ಟೊಯೋಟಾ ಫಾರ್ಚುನರ್ ಪೆಟ್ರೋಲ್ ವಿಶ್ಲೇಷಣೆ
- 1 View
ಫಾರ್ಚ್ಯೂನರ್ ಪೆಟ್ರೋಲ್ ಭಾರತದ ಒಂದು ವಿಶೇಷವಾದ ಬಾಡಿ ಆನ್ ಫ್ರೇಮ್ SUV ಆಗಿದೆ.ಇದು ಡೀಸೆಲ್ ನ ವಾಹನಕ್ಕೆ ಒಂದು ಪರ್ಯಾಯವೇ?
ಪರೀಕ್ಷಿಸಲಾದ ಕಾರು : ಟೊಯೋಟಾ ಫಾರ್ಚುನರ್ 2.7 4x2 AT
ಎಂಜಿನ್: 2.7-ಲೀಟರ್ ಪೆಟ್ರೋಲ್ ಆಟೊಮ್ಯಾಟಿಕ್ | 166PS / 245 Nm
ಇನ್ನೋವಾ ಕ್ರಿಸ್ಟವನ್ನು ಅನುಸರಿಸಿ, ಟೊಯೋಟಾ ಫಾರ್ಚುನರ್ ಅನ್ನು ಪೆಟ್ರೋಲ್ ಎಂಜಿನ್ ನೊಂದಿಗೆ ಪರಿಚಯಿಸಲಾಗಿದೆ. ಬಾಡಿ-ಆನ್-ಫ್ರೇಮ್ ಎಸ್ಯುವಿಗಳು ಯಾವಾಗಲೂ ಡೀಸೆಲ್ ಇಂಜಿನ್ ಗೆ ಸೀಮಿತವಾಗಿದ್ದು, ಅವುಗಳು ಕಡಿಮೆ-ಮಟ್ಟದ ಟಾರ್ಕ್ ಮತ್ತು ದಕ್ಷತೆಯನ್ನು ಕೊಡುತ್ತವೆ . ಟೊಯೋಟಾ ಫಾರ್ಚುನರ್ ಹೀಗೆ ನಿರ್ವಹಿಸುತ್ತದೆ ? ಇದು ಪರಿಗಣಿಸಲು ಉಚಿತವೇ?
ಡ್ರೈವ್ ವಿವರಣೆ
ಫಾರ್ಚುನರ್ ಪೆಟ್ರೋಲ್ ಇನ್ನೋವಾ ಕ್ರಿಸ್ಟ ದಲ್ಲಿರುವ 2.7-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಅನ್ನು ಬಳಸುತ್ತದೆ,
ಇದನ್ನು ಇನ್ನೋವಾ ರೀತಿಯಲ್ಲಿಯೇ ಅವತರಿಸಲಾಗಿದೆ, ಹಾಗಾಗಿ ನಿಮಗೆ 166PS ಪವರ್ ಹಾಗು 245Nm ಲಭ್ಯವಿದೆ.
ನಾವು ರೆಫಿನ್ಮೆಂಟ್ ಬಗ್ಗೆ ಮೊದಲು ಮಾತನಾಡೋಣ . ಡೀಸೆಲ್ ನ ಸೀಟ ಗಳ ಹೊರತಾಗಿ , ನಿಮಗೆ ಕಾಣಬರುವ ವಿಷಯವೆಂದರೆ ಪೆಟ್ರೋಲ್ ನ ಗುಣಮಟ್ಟ. ಇದು ಐಡ್ಲಿಂಗ್ ನಲ್ಲಿ ಕೇಳಿಸದಷ್ಟು ಕಡಿಮೆ ಶಬ್ದ ಮಾಡುತ್ತದೆ. ವಾಹನ ಮುಂದುವರೆದಾಗ ಕೇಳಬರುತ್ತದೆ. ಇದು ಹೋಂಡಾ i-VTEC ಎಂಜಿನ್ ನ ತರಹ ಇಲ್ಲದಿದ್ದರೂ , ಸ್ವಲ್ಪ ಹೆಚ್ಚು ಪರಿಶ್ರಮ ಬೇಕಾಗುತ್ತದೆ, ಹಾಗು ಎಂಜಿನ್ ನ ಶಬ್ದ ಕೇಳೇಳು ಚೆನ್ನಾಗಿರುತ್ತದೆ.
