• English
  • Login / Register

ವೊಲ್ಕ್ಸ್ ವಾಗನ್ ಪೋಲೊ GT TSI: ಪರಿಣಿತರ ವಿಮರ್ಶೆ

Published On ಮೇ 20, 2019 By ಅಭಿಜೀತ್ for ವೋಕ್ಸ್ವ್ಯಾಗನ್ ಪೋಲೊ 2015-2019

  • 1 View
  • Write a comment

Volkswagen Polo GT TSI: Expert review

ಕಾದು ನೋಡಬೇಕಾದ ವಿಷಯಗಳು

  • ಅದ್ಭುತವಾದ ಎಂಜಿನ್ ಮತ್ತು ಟ್ರಾನ್ಸ್ಮಿಷನ್ ಜೋಡಿ
  • ಮೆಚ್ಚಬಹುದಾದ ಕಾರ್ಯ ದಕ್ಷತೆ ಮತ್ತು ಹ್ಯಾಂಡಲಿಂಗ್
  • ಕಠಿಣ ಮತ್ತು ನೈಜವಾದ ಬಿಲ್ಡ್ ಮತ್ತು ಗುಣಮಟ್ಟ
  •  ಎರೆಡು ಬಾರಿ ಯೋಚಿಸಬೇಕಾದಂತೆ ಮಾಡಬಹುದಾದ ವಿಷಯಗಳು
  • ದುಬಾರಿಯಾಗುವ ಸರ್ವಿಸ್ ಮತ್ತು ಸ್ಪೇರ್ಸ್ ಗಳು.
  • ಹಿಂಬದಿಯ ಕ್ಯಾಬಿನ್ ಜಾಗ

Volkswagen Polo GT TSI: Expert review

ಸೂಕ್ಶ್ಮವಾಗಿ ಗಮನಿಸಿದಾಗ ಇದು ಒಂದು ನಿಖರವಾಗಿ ತಯಾರಾದ ಹ್ಯಾಚ್ ಬ್ಯಾಕ್  ಬಹಳಷ್ಟು ಹೊಗಳಿಕೆಗೆ ಪಾತ್ರವಾಗಿದೆ. ಈ ಚೇತೋಹಾರಿ . ವೊಲ್ಕ್ಸ್ ವಾಗನ್ GT TSI ಚಿಕ್ಕ ನಗರಗಳಲ್ಲಿ ಉಪಯೋಗಿಸಬಹುದಾದ ಮುಂದುವರೆಯಲ್ಪಟ್ಟ 1.2 litre TSI (Turbo Stratified Injection) ಎಂಜಿನ್  7-speed DSG transmission ಗೆ ಜೋಡಿಸಲಾಗಿದೆ. ವೊಲ್ಕ್ಸ್ ವಾಗನ್ ಇಂಡಿಯಾ ಇದನ್ನು ಇನ್ನು ಚೆನ್ನಾಗಿರುವಂತೆ ಮಾಡಿದೆ. ಇದರ ಹಿಂದಿನಂದರಂತೆ ಸಂತೋಷವನ್ನು ಉಂಟು ಮಾಡುವುದರಲ್ಲಿ ಸಂಶಯವಿಲ್ಲ.

 Volkswagen Polo GT TSI: Expert review

ಡಿಸೈನ್

ವಾಹನದ ಮುಂದೆ ಹಾಗು ಹಿಂದೆ ಮಾಡಿರುವ ನವೀಕರಣಗಳು  ಹೆಚ್ಚು ಎನಿಸುವುದಿಲ್ಲ. ಆದರೂ ಅದು ಒಂದು ಉತ್ತಮ ನೋಟವನ್ನು ಕೊಡುತ್ತದೆ. ಹೆಂಡಿನ ಆವೃತ್ತಿ ಮೊದಲೇ ನೋಡಲು ಚೆನ್ನಾಗಿತ್ತು ಮತ್ತು ಮುಂಭಾಗದ ಕ್ರೋಮ್ ಪಟ್ಟಿ ಹೆಚ್ಚು ಚೆನ್ನಾಗಿ ಕಾಣುವಂತೆ ಮಾಡುತ್ತದೆ.

Volkswagen Polo GT TSI: Expert review

ರೇವೂರ್ ವ್ಯೂ ಮಿರರ್ ಈಗ ಮತ್ತಷ್ಟು ಕಪ್ಪು ಬಣ್ಣದಲ್ಲಿ ಬರುತ್ತದೆ, ರೇವೂರ್ ಸ್ಪೋಇಲೆರ್ ಸಹ ಅಳವಡಿಸಲಾಗಿದೆ . ಇದು ಒಂದು ಚಿಕ್ಕ ಬದಲಾವಣೆ ಆಗಿರಬಹುದು , ಆದರೂ ಇದು ಒಂದು GT ಗಾಗಿ ಮಾಡಿದ ಮುಖ್ಯ ಬದಲಾವಣೆ ಎನಿಸುತ್ತದೆ. . ಮುಂಭಾಗದ ಗ್ರಿಲ್ ಮತ್ತು ಟೈಲ್ ಗೇಟ್ ಮೇಲೆ GT ಬಾಡ್ಗೆ ಇದ್ದು  GT  TSI ಡೆಕಲ್ಸ್ ಸಹ ಹಿಂದಿನ ಅನಿಲ್ ಮೇಲೆ ಇದೆ.

Volkswagen Polo GT TSI: Expert review

ಹಿಂದಿನ ಬಾಗ ಸಾಧಾರಣ ಮತ್ತು ಸರಳವಾಗಿದ್ದು ಬಂಪರ್ ನ ಕೆಳಬಾಗದಲ್ಲಿ ಕೆಂಪು ರೆಫ್ಲೆಕ್ಟರ್ ಗಳು ಇದೆ. ಪೋಲೊ ದ ಡಿಸೈನ್ ಇನ್ನೂ ಹೊಸತಾಗಿ ಕಾಣಿಸುತ್ತದೆ ಈ ವಿಭಾಗದಲ್ಲಿ. ಇದರಲ್ಲಿ ಇನ್ನೂ ಸ್ವಲ್ಪ ಹೆಚ್ಚು ಸ್ಟೈಲಿಂಗ್ ಫೀಚರ್ ಗಳು ಇದ್ದಿದ್ದರೆ ಇನ್ನೂ ಚೆನ್ನಾಗಿರುತಿತ್ತು. ಇದು ಸಾಮಾನ್ಯ ಪೋಲೊ ಗಳಂತೆ ಬಹಳಷ್ಟು ಚೆನ್ನಾಗಿದೆ. ಇದರ ಅರ್ಥ ಸ್ಟೈಲಿಂಗ್ ನಲ್ಲಿ  ಸಮಸ್ಯೆ ಇದೆ ಅಂತಲ್ಲ. ಆದರೂ ಉತ್ಸುಕತೆಯಿಂದ ಹೆಚ್ಚು ಖರ್ಚು ಮಾಡಿದಾಗ GT  ಯಲ್ಲಿ ಇನ್ನೂ ಹೆಚ್ಚು ವೈಶಿಷ್ಟ್ಯತೆ ಇದ್ದಿದ್ದರೆ ಚೆನ್ನಾಗಿರುತಿತ್ತು ಎನಿಸುತ್ತದೆ.

Volkswagen Polo GT TSI: Expert review

ಆಂತರಿಕಗಳು

ಚಂದದ ಹಾಗು ಸರಳವಾಗಿರುವ ಮತ್ತು ಚಾಕಚಕ್ಯವಾಗಿರುವ ಆಂತರಿಕಗಳು ಎಂದು GT TSI ನ್ ಕ್ಯಾಬಿನ್ ಅನ್ನು ವಿವರಿಸಬಹುದು. ಎಲ್ಲವನ್ನು ಸರಳವಾಗಿ ಉಪಯೋಗಿಸಬಹುದು  ಹಾಗು ಅಳವಡಿಕೆಯು ಸಹ ಸರಿಯಾಗಿದೆ.  ಡ್ಯಾಶ್ ಬೋರ್ಡ್ ನಲ್ಲಿ ಪ್ಲೈನ್ ಬ್ಲಾಕ್ ಬಣ್ಣವನ್ನು ಹೆಚ್ಚಗೆ ಉಪಯೋಗಿಸಲಾಗಿದೆ ಹಾಗು ಸ್ಟಿಯರಿಂಗ್ ವೀಲ್ ನ ಕೆಳಬಾಗ ಚಪ್ಪಟೆಯಾಗಿದ್ದು ಚೆನ್ನಾಗಿದೆ.

 Volkswagen Polo GT TSI: Expert review

ಗುಣಮಟ್ಟ ಹಾಗು ಫಿಟ್ ಅಂಡ್ ಫಿನಿಷ್ ಗಳು ಪ್ರೀಮಿಯಂ ಸಲೂನ್  ಕಾರುಗಳನ್ನು ಮೀರಿಸುವಂತಿದೆ. ಉತ್ತಮ ಗುಣಮಟ್ಟದ ಲೆಥರ್ ಫಿನಿಷ್ ಸ್ಟಿಯರಿಂಗ್ ಮೇಲೆ, ಗೇರ್ ಕ್ನೋಬ್ ಮೇಲೆ, ಮತ್ತು ಹ್ಯಾಂಡ್ ಬ್ರೇಕ್  ಮೇಲೆ ಇದ್ದು ಉಪಯೋಗಿಸಲು ಅದ್ಭುತವಾಗಿದೆ. ಬಹಳಷ್ಟು ಫೀಚರ್ ಗಳು ಇವೆ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ೪ ಸ್ಪೀಕರ್ ಆಡಿಯೋ ಸಿಸ್ಟಮ್ ,  USB /AUX /SD ಕಾರ್ಡ್ /ಬ್ಲೂಟೂತ್ ಟೆಲೆಫೋನ್ಯ್ ಮತ್ತು ಮಲ್ಟಿ ಫುನ್ಕ್ಷನ್ ಡ್ರೈವರ್ ಡಿಸ್ಪ್ಲೇ .

Volkswagen Polo GT TSI: Expert review

ಇದರಲ್ಲಿ ಮಿಸ್ ಆಗಿರುವ ವಿಷಯವೆಂದರೆ ಡ್ರೈವರ್ ಗೆ ಬೇಕಾಗಿರುವ ಹ್ಯಾಂಡ್ ರೆಸ್ಟ್ . ಇದು ಇದ್ದಿದ್ದರೆ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಇರುವುದರಿಂದ ಡ್ರೈವರ್ ನ ಎಡಗೈ ಗೆ ಒಂದು ಸಪೋರ್ಟ್ ಇರುತಿತ್ತು.  ಅಲ್ಯೂಮಿನಿಯಂ ಪೆಡಲ್ ಕ್ಲಸ್ಟರ್ ನೋಡಲು ಮತ್ತು ಉಪಯೋಗಿಸಲು ಚೆನ್ನಾಗಿದ್ದು ಈ ಕಾರಿನ ಸ್ಪರ್ಧಾತ್ಮಕ ಭಾವನೆಗೆ ಪೂರಕವಾಗಿದೆ.  ಎತ್ತರ ಸರಿಪಡಿಸಬಹುದಾದ ಡ್ರೈವರ್ ಸೀಟ್ ಮತ್ತು ರಾಕ್ ಮತ್ತು ರೀಚ್ ಸರಿಪಡಿಯಬಹುದಾದ ಸ್ಟಿಯರಿಂಗ್ ವೀಲ್ ಡ್ರೈವರ್ ಗೆ ಒಂದು ಸಮಾಧಾನಕರ ಭಂಗಿಗೆ ಬರಲು ಸಹಾಯಕವಾಗಿದೆ. ಆದರೂ ಸರಿಯಾದ  ಭಂಗಿಗೆ ಬರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಕೂಡ.

 Volkswagen Polo GT TSI: Expert review

ಎಲ್ಲವೂ ಚೆನ್ನಾಗಿರುವುದರೊಂದಿಗೇ ಒಂದು ಚಿಂತಿಸಬೇಕಾದ ವಿಷಯ ವೆಂದರೆ ಹಿಂದಿನ ಕ್ಯಾಬಿನ್ ಸ್ಪೇಸ್ ಕಡಿಮೆ ಇದ್ದು , ಇದೇ ಬೆಳೆಯ ಇತರ ಕಾರುಗಳಿಗೆ ಹೋಲಿಸಿದರೆ ಚಿಕ್ಕದು ಎನಿಸಬಹುದು. ಇಬ್ಬರು ಪ್ಯಾಸೆಂಜರ್ ಗಳು ಹಿಂಬದಿಯ ಸೀಟ್ ನಲ್ಲಿ ಕುಳಿತುಕೊಳ್ಳಬಹುದಾದರೂ, ಅವರು ಲೆಗ್ ಸ್ಪೇಸ್ ಬಗ್ಗೆ ವಿಷಾದ ವ್ಯಕ್ತ ಪಡಿಸಬಹುದು.. ಆದರೂ ಇದು ಹಿಬದಿಯ ಸ್ಟೋರೇಜ್ ಸ್ಪೇಸ್ ಜಾಸ್ತಿ ಮಾಡಲು ಅನುಕೂಲ ಮಾಡಿ ಕೊಟ್ಟಿದೆ. ಎಂದು ಹೇಳಬಹುದು.

Volkswagen Polo GT TSI: Expert review

ಎಂಜಿನ್ ಮತ್ತು ಕಾರ್ಯದಕ್ಷತೆ

ನಾವು ಈಗ ಈ ಕಾರಿನ ಮುಖ್ಯ ವಿಷ್ಯಕ್ಕೆ ಬರೋಣ. ಇದರ ಹೃದಯವನ್ನು ಹಿಂದಿನ ಮಾಡೆಲ್ ನಿಂದ ಮುಂದುವರೆಸಲಾಗಿದ್ದು ಫೇಸ್ ಲಿಫ್ಟ್ ನಲ್ಲಿ ಬದಲಿಸಲಾಗಿಲ್ಲ. ಇದರಲ್ಲಿ ಅದೇ 1,197cc 4-ಸಿಲಿಂಡರ್  TSI  ಇಂಜಿನ್ ಇದ್ದು , ಅದು ಗರಿಷ್ಟ  103.5bhp  ಪವರ್ ಅನ್ನು 5,000rpm ನಲ್ಲಿ ಕೊಡುತ್ತದೆ. ಗರಿಷ್ಟ ಟಾರ್ಕ್ ಆದ 175Nm 1,500rpm

Volkswagen Polo GT TSI: Expert review

ನಿಂದ ಪ್ರಾರಂಭಿಸಿ 4,100rpm ಹಂತದಲ್ಲಿ ಕೊಡುತ್ತದೆ.

ಟಾರ್ಕ್  ಅಂಕ ಗಳನ್ನೂ ಹೋಲಿಸುವುದಾದರೆ 1.8 litre ಟೊಯೋಟಾ ಕಾರೊಲ್ಲ 173Nm ಗರಿಷ್ಟ ಟಾರ್ಕ್ ಅನ್ನು ಕೊಡುತ್ತದೆ. ಇದರೊಂದಿಗೆ ಈ ಎಂಜಿನ್ ಅನ್ನು 7-speed DSG (Direkt Schalt Getriebe/Direct Shift Gearbox)  ಏಳು ಗೇರ್ ಗಳು ಹಾಗು ಎರೆಡು ಕ್ಲಚ್ ಇರುವುದರೊಂದಿಗೆ ಅಳವಡಿಸಲಾಗಿದೆ.

 Volkswagen Polo GT TSI: Expert review

ಈ ವೇಗವಾಗಿ ಬದಲಿಸಬಹುದಾದ  ಟ್ರಾನ್ಸ್ಮಿಷನ್ ಪೋಲೊ GT TSI  ಅನ್ನು ಐಡಲಿಂಗ್ ನಿಂದ 100kmph ಗೆ ಕೇವಲ  10 ಸೆಕೆಂಡ್ ಗಳಲ್ಲಿ ನೆಗೆಯುವಂತೆ ಮಾಡುತ್ತದೆ. ನಮ್ಮ ಟೆಸ್ಟ್ ಡ್ರೈವ್ ನಲ್ಲಿ ಸ್ಪೀಡೋಮೀಟರ್ 190kmph  ನೋಡಿಸುತ್ತಿತ್ತು. ಗೇರ್ ಶಿಫ್ಟ್ ಅದ್ಭುತವಾಗಿದೆ ಮತ್ತು DSG  ಗಿಂತ ವೇಗವಾಗಿ ಗೇರ್ ಬದಲಾಯಿಸಲು ಸಾಧ್ಯವಿಲ್ಲ ಎಂದು ನಮ್ಮ ಅನಿಸಿಕೆ. ‘S’  ಮೋಡ್ ನಲ್ಲಿ ಗೇರ್ ಬಾಕ್ಸ್ ಅನ್ನು ಹೋಲ್ಡ್ ಮಾಡುತ್ತದೆ ಕೂಡ.

Volkswagen Polo GT TSI: Expert review

ನಿಮಗೆ ಇಷ್ಟವಾದಲ್ಲಿ ಟ್ರಾನ್ಸ್ಮಿಷನ್ ನಿಮಗೆ ಗೇರ್ ಸೆಲೆಕ್ಷನ್ ಅನ್ನು tiptronic ಗೇರ್ ಮುಕಾಂತರ ಮಾಡಲು ಅನುಕೂಲ ಮಾಡಿಕೊಡುತ್ತದೆ. ನಮಗೆ ಮೈಲೇಜ್ ಅಂಕಿ ಅಂಶಗಳು 14kmpl ವರೆಗೂ ಬಂದಿತು, ಇದು ಹೈ ವೆ ಗಳಲ್ಲಿ. ನಗರಗಳ್ಳಲ್ಲಿನ ಬಂಪರ್ ನಿಂದ ಬಂಪರ್ ವರೆಗಿನ ಟ್ರಾಫಿಕ್ ನಲ್ಲಿ 11.3kmpl ವರೆಗೂ ಲಭಿಸಿತು.  ಕೆಲವೊಮ್ಮೆ ಹೈ ವೆ ಯಲ್ಲಿನ ಅತೀ ವೇಗದ ಡ್ರೈವ್ ಗಳಲ್ಲಿ ಮೈಲೇಜ್  7-8kmpl ವರೆಗೂ ಬಂದಿತು. ಇದು 1.2 litre ನಿಂದ ಓಡುತ್ತಿರುವ ಪೋಲೊ ಅಂಬುದು ಗಮನಿಸತಕ್ಕದ್ದು . ಹಾಗು ಇದು ಹೆಚ್ಚು ಪರಿಶ್ರಮ ಪಡಬೇಕೆನ್ನುವುದೂ ಸಹ ಪರಿಗಣಿಸಬೇಕಾದ ವಿಷಯವಾಗಿದೆ. ಇಂಜಿನ್ ಸ್ವಲ್ಪ ನಿಶ್ಯಕ್ತಿ ಹೊಂದಿದೆ ಎಂದು ಹೇಳಬಹುದು. ಕೊಣೀ ಘಟ್ಟದ ವೇಗದಲ್ಲಿ, ಮತ್ತು ಇದು ಹೆಚ್ಚು ಜನರ ಗಮನಕ್ಕೆ ಬರುವುದಿಲ್ಲ ಕೂಡ.

Volkswagen Polo GT TSI: Expert review

ರೈಡ್ ಮತ್ತು ಹ್ಯಾಂಡಲಿಂಗ್

ಮತ್ತೊಮ್ಮೆ ಹೇಳುವುದಾದರೆ, ಪೋಲೊ GT TSI  ನ ಡ್ರೈವ್ ಮಾಡುವ ಮಜಾ ಸಣ್ಣ ತಿರುವುಗಳಲ್ಲಿ ಮತ್ತು ಹಳೆಯದಾದ ಟಾರ್ ರೋಡುಗಳಲ್ಲಿ ತಿಳಿಯುತ್ತದೆ. ಇದರ ಚಾಸ್ಸಿಸ್ ಅನ್ನು ನಿಖರವಾದ ಹ್ಯಾಂಡಲಿಂಗ್ ಗಾಗಿ ಡಿಸೈನ್ ಮಾಡಲಾಗಿದೆ. ನಿಮಗೆ ಇದನ್ನು ತಿರುವುಗಳಲ್ಲಿ ಓಡಿಸುವ ಅನುಭವ ಆಶ್ಚರ್ಯಕರವಾಗಿರುತ್ತದೆ. ಸ್ಟಿಯರಿಂಗ್ ವೀಲ್ ಚೆನ್ನಾಗಿದ್ದು  ತಿರುವುಗಳಲ್ಲಿ ಒಂದು ಹಿತಕರವಾದ ಅನುಭವವನ್ನು ಕೊಡುತ್ತದೆ.

Volkswagen Polo GT TSI: Expert review

ನಮಗೆ ಆಶ್ಚರ್ಯವಾಗುವಂತೆ ಟೈರ್ ಗಳು ಚೆನ್ನಾಗಿ ಕಾರ್ಯ ನಿರ್ವಹಿಸಿದವು. ಉತ್ತಮವಾದ ಬ್ರೇಕಿಂಗ್ ಹಾಗು ಅದ್ಭುತವಾದ ಟೈರ್ ಗ್ರಿಪ್ ನಿಮಗೆ ಕಾರ್ ಅನ್ನು ಎಲ್ಲಿ ಬೇಕೋ ಅಲ್ಲಿ ಹೇಗೆ ಬೇಕೋ ಹಾಗೆ ನಿಲ್ಲಿಸಲು ಸಾಧ್ಯವಾಗುವಂತೆ ಮಾಡುತ್ತದೆ. ಮತ್ತು ನಿಮ್ಮ ಸಮಯವನ್ನು ಹೆಚ್ಚಿನ ದೂರ ಕ್ರಮಿಸುವುದಕ್ಕೆ ಸಹಾಯ ಮಾಡುತ್ತದೆ. ವೊಲ್ಕ್ಸ್ ವಾಗನ್ ಗಾಡಿಯು ಸ್ಪರ್ಧಾತ್ಮಕವಲ್ಲದೆ ಒಂದು ವೈಶಷ್ಟ್ಯತೆಯನ್ನು ಹೊಂದಿದೆ ಕೂಡ.

Volkswagen Polo GT TSI: Expert review

ಎಲ್ಲಾ ರಸ್ತೆಗಳಲ್ಲಿ GT TSI  ಒಂದು ಆಣುಲುಉಳಕರ ಹಾಗು ಸಮಾಧಾನಕರ ಕಾರ್ ಆಗಿದ್ದು, ಶಾಂತಿಯಿಂದ ಮನೆ ತಲುಪುವಂತೆ ಮಾಡುತ್ತದೆ. ಇದರ ಸೌಂಡ್ ಇನ್ಸುಲೇಷನ್ ತುಂಬಾ ಚೆನ್ನಾಗಿದ್ದು ನಿಮಗೆ ಹೊರಗಡೆಯ ಶಬ್ದ ಮಾಲಿನ್ಯ ಅಷ್ಟಾಗಿ ಬರುವುದಿಲ್ಲ. ಹಾಗು ನಿಮಗೆ ಇಂಜಿನ್ ನ ಹಿತಕರ ಶಬ್ದ ಒಳ್ಳೆ ಅನುಭವ ಕೊಡುತ್ತದೆ. ABS  ಮತ್ತು EBD  ಗಳು GT TSI ನಲ್ಲಿ  ಸ್ಟ್ಯಾಂಡರ್ಡ್ ಫೈಟ್ಮೆಂಟ್ ಆಗಿ ಬರುತ್ತದೆ ಮತ್ತು ಡ್ರೈವರ್ ಮತ್ತು ಕೋ ಪ್ಯಾಸೆಂಜರ್ ಏರ್ಬ್ಯಾಗ್ ಸಹ ಇದೆ. ಇನ್ನೊಂದು ಈ ವರ್ಗದಲ್ಲೆ ಉತ್ತಮ ಫೀಚರ್ ಎಂದರೆ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ ಅನ್ನು GT TSI ನಲ್ಲಿ ಸ್ಟ್ಯಾಂಡರ್ಡ್ ಆಗಿ ಅಳವಡಿಸಿರುವುದು.

 Volkswagen Polo GT TSI: Expert review

ಅಂತಿಮ ಅನಿಸಿಕೆ.

ಒಂದು ಚಿಕ್ಕ ಟೆಸ್ಟ್ ಡ್ರೈವ್ ನಲ್ಲಿ GT TSI  ನಿಮ್ಮ ಹೃದಯವನ್ನು ಗೆಲ್ಲುತ್ತದೆ. ಇದು ವರ್ಗದಲ್ಲೆ ಉತ್ತಮ ಕಾರ್ಯದಕ್ಷತೆ ತೋರಿಸುತ್ತದೆ ಮತ್ತು ಟೆಕ್ನಾಲಜಿ ಇತರ ಸ್ಪರ್ಧಾತ್ಮಕ ಕಾರುಗಳಿಗಿಂತ ಬಹಳಷ್ಟು ಮುಂದುವರೆದಿದೆ. ಇದು ಡ್ರೈವ್ ಮಾಡಲು ಚೇತೋಹಾರಿಯಾಗಿರುವ ಅನುಭವ ಕೊಡುವ ಕಾರ್ ಆಗಿದೆ. ಇದು ಶಾಂತಿಯುತವಾಗಿರಲು ಅನುಕೂಲವಾಗಿರುವ ಕಾರ್ ಆಗಿದ್ದು ಪೆಟ್ರೋಲ್ ಭಾರ್ತಿ ಮಾಡಿಸಲು ಹೋದಾಗ ಕೂಡ ಹಿತವಾಗಿರುತ್ತದೆ. ನಮ್ಮ ಮಟ್ಟಿಗೆ ಗ್ರಾಹಕರು ಬೆಲೆಯ ಪಟ್ಟಿಗೆ ಅಷ್ಟೇನು ಚಿಂತಿಸಬೇಕಾಗಿಲ್ಲ ಎನಿಸುತ್ತದೆ. ಆದರೂ ವೊಲ್ಕ್ಸ್ ವಾಗನ್ ನ ಸರ್ವಿಸ್ ಹಾಗು ಮೈಂಟೈನಾನ್ಸ್ನ ಬಗ್ಗೆ ಹೆಚ್ಚು ಆಲೋಚಿಸಬೇಕಾಗಬಹುದು ಎನಿಸುತ್ತದೆ.

Volkswagen Polo GT TSI: Expert review

ಸ್ಪೆರ್ಸ ಗಳು ಹೆಚ್ಚು ಹಣ ವ್ಯಯ ಮಾಡಿಸುತ್ತವೆ ಮತ್ತು ಸರ್ವಿಸ್ ಕ್ವಾಲಿಟಿ ಅಷ್ಟೇನು ಒಳ್ಳೆ ಅನುಭವ ಕೊಡುವುದಿಲ್ಲ. ಇಂತಹ ಒಂದು ಉತ್ತಮ ಕಾರ್ ಗೆ ಆಫ್ಟರ್ ಸೇಲ್ ಸರ್ವಿಸ್ ಚೆನ್ನಾಗಿಲ್ಲದಿರುವುದು ಒಂದು ಚಿಂತೆಗೀಡು ಮಾಡುವ ವಿಷಯವಾಗಿದೆ. ವೊಲ್ಕ್ಸ್ ವಾಗನ್ ಒಂದು ಉತ್ತಮ ಎಂಜಿನ್ ಹಾಗು ಟ್ರಾನ್ಸ್ಮಿಷನ್ ಟೆಕ್ನಾಲಜಿ ಇರುವ ಕಾರನ್ನು ಹೊರತರಬಹುದಾದರೆ ಸರ್ವಿಸ್ ಸಪೋರ್ಟ್ ಅನ್ನು ಉತ್ತಮ ಗೊಳಿಸುವುದರಲ್ಲಿ ಸಂದೇಹವಿಲ್ಲ.ಎನಿಸುತ್ತದೆ. ಆ ಕಾರಿನ ಬಗ್ಗೆ ಹೇಳುವುದಾದರೆ ಇದು ದೇಶದ ಅತಿ ಉತ್ತಮ ಕಾರುಗಳಲ್ಲಿ ಒಂದಾಗಿ ನಿಲುವು ಹೊಂದಿದೆ.

Volkswagen Polo GT TSI: Expert review 

Published by
ಅಭಿಜೀತ್

ಇತ್ತೀಚಿನ ಹ್ಯಾಚ್ಬ್ಯಾಕ್ ಕಾರುಗಳು

ಮುಂಬರುವ ಕಾರುಗಳು

ಇತ್ತೀಚಿನ ಹ್ಯಾಚ್ಬ್ಯಾಕ್ ಕಾರುಗಳು

×
We need your ನಗರ to customize your experience