• English
    • Login / Register

    2025ರ ಏಪ್ರಿಲ್‌ನಲ್ಲಿ Maruti Arena ಮೊಡೆಲ್‌ಗಳ ಮೇಲೆ 67,100 ರೂ. ವರೆಗೆ ಭರ್ಜರಿ ಡಿಸ್ಕೌಂಟ್‌

    ಏಪ್ರಿಲ್ 07, 2025 04:43 pm ರಂದು kartik ಮೂಲಕ ಪ್ರಕಟಿಸಲಾಗಿದೆ

    6 Views
    • ಕಾಮೆಂಟ್‌ ಅನ್ನು ಬರೆಯಿರಿ

    ಹಿಂದಿನ ತಿಂಗಳುಗಳಂತೆಯೇ, ಕಾರು ತಯಾರಕರು ಎರ್ಟಿಗಾ, ಹೊಸ ಡಿಜೈರ್ ಮತ್ತು ಕೆಲವು ಮೊಡೆಲ್‌ಗಳ ಸಿಎನ್‌ಜಿ-ಚಾಲಿತ ವೇರಿಯೆಂಟ್‌ಗಳಿಗೆ ರಿಯಾಯಿತಿಗಳನ್ನು ನೀಡುತ್ತಿಲ್ಲ

    You Can Save Up To Rs 67,100 On Maruti Arena Models In April 2025

    • ಮಾರುತಿ ಆಲ್ಟೊ ಕೆ10, ಸೆಲೆರಿಯೊ ಮತ್ತು ವ್ಯಾಗನ್ ಆರ್ ಕಾರುಗಳು ಗರಿಷ್ಠ 67,100 ರೂ.ಗಳವರೆಗಿನ ಡಿಸ್ಕೌಂಟ್‌ಗಳನ್ನು ಹೊಂದಿವೆ.

    • ಎಸ್-ಪ್ರೆಸ್ಸೊ ಒಟ್ಟು 62,100 ರೂ.ಗಳ ಡಿಸ್ಕೌಂಟ್‌ಗಳನ್ನು ಪಡೆಯುತ್ತದೆ.

    • ಗ್ರಾಹಕರು ಸ್ಕ್ರ್ಯಾಪೇಜ್ ಪ್ರಯೋಜನ ಅಥವಾ ಎಕ್ಸ್‌ಚೇಂಜ್‌ ಬೋನಸ್ ಪಡೆಯಬಹುದು. ಈ ಪ್ರಯೋಜನಗಳನ್ನು ಒಟ್ಟಿಗೆ ಪಡೆಯಲು ಸಾಧ್ಯವಿಲ್ಲ.

    • ಎಲ್ಲಾ ಆಫರ್‌ಗಳು ಏಪ್ರಿಲ್ 30, 2025 ರವರೆಗೆ ಅನ್ವಯವಾಗುತ್ತವೆ.

