• English
  • Login / Register

ಟೊಯೋಟಾ ಇನ್ನೋವಾ ಕ್ರಿಸ್ಟಾ : ಮೊದಲ ಡ್ರೈವ್

Published On ಮೇ 09, 2019 By abhishek for ಟೊಯೋಟಾ ಇನೋವಾ ಕ್ರಿಸ್ಟಾ 2016-2020

Toyota Innova Crysta: First Drive

ಹತ್ತು ವರ್ಷಗಳ ಕೆಳಗೆ ಟೊಯೋಟಾ ಇನ್ನೋವಾ ಬಿಡುಗಡೆ ಮಾಡಲಾಗಿತ್ತು , ಕೊಸ್ಮೆಟಿಕ್  ಗಾಲ ನವೀಕರಣ, ಮತ್ತು ಹೊಸ ಫೀಚರ್ ಗಳನ್ನು  ಕೊಟ್ಟು ಬಹಳ ದಿನಗಳಾಗಿತ್ತು. , ಬಹಳಷ್ಟು ವರ್ಷಗಳಿಂದ  ಇವು ಹಾಗೆಯೇ ಇದ್ದವು ಕೂಡ. ಈಗ ಟೊಯೋಟಾ ಪ್ರಖ್ಯಾತ MPV  ಗೆ ಹೊಸ ಅವತಾರ ಕೊಟ್ಟಿದೆ. ನಾವು ಟೊಯೋಟಾ ಇನ್ನೋವಾ ವನ್ನು ಗೋವಾ ಡಾ ಸುತ್ತಮುತ್ತ ಡ್ರೈವ್ ಗೆ ತೆಗೆದುಕೊಂಡು ಹೋಗಿದ್ದೆವು. ಇದರಲ್ಲಿ ಯಾವದು ಹೊಸತು ಇದೆ ಮತ್ತು ಹೇಗಿದೆ ಎಂಬುದನ್ನು ಇಲ್ಲಿ ಕೊಟ್ಟಿದ್ದೇವೆ.

ಟೊಯೋಟಾ ಇನ್ನೋವಾ ಒಂದು ಮನೆ ಮಾತಾಗಿರುವ ಹೆಸರು ಆಗಿದೆ, ಎಲ್ಲ ಕಡೆ ಇದರ ಉಪಸ್ಥಿತಿ ಇದೆ. ಇದು ಅಲ್ಲ ಕಡೆಯಲ್ಲೂ ಫ್ಯಾಮಿಲಿ ಕಾರ್ ಎಂದು ಪ್ರಖ್ಯಾತಿ ಹೊಂದಿದೆ. ಇವೆಲ್ಲ ಕರಣಗಲಿಲ್ಲದೆ  ಇಲ್ಲ. ಎಷ್ಟು ವರ್ಷಗಳ ನಂತರವೂ ಹೆಚ್ಚು ರಿಲಿಯಬಿಲಿಟಿ, ಪ್ರಾಕ್ಟಿಕಾಲಿಟಿ, ಮತ್ತು ಮನಸ್ಸಿಗೆ ಒಪ್ಪುವ ಕಾರುಗಳಲ್ಲಿ ಇನ್ನೋವಾ ಒಂದಾಗಿದೆ. ಕೊನೆಗೂ ಟೊಯೋಟಾ ಇದರ ನಂತರದ ಕಾರನ್ನು ಬಿಡುಗಡೆ ಮಾಡಿದೆ. ಇನ್ನೋವಾ ಕ್ರಿಸ್ಟಾ ಎಂದು ಕರೆಯಲ್ಪಡುತ್ತದೆ. ನಾವು ಇದರ ಬಗ್ಗೆ ಹೆಚ್ಚು ತಿಳಿಯಲು ಇದನ್ನು ಗೋವಾ ದ ಸುತ್ತ ಒಂದು ಡ್ರೈವ್ ಗೆ ತೆಗೆದುಕೊಂಡು ಹೋಗಿದ್ದೆವು.

ವಿನ್ಯಾಸ

Toyota Innova Crysta: First Drive

ಇನ್ನೋವಾ ವಿನ್ಯಾಸದಲ್ಲಿ ಸ್ವಲ್ಪ ಉದ್ದವಾಗಿ ಕಾಣುತಿತ್ತು . ಕೆಲವು ನವೀಕರಣಗಳ ನಂತರವೂ ತಳಹದಿಯ ವಿನ್ಯಾಸ ದಶಕಗಳ ವರೆಗೆ ಹಾಗೆ ಇತ್ತು. ಹೊಸ ಕಾರಿಗಾಗಿ, ಟೊಯೋಟಾ ವಿನ್ಯಾಸದ ಮಟ್ಟಿಗೆ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಇದು ಐಷಾರಾಮಿ ಸೆಡಾನ್ ತೆಗೆದುಕೊಳ್ಳಬೇಕೆಂದಿರುವ ಜನರಿಗೆ ಮನದಟ್ಟುವಂತೆ ಇರಬೇಕಾಗಿತ್ತು. ಕ್ರಿಸ್ಟಾ ಡಾ ವಿನ್ಯಾಸದ ಬಗ್ಗೆ ಗಮನ ಹರಿಸಿದಾಗ ಟೊಯೋಟಾ ಒಂದು ಉತ್ತಮ ಕಾರ್ಯ ಮಾಡಿದೆ ಎಂದು ಹೇಳಬಹುದು.

