತ್ತು ಇದು ರಸ್ತೆಯೇ ಯಾವುದೇ ಅಡತಡೆಗಳನ್ನು ಸಾವಧಾನವಾಗಿ ನಿಭಾಯಿಸುತ್ತದೆ. ಇದರಲ್ಲಿ ಸ್ವಲ್ಪ ಬಾಡಿ ರೋಲ್ ಇದೆ ಆದರೆ ಅಷ್ಟೊಂದು ಅನಾನುಕೂಲವಾಗಿಲ್ಲ. ಪೆಟ್ರೋಲ್ ಡ್ರೈವ್ ಮಾಡಲು ಹೆಚ್ಚು ಸುಲಭವಾಗಿದೆ ಮತ್ತು ತಿರುವುಗಳಲ್ಲಿ ಇನ್ನು ಚೆನ್ನಾಗಿದೆ, ಆದರೆ ಡೀಸೆಲ್ ಹೆಚ್ಚು ಉತ್ಸುಕವಾಗಿದೆ ಎವೆರೆಡರಲ್ಲಿ. ಅದಕ್ಕೆ ಹೆಚ್ಚಾದ ಟಾರ್ಕ್ ಮತ್ತು ಭಾರವಾದ ಮುಂಬಾಗ ಕಾರಣವಾಗಿದೆ. ಸ್ಟಿಯರಿಂಗ್ ಸ್ವಲ್ಪ ಹೆಚ್ಚು ಪರಿಶ್ರಮಪಡಬೇಕಾಗಿದೆ ಎನಿಸುವಂತೆ ಮಾಡುತ್ತದೆ ಆದರೆ ಡ್ರೈವ್ ಮನೋರಂಜನೆಗೆ ಸಹಕಾರಿಯಾಗಿದೆ.

ಅಂತಿಮ ಅನಿಸಿಕೆ

Tata Nexon

ನೆಕ್ಸಾನ್ AMT ಒಟ್ಟು ಪ್ಯಾಕೇಜ್  ಬಹಳ ಚೆನ್ನಾಗಿದೆ, ಹಾಗು ನೀವು ಪೆಟ್ರೋಲ್ ನೆಕ್ಸಾನ್ ಪರಿಗಣಿಸುತ್ತಿದ್ದರೆ ನಾವು ನಿಮಗೆ  AMT  ಗೆ ಹೋಗಲು ಶಿಫಾರಸು ಮಾಡುತ್ತೇವೆ, ಮಾನ್ಯುಯಲ್ ಹೊರತಾಗಿ. ಹೌದು, ಇದಕ್ಕಾಗಿ ನೀವು ಹಚ್ಚಿನ ಪ್ರೀಮಿಯಂ ಆದ   ರೂ 40,000 - 45,000 ಕೊಡಬೇಕಾಗುತ್ತದೆ, ಆದರೆ ಅದು ಮೌಲ್ಯಬದ್ಧವಾಗಿದೆ. ಮತ್ತು  ಆದರಿದಾಗಿ ಅನುಕೂಲಕ್ಕಾಗಿ ಮನೋರಂಜನೆಯನ್ನು ಕಡಿಮೆಗೊಳಿಸುವುದಿಲ್ಲ. ಡೀಸೆಲ್ ಬಗ್ಗೆ ಹೇಳಬೇಕೆಂದರೆ ಅದು ನಿಖರವಾಗಿ ಮಾಡಲ್ಪಟ್ಟಿದೆ ಮತ್ತು ಅದಕ್ಕೆ  AMT ಯೊಂದಿಗೆ ಹೆಚ್ಚು ಉಪಯುಕತೆ ಸೇರಿಸಿದಾಗ ಡ್ರೈವ್ ಮಾಡಲು ಸಮಂಜಸವಾಗಿರುವಂತೆ ಮಾಡುತ್ತದೆ.

Check out: Ford EcoSport Petrol AT: Review

 

ಇತ್ತೀಚಿನ ಎಸ್ಯುವಿ ಕಾರುಗಳು

ಮುಂಬರುವ ಕಾರುಗಳು

ಇತ್ತೀಚಿನ ಎಸ್ಯುವಿ ಕಾರುಗಳು

×
We need your ನಗರ to customize your experience