    ಮಾರುತಿ ಕಂಪನಿಯು ತನ್ನ ಅರೆನಾ ಮಾದರಿಗಳ ಮೊಡೆಲ್‌ಗಳ ಮೇಲಿನ ಡಿಸ್ಕೌಂಟ್‌ಗಳನ್ನು ಮತ್ತು ಆಫರ್‌ಗಳನ್ನು ಏಪ್ರಿಲ್ 2025 ಕ್ಕೆ ಬಿಡುಗಡೆ ಮಾಡಿದೆ. ಈ ಡಿಸ್ಕೌಂಟ್‌ನಲ್ಲಿ ಕ್ಯಾಶ್‌ ಡಿಸ್ಕೌಂಟ್‌, ಕಾರ್ಪೊರೇಟ್ ಬೋನಸ್, ವಿಶೇಷ ಬೆಲೆಗಳಲ್ಲಿ ಆಕ್ಸಸ್ಸರಿ ಕಿಟ್‌ಗಳು ಮತ್ತು ಸ್ಕ್ರ್ಯಾಪೇಜ್ ಅಥವಾ ಎಕ್ಸ್‌ಚೇಂಜ್‌ ಬೋನಸ್ ಸೇರಿವೆ. ಹಿಂದಿನ ತಿಂಗಳುಗಳಂತೆ, ಕಾರು ತಯಾರಕರು ಎರ್ಟಿಗಾ, ಹೊಸ ಡಿಜೈರ್ ಮತ್ತು ಬ್ರೆಝಾದ ಸಿಎನ್‌ಜಿ ವೇರಿಯೆಂಟ್‌ಗಳ ಮೇಲೆ ಯಾವುದೇ ಡಿಸ್ಕೌಂಟ್‌ಗಳನ್ನು ನೀಡುತ್ತಿಲ್ಲ. 2025ರ ಏಪ್ರಿಲ್‌ನಲ್ಲಿ ಅರೆನಾ ಮೊಡೆಲ್‌ಗಳಿಗೆ ಲಭ್ಯವಿರುವ ಎಲ್ಲಾ ಪ್ರಯೋಜನಗಳ ವಿವರವಾದ ನೋಟ ಇಲ್ಲಿದೆ.

    ಆಲ್ಟೋ ಕೆ10 

    Alto K10

    ಆಫರ್‌ಗಳು

    ಮಾರುತಿ ಆಲ್ಟೊ ಕೆ10 

    ಕ್ಯಾಶ್‌ ಡಿಸ್ಕೌಂಟ್‌

    40,000 ರೂ.ವರೆಗೆ

    ಸ್ಕ್ರ್ಯಾಪೇಜ್ ಬೋನಸ್‌

    25,000 ರೂ.ವರೆಗೆ

    ಕಾರ್ಪೋರೇಟ್‌ ಡಿಸ್ಕೌಂಟ್‌

    2,100 ರೂ.ವರೆಗೆ

    ಒಟ್ಟು ಡಿಸ್ಕೌಂಟ್‌ಗಳು

    67,100 ರೂ.ವರೆಗೆ

    • ಮೇಲೆ ತಿಳಿಸಿದ ಆಫರ್‌ಗಳು VXI ಪ್ಲಸ್ AMT ವೇರಿಯೆಂಟ್‌ಗಳಿಗೆ ಮಾತ್ರ ಅನ್ವಯಿಸುತ್ತವೆ.

    • VXI (O) ಎಎಮ್‌ಟಿ ವೇರಿಯೆಂಟ್‌ ಯಾವುದೇ ಪ್ರಯೋಜನಗಳನ್ನು ಪಡೆಯುವುದಿಲ್ಲ.

    • ಆಲ್ಟೊ ಕೆ10 ನ ಮ್ಯಾನುವಲ್ ಮತ್ತು ಸಿಎನ್‌ಜಿ ವೇರಿಯೆಂಟ್‌ಗಳು ಕಡಿಮೆ ಕ್ಯಾಶ್‌ ಡಿಸ್ಕೌಂಟ್‌ಗಳನ್ನು ಹೊಂದಿದೆ, ಒಟ್ಟು 62,100 ರೂ.ಗಳ ರಿಯಾಯಿತಿಯನ್ನು ನೀಡುತ್ತವೆ.

    • ಗ್ರಾಹಕರು 25,000 ರೂ.ಗಳ ಸ್ಕ್ರ್ಯಾಪೇಜ್ ಬೋನಸ್ ಅಥವಾ 15,000 ರೂ.ಗಳವರೆಗಿನ ಎಕ್ಸ್‌ಚೇಂಜ್‌ ಬೊನಸ್‌ಅನ್ನು ಪಡೆಯುತ್ತಾರೆ.

    • ಆಲ್ಟೊ ಕೆ 10 ಕಾರಿನ ಬೆಲೆ 4.23 ಲಕ್ಷ ರೂ.ಗಳಿಂದ 6.20 ಲಕ್ಷ ರೂ.ಗಳವರೆಗೆ ಇದೆ.