Toyota Innova Crysta: First Drive

ಮುಂಬಾಗವು ಹಿಂದಿನ ವಿನ್ಯಾಸಕ್ಕಿಂತಲೂ ಅಗಲವಾಗಿ ಮಾಡಲ್ಪಟ್ಟಿದೆ ಹಾಗು ಇದಕ್ಕೆ ಎರೆಡು ಸ್ಲಾಟೆಡ್ ಗ್ರಿಲ್ ಹಾಗು ದೊಡ್ಡ ರಾಪ್ ಅರೌಂಡ್ ಶೈಲಿಯ ಮಲ್ಟಿ ಎಲಿಮೆಂಟ್ ವಿನ್ಯಾಸದ ಲೈಟ್ ಕೊಡಲಾಗಿದೆ. ಕೆಳಗಿನ ಗ್ರಿಲ್ ಅನ್ನು ಗ್ಲಾಸಿ  ಬ್ಲಾಕ್ ನಿಂದ ಫಿನಿಶಿಂಗ್ ಕೊಡಲಾಗಿದೆ, ಮತ್ತು ಇವು ಮುಂಬದಿಗೆ ಆಕರ್ಷಕವಾಗಿ ಕಾಣುತ್ತದೆ. ಟರ್ನ್ ಇಂಡಿಕೇಟರ್ ನೊಂದಿಗೆ ಜೋಡಿಯಾಗಿ ಬರುವ ಫಾಗ್ ಲ್ಯಾಂಪ್ ಗಳು ಇದಕ್ಕೆ ಸುಂದರ ಮೆರುಗು ಕೊಡುತ್ತದೆ.

ಪಕ್ಕದ ಬಾಗಗಳಲ್ಲಿ ಇನ್ನೋವಾ ವ್ಯಾನ್ ನಂತೆ ಕಾಣುವ ಶೈಲಿ ಬೆಳಕಿಗೆ ಬರುತ್ತದೆ, ಆದರೆ ಟೊಯೋಟಾ C -ಪಿಲ್ಲರ್ ವಿಂಡೋ ನ ವಿಭಿನ್ನ ಶೈಲಿ ಸಾದಾರಣವಾಗಿ ಕಾಣಲ್ಪಡುತ್ತಿದ್ದ ಸೈಡ್ -ಪ್ರೊಫೈಲ್ ಗೆ ಒಂದು ಆಕರ್ಷಣೆ ಕೊಡುತ್ತದೆ. ಜೊತೆಗೆ ೧೭-ಇಂಚು ಅಲಾಯ್ ವೀಲ್ ಕೂಡ ವೀಲ್ ಆರ್ಚ್ ಗೆ ಹೊಂದುವಂತೆ ಇದ್ದು ಆಕರ್ಷಕವಾಗಿ ಕಾಣುತ್ತದೆ.

Toyota Innova Crysta: First Drive

ಹಿಂಬದಿಯಲ್ಲಿ ಇಂಟಿಗ್ರೇಟೆಡ್ ಸ್ಪೋಇಲೆರ್ ಮತ್ತು ಫ್ಲಶ್ ಫಿಟ್ಟಿಂಗ್ ಟೈಲ್ ಲೈಟ್ ಗಳು ಕ್ರಿಸ್ತಾ ಗೆ ನೋಡಲು ಸುಂದರವಾಗಿರುವಂತೆ ಮಾಡುತ್ತದೆ. ಒಟ್ಟಿನಲ್ಲಿ ಕಾರಿನ ವಿನ್ಯಾಸ ಚೆನ್ನಾಗಿದೆ , ಸೈಡ್ ಗಳಲ್ಲಿ ಅಷ್ಟೇನು ಸುಧಾರಣೆ ಇಲ್ಲದೆ ವ್ಯಾನ್ ನಂತೆ ಸಾಧಾರಣವಾಗಿದ್ದರೂ , ಈ ಕಾರು ಕೊಂಡುಕೊಳ್ಳುವವರಿಗೆ ಅರ್ಹವಾಯಿದೆ ಎನಿಸುತ್ತದೆ.

ಆಂತರಿಕಗಳು,

ಬಹಳಷ್ಟು ಡ್ರೈವರ್ ಹೊಂದಿರುವ ಇನ್ನೋವಾ ಗ್ರಾಹಕರು  ಅಂತರಿಕಗಳು ದೊಡ್ಡದಾಗಿರಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಟೊಯೋಟ ಒಂದು ಓಲೆ ನಿರ್ಧಾರ ಕೈಗೊಂಡಿದೆ., ಮತ್ತು ಈ ವಿಷಯಗಳನ್ನು ಟೊಯೋಟಾ ನಿಮ್ಮ ಗಮನಕ್ಕೆ ತರುತ್ತದೆ. ನೀವು ಒಳಗೆ ಪ್ರವೇಶಿಸಿದ ಕ್ಷಣದಿಂದ ನಿಮಗೆ ಒಂದು ಹೊಸ ಲಾಂಜ್ ನಲ್ಲಿ ಕುಳಿತಂದಾಗುತ್ತದೆ, ಸಾದಾರಣ ಕಾರಿನಲ್ಲಲ್ಲ.