245Nm ಟಾರ್ಕ್ ಪರಿಗಣಿಸಿದಾಗ ಫಾರ್ಚುನರ್ ನ ೨+ ಟನ್ ಭಾರಕ್ಕೆ ಹೆಚ್ಚು ಎಂದು ಅನ್ನಿಸುವುದಿಲ್ಲ , ಹಾಗಂತ ಕಡಿಮೆ ಪವರ್ ಎಂದೂ ಅನ್ನಿಸುವುದಿಲ್ಲ. ಎಂಜಿನ್ ನ ವೇಗ ಚೆನ್ನಾಗಿದೆ ಆದರೂ 100kmph ವೇಗದಲ್ಲಿ ಕ್ರೂಸ್ ಮಾಡುವಾಗ 2,000rpm ನಲ್ಲಿರುವಂತೆ ಭಾಸವಾಗುತ್ತದೆ, ಡೀಸೆಲ್ ಎಂಜಿನ್ ಗೆ ಹೋಲಿಸಿದಾಗ ತೀರಾ ವಿಭಿನ್ನವಾಗಿದೆ ಎಂದೆನಿಸುವುದಿಲ್ಲ. ಮೈಲೇಜ್ ಕೂಡ ಅಷ್ಟೇನೂ ವಿಭಿನ್ನವಾಗಿಲ್ಲ . ಫಾರ್ಚುನರ್ ನಗರಗಳಲ್ಲಿ 8.68kmpl ಹಾಗು 9.26kmpl ಹೈ ವೇ ಗಳಲ್ಲಿ ಕೊಡುತ್ತದೆ.
ಪೆಟ್ರೋಲ್ ಎಂಜಿನ್ ನಲ್ಲೂ ಸಹ ಫಾರ್ಚುನರ್ ಟೂರರ್ ನ ಗುಣಗಳನ್ನು ಉಳಿಸಿಕೊಂಡಿದೆ. ೬-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸ್ಮೂತ್ ಆದ ಶಿಫ್ಟ್ ಮಾಡಲು ಅನುಕೂಲ ಮಾಡಿಕೊಡುತ್ತದೆ. ಹೈ ವೇ ಗಳಲ್ಲಿ ಓವರ್ ಟೇಕ್ ಮಾಡಬೇಕಾದರೆ ಕೆಳಗಿನ ಗೇರ್ ಗಳಿಗೆ ಹೋಗ ಬೇಕಾಗುತ್ತದೆ. ಇಂತಹ ಸಮಯದಲ್ಲಿ ಡೀಸೆಲ್ ನ ಹೆಚ್ಚುವರಿ ಟಾರ್ಕ್ ಬೇಕೆನಿಸುತ್ತದೆ. ಕಡಿಮೆ ಗೇರ್ ಗಳಿಗೆ ಹೋದಹಾಗೆ ಎಂಜಿನ್ ವೇಗ ಹೆಚ್ಚುವಂತೆ ಬಾಸವಾಗುತ್ತದೆ. ಇದು ನಮ್ಮ ರೋಡ್ ಟೆಸ್ಟ್ ಗಳಲ್ಲಿ ಕಂಡುಬರುತ್ತದೆ. ಪೆಟ್ರೋಲ್ ಫಾರ್ಚುನರ್ 20-80kmph ಗೆ ಹೋಗಲು 8.13 ಸೆಕೆಂಡ್ ತಗೆದುಕೊಂಡಿತು , ಹೋಲಿಕೆಯಲ್ಲಿ ಡೀಸೆಲ್ 7.2 ಸೆಕೆಂಡ್ ತೆಗೆದುಕೊಂಡಿತು. ಇದರ 0-100kmph ಸಮಯ 13.22 ಸೆಕೆಂಡ್ ಸಹ ಡೀಸೆಲ್ ಗಿಂತ 1.08 ಸೆಕೆಂಡ್ ಕಡಿಮೆ.
ಡೀಸೆಲ್ ನ ತರಹ ನಿಮಗೆ Eco ಮತ್ತು Power ಡ್ರೈವ್ ಮೋಡ್ ಸಿಗುತ್ತದೆ, ಆದರೆ ನಿಮಗೆ 4x4 ಆಯ್ಕೆ ಸಿಗುವುದಿಲ್ಲ . Eco ಟ್ರೊಟ್ಲ್ ರೆಸ್ಪಾನ್ಸ್ ಅನ್ನು ಕಡಿಮೆ ಮಾಡುತ್ತದೆ , ಏರ್ ಕಂಡೀಶನ್ ಅನ್ನು ಕಡಿಮೆ ಗೊಳಿಸುತ್ತದೆ, ಹಾಗು ಗೇರ್ ಬದಲಾವಣೆಯನ್ನು ತ್ವರಿತ ಗೊಳಿಸುತ್ತದೆ . Power ಮೋಡ್ ಡೀಸೆಲ್ ನಂತೆಯೇ ಹೆಚ್ಚಿನ ವೇಗಕ್ಕೆ ಮತ್ತು ಹೆಚ್ಚಿದ ತಿರುವುಗಳಿಗೆ ಸಹಾಯಕ ಹಾಗು ಟ್ರಾನ್ಸ್ಮಿಷನ್ ಹೆಚ್ಚಿನ ಅವಧಿ ಹೊಂದಿಕೊಂಡಿದ್ದು ವೇಗವನ್ನು ಹೆಚ್ಚಿಸುತ್ತದೆ.
ರೈಡ್ , ಹ್ಯಾಂಡಲಿಂಗ್, ಸ್ಟಿಯರಿಂಗ್, ಮತ್ತು ಬ್ರೆಕಿಂಗ್
ಫಾರ್ಚುನರ್ ಪೆಟ್ರೋಲ್ ನ ಡೈನಾಮಿಕ್ ಪ್ಯಾಕೇಜ್ ಡೀಸೆಲ್ ಗಿಂತ ಹೆಚ್ಚೇನು ವಿಭಿನ್ನವಾಗಿಲ್ಲ. ಇದರಲ್ಲಿ ಡೀಸೆಲ್ ನ ತರಹದ pitch ಮತ್ತು bounce ಕಂಟ್ರೋಲ್ ನಿಯಂತ್ರಣ ಇರುವುದಿಲ್ಲ. ಇದರಲ್ಲಿ 17-ಇಂಚು ವೀಲ್ ಅಗಲವಾಗಿದ್ದು ಚೆನ್ನಾಗಿದೆ. ಆರಂಭಿಕ ವೇಗ ಮತ್ತು ರೈಡ್ ಕ್ವಾಲಿಟಿ ಸ್ವಲ್ಪ ಮಟ್ಟಿಗೆ ಚೆನ್ನಾಗಿದೆ. ಎರೆಡೂ ಅವತರಣಿಕೆಗಳು ಹೆಚ್ಚಿನ ವೇಗದಲ್ಲಿ ಒಂದೇ ರೀತಿ ಇರುತ್ತದೆ.