    S-ಪ್ರೆಸ್ಸೊ

    Maruti S-Presso

    ಆಫರ್‌ಗಳು

    ಮಾರುತಿ ಎಸ್‌-ಪ್ರೆಸ್ಸೊ

    ಕ್ಯಾಶ್‌ ಡಿಸ್ಕೌಂಟ್‌

      35,000 ರೂ.ವರೆಗೆ

    ಸ್ಕ್ರ್ಯಾಪೇಜ್ ಬೋನಸ್‌

    25,000 ರೂ.ವರೆಗೆ

    ಕಾರ್ಪೋರೇಟ್‌ ಡಿಸ್ಕೌಂಟ್‌

      2,100 ರೂ.ವರೆಗೆ

    ಒಟ್ಟು ಡಿಸ್ಕೌಂಟ್‌ಗಳು

    62,100 ರೂ.ವರೆಗೆ

    • ಎಸ್-ಪ್ರೆಸ್ಸೊದ ಎಎಮ್‌ಟಿ ವೇರಿಯೆಂಟ್‌ಗಳು ಮೇಲೆ ತಿಳಿಸಿದ ರಿಯಾಯಿತಿಗಳೊಂದಿಗೆ ಬರುತ್ತವೆ.

    • ಆಲ್ಟೊ ಕೆ10 ನಂತೆಯೇ, ಮ್ಯಾನುವಲ್ ಮತ್ತು ಸಿಎನ್‌ಜಿ ವೇರಿಯೆಂಟ್‌ಗಳನ್ನು ಕಡಿಮೆ ಕ್ಯಾಶ್‌ ಡಿಸ್ಕೌಂಟ್‌ನೊಂದಿಗೆ ನೀಡಲಾಗುತ್ತದೆ, ಇದರ ಪರಿಣಾಮವಾಗಿ ಒಟ್ಟು ರೂ. 57,100 ವರೆಗೆ ರಿಯಾಯಿತಿ ಸಿಗುತ್ತದೆ.

    • ಕಾರ್ಪೊರೇಟ್‌ ಡಿಸ್ಕೌಂಟ್‌ ಮತ್ತು ಸ್ಕ್ರ್ಯಾಪೇಜ್ ಬೋನಸ್‌ಗಳಂತಹ ಇತರ ಪ್ರಯೋಜನಗಳು ಎಲ್ಲಾ ವೇರಿಯೆಂಟ್‌ಗಳಲ್ಲಿ ಒಂದೇ ಆಗಿರುತ್ತವೆ.

    • ಎಸ್-ಪ್ರೆಸ್ಸೊ ಕಾರಿನ ಬೆಲೆ 4.26 ಲಕ್ಷ ರೂಪಾಯಿಗಳಿಂದ 6.11 ಲಕ್ಷ ರೂಪಾಯಿಗಳವರೆಗೆ ಇರುತ್ತದೆ.

    ವ್ಯಾಗನ್‌ ಆರ್‌

    Maruti Wagon R

    ಆಫರ್‌ಗಳು

    ಮಾರುತಿ ವ್ಯಾಗನ್‌ ಆರ್‌

    ಕ್ಯಾಶ್‌ ಡಿಸ್ಕೌಂಟ್‌ಗಳು

    40,000 ರೂ.ವರೆಗೆ

    ಸ್ಕ್ರ್ಯಾಪೇಜ್ ಬೋನಸ್‌

    25,000  ರೂ.ವರೆಗೆ

    ಕಾರ್ಪೋರೇಟ್‌ ಡಿಸ್ಕೌಂಟ್‌

    2,100  ರೂ.ವರೆಗೆ

    ಒಟ್ಟು ಡಿಸ್ಕೌಂಟ್‌ಗಳು

      67,100  ರೂ.ವರೆಗೆ

    • ವ್ಯಾಗನ್ ಆರ್ ನ ಎರಡೂ ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುವ ಎಎಮ್‌ಟಿ ವೇರಿಯೆಂಟ್‌ಗಳು ಹೆಚ್ಚಿನ ಪ್ರಯೋಜನಗಳನ್ನು ಆಕರ್ಷಿಸುತ್ತವೆ, ಇವುಗಳನ್ನು ಮೇಲೆ ಉಲ್ಲೇಖಿಸಲಾಗಿದೆ.