ಟೊಯೋಟಾ ಇದನ್ನು ಒಂದು ವಿಭಿನ್ನವಾದ ಕಾರ್ ಆಗಿ ಮಾಡಲು ಬಹಳ ಶ್ರಮಪಟ್ಟಿದೆ. ನೀವು ಆರಾಮದಾಯಕ ವಾದ ಸೀಟಿನ ಮೇಲೆ ಕುಳಿತುಕೊಂಡಾಗ ನಿಮಗೆ ಮೊದಲಿಗೆ ಗೋಚರವಾಗುವ ವಿಷಯವೆಂದರೆ ಡ್ಯಾಶ್ ಬೋರ್ಡ್ ನ ಅಳತೆಗೆ ಹೊಂದಿರುವ ಅಲ್ಯೂಮಿನಿಯಂ ನ ಪಟ್ಟಿ . ಇದನ್ನು ಹೊಂದಿಸಲು ಟೊಯೋಟಾ ಬಹಳ ಕಷ್ಟ ಪಟ್ಟಿದೆ, ಡ್ಯಾಶ್ ನ ಸುತ್ತಳತೆ ಗಮನಿಸಿದಾಗ. ಆಂತರಿಕಗಳಲ್ಲಿ ಕಡಿಮೆ ಎನಿಸುವ ವಿಚಾರವೆಂದರೆ ಅದರ ಪ್ಲಾಸ್ಟಿಕ್ ಗುಣಮಟ್ಟ ಮತ್ತು ಡ್ಯಾಶ್ ಬೋರ್ಡ್ ನ ಕೆಳಬಾಗ ಕಡಿಮೆ ಗುಣಮಟ್ಟ ಹೊಂದಿದ್ದು ಇನ್ನೂ ಚೆನ್ನಾಗಿರಬಹುದಿತ್ತು ಎಂದೆನಿಸುತ್ತದೆ.

Toyota Innova Crysta: First Drive

ಮುಂಡನ ನಿಮ್ಮ ಗಮನ ಸೆಳೆಯುವ ವಿಷಯವೆಂದರೆ ೪. ಇಂಚು TFT  ಸ್ಕ್ರೀನ್, ಇದು ಡ್ಯಾಶ್ಬೋರ್ಡ್ ಮಧ್ಯದಲ್ಲಿದೆ. ಇದರ ಸ್ಕ್ರೀನ್ ಡ್ಯಾಶ್ ಬೋರ್ಡ್ ನ ಒಳಗಡೆ ಕೂರುವುದಿಲ್ಲ, ಆದರೂ ಭಿನ್ನವಾಗಿ ಕಾಣುತ್ತದೆ. ಇದು ಒಂದು ಟ್ಯಾಬ್ಲೆಟ್ ಉಪಕರಣವನ್ನು ಡ್ಯಾಶ್ ಬೋರ್ಡ್ ಮದ್ಯದಲ್ಲಿ ಇರಿಸಿದಂತಿದೆ ಹಾಗು ನೇವಿಗೇಶನ್ , ಆಡಿಯೋ, ಟೆಲಿಫೋನ್, ಮುಂತಾದವುಗಳನ್ನು ಹೊಂದಿದೆ. ಸ್ಕ್ರೀನ್ ನ ಕೆಳಬಾಗದಲ್ಲಿ ಏರ್ ಕಂಡೀಶನ್ ಕಂಟ್ರೋಲ್ ಗಳು ಇದ್ದು, ಉಪಯೋಗವಿಲ್ಲದ ಬಟನ್ ಗಳನ್ನೂ ಕೊಡಲಾಗಿಲ್ಲ. ಎರೆಡು ಡಯಲ್ ಗಳು ಹಾಗು ಕೆಲವು ಕ್ರೋಮ್ ಲೇಪನ ಗೊಂಡ ಬಟನ್ ಗಳು ಮದ್ಯದಲ್ಲಿ ಇದ್ದು, ನೋಡಲು ಚೆನ್ನಾಗಿರುವ ಡಿಸ್ಪ್ಲೇ ಸ್ಕ್ರೀನ್ ಇದನ್ನು ಉಪಯೋಗ ಸ್ನೇಹಿಯಾಗಿ ಮಾಡುತ್ತದೆ.

Toyota Innova Crysta: First Drive

ಲೆಥರ್ ಮೇಲ್ಪದರ ಒಳಗೊಂಡ ಸ್ಟಿಯರಿಂಗ್ ವೀಲ್ ಹಿಡಿಯಲು ಸಹಕಾರಿಯಾಗಿದೆ, ಮತ್ತು ಎಲ್ಲಾ ಅವಶ್ಯಕ ಬಟನ್ ಗಳು ಸಹ ಇವೆ. ಹಾಗಾಗಿ ನೀವು ಕೈಗಳನ್ನು ಮೇಲೆತ್ತುವ ಅವಶ್ಯಕತೆ ಬರುವುದಿಲ್ಲ. ಇನ್ಸ್ಟ್ರುಮೆಂಟ್ ಬಿನಕ್ಲ್ ಕೂಡ ಚೆನ್ನಾಗಿದೆ. ಟ್ಯಾಚೊಮೆತೆರ್ ಹಾಗು ಸ್ಪೀಡೋಮೀಟರ್ ಗಳು ಓದಲು ಸುಲಭವಾಗಿದೆ, ಮತ್ತು ಮಧ್ಯದಲ್ಲಿರುವ ಸ್ಕ್ರೀನ್ ಗಮನ ಸೆಳೆಯುತ್ತದೆ. ಇದರಲ್ಲಿ ಇಂಧನ ಬಳಕೆ, ಕ್ರೂಸಿಂಗ್ ವ್ಯಾಪ್ತಿ , ಒಟ್ಟಿನ ವೇಗಗತಿ, ಮತ್ತು ಕಾಂಪಾಸ್ ಕೂಡ ಇದೆ.

ನಿಮಗೆ ಹೈ ವೆ ನಲ್ಲಿ ಡ್ರೈವ್ ಮಾಡಿ ಬೇಜಾರಾಗಿದ್ದರೆ, ನೀವು ಮೈಲೇಜ್ ಸೆಟ್ಟಿಂಗ್ ಗಳನ್ನೂ ಬದಲಿಸಿ ಟಾರ್ಗೆಟ್ ಸೆಟ್ ಮಾಡಬಹುದು. ಇದರಿಂದ ನೀವು ಎಷ್ಟು ಚೆನ್ನಾಗಿ ಮೈಲೇಜ್ ಬರುವಂತೆ ಮಾಡಿದ್ದೀರಿ ಎಂದು ತಿಳಿಯುತ್ತದೆ.