ನಗರಗಳಲ್ಲಿನ ಉಪಯೋಗಕ್ಕೆ ಸ್ಟಿಯರಿಂಗ್ ಆರಾಮದಾಯಕವಾಗಿದೆ , ಇದು ಅರ್ಬನ್ ಫಾರ್ಚುನರ್ ಗೆ ಸರಿಹೊಂದುತ್ತದೆ. ಬ್ರೇಕ್ ನಲ್ಲೂ ಸಹ ಹಳೆಯ ಫಾರ್ಚುನರ್ ಗೆ ಹೋಲಿಸಿದಾಗ ಹೆಚ್ಚಿನ ಅನುಕೂಲತೆ ಇದೆ. ರೋಡ್ ಟೆಸ್ಟ್ ಗಳಲ್ಲಿ ಫಾರ್ಚುನರ್ 100kmph ನಿಂದ ಪೂರ್ಣ ವಿರಾಮಕ್ಕೆ ಬರಲು 3.38 ಸೆಕೆಂಡ್ ತೆಗೆದುಕೊಳ್ಳುತ್ತದೆ ಮತ್ತು 43.88 ಮೀಟರ್ ನಲ್ಲಿ ಸಾಧ್ಯವಾಗುತ್ತದೆ . ಮತ್ತು 80-0kmph ಗೆ ಬರಲು 2.71 ಸೆಕೆಂಡ್ ಹಾಗು 27 ಮೀಟರ್ ನಲ್ಲಿ ಸಾಧ್ಯವಾಗುತ್ತದೆ.
ಇದು ಪೆಟ್ರೋಲ್ ಗಾಡಿಯ ವೇಗ ಬಯಸುವವರಿಗೆ ಅಲ್ಲದಿರಬಹುದು , ಆದರೂ ಡ್ರೈವ್ ಮಾಡಲು ಇಷ್ಟವಾಗುತ್ತದೆ, ಆದರೆ ನಿಮಗೆ ಅರಿವಿಗೆ ಬರುವಂತೆ ಫಾರ್ಚುನರ್ ಪೆಟ್ರೋಲ್ off-road ಗಾಗಿ ಅಲ್ಲ , ಇದು ಹೆಚ್ಚಿನ ನಗರಗಳ ಬಳಕೆಗೆ ಮಾಡಲಾಗಿದೆ. ಇದು CR-V ಅಥವಾ Tucson ತರಹ ಇಲ್ಲದಿರಬಹುದು ಮತ್ತು ಹೆಚ್ಚು ಎತ್ತರದ SUV ಗಳ ಸಾಲಿಗೆ ಸೇರುತ್ತದೆ.
ಆಕರ್ಷಣೆ, ವೈಶಿಷ್ಟ್ಯಗಳು ಮತ್ತು ಗುಣ ವಿಶೇಷತೆಗಳು
ಡೀಸೆಲ್ ಮತ್ತು ಪೆಟ್ರೋಲ್ ಫಾರ್ಚುನರ್ ಗಾಲ ಬಗ್ಗೆ ವಿಶೇಷ ಗಮನ ಹರಿಸುತ್ತೇನೆ . ಇದರಲ್ಲಿ ತೈಲ ಡಾ ಬಗ್ಗೆ ಪಟ್ಟಿ ಇಲ್ಲದಿರುವುದರಿಂದ ನಿಮಗೆ ಗಮನಿಸಬಹುದಾದ ವಿಶೇಷತೆಯೆಂದರೆ ಫಿಲ್ಲರ್ ಕ್ಯಾಪ್ ನ ಮೇಲಿರುವ ಪೆಟ್ರೋಲ್ ಎಂಬ ಸ್ಟಿಕರ್ . ಹೆಚ್ಚಿನ ಬಂಕ್ ಗಾಲ ನಿರ್ವಾಹಕರು ಡೀಸೆಲ್ ಎಂದೇ ಭಾವಿಸುವುದರಿಂದ ಪೆಟ್ರೋಲ್ ಸ್ಟಿಕರ್ ಸಹಕಾರಿಯಾಗುತ್ತದೆ. ಮಿಕ್ಕೆಲ್ಲ ವಿಷಯಗಳು ಡೀಸೆಲ್ ನಂತೆಯೇ ಇವೆ. ಹೊಸ ವಿನ್ಯಾಸದ ವಿಷಯಗಳು ನಿಮಗೆ ಹಳೆ ಜನರೇಶನ್ ವಿನ್ಯಾಸಕ್ಕಿಂತ ವಿಭಿನ್ನವಾಗಿದೆ ಅಂದು ತೋರ್ಪಡಿಸುತ್ತದೆ.
ಫೀಚರ್ ಗಳ ಪ್ಯಾಕೇಜ್ ಕೂಡ ಬಹಳಷ್ಟು ಮಟ್ಟಿಗೆ ಡೀಸೆಲ್ ನಂತೆಯೇ ಇದೆ. ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ೭-ಇಂಚು ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಲೆಥರ್ ಹೊರ ಪದರಗಳು, ಸ್ಮಾರ್ಟ್ ಕೀ, ಮತ್ತು optitron ಇನ್ಸ್ಟ್ರುಮೆಂಟ್ ಕ್ಲಸ್ಟರ್ ಎಲ್ಲವನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಇದರಲ್ಲಿ ಮಿಸ್ ಆಗಿರುವವುಗಳೆಂದರೆ ಡೌನ್ ಹಿಲ್ ಅಸಿಸ್ಟ್ ಕಂಟ್ರೋಲ್, ಇದು 4x4 ವೇರಿಯೆಂಟ್ ಫಾರ್ಚುನರ್ ಗಳಲ್ಲಿ ಮಾತ್ರ ಲಭ್ಯವಿದೆ .
ನಾವು ಫಾರ್ಚುನರ್ ನ ಅಂತರಿಕಗಳನ್ನು ಫಾರ್ಚುನರ್ ಡೀಸೆಲ್ ವಿಶ್ಲೇಷಣೆಯಲ್ಲಿ ಕೊಟ್ಟಿದ್ದೇವೆ.
ಅಂತಿಮ ಅನಿಸಿಕೆ
ಫಾರ್ಚುನರ್ ಡೀಸೆಲ್ ನ ಹೊರತಾಗಿ , ಪೆಟ್ರೋಲ್ ಅವತರಣಿಕೆಯನ್ನು ಕೊಳ್ಳುವುದು ಹೆಚ್ಚು ಬುದ್ಧಿವಂತಿಕೆಯ ಪ್ರಶ್ನೆಯ ವಿಷಯವಾಗಿರುತ್ತದೆ. ಇದು ಹೆಚ್ಚು ಲೆಕ್ಕಾಚಾರ ಮಾಡುವ ಮತ್ತು ದೊಡ್ಡದಾದ SUV ಕೊಳ್ಳಲು ಇಚ್ಛಿಸುವ , ಹಾಗು ಡೀಸೆಲ್ ನಂತೆ ಹೆಚ್ಚಿಗೆ ಖರ್ಚು ಮಾಡದೆ ಇರಲು ಬಯಸುವವರಿಗೆ ಉತ್ತಮ ಆಯ್ಕೆ . ಹೆಚ್ಚಾಗಿ , ಇತ್ತೀಚಿನ ಡೀಸೆಲ್ ವಿಪರೀತ ಚಿಂತನೆಗೆ ಅನುಗುಣವಾಗಿ ಇದು ಫಾರ್ಚುನರ್ ನ ಸಹಾಯಕ ಆಯ್ಕೆ ಆಗಿರುತ್ತದೆ.
ಇದನ್ನು ಹೇಳಿದ ನಂತರ ರೂ ೧. ೫೩ ಲಕ್ಷ ಹೆಚ್ಚು ಬೆಲೆಯ 4x2 AT ಡೀಸೆಲ್ ಫಾರ್ಚುನರ್ ಗಿಂತ ಹೆಚ್ಚಿನ ಫಲಕಾರಿಯಾಗಿದೆ ಮತ್ತು ಇದು ನಮ್ಮ ಆಯ್ಕೆ ಆಗಿರುತ್ತದೆ ಕೂಡ .
ಟೊಯೋಟಾ ಫ್ರಾಜುನರ್ 2016-2021
tushar