    • ಮ್ಯಾನ್ಯುವಲ್‌ ವೇರಿಯೆಂಟ್‌ಗಳು ಮತ್ತು ಸಿಎನ್‌ಜಿ-ಚಾಲಿತ ವ್ಯಾಗನ್ ಆರ್‌ 35,000 ರೂ.ಗಳವರೆಗೆ ಕ್ಯಾಶ್‌ ಡಿಸ್ಕೌಂಟ್‌ಅನ್ನು ಹೊಂದಿದೆ.

    • ಇತರ ಡಿಸ್ಕೌಂಟ್‌ಗಳು ಎಲ್ಲಾ ವೇರಿಯೆಂಟ್‌ಗಳಲ್ಲಿ ಒಂದೇ ಆಗಿರುತ್ತದೆ. 

    • ಮಾರುತಿ ವ್ಯಾಗನ್ ಆರ್ ಕಾರಿನ ಬೆಲೆ 5.64 ಲಕ್ಷ ರೂಪಾಯಿಗಳಿಂದ 7.35 ಲಕ್ಷ ರೂಪಾಯಿಗಳವರೆಗೆ ಇದೆ.

    ಸೆಲೆರಿಯೊ

    Maruti Celerio

    ಆಫರ್‌ಗಳು

    ಮಾರುತಿ ಸೆಲೆರಿಯೋ

    ಕ್ಯಾಶ್‌ ಡಿಸ್ಕೌಂಟ್‌ಗಳು

      40,000  ರೂ.ವರೆಗೆ

    ಸ್ಕ್ರ್ಯಾಪೇಜ್ ಬೋನಸ್‌

      25,000  ರೂ.ವರೆಗೆ

    ಕಾರ್ಪೋರೇಟ್‌ ಡಿಸ್ಕೌಂಟ್‌

    2,100  ರೂ.ವರೆಗೆ

    ಒಟ್ಟು ಡಿಸ್ಕೌಂಟ್‌ಗಳು

    67,100  ರೂ.ವರೆಗೆ

    •  ಸೆಲೆರಿಯೊದ ಎಎಮ್‌ಟಿ ವೇರಿಯೆಂಟ್‌ಗಳನ್ನು ಮೇಲೆ ತಿಳಿಸಿದ ರಿಯಾಯಿತಿಗಳೊಂದಿಗೆ ನೀಡಲಾಗುತ್ತದೆ.

    • ಈ ಪಟ್ಟಿಯಲ್ಲಿರುವ ಇತರ ಕಾರುಗಳಂತೆಯೇ, ಸೆಲೆರಿಯೊದ ಮ್ಯಾನ್ಯುವಲ್‌ ಮತ್ತು ಸಿಎನ್‌ಜಿ ವೇರಿಯೆಂಟ್‌ಗಳು ಕಡಿಮೆ ಕ್ಯಾಶ್‌ ಡಿಸ್ಕೌಂಟ್‌ಗಳನ್ನು ನೀಡುತ್ತವೆ, ಆದರೆ ಇತರ ಬೋನಸ್‌ಗಳು ಒಂದೇ ಆಗಿರುತ್ತವೆ.

    • ಮಾರುತಿ ಸೆಲೆರಿಯೊ ಕಾರಿನ ಬೆಲೆ 5.64 ಲಕ್ಷ ರೂಪಾಯಿಗಳಿಂದ 7.37 ಲಕ್ಷ ರೂಪಾಯಿಗಳವರೆಗೆ ಇದೆ.