Toyota Innova Crysta: First Drive

ನೋಡಲು ಸುಂದರವಾಗಿದ್ದು ಎಲ್ಲರಿಗೂ ಉಪಯುಕ್ತವಾಗಿದೆ, ಎಷ್ಟು ಮೈಲೇಜ್ ಕೊಡುತ್ತದೆ ಎಂಬ ವಾಡಿಕೆಗೆ ಹೊಂದಿಕೊಳ್ಳುತ್ತದೆ. ಇನ್ನೋವದಲ್ಲಿ ಬಹಳಷ್ಟು ಶೇಖರಣಾ ಜಾಗ ಕೂಡ ಇದೆ. ಎರೆಡು ಗ್ಲೋವ್ ಬಾಕ್ಸ್ ಒಳ ಗೊಂಡಂತೆ , ಇವು ೨೧ ಒಂದು ಲೀಟರ್ ಬಾಟಲ್ ಗಳನ್ನೂ ಹಿಡಿಸುತ್ತದೆ. ಇದನ್ನು ಭಾರತೀಯ ಗ್ರಾಹಕರು ಹಾಗು ಭಾರತದ ವಾತಾವರಣವನ್ನು ಪರಿಗಣಿಸಿ ಮಾಡಲಾಗಿದೆ.

ಹಿಂಬದಿಗೆ ತೆರಳಿದರೆ , ಹಿಂಬದಿಯ ಸೀಟ್ ಗಳು ಆರಾಮದಾಯಕವಾಗಿದೆ. ಇವೆಲ್ಲ ಟೊಯೋಟಾ ದ ಹೊಸ ಸೀಟ್ ಗಾಲ ವಿನ್ಯಾಸವು ಇನ್ನೋವಾ ವನ್ನು ದೂರದ ಪ್ರಯಾಣಕ್ಕಾಗಿ ಉಪಯೋಗಿಸಲ್ಪಡುವ , ಮತ್ತು ಖಾಸಗಿ ಹಾಗು ವ್ಯಾವಹಾರಿಕ ಮಾರುಕಟ್ಟೆಗಾಗಿ ಮಾಡಲಾಗಿದೆ. ಇವು ಸುಲಭವಾಗಿ ಹೆಚ್ಚು ಅಗಲವಾದ ಫ್ರೇಮ್ ಗಳನ್ನೂ ಇರಿಸಲು ಅನುಕೂಲವಾಗಿದೆ ಮತ್ತು ಸಹಕಾರಿಯಾಗಿದೆ ಕೂಡ. ಹಿಂಬದಿಯ ಪ್ಯಾಸೆಂಜರ್ ಗಳಿಗಾಗಿ ಒಂದು ಟ್ರೆ ಕೊಡಲಾಗಿದೆ ಹಾಗು ಮುಂದಿನ ಸೀಟ್ ನವರಿಗ್ಗಾಗಿ ಲ್ಯಾಪ್ಟಾಪ್ ಅಥಾ ರೆಫ್ರೆಷ್ಮೆನ್ಟ್ ಇರಿಸಲು ಅನುಕೂಲವಾಗುವಂತೆ ಮಾಡಲಾಗಿದೆ.

Toyota Innova Crysta: First Drive

ಒಂದು ವಾಸ್ತವವಾದ ವಿಚಾರವೆಂದರೆ ಕಪ್ ಹೋಲ್ಡರ್ ಹಿಂಬದಿಯ ಸೀಟ್ ಪಕ್ಕದಲ್ಲಿ ಇದ್ದು ಬಟನ್ ಒತ್ತಿದರೆ ತೆರೆದುಕೊಳ್ಳುತ್ತದೆ ಹಾಗು ಎರೆಡು ಕಪ್ ಗಳನ್ನೂ ಇರಿಸಬಹುದಾಗಿದೆ. ಇದರ ಹೊರತಾಗಿ ಹಿಂಬದಿಯ ಪ್ಯಾಸೆಂಜರ್ ಗಳು ಕೋ ಡ್ರೈವರ್ ಸೀಟ್ ಅನ್ನು ಪಕ್ಕದಲ್ಲಿರುವ ಲೀವರ್ ಅನ್ನು ಬಳಸಿ ಮುಂದಕ್ಕೆ ತಳ್ಳಬಹುದಾಗಿದೆ. ಹೆಚ್ಚಾದ ಜಾಗದೊಂದಿಗೆ ಹಿಂಬದಿಯ ಸೀಟ್ ನ ಮತ್ತು ಮುರನೆಯ ಸಾಲಿನ ಪ್ಯಾಸೆಂಜರ್ ಗಳಿಗೆ ಹೆಚ್ಚಾದ ಜಾಗ ಸಿಗುತ್ತದೆ.  ಇನ್ನೋವಾ ಕ್ರಿಸ್ಟಾ  ಉದ್ದವಾಗಿಯೂ, ಅಗಲವಾಗಿಯೂ, ಮತ್ತು ಎತ್ತರವಾಗಿಯೂ ಇದೆ, 150mm, 70mm ಮತ್ತು  35mm ಹಳೆಯ ಇನ್ನೋವಾಗೇ ಹೋಲಿಸಿದಾಗ. ಆದರೂ ವೀಲ್ ಬೇಸ್ ಹಿಂದಿನಂತೆಯೇ

ಇದೆ.

ಹಿಂಬದಿಯ ಪ್ಯಾಸೆಂಜರ್ ಗಳಿಗೆ ಆರಾಮದಾಯಕ ಲಾಂಜ್ ಲೈಟಿಂಗ್ ಮೇಲ್ಚಾವಣಿಯಲ್ಲಿ , ಹಿಂಬದಿಯ ಏರ್ ಕಂಡೀಶನ್ ಕಂಟ್ರೋಲ್ ಗಾಲ ಸ್ಕ್ರೀನ್ ಸಹ ಇದೆ.  ಇದು ಒಂದು ಆಹ್ಲಾದಕರ ಅನುಭವ ಕೊಡುವ ಅಂತರಿಕಗಳಾಗಿದೆ , ವಿಶೇಷವಾಗಿ ಡ್ರೈವರ್ ಹೊಂದಿರುವವರಿಗೆ, ಒಳ್ಳೆಯ ಸಮಯ ವನ್ನು ಹೊಂದಿಸುತ್ತದೆ. ಟೊಯೋಟಾ ಬಹಳಷ್ಟು ಗುಣಮಟ್ಟವನ್ನು ಹೆಚ್ಚಿಸಿದೆ ಮತ್ತು ಸ್ಪರ್ಧಾತ್ಮಕವಾಗಿಯೂ ಇದೆ ಮತ್ತು ಪ್ರತಿಸ್ಪರ್ದಿಗಳು  ಹೆಚ್ಚು ಪರಿಶ್ರಮ ಪಡುವಂತಿದೆ.

ನಾವು ಮುಂದಿನ ಮೆಕ್ಯಾನಿಕಲ್ ವಿಷಯಗಳಿಗೆ ಹೋಗುವ ಮುನ್ನ ತಿಳಿಸಬೇಕಾದ ಒಂದು ಮುಖ್ಯ ವಿಷಯವೆಂದರೆ ಕ್ಯಾಬಿನ್ ಒಳಗೆ ಹೊರಗಿನ ಗಾಳಿಯ ಶಬ್ದ ಹೆಚ್ಚಾಗಿ ಕೇಳಿಬರುತ್ತದೆ. ಒಂದು ರೀತಿಯ ಶಿಳ್ಳೆ  ಹೊಡೆಯುವತಹ ಶಬ್ದವು ನಮಗೆ ಕೇಳಿಬರುತ್ತ್ತಿತ್ತು ಮತ್ತು ನಮಗೆ ಅದು ಸ್ವಲ್ಪ ಹೊತ್ತು ಸರಿಕಾಣಬರಲಿಲ್ಲ ಕೂಡ.

ಎಂಜಿನ್ ಮತ್ತು ಕಾರ್ಯ ದಕ್ಷತೆ

Toyota Innova Crysta: First Drive

ಹತ್ತು ವರ್ಷಗಳ  2.5 ಲೀಟರ್  D-4D ಎಂಜಿನ್ ಬಳಸಿದ ನಂತರ , ಇನ್ನೋವಾ ಕ್ರಿಸ್ಟಾ ಎರೆಡು ಹೊಸಾ ಎಂಜಿನ್ ಗಳನ್ನೂ ಸಹ ಪಡೆಯುತ್ತದೆ. ಮೊದಲನೆಯದು 2.4- ಲೀಟರ್  2GD-FTV ಎಂಜಿನ್ , ಇದು ಹೆಚ್ಚಿನ ಪವರ್ ಆದ 150 PS ಅನ್ನು ಮತ್ತು ಮೆಚ್ಚಬಹುದಾದ 343 Nm ಟಾರ್ಕ್ ಅನ್ನು ಕೊಡುತ್ತದೆ., ಮತ್ತು ೫-ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ನೊಂದಿಗೆ ಬರುತ್ತದೆ. ಡ್ರೈವ್ ಮಾಡಿದಾಗ ಕ್ರಿಸ್ಟಾ ವನ್ನು ಮೆಚ್ಚಬೇಕಾಗುತ್ತದೆ.ಇದಕ್ಕೆ ಕಡಿಮೆ ಎಂದೆನಿಸಬಹುದಾದ 1400 rpm ನಲ್ಲಿ ಸಿಗುವ ಹೆಚ್ಚು ಟಾರ್ಕ್  ಕಾರಣವಾಗಿದೆ. ಇನ್ನೋವಾಗೇ ಹೈವೆ ಗಳು ಅಥವಾ ಬೆಟ್ಟಗಳ ರಸ್ತೆಗಳು, ಕಡಿದಾದ ರಸ್ತೆ ಗಳು  ಎಂದೂ ಕಠಿಣ ಎನಿಸುವುದಿಲ್ಲ.

ನಿಮಗೆ ಕಡಿಮೆ  rpm ನಲ್ಲಿ ಸ್ವಲ್ಪ ಎಳೆಯುತ್ತದೆ ಎಂದೆನಿಸುತ್ತದೆ, ಮತ್ತು 1500 rpm ನಂತರ ಹಾಗೆನಿಸುವುದಿಲ್ಲ. ಎಂಜಿನ್ ಗೆ ಸುಸ್ತಾಗಿದೆ ಎಂದೆನಿಸುವುದಿಲ್ಲ. ಎರೆದುವು ಎಂಜಿನ್ ಗಳಲ್ಲಿ Power ಮತ್ತು  Eco mode ಇದ್ದು   ನಿಮ್ಮ ಡ್ರೈವ್ ನ ಇಚ್ಛೆಗೆ ತಕ್ಕಂತೆ ECU map settings ಜೊತೆ ಹೊಂದಿಸಬಹುದಾಗಿದೆ. ಹಾಗಂತ ಎಲ್ಲೇ ಚೆನ್ನಾಗಿದೆ ಎಂದು ಹೇಳುವುದಕ್ಕಾಗುವುದಿಲ್ಲ. NVH ನ ಮಟ್ಟ ಎಂಜಿನ್ ಗೆ ಹೋಲಿಸಿದರೆ ಹೆಚ್ಚಿದೆ. ಇದು ನಿಮಗೆ ಆದಷ್ಟು ಬೇಗ ಹೆಚ್ಚಿನ ಗೇರ್ ಗೆ ಹೋಗಿ ಎಂಜಿನ್ ನ ಶಿಳ್ಳೆ ಹೊಡೆಯುವಂತಹ ಶಬ್ದವನ್ನು ಕಡಿಮೆ ಗೊಳಿಸಲು ಪ್ರೇರೇಪಿಸುತ್ತದೆ. ಹೆಚ್ಚು ಪರಿಶ್ರಮದಾಯಕ ಯಾಂತ್ರಿಕಗಳು ಮತ್ತು ಹತ್ತಿರ ೧. ೯ ಟನ್ ಭಾರವು ಇದ್ದರೂ ಇನ್ನೋವಾ ನಿಮಗೆ ಪರಿಹ್ರಮದಾಯಕವಲ್ಲದ ಡ್ರೈವ್ ಮಾಡಲು ಸಹಕಾರಿಯಾಗಿದೆ.

ಹೈಡ್ರಾಲಿಕ್ ಸ್ಟಿಯರಿಂಗ್ ಕೆಲವೊಮ್ಮೆ ಕಠಿಣವಾಗಿದೆ ಎಂದೆನಿಸುತ್ತದೆ ಮತ್ತು ಗೇರ್ ಚೇಂಜ್ ಕೂಡ ಕಷ್ಟ ಎಂದೆನಿಸುತ್ತದೆ. ಇದು ನಿಜವಾಗಿಯೂ ಹಿಂದಿನ ಇನ್ನೋವಾ ಗಿಂತ ಉತ್ತಮವಾಗಿದೆ. ಹಿಂದಿನ ಇನ್ನೋವದಲ್ಲಿ ಗೇರ್ ಚೇಂಜ್ ಕಷ್ಟಕರವಾಗಿತ್ತು, ಹೊಸದರಲ್ಲಿ ಅದಕ್ಕಿಂತ ಉತ್ತಮವಾಗಿದೆ ಮತ್ತು ವೈಬ್ರೆಷನ್ ಕಡಿಮೆ ಇದೆ. ಆದರೂ ಇದರ ಡ್ರೈವ್  ಎರ್ಟಿಗಾ ಅಥವಾ ಲಾಡ್ಜಿ ಯಂತೆ ಇರುವುದಿಲ್ಲ.

Toyota Innova Crysta: First Drive

ಇನ್ನೊಂದು ಉಪಯೋಗದಲ್ಲಿರುವ ಎಂಜಿನ್ ದೊಡ್ದಾಗಿದ್ದು  ಈ 2.8-ಯೂನಿಟ್ ಅನ್ನು ಫಾರ್ಚುನರ್ ನಿಂದ ತೆಗೆದುಕೊಳ್ಳಲಾಗಿದೆ. 174 PS and 360 Nm ನೊಂದಿಗೆ ಹೊಸ ಇನ್ನೋವಾ ಎಲ್ಲ ರೋಡ್ ಗಳನ್ನೂ ಆಳುತ್ತದೆ. ಆದರೂ ಇದರಲ್ಲಿ ಒಂದು ಹಿಡಿತವಿದೆ, ಈ ಎಂಜಿನ್ ಗೆ ೫-ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಅಳವಡಿಸಲಾಗಿಲ್ಲ, ಬದಲಿಗೆ ೬-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ. ಟ್ವಿನ್ ಕ್ಲಚ್ ಅಪ್ಲಿಕೇಶನ್ ಇಲ್ಲ, ಸಾದಾರಣ ಟಾರ್ಕ್ ಕನ್ವರ್ಟರ್ ಅನ್ನು ಹೊಂದಿದೆ. ಇದು ಆರಾಮದಾಯಕವನ್ನು ಹೆಚ್ಚಿಸುವುದಲ್ಲದೆ, ಅದರಲ್ಲೂ ಬಂಪರ್ ನಿಂದ ಬಂಪರ್ ನ ವರೆಗಿನ ಟ್ರಾಫಿಕ್ ನಲ್ಲಿ , ಇದು ಇನ್ನೋವಾ ವನ್ನು ಹೆಚ್ಚು ಜನರು ಮೆಚ್ಚುವಂತೆ ಮಾಡುತ್ತದೆ.

ಒಂದು ಒಳ್ಳೆಯ ವಿಚಾರವೆಂದರೆ ಟೊಯೋಟಾ ಈ ಟ್ರಾನ್ಸ್ಮಿಷನ್ ಅನ್ನ್ನು ದೊಡ್ಡ ಎಂಜಿನ್ ಗೆ ಅಳವಡಿಸಿದೆ, ಆಟೋ ಗೇರ್ ಬಾಕ್ಸ್ ಹೆಚ್ಚಿನ ಪವರ್ ಅನ್ನು ತೆಗೆದುಕೊಳ್ಳುತ್ತದೆ ಎಂಬ ವಿಚಾರವನ್ನು ಪರಿಗಣಿಸಿದಾಗ ಇದು ಒಂದು ಉತ್ತಮ ಕ್ರಮ. ನೀವು D  ಮಾರ್ಕ್ ಅನ್ನು ಆಯ್ದುಕೊಂಡಾಗ ಇದು ಗಾಳಿಯಂತೆ ವೇಗಗತಿಯನ್ನು ಪಡೆಯುವ ಅನುಭವವಾಗುತ್ತದೆ.  ಎಂಜಿನ್ ಶಬ್ದ ಹೆಚ್ಚಬಹುದು, ಅದರಲ್ಲೂ ಗೇರ್ ಸೆಲೆಕ್ಷನ್ ಕೆಳಗಿನ ಗೇರ್ ಗಳಿಗೆ ತಂದಾಗ. ಒಮ್ಮೆ ವೇಗಗತಿ ಪಡೆದುಕೊಂಡರೆ ನಿಶಬ್ದವಾಗಿ ಚಲಿಸುತ್ತಿರುವಂತೆ ಅನುಭವಾಗುತ್ತದ, ಆದರೆ ಡ್ರೈವ್ ಮಾಡಲು ಅಷ್ಟೇನು ಸೂಕ್ತವಲ್ಲ. D  ಆಯ್ಕೆ ಮಾಡಿ ಬಿಟ್ಟುಬಿಡಿ, ಆಗ ಅದರ ಕಾರ್ಯದಕ್ಷತೆ ನೋಡಿ. ಎರೆದುವು ಎಂಜಿನ್ ಗಳು ಶಾಪತಿಯುತವಾಗಿದೆ ಎಂದೆನಿಸುತ್ತದೆ, ಅದೇ ಸಮಯದಲ್ಲಿ ಹೆಚ್ಚು ಫ್ರುಗಲ್ ಕೂಡ ( ಮಾನ್ಯುಯಲ್ ನಲ್ಲಿ )ಹಿಂದಿನ ಇನ್ನೋವಾಗಿಂತ. ಮತ್ತು ಇದು ಇನ್ನೋವಾ ಕ್ರಿಸ್ಟಾ ವನ್ನು ವಿಭಿನ್ನವಾದ ಶ್ರೇಣಿಗೆ ಕೊಂಡೊಯುತ್ತದೆ ಕೂಡ.

 ರೈಡ್ ಮತ್ತು ಹ್ಯಾಂಡಲಿಂಗ್

Toyota Innova Crysta: First Drive

ಟೊಯೋಟಾ ಈ  ವಿಚಾರದಲ್ಲಿ ಹೆಚ್ಚು ಉದಾಸೀನಮಾಡದೆ ಮಾನೋಕಾಕ್ ಗೆ ಹೋಗುವ ಬದಲು  ಲಾಡರ ಫ್ರೇಮ್ ಅನ್ನೇ ಬಳಸಿದೆ. ಟೊಯೋಟಾ ಸೂಚಿಸುವಂತೆ ಕಠಿಣವಾದ ಲಾಡರ ಫ್ರೇಮ್ ಭಾರತದಲ್ಲಿ ಬಳಸುವುದಕ್ಕೆ ಸೂಕ್ತ ಅದನ್ನು 'ಸರಿಯಾಗಿರುವನ್ನು ಬದಲಿಸುವುದೇಕೆ?' ಎನ್ನಬಹುದು.  ಇನ್ನೋವಾ ಆರು ಅಥವಾ ಏಳು ಜನರನ್ನು ಭಾರತದಾದ್ಯಂತ ಕರೆದೊಯ್ಯಲು ಬಳಸಬಹುದು , ನತ್ತು ಇದನ್ನು ತಯಾರಿಸಿರುವುದು ಅದಕ್ಕಾಗಿಯೇ . ರೈಡ್ ಗುಣಮಟ್ಟ ಹಿಂದಿನದ್ದಕ್ಕಿಂತ ಚೆನ್ನಾಗಿದೆ ಮತ್ತು ಇನ್ನೋವಾ ಕ್ರಿಸ್ಟಾ ರಸ್ತೆಯ ದಿಣ್ಣೆಗಳನ್ನು  ಗಳನ್ನೂ ಹಾಗು ಅಳಗಳನ್ನು ಚೆನ್ನಾಗಿ ನಿಭಾಯಿಸುತ್ತದೆ. ದೊಡ್ಡದಾದ ೧೭-ಇಂಚು ಟೈರ್ಗಳು, ಮತ್ತು ರೀ ಕ್ಯಾಲಿಬ್ರೆಟೆಡ್ ಸಸ್ಪನ್ಷನ್ ಹೆಚ್ಚು ಚಾಕಚಕ್ಯತೆಯಿಂದ ಕೆಲಸ ಮಾಡುತ್ತದೆ.