    ಹೊಸ ಜನರೇಷನ್ ಸ್ವಿಫ್ಟ್

    Maruti Swift

    ಆಫರ್‌ಗಳು

    ಹೊಸ ಜನರೇಷನ್ ಸ್ವಿಫ್ಟ್

    ಕ್ಯಾಶ್‌ ಡಿಸ್ಕೌಂಟ್‌ಗಳು

    25,000  ರೂ.ವರೆಗೆ

    ಸ್ಕ್ರ್ಯಾಪೇಜ್ ಬೋನಸ್‌

    25,000  ರೂ.ವರೆಗೆ

    ಒಟ್ಟು ಡಿಸ್ಕೌಂಟ್‌ಗಳು

      50,000  ರೂ.ವರೆಗೆ

    • ಹೊಸ ಜನರೇಶನ್‌ನ ಸ್ವಿಫ್ಟ್‌ಗೆ ಅತ್ಯಧಿಕ ರಿಯಾಯಿತಿಗಳು ಮ್ಯಾನುವಲ್ Lxi ಮತ್ತು ಎಲ್ಲಾ AMT ವೇರಿಯೆಂಟ್‌ಗಳ ಮೇಲೆ ಲಭ್ಯವಿದೆ.

    • ಉಳಿದ ಮ್ಯಾನುವಲ್ ವೇರಿಯೆಂಟ್‌ಗಳು, CNG-ಚಾಲಿತ ಟ್ರಿಮ್‌ಗಳೊಂದಿಗೆ, 20,000 ರೂ.ಗಳ ಕಡಿಮೆ ಕ್ಯಾಶ್‌ ಡಿಸ್ಕೌಂಟ್‌ನೊಂದಿಗೆ ನೀಡಲಾಗುತ್ತದೆ.

    • ಪವರ್‌ಟ್ರೇನ್ ಏನೇ ಇರಲಿ, VXI (O) ವೇರಿಯೆಂಟ್‌ ಯಾವುದೇ ರಿಯಾಯಿತಿಗಳನ್ನು ನೀಡುವುದಿಲ್ಲ.

    • ಎಲ್ಲಾ ವೇರಿಯೆಂಟ್‌ಗಳಲ್ಲಿ ಇತರ ಪ್ರಯೋಜನಗಳು ಒಂದೇ ಆಗಿರುತ್ತವೆ.

    • ಮಾರುತಿ ಕಂಪನಿಯು ಬ್ಲಿಟ್ಜ್ ಎಡಿಷನ್ ಕಿಟ್‌ಗೆ 25,000 ರೂ.ಗಳವರೆಗಿನ ಪ್ರಯೋಜನಗಳನ್ನು ನೀಡುತ್ತಿದ್ದು, ಇದರ ಬೆಲೆ 39,500 ರೂ.ಗಳಾಗಿದೆ.

    • ಹೊಸ ಸ್ವಿಫ್ಟ್ ಬೆಲೆ 6.49 ಲಕ್ಷ ರೂ.ಗಳಿಂದ 9.50 ಲಕ್ಷ ರೂ.ಗಳವರೆಗೆ ಇದೆ.

    ಬ್ರೆಝಾ

    Maruti Brezza

    ಆಫರ್‌ಗಳು

    ಮಾರುತಿ ಬ್ರೆಝಾ

    ಕ್ಯಾಶ್‌ ಡಿಸ್ಕೌಂಟ್‌ಗಳು

    10,000 ರೂ.ವರೆಗೆ

    ಸ್ಕ್ರ್ಯಾಪೇಜ್ ಬೋನಸ್‌

    25,000 ರೂ.ವರೆಗೆ

    ಒಟ್ಟು ಡಿಸ್ಕೌಂಟ್‌ಗಳು

      35,000 ರೂ.ವರೆಗೆ

    • ಬ್ರೆಝಾದ Zxi ಮತ್ತು Zxi ಪ್ಲಸ್ ವೇರಿಯೆಂಟ್‌ಗಳಿಗೆ ಮೇಲೆ ತಿಳಿಸಿದಂತೆಯೇ ನಗದು ರಿಯಾಯಿತಿಯನ್ನು ನೀಡಲಾಗುತ್ತದೆ.