ನಾವು ಇನ್ನೂ ಪೂರ್ತಿ ಲೋಡ್ ನೊಂದಿಗೆ ಡ್ರೈವ್ ಮಾಡಿಲ್ಲ. ನಮ್ಮ ಊಹೆಗೆ  ತಕ್ಕಂತೆ ಅದೇನು ಅಷ್ಟು ಸಮಸ್ಯೆಯಾಗಿರುವುದಿಲ್ಲ, ಮತ್ತು ಇನ್ನೂ ಉತ್ತಮವಾಗಿಯೇ ಇರುತ್ತದೆ. ಇನ್ನೋವಾ ಕಾರ್ ರೀತಿಯ ಡೈನಾಮಿಕ್ಸ್ ಗೆ ಪರಿಚಿತವಾಗಿದೆ. ಇದಕ್ಕೆ ಡಬಲ್ ವಿಷಬಾಣೆ ಸೆಟ್ ಅಪ್ ಕಾರಣವಾಗಿದೆ. ಇದು ಒಳ್ಳೆ ಗುಣಮಟ್ಟದ ಡ್ರೈವ್ ಮಾಡಲು ಸಹಕಾರಿಯಾಗಿದೆ. ೫೫- ರೇಟಿಂಗ್ ನ ಪ್ರೊಫೈಲ್ ಹೊಂದಿರುವ ಟೈಯರ್ ಗಳು ಸ್ವಲ್ಪ ಹಿನ್ನಡೆ ಕೊಡುತ್ತದೆ. ಕಡಿಮೆ ಪ್ರೊಫೈಲ್ ಹೆಚ್ಚು ಕಠಿಣ ಸೈಡ್ ವಾಲ್ ನ ಅವಶ್ಯಕತೆ ಸೂಚಿಸುತ್ತದೆ. ಹಾಗಾಗಿ ರೈಡ್ ಗುಣಮಟ್ಟವೂ ಸ್ವಲ್ಪ ಮಟ್ಟಿಗೆ ಕುಂದುತ್ತದೆ, ಆದರೆ ಒಟ್ಟಿನಲ್ಲಿ ಉತ್ತಮ ಡೈನಾಮಿಕ್ಸ್ ಪಡೆಯುವುದರಲ್ಲಿ ಯಶಸ್ವಿಯಾಗಿದೆ.

ಅಂತಿಮ ಅನಿಸಿಕೆ.

Toyota Innova Crysta: First Drive

ಹೊಸ ಇನ್ನೋವಾ ವನ್ನು ಬಹಳ ಸಮಯದಿಂದ ನಿರೀಕ್ಷಿಸಲಾಯಿತು , ಇದು ನಿರೀಕ್ಷೆಗೆ ತಕ್ಕಂತೆ ಇದೆ ಕೂಡ. ಕ್ರಿಸ್ಟಾ ಹದ್ದಿನದ್ದಕ್ಕಿಂತ ಚೆನ್ನಾಗಿ ಕಾಣುತ್ತದೆ ಮತ್ತು ಹೆಚ್ಚಿನ ಫೀಚರ್ ಗಳೊಂದಿಗೆ ಬರುತ್ತದೆ ಕೂಡ. ಏಳು ಏರ್ಬ್ಯಾಗ್ ಗಳು, ಎರೆಡು ಹೊಸ ಎಂಜಿನ್ ಗಳು, ಮತ್ತು ನಿರೀಕ್ಷಿಸಿದ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಅನ್ನು ಕ್ರಿಸ್ಟಾ ದಲ್ಲಿ ಕೊಡಲಾಗಿದೆ. ಟೊಯೋಟಾ ಹಿಂಬದಿಯ ಪ್ಯಾಸೆಂಜರ್ ಗಳನ್ನೂ ಮುಂದಿನ ಸೀಟ್ ಗಳಿಗೆ ತರಲು ಪ್ರತ್ನಿಸುತ್ತಿದೆ, ಮತ್ತು  ಇನ್ನೋವಾ ದ ಭಾವಚಿತ್ರ ವನ್ನು ಬದಲಿಸಲು ಪ್ರಯತ್ನಿಸಿದೆ. ಆದರೂ ಇವೆಲ್ಲ ಮುಂದುವರೆದ ವಿಷಯಗಳೊಂದಿಗೆ, ಇನ್ನೋವಾಕ್ರಿಸ್ಟಾ ನಿಮ್ಮ ಕಿಸೆಗೆ ಹೆಚ್ಚು ಭಾರವಾಗಬಹುದು ಕೂಡ.

ಟೊಯೋಟಾ ಮುಖಬೆಲೆ ಯನ್ನು ಕಡಿಮೆ ಗೊಳಿಸಲು ಸಾಕಷ್ಟು ಪ್ರಯತ್ನಿಸಿದೆ ಕೂಡ ( ಕಾನ್ವೆಂಷನಲ್ ಚಾಸ್ಸಿಸ್ ಮತ್ತು ಪಾರ್ಟ್ ಗಳ ಹೊಂದಾಣಿಕೆ , ಫಾರ್ಚುನರ್ ನೊಂದಿಗೆ ಮತ್ತು ಹಿಲುಕ್ಸ್ ನೊಂದಿಗೆ ), ಆದರೂ ಬೆಲೆ ಯಲ್ಲಿ ಸ್ವಲ್ಪ ಹೆಚ್ಚು ಕಾಣಬಹುದು. ನಾವು ಕ್ರಿಸ್ಟಾ ವನ್ನು ರೂ ೨೦ ಲಕ್ಷದಲ್ಲಿ ನಿರೀಕ್ಷಿಸಬಹುದು, ಮತ್ತು ಇದನ್ನು ಆ ಬೆಲೆಯ ಒಂದೇ  ಪ್ರೀಮಿಯಂ MPV ಆಗಿ ಮಾಡುತ್ತದೆ. ಗ್ರಾಹಕರು ಅಷ್ಟು ಕೊಡಲು ತಯಾರಿರುವರೇ? ಹತ್ತಿರದಲ್ಲೇ ಬಿಡುಗಡೆ ನಿರೀಕ್ಷಿಸಬಹುದ್ದರಿಂದ , ಈ ಪ್ರಶ್ನೆಗೆ ಸ್ವಲ್ಪ ಸಮಯದಲ್ಲೆ ಉತ್ತರ ಸಿಗಲಿದೆ.

 

 

ಇತ್ತೀಚಿನ ಎಮ್‌ಯುವಿ ಕಾರುಗಳು

ಮುಂಬರುವ ಕಾರುಗಳು

ಇತ್ತೀಚಿನ ಎಮ್‌ಯುವಿ ಕಾರುಗಳು

×
We need your ನಗರ to customize your experience