    • ಲೋವರ್‌ ಪೆಟ್ರೋಲ್-ಚಾಲಿತ ವೇರಿಯೆಂಟ್‌ಗಳು ಯಾವುದೇ ನಗದು ರಿಯಾಯಿತಿಗಳನ್ನುಹೊಂದಿಲ್ಲ; ಆದರೆ, ಈ ಟ್ರಿಮ್‌ಗಳು ಇನ್ನೂ ಸ್ಕ್ರ್ಯಾಪೇಜ್ ಅಥವಾ ವಿನಿಮಯಕ್ಕೆ ಸಂಬಂಧಿಸಿದ ಪ್ರಯೋಜನಗಳನ್ನು ಪಡೆಯುತ್ತವೆ.

    • ಬ್ರೆಝಾದ ಸಿಎನ್‌ಜಿ ಆವೃತ್ತಿಯು ಯಾವುದೇ ಪ್ರಯೋಜನಗಳನ್ನು ಆಕರ್ಷಿಸುವುದಿಲ್ಲ.

    • 42,001 ರೂ. ಬೆಲೆಯ ಸ್ಪೆಷಲ್‌ ಎಡಿಷನ್‌ನ ಅರ್ಬಾನೊ ಕಿಟ್ ಅನ್ನು 17,001 ರೂ.ಗಳವರೆಗಿನ ಪ್ರಯೋಜನಗಳೊಂದಿಗೆ ಪಡೆಯಬಹುದು.

    • ಮಾರುತಿ ಬ್ರೆಝಾ ಕಾರಿನ ಬೆಲೆ 8.69 ಲಕ್ಷ ರೂ.ಗಳಿಂದ 13.98 ಲಕ್ಷ ರೂ.ಗಳವರೆಗೆ ಇದೆ.

    ಇಕೋ

    Maruti Eeco

    ಆಫರ್‌ಗಳು

    ಮಾರುತಿ ಇಕೋ

    ಕ್ಯಾಶ್‌ ಡಿಸ್ಕೌಂಟ್‌ಗಳು

    10,000 ರೂ.

    ಸ್ಕ್ರ್ಯಾಪೇಜ್ ಬೋನಸ್‌

      25,000  ರೂ.ವರೆಗೆ

    ಒಟ್ಟು ಡಿಸ್ಕೌಂಟ್‌ಗಳು

    35,000  ರೂ.ವರೆಗೆ

    • ಇಕೊದ ಎಲ್ಲಾ ವೇರಿಯೆಂಟ್‌ಗಳು 10,000 ರೂ.ಗಳ ಒಂದೇ ರೀತಿಯ ನಗದು ಪ್ರಯೋಜನವನ್ನು ಹೊಂದಿದೆ. 
    • ಇಕೋ ಬೆಲೆ 5.44 ಲಕ್ಷ ರೂ.ಗಳಿಂದ 6.70 ಲಕ್ಷ ರೂ.ಗಳವರೆಗೆ ಇದೆ.

    ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋ ರೂಂ ಆಗಿದೆ.

    ಆಟೋಮೋಟಿವ್ ಜಗತ್ತಿನಿಂದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಲು ಮಿಸ್‌ ಮಾಡ್ಬೇಡಿ

    was this article helpful ?

    Write your Comment on Maruti ವ್ಯಾಗನ್ ಆರ್‌

    explore similar ಕಾರುಗಳು

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    ಟ್ರೆಂಡಿಂಗ್ ಹ್ಯಾಚ್ಬ್ಯಾಕ್ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience